ಒಬ್ಬಾತ ತಿನ್ನಲೆಂದು ಒಂದು ರೊಟ್ಟಿಯನ್ನೂ ಒಂದು ಕುಡಿಕೆಯಲ್ಲಿ ತುಪ್ಪವನ್ನೂ ಇಟ್ಟುಕೊಂಡಿದ್ದ. ನಾಯಿಯೊಂದು ಬಂದು ರೊಟ್ಟಿಯನ್ನು ಎತ್ತಿಕೊಂಡು ಓಡಿಹೋಯಿತು.

ರೊಟ್ಟಿಯನ್ನು ಕಳೆದುಕೊಂಡಾತ ಚಟ್ಟನೆ ಎದ್ದ, ತುಪ್ಪದ ಕುಡಿಕೆಯನ್ನು ಹಿಡಿದುಕೊಂಡು ನಾಯಿ ಹಿಂದೆ ಓಡಿದ.

“ಅಪ್ಪಾ ಒಣ ರೊಟ್ಟಿಯನ್ನು ಏಕೆ ತಿನ್ನುವೀ? ತುಪ್ಪವನ್ನೂ ತೆಗೆದುಕೋ” ಎಂದು ಅದರ ಹಿಂದೆ ಉಸಿರು ಕಟ್ಟಿ ಓಡಿದ:” ಕಡೆಗೆ ನಾಯಿ ಅವನ ಕೈಗೆ ಸಿಕ್ಕಿತು ಅದನ್ನು ಹಿಡಿದು, ರೊಟ್ಟಿಗೆ  ತುಪ್ಪವನ್ನು  ಹಚ್ಚಿ ತಿನ್ನಿಸಿದ.

ನೋಡಿ ಬಹು ಜನರು ಬೆರಗಾದರು. ಕೆಲವರು ಹುಚ್ಚ ಎಂದರು. ಕೆಲವರು ಹಾಸ್ಯದಿಂದ ನಕ್ಕರು. ಕೆಲವರು ಅವನ ಒಳ್ಳೇಯತನವನ್ನು ಹೊಗಳಿದರು.

ಇತರರು ನಕ್ಕದ್ದಾಗಲಿ ಹೊಗಳಿದ್ದಾಗಲಿ ಆತನಿಗೆ ಗಮನವೇಇಲ್ಲ. ನಾಯಿಗೆ ರೊಟ್ಟಿಯನ್ನು ತಿನ್ನಿಸುವುದೇ ಮುಖ್ಯ ಅವನಿಗೆ.

ಈಕರುಣಾಳು ನಾಮದೇವ ಎಂಬ ಸಂತ. (ಸಂತ ಎಂದರೆ ಭಗವಂತನಲ್ಲಿಯೇ ಮನಸ್ಸು ನಿಲ್ಲಿಸಿ, ತನಗಾಗಿ ಏನನ್ನೂ ಬಯಸದೇ, ನಿರ್ಮಲವಾದ ಜೀವನ ನಡೆಸುವ ಮಹಾವ್ಯಕ್ತಿ)ನಾಯಿಯಲ್ಲಿಯೂ ಅವನೂ ಕಂಡದ್ದು ದೇವರ ಅಂಶ. ಜೀವವುಳ್ಳ ಎಲ್ಲ ಪ್ರಾಣಿಗಳಲ್ಲಿ ದೇವರ ಅಂಶವಿದೆ ಎಂಬ ನಂಬಿಕೆಯಂತೆ ಬದುಕಿದ ಮಹಾತ್ಮ ಅವನು.

ನಾಯಿಯನ್ನು ಹೀಗೆ ಆದರಿಸಿದವನು ಮನುಷ್ಯರೆಲ್ಲ ಒಂದೇ ಎಂದು ಉಪದೇಶಿಸಿದ್ದರಲ್ಲಿ ಹಾಗೇಯೇನ  ನಡೆದದ್ದರಲ್ಲಿ ಆಶ್ಚರ್ಯವೇನು?

ಭಕ್ತರ ಮಗ

ಮಹಾರಾಷ್ಟ್ರೆದಲ್ಲಿ ಪಂಢರಪುರ ಎಂಬ ದೊಡ್ಡ ಯಾತ್ರಸ್ಥಳವಿದೆ. ಅಲ್ಲಿ ದಾಮಾಶೇಟ ಎಂಬುವನು ಹೊಲಿಗೆಯ ಕೆಲಸ ಮಾಡಿಕೊಂಡು ಇದ್ದನು.  ಆದ್ದರಿಂದ ಅವರ ಮನೆತನಕ್ಕೆ ಸಿಂಪಿ ಎಂಬ ಅಡ್ಡ ಹೆಸರು ಉಂಟಾಗಿತ್ತು. ದಾಮಾಶೇಟನು ವಿಠ್ಠಲ ಭಕ್ತನಾಗಿದ್ದನು. ಆತನ ಹೆಂಡತಿ ಗೋಣಾಯಿ ಬಹು ಒಳ್ಳೆಯವರು. ಭಕ್ತಳು. ಅವರಿಬ್ಬರ ಆಯುಷ್ಯವೆಲ್ಲ ವಿಠ್ಠಲ ಸೇವೆಯಲ್ಲಿಯೇ ಕಳೆಯಿತು. ಆದರೆ ಅವರಿಗೆ ಬಹಳ ಕಾಲ ಮಕ್ಕಳಾಗಿರಲಿಲ್ಲ. ಇದರಿಂದ ಅವರಿಗೆ ತುಂಬಾ ಧುಃಖ.

ಬಹು ಒಳ್ಳೆಯ ಸ್ವಭಾವದ ಈ ದಂಪತಿಳ ಮಗನೇ ನಾಮದೇವ. ಇವನ ಜನ್ಮದ ವಿಷಯವಾಗಿ ಒಂದು ಸ್ವಾರಸ್ಯವಾದ ಕಥೆಯನ್ನು ಹೇಳುತ್ತಾರೆ.

ಈ ಕಥೆ ಹೀಗಿದೆ.

ಒಂದು ದಿನ ಗೋಣಾಯಿಯು ತನ್ನ ಗಂಡನಿಗೆ “ಪಾಂಡುರಂಗನನ್ನು ಪ್ರಾರ್ಥಿಸಿ, ಒಬ್ಬ ಮಗನನ್ನಾದರೂ ಕೇಳಿ ಕೊಳ್ಳಿರಿ” ಎಂದಳು. ಗಂಡನು ಆಮಾತಿಗೆ ಒಪ್ಪಿಕೊಂಡರು.

ಮರುದಿನ ದೇವಾಲಯಕ್ಕೆ ಹೋದಾಗ ಆತನು ಪಾಂಡುರಂಗನಲ್ಲಿ “ದೇವಾ, ನಮಗೆ ಒಬ್ಬ ಮಗನನ್ನು ಕೊಡು, ನಮ್ಮ ದುಃಖವನ್ನು ದೂರಮಾಡು” ಎಂದು ಬೇಡಿಕೊಂಡನು.

ಅಂದೇ ದಾಮಾಶೇಟನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಪಾಂಡುರಂಗನು ಕಾಣಿಸಿಕೊಂಡು, “ನಾಳೆ ಮುಂಜಾನೆ, ನೀನು ಸ್ನಾನಕ್ಕೆಂದು ಭೀಮಾತೀರಕ್ಕೆ ಹೋಗುವಿಯಲ್ಲವೇ? ನೆನಪಿಡು, ಹೊಳೆಯಲ್ಲಿ ಒಂದು ಮುಚ್ಚಿದ ಶಿಂಪಿ (ಚಿಪ್ಪು) ತೇಲುತ್ತ ಬರತ್ತದೆ. ಅದರಲ್ಲಿ ಒಂದು ಗಂಡು ಮಗು ಇರುತ್ತದೆ. ಅದನ್ನು ತೆಗೆದುಕೊಂಡು ಮನೆಗೆ ಹೋಗು” ಎಂದು ಹೇಳಿದನು. ತಕ್ಷಣವೇ ದಾಮಾಶೇಟನಿಗೆ ಎಚ್ಚರವಾಯಿತು.

