ಕರ್ನಾಟಕ ನಾಡು ಅತ್ಯಂತ ಪ್ರಾಚೀನವಾದ ವಾಸ ಪ್ರದೇಶಗಳಲ್ಲೊಂದು ಪುರಾತತ್ವ ಶೋಧನೆ ಮತ್ತು ಭೂಗರ್ಭ ಶಾಸ್ತ್ರಗಳ ಅಧ್ಯಯನಗಳಿಂದ ವಿದ್ವಾಂಸರು ಈ ನಿರ್ಣಯಕ್ಕೆ ಬಂದಿದ್ದಾರೆ. ಶಿಲಾಯುಗದಲ್ಲಿ ಆದಿಮಾನವ ಉಪಯೋಗಿಸುತ್ತಿದ್ದ ಕಲ್ಲಿನ ಅಯುಧದ ಅವಶೇಷಗಳು ನಾಡಿನ ಕೃಷ್ಣಾ, ಕಾವೇರಿ, ತುಂಗಭದ್ರ ನದಿಗಳ ಪ್ರದೇಶದಲ್ಲಿ ಪುರಾಣಯುಗದ ಅವಶೇಷಗಳೂ ದೊರೆತಿವೆ. ಬ್ಯಾಬಿಲೋನಿಯನ್ ಸಂಸ್ಕೃತಿಯ ಸಮಾಧಿ ಕುಂಭಗಳನ್ನು ಹೋಲುವ ಕುಂಭಗಳು ಚಂದ್ರವಳ್ಳಿ, ಕೊಲ್ಲಾಪುರ, ಬೆಂಗಳೂರು ಮೊದಲಾದ ಸ್ಥಳಗಳಲ್ಲಿ ದೊರೆತಿವೆ. ಕ್ರಿ.ಪೂ. ನಾಲ್ಕು ಸಾವಿರ ವರ್ಷಗಳ ಅವಶೇಷಗಳು ಟಿ.ನರಸಿಪುರದಲ್ಲಿ ದೊರೆತಿವೆ. ಕನ್ನಡ ಪದಗಳಾದ ಆರತೀಮರಜಿ, ತೋಕ್ವೆ ಸಂದನ್ ಬೈಬಲ್ಲಿನ ” ಓಬ್ಬ ಟೆಸ್ಟಾಮೇಂಟಿನ್” ಲ್ಲಿ ಗ್ರೀಕ್ ಲ್ಯಾಟಿನ್ ಭಾಷೆಗಳಲ್ಲಿ ಕಂಡು ಬಂದಿವೆ. ಕ್ರಿ. ಶಕದ ೨ನೆಯ ಶತಮಾನದ ಒಂದು ಗ್ರೀಕ್ ನಾತಕದಲ್ಲಿ ಕನ್ನಡ ಪದಗಳಿರುವುದು ಕಂಡು ಬರುತ್ತದೆ. ವಹಾರ ಮಹಿರನ ಬೃಹತ್ಸಂಹಿತೆಯಿಂದ ಕನ್ನಡ ನಾಡು ಕ್ರಿಶ್ತಾಬ್ದ ಆರನೆಯ ಶತಮಾನಕ್ಕಿಂತ ಪೂರ್ವದ್ದೆಂದು ತಿಳಿದು ಬಂದಿವೆ. ನಮ್ಮ ರಾಜ್ಯದಲ್ಲಿ ಬೌದ್ಧ, ಜೈನಮತಗಳು ಹರಡಿ ಸಂಸ್ಕೃತಿ ಕೇಂದ್ರಗಳನ್ನು ಸ್ಥಾಪಿಸಿವೆ. ಶ್ರವಣಬೆಳಗೊಳಕ್ಕೆ ಜೈನಮುನಿ ಭದ್ರಬಾಹು ಬಂದಿರುವುದು ಪ್ರಾಚೀನತೆಗೆ ಕುರುಹು ಆಗಿದೆ. ಮೌರ್ಯರ ಕಾಲದ ಅವಶೇಷಗಳು ಮಸ್ಕಿ, ಕೊಪ್ಪಳ, ಚಂದ್ರಗಿರಿಗಳಲ್ಲಿ ದೊರೆತಿವೆ.

