ಜೀವನವಿವರ

ಹುಟ್ಟಿದ ಸ್ಥಳ : ಚಿಗಟೇರಿ (ಹಿಂದಿನ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಗ್ರಾಮ)

ಹುಟ್ಟಿದ ದಿನಾಂಕ : ೧೭ನೇ ಮಾರ್ಚ, ೧೯೨೭

ವಿದ್ಯಾರ್ಹತೆ : ಇಂಟರ್ ಮೀಡಿಯೇಟ್

ಉದ್ಯೋಗ : ಕೃಷಿ ಮತ್ತು ಹೊಗೆಸೊಪ್ಪಿನ ವ್ಯಾಪಾರ

ಕುಟುಂಬ : ಪತ್ನಿ : ಶಾರದಮ್ಮ
ಮಗ: ಅಶೋಕ
ಪುತ್ರಿಯರು: ರಾಜೇಶ್ವರಿ, ಜಯಲಕ್ಷ್ಮಿ, ನಾಗಲೀಲಾ

ಏಕೀಕರಣ ಚಳವಳಿಯ ಬಳ್ಳಾರಿ ಜಿಲ್ಲೆಯ ಹೋರಾಟದ ಮುಂದಾಳತ್ವ, ಒಂದು ತಿಂಗಳ ಸೆರೆ ಮನೆವಾಸ.

೧೯೫೭ರಲ್ಲಿ ಚಿಗಟೇರಿ ಗ್ರಾಮ ಪಂಚಾಯ್ತಿ ಚೇರಮನ್ ಹರಪನಹಳ್ಳಿ ತಾಲೂಕು ಬೋರ್ಡ್‌ ಸದಸ್ಯ

ಚಿಗಟೇರಿ ನಾರದ ಮುನಿಯ ಹೈಸ್ಕೂಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.

೧೯೬೨ರಲ್ಲಿ ಪ್ರಜಾಸೋಷಲಿಸ್ಟ ಪಕ್ಷದ ಅಭ್ಯರ್ಥಿಯಾಗಿ ಹರಪನಹಳ್ಳಿ ವಿಧಾನ ಸಭೆಗೆ ಸ್ಪರ್ಧೆ, ಸೋಲು.

ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಲಹೆಗಾರರಾಗಿ ಕಾರ್ಯನಿರ್ವಹಣೆ.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ, (೧೯೮೩-೧೯೮೯)

ಕನ್ನಡ ವಿಶ್ವವಿದ್ಯಾಲಯದ ಮೊದಲ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಣೆ.

ಕನ್ನಡ ವಿಶ್ವವಿದ್ಯಾಲಯದ ಮೊದಲ ಕಟ್ಟಡ ಸಲಹಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.

ಮರಣ ೨೬.೧೦.೨೦೦೮ (ತಮ್ಮ ದೇಹವನ್ನು ದಾವಣಗೆರಿಯ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದರು)

 

ಕೃತಿಗಳು

೧. ಹಳ್ಳಿಯ ಪದಗಳು (ಕೆ. ವಿರೂಪಾಕ್ಷಗೌಡ ಅವರೊಂದಿಗೆ)

೨. ನವಿಲು ಕುಣಿದಾವ

೩. ಚಿತ್ರಪಟ ರಾಮಾಯಣ

೪. ಗೊಂದಲಿಗರ ದೇವೇಂದ್ರಪ್ಪನ ಆಟಗಳು

೫. ಗೊಂಬಿಗೌಡರ ಸೂತ್ರದ ಗೊಂಬೆ ಆಟಗಳು

೬. ಜನಪದ ಮುಕ್ತಕಗಳು

೭. ಸೂಳೆ ಸಂಕವ್ವ,

೮. ಬಾಳ ಭಿಕ್ಷುಕ (ಸಾಣೇಹಳ್ಳಿಯ `ಶಿವಸಂಚಾರ` ತಂಡ ಪ್ರಯೋಗಿಸಿದ ನಾಟಕಗಳು)

೯. ಶೀಲಾವತಿ (ಮರಿಯಮ್ಮನಹಳ್ಳಿಯ ಲಲಿತ ಕಲಾರಂಗದಿಂದ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚು ಪ್ರಯೋಗ ಕಂಡ ನಾಟಕ)

೧೦. ಅವ್ವಣ್ಣೆವ್ವ

೧೧. ಚವತಿಯ ಚಂದ್ರ

೧೨. ಬಂಗಾರದ ತಟ್ಟೆ

೧೩. ಲಕ್ಷಪತಿ ರಾಜನ ಕಥೆ (ಬಿ.ಜಯಶ್ರೀ ನಿರ್ದೇಶನದ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಪ್ರದರ್ಶನಗೊಂಡ ನಾಟಕ)

