೧೩. ಗ್ರಂಥಋಣ

. ಎಸ್‌. ನಟರಾಜ ಬೂದಾಳು, ನಾಗಾರ್ಜುನ ಮೂಲ ಮಾಧ್ಯಮಕಕಾರಿಕಾ (ಅಭಿನವ ಪ್ರಕಾಶನ, ಬೆಂಗಳೂರು, ೨೦೦೬).

.ಡಿ. ಆರ್‌. ನಾಗರಾಜ, ನಾಗಾರ್ಜುನ (ಅಕ್ಷರ ಪ್ರಕಾಶನ, ಹೆಗ್ಗೋಡು).

.ಮ.ಸು. ಕೃಷ್ಣಮೂರ್ತಿ, ಸಿದ್ಧ ಸಾಹಿತ್ಯ (ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೮೨).

.ಸಂ. ಪೂಜ್ಯ ಆಚಾರ್ಯ ಬುದ್ಧ ರಖ್ಖಿತ (ಅನು. ಬಿ.ವಿ. ರಾಜಾರಾಂ, ಮಜ್ಜಿಮನಿಕಾಯ,) ಸಂಪುಟ ೨ (ಬುದ್ಧ ವಚನ ಟ್ರಸ್ಟ್‌, ಬೆಂಗಳೂರು ೧೯೮೯).

.ಡಿ.ಆರ್‌. ನಾಗರಾಜ, ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ (ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೯).

01. David J. Kalupahana, Mulamadhyamakakarika of Nagarjuna (Motilal Banarasidas Publishers (P) Ltd, Delhi, 2004).

  1. Stephen Batchelor, Nagarjuna’s Mulamadhyamaka Karika (Oxford University Press, 1995).
  2. Kenneth K. Inada, Nagarjuna a translation of his Mulamadhyamaka karika (Sri Satguru Publications Shaktinagar, Delhi, 1993).
  3. Kenneth K. Inada, The Aesthetics of Oriental Emptiness, (Motilal Banarasidas publishers (P) Ltd Delhi, 2002).
  4. Fernan do tola carmen Dragonetti, On Voidness (Motilal Banarasidas publishers (P) Ltd Delhi, 2002).
  5. David Barton, Emptiness Appraised (A critical study of Nagarjuna’s Philosophy) (Motilal Banarasidas publishers (P) Ltd Delhi, 2001).
  6. Fernando Tola Carman Dragonetti, Vaidalyaprakarana (Motilal Banarasidas publishers (P) Ltd Delhi, 1995).
  7. Musashi Tachikawa, Tr. Rolf W. Giebel, Philosophy of Nagarjuna (Motilal Banarasidas publishers (P) Ltd Delhi, 2000).
  8. A. K. Warder, Indian Buddhism (Motilal Banarasidas publishers (P) Ltd Delhi, 2002).
  9. K. Venkataramanan, Nagarjunas Philosophy (Motilal Banarasidas publishers (P) Ltd Delhi, 1993).

 

೧೪. ಪದಕೋಶ

ಅಸ್ತಿತ್ವವಾದ : ವಸ್ತು ಪ್ರಪಂಚದ ಸಮಸ್ತಕ್ಕೂ ಶಾಶ್ವತ ಅಸ್ತಿತ್ವವಿದೆ ಎನ್ನುವ ನಿಲುವು.

ಅನಾತ್ಮವಾದ :ವಸ್ತು/ಜೀವಿಯಲ್ಲಿ ಸ್ವತಂತ್ರವಾದ ಅದರದ್ದೇ ಆದುದೊಂದು ಇದೆ ಎನ್ನುವ ನಿಲುವು.

ಅನಿರೋಧ :ಯಾವುದರ ಅಂತ್ಯವೆಂಬುದಿಲ್ಲ. ಚಲನಶೀಲವಾದ ಪ್ರಕ್ರಿಯೆಯಲ್ಲಿ ರೂಪಾಂತರವುಂಟೇ ಹೊರತು ಅಂತ್ಯವೆಂಬ ಹಂತವು ಇರುವುದಿಲ್ಲ.

ಅನುತ್ಪಾದ :ಯಾವುದೂ ಹೊಸದಾಗಿ ಉಂಟಾಗುವುದಿಲ್ಲ.