ಇನ್ನು ಕರ್ನಾಟಕ-ಕರ್ನಾಟಕ ಎಂಬ ಪದ ಹೇಗೆ ಬಂದಿತೆಂಬುದರ ಬಗ್ಗೆ ವಿದ್ವಾಂಸರು ವಿವಿಧ ಅಭಿಪ್ರಾಯಗಳನ್ನು ಸೂಚಿಸಿದ್ದಾರೆ. ಶಾತವಾಹನ ರಾಜರಾದ ಶಾತಕರ್ಣಿಗಳ ಹೆಸರಿನಿಂದ ಕರ್ನಾಟಕ ಎಂಬ ಶಬ್ದ ಬಂದಿರಬೇಕು. ‘ಕರಿಯ ನಾಡು’ ಕರಿನಾಡು ನಂತರ ಕರ್ನಾಟಕ ಆಗಿರಬೇಕೆಂದೂ ಅಂದರೆ ಘಟ್ಟಗಳ ಮಧ್ಯದ ಪ್ರಸ್ಥಭೂಮಿ ಎರೆ ಭೂಮಿಯಿಂದ ಕೂಡಿದ ಕರೆಮಣ್ಣಿನ ಭೂಮಿಯ ನಾಡು, ಕರ್ಣಾಟ ಇದರ ತತ್ಸಮವೇ ಕನ್ನಡ. ಸಂಸ್ಕೃತ ಕವಿ ವೆಂಕಟಾದ್ವರಿಯು ” ಕರ್ಣಪೋಃ ಆಟತಿ-ಇತಿ-ಕರ್ಣಾಟ ಅಂದರೆ ಕೀರ್ತಿಶಾಲಿಗಳಾದ ಜನತೆಯ ನಾಡು ಎಂದೂ, ಕಮ್ಮಿತು ನಾಡು ಕನ್ನಡ ಕನ್ನಡ ಕನ್ನಡನಾಡು ಎಂದೂ ತರ್ಕಿಸುತ್ತಾರೆ. ಕಾವೇರಿಯಿಂದಲೂ ! ಗೋದಾವರಿವರ ಮಿರ್ದ ನಾಡದಾ ಕನ್ನಡಂ ಎಂದು ಒಂಭತ್ತನೆಯ ಶತಮಾನದ ಕವಿ ನೃಪತುಂಗನು ವರ್ಣಿಸಿದ್ದಾನೆ. ಸೋಮದೇವನ ಕಥಸರಿತು ಸಾಗರದಲ್ಲಿ ವೈಶಾಜಿ ಬೃಹಥಕಥದಲ್ಲೂ ‘ಕರ್ನಾಟ್’ ಪದ ಬಳಕೆಯಾದ್ದರಿಂದ ಕ್ರಿಸ್ತ ಪೂರ್ವಕ್ಕೂ ಇದರ ಪ್ರಾಚೀನತೆ ಹರಡುತ್ತದೆ. ತಮಿಳು ಸಾಹಿತ್ಯದಲ್ಲಿ ‘ಶಿಲಪ್ಪಾದಿಕಾಮ್ ದಲ್ಲಿ ‘ಕರುನಾಡರ್’ ಎಂದಿದ್ದು ಈ ಗ್ರಂಥ ಕ್ರಿ.ಶ. ಎರಡನೆಯ ಶತಮಾನಕ್ಕೆ ಸೇರಿದ್ದು. ಪಾಂಡ್ಯ ರಾಜನ ಒಂದು ಶಿಲಾಶಾಸನದಲ್ಲಿ ‘ಕರುನಾಡಗಮ್’ ಎಂಬ ಪದದ ಬಳಕೆ ಇದೆ.

