ಸಮಾಜ ವಿಜ್ಞಾನಿಗಳು, (ಮಾನವ ವಿಜ್ಞಾನಿಗಳು) ನಾಗರಿಕತೆ, ಸಂಸ್ಕೃತಿಗಳ ಬಗ್ಗೆ ಅಪಾರವಾದ ಸಂಶೋದನೆಗಳನ್ನು ಮಾಡಿದ್ದಾರೆ. ಎರಡಕ್ಕೂ ಸಾಕಷ್ಟು ವ್ಯತ್ಯಾಸವನ್ನು ನಿರ್ಧರಿಸಿದ್ದಾರೆ. (ಇಲ್ಲಿಯವರೆಗೆ) ಸಂಸ್ಕೃತಿಯ ಬಗ್ಗೆ ಸಮಾಜ ವಿಜ್ಞಾನಿಗಳ ಅಭಿಪ್ರಾಯವನ್ನು ತಿಳಿದಿದ್ದಾಯಿತು. ಇನ್ನು ನಾಗರಿಕತೆ ಮತ್ತು ಸಮಾಜದ ಬೆಳವಣಿಗೆಯ ವಿವಿಧ ಹಂತಗಳನ್ನು ವಿವರಿಸಲು ಯತ್ನಿಸಲಾಗಿದೆ.

ನಾಗರಿಕತೆ :  ಮಾನವನ ಭೌತಿಕ ಮತ್ತು ಜಣ್ಮೆಯ ಸಾಧನೆಗಳು.

ಸಂಸ್ಕೃತಿ :  ಮಾನವನ ಆಂತರಿಕ ಸಾಧನೆ, ಇದರಲ್ಲಿ ಸಾಮಾಜಿಕ ರಾಜಕೀಯ ಸಂಸ್ಥೆಗಳು, ಕಲಾಕೃತಿಗಳು, ನಾಟಕ ಕಾವ್ಯ ಇತ್ಯಾದಿಗಳು.

ಮಾನವನ ಇರುವಿಕೆಯ ಗುಂಪುಗಳನ್ನು ಸಮಾಜ ಜೀವನವನ್ನು “ಕೂಲಿ” ಎನ್ನುವ ಸಮಾಜಶಾಸ್ತ್ರಜ್ಞನು ಎರಡು ವಿಧವಾಗಿ ವಿಂಗಡಿಸಿದ್ದಾನೆ. ಸಮಾಜದ ಸಾಂದ್ರತೆ, ಗತ್ರವನ್ನು ಅನುಸರಿಸಿ ಪ್ರಾಥಮಿಕ ಮತ್ತು ಪ್ರಾಥಮಿಕವಲ್ಲದ ಸಮಾಜಗಳೆಂದು ಎರಡು ವರ್ಗಗಳು.

ಪ್ರಾಥಮಿಕ ಸಮಾಜವು ಗಾತ್ರದಲ್ಲಿ ಚಿಕ್ಕದು. ಅದರ ಸದಸ್ಯರ ಸಂಖ್ಯೆ ಸಣ್ಣದು. ಸಾಮಾನ್ಯವಾಗಿ ಒಂದು ಪಂಗಡಕ್ಕೆ ಸೇರಿದವು. ಆದರೆ ಒಂದು ಜನಸಮೂಹದಲ್ಲಿ ಇಲ್ಲಿ ಪ್ರತಿಯೊಬ್ಬರು ಇತರರೊಂದಿಗೆ ನಿಕತ ಸಂದರ್ಭವನ್ನು ಹೊಂದಿದವರಾಗಿರುತ್ತಾರೆ. ಯಾವನೇ ಒಬ್ಬನು ಗೌರವಿಸುವ ಜೀವನ ಮೌಲ್ಯಗಳನ್ನೇ ಆ ಇಡೀ ಗುಂಣ್ಪು ಗೌರವಿಸುವದನ್ನು ನಾವು ಕಾಣಬಹುದು. ಇಲ್ಲಿ ಉತ್ಪನ್ನವಾದ ಮನೋಭಾವನೆಗಳು, ಒಲವುಗಳು. ಆದರ್ಶಗಳು, ದೊಡ್ಡ ಸಮಾಜದ ಮೌಲ್ಯಗಳಾಗಿ ಪರಿವರ್ತನ ಹೊಂದುತ್ತವೆ. ಪ್ರಾಥಮಿಕವಲ್ಲದ ಸಮಾಜದಲ್ಲಿ ಸದಸ್ಯರ ಸಂಕ್ಯೆ ಅತಿ ಹೆಚ್ಚು. ಕಾರಣ ಎಲ್ಲ ಸದಸ್ಯರು ಒಂದು ಸ್ಥಳದಲ್ಲಿ ಪರಸ್ಪರ ಭೆಟ್ಟಿಯಾಗುವುದು ಅತಿ ಹೆಚ್ಚು. ಕಾರಣ ಎಲ್ಲ ಸದಸ್ಯರು ಒಂದು ಸ್ಥಳದಲ್ಲಿ ಪರಸ್ಪರ ಭೆಟ್ಟಿಯಾಗುವುದು ಅತಿ ಕಷ್ಟ ಸಾಧ್ಯವಾಗಿದೆ.

ಚೈತನ್ಯವು ಕೆಟ್ಟದರ ಮತ್ತು ಒಳ್ಳೆಯದರ ಮೂಲ. ಒಳ್ಳೆಯವುಗಳೆಂದರೆ ಸತ್ಯ, ಸೌಂದರ್ಯ, ಸಂತಸ, ಕೀರ್ತಿ, ಪಾವಿತ್ರ್ಯ ಮತ್ತು ಸ್ವಾತಂತ್ರ್ಯ. ಕೆಟ್ಟದೆಂದರೆ ಮೇಲೆ ಹೇಳಿದ ವಿಷಯಗಳ ನಿರಾಕರಣ, ಆರಾಧನೆ. ಮಾನವನು ಸ್ವತಂತ್ರನಾದರೂ ಮೇರೆಯಿಂದ ಬಂಧಿಸಲ್ಪಟ್ಟವನಾಗಿದ್ದಾನೆ. ಈ ಉದಾತ್ತತೆಯು ವಿಸ್ತರಣಗೊಳ್ಳುವುದೇ ಸಮಾಜದ ನಿಜವಾದ ಏಳಿಗೆ. ಹೆಚ್ಚಿನ ಸಂಖ್ಯೆಯಲ್ಲಿರುವವರಲ್ಲಿ ಅವರ ಮನಸ್ಸು ಗರ್ವದಿಂದ, ಆಳವಿಲ್ಲದ ಭಾವನೆಗಳಿಂದ ಕಲಕಾಡಲ್ಪಟ್ಟಿರುತ್ತದೆ. ಹಿಂದೂ ಧರ್ಮದ ತಿಳುವಳಿಕೆಯಂತೆ ಮಾನವನಿಗೆ ಆರು ಆಂತರಿಕ ವೈರಿಗಳಿವೆ. ಅವು ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ.

ಹಿಂದೂ ನಂಬಿಕೆಯಂತೆ ಮೋಕ್ಷ ಸಾಧನೆಯೇ ಜೀವನದ ಅಂತಿಮಗುರಿ. ಹಾಗೂ ಇತರ  ಮೂರು ಪುರುಷಾರ್ಥಗಳಾದ ಧರ್ಮ-ಅಂದರೆ ಸಮಾಜದ ವ್ಯವಸ್ಥೆಗಾಗಿ ಸಾಮಾಜಿಕ ಉತ್ತಮ ನದತೆ, ಕಾಮ; ಶರೀರವನ್ನು ಉತ್ತಮ ಸ್ಥಿತಿಯಲ್ಲಿರಿಸಿಕೊಳ್ಳುವುದು, ಉತ್ತಮ ಜೀವನಕ್ಕಾಗಿ, ಅರ್ಥ ಸಂಪಾದನೆ, ಇವುಗಳ ಅಂತಿಮ ಗುರಿ ಮೋಕ್ಷದತ್ತ ಸಾಗುವುದಾಗಿದೆ. ಮೋಕ್ಷವೆಂದರೆ ಸಾತ್ವಿಕ ಅನುಭವದಲ್ಲಿ ಪುರುಷಾರ್ಥದ ಕೊನೆಯ ಹಂತವನ್ನು ಅನುಭವಿಸುವುದು. ಇದನ್ನು ವಿವಿಧ ರೀತಿಗಳಿಂದ ಪಡೆಯಲು ಯತ್ನಿಸಬಹುದು. ಯೋಗಸಾಧನೆ ಸತತವಾದ ತಾತ್ವಿಕ ಮತ್ತು ವ್ಯವಹಾರ ಅನುಭವಗಳನ್ನು ಸುಧಾರಿಸಿಕೊಳ್ಳುವುದು. ಯಾವುದೇ ಕಲೆ, ವ್ಯವಹಾರ ಅನುಭವಗಳನ್ನು ಸುಧಾರಿಸಿಕೊಳ್ಳುವುದು. ಯಾವುದೇ ಕಲೆ, ವ್ಯವಸ್ಥಿತ ರೀತಿಯ ಸಾಧನೆಯ ಮಾರ್ಗವು ಮೋಕ್ಷದತ್ತ ಸಾಧಕನನ್ನು ಸಾಗಿಸುತ್ತದೆ. ಜ್ಞಾನ ಮಾರ್ಗವು, ಭಕ್ತಿಯ ಅಥವಾ ಸಕಾರ, ನಿರಕಾರ ರೂಪದ ತಿಳಿವಳಿಕೆ ಕರ್ಮಮಾರ್ಗವು, ಸಮಾಜದಲ್ಲಿ ನಿರ್ಧಾರಿಕ ಕರ್ತವ್ಯಗಳನ್ನು ಪೂರೈಸುವುದು.

ದೈವಿಕ ಭಾವನೆಯಿಂದ ಕೂಡಿದ ಭಕ್ತನು ಧಾರ್ಮಿಕ ಜೀವನವನ್ನು ನಡೆಸಿ ಅದರ ಮೂಲಕ ಆರಾಧ್ಯ ದೈವವನ್ನು ಸಾಕ್ಷಾತ್ಕರಿಸಿಕೊಳ್ಳಲು ಯತ್ನಿಸುತ್ತಾನೆ. ಆತನು ದೇವನಿಗೂ ತನಗೂ ಒಂದು ವ್ಯವಸ್ಥಿತ ಸಂಬಂಧವಿದೆಯೆಂಬ ನಂಬಿಕೆಯಿಂದ ಹೊರಡುತ್ತಾನೆ. ತನ್ನ ಇಷ್ಟ ಮಂತ್ರದೊಂದಿಗೆ ಇಷ್ಟ ದೇವತೆ ಮೂರ್ತಿಯ ಆರಾಧಕನಾಗುತ್ತಾನೆ. ಜೀವನದ ಮೋಹಕ ವಿಷಯಗಳಾದ ಆಸೆ, ಸುಳ್ಳು, ಗರ್ವ, ಅಸೂಯೆ ಮತ್ತು ದುರಭಿಮಾನಗಳಿಂದ ಜೀವನವನ್ನು ದೂರವಿಡಲು ಯತ್ನಿಸುತ್ತಾನೆ. ತನ್ನ ವರ್ಣಾಶ್ರಮಕ್ಕೆ ಜೀವನದ ಅಂತಸ್ಥಿತಿಗೆ ಅನುಗುಣವಾದ ಸಾಮಾಜಿಕ ಕರ್ತವ್ಯಗಳನ್ನು ಪೂರೈಸುತ್ತಾನೆ. ಇದರಿಂದ ತನ್ನ ನೆರೆಹೊರೆಯವರಿಗೂ ಸಹಾಯ ಮಾಡಿದಂತಾಗುತ್ತದೆ. ಇದರಲ್ಲಿ ಆತನ ನೆಂಟರಿಷ್ಟರು, ಗೆಳೆಯರು, ಸಮಾಜ, ಮಾನವ ಜೀವಿಯಷ್ಟೇ ಅಲ್ಲದೆ ಮೂಕ ಪ್ರಾಣಿಗಳೂ ಸಹ ಸೇರುತ್ತವೆ. ಭಕ್ತನು ತಾತ್ವಿಕವಾಗಿ ಮತ್ತು ವ್ಯಾವಹಾರಿಕವಾಗಿ ತನ್ನ ಅನುಭವಗಳನ್ನು ಉದಾತ್ತತೆಯತ್ತ ಸಾಗಿಸುತ್ತಾನೆ, ಭಕ್ತನು ದೈವತ್ವವನ್ನು ಹೊಂದಲು ಯತ್ನಿಸುತ್ತಾನೆ. ಕಾಲ್ಪನಿಕ, ಭೌತಿಕ ಜಗತ್ತಿನ ವ್ಯವಹಾರಗಳ ಅತಿಯಾದ ಒತ್ತಡವನ್ನು, ಪ್ರಗತಿದಾಯಕ ಯೋಜನೆಗಳಿಂದ ಒಂದು ಮಟ್ಟದಲ್ಲಿ ತಡೆಹಿಡಿಯುವನು. ಅದಕ್ಕಾಗಿ ಹೊಸ ವಿಷಯಾನ್ವೇಷಣೆ ಅಥವಾ ಪ್ರಾಥಮಿಕ ಭೋಗ ಸಂಬಂಧದ ಸಾಧನೆಯಿಂದ ಹಿಮ್ಮೆಟ್ಟುತ್ತಾನೆ. ನಾಗರಿಕತೆಯು ಸಂಸ್ಕೃತಿಯ ವಾಹಕ. ಧರ್ಮ ಮತ್ತು ನೀತಿಗಳು ಸಂಸ್ಕೃತಿಯ ಭಾಗಗಳಾಗಿ ಹಾಗಿದ್ದಲ್ಲಿ ಧರ್ಮದ ಉಗಮವೆಲ್ಲಿ ? ಪುರಾತನ ಕಾಲದಲ್ಲಿ ಮಾನವನು ಕಾಡುಪ್ರಾಣಿಗಳ, ನಿಸರ್ಗದ ಪರಿಣಾಮವಾಗಿ ಒಂದು ರೀತಿಯ ಭಯಾನಕ ಸ್ಥಿತಿಯಲ್ಲಿ ಜೀವಿಸುತ್ತಿದ್ದನು. ನಿಸರ್ಗದ, ಭಯಂಕರ ಪರಿಣಾಮ ಬೀರುವ ಚಂಡಮಾರುತ, ದಾಪಾಗ್ನಿ ಗುಡುಗು ಮಿಂಚಿನಿಂದ ಕೂಡಿದ ಭಾರಿ ಮಳೆ, ಪ್ರವಾಹಗಳು ಆತನ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನು ಬೀರಿದವು. ಇಂತಹ ಪ್ರತಿ ಘನತೆಯ ಹಿನ್ನೆಲೆಯಲ್ಲಿ ಒಂದು ಅವ್ಯಕ್ತ ಶಕ್ತಿಯನ್ನು ಊಹಿಸಿದನು. ಅದನ್ನು ಪೂಜೆಯಿಂದ ಭಕ್ತಿಯ ಮಾರ್ಗದಿಂದ ಪ್ರತ್ಯಕ್ಷವಾಗುವಂತೆ ಬೇಡಿಕೆಯನ್ನು ಪ್ರಾರಂಭಿಸಿದನು. ಅದಕ್ಕಾಗಿ ಬಲಿ ಕೊಡುವುದನ್ನು ಪ್ರಾರಂಭಿಸಿದನು. ಪರಿಸ್ಥಿತಿಯೇ ಅಷ್ಟು ಘೋರವಾಗಿತ್ತು. ಕಾರಣ ಆದಿಮಾನವನ ಸೃಷ್ಟಿಯು ಭೂತಗಳಿಂದ ಕೂಡಿತು. ಅವುಗಳನ್ನು ವಿವಿಧ ವರ್ಗದವುಗಳನ್ನು ಕಂಡನು. ಉನ್ನತಮಟ್ಟದ ಇಂತಹ ಕಲ್ಪನೆಯ “ದೇವರು” ಕಲ್ಪನೆಯ ಮಟ್ಟಕ್ಕನುಗುಣವಾಗಿ ಸೃಷ್ಟಿಯಾದವುಗಳು. ಗಂಧರ್ವ, ಯಕ್ಷ, ಭೂತ, ಇತ್ಯಾದಿಗಳು. ಆದರೆ ಇದು ಪರಿಪೂರ್ಣ ವಿವರಣೆಯಲ್ಲ. ಮಾನವನಲ್ಲಿ ಭಯವಿದ್ದಂತೆ, ಪ್ರೇಮ, ದ್ವೇಷ, ನಂಬುಗೆ, ಚಿಂತೆ, ಆಸೆ, ಇತ್ಯಾದಿ ಗುಣಗಳೂ ಇದ್ದಿಲ್ಲವೇ ? ಈ ಎಲ್ಲಾ ಭಾವನೆಗಳು ಜರಗುವ ಸತ್ಯ ಘಟನೆಗಳಿಗೆ ಅವಶ್ಯವಿರುವ ಅದೃಶ್ಯ ಶಕ್ತಿಯತ್ತ ಕೇಂದ್ರಿಕೃತವಾದವು. ಅದರಿಂದ ಮಾನವನಿಗಿಂತ ಮೇಲ್ಪಟ್ಟದ ಮತ್ತು ಕೆಳಮಟ್ಟದ ಜೀವಿಗಳು ಕಾಲ್ಪನಿಕ ಸೃಷ್ಟಿಯಾಗಿರಬೇಕು ಜೀವನದಲ್ಲಿ ಬರುವ ರೋಗರುಜಿನಗಳ, ದುಃಖಗಳ ತೊಂದರೆಗಳ ಉಪಶಮನವನ್ನು ಹುಡುಕಲು ಪ್ರಾರಂಭಿಸಿದ ಈ ಹಂತದಲ್ಲಿ ಧಾರ್ಮಿಕ ನಡತೆಗಳು, ಸಂಪ್ರದಾಯಗಳು, ಧರ್ಮದಾಯಗಳು, ಧರ್ಮಪೀಠಗಳು, ಇವುಗಳ ಉಗಮವನ್ನು ಕಾಣಬಹುದು.

ಧರ್ಮವು ಕೆಲವು ನಿಶ್ಚಿತ ಕಟ್ಟುನಿಟ್ಟುಗಳನ್ನು, ತತ್ವಗಳನ್ನು ನಿರ್ದೇಶಿಸಿ ಅವುಗಳನ್ನು ಪಾಲಿಸಲು ಪ್ರೇರೇಪಿಸುವುದಾಗಿದೆ. ದೇವನ ಇರುವಿಕೆಯ ಸ್ವಭಾವ ಲಕ್ಷಣಾಗಳ ಬಗ್ಗೆ ನಂಬಿಕೆಗಳನ್ನು ಇಲ್ಲಿ ಕಾಣಬಹುದು. ಮಾನವ ಮತ್ತು ದೇವನ ಸಂಬಂಧವನ್ನು ಕಲ್ಪಿಸಿ ಐಕ್ಯತೆಯ (ಮೋಕ್ಷ) ರೀತಿಗಳನ್ನು ಸೂಚಿಸುತ್ತದೆ. ಪೂಜೆಯ ವಿಧಾನಗಳು, ಧಾರ್ಮಿಕ ಸಂಪ್ರದಾಯಗಳು ಈ ಮಾತನ್ನು ನಿದರ್ಶಿಸುತ್ತವೆ. ಧಾರ್ಮಿಕ ನಂಬಿಕೆ ಸ್ಪೂರ್ತಿಯನ್ನು ನೀಡುವುದಲ್ಲದೆ ಕರ್ತವ್ಯ ಶಕ್ತಿಯನ್ನು ಹೆಚ್ಚಿಸಿ ಯಶಸ್ಸನ್ನುಂಟು ಮಾಡುತ್ತದೆ.