ಅವನಿಗೆ ತುಂಬಾ ಸಂತೋಷವಾಯಿತು. ಕನಸನ್ನು ಹೆಂಡತಿಯ ಮುಂದೆ ಹೆಳಿದನು. ಅದನ್ನು ಕೇಳಿ ಆಕೆಯು ಹಿರಿ ಹಿರಿ  ಹಿಗ್ಗಿದಳು.

ಬೆಳಗಾಗುವ ಹೊತ್ತಿಗೆ ದಾಮಾಶೇಟನು ಸ್ನಾನಕ್ಕೆಂದು ಭೀಮಾತೀರಕ್ಕೆ ಹೋದನು. ಹೊಳೆಯಲ್ಲಿ ಒಂದು ಶಿಂಪಿ ತೇಲುತ್ತ ಬಂದಿತು. ಅದನ್ನು ಕೈಗೆತ್ತಿಕೊಂಡನು.ಅದರೊಳಗಿನಿಂದ “ವಿಠ್ಠಲ ವಿಠ್ಠಲ ” ಎಂಭ ಧ್ವನಿ ಬರುತ್ತಿತ್ತು. ಧಾಮಾಶೇಟನು ಶಿಂಪಿಯನ್ನು ಬಿಚ್ಚಿದನು. ಆದರಲ್ಲಿ ಬಹು ಮುದ್ದಾದ ಕಳೆಯಾದ ಒಂದು ಗಂಡು ಕೂಸು ಕಾಣಿಸಿತು. ಅದನ್ನು ಎತ್ತಿಕೊಂಡು ಮನೆಗೆ ಹೋದನು. ಹೆಂಡತಿಯನ್ನು ಕರೆದು, “ಇಗೋ ದೇವರು ನಿನಗೆ ಒಬ್ಬ ಮಗನನ್ನು ಕೊಟ್ಟಿದ್ದಾನೆ. ತೆಗೆದುಕೋ” ಎಂದು ಆಕೆಗೆ ಮಗುವನ್ನು  ಒಪ್ಪಿಸಿದನು.

ಗೋಣಾಯಿಯು ಆ ಮಗುವನ್ನು ಎತ್ತಿ ತಬ್ಬಿಕೊಂಡಳು.  ಗಂಡಹೆಂಡರಿಗೆ ತುಂಬಾ ಸಂತೋಷ . ಮಗುವಿಗೆ ನಾಮಾ ಎಂದು ಹೆಸರಿಟ್ಟರು.

ಇದು ನಡೆದದ್ದು ೧೨೭೦ರಲ್ಲಿ.

ಈ ಕಾಲದಲ್ಲಿ ಅವನ ತಂದೆ ತಾಯಿ ಇದ್ದ ಪ್ರದೇಶ ಮುಸಲ್ಮಾನರ ಕೈಸೇರಿತ್ತು. ಅವರ ಅಧಿಕಾರಿಗಳು ತುಂಬಾ ಕ್ರೂರವಾಗಿ ನಡೆದುಕೊಳ್ಳುತ್ತಿದ್ದರು.  ಅನ್ಯ ಧರ್ಮಗಳರಿಗೆ ಬಹು ತೊಂದರೆ ಕೊಡುತ್ತಿದ್ದರು. ಹಿಂದೂಗಳಲ್ಲಿ ಒಡಕಿತ್ತು. ಅಲ್ಲದೇ ದುಷ್ಟರು ಪ್ರಬಲರಾಗಿದ್ದರು.

ನಾಮದೇವನು ಇಂತಹ ಕಾಲದಲ್ಲಿ ಹುಟ್ಟಿದನು. ಅವನು ಬೆಳೆದಂತೆ ವಿಶೇಷ ವ್ಯಕ್ತಿ  ಎಂಬುವುದು ಸ್ಪಷ್ಟವಾಯಿತು. ಎಲ್ಲರಿಗೂ ಅವನೆಂದರೆ ಗೌರವ- ಅಷ್ಟು ಶುಭ್ರ ಜೀವನ. ಪಾಂಡುರಂಗ ನಲ್ಲಿ ಅವನಿಗೆ ಅಪಾರವಾದ ಭಕ್ತಿ. ಇದರಿಂದಾಗಿ ಭಕ್ತರು ಆತನು ಶ್ರೀಕೃಷ್ಣನ ಸ್ನೇಹಿತನ ಮಂತ್ರಿಯೂ ಆಗಿದ್ದ ಉದ್ಧವನ ಅವತಾರ ಎಂದು ನಂಬುತ್ತಾರೆ.

ಹುಟ್ಟು ಭಕ್ತ

ಎಳೆಯ ವಯಸ್ಸಿನಿಂದಲೇ ನಾಮದೇವ ಬಹುಶುಭ್ರ ಮನಸ್ಸಿನ ಭಕ್ತನಾದ. ತಂದೆ ತಾಯಿ ವಿಠ್ಠಲನ ಭಕ್ತರಲ್ಲವೇ? ಮಗನ ಮನಸ್ಸೂ ವಿಠ್ಠಲನಲ್ಲಿ ಸೇರಿ ಹೋಯಿತು.

ಇವನ ಆಚ್ಚರಿಗೊಳಿಸುವಂತಹ ಭಕ್ತಿ ಕುರಿತು ಅನೇಕ ಕಥೆಗಳನ್ನು ಹೇಳುತ್ತಾರೆ. ಇವು ತುಂಬಾ ಸ್ವಾರಸ್ಯ ವಾಗಿವೆ.

ಪ್ರತಿದಿನ ದಾಮಾಶೇಠನು ವಿಠ್ಠಲನ ದೇವಸ್ಥಾನಕ್ಕೆ ನೇವೇದ್ಯವನ್ನು ಮನೆಯಿಂದ ತೆಗೆದುಕೊಂಡು ಹೋಗುತ್ತಿದ್ದ.  ಅದನ್ನು ವಿಠ್ಠಲನಿಗೆ ಅಪಿಋಸಿ ಮನೆಗೆ ಪ್ರಸಾದ ತರುತ್ತಿದ್ದ. ಅನಂತರ ಮನೆಯಲ್ಲಿಎಲ್ಲರ ಊಟ.

ಒಂದುದಿನ ದಾಮಾಶೇಟನಿಗೆ ಪೇಟೆಯಿಂದ ಬರಲು ತಡವಾಯಿತು. ಆದ್ದರಿಂದ ಆತನಹೆಂಡತಿಯ ಹುಡುಗ ನಾಮನಿಗೆ ಹೇಳಿದಳು “ಮಗು , ಗುಡಿಗೆ ಹೋಗಿ ದೇವರಿಗೆ ನೈವೇದ್ಯ ಕೊಟ್ಟು ಬಾ”.

ತಾಯಿಯ ಅಪ್ಪಣೆಯಂತೆ ಬಾಲಕನು ಗುಡಿಗೆ ಹೋದನು. ಪಾಂಡುರಂಗನನ್ನು ಪೂಜಿಸಿದನು. ತಾನೂ ತಂದ ನೈವೇದ್ಯವನ್ನು ದೇವನ ಮುಂದಿರಿಸಿದನು. ನೈವೇದ್ಯವನ್ನು ದೆವರೇ ಸ್ವೀಕರಿಸುತ್ತಾನೆ ಎಂದು ಹುಡುಗನ ನಂಬಿಕೆ. ಕೈಮುಗಿದು ಸ್ವೀಕರಿಸುತಾನೆ ಎಂದು ಹುಡುಗನ ನಂಬಿಕೆ. ಕೈಮುಗಿದು ನಿಂತುಕೊಂಡು- ದೇವಾ ,. ಊಟ ಮಾಡು” ಎಂದು ಬೇಡಿಕೊಂಡನು.

