Categories
e-ದಿನ

ನವೆಂಬರ್-5

 

ಪ್ರಮುಖ ಘಟನಾವಳಿಗಳು:

1556: ಪಂಜಾಬಿನ ಪಣಿಪತ್ ಯುದ್ಧದಲ್ಲಿ ಅಫ್ಘಾನರನ್ನು ಸೋಲಿಸಿ ಅಕ್ಬರ್ ಮುಘಲ ಸಾಮ್ರಾಜ್ಯದ ಸಾಮ್ರಾಟನಾದರು.

1639: ಮಸಾಚುಸೆಟ್ಸಿನ ವಸಾಹತಿನಲ್ಲಿ ಮೊದಲ ಅಂಚೆ ಕಛೇರಿಯನ್ನು ಸ್ಥಾಪಿಸಲಾಯಿತು.

1844: ಕ್ಯಾಲಿಫೋರ್ನಿಯಾದಲ್ಲಿ ಕರಡಿಯೊಂದು ಜುಲಾಜಿಕಲ್ ಗಾರ್ಡನ್ನಿನಲ್ಲಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಯಿತು.

ಅಮೇರಿಕಾದಲ್ಲಿ ಜಾರ್ಜ್ ಬಿ ಸೆಲ್ಡನ್ ವಾಹನಗಳಿಗೆ ಮೊದಲ ಪೇಟೆಂಟ್ ಪಡೆದರು.

1961: ಭಾರತ ಅಂದಿನ ಪ್ರಧಾನ ಮಂತ್ರಿ ಆಗಿದ್ದ ಜವಹರ್ಲಾಲ್ ನೆಹರು ಮೊದಲ ಬಾರಿಗೆ ನ್ಯೂಯಾರ್ಕಿಗೆ ಭೇಟಿ ನೀಡಿದರು.

1978: ಕೇರಳ ಮತ್ತು ತಮಿಳುನಾಡಿನಲ್ಲಿ ಉಂಟಾದ ಪ್ರವಾಹದ ಕಾರಣ ಸುಮಾರು 125 ಮಂದಿ ಮೃತರಾದರು.

2013: ಭಾರತವು ಮಂಗಳ ಆರ್ಬಿಟರ್ ಮಿಶನ್ನನ್ನು ಆರಂಭಿಸಿತು.

ಪ್ರಮುಖ ಜನನ/ಮರಣ:

1870: ರಾಜಕಾರಣಿ ಮತ್ತು ವಕೀಲರಾಗಿದ್ದ ಚಿತ್ತರಂಜನ್ ದಾಸ್ ಜನಿಸಿದರು.

1892: ತಳಿವಿಜ್ಞಾನಿ ಮತ್ತು ಜೀವಶಾಸ್ತ್ರಜ್ಞ ಜೆ.ಬಿ.ಎಸ್.ಹಲ್ದಾನೆ ಜನಿಸಿದರು.

1905: ಕವಿ ಮತ್ತು ಲೇಖಕ ಸಜ್ಜದ್ ಜಹೀರ್ ಜನಿಸಿದರು.

1917: ಹರಿಯಾಣದ 4ನೇ ಮುಖ್ಯ ಮಂತ್ರಿ ಆಗಿದ್ದ ಬನಾರಸಿ ದಾಸ್ ಗುಪ್ತ ಜನಿಸಿದರು.

1952: ಲೇಖಕ ವಂದನಾ ಶಿವಾ ಜನಿಸಿದರು.

1955: ಭಾರತೀಯ ಪತ್ರಕರ್ತ ಮತ್ತು ಲೇಖಕ ಕರಣ್ ತಪ್ಪರ್ ಜನಿಸಿದರು.

1988: ಭಾರತೀಯ ಕ್ರಿಕೆಟ್ ಆಟಗಾರ ವಿರಾಟ್ ಕೋಹ್ಲಿ ಜನಿಸಿದರು.

2008: ಕಿರುತೆರೆ ಮತ್ತು ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಬಲ್ದೇವ್ ರಾಜ್ ಚೋಪ್ರಾ ನಿಧನರಾದರು.

2009: ಪತ್ರಕರ್ತ, ಸಂಪಾದಕ ಮತ್ತು ಲೇಖಕ ಪ್ರಭಾಷ್ ಜೋಷಿ ನಿಧನರಾದರು.

2011: ಗಾಯಕ, ಕವಿ, ಸಂಗೀತಗಾರ ಭೂಪೇನ್ ಹಜಾರಿಕಾ ನಿಧನರಾದರು.