ನಾಡಿನ ಜನತೆ :  ಮೌರ್ಯ, ಕದಂಬ, ಗಂಗ, ಚಾಲುಕ್ಯ, ಮುಂತಾದ ರಾಜ್ಯ ಮನೆತನಗಳು ಆಳಿವೆ. ಜನತೆ ಉದಾರಿಗಳು ಚರಿತ್ರಶೀಲರು. ಬಾದಾಮಿ ಚಾಲುಕ್ಯರ ಕಾಲದಲ್ಲಿ ರಾಜಬೀದಿಯಲ್ಲಿ ಒಂಟಿಯಾಗಿ ಒಬ್ಬ ಯುವತಿ ನಡೆದರೂ ಯಾರೂ ಅವಳನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲವೆಂದರೆ ಸಾಮಾಜಿಕ ನೈತಿಕ ಸ್ಥಿತಿಯ ಕಲ್ಪನೆ ಬರುತ್ತದೆ. ಪಯಣಿಗರಿಗಾಗಿ ಅರವಟ್ಟಿಗೆಗಳು ದಾರಿಯ ಎರಡೂ ಬದಿಗೆ ನೆರಳು ಕೊಡುವ ಸಾಲುಮರಗಳು. ಒಡೆಯನ ಪ್ರಾಣ ರಕ್ಷಣೆಗಾಗಿ ಪ್ರಾಣತೆತ್ತ ಕಥೆಗಳನ್ನು ಸಾರುವ ಶಿಲಾಶಾಸನ, ಇತ್ಯಾದಿಗಳು ಸಾಮಾಜಿಕ ಜೀವನದ ಕನ್ನಡಿಗಳಾಗಿವೆ. ಇಟಗಿ, ಮಸ್ಕಿ, ಐಹೊಳೆಗಳಂತೂ ಪಾಂಡಿತ್ಯದ ಆಗರ. ಶಿಲಾಶಾಸನಗಳಲ್ಲಿ ಕಂಡು ಬಂದಂತೆ ಪಾಂಡಿತ್ಯ ನಿರ್ದಶನಗಳು ವಿದ್ವಾಂಸರಿಗೆ ದೊರೆಯುವ ಮುನ್ನಡೆಗಳು ತಿಳಿದು ಬರುತ್ತವೆ. ಮತ ಭೇದ ಭಾವವಿಲ್ಲದ ಪರಧರ್ಮ ಸಹಿಷ್ಣುತೆ ಮೊದಲಿನಿಂದಲೂ ಕಂಡು ಬಂದ ಒಂದು ದೊಡ್ಡ ಗುಣ. ಉದಾಹರಣೆಗಾಗಿ ಚಾಲುಕ್ಯರು ಸಪ್ತಮಾತೃಕೆಯನ್ನೂ ಕಾರ್ತಿಕೇಯನನ್ನೂ ತಮ್ಮ ಮನೆ ದೇವರೆಂದು ಪೂಜಿಸುತ್ತಿದ್ದರೆಂದು ತಿಳಿದು ಬಂದಿದೆ. ವಿಷ್ಣುವಿನ ಭಕ್ತರಾದ ಅವರು ‘ವರಾಹ’ ಲಾಂಛನ ಹೊಂದಿ ವಿಷ್ಣು ದೇವಾಲಯಗಳನ್ನು ಮಾತ್ರ ಕಟ್ಟದೆ, ಜೈನ ಬಸದಿಗಳನ್ನು ಶಿವಾಲಯಗಳನ್ನು ಕಟ್ಟಿಸಿದ್ದಾರೆ. ಇಂದಿಗೂ ಬಾದಾಮಿಯ ಗುಡ್ಡದಲ್ಲಿ ಕೊರೆದ ಮೇಣಬಸದಿಗಳಲ್ಲಿ ಒಂದು ಶಿವನದು, ಇನ್ನೊಂದು ಜಿನನದು ಉಳಿದ ಮೂರು ವಿಷ್ಣುವಿನವು. ಹೊಯ್ಸಳ ವಿಷ್ಣುವರ್ಧನನು ಜೈನ, ಶೈವ ವೈಷ್ಣವ ಧರ್ಮಗಳನ್ನು ಸಮನ್ವಯಗೊಳಿಸಿ, ಅತ್ಯಂತ ಕಲಾತ್ಮಕ ಶಿಲಾಕೃತಿಗಳನ್ನು ಚನ್ನಕೇಶವ ದೇವಾಲಯವನ್ನು ನಿರ್ಮಿಸಿದ. ನಾಡು ಕಲೆಯ ತವರೂರು. ಐಹೊಳೆ, ಪಟ್ಟದಕಲ್ಲು, ಸೋಮನಾಥಪುರ, ಹಳೇಬೀಡು, ಬೇಲೂರು ಇತ್ಯಾದಿಗಳಲ್ಲಿ ಶಿಲ್ಪಕಲೆಯ ಉತ್ಸತರ ಸ್ಥಿತಿಯನ್ನು ಕಾಣಬಹುದು. ಕಲ್ಯಾಣದ ಚಾಲುಕ್ಯ ವಿಕ್ರಮ ಬಿಲ್ಹಣ, ವಿಜ್ಞಾನೇಶ್ವರರಂತಹ ಕವಿಗಳನ್ನು, ದೂರ-ದೂರದ ದೇಶಗಳಿಂದ ಕರೆಯಿಸಿ ಸತ್ಕರಿಸಿ ಅವರಿಂದ ವಿಕ್ರಮಾಂಕದೇವ ಚರಿತೆ ಮಿತಾಕ್ಷರಿ ಇತ್ಯಾದಿ ಗ್ರಂಥಗಳನ್ನು ಬರೆಸಿದ್ದು ರಾಜನ ವಿದ್ವಾಂಸ ಪ್ರೀತಿಯನ್ನು ಯಾವ ಕಟ್ಟುಪಾಡು ನನ್ನ ನಾಡಿನ ವಿದ್ವಾಂಸನೇ ವಿದ್ವಾಂಸ ಇತ್ಯಾದಿ ಸಂಕುಚಿತ ಮನೋಭಾವ ಹೊಂದದ ಮಹನೀಯರೂ ಇದ್ದರು. ವಿಜಯನಗರದ ಶ್ರೀಕೃಷ್ಣದೇವರಾಯನು ತೆಲಗು-ಕನ್ನಡಕ್ಕೆ ಎರಡಕ್ಕೂ ಪ್ರಾಧಾನ್ಯತೆಯನ್ನು ಕೊಟ್ಟು ವಿದ್ವಾಂಸ ದೊರೆಯಾಗಿದ್ದಾನೆ. ಪಾಂಡಿತ್ಯವನ್ನು ಗುರುತಿಸಿ, ಗೌರವಿಸಿದ್ದಾನೆ. ಅಲ್ಲಾಸಾನಿ ಪೆದ್ದಣ್ಣನನ್ನು ಚಿನ್ನದ ಪೆಂಡೆಯನ್ನು ತೊಡಿಸಿ, ಪಲ್ಲಕ್ಕಿಯಲ್ಲಿ ಕೂಡಿಸಿ, ಅದಕ್ಕೆ ಸ್ವತಃ ಹೆಗಲು ಕೊಟ್ಟಿದ್ದು ಯಾವ ಕನ್ನಡಿಗನಿಗೆ ಹೆಮ್ಮೆ ತರಲಿಕ್ಕಿಲ್ಲ ! ಭಟ್ಟಾಕಲಂಕನ (೧೬೦೪) ಶಾಬ್ಧಾನುಶಾಸನದಲ್ಲಿ ಶಬ್ದಗಾಮ, ಯುಕ್ತಗಾಮ ಮತ್ತು ಪರಗಾಮಗಳ ಬಗ್ಗೆ ಅನೇಕ ಗ್ರಂಥಗಳು ಕಾವ್ಯ ಲಲಿತಕಲೆ ನಾಟಕಗಳ ಬಗ್ಗೆ ಲೆಕ್ಕವಿಲ್ಲದಷ್ಟು ಗ್ರಂಥಗಳು ಬರೆಯಲ್ಪಟ್ಟಿವೆ ಎಂಬ ವರ್ಣನೆಯಿದೆ.