ಸಮಾಜದ ಮೇಲೆ ಧರ್ಮದ ಪರಿಣಾಮವು ಅತುಲವಾಗಿದೆ. ಅಂದಿನ ಸಮಾಜದ ರೂಢಿಗಳು, ಹೆಚ್ಚಾಗಿ ಧಾರ್ಮಿಕ ನಂಬಿಕೆಗಳಿಂದ ಕೂಡಿದವುಗಳಾಗಿದ್ದವು. ದುಷ್ಕರ್ಮಿಗಳನ್ನು ಧರ್ಮವೇ ನಿಯಂತ್ರಿಸುತ್ತಿತ್ತು. ಪ್ರಾರಂಭದಲ್ಲಿ ಧರ್ಮವು “ಭಯದ ಅಧಾರದ ಮೇಲೆ ರೂಪಿತವಾಗಿರಬಹುದಾದರೂ, ನಂತರ ಅದು ನಂಬಿಕೆ, ಆಸೆ ಮತ್ತು ಧೈರ್ಯಗಳಿಗೆ ಊರುಗೋಲಾಯಿತು. ಇಂದಿಗೂ ರಾಷ್ಟ್ರದ ಐಕ್ಯತೆ, ಮೂಢ ನಂಬಿಕೆಗಳಿಗೂ ಧರ್ಮವೇ ಜೀವಾಳ. ಧರ್ಮ ಮತ್ತು ನೀತಿಗೆ ನಿಕಟ ಸಂಬಂಧವಿದೆ. ನೀತಿಯೆಂದರೆ ಜೀವನದ, ಸಾಂಘಿಕ ಜೀವನದ ಒಳಿತಿಗಾಗಿ ಸುಗಮವಾಗಿ ಸಾಗುವುದಕ್ಕಾಗಿ ನಿರ್ದೇಶಿಸಿದ ರೀತಿಗಳು, ಒಂದು ಸಮೂದಾಯದ ಎಲ್ಲಾ ಜನತೆಯಲ್ಲೂ ಹೆಚ್ಚು ಕಡಿಮೆ ಈ ನಿರ್ದೇಶಿತ ರೀತಿಗಳನ್ನು ಒಪ್ಪಿವೆ. ಒಪ್ಪಿ ನಡೆದುದೇ ‘ನೀತಿ’. ಇನ್ನೊಂದು ಅರ್ಥದಲ್ಲಿ ಇವು ಸಮಾಜದಲ್ಲಿ ಹೀಗೆ ಜೀವಿಸಬೇಕೆಂದು ಹೇಳುವ ಸಂಹಿತೆಗಳು ಪರಸ್ಪರ ಅಂಟಿಕೊಂಡಿವೆ. ಅದರಿಂದ ಸಮುದಾಯಕ್ಕೇ ಅನುಕೂಲ. ಇದರಿಂದ ಧರ್ಮವನ್ನು ಆಚರಿಸದವರಿದ್ದರೂ ಅವರ ನೀತಿಯು ಇತರರಿಗೂ ಮಾರ್ಗದರ್ಶಿಯಾಗಿದೆ. ಇನ್ನೂ ಕೆಲವರು ತಾವು ಒಂದು ವಿಶಿಷ್ಟ ಧರ್ಮಕ್ಕೆ ಸೇರಿದವರೆಂದು ಹೇಳಿಕೊಂಡರೂ ಅವರ ನೀತಿಗಳ ಬಗ್ಗೆ ಹೇಳುವುದೇ ಬೇಡ. ಅಂತಹ ಅಸಹ್ಯ, ಕೆಳದರ್ಜೆಯಲ್ಲಿರುವುದನ್ನೂ ಕಾಣಬಹುದು. ಇವರಿಂದ ಸಮಾಜ ವಿಜ್ಞಾನಿಗಳು ಧರ್ಮರಹಿತ ‘ನೀತಿಗಳುಂಟು’ ಎಂದು ಹೇಳುವರು. ಧಾರ್ಮಿಕ ರೀತಿನೀತಿಗಳಲ್ಲಿ ಬದಲಾವಣೆಗಳು ಉಂಟಾಗಬಹುದಾದರೂ ಧರ್ಮದ ತಿರುಳು, ಅದರ ಸತ್ಯಾಂಶವು ಎಂದಿಗೂ ಬದಲಾಗಲಾರದಂಥದಾಗಿದೆ.

ಕಲೆ ಮತ್ತು ಸೌಂದರ್ಯ :

ಕಲೆ, ಲಲಿತಕಲೆ ಮತ್ತು ಉಪಯುಕ್ತ ಕಲೆಗಳು ಸಂಸ್ಕೃತಿಯ ಅಂತರ್ಗತ ಭಾಗಗಳು. ಕಲೆಯು ವ್ಯಕ್ತಿಗತವಾದುದೂ, ಸಾಮಾಜಿಕವಾದುದೂ ಆಗಿದೆ. ಒಬ್ಬರ ಮನೋಭಾವವನ್ನು ಇನ್ನೊಬ್ಬರಿಗೆ ವರ್ಗಾಯಿಸುವ ಕಾರ್ಯವನ್ನು ಕಲೆಯು ಮಾಡುತ್ತದೆ. ಹೀಗಾಗುವಲ್ಲಿ ಸೌಂದರ್ಯ ಲಹರಿಯನ್ನು ತನ್ನೊಂದಿಗೆ ಒಯ್ಯುತ್ತದೆ. ಈ ಅರ್ಥದಲ್ಲಿ ಕಲೆಯು ‘ಸಾಮಾಜಿಕ’, ಕಲೆಯ ಮಟ್ಟವು ಬದಲಾವಣೆಯನ್ನು ಹೊಂದುವುದು. ಈ ಬದಲಾವಣೆಗೆ ಒಂದು ಶತಮಾನವೋ ತಲೆಮಾರಿನ ಅವಧಿಯೋ ಬೇಕಾಗುವದು. ಕಲೆ ಆಂತರಿಕ ಸೌಂದರ್ಯ ಮತ್ತು ಬಾಹ್ಯ ಪ್ರದರ್ಶನಾ ಗುಣವನ್ನು ಹೊಂದಿದೆ. ಕಲಾವಿದನು ತನಗೆ ಅವಶ್ಯವಾದ ಸ್ಪೂರ್ತಿಯನ್ನು ಸುತ್ತಲಿನ ವಾತಾವರಣದಿಂದ ಗ್ರಹಿಸಿ ಆದರ್ಶಗಳನ್ನು. ಆದರ್ಶಗಳ ರೂಪರೇಷಗಳನ್ನು ನಿರ್ಮಿಸುತ್ತಾನೆ. ಇವನು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ನೀಡುವ ಅವಧೂತ.

ಸೌಂದರ್ಯವು ಸುಂದರ ವಸ್ತುಗಳನ್ನಷ್ಟೇ ಅಲ್ಲದೆ, ‘ಸುಂದರ’ ಎಂದು ಮಾನವನಿಂದ ನಿರ್ಮಿತವಾದವುಗಳನ್ನು ಸಹ ಒಳಗೊಂದಿದೆ. ಸೌಂದರ್ಯವನ್ನು ಪ್ರೇಮಿಸುವುದು ಮಾನವನ ಸಹಜ ಪ್ರತಿಕ್ರಿಯೆ, ಸೌಂದರ್ಯ ಸಾಧನೆಯು ಅನೇಕ ರೂಪಗಳಲ್ಲಿ ಹೊರಚಿಮ್ಮುತ್ತದೆ.

ಇಂದಿನ ನಗರ ನಿರ್ಮಾಣಗಳಲ್ಲಿಯು ವಾಸ್ತು ಶಿಲ್ಪಿಗಳು ಸ್ಥಾಪತ್ಯ ವಿಜ್ಞಾನಿಗಳು, ನಗರ ನಕ್ಷೆ ತಯಾರಕರೂ ಸೌಂದರ್ಯ ಪ್ರಜ್ಞೆಯನ್ನು ಹೊಂದಿರುವುದನ್ನು ಕಾಣಬಹುದು. ನಗರದ ಸೌಂದರ್ಯವನ್ನು ಹೆಚ್ಚಿಸಲು ಯೋಜನೆಗಳು ರೂಪುಗೊಳ್ಳುತ್ತಲೇ ಇರುತ್ತವೆ. ಸಮಾಜದ ಮೇಲೆ ಸೌಂದರ್ಯದ ಪರಿಣಾಮಗಳು ಯಾವುವು ? ಎಂಬ ಪ್ರಸ್ನೆಗೆ ಉತ್ತರವಾಗಿ ಹೀಗೆ ಹೇಳಬಹುದು.

೧) ಸಂತಸವನ್ನು ಬೀರುತ್ತದೆ. ಕಲಾವಿದನ ವ್ಯಕ್ತಿತ್ವದ ಬೆಳವಣಿಗೆ ಆದರೆ ಕಲಾರಾಧನೆಗೆ ಜನತೆ, ರಸಿಕರೂ ಬೇಕು. ಅಂದರೆ ಸಾಮಾಜಿಕವಾಗಿ ಸಂತಸದ ಅಂತಸ್ತು ಹೆಚ್ಚಿಸಲು ಕಲೆಯು ಸಹಕಾರಿಯಾಗುತ್ತದೆ. ಕಲೆಯ ಬೆಳವಣಿಗೆಯನ್ನೂ ಇಲ್ಲಿ ಕಾಣಬಹುದು.

೨) ಮಾನವನ ನಡತೆಯನ್ನು ಮೇಲ್ಮಟ್ಟಕ್ಕೆ ಒಯ್ಯಲು ಕಲೆಯು ಯತ್ನಿಸುತ್ತದೆ. ಕಲೆಯ ರೂಪ ಅಳವು ಇಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಂಗೀತ ನೃತ್ಯ, ರಂಗಭೂಮಿ, ಚಿತ್ರಕಲೆ ಇವು ಮೇಲ್ಮಟ್ಟದವುಗಳಾಗಿದ್ದರೆ ಮಾನವನ ಉನ್ನತಿ ಸಾಧ್ಯ. ಇದು ಸಮುದಾಯದಲ್ಲಿ ಸಮತೆಯನ್ನು ಮೂಡಿಸುತ್ತದೆ.

೩) ವ್ಯಕ್ತಿಯ ಕ್ರಿಯಾಶಕ್ತಿ, ಕಲ್ಪನಾಶಕ್ತಿಯನ್ನು ಕಲೆಯು ಹೆಚ್ಚಿಸುತ್ತದೆ. ಇದರಿಂದ ಸಮಾಜದ ಕಲ್ಯಾಣವಾಗುವುದಲ್ಲದೆ, ಕಲಾತ್ಮಕವಾದ ವಾತಾವರಣವು, ಕಂಪನ್ನು ಮತ್ತು ಕರ್ತೃತ್ವ ಶಕ್ತಿಯನ್ನು ಹೆಚ್ಚಿಸುತ್ತದೆ.

೪) ಕಲೆಯು ಅವಶ್ಯವಾದ ಮನೋಭಾವನೆಯನ್ನು ಹುಟ್ಟಿಸಿ, ಕ್ರಿಯಾಶಕ್ತಿಯನ್ನು ಸಚೇತನವನ್ನಾಗಿ ಮಾಡಬಲ್ಲುದು. ಯುದ್ಧಕ್ಕೆ ಹೊರಡುವಾಗ ರಣಭೇರಿ, ರಣವಾದ್ಯಗಳ ಸಂಗೀತವು ಪ್ರವಾಹದಲ್ಲಿ ದೋಣಿಗೆ ಹುಟ್ಟು ಹಾಕುವವರು ತಮ್ಮ ಒಂದು ಬಗೆಯಲ್ಲಿ ಯೋಧರಿಗೆ ಪ್ರೋತ್ಸಾಹಕ, ಕ್ರಿಯಾಶಕ್ತಿ ಕಡಿಮೆಯಾಗದಿರಲೆಂದು ಹಾಡಿನ ಮೊರೆ ಹೋಗುತ್ತಾರೆ.

