ಕೃಷ್ಣ ಮತ್ತು ಗೋದಾವರಿಗಳ ನಡುವಿನ ಫಲವತ್ತಾದ, ಕರಾವಳಿಯನ್ನೂಳಗೊಂಡ ರಾಜ್ಯವೇ ಆಂಧ್ರಪ್ರದೇಶ. ಇದನ್ನು ಆಂಧ್ರದೇಶವೆಂದೂ ಕರೆಯುವ ವಾಡಿಕೆ ಉಂಟು. ಪೌರಾಣಿಕವಾಗಿ ಹೇಳುವುದಾದರೆ ಐತರೇಯ ಬ್ರಾಹ್ಮಣದಲ್ಲಿ-ಋಗ್ವೇದದಲ್ಲಿಯ ಕಥೆಯಂತೆ ವಿಶ್ವಾಮಿತ್ರ ಮಹರ್ಷಿಯು ತನ್ನ ಐವತ್ತು ಜನ ಮಕ್ಕಳ ವಂಶಸ್ಥರು ಆಂದ್ರರಾಗಿ, ಪೆಂಡಾರಾಗಿ ಸುಬರಾಗಿ, ಪುಳಿಂದರಾಗಿ ಮತ್ತು ಮುತಿಬರಾಗಿ ಆರ್ಯರ ನೆಲೆಯ ಸರಹದ್ದಿನಲ್ಲಿ ಬಾಳಿರೆಂದು ಶಾಪಕೂಟ್ಟನಂತೆ. ಇಲ್ಲಿ ದ್ರಾವಿಡ ಮತ್ತು ಆರ್ಯ ಜನಂಗದ, ಸಂಸ್ಕ್ರತಿಯ ತಿಕ್ಕಾಟದ ಉಗಮವನ್ನು ಇದು ಸೂಚಿಸುತ್ತದೆ. ಈ ನಾಡಿನ ಅನೇಕ ರಾಜರು ರಾಜ್ಯಕಟ್ಟಿ ಬಹು ಪರಾಕ್ರಮದಿಂದ ರಾಜ್ಯವಾಳಿದ ಘಟನೆಗಳು ಐತಿಹಾಸಿಕ ಸತ್ಯ ಸಂಗತಿಗಳು. ಅತಿ ಹಿಂದಕ್ಕೆ ಅಂದರೆ ಕ್ರಿಸ್ತಾಬ್ದ ೨ನೆಯ ಶತಮಾನದ ಶಾತವರ್ಣಿಯ ರಾಜ್ಯ ವಿಸ್ತಾರವು ಮಹರಾಷ್ಟ್ರದ ಗಡಿಯಿಂದ ಕಂಚಿಯವರೆಗೂ ಹರಡಿತ್ತು. ಪರದೇಶದ ಯಾತ್ರಿಕ ಮೆಗಾಸ್ತೇನನು ಈ ರಾಜ್ಯದ ರಾಜನ ಸವಿಸ್ತಾರ ವರ್ಣನೆಯನ್ನು ತನ್ನ ಪ್ರವಾಸಿ ಗ್ರಂಥದಲ್ಲಿ ನಮೂದಿಸಿದ್ದಾನೆ. ಇತಿಹಾಸ ಪೂರ್ವದೊಂದಲೂ ಫಲವತ್ತಾದ ಈ ಭೂಮಿಯನ್ನು ಬಲಾಡ್ಯ ರಾಜರು ಆಳಿದರು. ರಕ್ಕಸ ತಂಗಡಿಯ ಐತಿಹಾಸಿಕ ನಿರ್ಣಾಯಕ ಯುದ್ಧದಲ್ಲಿ ಸೋಲುಂಟಾಗಿ, ಅವನತಿ ಕಂಡಿತು. ಕ್ರಿಶ್ತಾಬ್ದ ಪೂರ್ವ ೧,೦೦೦ ವರ್ಷಕ್ಕೂ ಆಂಧ್ರರ ಬಗ್ಗೆ ಮಾಹಿತಿಯು ದೊರೆಯುತ್ತದೆ ಎಂದು ವಿದ್ವಾಂಸರ ಅಭಿಪ್ರಾಯ.