ಇನ್ನು ಜಾನಪದ ಕಲೆಯ, ರಂಗಭೂಮಿಯ ಪ್ರತಹ್ಯಗಳನ್ನು ನೋಡೋಣ. ಕವಿರಾಜಮಾರ್ಗದ ನೃಪತುಂಗಮ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮಲೆಗಳ್, ಕುಳಿತು ಅಭ್ಯಾಸ ಮಾಡದ ಜನತೆಯೂ ಕಾವ್ಯ ಪ್ರಯೋಗಗಳಲ್ಲಿ ಪರಿಣತೆಯನ್ನು ಹೊಂದಿದ್ದರು ಎನ್ನುವಲ್ಲಿ ಜಾನಪದ ಸಾಹಿತ್ಯವೇ ಸೂಚಿತವಾಗಿದೆ ಎನ್ನಬಹುದು.

ಬಾದಾಮಿಯ ಸಮೀಪದ ಪಟ್ಟದಕಲ್ಲಿನ ಒಂದು ಶಿಲಾಶಾಸನದಲ್ಲಿ ನಾಟ್ಯೋತ್ಸವವು ಜರುಗಿದ ಸಂಗತಿಯ ವರ್ಣನೆ ಇದೆ. ಇದು ಎಂಟನೆಯ ಶತಮಾನಕ್ಕೆ ಸೇರಿದ ಸಂಗತಿ. ಅದರಲ್ಲಿ ಆತನೇ ನೃತ್ಯಗಾರನು ಹಾಗೂ ಭೂಮಿಯಲ್ಲಿಯ ಶ್ರೇಷ್ಠ ನಟನು ಎಂದು ವರ್ಣನೆ ಇದೆ. ಇದು ಓರ್ವ ದೇಶೀ ನೃತ್ಯಗಾರನು ಯಾವುದೋ ಧಾರ್ಮಿಕ ಹಬ್ಬವೆಂದು ತನ್ನ ನೃತ್ಯವನ್ನು ಪ್ರದರ್ಶಿಸಿದ್ದಕ್ಕೆ ಸಂಬಂಧಿಸಿದೆ. ಈ ಶಿಲಾಶಾಸನದಿಂದ ವ್ಯಕ್ತವಾಗುವ ಇನ್ನೂಂದು ಸಂಗತಿಯೆಂದರೆ ಈ ವೇಳೆಗಾಗಲೇ ನಾಟ್ಯ ಮತ್ತು ಅಭಿನಯಗಳು ಬೇರೆ ಬೇರೆಯಾಗಿ ಬೆಳವಣಿಗೆ ಹೊಂದಿದ್ದವೆಂಬ ಸಂಗತಿ. ಪ್ರಾಚೀನ ದೇಶೀಯ ಅಥವಾ ಮಾರ್ಗ ರಂಗಭೂಮಿಯ ಬೆಳವಣಿಗೆಯ ಆರಂಭದ ಕಾಲದಲ್ಲಿ ವಾದ್ಯ ಮತ್ತು ಅಭಿನಯ ಎಂದು ಬೇರೆ ಬೇರೆಯಾಗಿ ಪರಿಗಣಿಸದೆ ಗುರುತಿಸದೆ ಒಂದಾಗಿ ಬೆಳೆದುಬಂದಿವೆ.