ಆದರೆ ದೇವರು ಉಣ್ಣುವ ಲಕ್ಷಣ ಕಂಡುಬರಲಿಲ್ಲ. ಹುಡುಗನಿಗೆ ದುಃಖವಾಯಿತು.

“ನಮ್ಮ ಅಪ್ಪ ಮನೆಯಲ್ಲಿ ಇರಲಿಲ್ಲ. ಅವ್ವನು ನನ್ನೊಡನೆ ನೈವೇದ್ಯ ಕೊಟ್ಟು ಕಳಿಸಿದ್ದಾಳೆ. ನೀನು ಉಣ್ಣದಿದ್ದರೆ ಮನೆಗೆ ಹೋದ ಬಳಿಕ ಅವ್ವನು ನನ್ನಗೆ ಹೊಡೆಯುವಳು.  ಪೂಜೆಯಲ್ಲಿ ತಪ್ಪಯಿತೋ ಏನೋ! ಹೇಗೆ ಪೂಜೆ ಮಾಡಬೇಕೋ ನನಗೆ ಗೊತ್ತಿಲ್ಲ. ನಾನಿನ್ನೂ ಚಿಕ್ಕವ. ಸಿಟ್ಟಾಗಬೇಡ ಎಂದು ಒಲಿಸಿಕೊಳ್ಳುವ ಮಾತಿನಲ್ಲಿ ಬೇಡಿಕೊಂಡನು;

ಆ ಬಾಲವಾಣಿಯನ್ನು ಕೇಳಿದ ದೇವನ ಮನಕರಗಿತು. ದೇವರು ಅಂದು ಊಟವನ್ನು ಮಾಡಿದನು. “ನಾನು ಉಂಡಿದ್ದನ್ನು ಯಾರ ಮುಂದೆಯೂ ಹೇಳಬೇಡ” ಎಂದು ಹೇಳಿದನು. ಹುಡುಗನಿಗೆ ಬಹು ಸಂತೋಷವ. ವಿಠ್ಠಲನನ್ನು ವಂದಿಸಿ ಮನೆಗೆ ಹೋದನು.  ತಂದೆಯೂ ಆ ಹೊತ್ತಿಗೆ ಮನೆಗೆ ಬಂದಿದ್ದ.

“ನೈವೇದ್ಯ ಎಲ್ಲಿ?” ಎಂದು ತಾಯಿ ಕೇಳಿದಳು.

“ದೇವರು ಉಂಡನು” ಎಂದು ಬಾಲಕ ಹೇಳಿಬಿಟ್ಟನು.

“ದೇವರು ಊಟ ಮಾಡಿದ ಎಂದರೇನು? ದೇವರು ಬಂದು ತಿನ್ನವುದುಂಟೇ?” ಎಂದು ಕೇಳಿದ ತಂದೆ ಆಶ್ಚರ್ಯದಿಂದ.

“ಹೌದು ದೇವರು ಬಂದು ಊಟ ಮಾಡಿದ”: ಎಂದು ಹೇಳಿದ ಹುಡುಗ ಮತ್ತೆ.

ತಂದೆಗೆ ನಂಬಿಕೆ ಬರಲಿಲ್ಲ.ಆದರೆ ಹುಡುಗನ ಮುಖ ನೋಡಿದರೆ ನಿಜವನ್ನೆ  ಹೇಳುತ್ತಾನೆ ಎನ್ನುವಂತಿದೆ. ಸುಳ್ಳೂ ತಿಳೀಯದ ಹುಡುಗ.ಕಡೆಗೆ ತಂದೆ “ದೇವರು ಊಟ ಮಾಡುವುದನ್ನು ತೋರಿಸುತ್ತೀಯೆ? ” ಎಂದ.

“ಓ , ನಾಳೆ ತೋರಿಸುತ್ತೇನೆ” ಎಂದ ಹುಡುಗ.

ಮರುದಿನ ದಾಮಶೇಟನು ಮಗನೊಡನೆ ದೇವಾಲಯಕ್ಕೆ ಹೋದನು. ನಿತ್ಯದಂತೆ ಊಜೆ ಮಾಡಿದನು. ನೈವೇದ್ಯವನ್ನು ದೇವರ ಮುಂದಿಟ್ಟನು.

ಆದರೆ ವಿಠ್ಠಲನು ಉಣ್ಣಲಿಲ್ಲ.

ನಾಮದೇವನಿಗೆ ಗಾಬರಿಯಾಯಿತು. ದೇವರು ನೈವೇಧ್ಯವನ್ನು ಸ್ವೀಕರಿಸದಿದ್ದರ ತಂದೆ ತಾಯಿ ಏನು ತಿಳಿದುಕೊಳ್ಳುವುರು? ಹಿಂದಿನ ದಿನ ತಾನೇ ನೈವೇದ್ಯವನ್ನು ತಿಂದು ಬಿಟ್ಟೆ ಎಂದು ಭಾವಿಸುವುದಿಲ್ಲವೆ! ಅವರಿಗೆ ಕೋಪ ಬರುವುದಿಲ್ಲವೇ?

“ವಿಠ್ಠಲ , ಈ ನೈವೇದ್ಯವನ್ನು ಸ್ವೀಕರಿಸು” ಎಂದು ಬೇಡಿಎ.

ಊಹುಂ, ವಿಠ್ಠಲ ಅಲ್ಲಾಡಲಿಲ್ಲ.

ಹುಡುಗನಿಗೆ ತುಂಬಾ ಸಂಕಟವಾಯಿತು. “ದೆವಾ, ಹೀಗೆ ಮಾಡಬೇಡ, ನನ್ನ ತಂದೆ ತಾಯಿ ಏನು ತಿಳಿದುಕೊಳ್ಳುತ್ತಾರೆ? ನೀನೇ ನಾನು ಸುಳ್ಳು ಹೇಳಿದೆ, ನಾನೇ ನೈವೇದ್ಯೆ ತಿಂದೆ ಎಂದು ಸಿಟ್ಟಾಗುವುದಿಲ್ಲವೇ? ನಿನ್ನೆ ನನ್ನ ಎದುರಿಗೆ ನೈವೇದ್ಯ ಸ್ವೀಕರಿಸಿದೆ.ಇವತ್ತು ನನ್ನ ತಂದೆಯ ಎದುರಿಗೆ ಹೀಗೆ ಮಾಡುವುದೇ? ” ಎಂದು ಬೇಡಿಕೊಂಡ.

ದೇವರ ಮನಸ್ಸು ಕರಗಿತು. ವಿಠ್ಠಲನ ಬಾಯಿ ತೆರೆಯಿತು. ಎಳೆಯ ಭಕ್ತ ಊಟ ಮಾಡಿಸಿದ.

ಈ ಅದ್ಭುತವನ್ನು ಕಂಡು ತಂದೆ ಬೆರಗಾಗಿ ಹೋದ. ಮನೆಗೆ ಹಿಂತಿರುಗಿದಾಗ ಎಲ್ಲವನ್ನೂ ತನ್ನಹೆಂಡತಿಗೆ ಹೇಳಿದ. ಇಬ್ಬರು ಹಿರಿ ಹಿರಿ ಹಿಗ್ಗಿದರು.ನಾಮದೇವನಲ್ಲಿ ಅವರ ಪ್ರೇಮ ಹೆಚ್ಚಿತು.

ಹೀಗೆ ಒಂದು ಸುಂದರವಾದ ಕಥೆ ಇದೆ.