ಅನುಚ್ಛೇದ :ಯಾವುದೂ ಉಚ್ಚೇದಗೊಳ್ಳದು. ಯಾವುದಕ್ಕೂ ನಾಶವೆಂಬುದಿಲ್ಲ.

ಅಶಾಶ್ವತ :ಶಾಶ್ವತವೆನ್ನುವ ಯಾವುದೂ ಇಲ್ಲ. ಎಲ್ಲವೂ ನಿರಂತರ ಬದಲಾಗುತ್ತಲೇ ಇದೆ.

ಅನಾಗಮ :ಹೊಸದೊಂದರ ಆಗಮನ ಸಾಧ್ಯವಿಲ್ಲ.

ಅನಿರ್ಗಮ :ಯಾವುದರ ನಿರ್ಗಮನವೂ ಸಾಧ್ಯವಿಲ್ಲ.

ಅನೇಕಾರ್ಥ : .ಅನೇಕ ಕಡಿಮೆಗೊಳಿಸಿ ಏಕವಾಗಿಸಲು ಸಾಧ್ಯವಾಗದು. .ಅಭಿನ್ನ ಕಲ್ಪನೆಯ ಮೂಲಕ ಲೋಕವನ್ನು ವಿವರಿಸಲಾಗುದು.

ಅನಾನಾರ್ಥ : .ಯಾವುದರ ಭಿನ್ನತೆಯೂ ಸಾಧ್ಯವಿಲ್ಲ. .ಎಲ್ಲವನ್ನೂ ಬೇರೆ ಬೇರೆ ಸ್ವತಂತ್ರ ಘಟಕಗಳನ್ನಾಗಿ ವಿವರಿಸಲು ಸಾಧ್ಯವಿಲ್ಲ.

ಅಭಿಧಮ್ಮ ಕೋಶ :ಬೌದ್ಧ ತಾತ್ವಿಕತೆಯ ವಿಶ್ಲೇಷಣೆಯ ಸಂಗ್ರಹ.

ಆದಿಕಾರಣ :ಈ ಲೋಕಕ್ಕೆ ಒಂದು ನಿಶ್ಚಿತ ಪ್ರಾರಂಭವಿದೆ ಎಂಬ ನಿಲುವು.

ಉಚ್ಛೇದವಾದ : (Nihilism) ನಾವು ಕಾಣುವ ಲೋಕವನ್ನು ‘ಏನೂ ಇಲ್ಲದ್ದೆಂದು’ ವಿವರಿಸುವ ಕ್ರಮ.

ಕಾರಣ ಮೀಮಾಂಸೆ :ಲೋಕ ವಿವರಣೆಗಾಗಿ ಆದಿಕಾರಣವೊಂದನ್ನು ಆಧರಿಸುವುದು. ಈ ಲೋಕ ಸಮಸ್ತವೂ ಆ ಒಂದರಿಂದ ಉಂಟಾಗಿದೆ ಎಂಬ ನಂಬಿಕೆ. ಲೋಕಕ್ಕೊಂದು ನಿಶ್ಚಿತ ಪ್ರಾರಂಭವನ್ನಾಧರಿಸಿದ ವಿವರಣೆ.

ಚತುಷ್ಕೋಟಿ :ನಾಲ್ಕು ತುದಿಗಳು. ಇದೆ, ಇಲ್ಲ, ಇದೆ-ಇಲ್ಲ ಎರಡೂ ಹೌದು, ಇದೆ – ಇಲ್ಲ ಎರಡೂ ಅಲ್ಲ. ಈ ನಾಲ್ಕು ತುದಿಗಳಿಂದ ಲೋಕವನ್ನು ನೋಡುವ ಒಂದು ಕ್ರಮ.

ನಾಸ್ತಿತ್ವವಾದ : ನೋಡಿ ಉಚ್ಛೇದವಾದ

ಪರಿಣಾಮ ಮೀಮಾಂಸೆ : ಲೋಕಕ್ಕೊಂದು ನಿಶ್ಚಿತ ಅಂತ್ಯವುಂಟೆಂಬ ನಿಲುವು. ಶಾಶ್ವತ ಪರಿಣಾಮವನ್ನಾಧರಿಸಿ ನೀಡಿದ ಲೋಕ ವಿವರಣೆ.

