ಪ್ರಮುಖ ಘಟನಾವಳಿಗಳು:
1665: “ದಿ ಲಂಡನ್ ಗೆಜೆಟ್” ನ ಮೊದಲ ಆವೃತ್ತಿ “ಆಕ್ಸವರ್ಡ್ ಗೆಜೆಟ್” ಎಂದು ಮುದ್ರಿಸಲಾಯಿತು.
1786: ಅಮೇರಿಕಾದ ಅತ್ಯಂತ ಹಳೆಯ ಸಂಗೀತ ಸಂಸ್ಥೆ ಸ್ಟೌಗ್ಟನ್ ಮ್ಯೂಸಿಕಲ್ ಸೊಸೈಟಿ ಆಗಿ ಸ್ಥಾಪಿಸಲಾಯಿತು.
1907: ಡೆಲ್ಟಾ ಸಿಗ್ಮಾ ಪೈಯನ್ನು ನ್ಯೂಯಾರ್ಕಿನ ವಿಶ್ವವಿದ್ಯಾಲಯದಲ್ಲಿ ಕಂಡುಹಿಡಿಯಲಾಯಿತು.
1914: ದಿ ನ್ಯೂ ರಿಪಬ್ಲಿಕ್ ಪತ್ರಿಕೆಯ ಮೊದಲ ಸಂಚಿಕೆಯನ್ನು ಪ್ರಕಟಿಸಲಾಯಿತು.
1929: ನವ್ಯಕಲೆಯ ವಸ್ತುಸಂಗ್ರಹಾಲಯವು ನ್ಯೂಯಾರ್ಕಿನಲ್ಲಿ ಆರಂಭವಾಯಿತು.
1990: ಐರ್ಲಾಂಡಿನ ಮೊದಲ ಮಹಿಳಾ ಅಧ್ಯಕ್ಷರಾಗಿ ಮೇರಿ ರಾಬಿನ್ಸನ್ ಆಯ್ಕೆಯಾದರು.
ಪ್ರಮುಖ ಜನನ/ಮರಣ:
1858: ಭಾರತೀಯ ಸ್ವಾತಂತ್ರ ಹೋರಾಟಗಾರ ಬಿಪಿನ್ ಚಂದ್ರಪಾಲ್ ಜನಿಸಿದರು.
1888:ರಾಮನ್ ಎಫೆಕ್ಟ್ ಎಂದೇ ಖ್ಯಾತವಾದ ಬೆಳಕು ಪಾರದರ್ಶಕ ವಸ್ತುವನ್ನು ಹಾದು ಹೋದಾಗ ಉಂಟಾಗುವ ತರಾಂಗತರಂಗಳನ್ನು ಪತ್ತೆ ಮಾಡಿದ ಭೌತವಿಜ್ಞಾನಿ ಸಿ.ವಿ.ರಾಮನ್ ಜನಿಸಿದರು.
1954: ಖ್ಯಾತ ನಟ, ಚಿತ್ರಕಥೆಗಾರ, ಕಮಲ್ ಹಾಸನ್ ಜನಿಸಿದರು.
1960: ಭಾರತೀಯ ಚಿತ್ರೋದ್ಯಮಿ ಶ್ಯಾಮ್ ಪ್ರಸಾದ್ ಜನಿಸಿದರು.
1970: ಖ್ಯಾತ ಬಹುಭಾಷಾ ನಟಿ, ನೃತ್ಯಗಾತಿ ಲಕ್ಷ್ಮಿ ಗೋಪಾಲಸ್ವಾಮಿ ಜನಿಸಿದರು.
1971: ಭಾರತೀಯ ನಿರ್ದೇಶಕ ಮತ್ತು ಚಿತ್ರಕಥೆಗಾರ ತ್ರಿವಿಕ್ರಮ್ ಶ್ರೀನಿವಾಸ್ ಜನಿಸಿದರು.
1973: ಹಿಂದಿ ಚಿತ್ರರಂಗದ ನಿರ್ದೇಶಕಿ, ನಿರ್ಮಾಪಕಿ ಕಿರಣ್ ರಾವ್ ಜನಿಸಿದರು.
1975: ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ ವೆಂಕಟ್ ಪ್ರಭು ಜನಿಸಿದರು.
1978: ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಜೀವರಾಜ್ ನಾರಾಯಣ ಮೆಹ್ತಾ ನಿಧನರಾದರು.
1980: ಗಾಯಕ, ಗೀತ ರಚನೆಕಾರ ಕಾರ್ತಿಕ್ ಜನಿಸಿದರು.
1981: ಖ್ಯಾತ ನಟಿ ಅನುಷ್ಕಾ ಶೆಟ್ಟಿ ಜನಿಸಿದರು.
2000: ಭಾರತದ ರಕ್ಷಣಾ ಸಚಿವರಾಗಿದ್ದ ಚಿದಂಬರಂ ಸುಬ್ರಮಣ್ಯಂ ನಿಧನರಾದರು.