೧೨೦೮ರ ಸೊರಬದ ಶಿಲಾಶಾಸನದಲ್ಲಿ, ಹೊಯ್ಸಳ ವೀರಬಲ್ಲಾಳನು ಪ್ರಸಿದ್ಧ ನಟನಾಗಿದ್ದನೆಂದು ಹೇಳಲಾಗಿದೆ. ಇದರಿಂದ ಅಂದಿನ ರಾಜ ರಾಣಿಯರಿಗೂ ಕಲೆ  ಪ್ರಿಯವಾಗಿತ್ತೆಂಬುದು ಸ್ಪಷ್ಟ. ಜಾನಪದ ಕಲಾವಿದರು ಅವಮನೆಯ ಆವರಣದಲ್ಲಿ ನಡೆದ ಆಟಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ದೇಶೀ ಸಾಹಿತ್ಯವು ಮಾರ್ಗದ ಅಡಿಗಲ್ಲಿನಿಂದಲೇ ಸ್ವತಂತ್ರವಾಗಿ ಬೆಳೆದಿರುವಂತೆ ಜಾನಪದ ರಂಗಭೂಮಿಯೂ ಸಹ ಅಂದಿನ ಜನತೆಯನ್ನು ತನ್ನದೆ ಆದ ರೀತಿಯಲ್ಲಿ ರಂಜಿಸಿತೆಂದು ತಿಳಿಯಲು ಶಕ್ಯವಿದೆ.

ಅಭಿಜಾತ ಕಲೆ ಮತ್ತು ಜಾನಪದ ಕಲೆಗಳು ಆಗಾಗ್ಗೆ ಬಳಕೆಯಾಗುತ್ತಿದ್ದ ಸಂದರ್ಭಗಳಿದ್ದವು. ವಿಜಯನಗರ ರಾಯರ ಕಾಲದಲ್ಲಿ ಜಾನಪದ ಕಲಾವಿದರ ತಂಡಗಳಿಗೆ ವೀಳ್ಯ ಹೋದುದ್ದರ ದಾಖಲೆಯಿರುವುದರಿಂದ ಹಿಂದಕ್ಕೂ ಈ ಸಂಪ್ರದಾಯವಿದ್ದೀತೆಂದು ನಂಬಬಹುದಾಗಿದೆ. ಗದುಗಿನ ಕುಮಾರವ್ಯಾಸನು ಮಹಾಭಾರತದಲ್ಲಿ ದೇಶೀ ರಂಗಭೂಮಿಯ ಕಲಾವಿದರನ್ನು, ಆಟವನ್ನು ಸೂಚಿಸಿದ್ದಾನೆ. ಅವರು ಆಡುವ ಆಟವನ್ನು ‘ನಾಡಾಡಿಗಳ ನಾಟಕ ’ ಎಂದು ಕರೆದಿದ್ದಾರೆ. ಮಹಾಕವಿ ತನ್ನ ಕಾವ್ಯದಲ್ಲಿ ಇದರೆ ಪ್ರಸ್ತಾಪ ಎತ್ತಬೇಕಾದರೆ ಆ ವೇಳೆಗಾಗಲೇ ಜಾನಪದ ರಂಗಭೂಮಿ ಬಹಳ ಪ್ರಚಾರದಲ್ಲಿ ಮತ್ತು ಪ್ರಭಾವಿಯುತವಾದ ಮನರಂಜನೆಯ ಸಾಧನೆಯಾಗಬೇಕು. ೧೮೧೨ ರಲ್ಲಿ ಮೈಸೂರಿನ ಶ್ರೀ ಕೃಷ್ಣರಾಜ ಒಡೆಯರವರು ಕಾಗದ ಬರೆದು ಮಂಜುನಾಥ ದಶಾವತಾರ ಯಕ್ಷಗಾನ ಮಂಡಳಿಯನ್ನು ಮೈಸೂರಿಗೆ ಆಹ್ವಾನಿಸಿ ಸತ್ಕರಿಸಿದ ದಾಖಲೆಯಿದೆ.