ಪರಭಾವ :ಸ್ವತಂತ್ರ ವಸ್ತುವೊಂದನ್ನು ಉಂಟುಮಾಡಬಲ್ಲ ಪರವಸ್ತುವಿನ ಸಾಮರ್ಥ್ಯ.

ಪ್ರತ್ಯಯ : ಕಾರ್ಯಕಾರಣಭಾವದ ವಿವರಣೆಯಲ್ಲಿ ಪರಿಣಾಮವೊಂದು ಉಂಟಾಗಲು ಅಗತ್ಯವಾದದ್ದು. ಪ್ರಕ್ರಿಯೆಯೊಂದು ಉಂಟಾಗಲು ಅಗತ್ಯವಾದ ಪರಿಸ್ಥಿತಿ.

ಪ್ರಕ್ರಿಯಾ ಮೀಮಾಂಸೆ :ಲೋಕದಲ್ಲಿ ಆಗಿ ಇರುವುದು ಎನ್ನುವುದಿಲ್ಲ. ಎಲ್ಲವೂ ಆಗುವಿಕೆಯಲ್ಲಿಯೇ ಇರುತ್ತದೆ. ಎಲ್ಲವೂ ನಿರಂತರ ಚಲನಶೀಲವಾದದ್ದು, ಬದಲಾವಣೆ ಗೊಳಪಟ್ಟದ್ದು, ಸ್ವತಂತ್ರ ಶಾಶ್ವತ ಅಸ್ತಿತ್ವವಿಲ್ಲದ ಪ್ರಕ್ರಿಯೆ ಮಾತ್ರ ಎಂಬ ಲೋಕವಿವಿರಣೆ.

ಪ್ರತೀತ್ಯ ಸಮುತ್ಪಾದ :ಪರಸ್ಪರಾವಲಂಬಿ ಅಸ್ತಿತ್ವವುಳ್ಳ ಭೌತಿಕ ಮತ್ತು ಮಾನಸಿಕ ಪ್ರಕ್ರಿಯೆಗಳು. ಯಾವುದರಲ್ಲೂ ಸ್ವತಂತ್ರವೆಂದು ಗುರುತಿಸಬಹುದಾದ ಅಸ್ತಿತ್ವವಿರುವುದಿಲ್ಲ. ಪರಸ್ಪರ ಅವಲಂಬನೆಯಿಂದ ಅಸ್ತಿತ್ವಕ್ಕೆ ಬಂದು ಸಂಬಂಧ ಭಂಗಗೊಂಡರೆ ಪರಿಣಾಮವೂ ಭಂಗಗೊಳ್ಳುತ್ತದೆ. ಸಾಪೇಕ್ಷೆ ಕಾರಣ ಮತ್ತು ಪ್ರತ್ಯಯಗಳು ಸಂಯೋಜನೆಯಿಂದ ಉಂಟಾದ ಸಾಪೇಕ್ಷ ಫಲದ ಸರಣಿ.

ಮಧ್ಯಮಮಾರ್ಗ :ವಸ್ತು ಪ್ರಪಂಚನ್ನು ಇದೆ ಅಥವಾ ಇಲ್ಲ ಎಂದು ಪ್ರಭಾವಿಸದೆ, ಸದಾ ಚಲನೆಯಲ್ಲಿರುವ ಲೋಕಪ್ರವಾಹವನ್ನು ಹಾಗೆಯೇ ಪರಿಭಾವಿಸಿ ಅರಿಯುವ ಕ್ರಮ.