ಈ ಜನತೆಯ ಭಾಷೆ ತೆಲುಗು. ಇದನ್ನು ತೆನುಗು ಎಂದು ಬರೆಯುತ್ತಾರೆ. ಆಂದ್ರ ಎಂಬುದು ಜನತೆ ಮತ್ತು ರಾಜ್ಯದ ಹೆಸರು. ‘ಆಂದ್ರಂ ಎಂಬುದು ಭಾಷೆಯನ್ನು ಸೂಚಿಸುತ್ತದೆ. ದ್ರಾವಿಡ ಭಾಷೆಯ ಗುಂಪಿಗೆ ಸೇರಿದೆ. ತಮಿಳು, ಕನ್ನಡ, ಮಲಯಾಳಂ ಮತ್ತು ತುಳು ಇವು ದ್ರಾವಿಡ ಭಾಷೆಯ ಇತರ ಶಾಖೆಗಳು. ಇವು ಪೈಶಾಚಿ ಭಾಷೆಯಿಂದ ಉದ್ಭವಿಸಿವೆಯೆಂದು ವಿದ್ವಾಂಸರ ಅಭಿಪ್ರಾಯ. ತೆಲಗು ಭಾಷೆಯ ಮೇಲೆ ಅತ್ಯಂತ ಪ್ರಭಾವ ಬೀರಿದ ಭಾಷೆಗಳೆಂದರೆ ಸಂಸ್ಕ್ರತ ಮತ್ತು ಕನ್ನಡ. ತೆಲಗು ಪಂದಿತನಾಗಲು, ವಿದ್ವಾಂಸನೆಂದು ಅರಸರಿಂದ ಕರೆಸಿಕೂಳ್ಳಲು ಕನ್ನಡದ ಅಧ್ಯಯನ ಅತ್ಯಾವಶ್ಯವೆಂದು ತೆಲಗು ಕವಿಗಳೇ ಹೇಳಿದ್ದು ಈ ಮಾತಿಗೆ ನಿದರ್ಶನವಾಗಿದೆ. ತೆಲಗು ಲಿಪಿಯು ದೇವನಾಗರಿಗಿಂತ ಪ್ರಾಚೀನವಾದುದು ಎಂಬ ವಾದಕ್ಕೆ ಈ ಅಕ್ಷರಗಳು ಬಿಂದುವಿನಿಂದ ಪ್ರಾರಂಭ ಹೂಂದಿರುವುದಾಗಿದೆ. ಈ ನಾಡಿನಲ್ಲಿರುವ ಮೂರು ಮಹತ್ವದ ಶೈವ ಪೀಠಗಳಾದ ಶ್ರೀಶೈಲ, (ಕರ್ನೂಲ ಜಿಲ್ಲೆ) ಕಪಿಲೇಶ್ವರ (ಗೋದಾವರಿ ಜಿಲ್ಲೆ) ಮತ್ತು ಕಾಳಹಸ್ತಿ (ಚಿತ್ತೂರು ಜಿಲ್ಲೆ) ಮತ್ತು ಪೂರ್ವಕ್ಕೆ ಸಮುದ್ರವನ್ನೊಳಗೂಂಡ ದೇಶ ತ್ರಿಲಿಂಗ ದೇಶದ ಜನತೆಯ ಭಾಷೆ ತೆಲಗು ಎಂದು ಆಗಿದೆಯೆಂಬ ಅಭಿಪ್ರಾಯವುಳ್ಳವರೂ ಉಂಟು. ಈ ಭಾಷೆಗೂ ಕನ್ನಡಕ್ಕೂ ಭಾಷಾಶಾಸ್ತ್ರದ ರೀತಿಯಿಂದ ನಿಕಟಸಂಬಂಧವಿರುವಂತೆ ಸಾಂಸ್ಕ್ರತಿಕವಾಗಿಯೂ ಬಾಂಧವ್ಯ ಉಂಟು. ವಿಜಯ ನಗರದ ಕೃಷ್ಣದೇವರಾಯನು ಕನ್ನಡಿಗನಾದರೂ ತೆಲುಗು ಭಾಷೆಯಲ್ಲಿ ಗ್ರಂಥ ರಚಿಸಿದ್ದು ಈ ಮಾತಿಗೆ ಉದಾಹರಣೆಯಾಗಿದೆ. ತೆಲಗು ಭಾಷೆಯ ಮೂದಲ ಕವಿ ನನ್ನಯ್ಯಾ ಭಟ್ಟನು ತನ್ನ ಕಾವ್ಯದಲ್ಲಿ ತನ್ನ ಗೆಳೆಯ ನಾರಾಯಣ ಭಟ್ಟ, ಕನ್ನಡಿಗನ ಸಹಾಯದಿಂದ ಕಾವ್ಯ ರಚಿಸಿದಾಗಿ ಹೇಳಿಕೊಂಡಿದಾನೆ.

ಇನ್ನು ಸಾಹಿತ್ಯ ದೃಷ್ಟಿಯಿಂದ ನೋಡೋಣ :

ಭಾರತದ ಯಾವುದೇ ರಾಜ್ಯದ ಸಾಹಿತ್ಯವಾದರೂ ಮೂಲದಲ್ಲಿ ಧಾರ್ಮಿಕ ಸಾಹಿತ್ಯವಾಗಿದ್ದು ಪೌರಾಣಿಕ ಕಥೆಗಳು ಒಂದೇ ಆಗಿವೆ. ಸಂಸ್ಕೃತಿಯ ಜೀವಾಳವೆನಿಸುವ ನಡೆ, ನುಡಿ, ಆಚಾರ ಸಂಪ್ರದಾಯಗಳು ಎಲ್ಲೆಡೆಯೂ ಒಂದೇ. ಆರ್ಯರ ಆಗಮನದ ಪೂರ್ವಕಾಲದಿಂದ ಇಲ್ಲಿ ನೆಲೆಸಿದ ಒಂದೇ ಜನಾಂಗವಾಗಿದ್ದ ದ್ರಾವಿಡ ಸಂತತಿಯೇ ಇದಕ್ಕೆ ಕಾರಣ. ಭಾಮಾ ಕಲಾಪವು ಒಂದು ನೃತ್ಯ ನಾಟಕವಾದ್ದಾರಿಂದ ನೃತ್ಯ ನಾಟಕದ ಪುರಾತನ ಕೆಲವೂಂದು ಕುರುಹುಗಳನ್ನು ನೋಡಿ, ಕೆಲವು ಕವಿಗಳ ವಿಚಾರ ತಿಳಿದು, ಈ ನೃತ್ಯ ನಾಟಕದ ರಚನೆಗೆ ಸಂಬಂಧಿಸಿದ ಕಾಲದ ಕೂಂಚ ಹಿಂದಿನ ದಿನದ ಸಾಹಿತ್ಯ ತಿಳಿಯುವುದು ಉಚಿತವಾಗಿದೆ.

ನೃತ್ಯ ನಾಟಕದ ಮೊದಲ ದಾಖಲೆ ಹದಿಮೂರನೆಯ ಶತಮಾನದ ಪಾಲಕುರ್ಕಿ ಸೋಮನ ‘ಪಂಡಿತಾರಧ್ಯ ಚರಿತಮು‘ದಲ್ಲಿ ದೊರೆಯುತ್ತದೆ. ಮಾಘ ಚತುರ್ದಶಿ ಶಿವರಾತ್ರಿಯ ವರ್ಣನೆಮಾಡುತ್ತಾ ಕವಿಯು, ನೃತ್ಯಗಳನ್ನು ಮಾಡಿದರೆಂದೂ ನೆರಳುಗಳನ್ನು ಆಡಿದರೆಂದೂ ನೃತ್ಯನಾಟಕದಲ್ಲಿ ನಟರು ನೇಪತ್ಯದಿಂದ ರಂಗಸ್ಥಳಕ್ಕೆ ಉಚಿತವಾದ ಬಣ್ಣ ಹಾಕಿಕೊಂಡು ವೇಷಾಲಂಕಾರದೊಂದಿಗೆ ರಂಗ ಮಧ್ಯಕ್ಕೆ ಪ್ರವೇಶಿಸಿದರೆಂದು ವರ್ಣಿಸಿದ್ದಾನೆ. ನಟರು ಹಾಡಿದರು, ನೃತ್ತಿಸಿದರು ಎಂದಿದ್ದಾನೆ.

