ಜ್ಞಾನ ಪೂರ್ಣ ಜಗನ್ ಜ್ಯೋತಿ | ನಿರ್ಮಲವಾದ
ಮನವೇ ಕರ್ಪೂರದಾರತಿ | ಅನುದಿನ ಗುರುವಿನೊಳಡಗೂಡಿ
ಭಕ್ತಿಯಲಿ ಜನನ ಮರಣ ರಹಿತ
ಜಂಗಮಗೆ ಬೆಳಗಿರಿ ನಾನಿವೆಂಬುದ ಬಿಡರಿ
ನರಕವೆ ಪ್ರಾಪ್ತಿ ಜ್ಞಾನಿಗಳೊಳಗೂಡಿರಿ
ಸ್ವಾನುಭಾವದ ಸುಖತಾನೆ ಕೈಸೇರುವುದು
ಅನುಭವದಾಲಿಂಗಕ್ಕೆ ಮನವೊಪ್ಪಿ ಬೆಳಗಿರಿ || ಜ್ಞಾನ ||
ನಾನಾಜನ್ಮದ ಕತ್ತಲೆ ಮುಸೂಕಿ ತಾನೆತಾನಾಗಿ
ಬೆಳಗುವುದು ಹೀನ ವಿಷಯಂಗಳಿಗೆ
ಹಿಂದುಳಿದ ಗುರುವಿನ ಧ್ಯಾನವೇ ಗತಿಯೆಂದು
ಮನ ಒಪ್ಪಿ ಬೆಳಗಿರಿ || ಜ್ಞಾನ ||
ಅಷ್ಟವರ್ಣದ ಸ್ಥಳವು ಮಾನವ ಜನ್ಮಹುಟ್ಟಿ ಬರುವುದೇ
ದುರ್ಲಭವು ಕೊಟ್ಟೆನು ಗುರುನಮಗೆ ಹುಟ್ಟಿದ
ಫಲದಿಂದ ಹುಟ್ಟಿದ ಮಗಸಿದ್ಧನೆಸರಿಟ್ಟು ಬೆಳಗಮ್ಮ || ಜ್ಞಾನ ||