ಹುಡುಗ  ನಾಮದೇವ ಸಂತೋಷದಲ್ಲಿಯೇ ಬೆಳೆದ. ಬಾಲ್ಯದಿಂದ ಅವನ ಮನಸ್ಸು ದೇವರ ಕಡೆಗೆ ಹರಿದಿತ್ತು. ದೊಡ್ಡವನಾದನಂತೆ ಬಹುಕಾಲವನ್ನು ವಿಠ್ಠಲನ ಧ್ಯಾನದಲ್ಲಿ ವಿಠ್ಠಲನ ದೇವಸ್ಥಾನದಲ್ಲಿಯೇ ಕಳೆಯುತ್ತಿದ್ದ.

ಅವನ ತಂದೆ ಬಡವನೇನೂ ಅಲ್ಲ.ಆದುದರಿಂದ ಮಗ ಸ್ವಲ್ಪ ದೊಡ್ಡವನಾದ ಕೂಡಲೇ ಮದುವೆ ಮಾಡಿದರು. ನಾಮ ದೇವನ ಹೆಂಡತಿಯ ಹೆಸರು ರಾಜಾಯಿ (ಇವಳನ್ನು ರಾಧಾಬಾಯಿ ಎಂದು ಕರೆಯುತ್ತಿದ್ದರು). ನಾಮದೇವನಿಗೆ ನಾಲ್ಕು ಜನ ಮಕ್ಕಳಾದರು.-ನಾರಾಯಣ, ವಿಠ್ಠಲ, ಗೋವಿಂದ, ಮಹಾದೇವ.

ದೇವನ ಗುಪ್ತ ಹಸ್ತದಲ್ಲಿ

ನಾಮದೇವನು ವಿಠ್ಠಲ ಭಕ್ತಿಯಲ್ಲಿಯೇ ಬಹಳ ವೇಳೆ ಕಳೆಯುತ್ತಿದ್ದ.ಆದಕಾರಣ ಸಂಸಾರದ ಕಡೆಗೆ ಆತನ ಲಕ್ಷ್ಯ ಹೊರಳಲಿಲ್ಲ. ತಂದೆಗೆ ವಯಸ್ಸಾಯಿತು. ಅವನ ಕೆಲಸ ಬಟ್ಟೆ ಹೊಲೆಯುವುದು. ಮಗ ದೊಡ್ಡವನಾಧ , ತಂದೆಯ ಕೆಲಸಲದಲ್‌ಇ ಮಗನೂ ಸಹಾಯ ಮಾಡಬಹುದು ಎಂದು ದಾಮಾಜಕಿಯೂ ಅವನ ಹೆಂಡತಿಯ ಆಸೆ ಇಟ್ಟುಕೊಂಡಿದ್ದರು.ನಾಮದೇವನೇನೋ ತಂದೆ ತಾಯಿಯರಲ್ಲಿ ಬಹಳ ಪ್ರೀತಿ ಗೌರವಗಳಿಂದ  ನಡೆದುಕೊಳ್ಳುತ್ತಿದ್ದ. ಹೆಂಡತಿಯನ್ನೂ ಮಕ್ಕಳನ್ನೂ ಪ್ರೀತಿಯಿಂದ ಕಾಣುತ್ತಿದ್ದ.

ಆದರೆ ಸಂಸಾರ ನಡೆಯುವುದಕ್ಕೆ ಅವನ ಸಹಾಯವೇನೂ ಆಗಲಿಲ್ಲ. ಸದಾ ವಿಠ್ಠಲನ ಧ್ಯಾನ. ಮನೆಯಲ್ಲಿರುವುದಕ್ಕಿಂತ ವಿಠ್ಠಲನ ದೇವಸ್ಥಾನದಲ್ಲಿಯೇ ಹೆಚ್ಚು ಕಾಲ ಇರುವನು. ಇಂತಹ ಮಗನಿಂದ ಸಂಸಾರಕ್ಕೆ ಏನು ತಾನೇ ಸಹಾಯವಾದೀತು? ಹೀಗಾಗಿ ಸಂಸಾರ ಅನೇಕ ಕಷ್ಟಗಳಿಗೆ ಈಡಾಗಬೇಕಾಯಿತು. ಅದನ್ನು ಸಹಿಸಲಾರದೆ ಆತನ ತಂದೆ ತಾಯಿ ಮನೆಯಲ್ಲಿ ಸಿಡಿಮಿಡಿ ಮಾಡತೊಡಗಿದರು.

ನಾಮದೇವನಿಗೆ ಬೇಸರವಾಯಿತು ಮನೆ ಬಿಟ್ಟು ಹೋಗಿ ದೇವಾಲಯದಲ್ಲಿ ಕುಳಿತುಕೊಂಡನು. ನಾಮದೇವನ ಹೆಂಡತಿ ರಾಜಾಯಿ ನೆರೆಮನೆಗೆ ಹೋಗಿ ಮನೆಯ ಕಷ್ಟಗಳನ್ನೆಲ್ಲ ಹೇಳಿಕೊಳ್ಳಲು ಪ್ರಾರಂಭಿಸಿದಳು.

“ರಾಜಮ್ಮ” ಎಂದು ಯಾರೋ ಕೂಗಿದರು.

ಅವಸರದಿಂದ ರಾಜಮ್ಮ ಹೊರಬಂದು ಕೇಳಿದಳು- “ಯಾರು ಕೂಗಿದವರು?”

“ನನ್ನ  ಹೆಸರು ಕೇಶವಶೇಟ್,. ನಾಮದೇವನು ನನ್ನ  ಜೀವನ ಗೆಳೆಯ. ಅವನಿಗೆ ಈ ಹಣ ಕೊಡಬೇಕಾಗಿದೆ. ತೆಗೆದುಕೊಳ್ಳಿರಿ:ಎಂದು ಹಣವನ್ನು ಕೊಟ್ಟು ಅವನು ಹೋಗಿಯೇ ಬಿಟರಟನು.

ಆ ಹಣವನ್ನು ತೆಗೆದುಕೊಂಡು ರಾಜಾಯಿಪೇಟೆಗೆ ಹೋದಳು. ಬೇಕಾದ ಸಾಮಾನು ತಂದಳೂ.ಅಡಿಗೆ ಮಾಡಿ ಮುಗಿಸಿ ಕುಳಿತುಬಿಟ್ಟಳೂ.

ಗೋಣಾಯಿ ಆವಾಗ ಮನೆಯಲ್ಲಿ ಇರಲಿಲ್ಲ. ಕಾಳು ತರುವ ಸಲುವಾಗಿ ಯಾರ ಮನೆಗೋ ಹೋಗಿದ್ದಳು. ಕಾಳು ತೆಗೆದುಕೊಂಡು ಮನೆಗೆ ಬರುತ್ತಿರುವಾಗ ದಾರಿಯಲ್ಲಿ ದೇವಾಲಯದ ಒಳಗೆ ಹೋದಳೂ. ಅಲ್ಲಿ ಕುಳಿತ ಮಗನಿಗೆ ತಿಳುವಳಿಕೆ ಹೆಳಿ ಅವನನ್ನು ಮನೆಗೆ ಕರೆ ತಂದಳೂ.

ತಾಯಿ-ಮಗ ಮನೆಗೆ  ಬರುಷ್ಟರಲ್ಲಿ ಅವರ ಮನೆಯಲ್ಲಿ ದೊಡ್ಡ ಬದಲಾವಣೆಯ. ರಾಜಾಯಿ ಒಳ್ಳೆಯ ಬಟ್ಟೆ ತಂದಿದ್ದಾಳೆ. ಮನೆಯಲ್ಲಿ ಅಡಿಗೆ ಸಿದ್ಧವಾಗಿದೆ. ಅದನ್ನು ಕಂಡುಇಬ್ಬರೂ ಚಕಿತರಾದರು.  “ಇದೆಲ್ಲಾ ಏನು, ಎಲ್ಲಿಂದ ಬಂತು? ” ಎಂದು ಮಗನು ತಾಯಿ ಕೇಳೀದನು. ಆಕೆಗೂ ಗೊತ್ತಿರಲಿಲ್ಲ.