೫) ಕಲೆಯು ಭಾವೈಕ್ಯತೆಗೆ ಸಾಧನೆ. ಸಂಗೀತ, ನಾಟಕಗಳು, ಜಾನಪದ ಆಟಗಳು ರಾಷ್ಟ್ರೀಯ ಭಾವನೆಯನ್ನು ಜಾಗೃತಗೊಳಿಸುವ ಮಹತ್ವದಪಾತ್ರ ವಹಿಸಿದ್ದನ್ನು ಚರಿತ್ರೆಯಲ್ಲಿ ಓದಿ ತಿಳಿಯಬಹುದು. ಕಲೆಯ ಈ ಗುಣ ಒಂದು ರಾಜ್ಯದ ಜನತೆಯ ಸಂಕುಚಿತ ಅರ್ಥವ್ಯಾಪ್ತಿಯಲ್ಲಿ ಸಿಕ್ಕಿ ತೊಳಲದೆ, ವಿಶಾಲ ಭಾವನೆಯನ್ನು ಅಂತರ ರಾಷ್ಟ್ರೀಯ ಸ್ವರೂಪವನ್ನು ಹೊಂದಿದೆ. ರಾಷ್ಟ್ರ-ರಾಷ್ಟ್ರಗಳನ್ನು ಒಂದುಗೂಡಿಸುವ ದೈವೀಶಕ್ತಿಯಾಗಿದೆ.

ಭಾವನೆಗಳು ಮಾನವನ ಮನಸ್ಸಿನಲ್ಲಿ ಮೂಡುತ್ತವೆ. ಭಾವನಾರಹಿತ ಜೀವನವು ಒಂದು ಜೀವನವೇ ಅಲ್ಲ. ಸುಸಂಸ್ಕೃತ ಜೀವನವಂತೂ ಖಂಡಿತ ಅಲ್ಲ, ಯಾವುದೇ ನಿರ್ದಿಷ್ಟ ಗಿರಿಯಿಲ್ಲದ ತೊಳಲಾಟದ ಜೀವನವಾಗುತ್ತದೆ. ಭಾವನೆಯು ಕೆಲವು ಸಂಗತಿಗಳನ್ನು ನಿರ್ವಹಿಸಲು ಅವಸ್ಯವಿರುವ ಶಕ್ತಿ ಮತ್ತು ಉತ್ಸಾಹವನ್ನು ಕೊಡಬಲ್ಲದು.

ರಸೋವೈಸ :

ಭಾರತೀಯ ಜೀವನದ ಎಲ್ಲಾ ಆವಿಷ್ಕರಗಳಲ್ಲಿಯು ಅಧ್ಯಾತ್ಮ ಹಾಸು ಹೊಕ್ಕಾಗಿ ಸೇರಿಕೊಂಡಿದೆ. ಲಲಿತ ಕಲೆಗಳು ಈ ನಿಯಮದಿಂದ ದೂರವಾಗಿಲ್ಲ.

ಪ್ರಕೃತಿಯ ಪ್ರತಿಕೃತಿ ಹಾಗೂ ಸಮಕಾಲೀನ ಪರಿಸ್ಥಿತಿಯ ಪ್ರತಿಬಿಂಬವೇ ಕಲೆಯೆಂದು ಪಾಶ್ಚಾತ್ತರ ತಿಳುವಳಿಕೆ. ಈ ದೃಷ್ಟಿಯನ್ನು ಭಾರತೀಯರು ಒಪ್ಪುವುದಿಲ್ಲ. ಭಾರತೀಯ ಕಲಾವಿದರು ಪ್ರಕೃತಿ ಹಾಗೂ ಸಮಕಾಲೀನ ಪರಿಸ್ಥಿತಿಯ ಬಿಂಬಗ್ರಹಣದಲ್ಲಿ ತೃಪ್ತರಾಗಲಿಲ್ಲ. ಜೀವನವನ್ನು ಹಸನು ಮಾದುವುದಕ್ಕೆ, ಕ್ಷೋಭೆಯನ್ನು ನಿವಾರಿಸಿ ಶಾಂತಿ ಸ್ಥಾಪಿಸುವುದಕ್ಕೆ, ಮಾನವನಿಗೆ ಸ್ವಸ್ವರೂಪ ಜ್ಞಾನ ಮೂಡಿ ಕೊಡುವುದಕ್ಕೆ, ಜೀವನವನ್ನು ಹೊಲಸುಗೊಳಿಸುತ್ತಿದ್ದ ಅರಿಷಡ್ವರ್ಗಗಳ ಉಪಟಳ ತೊಲಗಿಸುವುದಕ್ಕೆ ಭಾರತೀಯ ಕಲಾವಿದರು ಪ್ರಯತ್ನಿಸಿದರು. ಭಾರತ ವರ್ಷದಲ್ಲಿ ಕಲಾವಿದ ಕೇವಲ ಅನುಕರಣ ಪ್ರಿಯನಾಗದೆ ಚೇತೋಹಾರಿ ಜೀವನದ ಸೃಷ್ಟಿಕರ್ತನೂ ಸಮ್ಮಕ ಜೀವನದ ವ್ಯಾಖ್ಯಾತನೂ ಆಗಿ ಪ್ರಕೃತಿಯ ಹೊರ ಮೈಗೆ ಬೆರಗಾಗಿ, ಅದರ ಪ್ರತಿ ಮಾಡುವುದಕ್ಕಿಂತ ಪ್ರಕೃತಿಯ ಹೊರಮೈಗೆ ಬೆರಗಾಗಿ, ಅದರ ಪ್ರತಿ ಮಾಡುವುದಕ್ಕಿಂತ ಪ್ರಕೃತಿಯ ಸುಪ್ತ ರಹಸ್ಯಗಳನ್ನು ಭೇದಿಸಿ ಜೀವನದ ನಿರಂತರ ಬೆಳೆಗೆ ಅದರಿಂದ ಯಾವ ಬಗೆಯಲ್ಲಿ ಶಕ್ತಿ, ಸ್ಪೂರ್ತಿಯನ್ನು ದೊರಕಿಸಿಕೊಳ್ಳಬಹುದೆಂಬುದನ್ನು ಲಕ್ಷಿಸಿದ. ಭಾರತೀಯ ಜೀವನದಲ್ಲಿ ಕಲಾವಿದ ಕೇವಲ ಬಿಂಬಗ್ರಾಹಿಯಲ್ಲಿ ಅವನು ದಾರ್ಶನಿಕನೂ ಗುರುವೂ ಆಗಿದ್ದಾನೆ.

ಭಾರತೀಯ ಲಲಿತ ಕಲೆಗಳ ನಿತ್ಯ ತತ್ವಗಳ ಪ್ರೇರಕ ಶಕ್ತಿಯಾಗಿರುವ ಸೂತ್ರಗಳೆಂದರೆ :

೧) ಭಾರತಿಯ ಜೀವನದಲ್ಲಿ ಅಧ್ಯಾತ್ಮಕ್ಕೆ ವಿಶಿಷ್ಟ ಸ್ಥಾನವಿದೆ. ಜಗತ್ತಿನ ಯಾವ ರಾಷ್ಟವೂ ಭಾರತದಂತೆ ಅಧ್ಯಾತ್ಮಕ್ಕೆ ಈ ಸ್ಥಾನವನ್ನಿತ್ತಿಇಲ್ಲ.

೨) ಭಾರತೀಯ ಸಾಹಿತ್ಯ, ಲಲಿತ ಕಲೆಗಳು ಭಾರತದ ಸಿದ್ದಿಯ ಪ್ರತೀಕಗಳಾಲಗಿವೆ.

೩) ಭಾರತೀಯ ಲಲಿತಕಲೆಗಳು ‘ಜೀವ ಶಿವ’ ಇವುಗಳ ನಡುವಿನ ಅಂತರವನ್ನು ಹೋಗಳಾಡಿಸಿ ಜೀವನವನ್ನು ಶಿವನನ್ನಾಗಿ ಮಾರ್ಪಡಿಸುವ ಪ್ರಯತ್ನ ನಡೆಸಿವೆ.

೪) ಭಾರತೀಯ ಲಲಿತಕಲೆಗಳು ಶಾಂತಿದಾಯಿ. ಇಹ ಜೀವನವನ್ನು ರಾಗದ್ವೇಷರಹಿತವನ್ನಾಗಿ ಮಾಡುವುದೇ ಅವುಗಳ ಗುರಿ.

೫) ಭಾರತೀಯ ಲಲಿತ ಕಲೆಗಳು ಅನೇಕತ್ವವನ್ನು ನಿರಾಕರಿಸಿದ್ದರೂ ಅವುಗಳನ್ನು ಕಟ್ಟಿ ಕೂಡಿಸುವ ಏಕ ಸೂತ್ರಕ್ಕೆ ಪ್ರಾಧಾನ್ಯತೆ ಕೊಟ್ಟಿವೆ.

೬) ಭಾರತೀಯ ಲಲಿತ ಕಲೆಗಳು ವರ್ಗ, ಜಾತಿ, ಮತ ರಾಷ್ಟ್ರಗಳ ಸೊತ್ತಲ್ಲ, ಅವು ವಿಶ್ವದ ಮಹಾನಿಧಿ. ಅವುಗಳ ಪರಮಗುರಿ ಲೋಕ ಕಲ್ಯಾಣವೇ ವಿನಾ ಜಾತಿ, ಮತ, ವರ್ಗಗಳ ಕಲ್ಯಾಣವಲ್ಲ. ಭಾರತೀಯರ (ನಮ್ಮ) ಸಂಪ್ರದಾಯದಲ್ಲಿ ದೇವತೆಗಳ ವಾಹನಗಳು ಪಶುಗಳು. ಉದಾಹರಣೆಗಾಗಿ ಶಿವನ ವಾಹನ ನಂದಿ, ದುರ್ಗಾದೇವತೆಯ ವಾಹನ ಸಿಂಹ, ಯಮನ ವಾಹನ ಕೋಣ, ಬ್ರಹ್ಮನಿಗೆ ಟಗರು, ಇಂದ್ರನಿಗೆ ಆನೆ, ಇತ್ಯಾದಿ. ಮೇಲಿನ ವಿವರಣೆಯಿಂದ ಪೂಜೆಯ ಪದ್ಧತಿಯು ಪುರಾತನವಾದದು ಎಂಬುದರೊಂದಿಗೆ ನಾಗರೀಕತೆಯ ರೂಪರೇಷೆಯಲ್ಲಿ ‘ಪಶುಪತಿಯ ಸ್ಥಾನವನ್ನೂ ನಾವು ಗುರ್ತಿಸಬಹುದಾಗಿದೆ. ಯೋಗವಂತೂ ಅದಕ್ಕೂ ಪ್ರಾಚೀನವಾದುದು. ಇದು ದಕ್ಷಿಣ ಭಾರತದ ವಿಶೇಷ ಕೊಡುಗೆಯೆಂದು ಬಹಳ ಜನ ವಿದ್ವಾಂಸರು ಒಪ್ಪಿದ್ದಾರೆ.