೧೩೭೫-೧೪೩೦ ಈ ಅವಧಿಯ ಉದ್ದಾಮ ಕವಿ ಶ್ರೀನಾಥ ಉತ್ತಮ ಪೋಷಣೆಯನ್ನು ಉಂಬಳಿಗಳನ್ನು ಕಲಾವಿದರಿಗೆ ದಯಪಾಲಿಸಿದರು. ಕೆಲವು ರಾಜರು, ಕವಿಗಳು ವಿಲಾಸ ವೈಭವದ ಸುಲಭ ಸಾಧನೆಯೆಂದು ಪರಿಗಣಿಸಿದರು. ದೇವದಾಸಿಯರು ಕವಿಯನ್ನೂ, ರಸಿಕನನ್ನೂ ಶೃಂಗಾರ ಚಿಂತನಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೋತ್ಸಾಹಿಸಿದರು. ಇಂತಹ ಒಂದು ಸಂದಿಗ್ಧ ಕರಾಳ ಸ್ಥಿತಿಯ ಹಿನ್ನಲೆಯಲ್ಲಿ ಶ್ರೀ ಸಿದ್ದೇಂದ್ರ ಯೋಗಿಗಳು ತಮ್ಮ ಶಿಷ್ಯರೊಡಗೂಡಿ ಭಾಮಾಕಲಾಪವನ್ನು ಪ್ರಪಂಚಕ್ಕೆ ಇತ್ತರು.

ಭಾಮಾಕಲಾಪದ ಕಥೆ ಹರಿವಂಶದಲ್ಲಿ ಬಂದ ಪಾರಿಜಾತ ಪುಷ್ಪದ ಕಥೆಯೇ ಆಗಿದೆ. ಒಂದು ದಿನ ನಾರದ ಮಹರ್ಷಿ ಸ್ವರ್ಗದಿಂದ ತಾನು ತಂದಿದ್ದ ಪಾರಿಜಾತವನ್ನು ಕೃಷ್ಣ ರುಕ್ಮಿಣಿಯರಲ್ಲಿಗೆ ಬದು ಅರ್ಪಿಸಿ ರುಕ್ಮಿಣಿದೇವಿ ಮುಡಿಯುವುದೇ ಯೋಗ್ಯವೆಂದು ಹೇಳಿ ಸತ್ಯಭಾಮೆಯಲಿಇಗೆ ಹೋಗಿ ಹೂವನ್ನು ವರ್ಣಿಸಿ, ಕೃಷ್ಣನು ಬಲತ್ಕಾರದಿಂದ ತನ್ನಿಂದ ಪಡೆದು ರುಕ್ಮಿಣಿಗೆ ಮುಡಿಸಿದನೆಂದು ಹೇಳಿ ಅದನ್ನು ಪಡೆ ಎಂದು ಹೇಳಿ ಸವತಿಮತ್ಸರದ ಕದನಕ್ಕೆ ನಾಂದಿಹಾಕುತ್ತಾನೆ. ಸತ್ಯಭಾಮೆ ತನ್ನ ರೂಪ, ಯೌವ್ವನದಿಂದ ಗರ್ವಿಷ್ಟಳಾಗಿ; ಕೃಷ್ಣನೇ ತನ್ನಲ್ಲಿಗೆ ಬರಲಿ ಎಂದು, ಬಾರದಿರಲು ವಿರಹಾಗ್ನಿಯಿಂದ ಬೆಂದು ಕಾಗದ ಬರೆದು ದೂತಿಯೊಂದಿಗೆ ಕಳಿಸಿದರೂ ಕೃಷ್ಣ ಬಾರದಂತಾಗಲು ತಾನೆ ಬಂದು ಸ್ತುತಿಸಿ ಪಾರಿಜಾತ ಮರವನ್ನೇ ಇಂದ್ರಲೋಕದಿಂದ ತರುವುದಾಗಿ ಕೃಷ್ಣನಿಂದ ಅಭಯ ಪಡೆಯುತ್ತಾಳೆ. ಈ ಹಂದರವನ್ನೇ ಉಪಯೋಗಿಸಿಕೊಂಡು ತಿಮ್ಮಣ್ಣ ಕವಿಯು ಸತ್ಯಭಾಮೆಯ ಒಂದು ವಿಲಕ್ಷಣವಾದ ಪಾತ್ರವನ್ನು ರಚಿಸಿದ್ದಾನೆ. ಈ ಭಾಮೆಯೇ ಆಂಧ್ರ ಪ್ರದೇಶದ ಪ್ರಖ್ಯಾತ ನೃತ್ಯನಾಟಕ ಸತ್ಯಭಾಮೆಯಾಗಿ- “ಭಾಮಾಕಲಾಪ” ವೆಂಬ ಹೆಸರಿನಿಂದ ದೇಶದಲ್ಲೆಲ್ಲಾ ಪ್ರಸಿದ್ಧಿ ಪಡೆದಿದೆ. ಈಗ ಭಾಮಾಕಲಾಪದ ರಚನೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾದವರನ್ನು ತಿಳಿಯೋಣ.