ಕೇಶವ ಶೇಟ್ ಎಂಬಾತ ಬಂದು ಹಣ ಕೊಟ್ಟು ಹೋದ. ಅವನು ತಾನು ನಾಮದೇವನ ಜೀವನದ ಗೆಳೆಯ ಎಂದು  ಹೇಳಿದ ಎಂಬುವುದು ನಾಮದೇವನಿಗೆ ತಿಳಿಯಿತು.ಅವನುಬೆಕ್ಕಸ ಬೆರಗಾದ. ಅಂತಹ ಸ್ನೆಹಿತರು ಯಾರೂ ತನಗಿಲ್ಲ. ತನಗೆ ಯರೂ ಹಣ ಕೊಡಬೇಕಾಗಿರಲಿಲ್ಲ ಎಂದು ಅವನಿಗೆ ಚೆನ್ನಾಗಿ ತಿಳಿದಿತ್ತು.

ಆದರೆ ಹಣ ಬಂದುದ್ದಂತೂ ನಿಜ. ಮನೆಯಲ್ಲಿ ಹೊಸ ಸಾಮಾನುಗಳು ಬಂದು ಬಿದ್ದಿಯವೆಲ್ಲ?

ಯಾರು ತಂದು ಕೊಟಿರಬೇಕು. ಹಣವನ್ನ?

ತನಗೆ ಇನ್ನೂ ಯಾರು ಕೊಡುತ್ತಾರೆ ! ವಿಠ್ಠಲನೇ ಎಂದು ಆತನಿಗೆ ತೊರಿತು. ವಿಠ್ಠಲನೇ, ಬಂದು ತನ್ನನ್ನು ಜೀದ ಗೆಳೆಯ ಎಂದಿದ್ದ ಎನ್ನಿಸಿತ್ತು. ನಾಮದೇವನಿಗೆ ರೋಮಾಂಚನವಾಯಿತು. ಜೊತೆಗೆ ತನ್ನಿಂದ ವಿಠ್ಠಲನಿಗೆ ಇಷ್ಟು ಶ್ರಮವಾಯಿತೇ ಎಂದು ದುಃಖವಾಯಿತು. ಈಹಣನನಗೆ ಬೇಡ. ಹಣದ ಆಸೆಗಾಗಿ  ಕಟ್ಟಿಕೊಂಡು ವಿಠ್ಠಲನ ಧ್ಯಾನಕ್ಕೆ ಭಂಗ ಬಂದೀತು ಎನ್ನಿಸಿತು. ಆಗಿಂದಾಗ ಬ್ರಾಹ್ನಂರನ್ನೂ, ಬಡ ಬಿಕ್ಷುಕ್ನರನ್‌ಉ ಕರೆಸಿ ದೇವರು ಕಾಣದ ಕೈಯಿಂದ ಕೊಟ್ಟ ಹಣವನ್ನೆಲ್ಲ ಅವರಲ್ಲಿ ಹಂಚಿಹಾಕಿ ಬರಿಕೈ ಮಾಡಿಕೊಂಡರು.

ವಿಠ್ಠಲನು ನಾಮದೇವನ ಭಕ್ತಿಯನ್ನು ಮೆಚ್ಚಿದ ಎಂಬುವುದನ್ನು ನಾಮದೇವ ನಿಶ್ಚಲ. ಭಕ್ತಿ ವೈರಾಗ್ಯಗಳನ್ನೂ ತೋರಿಸುವ ಇಂತಹ ಅನೇಕ ಕಥೆಗಳುಂಟು.

ನಾಮದೇವನಿಗೆ ತಂದೆ ತಾಯಿ ಹೆಂಡತಿ ಮಕ್ಕಳು ಹೀಗೆ ಬಳಗವಿದ್ದಂತೆ, ಭಕ್ತರ ಬಳಗವೂ ಇತ್ತು.  ಬಳಗದವರು ಬೇರೆ ಜಾತಿಯಲ್ಲಿ ಹುಟ್ಟಿ ಬಂದವರು. ಆದರೆ ಅವರೆಲ್ಲರೂ ಒಬ್ಬ ದೇವನ ಸೈನಿಕರೇ ಆಗಿದ್ದರು. ಜ್ಞಾನದೇವನು ಬ್ರಾಹ್ಮಣ ನಾಮದೇವನು ಸಿಂಪಿ, ನರಹರಿ ಅಕ್ಕಸಾಲಿಗ, ಸಾವಂತಾ ತೋಟಗ, ಗೋರಾ ಎಂಬುವವರು ಕುಂಬಾರ, ಚೋಖಾ ಮೇಳ ಎನ್ನುವವನು ಹೊಲೆಯ.ಅವರೆಲ್ಲರೂ ನಿತ್ಯ ಜೀವನ ದಲ್ಲಿ ವೈಯುಕ್ತಿವಾಗಿ ತಂತಮ್ಮ ವೃತ್ತಿಯ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದರು. ಆದರೆ ವಿಠ್ಠಲನ ಚರಣಗಳಿಗೆ ಎರವಾಗುವಾಗ ಅವರೆಲ್ಲರೂ ಒಂದೇ.

ದೇವರು ಕೊಟ್ಟ ಹಣವನ್ನೆಲ್ಲ ಇತರರಿಗೆ ದಾನ ಮಾಡಿಬಿಟ್ಟ.

ಜ್ಞಾನದೇವನೊಡನೆ

ನಾಮದೇವನು ಮರಾಠಾಠಿ ಸಂತರಲ್ಲಿ ಮೊದಲಿಗ. ಯೋಗಿರಾಜನೆನಿಸಿದ ಜ್ಞಾನದೇವನು ಸಂತಪಂಚರಲ್ಲಿ ಪ್ರಮುಖ. ಜ್ಞಾನದೇವನು ನಾಮದೇವನಿಗಿಂತ ಒಂದು ವರ್ಷ ಚಿಕ್ಕವನು. ನಾಮದೇನ ಕೀರ್ತಿಯನ್ನು ಕೇಳಿ ಜ್ಞಾನದೇವನು ಅವನನ್ನು ಕಾಣಲು ಪಂಡರಾಪೂರಕ್ಕೆ ಹೋದನು. ನಾಮದೇವ ನನ್ನು ಕಾಣುತ್ತಲೇ ಜ್ಞಾನದೇವನು ಆತನ ಕಾಲಿರಿಗೆರಗಿದನು. ಜ್ಞಾನ- ಭಕ್ತಿ ಎರಡೂ ಸಂಧಿಸಿದಂತಾಯಿತು.

“ನಿನ್ನೊಡನೆ ತೀರ್ಥಯಾತ್ರೆಗೆ ಹೊರಡಬೇಕೆಂದು ಮಾಡಿದ್ದೇನೆ. ಅದಕ್ಕಾಗಿಯೇ ನಿನ್ನನ್ನು ಕಂಡಿದ್ದು, ನನ್ನ ಉದ್ದೇಶವು ಪೂರ್ಣವಾಗುವುದೋ ಇಲ್ಲವೋ ತಿಳಿಸು”. ಎಂದು ಜ್ಞಾನದೇವನು ಕೇಳಿದನು.

“ನಾನು ಸಂಪೂರ್ಣ ಪರಾಧಿನ. ನಾನು ಪಾಂಡುರಂಗನನ್ನು ಕೇಳುವೆ. ಆತನು ಒಪ್ಪಿದರೆ ನಾನು ಹೊರಡುವೆ” ಎಂದನು ನಾಮದೇವ.