ಯಾವುದೇ ಧಾರ್ಮಿಕ ಸಂಪ್ರದಾಯಗಳನ್ನು ಅವಲೋಕಿಸಿದರೆ ಅಂದಿನವರು ಎಂತಹ ಉದಾತ್ತ ಭಾವನೆಯಿಂದ ಅವುಗಳನ್ನು ರೂಪಿಸಿರಬಹುದೆಂಬುದನ್ನು ತಿಳಿಯಬಹುದು. ಹಿಂದೂ ಧರ್ಮದಲ್ಲಿ ಪ್ರತಿ ವಿಭಾಗದವರು ತಮ್ಮ ಧರ್ಮಕ್ಕೆ ಅನುಗುಣವಾಗಿ ಅಂದರೆ, ಉದಾಹರಣೆಗಾಗಿ ವೈಷ್ಣವ, ಶೈವ, ಶಾಕ್ತ ಯಾವುದೆ ಇರಲಿ, ಆ ಮತದ ಪವಿತ್ರ ಕ್ಷೇತ್ರಗಳಿಗೆ ತೀರ್ಥಯಾತ್ರೆ ಹೊಗುವುದು ಒಂದು ಸಂಪ್ರದಾಯ. ಈ ತೀರ್ಥಕ್ಷೇತ್ರಗಳು ಒಂದೇ ಪ್ರಾಂತಕ್ಕೆ ರಜ್ಯಕ್ಕೆ ಸೀಮಿತವಾಗಿಲ್ಲ. ದೇಶದ ವಿವಿಧ ಭಾಗಗಳಲ್ಲಿರುವ ಪವಿತ್ರ ಕ್ಷೇತ್ರಗಳನ್ನು ಯಾತ್ರೆಯಿಂದ ಸಂದರ್ಶಿಸುವಾಗ ತನ್ನ ನಾಡಿನ ಭವ್ಯತೆ, ಸಂಸ್ಕೃತಿಯ ಏಕತೆ ತಾನೇತಾನಾಗಿ ಅವನಿಗೆ ಗೋಚರಿಸುತ್ತಿತ್ತು. ಇಂದು ಈ ಸಂಪ್ರದಾಯದ ಪೂರ್ಣ ಅರ್ಥವನ್ನು ಅರಿಯದ ಅರ್ಥಿಕ ಮುಗ್ಗಟ್ಟಿನಿಂದ ತೊಳಲಾಡುವವರು ‘ಮೂಢ ಸಂಪ್ರದಾಯವೆಂದು ಮೂಗಳೆಯುವರು. ಶಂಕರಾಚಾರ್ಯರು ತಮ್ಮ ಮಠಗಳನ್ನು ಸಹ ಎಲ್ಲೆಲ್ಲಿ ಸ್ಥಾಪಿಸಿದ್ದಾರೆ. ಉತ್ತರದಲ್ಲಿ ಬದರೀನಾಥನ ಸಮೀಪದಲ್ಲಿ ಜ್ಯೋತಿರ್ಮಠ, ಪಶ್ಚಿಮಕ್ಕೆ ದ್ವಾರಕಾದಲ್ಲಿ, ಪೂರ್ವಕ್ಕೆ ಪುರಿಯಲ್ಲಿ, ದಕ್ಷಿಣದಲ್ಲಿ ಮೈಸೂರು ರಾಜ್ಯದ ಶೃಂಗೇರಿ. ಈ ನಾಲ್ಕು ಮಠಗಳನ್ನು ಸಂದರ್ಶಿಸಿದಲ್ಲಿ ನಾಡಿನ ಎಲ್ಲಾ ಭಾಗಗಳನ್ನು ಸಂಚರಿದಂತಾಗಿ ವಿವಿಧತೆಯಲ್ಲಿಯೂ ಏಕತೆಯಿದೆ ಎಂಬುದು ಸ್ವಯಂವೇದ್ಯವಾಗುತ್ತದೆ. ಹಿಂದೂ ಸಂಸ್ಕೃತಿಯೂ ತನ್ನ ಧಾರ್ಮಿಕ ಕಟ್ಟಳೆಗಳಲ್ಲಿ ರಾಷ್ಟ್ರಿಯತೆಯನ್ನೂ ಸಮುದಾಯದ ಏಕತೆಯನ್ನೂ ಬಿಂಬಿಸುತ್ತದೆ. ಹಿಂದುಗಳಿಗೆ ಬಲಾಡ್ಯ ರಾಜ್ಯಗಳ ಕಲ್ಪನೆ ಅಥವಾ ರೂಢಿಯಿತ್ತು ಎನ್ನುವುದಕ್ಕೆ ರಾಜಸೂಯ, ಅಶ್ವಮೇಧ ಇತ್ಯಾದಿ ವೇದದ ವ್ರತಗಳನ್ನು ರಾಜರು ಯೋಗ್ಯ ಕಾಲದಲ್ಲಿ ನಡೆಸಿದ ಉದಾಹರಣೆಗಳು ಹೇರಳವಾಗಿವೆ. ಪುಲಿಕೇಶಿ, ಸಮುದ್ರಗುಪ್ತ, ಕೌಷ್ಯಮಿತ್ರರು ಅಶ್ವಮೇಧ ಯಜ್ಞವನ್ನು ನೆರವೇರಿಸಿದರೆಂದು ಚರಿತ್ರೆಯಿಂದ ತಿಳಿದು ಬರುತ್ತದೆ.

ಈಗಿನ ಹಿಂದೂ ಸಮಾಜದಲ್ಲಿ ದ್ರಾವಿಡರ ಭಕ್ತಿಪಂಥ ಆರ್ಯರ ತತ್ವಜ್ಞಾನ, ಬೌದ್ದರ ಧರ್ಮೈಕ್ಯ ನಿಷ್ಠೆ, ಜೈನರ ಅಹಿಂಸಾಧರ್ಮ ಇವೆಲ್ಲವೂ ಒಟ್ಟುಗೂಡಿ ಸೇರಿದೆ. ಕಾರಣ ಕಾಶ್ಮಿರದಿಂದ ಕನ್ಯಾಕುಮಾರಿಯವರೆಗಿರುವ ಕೋಟಿ ಕೋಟಿಗಟ್ಟಲೆ ಸನಾತನ ಧರ್ಮಾನುಯಾಯಿಗಳಾದ ಜನಗಳಲ್ಲಿ ನಾವಿಂದು ಕಾಣುತ್ತಿರುವುದು ಏಕಪ್ರಕಾರವಾದ ಭಾರತೀಯ ಸಂಸ್ಕೃತಿಯನ್ನು. ಹಿಮಾಲಯದ ಕೈಲಾಸದಿಂದ ಹಿಡಿದು ದಕ್ಷಿಣದ ರಾಮೇಶ್ವರದವರೆಗೂ ಇರುವ ಕ್ಷೇತ್ರಗಳಲ್ಲಿ ಒಂದೇ ವಿಧವಾದ ದೇವರ ಪೂಜಾಜಿ ವಿಧಾನಗಳಿಂದ ವೈದಿಕ ಕರ್ಮಕಲಾಪಗಳು ನಡೆಯುವುದನ್ನು ನಾವಿಂದು ನೋಡುತ್ತಿದ್ದೇವೆ. ಈ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ಒಂದೇ ಪ್ರಕಾರವಾಗಿ ನಡೆದುಕೊಂಡು ಬರುತ್ತಿರುವುದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯಾಗಿದೆ. ವಿವಾಹ, ನಾಮಕರಣ, ಉಪಮಯನ ಮೊದಲಾದವುಗಳಲ್ಲಿಯೂ ಇದೇ ಪ್ರಕಾರವಾದ ಆಚರಣೆಗಳನ್ನು ನಾವು ನೋಡುತ್ತಿದ್ದೇವೆ. (ಸಂಸ್ಕೃತಿ :  ೧೯೫೪ ಪುಟ ೩೭-೩೮)

ಸಂಸ್ಕೃತಿಯೆಂಬುದು ಸಾತ್ವಿಕ ಜೀವನ ವಿಧಾನ. ಅದು ಜನ ಜೀವನದ ಸಮಸ್ತ ಕ್ಷೇತ್ರಗಳಿಗೂ ಶುಚಿತ್ವವನ್ನು ಕೊಟ್ಟು, ಮಾನವನ ಘನತೆಯನ್ನು ಹೆಚ್ಚಿಸಿ, ಅವನನ್ನು ತೇಜಸ್ವಿಯನ್ನಾಗಿಯೂ, ಧರ್ಮಾತ್ಮನನ್ನಾಗಿಯೂ ಪರಿಣಾಮಗೊಳಿಸುವುದು.

ಸುಸಂಸ್ಕೃತನಾದ ಮನುಷ್ಯನು ಉದಾರ ಚರಿತನಾಗಿರುವನು. ವಸುಧೆಯೇ ಅವರ ಕುಟುಂಬವಾಗಿರುವುದು. ಉದಾರ ಚರಿತರಿಗಾದರೋ ವಸುಧೆಯೇ ಕುಟುಂಬವೆಂಬುದು ಪ್ರಸಿದ್ದವಾದ ರಸವಾಣಿ. ಜನರೂ, ಜನಾಂಗಗಳೂ ಎಲ್ಲವನ್ನೂ ಕಾಣುವಂತಾಗುವುದು. ವಿಶ್ವವೇ ಒಂದು ಕುಟುಂಬವೆಂಬ ಭಾವನೆಯು ಬಲಿಯುವುದು. ತಮ್ಮ ತಮ್ಮ ದೇಶದ ಅಭ್ಯುದಯ ಸಾಧನೆಯಿಂದ ಮಾತ್ರವೇ ತೃಪ್ತಿಯಾಗುವುದು ತಪ್ಪಿ ಇಡೀ ಪ್ರಪಂಚದ ಹಿತಸಾಧನೆಗೆ ಮನಸ್ಸು ಕೊಡುವಂತಾಗುವುದು.