ನಂದಿ ತಿಮ್ಮಣ್ಣ-ವಿಜಯನಗರದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಅಷ್ಟ ದಿಗ್ಗಜರಲ್ಲಿ ಈತನೂ ಒಬ್ಬ. ಶಬ್ದ ಮಾಧುರ್ಯಕಾಗಿ ತೆಲುಗಿನಲ್ಲಿ ಅತ್ಯಂತ ಪ್ರಭಾವಿ ಕವಿ. ಈತನನ್ನು ‘ಮುಕ್ಕು ತಿಮ್ಮಣ್ಣ’ ಎಂದು ಕರೆಯುತ್ತಾರೆ. ಮುಕ್ಕು ಅಂದರೆ ಮೂಗು. ಮೂಗಿನ ಬಗ್ಗೆಯೇ ಒಂದು ರೋಮಾಂಚನಕ ಕಾವ್ಯ ಬರೆದ ಕೇರ್ತಿ ಈತನದು. ದುಂಬಿಯು ಎಲ್ಲಾ ಹೂಗಳ ಹತ್ತಿರ ಸುಳಿದಾಡಿದರೂ ತನ್ನ ಹತ್ತಿರ ಬಾರದ್ದರಿಂದ ಅರಣ್ಯಕ್ಕೆ ಹೋಗಿ ತಪಸ್ಸುಗೈದು ನ್ನರಸಿಯ ಮೂಗಾಗಿ ರೂಪಾಂತರ ಹೊಂದಿ ಕಪ್ಪು ನೀಳವಾದ ಕಣ್ಣುಗಳ ರೆಪ್ಪೆಗಳನ್ನಾಗಿಸಿಕೊಂಡು ಎಲ್ಲಾ ಪರಮಳಗಳನ್ನು ಸ್ವೀರರಿಸುವಂಥ ಹದಾಯಿತೆಂದು ಕವಿಯ ವರ್ಣನೆ. ತೆಲುಗಿನಲ್ಲಿ ‘ಪಾರಿಜಾತಾಪಹರಣ’ ಎಂಬ ಪಧ್ಯವವನ್ನು ಬರೆದಿದ್ದಾನೆ. ಕೃಷ್ಣ; ನಾಯಕ, ಸತ್ಯಭಾಮೆ ನಾಯಕಿ. ಕೃಷ್ಣನು ರುಕ್ಮಿಣಿಯತ್ತ ತೋರಿಸುತ್ತಿದ್ದ ಒಲವಿನಿಂದ ಕೋಪಗೊಂಡು ಭಾಮೆ, ಕೃಷ್ಣನನ್ನು ಆಲಂಗಿಸದೆ, ಕೋಪಿಸಿಕೊಂಡು ಆತನ ತಲೆಗೆ ತನ್ನ ಎಡಗಾಲಿನಿಂದ ಒದೆದಳು. ವಿರಹ, ನಂತರ ಪ್ರಣಯಿಗಳ ಮಿಲನ-ಅತ್ಯಂತ ಮನೋಹರ ಕಾವ್ಯವಾಗಿದ್ದು ಭಾಮಾಕಲಾಪದ ಸತ್ಯಭಾಮೆಯ ಪಾತ್ರವನ್ನು ರೂಪಿಸಿದವನೇ ಈ ಕವಿ. ಕೃಷ್ಣದೇವರಾಯ ತನ್ನ ಅರಸಿಯೂಂದಿಗೆ ಕೋಪಿಸಿಕೊಂಡಿದ್ದು, ಈ ಕಾವ್ಯದ ಅರ್ಪಣೆಯ ಕಾಲದಲ್ಲಿ ಸುಪ್ರೀತನಾದನೆಂದು ದಂತ ಕಥೆ ಇದೆ. ‘ಮುದ್ದು ಸಲುಕ’ ಅಂದರೆ ಪದ  ಮಾಧುರ್ಯಕಾಗಿ ಈ ಕವಿಯು ಪ್ರಸಿದ್ಧನಾಗಿದ್ದಾನೆ.

ಕೃಷ್ಣವಧಾನಿ; ಈತನು ತೆಲುಗು ರೀತಿಯ ಕಾವ್ಯ ರೀತಿಯಾದ ದ್ವರ್ತಿಕಾವ್ಯದಲ್ಲಿ ನೈಷಾಧಿ ಪಾರಿಜಾತಿಮ್ ರಚಿಸಿದ್ದಾನೆ. ಅಂದರೆ ಈ ಕಾವ್ಯದ ಪದಗಳಿಂದ ನಳ ಉಪಾಖ್ಯಾನವೂ ಇದೇ ಪದಗಳ ಬೇರೊಂದು ಅರ್ಥವನ್ನು ಗ್ರಹಿಸಲು ಪಾರಿಜಾತಾಪಹರಣದ ಉಪಾಖ್ಯಾನವೂ ದೊರೆಯುತ್ತವೆ.

ಇಂದು ಭಾಮಾಕಲಾಪದಲ್ಲಿ ಕ್ಷೇತ್ರಯ್ಯನ ಪದ್ಯಗಳನ್ನು ಸೇರಿಸಿದೆ. ಈತ ಕೃಷ್ಣಾ ಜಿಲ್ಲೆಯ ಮುವ್ವ ಗ್ರಾಮದಲ್ಲಿ ಜನಿಸಿ, ಸಮಿಪದ ಶ್ರೀ ಕಾಕುಳೇಶ್ವರ ಭಕ್ತನಾಗಿದ್ದಂತೆ ಕಂಡು ಬರುತ್ತದೆ. ಈತನು ಆಶುಕವಿಯಾಗಿ ಹಾಡುತ್ತ ನಾಡನ್ನೆಲ್ಲ ಸಂಚರಿಸಿದ.ಈತನ ಪದ್ಯಗಳು ಸಂಗೀತ ಮಾಧುರ್ಯವನ್ನಲ್ಲದೆ ಸಾಹಿತ್ಯ ಮೌಲ್ಯಗಳನ್ನೂ ಒಳಗೊಂಡಿದ್ದು ನೃತ್ಯಕ್ಕೆ ರಂಜನೀಯವಾಗಿ ಹೊಂದಿಕೊಳ್ಳುವಂತಹವು. ಕೃಷ್ಣಭಕ್ತಿಯೇ ಪ್ರಧಾನವಾದ ಪದ್ಯಗಳಿದ್ದು ಕವಿಯು ವಿಜಯರಾಘವ ನಾಯಕರ ಆಸ್ಥಾನದಲ್ಲಿ ಕಳೆದನು. ತ್ಯಾಗರಾಜರ ಸಮಕಾಲನಾಗಿದ್ದು ತ್ಯಾಗರಾಜರು ಸಂಗೀತದಲ್ಲಿ ಪ್ರೌಢಿಮೆ ಗಳಿಸಿದಂತೆ ಕವಿಯು ತನ್ನ ಪದ ಲಾಲಿತ್ಯಕಾಗಿ ಪ್ರಸಿದ್ಧಿ ಪಡೆದಿದ್ದಾನೆ.