ಸಂತ ಶಿಖಾಮಣಿಗಳಿಬ್ಬರೂ ದೇವಾಲಯದೊಳಗೆ ಹೋದರು. ವಿಠ್ಠಲ ದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಢಿದರು. ದೇವರು ಅವರನ್ನು ಅಪ್ಪಿಕೊಂಡನು. ಬಳಿಕ ಅವರು ತಮ್ಮ ಪ್ರವಾಸಕ್ಕೆ ಅಪ್ಪಣೆ ಕೇಳಿದರು. “ನಾನು ದೇವನ ಸಹಾವಾಸದ ಸಲುವಾಗಿಯೇ ಆತನೊಡನೆ ಪ್ರವಾಸ ಮಾಡಬೇಕಾಗಿದೆ” ಎಂದು ಜ್ಞಾನದೇವನು ತನ್ನ ಉದ್ದೇಶವನ್ನು ತಿಳಿಸಿದನು.

ನಾಮದೇವ, “ನಿನ್ನ ಅಪ್ಪಣೆಯಾದರೆ ಜ್ಞಾನದೇವನ ಜೊತೆಗೆ ಹೋಗುತ್ತೇನೆ” ಎಂದು ಕೈಮುಗಿದರು.

ಅದರಂತೆಯೇ ಜ್ಞಾನದೇವನಿಗೆ ಹೇಳಿದ್ದೇನೆಂದರೆ -“ಆತನನ್ನು ನೀನು ಸರಿಯಾಗಿ ನೋಡಿಕೋ.”

ಅವರಿಬ್ಬರೂ ಚಂದ್ರಭಾಗೆಯ ತೀರಕ್ಕೆ ಹೋದರು. ಅಲ್ಲಿ ಸ್ನಾನ ಮಾಡಿದಕ ಬಳಿಕ ತೀರ್ಥಯಾತ್ರೆಗೆ ಹೊರಟರು. ಹೀಗೆ ಒಂದು ಕಥೆಯುಂಟು.

ಅಂತೂ  ಇಬ್ಬರೂ ಸಂತರು ಒಟ್ಟಿಗೆ ತೀರ್ಥಯಾತ್ರೆಗೆ ಹೊರಟರು. ಪ್ರವಾಶದಲ್ಲಿ ಅವರಿಗೆ ಆತ್ಮಜ್ಞಾನವೇ ಮಾತನಾಡುವ ವಿಷಯವಾಯಿತು.  ಮೊದಲಿಗೆ ಹಸ್ತಿನಾಪೂರವು ಆ ಇಬ್ಬರು ಸಂತ್ರಶ್ರೇಷ್ಠರನ್ನು ಸ್ವಾಗತಿಸಿತು. ಅಲ್ಲಿಯ ಜನರು ಅವರ ಕೀರ್ತನೆಯನ್ನು ಮೊದಲೇ ಕೆಳಿದ್ದರು. ಅವರನ್ನು ಕಾಣುವುದಕ್ಕೆ ಜನರ ಜಾತ್ರೆಯ ನೆರೆಯಿತು. ನಾಮದೇವನು ಆ ಕಾಲಕ್ಕೆ ಅವೆಷ್ಟೋ ಕೀರ್ತನೆಗಳನ್ನು ಹಾಡಿದನು. ಕೇಳಿದವನು ಮೈಮರೆತು ಭಕ್ತರಸವನ್ನು ಮನದಣಿ ಕುಡಿದರು.

ನಾಮದೇವ -ಜ್ಞಾನದೇವರ ಯಾತ್ರೆಯ ವಿಷಯವಾಗಿ ಅನೇಕ ಕಥೆಗಳನ್ನು ಹೇಳುತ್ತಾರೆ. ನಾಮದೇವರ ಭಜನೆಯ ಸಂಗತಿ ಅಲ್ಲಿಯ ಬಾದಶಹನಿಗೆ ತಿಳಿಯಿತು. ನಾಮದೇವನ ಕೀರ್ತನವನ್ನು ಒಮ್ಮೆ ಕೇಳಬೇಕೆಂದು ಅವನು ಆಶಿಸಿದನು.  ಅದರೊಡನೆ ಸಾಧ್ಯವಾದರೆ ಅದೇ ಕಾಲಕ್ಕೆ ಆತನ ಸಾಧುತ್ವದ ಪರೀಕ್ಷೆಯನ್ನೂ ಮಾಡಬೇಕೆಂದು ಯೋಚಿಸಿದನು.

ನಾಮದೇವನು ಕೀರ್ತನ ಮಾಡುವಲ್ಲಿಬಾದಶಹನು ಹೋದನು. ಒಂದೆರಡು ಗಳಿಗೆ ಆತನ ಕೀರ್ತನೆ ಕೇಳಿದನು. ಬಳಿಕ ನಾಮದೇವನಿಗೆ ಹೇಳಿದನು-“ಆಗೋ, ಅಲ್ಲಿ ಸತ್ತು ಬಿದ್ದ ಆಖಲನ್ನು ಬದುಕಿಸಿಕೊಡು! ಬದುಕಿಸಿದರೆ ನೀನು ನಿಜ ವಾದ ಸಾಧು. ಇಲ್ಲವಾದರೆ ನಿನ್ನ ತಲೆಯನ್ನು ಕಡಿಸುತ್ತೇನೆ”.

ಅಪ್ಪಾ, ಒಣ ರೊಟ್ಟಿಯನ್ನು ಏಕೆ ತಿನ್ನುವಿ? ತುಪ್ಪವನ್ನೂ ತೆಗೆದುಕೋ"

“ನಾಲ್ಕು ದಿನಗಳಲ್ಲಿ ಆಕಳೂ ಜೀವ ತುಂಬಿ ಏಳುವುದು. ಎಂದು ನಾಮದೇವನು ಹೇಳಿಬಿಟ್ಟರು. ಕೀರ್ತನದ ಭರದಲ್ಲಿ ನಾಮದೇವನು ಪಾಂಡುರಂಗನನ್ನು ಹೃದಯದಿಂದ ಕೂಗಿ ಕರೆಯಹತ್ತಿದನು. ಅದೆಷ್ಟೇ ಆತನಿಗೆ ಗೊತ್ತು. ಆ ಬಳಿಕ ತಾನೇಲ್ಲಿ ಇರುವೇನೋ, ಏನೋ ಮಾಡುತ್ತಿರುವೇನೋ ಒಂದು ಗೊತ್ತಿಲ್ಲ. ಆದರೆ ಬಹಳ ಹೊತ್ತಿನ ಮೇಲೆ ಮೈ ತಿಳಿದೆದ್ದನು. ಆಗ ಗೊತ್ತಾಯಿತು.ಸತ್ತ ಆಕಳು ಜೀವ ತುಂಬಿ ಎದ್ದು ನಿಂತಿದ್ದು ಸಂಗತಿಯಿನ್ನು ರಾಜದೂತರು ಓಡುತ್ತ ಹೋಗಿ ಬಾದಶಹನಿಗೆ ತಿಳಿಸಿದರು. ಆತನು ನಾಮದೇವನಲ್ಲಿಗೆ ಬಂದು ಕಾಲಿಗೆರಗಿ ಆತನನ್ನು ಸ್ತುತಿಸಿದನು.

ನಾಮದೇವ, ಜ್ಞಾನದೇವರು ಹಸ್ತಿನಾಪೂರದಿಂದ ಮುಂದೆ ಸಾಗಿಕದರು. ಕಾಶಿಯಲ್ಲಿ ನಾಲ್ಕು ತಿಂಗಳ ಬೀಡು ಬಿಟ್ಟರು. ಆ ಸಂದರ್ಭದಲ್ಲಿ ಅವರಿಗೆ ಭಕ್ತ ಕಬೀರನ ಭೇಟಿಯಾಯಿತು.