ಕರ್ನಾಟಕದ ಸಂಸ್ಕೃತಿ ಕನ್ನಡ ಭಾಷೆಯ ಉದ್ಧಾಮ ಗ್ರಂಥಗಳಲ್ಲಿ ಗರ್ಭಿತವಾದ ಸಂಸ್ಕೃತಿ, ಕರ್ನಾಟಕದಲ್ಲಿ ಪ್ರಚಲಿತವಾದ ಧರ್ಮತತ್ವ ಜ್ಞಾನಾದಿಗಳಲ್ಲಿ ಅಡಗಿದೆ. ಸಂಸ್ಕೃತಿ ಈ ಪ್ರಾಂತದ ಮೂಲೆ ಮೂಲೆಗಳಲ್ಲಿರುವ ಗುಡಿ ಗುಂಡಾರಗಳಲ್ಲಿ, ಮಾಸತಿ ವೀರಗಲ್ಲುಗಳಲ್ಲಿ, ವಾಸ್ತು ಶಿಲ್ಪಗಳಲ್ಲಿ, ಲಲಿತ ಕಲಾಕೃತಿಗಳಲ್ಲಿ ಮೈವೆತ್ತು ನಿಂತಿದೆ. ಇದು ಉಜ್ವಲವಾಗಿದೆ, ವೀರವಕ್ತವಾಗಿದೆ; ಸ್ಪೂರ್ತಿದಾಯಕವಾಗಿದೆ, ನಮ್ಮನ್ನು ವಿಕಾಸ ಮಾರ್ಗದೆಡೆಗೆ ಭರದಿಂದ ಮುಂದೊಯ್ಯುವಂತಹದಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅದು ಮೂಲದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಟ್ಟು ಬೇರೆಯಾದುದಲ್ಲ. ಇಷ್ಟೇ ಅಲ್ಲ, ಅದು ಭಾರತೀಯ ಇತಿಹಾಸ ಹಾಗೂ ಸಂಸ್ಕೃತಿ ಇವುಗಳೊಳಗಿಂದ ಮಧ್ವಾಚಾರ್ಯರರ ದ್ವೈತತ್ವಜ್ಞಾನ, ವಿಜಯನಗರ ಸಾಮ್ರಾಜ್ಯ, ಹಾಗೂ ತತ್ಕಾಲೀನ ಸಂಸ್ಕೃತಿಕ ಪುನರುಜ್ಜೀವನ, ಹೊಯ್ಸಳ ರಾಷ್ಟ್ರಕೂಟರ ಶಿಲ್ಪ, ಬಸವೇಶ್ವರರ ಹಾಗೂ ವಚನಕಾರರ ವಚನ ವೈಭವ, ದಾಸರ ಭಕ್ತಿ ವಾಙ್ಮಯ ಇತ್ಯಾದಿಗಳನ್ನು ತೆಗೆದು ಹಾಕಿದರೆ ಆ ಸಂಸ್ಕೃತಿಯು ಆ ಮಟ್ಟಿಗೆ ಬಡವಾಗಿ ಬಿಡುವುದು ಎಂಬಲ್ಲಿ ಸಂಶಯವಿಲ್ಲ. ಆದುದರಿಂದ ಭಾರತ ಹಾಗೂ ಭಾರತದ ಯಾವುದೇ ಅಂಗ ಇವುಗಳ ಸಂಬಂಧವು ಅವಿಭಾಜ್ಯವಾದುದು, ಜೈವಿಕವಾದುದು (ಆರ್ಗ್ಯಾನಿಕ್) ಪರಸ್ಪರ ಪೂರಕವಾದುದು.

ಭಾರತೀಯ ಸಂಸ್ಕೃತಿಯ ವಿಶಾಲ ಹಾಗೂ ಸುಂದರ ನಂದನವನದಲ್ಲಿ ಕರ್ನಾಟಕ ಸಂಸ್ಕೃತಿ ಎಂಬುದು ಒಂದು ಚಿಕ್ಕ ಉಪವನ. (ಮೈಸೂರು ರಾಜ್ಯ ವಾರ್ತಾ ಇಲಾಖೆ ೧೯೫೬ ನವ್ಹಂಬರ ಪುಟ ೬೭, ಆರ್. ಆರ್. ದಿವಾಕರ )

ಸಂಗೀತ ಚಿತ್ರಕಲೆ ಮುಂತಾದವುಗಳೂ ಇಲ್ಲಿ ಸಾಕಷ್ಟು ಪ್ರೋತ್ಸಾಹವನ್ನು ಪಡೆದುದಲ್ಲದೆ-ಇಲ್ಲಿಯೇ ಮನೆಮಾಡಿಕೊಂಡಿವೆ ಎನ್ನಬಹುದು. ಸಂಗೀತದ ವಿಷಯದಲ್ಲಿಯಂತೂ ದಕ್ಷಿಣಾತ್ಯ ಸಂಗೀತಕ್ಕೆ ಕರ್ನಾಟಕ ಸಂಗೀತವೆಂದೇ ಹೆಸರಾಯಿತು. ಅದನ್ನು ಶುದ್ಧವಾಗಿರಿಸಿ, ಅದಕ್ಕೆ ಗ್ರಂಥಾದಿಗಳ ಮುಖಾಂತರ ಸ್ಥಿರ ಸ್ವರೂಪವನ್ನು ಮೂಲಕ ಲೋಕಪ್ರಿಯವಾಗಿಸಿದ ಶ್ರೇಯಸ್ಸು ಕರ್ನಾಟಕದ ಪುರಂದರಾದಿ ದಾಸ ಶ್ರೇಷ್ಠರಿಗೆ ಸಲ್ಲುತ್ತದೆ ಎಂಬುದನ್ನು ಮರೆಯತಕ್ಕದ್ದಲ್ಲ. (ಕಲೆ, ಅಜಂತಾ ಮುಂತಾದ ಕಡೆಗೆ ಪುರಸ್ಕೃತವಾಗಿದೆ.) ಚಿತ್ರಕಲಾ ನೈಪುಣ್ಯದ ವಿಷಯದಲ್ಲಿ ಕೂಡ ಮೊನ್ನೆ ಮೊನ್ನೆ ವಿಧಿವಶರಾದ ಸಿದ್ಧಲಿಂಗಸ್ವಾಮಿಗಳ ಹೆಸರು, ಅದೇ ರೀತಿ ವೆಂಕಟಪ್ಪನವರ ಹೆಸರು ನಮ್ಮೆದುರು ಬರುವವು. ಈ ವಿಷಯದಲ್ಲಿ ವಚನಕಾರರು ಹಾಗೂ ದಾಸಕೂಟದವರು ಮಾಡಿದ ಲೋಕ ಸೇವೆ ಅನುಪಮವೂ ಅಮೋಘವೂ ಆಗಿದೆ. ಅದು ಕೇವಲ ಸಾಹಿತ್ಯ ಸೇವೆಯಲ್ಲ. ಅದು ಶ್ರೇಷ್ಠವಾದ ಧರ್ಮ ಸೇವೆ. ಸುಲಭ ಸುಲಲಿತ ಶೈಲಿಯಲ್ಲಿ ಗಹನ ಗಂಭೀರವಾದ ತತ್ವಗಳನ್ನು, ಸುಲಿದ ಬಾಳೆಯ ಹಣ್ಣಿನೋಪಾದಿಯಲ್ಲಿ. ಬಾಲ ಭಾವದ ಜನ ಸಾಮಾನ್ಯರಲ್ಲಿ ಪ್ರಚಾರಗೊಳಿಸುವುದು ಬಹು ದೊಡ್ಡ ಕೆಲಸ. ಮೇಲಾಗಿ ಸಮಾಜ ಸುಧಾರಣೆಯ ವಿಷಯದಲ್ಲಿ ಬಸವೇಶ್ವರರಷ್ಟು ಮುಂದುವರಿದವರೆಷ್ಟು ಜನ ? ಆಗಿನ ಕಾಲದಲ್ಲಿ ಸಮಾಜದಲ್ಲಿಯ ವಿಷಮತೆಯನ್ನು ತೊಡೆದು ಹಾಕಲು ಅವರ ಪ್ರಯತ್ನ ಅದ್ವಿತೀಯ (ಸಂಸ್ಕೃತಿ ಪುಟ ೯-೧೦).

ಭಾರತದ ಸಂಸ್ಕೃತಿಯ ಬಗ್ಗೆ ಮಹಾತ್ಮ ಗಾಂಧಿಯವರು ಸ್ವರಾಜ್ಯ ಪತ್ರಿಕೆಯಲ್ಲಿ ಹೀಗೆ ಹೇಳಿದ್ದಾರೆ- ” ಭಾರತ ವರ್ಷ ಬೆಳೆಸಿಕೊಂಡು ಬಂದಿರುವ ನಾಗರಿಕತೆ. ಹಿರಿದಾದ ಒಂದು ನಾಗರಿಕತೆ ಲೋಕದಲ್ಲಿ ಒಂದೂ ಇಲ್ಲ ಎನ್ನುವುದು ನನ್ನ ನಂಬಿಕೆ. ನಮ್ಮ ಪೂರ್ವಜರು ಚಲ್ಲಿದ ನಾಗರಿಕತೆಯ ಬಿತ್ತು ಅನ್ಯಾದೃಶವಾದುದು. ರೋಂ ಮರೆಯಾಯಿತು, ಗ್ರೇಸ್ ಗೆ ಅದೇ ಗತಿ ತಟ್ಟಿತು. ಪಾರೋಗಳ ವಿಕ್ರಮ ಮುರಿಯಿತು. ಜಪಾನ್ ಪಾಶ್ಚಾತ್ಯವಾಗಿ ಉಳಿದಿದೆ. ಚೀನಾ ವಿಷಯ ಹೀಗೆಂದು ಹೇಳುವಂತಿಲ್ಲ ಆದರೆ ಭರತ ವರ್ಷ ಹೇಗೋ ಏನೋ ಇನ್ನೂ ತಳಹದಿಯಲ್ಲಿ ಭದ್ರವಾಗಿ ನಿಂತಿದೆ. ಯೂರೋಪಿನ ಜನ ಗ್ರೀಸ್, ರೋಮ ಜನರ ಬರಹಗಳಿಂದ ಜ್ಞಾನವನ್ನು ಪಡೆಯುತ್ತಾರೆ. ಆದರೆ ಆ ಗ್ರೀಸ್, ಆ ರೋಮು ತಮ್ಮ ಆ ಹಿಂದಿನ ವೈಭವದಲ್ಲಿ ಈಗ ಬಾಳುತ್ತಿಲ್ಲ. ಗ್ರೀಸ್ ನಿಂದ, ರೋಮನಿಂದ ಪಾಠ ಕಲಿಯುತ್ತಾ ಈ ಜನ ಗ್ರೀಸ್ ನ, ರೋಮಿನ ಜನತೆಗಳು ಮಾಡಿದ ತಪ್ಪುಗಳನ್ನು ಮಾಡದೆ ಬಾಳುತ್ತೇವೆ ಎಂದು ಭ್ರಮಿಸುತ್ತಾರೆ. ಇದು ಈ ಜನತೆಯ ದುಸ್ಥಿತಿ. ಸುತ್ತಲಿನ ಬಾಳು ಹೀಗಿರುವಲ್ಲಿ ಭರತ ವರ್ಷ ಬದಲಾಗದೆ ನಿಂತಿದೆ. ಇದೇ ಅದರ ಶ್ರೇಷ್ಠತೆ, ಭರತವರ್ಷದ ಜನರನ್ನು ಯಾವ ಮಾರ್ಪಾಡಿಗೂ ಒಪ್ಪಿಸುವುದು ಅಸಾಧ್ಯ. ಬಹು ಜನ ಭರತ ವರ್ಷಕ್ಕೆ ತಮ್ಮ ಬುದ್ಧಿವಾದವನ್ನು ನೀಡಿ ತಿವಿಯುತ್ತಾರೆ. ಆದರೆ ತಾಯಿ ಅದನ್ನು ತಡೆದು ಸ್ಥಿರವಾಗಿ ನಿಂತಿದ್ದಾಳೆ. ಇದೇ ನಮ್ಮ ಮಾತೆಯ ಸೌಂದರ್ಯ, ಇದೇ ನಮ್ಮ ಆಶಯ ರಕ್ಷಾಬಂಧ.”

ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿ ಕರ್ಣಾಟಕ ಸಂಸ್ಕೃತಿಯು ಬೆಳೆದಿದೆ. ಐತಿಹಾಸಿಕ ಘಟನೆಗಳು ನಮ್ಮ ಈ ಮಾತನ್ನು ವಿಷದೀಕರಿಸುತ್ತವೆ. ಜೀವನವು ಸರಳವಾಗಿರಬೇಕು. ಸತ್ವಶಾಲಿಯಾಗಿರಬೇಕೆಂಬುದು ನಮ್ಮ ಸಂಸ್ಕೃತಿಯ ಜೀವಾಳ. ಈ ಮಾತಿನಂತೆ ಸ್ವತಃ ಬಾಳಿದವರಿದ್ದರೆ. ಈ ಮಾತು ಅಭಾವನ ವೈರಾಗ್ಯದಿಂದ ಹುಟ್ಟಿದುದಲ್ಲ. ಚಕ್ರವರ್ತಿ ಚಂದ್ರಗುಪ್ತನಿಗೆ ಗುರುವಾದ ಮಾಹಾನುಭಾವ ಅರ್ಥಶಾಸ್ತ್ರದ ಪ್ರಮಾಣಗ್ರಂಥ ಬರೆದ ಕೌಟಿಲ್ಯನು ರಾಜೋಪಭೋಗಗಳನ್ನು ತ್ಯಜಿಸಿ ಪರ್ಣಶಾಲೆಯೊಂದರಲ್ಲಿ ವಾಸಿಸುತ್ತಿದ್ದನು. ಪ್ರಾಣಿಹಿಂಸೆಯು ಪಾಪದಾಯಕವಾದುದು. ಈ ಮಾತನ್ನು ಶಿಲೆಗಳ ಮೇಲೆ ಬೆರೆಯಿಸಿ ದೇಶದ ತುಂಬೆಲ್ಲಾ ಜನತೆಯ (ಕಿರಿದರಲ್ಲಿ ಹಿರಿಯ) ಧರ್ಮತತ್ವವನ್ನು ಬೋದಿಸಿದ ಸಾರ್ವಭೌಮ ಅಶೋಕ ಚಕ್ರವರ್ತಿಯು ಅಮರನಾಗಿದ್ದಾನೆ.

ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಸಾಮಾಜಿಕ ನೀತಿಯು  ಉಚ್ಚಮಟ್ಟವನ್ನು ಮುಟ್ಟಿತ್ತು. ಕಲ್ಲಲ್ಲಿ ಗಂಡನ ದಿಗ್ವಿಜಯದ ಸಿಹಿ ನೆನಪಿಗಾಗಿ ಮಹಾರಾಣಿ ಕಟ್ಟಿಸಿದ ಲೋಕೇಶ್ವರ ದೇವಾಲಯ. ವಿರೂಪಾಕ್ಷ ದೇವಾಲಯಗಳು ಇಂದಿಗೂ ಕಲೆಯ ಆಗರಗಳಾಗಿವೆ. ಅಂದಿನ ಧಾರ್ಮಿಕ ಜೀವನವನ್ನು ಗುರುತಿಸುವ ನೆಲೆಗಳಾಗಿವೆ. ಕಲ್ಯಾಣದ ಚಾಲುಕ್ಯ ವಿಕ್ರಮ ಬಿಲ್ಹಣ, ವಿಜ್ಞಾನೇಶ್ವರರಂತಹ ಕವಿಗಳನ್ನು ದೂರ ದೂರದ ದೇಶಗಳಿಂದ ಕರೆಸಿ ಸತ್ಕರಿಸಿ ಅವರಿಂದ ವಿಕ್ರಮಾಂಕ ದೇವ ಚರಿತೆ ಮತ್ತು ಮಿತಾಕ್ಷರಿ ಮೊದಲಾದ ಉದ್ಗ್ರಂಥವನ್ನು ಬರೆಯಿಸಿ ನಮ್ಮ ಸಂಸ್ಕೃತಿಯನ್ನು ವಿಕಾಸಗೊಳಿಸಿದನು. ಹೊಯ್ಸಳ ವಿಷ್ಣುವರ್ಧನ ಮಹಾರಾಜನು ಜೈನ, ಶೈವ, ವೈಷ್ಣವ ಧರ್ಮಗಳನ್ನು ಸಮನ್ವಯಗೊಳಿಸಿ ಕಲೆಯ ಬೀಡಾದ ಬೇಲೂರಿನಲ್ಲಿ ಚೆನ್ನಕೇಶವ ಮಹೋನ್ನತ ದೇವಾಲಯವನ್ನು ನಿರ್ಮಿಸಿ ಸಂಸ್ಕೃತಿಯನ್ನು ಸಂರಕ್ಷಣೆಯನ್ನು ಸಂರಕ್ಷಿಸಿದನು. ಕೆಳದಿಯ ಶಿವಪ್ಪ ನಾಯಕನು ಗೋ ಬ್ರಾಹ್ಮಣ ಸಂರಕ್ಷಣೆಯನ್ನು ಮಾಡಿ ಕವಿಗಳಿಗೆ ಉದರಾಶ್ರಯವಿತ್ತು ಬಿಸಿಲಿನಲ್ಲಿ ಪ್ರಯಾಣ ಮಾಡುವ ಜನರಿಗೆ ತನ್ನ ರಾಜ್ಯದಲ್ಲಿ ಅರವಟ್ಟಿಗೆಗಳನ್ನು ಕಟ್ಟಿಸಿ, ಮಠಗಳಿಗೆ ಉಂಬಳಿಗಳನ್ನು ಕೊಟ್ಟು ಸಮಾಜದ ಅಭ್ಯುದಯಕ್ಕೆ ನೆರವಾದನು. ವಿಜಯ ನಗರದ ಕೃಷ್ಣೆದೇವರಾಯ ಮಹಾರಾಜನು ತನ್ನ ಹಸ್ತದಿಂದ ನವರತ್ನ ಖಚಿತವಾದ ಪಾದ ಪೆಂಡಗಳನ್ನು ಅಲ್ಲಸಾನಿ ಪೆದ್ದನ್ನ ಎಂಬ ಕವಿಗೆ ತೊಡಿಸಿದನು. ಅಲ್ಲದೆ ಆ ಮಹಾಕವಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ರಾಜಧಾನಿಯಲ್ಲಿ ಮೆರೆಯಿಸಿದನು, ವಿದ್ವತ್ತನ್ನು ಗೌರವಿಸುವ ದೃಷ್ಟಿಯಿಂದ ಆ ಪಲ್ಲಕ್ಕಿಗೆ ತಾನು ಹೆಗಲುಕೊಟ್ಟನು. ಕೆಳದಿಯ ಚೆನ್ನಮ್ಮಾಜಿಯು ಔರಂಗಜೇಬನ ಅಂಜಿಕೆಯಿಂದ ತನ್ನನ್ನು ಮೊರೆಹೊಕ್ಕ ಶಿವಾಜಿಯ ಮಗ ರಾಜರಾಮನನ್ನು ಸಂರಕ್ಷಿಸಿದಳು. ಶಿವಾಜಿಗೆ ಸೋತ ಗಂಡನಿಗೆ ಪುರಪ್ರವೇಶ  ಮಾಡಗೊಡದೆ ಬೆಳವಡಿ ಮಲ್ಲಮ್ಮನು ರಾಜಧಾನಿಯ ಕೋಟೆಯ ಬಾಗಿಲನ್ನು ಮುಚ್ಚಿಸಿ ತಾನು ಸ್ವತಃ ಶಿವಾಜಿಯ ಸೈನ್ಯದೊಡನೆ ಯುದ್ಧಮಾಡಿ ಮರಾಠರನ್ನು ಜಯಿಸಿ, ಗಂಡನ ಗೌರವವನ್ನು ಉಳಿಸಿದಳು. ಛತ್ರಪತಿ ಶಿವಾಜಿಯು ದಿಗ್ವಿಜಯದ ಕಾಲದಲ್ಲಿ ತನ್ನ ಸೇನಾಪತಿಯೊಬ್ಬನು ತನಗೆ ಕಾಣಿಕೆಯಾಗಿ ತಂದೊಪ್ಪಿದ ಸುಂದರ ಸ್ತ್ರೀರತ್ನವೊಂದನ್ನು ತನ್ನ ಮಾತೃ ಸಮಾನವಾಗಿ ಭಾವಿಸಿ ಆ ತರುಣಿಯನ್ನು ಅವಳ ಪತಿಯಲ್ಲಿಗೆ ತನ್ನ ಕ್ಷಮಾಪಣೆಯೊಂಡಿಗೆ ಅತ್ಯಂತ ಗೌರವದಿಂದ ಕಳುಹಿಸಿದನು ಎಂಬ ಚರಿತ್ರೆಯಲ್ಲಿನ ಉಲ್ಲೇಖ ಎಂತಹ ಅಪರೂಪದ ಉದಾಹರಣೆ ! ಇವುಗಳಿಂದ ಅಂದಿನ ಸಾಮಾಜಿಕ ಧರ್ಮನೀತಿಯ ಔನ್ನತ್ಯವನ್ನು ತಿಳಿಯಬಹುದು.