೧೪. ಅಂಗೂಲಿ ಮಾಲಾ

೧೫. ಬುದ್ಧ ಬಾಲ

೧೬. ರಸದಾಳ ರಾಜನ ಕತೆ

೧೭. ಚಿಗಟೇರಿ ಪದಕೋಶ-(ಭಾಷಾ ನಿಘಂಟು)

೧೮. ಆ ಅಜ್ಜ ಈ ಮೊಮ್ಮಗ-(ಕವನ ಸಂಕಲನ)

೧೯. ಕೊಂಡಜ್ಜಿ ಬಸಪ್ಪ-(ಜೀವನ ಚರಿತ್ರೆ)

 

ಭಾಷಾಂತರ

೨೦. ಭಾರತ ಪ್ರೇಮ ಕಥನ (ಬಂಗಾಲಿಯಿಂದ)

೨೧. ಕಥಾವೋ ಕಾಫೀ (ಬಂಗಾಲಿಯಿಂದ)

೨೨. ಏಕದಾನಿಶಾಥ್ ಕಾಲೆ (ಬಂಗಾಲಿಯಿಂದ)

೨೩. ಘಾಶೀರಾಮ ಕೊತ್ವಾಲ (ಮರಾಠಿಯಿಂದ)

 

ಪ್ರಶಸ್ತಿಪುರಸ್ಕಾರಗಳು

ಕರ್ನಾಟಕ ನಾಟಕ ಅಕಾಡೆಮಿಯ ಫೆಲೊಶಿಫ್-೧೯೮೯

ಕರ್ನಾಟಕ ಜಾನಪದ ಅಕಾಡೆಮಿಯ `ಜಾನಪದ ತಜ್ಞ` ಪ್ರಶಸ್ತಿ-೧೯೯೨

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-೧೯೯೬

ಡಾ. ಎಲ್ ಬಸವರಾಜ ಪ್ರತಿಷ್ಠಾನ ಪ್ರಶಸ್ತಿ-೨೦೦೨

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-೨೦೦೦

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-೨೦೦೨

ಉಮಾಪತಿ ಚುಕ್ಕಿ ಪ್ರತಿಷ್ಠಾನ ಪ್ರಶಸ್ತಿ

ಕನ್ನಡ ಸಿರಿ ಪ್ರಶಸ್ತಿ-೨೦೦೨

ಶಿವಮೊಗ್ಗದ ಕರ್ನಾಟಕ ಸಂಘದ ಗೌರವ ಸದಸ್ಯತ್ವ-೨೦೦೨

ಮಹಾಲಿಂಗ ರಂಗ ಸಾಹಿತ್ಯ ಪ್ರಶಸ್ತಿ-೨೦೦೩

ಕನ್ನಡ ವಿಶ್ವವಿದ್ಯಾಲಯ, ಹಂಪಿ `ನಾಡೋಜ` ಪದವಿ-೨೦೦೫

ಕರ್ನಾಟಕ ಸರ್ಕಾರದ ಕರ್ನಾಟಕ ಏಕೀಕರಣ ಪ್ರಶಸ್ತಿ-೨೦೦೬

ಕು.ಶಿ. ಹರಿದಾಸ್ ಭಟ್ ಪ್ರಶಸ್ತಿ-೨೦೦೭

`ಚಿಗಟೇರಿ ಪದಕೋಶ`ಕ್ಕೆ ಅಂತರಾಷ್ಟ್ರೀಯ ದ್ರಾವಿಡ ಭಾಷಾ ವಿಜ್ಞಾನ ಪ್ರಶಸ್ತಿ

ಬಳ್ಳಾರಿ ಜಿಲ್ಲೆ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, (ಹಡಗಲಿ-೧೯೯೪)

ದಾವಣಗೆರಿ ಜಿಲ್ಲೆ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ

೨೧ನೇ ಅಖಿಲ ಕರ್ನಾಟಕದ ಜಾನಪದ ಸಮ್ಮೇಳದ ಅಧ್ಯಕ್ಷತೆ (೧೯೯೪-ಧಾರವಾಡ)

ಮೈಸೂರಿನಲ್ಲಿ ಅಖಿಲ ಭಾರತ ಜಾನಪದ ಸಮಾವೇಶದಲ್ಲಿ ಗೌರವ

ಕನ್ನಡ ವಿಶ್ವವಿದ್ಯಾಲಯ, ಹಂಪಿ ನುಡಿಹಬ್ಬದ ಭಾಷಣ (ಘಟಿಕೋತ್ಸವ ಭಾಷಣ-೨೦೦೧)