ಯಕ್ಷಗಾನ ಮತ್ತು ನೃತ್ಯನಾಟಕದ ಏಳಿಗೆಗೆ ಅತ್ಯಂತ ಅಮೋಘ ಸೇವೆ ಸಲ್ಲಿಸಿದವರಲ್ಲಿ ಇನ್ನೂಬ್ಬರೆಂದರೆ ೧೬೮೧-೧೭೧೨ ರ ವರೆಗೆ ತಂಜಾವೂರಿನಲ್ಲಿ ಆಳಿದ ಶಹಾಜಿ. ಈತನು ಸ್ವತಃ ವಿದ್ವಾಂಸಮೊದ್ದಿ ಅನೇಕ ಕವಿಗಳಿಗೆ ಆಶ್ರಯವನ್ನಿತ್ತಿದ್ದಾನೆ. ಇಲ್ಲಿಯವರೆಗೆ ಪಂಡಿತರು ಪಾಂಡಿತ್ಯ ಪ್ರದರ್ಶನಕ್ಕಾಗಿ ಪ್ರೌಢ ಶೈಲಿಯ ಚಂಪೂ ಕಾವ್ಯಗಳ ರಚನೆಯನ್ನೇ ಮಾಡಿದರೂ ಶಹಾಜಿಯು ಮೂದಲ ಬಾರಿಗೆ ಯಕ್ಷಗಾನೆ ಮತ್ತು ನೃತ್ಯನಾಟಕಗಳನ್ನು ಸಾಹಿತ್ಯ ಪ್ರಾಕಾರಗಳೆಂದು ಪರಿಗಣಿಸಿ ಅನೇಕ ಬದಲಾವಣೆಗಳನ್ನು ಮಾಡಿ, ತಂಡಗಳಿಂದ ಯಶಸ್ವಿಯಾಗಿ ರಂಗಪ್ರಯೋಗಗಳನ್ನು ನಡೆಸಿದ. ಯಾವಾಗ್ಗೆ ರಾಜನೇ ಸ್ವತಃ ಈ ಕಲೆಯನ್ನು ಮೆಚ್ಚಿ ತನ್ನ ಪಾಂಡಿತ್ಯ ಪ್ರದರ್ಶಿಸಿದನೋ ಆಗ್ಗೆ ಶೀಘ್ರವಾಗಿ ಯಕ್ಷಗಾನಕರ್ತರು ಅಲ್ಲಲ್ಲಿ ಗೋಚರಿಸಿದರು. ಸೂತ್ರಧಾರಿಯ ಪ್ರವೇಶ ಮತ್ತು ವಿನಾಯಕ ಪೂಜೆಯನ್ನು ರಂಗದ ಮೇಲೆ ತಂದುದಲ್ಲದೆ ಪ್ರತಿ ಹಂತದಲ್ಲಿ ಪೂರ್ವ ಪದ್ಧತಿಯಲ್ಲಿಯಂತೇಯೇ ಹಾಡುಗಳನ್ನು ಉಳಿಸಿಕೊಳ್ಳಲಾಯಿತು. ಸಾಹಿತ್ಯಮಯ ಕಾವ್ಯರೀತಿಯ ಮಾತುಗಳನ್ನು ಬಳಸಲಾಯಿತು. ನಾಟಕದ ಭಾಷೆ ಸಂಸ್ಕೃತದಿಂದ ಜನತೆಯ ನಿತ್ಯ ಜೀವನದ ಭಾಷೆಯನ್ನು ಬಳಸಲಾಯಿತು. ನಿತ್ಯದ ಭಾಷೆ, ಜೀವನದಲ್ಲಿ ಕಂಡುಬರುವ ಜನತೆಯ ಪ್ರತಿನಿಧಿಯಾದ ಅನೇಕ ಪಾತ್ರಗಳ ರಚನೆ ಉಂಟಾಯಿತು. ಭಾಮಾಕಲಾಪದ ಮಾಧವಿಯ ಸೃಷ್ಟಿ ಇಲ್ಲಿ ಅಡಗಿದೆ. ಜೀವನದಲ್ಲಿ ಕಂಡುಬರುವ ಪ್ರವೃತ್ತಿ ಈ ಶತಮಾನದ ಒಂದು ವೈಶಿಷ್ಟ್ಯತಿಯೆನ್ನಬಹುದು. ಭಾಮೆಯು ಕೃಷ್ಣನ ಆಗಮನಕ್ಕಾಗಿ ಕಾತರಗೊಂಡಾಗ ಅದೇ ಪ್ರಮಾಣದಲ್ಲಿ ಹಾಸ್ಯಂ, ತಿಂಡಿಯ ಆಗಮನಕ್ಕಾಗಿ ಕಾತರಿಸಿದ್ದಾನೆ. ಕೃಷ್ಣನ ಪರಚಯವನ್ನು ದಿನನಿತ್ಯ ಕಂಡು ಬರುವ ವ್ಯಕ್ತಿಗಳೂಂದಿಗೆ ಅಂದರೆ ನೇಗಿಲು ಹೊತ್ತ, ಚಕ್ರವನ್ನು ತಿರುಗಿಸುವ, ಬೊಂ ಬೊಂ ಎಂದು ಹಾಡುತ್ತಸಾಗುವ ಅಯ್ಯನೊಂದಿಗೆ, ದಾಡಿಬಿಟ್ಟ ವ್ಯಕ್ತಿ ಇತ್ಯಾದಿ ನಟರೊಂದಿಗೆ ಹೋಲಿಸಿ, ಹಾಸ್ಯದೊಂದಿಗೆ ಭಾಷೆಯ ಬದಲಾವಣೆ, ರಂಗದ ಮೇಲೆ ನಿಜಜೀವನದ ಛಾಯೆಯನ್ನೂ ಬೀರಲು ಯತ್ನಿಸುತ್ತಾನೆ.