ನಮ್ಮ ಕನ್ನಡ ನಾಡಿನಲ್ಲಿ ಇಂದಿಗೂ ಕಂಗೊಳಿಸುತ್ತಿರುವ ದಿವ್ಯ, ಭವ್ಯವಾದ ದೇವಾಲಯಗಳು, ಗೋಮಟೇಶ್ವರನಂತಹ ಅಸದೃಶ ಮೂರ್ತಿಗಳು, ಶಿಲಾಶಾಸನಗಳು ಮಹಾಸತಿ ಕಲ್ಲುಗಳು, ನಿಷದಿ ಕಲ್ಲುಗಳು, ಗೋಗ್ರಹಣ ಕಲ್ಲುಗಳು, ತಾಳೆಯೋಲೆ ಗ್ರಂಥಗಳು ಬಗೆಬಗೆಯ ವಿಗ್ರಹಗಳು, ಅಜಂತಾ ಚಿತ್ರಗಳು ನಮ್ಮ ಜನರ ಶ್ರೇಷ್ಠ ಗುಣಗಳಿಗೆ ನಿದರ್ಶನ.

ವಿದ್ವಾಂಸನಾದ ಬ್ರಾಹ್ಮಣನು ಬೆಳಗಾದ ಕೂಡಲೇ ನಡೆಸುವ ಅಹ್ನಿಕಗಳಿಗೂ ಹಳ್ಳಿಯ ರೈತನು ಬೆಳಿಗ್ಗೆ ಎದ್ದು ಮುಖ ತೊಳೆದುಕೊಂಡು ಪೂರ್ವಕ್ಕೆ ತಿರುಗಿ ಸೂರ್ಯನಿಗೆ ಭಕ್ತಿಯಿಂದ ಕೈಮುಗಿಯುವುದಕ್ಕೂ ಮೂಲದಲ್ಲಿ ವ್ಯತ್ಯಾಸವೇನೂ ಇಲ್ಲ. ವೀರಶೈವರು ಮಾಡುವ ಇಷ್ಟ ಲಿಂಗಪೂಜೆಗೂ, ವೈಷ್ಣವರು ಮಾಡುವ ಸಾಲಿಗ್ರಾಮ ಪೂಜೆಗೂ ತತ್ವಶಃ ಭೇದವಿಲ್ಲ. ಶಿವಶರಣರ ಪುರಾತನ ಸ್ತ್ರೋತ್ರಕ್ಕೂ ಜಿನಮುನಿಗಳ ತೀರ್ಥಂಕರರ ಸ್ತೋತ್ರಕ್ಕೂ ಅಷ್ಟಾಗಿ ವ್ಯತ್ಯಾಸ ಕಾಣದು. ಜಾತ್ರೆಗಳಲ್ಲಿ ದೇವರನ್ನು ರಥದಲ್ಲಿ ಕೂಡಿಸಿ ಎಳೆಯುವುದರ ಅರ್ಥವೇನು? ನಾವೆಲ್ಲರೂ ಒಂದೇ ಬುಡಕಟ್ಟಿನವರು, ಒಂದೇ ಧರ್ಮದವರು ಎಂಬುದಕ್ಕಷ್ಟೇ. ಈ ಒಕ್ಕೂಟ, ಜಾತ್ರೆಯ ಸಮಾರಂಭ, ಹಳ್ಳಿಗರಲ್ಲಿ ಇಂದಿಗೂ ತೇರಿನ ಹಗ್ಗ ಮುಟ್ಟಲೇಬೇಕೆಂಬ ಸಂಪ್ರದಾಯವಿದೆ. ತೇರಳೆಯುವ ಕಾರ್ಯ ಮುಗಿದ ನಂತರವಾದರೂ ಅಲ್ಲಲ್ಲಿ ಹಗ್ಗವನ್ನು ತಡವಾಗಿ ಬಂದ ಜನಸಮೂಹ ಮುಟ್ಟಿಯೇ ಮುಟ್ಟುವರು. ಇದನ್ನು ನೋಡುವಾಗ ನಮ್ಮ ಪೂರ್ವಜರು ರೂಪಿಸಿದ ಸಂಪ್ರದಾಯದಲ್ಲಿ ಎಂತಹ ಗೂಡಾರ್ಥವು ಅಡಗಿದೆ ! ಸ್ವಾಮಿ ನಿಷ್ಟೆಯು ಒಂದು ದೈವಿಕ ಗುಣ. ಸಮಾಜದ ಏಳಿಗೆಗೆ, ಮುನ್ನಡೆಗೆ ಅವಶ್ಯವಾದ ಒಂದು ಗುಣ, ಸ್ವಾಮಿನಿಷ್ಟೆಯಿಂದ ಪ್ರಾಣ ತೆತ್ತವರೆಷ್ಟೋ. ಅವರ ನೆನೆಹಿಕೆಯ ಗುರುತಾಗಿ ಶಿಲಾಶಾಸನಗಳು ನಾಡಿನಲ್ಲಿ ಹರಡಿವೆ.

“ಮಹಾಪಸಾಯ್ತಂ ಹುಲಿವಾನದ ಸಾವನ್ತ
ಸಿವೋದಯ ನಾಯಕನದ್ದೆ, ಹೊಂನರ ನಾಯಕತಿ
ಸ್ವರ್ಗಸ್ಥೆಯಾದಲ್ಲಿ…. ಕೆತ್ತಿಹೊಂನಿ ಸಿಡಿತಲೆಯ ಗೊಟ್ಟು
ಸುರಲೋಕ ಪ್ರಾಪ್ತಿಯಾದಲ್ಲಿ ಚಂದ್ರಾಕರುಳ್ಳಂನ…..
ಸ್ಥಿರಸ್ಥಾಯಿಯಾಗಿ ನಿಲ್ಲಿಸಿದ ಕಲ್ಲು
(ಮೊಳಕಾಲ್ಲೂರು ೧೨ )

ಮೊಳಕಾಲ್ಲೂರ ತಾಲ್ಲೂಕಿನ ಸಿದ್ದಪುರ ಗ್ರಾಮದಲ್ಲಿ ದೊರೆತ ಒಂದು ಶಿಲಾಶಾಸನದಲ್ಲಿ ಕಿತ್ತಿ ಹೊನ್ನಯೆಂಬಾಕೆಯು ತನ್ನ ಒಡತಿಯಾದ ಹೊನ್ನವ್ವೆನಾಯಕಿ ಮರಣ ಹೊಂದಿದಾಗ ಸಿಡಿತಲೆಕೊಟ್ಟು ಸುರಲೋಕಕ್ಕೆ ತೆರಳಿದಳೆಂಬ ವಿಚಾರವು ಸೂಚಿತವಾಗಿದೆ. (ಮೈಸೂರು ರಾಜ್ಯ ನವ್ಹಂಬರ ೧, ೫, ೬ ವಾರ್ತಾ ಇಲಾಖೆ ಪ್ರಕಟಣೆ, ಪುಟ ೧೧೭ )

ಪಟ್ಟದಕಲ್ಲಿನಲ್ಲಿರುವ ದೇವಾಲಯಗಳ ವೈಶಿಷ್ಟ್ಯದ ಬಗ್ಗೆ ಒಂದು ಮಾತು. ಇಲ್ಲಿ ಕಾಶಿನಾಥ, ಪಾಪನಾಥ ಮೊದಲಾದ ದೇವಾಲಯಗಳು ಉತ್ತರ ಭಾರತದ ಸಂಪ್ರದಾಯವನ್ನು, ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ ದೇವಾಲಯಗಳು ದಕ್ಷಿಣ ಭಾರತದ ವಾಸ್ತು ಸಂಪ್ರದಾಯವನ್ನೂ ಹೊಂದಿವೆ ಎಂದು ಪರ್ಸಿಬ್ರೌನ್ ರವರ ಅಭಿಪ್ರಾಯ. ಪಾಪನಾಥ ಮತ್ತು ಸುಂದರ ವಿಶಾಲವಾದ ವಿರೂಪಾಕ್ಷ ದೇವಾಲಯಗಳಲ್ಲಿ ಇವೆರಡು ಸಂಪ್ರದಾಯಗಳ ಸಂಮಿಳನವನ್ನು ಕಾಣಬಹುದು. ಎರಡನೆ ವಿಕ್ರಮಾದಿತ್ಯನ ರಾಣಿ ಲೋಕ ಮಹಾದೇವಿ ವಿರೂಪಾಕ್ಷ ದೇವಾಲಯವನ್ನು ಅವಳ ಸಹೋದರಿ ತ್ರೈಲೋಕೇಶ್ವರಿ (ಮಲ್ಲಿಕಾರ್ಜುನ ) ದೇವಾಲಯವನ್ನೂ, ನಿರ್ಮಿಸಿದ್ದಾಗಿ ತಿಳಿದು ಬಂದಿದೆ.

ಚಾಲುಕ್ಯರು ಸಪ್ತಮಾತೃಕೆಯರನ್ನೂ ಮತ್ತು ಕಾರ್ತಿಕೇಯನನ್ನೂ ತಮ್ಮ ಮನೆ ದೇವರನ್ನಾಗಿ ಪೂಜಿಸುತ್ತಿದ್ದರೆಂದು ಐಹೊಳೆಯ ಶಾಸನದಿಂದ ತಿಳಿದು ಬಂದಿದೆ. ವಿಷ್ಣುವಿನ ಭಕ್ತರಾದ ಅವರು ‘ವರಾಹ’ ಅವತಾರವನ್ನು ತಮ್ಮ ಲಾಂಛನವನ್ನಾಗಿ ಮಾಡಿಕೊಂಡರು. ವಿಷ್ಣು ದೇವಾಲಯಗಳನ್ನು ಮಾತ್ರ ಕಟ್ಟದೆ, ಜೈನ ಬಸದಿಗಳನ್ನೂ, ಶಿವಾಲಯಗಳನ್ನೂ ಕಟ್ಟಿಸಿದುದು ಅವರ ಪರಧರ್ಮ ಸಹಿಷ್ಣುತೆಯ ಕುರುಹು. ಜಗತ್ತಿನಲ್ಲಿಯೇ ಅಪರೂಪವಾದ ಐದು ಗುಹಾಂತರ ದೇವಾಲಯಗಳನ್ನು ಬಾದಾಮಿಯ ಗುಡ್ಡದಲ್ಲಿ ಕೊರೆದಿದ್ದಾರೆ. ಒಂದು ಶಿವನದು, ಮತ್ತೊಂದು ಜಿನನದು. ಉಳಿದ ಮೂರು ವಿಷ್ಣುವಿನದು. ಈ ಗುಹೆಗಳು ಕಲಾದೇವಿಯ ದೇಗುಲಗಳು. ಐಹೊಳೆಯು ಚಾಲುಕ್ಯರ ವಾಸ್ತುಶಿಲ್ಪದ ತವರೂರೆಂದರೂ ಸರಿಯೇ. ಸುಮಾರು ಎಪ್ಪತ್ತು ದೇವಾಲಯಗಳಿದ್ದು ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದವುಗಳು ಲಾಡ್ ಖಾನ್ (ಕ್ರಿ.ಶ. ೪೫೦ ರಲ್ಲಿ ನಿರ್ಮಿತ ), ದುರ್ಗಾದೇವಾಲಯ.