ಪ್ರಮುಖ ಘಟನಾವಳಿಗಳು:

 • 1821: ಅಮೇರಿಕಾದ ಮೊದಲ ಔಷಧವಿಜ್ಞಾನದ ಕಾಲೇಜು ತನ್ನ ಮೊದಲ ತರಗತಿಯನ್ನು ಆರಂಭಿಸಿತು.

 • 1872: ಬಾಸ್ಟನ್ನಿನಲ್ಲಿ ಅಗ್ನಿ ಅನಾಹುತದಿಂದ 1000 ಕಟ್ಟಡಗಳು ನಾಶವಾದವು.

 • 1877: ನ್ಯೂಯಾರ್ಕಿನಲ್ಲಿ ಅಮೇರಿಕನ್ ಕೆಮಿಕಲ್ ಸೊಸೈಟಿ ಸ್ಥಾಪಿಸಲಾಯಿತು.

 • 1925: ಭೌತವಿಜ್ಞಾನಿ ರಾಬರ್ಟ್ ಎ ಮಿಲಿಕನ್ ಬಾಹ್ಯಾಕಾಶದಿಂದ ಕಿರಣಗಳ ಅಸ್ತಿತ್ವವನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ನಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದರು.

 • 1927: ಚೀನಾದಲ್ಲಿ ಧೈತ್ಯಾಕಾರದ ಪಾಂಡಾ ಪತ್ತೆಯಾಯಿತು.

 • 1935: ಕಾಂಗ್ರೆಸ್ ಆಫ್ ಇಂಡಸ್ಟ್ರಿಯಲ್ ಆರ್ಗನೈಸೇಷನ್ (ಸಿಐಒ) ಕಾರ್ಮಿಕ ಒಕ್ಕೂಟ ಸ್ಥಾಪಿಸಲಾಯಿತು.

 • 1985: ಗ್ಯಾರಿ ಕ್ಯಾಸ್ಪರೋವ್ 22 ವರ್ಷದ ವಯಸ್ಸಿನ ಅತ್ಯಂತ ಕಿರಿಯ ವಿಶ್ವ ಚೆಸ್ ಚ್ಯಾಂಪಿಯನ್ ಆದರು.

 • 1986: ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಏಡ್ಸ್ ಸಾವಿನ ವರದಿ ಮಾಡಲಾಯಿತು.

 • 1994: ಶ್ರೀಲಂಕಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಚಂದ್ರಿಕಾ ಕುಮಾರತುಂಗಾ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಮುಖ ಜನನ/ಮರಣ:

 • 1939: ಭಾರತೀಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರ ಪಠ್ಯ ಪುಸ್ತಕಗಳ ಲೇಖಕ ಅಜಯ್ ಘಟಕ್ ಜನಿಸಿದರು.

 • 1944: ಭಾರತದ ಖ್ಯಾತ ನೃತ್ಯಗಾರ ಮತ್ತು ನೃತ್ಯ ಸಂಯೋಜಕ ಚಿತ್ರೇಶ್ ದಾಸ್ ಜನಿಸಿದರು.

 • 1948: ತಿರುಪತಿ ತಿರುಮಲ ದೇವಸ್ಥಾನದ ಆಸ್ಥಾನ ಗಾಯಕರಾಗಿದ್ದ ಗರಿಮಲ್ಲ ಬಾಲಕೃಷ್ಣ ಪ್ರಸಾದ್ ಜನಿಸಿದರು.

 • 1949: ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಜನಿಸಿದರು.

 • 1954: ಖ್ಯಾತ ರಂಗಭೂಮಿ ಕಲಾವಿದ, ನಟ, ನಿರ್ದೇಶಕ ಶಂಕರ್ ನಾಗ್ ಜನಿಸಿದರು.

 • 1959: ಭಾರತೀಯ ಚಿತ್ರೋದ್ಯಮದಲ್ಲಿ ನಾಟಕಕಾರ, ಚಿತ್ರಕಥೆಗಾರ ಮತ್ತು ನಿರ್ದೇಶಕರಾಗಿದ್ದ ನಿರಂಜನ್ ಪಾಲ್ ನಿಧನರಾದರು.

 • 1962: ಸಾಮಾಜಿಕ ಸುಧಾರಕ ಮತ್ತು ಭಾರತದಲ್ಲಿ ಮಹಿಳಾ ಶಿಕ್ಷಣಕ್ಕೆ ಕೊಡುಗೆ ನೀಡಿದ ದೋಂಢೋ ಕೇಶವ ಕರ್ವೆ ನಿಧನರಾದರು.

 • 1980: ಖ್ಯಾತ ನಟಿ ಅನು ಪ್ರಭಾಕರ್ ಜನಿಸಿದರು.

 • 1988: ಖ್ಯಾತ ತಮಿಳು ಚಿತ್ರರಂಗದ ನಟ ತೆಂಗೈ ಶ್ರೀನಿವಾಸನ್ ನಿಧನರಾದರು.

 • 2003: ಭಾರತೀಯ ವೈದ್ಯ ಮತ್ತು ಲೇಖಕ ಬಿನೊದ್ ಬಿಹಾರಿ ವರ್ಮ ನಿಧನರಾದರು.

 • 2005: ಭಾರತದ 10ನೇ ರಾಷ್ಟ್ರಪತಿ ಆಗಿದ್ದ ಕೆ.ಆರ್.ನಾರಾಯಣನ್ ನಿಧನರಾದರು.