ವಾರಣಾಸಿಯಿಂದ, ಗಯಾ, ಪ್ರಯಾಗ ಮೊದಲಾದ ತೀರ್ಥಗಳ ಯಾತ್ರೆಯನ್ನು ಮಾಡಿದರು. ಮಾರವಾಢ ಪ್ರದೇಶಕ್ಕೆ ಹೊಕ್ಕಾಗ ನಡುಬೇಸಿಗೆ. ಬಿಸಿಲುದಾರಿಯಲ್ಲಿ ಸಾಗುತ್ತಿರುವಾಗ ನೀರಡಿಕೆ ಬಹಳವಾಯಿತು.   ಕೆರೆ ಬಾವಿ ಅಲ್ಲಿ ಒಂದೂ ಕಣ್ಣಿಗೆ ಬೀಳಲಲಿಲಲ. ಬಹಳ ವ್ಯಾಕುಲಗೊಂಡರು. ಅಷ್ಟರೊಳಗೆ  ದೂರದಲ್ಲಿ ಒಂದು ಬಾವಿ ಕಾಣಿಸಿತು. ಅಲ್ಲಿಗೆ ಹೋಗಿ ನೋಡಿದರು. ಅದು ಸೇದುವ ಬಾವಿ. ನೀರು ಸೇದಲು ಹಗ್ಗವಿಲ್ಲ, ಪಾತ್ರೆ ಇಲ್ಲ. ನೀರು ಕೈಗೆ ಬರುವುದು  ಹೇಗೆ ?

ಜ್ಞಾನದೇವನು ಯೋಗವಿದ್ಯೆ ಬಲ್ಲವನಾಗಿದ್ದನು. ಸೂಕ್ಷ್ಮ ರೂಪದಲ್ಲಿ ಬಾವಿಯಲ್ಲಿ ಇಳಿದನು. ಸಾಕಷ್ಟು ನೀರು ಕುಡಿದು ಮೇಲೆ ಬಂದನು. “ಏಕೆ ಚಿಂತಿಸುವಿ? ನಾನೀನ ನಿನಗೂ ನೀರು ತಂಡುಕೊಡುವೆ. ಸೂಕ್ಷ್ಮವಿದ್ಯೆ ನಿನಗೆ ತಿಳಿಯದು. ಆದ್ದರಿಂದ ನೀರು ಮೇಲೆ ಬರುವಂತೆ ಮಾಡುವೆ” ಎಂದು ನಾಮದೇವನಿಗೆ ನುಡಿದನು.

“ನನ್ನ ಚಿಂತೆ ಪರಮಾತ್ಮನಿಗೆ ಇದೆ” ಎಂದು ನಾಮದೇವನು ನುಡಿದನು. ಒಂದು ಕ್ಷಣದಲ್ಲಿ ಆ ಬಾವಿ ನೀರಿನಿಂದ ತುಂಬಿಹರಿಯತೊಡಗಿತು. ಅದನ್ನು ಕಂಡು ಜ್ಞಾನದೇವನಿಗೆ ಆಶ್ಚರ್ಯವಾಯಿತು. “ನಾಮದೇವಾ, ನೀನು ಶ್ರೀ ಕೃಷ್ಣನನ್ನು ಸಂಪೂರ್ಣವಾಗಿ ಒಲಿಸಿಕೊಂಡಿರುವಿ. ನೀನು ಧನ್ಯನ್ನಪ್ಪಾ: ಎಂದವನೇ ಆತನ ಚರಣಗಳನ್ನು ಗಟ್ಟಿಯಾಗಿ ಹಿಡಿದನು. ಹೀಗೆ ಒಂದು ಕಥೆ ಹೇಳುತ್ತಾನೆ. ಅಂದಿನ ಆ ಬಾವಿ ಮಾರವಾಡದಲ್ಲಿ ಇಂದಿಗೂ ನೀರಿನಿಂದ ತುಂಬಿ ಹರಿಯುತ್ತಿದೆ ಎಂದೂ ಹೇಳುತ್ತಾರೆ.

ದ್ವೀತಿಯ ಕೈಲಾಸ

ನಾಗನಾಥ ಎಂಬ ಸ್ಥಳದಲ್ಲಿ ಒಂದು ಅದ್ಭುತ ಸಂಗತಿ ನಡೆಯಿತು ಎಂದು ಹೇಳುತ್ತಾರೆ.ಶುದ್ಧ ಮನಸ್ಸಿನ ಭಕ್ತಿ ಮುಖ್ಯ. ಜಾತಿ ಮುಖ್ಯವಲ್ಲ. ನಿಜವಾದ ಭಕ್ತಿಗೆ ದೇವರು ಒಲಿಯುತ್ತಾನೆ ಎಂಬುವುದನ್ನುದೇವರಲ್ಲಿ ನಂಬಿಕೆ ಇರುವವರಿಗೆ ಮನಗಾಣಿಸುವ ಕಥೆ ಇದು.

ಪಾಂಡುರಂಗನ ಭಕ್ತರಾದ ಆ ಸಂತಮಣಿಗಳು ಸಂಚರಿಸುತ್ತ ನಾಗನಾಥನಿಗೆ ಹೋದರು. ಅಲ್ಲಿ ಒಂದು ಜ್ಯೋತಿರ್ಲಿಂಗದ ಸ್ಥಾನ. ಅದಕ್ಕೆ ಎರಡನೇಯ ಕೈಲಾಸವೆನ್ನುವರು. ಆ ಪವಿತ್ರ ಸ್ಥಳವನ್ನು ಕಂಡು ಅವರಿಗೆ ಪರಮಾನಂದವಾಯಿತು. ಅಂದು ಮಹಾಶಿವರಾತ್ರಿ ಬೇರೆ. ಅವರು ತಮ್ಮ ಸ್ನಾನ- ಸಂಧ್ಯಾ ಮೊದಲಾದ ನಿತ್ಯಕರ್ಮಗಳನ್ನು ಮುಗಿಸಿಕೊಂಡು ದೇವಾಲಯದ ಹೆಬ್ಬಾಗಿಲಿಗೆ ಹೋದರು. ಅತಿ ಪ್ರೇಮದಿಂದ ಅಡ್ಡ ಬಿದ್ದು೭ ಶಂಕರನ ದರ್ಶನ ಪಡೆದರು. ನಾಮದೇವನು ಭಕ್ತ ಪರವಶನಾಗಿ ಕೀರ್ತನೆ ಮಾಡಲು ತೊಡಗಿದನು. ಲೆಕ್ಕವಿಲ್ಲದಷ್ಟು ಜನ ನೆರೆದರು. ಒಂದೇ ಮನಸ್ಸಿನಿಂದ ಕುಳಿತು ಕೀರ್ತನ ಕೇಳುತ್ತಿದ್ದರು.