ದುಃಖ :ಇದಕ್ಕೆ ಮೂರು ರೀತಿಯ ವಿವರಣೆಗಳಿವೆ .ಲೋಕಜೀವಿಯ ನೋವು-ಸಂಕಟಗಳಿಗೆ ಸಂಬಂಧಿಸಿದ್ದು (ದುಃಖ ದುಃಖತಾ). .ಲೋಕದ ಎಲ್ಲ ಸಂಯೋಜನೆಗಳಿಗೂ ಇರುವ ಮೂರು ಲಕ್ಷಣಗಳಿಗೆ ಒಂದು (ಸಂಖಾರ ದುಃಖ). .ಬದಲಾವಣೆಯಲ್ಲಿ ದುಃಖ. ಮೊದಲಿನದೊಂದನ್ನೇ ಸಾಮಾನ್ಯವಾಗಿ ದುಃಖದ ಅರ್ಥವನ್ನಾಗಿ ಗ್ರಹಿಸಲಾಗುತ್ತದೆ. ಎರಡನೆಯದಾದ ಸಂಖಾರ ದುಃಖವು ವಸ್ತುಲಕ್ಷಣಗಳಿಗೆ ಸಂಬಂಧಿಸಿದುದು. ಎಲ್ಲ ಸಂಯೋಜನೆಗಳೂ (ಸಂಖಾರಗಳೂ) ದುಃಖದ ಲಕ್ಷಣವನ್ನೂ ಹೊಂದಿವೆ. ಅಂದರೆ ಸಂಯೋಜನೆಗಳುಂಟು ಮಾಡುವ ಹಿತಕಾರೀ / ಅಹಿತಕಾರೀ ಅನುಭವಗಳೆರಡೂ ದುಃಖವೇ ಆಗುತ್ತದೆ. ಮೂರನೆಯದು ಬದಲಾವಣೆ ಅಥವಾ ಅನ್ಯತಾಭಾವಕ್ಕೆ ಸಂಬಂಧಿಸಿದುದು. ನಿತ್ಯಚಲನಶೀಲವಾದ ಲೋಕಪ್ರವಾಹದಲ್ಲಿ ಸರ್ವವೂ ಗತಿಯಲ್ಲಿಯೇ ಇರುವುದರಿಂದ ಯಾವ ಸ್ಥಿತ ಭಾವನೆಗಳೂ ಇರಲು ಸಾಧ್ಯವಿಲ್ಲ. ಸ್ಥಿತ ಭಾವನೆಗಾಗೆ ಅಂಟಿಸಿಕೊಂಡರೆ ದುಃಖವುಂಟಾಗುತ್ತದೆ.

ಸಂಖಾರ :ಜೀವಿಯೊಂದು ರೂಢಿಸಿಕೊಳ್ಳುವ ಲೋಕಾನುಭವಗಳ ಕೋಶ. ಈ ಕೋಶವನ್ನಾಧರಿಸಿ ಜೀವಿಗಳು ತಮ್ಮ ಅನುಭವಗಳನ್ನು ವ್ಯಾಖ್ಯಾನಿಸಿಕೊಳ್ಳುತ್ತವೆ. ಪ್ರತಿ ಅನುಭವವೂ ಮತ್ತೆ ಮುಂದಿನ ಅನುಭವಗಳ ಮಾರ್ಗ ದರ್ಶಕವಾಗಿ ಕೋಶವನ್ನು ಸೇರಿಕೊಳ್ಳುತ್ತದೆ.

ಸ್ವಭಾವ :ಸ್ವತಂತ್ರ ಮತ್ತು ಶಾಶ್ವತ ಅಸ್ತಿತ್ವವುಳ್ಳದ್ದು.

ಸಾಪೇಕ್ಷ ಕಾರಣ :ಕಾರಣ-ಪ್ರತ್ಯಯ-ಫಲ ಈ ಸಂಯೋಜನೆಗಳ ಪ್ರವಾಹ ರೂಪಿಯಾದ ವಸ್ತು ಪ್ರಪಂಚವನ್ನು ವಿವರಿಸುವಾಗ ಆ ಘಟಕಗಳನ್ನು ಸ್ವತಂತ್ರ ಘಟಕಗಳೆಂದು ಭಾವಿಸದೆ, ಅವೂ ಕೂಡಾ ಸಾಪೇಕ್ಷ ನೆಲೆಯಲ್ಲಿ ಆ ಸ್ಥಾನಗಳನ್ನು ಪಡೆದಿದ್ದಾವೆಂದು ಭಾವಿಸುವುದು. ಉದಾ: ಬೀಜ-ಮೊಳಕೆ – ಸಸಿ-ಮರ – ಹೂ-ಹಣ್ಣು – ಬೀಜ-ಮೊಳಕೆ ಈ ಶ್ರೇಣಿಯಲ್ಲಿ ಎಲ್ಲವೂ ಮುಂದಿನ ಹಂತಕ್ಕೆ ಕಾರಣಗಳಾದರೆ ಅವುಗಳ ಹಿಂದಿನ ಹಂತಕ್ಕೆ ಫಲಗಳಾಗುತ್ತವೆ.