ಶಹಾಜಿಯ ಕಾಲದಲ್ಲಿ ಒಂದು ‘ಪಾರಿಜಾತ-ಪಹರಣಮ್’ ಹುಟ್ಟಿತು. ಇದು ಯಕ್ಷಗಾನ ಮಾದರಿಯಲ್ಲಿದೆ. ಈ ಕೃತಿಯ ಕರ್ತ ಮಾತೃ ಭುತಯ್ಯ. ಈತನು ತನ್ನ ಕೃತಿಯನ್ನು ಪ್ರತಾಪಸಿಂಹನ ನಂತರ ಪಟ್ಟಕ್ಕೆ ಬಂದ ಅಮರಸಿಂಹನಿಗೆ ಅರ್ಪಿಸಿದ್ದಾನೆ. (೧೭೮೮-೮೯) ಮಾತೃಭೂತಯ್ಯ ತನ್ನ ಹಳ್ಳಿಯಾದ ಪುದುಕೋಟಾದಿಂದ ತಂಜಾವೂರಿಗೆ ಬಂದುದು ಒಂದು ರೀತಿಯ ಕುತೂಹಲವನ್ನುಂಟುಮಾಡುವ ಸಂಗತಿಯಾಗಿದೆ. ಇದು ಕಥೆಯಾದರೂ ಅಂದಿನ ಜನತೆಉಅ ವಿಶ್ವಾಸವು ಇಂಥ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ. ಮಾತೃ ಭೂತಯ್ಯನ ಆರಾಧ್ಯದೇವತೆ-ಭೂತೇಶ್ವರ ದೇವನ ರಾಣಿಯಾದ ಸುಗಂಧಿ ಕುಂತಳಾದೇವಿ. ಕವಿಯು ಈ ದೇವಿಯನ್ನು ಮನಸಾರೆ ಹೊಗಳಿ, ಸೇವೆ ಸಲ್ಲಿಸುತ್ತಿರುವಾಗ್ಗೆ ಈತನ ಬಡತನಕ್ಕೆ ಕನಿಕರಪಟ್ಟ ದೇವಿ ಒಂದು ದಿನ ಈತನ ಕನಸಿನಲ್ಲಿ ಕಾಣಿಸಿಕೊಂಡು, “ತಂಜಾವೂರಿನ ರಾಜನು ತನ್ನ ಭಕ್ತ. ನೀನು ಆತನಲ್ಲಿಗೆ ಹೋಗು, ಆತನು ನಿನಗೆ ಸಹಾಯ ಮಾಡುವನು” ಎಂದು ಹೇಳಿದಳು. ಅತ್ತ ಅರಸನಿಗೆ ಅದೇ ದೇವಿ ಕಾಣಿಸಿಕೊಂಡು, “ಅಯ್ಯಾ ಭಕ್ತಾ ನಿನ್ನಲ್ಲಿಗೆ ನನ್ನ ಭಕ್ತನನ್ನು ಕಳಿಸುತ್ತಿದ್ದೇನೆ, ಆತನ ತೊಂದರಯನ್ನು ನಿವಾರಿಸಿ ಆತನಿಗೆ ರಕ್ಷಣೆ ಕೊಡು” ಎಂದು ಆಜ್ಞಾಪಿಸಿದಳು. ಅಂಥ ಭಕ್ತನು ಯಾರಿರಬಹುದೆಂದು ಕುತೂಹಲದಿಂದ ಅರಸನಾದ ಪ್ರತಾಪಸಿಂಹನು ದಾರಿ ಕಾಯುತ್ತಿರಲು, ಮಾತೃ ಭೂತಯ್ಯನು ಬಂದು ಪ್ರಣಾಮ ಸಲ್ಲಿಸುತ್ತಾನೆ. ಅರಸನು ಆತನನ್ನು ಸ್ವಾಗತಿಸಿ, ಆದರಿಸಿ, ವಿಷಯ ತಿಳಿದು ಹತ್ತು ಸಹಸ್ರ ರೂಪಾಯಿಗಳನ್ನು ಕೊಟ್ಟು ತ್ರಿಜರಗಿರಿಗೆ ಹೋಗಿ ನೆಮ್ಮದಿಯಿಂದ ಬಾಳುತ್ತ ಕವಿತಾ ರಚನೆಯಲ್ಲಿ ಕಾಲ ಕಳೆಯಬಹುದೆಂದು ಸೂಚಿಸುತ್ತಾನೆ. ಪ್ರತಾಪಸಿಂಹನ ಮಗನಾದ ಅಮರಸಿಂಹನ ಪಟ್ಟಾಭಿಷೇಕದ ಕಾಲದಲ್ಲಿ ಈ ಕವಿಯನ್ನು ರಾಜಧಾನಿಯಾದ ತಂಜಾವೂರಿಗೆ ಬರಮಾಡಿಕೊಂಡು ಯಕ್ಷಗಾನದ ರೀತಿಯಲ್ಲಿ, ಒಂದು ಆಟವನ್ನು ಬರೆದು ರಾಜನಿಗೆ ಅರ್ಪಿಸುವಂತೆ ಅಮರಸಿಂಹನ ಮಂತ್ರಿಯಾದ ಶಿವರಾಯನು ಪ್ರೋತ್ಸಾಹಿಸಿದನು. ಈ ಘಟನೆಯನ್ನು ಸ್ವತಃ ಕವಿಯೇ ಪಾರಿಜಾತಾಪಹರಣದ ಪ್ರಾರಂಭದ ಕವಿಪದ್ಯಗಳಲ್ಲಿ ನಿರೂಪಿಸಿದ್ದಾನೆ. ಭಾಗವತದ ಕಥೆಯೇ ಇದರ ಮೂಲಾಧಾರ. ಈ ನಾಟಕದ ವೈಶಿಷ್ಟ್ಯವೆಂದರೆ- ಇಲ್ಲಿಯವರೆಗೆ ರಂಗದಲ್ಲಿಯ ಪಾತ್ರಗಳು-ದೇವರು, ದೇವಿಯರ ಯಕ್ಷರು, ರಾಜ, ರಾಣಿಯರೇ ಆಗಿದ್ದರೆ- ಇಲ್ಲಿ ಎಲ್ಲಾ ತರಹದ ಜನತೆಯ ಪಾತ್ರಗಳ ಸೃಷ್ಟಿ ಕಂಡು ಬರುತ್ತದೆ. ಹಾಲು ಮಾರಲು ಬರುವ ಗೌಳಿಗಿತ್ತಿಯ ಪಾತ್ರವಂತೂ ಮೋಹಕ. ಮಜ್ಜಿಗೆ ಮಾಡಿ ಶುಕ್ರನಿಂದ ನತ್ತನ್ನೂ, ಸೂರ್ಯನಿಂದ ಬೆಂಡೊಲೆಯನ್ನೂ, ಚಂದ್ರನಿಂದ ಸರಿಗೆಯನ್ನೂ, ಇಂದ್ರನಿಂದ ಬಾಜುವಂದವನ್ನೂ, ಶಿವನಿಂದ ಮುಕುಟಪದಕವನ್ನೂ, ಸರಸ್ವತಿಯಿಂದ ಶಿರಸ್ಸಿನ ಸೂರ್ಯ-ಚಂದ್ರ ಆಭರಣ ಪಡೆದುದಾಗಿ ರಾಗವಾಗಿ ಹಾಡಿದ್ದಾಳೆ. ಮಾರಲು ತಂದ ಮಜ್ಜಿಗೆಯನ್ನೂ ವರ್ಣಿಸುತ್ತಾಳೆ. ‘ಕೃಷ್ಣ ಪಾರಿಜಾತ’ದಲ್ಲಿ ಗೌಳಿಗಿತ್ತಿಯು ಬಂದು, ಮಾರಲು ತಂದ ಮಜ್ಜಿಗೆಯ ವರ್ಣನೆಯನ್ನು ಜ್ಞಾಪಕಕ್ಕೆ ತರುತ್ತದೆ.

