ಪ್ರಮುಖ ಘಟನಾವಳಿಗಳು:

 • 1703: ಮಹಾನ್ ಚಂಡಮಾರುತದಲ್ಲಿ ಮೊದಲ ಎಡ್ಡಿ ಕಲ್ಲು ಲೈಟ್ ಹೌಸ್ ನಾಶವಾಯಿತು.

 • 1826: ಇಂಗ್ಲೆಂಡಿನಲ್ಲಿ ಘರ್ಷಣೆ ಪಂದ್ಯವನ್ನು ಜಾನ್ ವಾಲ್ಕರ್ ಕಂಡು ಹಿಡಿದರು.

 • 1839: ಬಾಸ್ಟನ್ನಿನಲ್ಲಿ ಅಮೇರಿಕನ್ ಸಂಖ್ಯಾಶಾಸ್ತ್ರದ ಅಸೋಸಿಯೇಷನ್ ರೂಪಿಸಲಾಯಿತು.

 • 1890: ಅಮೇರಿಕಾದ ಪೋಲಿಸ್ ಇಲಾಖೆಯ ಸನ್ನೆ ಬಾಕ್ಸನ್ನು ಕಾರ್ಯಾಚರಣೆಗೆ ತರಲಾಯಿತು.

 • 1948: ಹೊಂಡಾ ಮೋಟಾರು ಸಂಸ್ಥೆ ಮೊದಲ ಬಾರಿಗೆ ಅಮೇರಿಕಾದಲ್ಲಿ ಆರಂಭವಾಯಿತು.

 • 1989: ಜೀವಂತ ದಾನಿಯಿಂದ ಯಕೃತ್ತಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು.

 • 2001: ಸೌರಮಂಡಲದ ಹೊರಗೆ ಮೊದಲ ಬಾರಿಗೆ ಗ್ರಹಗಳ ವಾತಾವರಣವನ್ನು ಹಬ್ಬಲ್ ಪತ್ತೆ ಮಾಡಿತು.

 • 2005: ವಿಶ್ವದ ಮೊದಲ ಯಶಸ್ವಿ ಭಾಗಶಃ ಮುಖದ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು.

 • 2006: ಒಳಬರುವ ರಾಕೆಟ್ಟನ್ನು ನಾಶಮಾಡಲು ಎರಡನೇ ಕ್ಷಿಪಣಿ ಬಳಸಿ ಭಾರತವು ತನ್ನ ಮೊದಲ ಯಶಸ್ವಿ ಪರೀಕ್ಷಾ ಪ್ರತಿಬಂಧವನ್ನು ಬ್ಯಾಲಿಸ್ಟಿಕ್ ಕ್ಷಿಪಣಿಯಲ್ಲಿ ನಡೆಸಿತು.

ಪ್ರಮುಖ ಜನನ/ಮರಣ:

 • 1878: ಕವಿ ಮತ್ತು ವಿಮರ್ಶಕ ಜತಿಂದ್ರಮೋಹನ್ ಬಾಗ್ಚಿ ಜನಿಸಿದರು.

 • 1888: ಲೋಕಸಭೆಯ ಮೊದಲ ಸ್ಪೀಕರ್ ಆಗಿದ್ದ ಗಣೇಶ್ ವಾಸುದೇವ್ ಮಾವಲಂಕರ್ ಜನಿಸಿದರು.

 • 1907: ಲೇಖಕ, ಕವಿ ಹರಿವಂಶ್ ರೈ ಬಚ್ಚನ್ ಜನಿಸಿದರು.

 • 1952: ಬಾಲುವುಡಿನ ಖ್ಯಾತ ಸಂಗೀತ ಸಂಯೋಜಕ, ಗಾಯಕ ಬಪ್ಪಿ ಲಾಹಿರಿ ಜನಿಸಿದರು.

 • 1962: ಕರ್ನಾಟಕ ರಾಜ್ಯ ಬಿಜೆಪಿ ಯೂನಿಟ್ಟಿನ ಮಾಜಿ ಅಧ್ಯಕ್ಷ ಪ್ರಹ್ಲಾದ್ ಜೋಷಿ ಜನಿಸಿದರು.

 • 1986: ಖ್ಯಾತ ಭಾರತದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಜನಿಸಿದರು.

 • 2002: ಕವಿ, ಶಿಕ್ಷಣ ತಜ್ಞ ಶಿವಮಂಗಲ್ ಸಿಂಗ್ ಸುಮನ್ ನಿಧನರಾದರು.

 • 2003: ಲೇಖಕ, ಕವಿ ಹರಿವಂಶ್ ರೈ ಬಚ್ಚನ್ ನಿಧನರಾದರು.

 • 2008: ಭಾರತದ 7ನೇ ಪ್ರಧಾನ ಮಂತ್ರಿ ವಿ.ಪಿ.ಸಿಂಗ್ ನಿಧನರಾದರು.

 • 2011: ಭಾರತೀಯ ಸಾರಂಗಿ ವಾದಕ ಮತ್ತು ಶಾಸ್ತ್ರೀಯ ಗಾಯಕ ಉಸ್ತಾದ್ ಸುಲ್ತಾನ್ ಖಾನ್ ನಿಧನರಾದರು.