ಪಾರಿಜಾತಾಪಹರಣ:

ಇದರ ಮೂಲ ಕಥೆ ಹರವಂಶದಲ್ಲಿದೆ. ಅದರ ಸಾರಾಂಶ ಇಂತಿದೆ. ನಾರದ ಋಷಿಯು ಸ್ವರ್ಗದಿಂದ ಪಾರಿಜಾತ ಪುಷ್ಪವನ್ನು ತಂದು, ರುಕ್ಮಿಣಿಯೊಡನೆ ಇದ್ದ ಕೃಷ್ಣನಿಗೆ ಕಾಣಿಕೆಯಾಗಿ ಕೊಡುತ್ತಾನೆ. ಕೃಷ್ಣನು ಅದನ್ನು ರುಕ್ಮಿಣಿಗೆ ಕೊಡುವನು. ಈ ವಿಷಯವು ಕೃಷ್ಣನ ನಲ್ಲೆಯರಲ್ಲೆಲ್ಲಾ ಅತುಳ ಸೌಂದರ್ಯವತಿಯೂ ಅಸೂಯೆಗೆ ಹೆಸರಾದ, ಸತ್ಯಭಾಮೆಯು ಕೋಪಿಸಿಕೊಳ್ಳುತ್ತಾಳೆ. ಕೃಷ್ಣನೇ ಬಂದು ಸಂತೈಸಿದರೂ ಆತನಿಗೆ ಎಡಗಾಲನ್ನು ತಾಗಿಸುತ್ತಾಳೆ. ಕೊನೆಗೆ ಸ್ವರ್ಗದಿಂದ ಪಾರಿಜಾತ ವೃಕ್ಷವನ್ನೇ ತಾನು ತರುವುದಾಗಿಯೂ, ಅವಳ ತೋಟದಲ್ಲಿ ನೆಡುವುದಾಗಿಯೂ ವಚನವೀಯಲು ಭಾಮೆಯು ಹರ್ಷಚಿತ್ತವುಳ್ಳವಳಾಗುತ್ತಾಳೆ. ಕೃಷ್ಣನು ಸ್ವರ್ಗಕ್ಕೆ ಹೋಗಿ ಇಂದ್ರನೂಡನೆ ಯುದ್ಧ ಮಾಡಿ, ಜಯಿಸಿ ವೃಕ್ಷವನ್ನು ಪಡೆಯುತ್ತಾನೆ. ಮುಕ್ಕು ತಿಮ್ಮಣ್ಣನು ಈ ಕಥಾಸಾರಾಂಶದಿಂದ ಅತ್ಯಂತ ಜನಪ್ರಿಯವಾದ ಖಂಡಕಾವ್ಯವನ್ನು ರಚಿಸಿದ್ದಾನೆ. ಈ ಕಾವ್ಯದಲಿ ಒಡಮೂಡಿದ ಕಥಾನಾಯಕಿಯೇ ಆಂಧ್ರದ ನೃತ್ಯ ನಾಟಕದ ಸತ್ಯಭಾಮೆಯಾಗಿ ಇಂದಿಗೂ ರಾರಾಜಿಸುತ್ತಿದ್ದಾಳೆ. ತಿಮ್ಮಣ್ಣನು ಅಸಾಮಾನ್ಯ ಕವಿಯಾದ್ದರಿಂದ ಆತನ ಕಲ್ಪನೆಯ ಹರವನ್ನು ಸತ್ಯಭಾಮೆಯ ಪಾತ್ರ ನಿರೂಪಣೆಯಲ್ಲಿ ಕಾಣಬಹುದು. (೧೬೦೦-೩೧) ಕೃಷ್ಣಧವರಿ-ಈತನೂ ಸಹ ತೆಲಗು ಮತ್ತು ಸಂಸ್ಕೃತದಲ್ಲಿ ವಿಶೇಷ ಪಾಂಡಿತ್ಯ ಹೊಂದಿದ ಕವಿ. ಈತನೂ “ನೈಸಾದ ಪಾರಿಜಾತಿಯಮ್” ಎಂಬ ತೆಲಗು ಕಾವ್ಯವನ್ನೂ ದ್ವಂದಾರ್ಥದಲ್ಲಿ ಬರೆದು ಪ್ರಸಿದ್ಧನಾಗಿದ್ದಾನೆ. ಈ ಕಾವ್ಯದ ಪದಗಳನ್ನು ನಳ ಚರಿತ್ರೆ ಹೇಳಲೂ ಅದೇ ಪದಗಳ ಜೂತೆ ಪಾರಿಜಾತಾಪಹರನದ ಕಥೆಯನ್ನು ಹೇಳಲು ಬಳಸಬಹುದಾಗಿದೆ.

ಕೃಷ್ಣಾ ಜಿಲ್ಲೆಯ ಮುವ್ವಾದಲ್ಲಿ ಹುಟ್ಟಿ ಬೆಳೆದ ಕ್ಷೇತ್ರಯ್ಯನೂ ಗೋಪಾಲನ ಪರಮ ಶಿಷ್ಯ. ಈತನ ಕಾವ್ಯದಲ್ಲಿ ಪದಗಳಲ್ಲಿ ಕೃಷ್ಣನ ವಿವಿಧ ವರ್ಣನೆಯೇ ಪ್ರಧಾನ್ಯ. ಈತನ ಪದಗಳನ್ನು ಇಂದು ಭಾಮಾ ಕಲಾಪದಲ್ಲಿ ಬಳಸಲಾಗುತ್ತದೆ. ಈತನು ತಂಜಾವೂರಿಗೆ ಹೋಗಿ ಅಲ್ಲಿಯ ವಿಜಯರಾಘವ ನಾಯಕನ ಆಸ್ಥಾನದಲ್ಲಿ ಕೆಲವು ದಿನ ಇದ್ದಂತೆ ಚರಿತ್ರೆ ತಿಳಿಸುತ್ತದೆ. ಈತನ ಪದಗಳ್ಳಿ ಸಾಹಿತ್ಯ ಮತ್ತು ಸಂಗೀತ ಎರಡರ ರಸಸಮ್ಮಿಳನವಿದೆ. ನೃತ್ಯಕ್ಕೆ ಹೊಂದುವ ಲಕ್ಷಣಗಳನ್ನು ತುಂಬಾ ಹೊಂದಿವೆ. ಈತನ ಪದಗಳು ಕೃಷ್ಣನ್ಗೆ ಅರ್ಪಿತವಗಿದ್ದು ಬಹುಶಃ ಎಲ್ಲಾ ಪದಗಳೂ ಭರತ ನಾಟ್ಯ ಶಾಸ್ತ್ರದಲ್ಲಿ ಹೇಳಿದ ಎಲ್ಲ ನಮೂನೆಯ ನಾಯಕ ಗುಣಗಳಲ್ಲಿ ಒಂದಲ್ಲ ಒಂದನ್ನು ಹೋಲುತ್ತಿರುವುದು ಈ ಪದ್ಯಗಳನ್ನು ಭಾಮಾಕಲಾಪದಲ್ಲಿ ಅಳವಡಿಸುವುದರಲ್ಲಿ ಅಡಗಿದ ಮುಖ್ಯ ರಹಸ್ಯವಾಗಿದೆ. ಯಾವುದೇ ಪದವನ್ನು ಉಚಿತವಾದ ರಾಗ ಮತ್ತು ತಾಳದೊಂದಿಗೆ ಹಾಡಲು, ಯಾವ ಭಾವನೆಗಾಗಿ ಹಾಡನ್ನು ರಚಿಸಿದೆಯೋ ಆ ಭಾವನೆಯು ಕೇಳುವವರಲ್ಲಿ ಚೆನ್ನಾಗಿ ಬಿತ್ತರಿಸುವಂತೆ ಪದಗಳಲ್ಲಿಯ ಸಾಹಿತ್ಯ ರಚನೆ ಅಮೋಘವಾಗಿದೆ.

ಪ್ರಾಚೀನ ದಾಖಲೆಗಳು :

ಪ್ರಾಚೀನ ಕಾಲದಲ್ಲಿ ನೃತ್ಯ ನಾಟಕವೆಂದಾಗಲಿ ಯಕ್ಷಗಾನವೆಂದಾಗಲಿ ಕರೆದ ಕಲೆಯ ಪ್ರಕಾರದ ಘಟಿಸಿದ ಕೆಲವು ಉಲ್ಲೇಖಗಳನ್ನು ಈಗ ನೋಡೋಣ.

೧೩ನೇಯ ಶತಮಾನದ ಪಾಲಕುರ್ಕಿ ಸೋಮನು ಬರೆದ ಪಂಡಿತಾರಾಧ್ಯ ಚರಿತೆಯಲ್ಲಿ ಶಿವರಾತ್ರಿಯ ರಾತ್ರಿ ಜರುಗಿದ ಜನಸಮೂಹದ ಮನರಂಜನೆಯ ಕಾರ್ಯಕ್ರಮಗಳಲ್ಲಿ ಜಾನಪದ ಹಾಡುಗಳೂ ಜಾನಪದ ನೃತ್ಯಗಳೂ ಸೇರಿವೆ, ಎಂದಿದ್ದಾನೆ.

ಇದೇ ಸಂದರ್ಭದಲ್ಲಿ ನೃತ್ಯ ನಾಟಕಗಳು ಜರುಗಿದವು. ಯೋಗ್ಯವಾದ ಪೋಷಾಕಿನೊಂದಿಗೆ ನಟರು ತೆರೆಯ ಹಿಂಬದಿಯಿಂದ ರಂಗಮಂದಿರವನ್ನು ಪ್ರವೇಶಿಸಿದರು, ಎಂಬ ಉಕ್ತಿ ಇದೆ. ಯಕ್ಷಗಾನವೆಂಬ ಪದವಿರದಿದ್ದರೂ, ಯಕ್ಷರಾಗಿ, ಗಂಧರ್ವರಾಗಿ ನಟಿಸಿದರು ಎಂಬ ವರ್ಣನೆಯೂ ಇದೆ. ಡಾ. ಸಿ. ನಾರಾಯಣರೆಡ್ದಿ ಈ ದಾಖಲೆಯಲ್ಲಿ ನಿಶ್ಚಿತವಾದ ಸ್ವರೂಪವು ತಿಳಿಯದಿದ್ದರೂ ಅಂದು ಒಂದು ರೀತಿಯ ನೃತ್ಯ ನಾಟಕವಿದ್ದು ಮುಂದಿನ ಬೆಳವಣಿಗೆಯ ತಳಹದಿಯನ್ನು ಒದಗಿಸಿದೆ ಎಂಬುದಾಗಿ ಹೇಳಿದ್ದಾರೆ.

೧೩೭೫-೧೪೩೦ ಶ್ರೀನಾಥ ಕವಿಯ ‘ಕ್ರೀಡಾಭಿರಾಮನ್’ ಒಂದು ನೃತ್ಯ ನಾಟಕದ ಪೂರ್ಣ ಪರಿಚಯವು ಈ ಕೃತಿಯಲ್ಲಿ ಕಂಡುಬರುತ್ತದೆ. ಇಲ್ಲಿ ನಟನಲ್ಲದೆ ನಟಿಯೂ ಸಹ ” ಕಾಮವತಿ ಮಹಾಲಕ್ಷ್ಮೀ”ಯಾಗಿ ವಿಷ್ಣುವಿನ ಸ್ತುತಿಯೊಂದಿಗೆ ರಂಗ ಭೂಮಿಯನ್ನು ಪ್ರವೇಶಿಸಿದಳು ಎಂಬ ಉಕ್ತಿ ಬಂದಿದೆ. ಇದೇ ಕವಿಯ ಭೀಮೇಶ್ವರ ಪುರಾಣದಲ್ಲಿ ದಶರಾಮನ ದೇವಾಲಯದ ಒಂದು ಹಬ್ಬಕ್ಕೆ ಓರ್ವ ತರುಣಿ ಶಿವನ ಪತ್ನಿಯಾದ ಅನ್ನಪೂರ್ಣೆಯ ಪಾತ್ರವನ್ನು ಮಾಡಿದಳು. ಈ ಶತಮಾನದ ಪ್ರಬಂಧ ಶೈಲಿಯ ‘ಕಾಶಿಕಂದರ’ ಗ್ರಂಥದಲ್ಲಿ, ಎತ್ತರದ ರಂಗಭೂಮಿಯ ಮೇಲೆ ಸಂಗೀತದ ವಾದ್ಯಮೇಳದೂಂದಿಗೆ ಶಿವಪೂಜೆಯಲ್ಲಿ ನಟಿಯರು ಕುಣಿಯುತ್ತಾರೆಂದು ವರ್ಣಿಸಿದ್ದಾನೆ.