ಆ ದೇವಾಲಯದ ಅರ್ಚಕರು ಬ್ರಾಹ್ಮಣರು. ಅವರು ಶಂಕರನನ್ನು ಪೂಜಿಸುವ ಸಲುವಾಗಿ ಹೆಬ್ಬಾಗಿಲಿಗೆ ಬಂದರು. ಆದರೆ ಕಿಕ್ಕಿರಿದು ಜನರಲ್ಲಿ ಹಾಯ್ದು ಹೋಗಲು ದಾರಿಯೇ ಸಿಗಲಿಲ್ಲ. ಅವರು ಕೂಗಿ ಹೇಳಿದರು-“ದೂರ ಸರಿಯಿರಿ. ಹಾದಿ ಬಿರಿ. ನಾವು ಮಡಿಯಲ್ಲಿದ್ದೇವೆ.” ಆದರೆ  ಆ ಮಾತನ್ನು ಯಾರು ಲೆಕ್ಕಿಸಲಿಲ್ಲ.  ಬ್ರಾಹ್ನಂರು ಸಿಡಿಮಿಡಿಗೊಂಡು ನಾಮದೇವನಿಗೆ ಹೇಳಿದರು:” ಈ  ನಿನ್ನ ಭಜನೆಯ ದೊಡ್ಡಸ್ತಿಕೆಯನ್ನು ಪಂಢರಪುರದಲ್ಲಿಯೇ ಮೆರೆಯಿತು.  ಇಲ್ಲಿ ನಾಗನಾಥನಿದ್ದಾನೆ. ಅವನ ಮುಂದೆ ಕೀರ್ತನ- ಗೀರ್ತನ ಏನೂ ನಡೆಯದು. ಕೈಲಾಸಪತಿಯಾದ ಉಮಾರಮಣ ನಿಗೆ ಹರಿಕೀರ್ತನವು ಪ್ರೀಯವಾಗದು.  ಪಂಢರಪುರಕ್ಕೆ   ಹೋಗು ,. ಅಲ್ಲಿ ನಾಚಿಕೆಯನ್ನು ತೆಲಗೆ ಸುತ್ತಿ ಬೇಕಾದಷ್ಟು ಕುಣಿದಾಡು”.

ಭಜನೆ  ಕೇಳುತ್ತಿದ್ದವರೇ ಪೂಜಾರಿಗಳಿಗೆ ಮರು ಪ್ರಶ್ನೆಯಿಂದ ಉತ್ತರ ನೀಡಿದರು. -ಹರಿ-ಹರರಲ್ಲಿ ಭೇಧವಿಲ್ಲ ವೆಂದು ದೊಡ್ಡ ದೊಡ್ಡ ಮುನಿಗಳು ಹೇಳುತ್ತಾರೆ. ಶಂಕರನ ಮುಂದೆ ಕೀರ್ತನ ಮಾಡಬಾರದೆಂದು ಎಲ್ಲಿ ಹೇಳಿದೆ?”

ಅದನ್ನು ಕೇಳಿಯಂತೂ ಆ ಬ್ರಾಹ್ನಣರು ತೀರ ಸಂತಸಗೊಂಡರು. ” ನೀವು ಒಣ ಅಭಿಮಾನಕ್ಕೆ ಬಿದ್‌ಉದ, ನಮಗೆ ತಿಳುವಳೀಕೆ ಹೇಳುವಿರಾ? ನೀವೆಲ್ಲರೂ ಇಲ್ಲಿಂದ ಹೊರಟು ಹೋಗಿರಿ. ಇಲ್ಲದಿದ್ದರೆ ಏಟು ತಿನ್ನುವಿರಿ” ಎಂದು ಆರ್ಭಟಿಸಿದರು.

ಕುಳಿತ ಸ್ಥಳ ಬಿಟ್ಟು ಯಾರು ಕದಲಿಲ್ಲ.

ಅರ್ಚ್‌ಕರ ಜೊತೆಗಿದ್ದ ಇಬ್ಬರು ಬ್ರಾಹ್ಮಣರು ಕೀರ್ತನ ದಲ್ಲಿ ಹೊಕ್ಕು ನಾಮದೇವನಿಗೆ ಹೇಳಿದರು- “ನಿನ್ನ ಕೀರ್ತನ ದಿಂದ ಗುಡಿಯಲ್ಲಿ ಬರುವುದಕ್ಕೆ ದಾರಿ ಇಲ್ಲದೆ ಹೋಗಿದೆ.  ಜನರು ಹೊರಗೆ ಪೂಜೆಗಾಗಿ ಕಾಯುತ್ತಿದ್ದಾರೆ. ನೀನು ದೇವಾಲಯದ ಹಿಂದೆ ನಿಂತುಕೊಂಡುಬೇಸರ ಬರುವ ತನಕ ಕೀರ್ತನ ಮಾಡು”

ನಾಮದೇವನು ಆ ಬ್ರಾಹ್ಮಣರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ದೇವಾಲಯದ ಹಿಂದೆ ಹೋಗಿ ಕೀರ್ತನಕ್ಕೆ ನಿಂತನು.  ನಡೆದುದನ್ನು ಕಂಡವರಿಗೆ ಬೆಸರವಾಯಿತು. ಅವರೂ ಅಲ್ಲಿಂದ ಎದ್ದು,ನಾಮದೇವನು ಕೀರ್ತನ ಮಾಡುವಲ್ಲಿಗೆ ಹೋಗಿ ಕುಳಿತರು. ಕೀರ್ತನಕ್ಕೆ ಅಡ್ಡಿ ಬಂದುದರಿಂದ ನಾಮದೇವನ ಕಣ್ಣುಗಳು ನೀರಿನಿಂದ ತುಂಬಿದವು. ಕುತ್ತಿಗೆಯ ನರಗಳೂ ಬಿಗಿದವು. ದೇಔರ ಸನ್ನಿದಿಯಲ್ಲಿ ಈ ಮಡಿ- ಮೈಲಿಗೆಯ ಕೂಗಾಟ ಏತಕ್ಕೆ, ಕೆಲವರು ದೂರ ನಿಲ್ಲಬೇಕುಎನ್ನವುದು ಏತಕ್ಕೆ, ದೇವರ ಹತ್ತಿರ ಇರುವಾಗ ಕೋಪ ಮಾಡಿಕೊಳ್ಳುವುದು, ಅಹಂಕಾರ ಪಡುವುದು ಇದೇ ಮೈಲಿಗೆ ಅಲ್ಲವೇ ಎನ್ನಿಸಿತು. ಶಂಕರನ ಮೂರ್ತಿಯನ್ನು ಕಾಣದೇ ದೇವಾಲಯದ ಹಿಂದೆ ನಿಂತು ಭಜನೆ ಮಾಡಬೇಕಾಯಿತೇ ಎಂದು ಸಂಕಟವಾಯಿತು. ಗದಗದಿಸುತ್ತಲೇ ಅವನು ಪಾಂಡುರಂಗನನ್ನು ಕೂಗಿ ಕರೆದನು. ಅದರಿಂದ ಆದ ಪರಿಣಾಮವೆಂದರೆ, ಪೂರ್ವಕ್ಕೆ ಮುಖವಿದ್ದ ದೇವಾಲಯವು ಹೊರಳಿ ನಾಮದೇವನಿಗೆ ಎದುರು ಮುಖ ತಿರುಹಿತು.  ಅದನ್ನು ಕಂಡು ನೆರೆದವರಿಗೆ ಹಿಡಿದಷ್ಟು ಆಶ್ಚರ್ಯ. “ಕೈಲಾಸಪತಿಯು ನಾಮದೇವನಿಗೆ ಒಲಿದನು” ಎಂದು ಅವರ ಹೃದಯ ತುಂಬಿ ಬಂದಿತು.

ಕೀರ್ತನವು  ಒಳ್ಳೆಯ ಭರಕ್ಕೆ ಬಂದಾಗ, ಪೂಜೆ ಮುಗಿಸಿ ಬ್ರಾಹ್ಮಣರು ಹೊರ ಬಂದರು. ನಾಮದೇವನ ಕೀರ್ತನವು ಗುಡಿಯ ಎದುರಿಗೆ ನಡೆದದ್ದು ಕಂಡರು. ಅವರಿಗೆ ದಿಗ್ಭ್ರಮೆಯಾಯಿತು. ಅಲ್ಲಿದ್ದವರನ್ನು  ಕೇಳಿದರು.  ಅವರು ಇಡೀ ದೇವಾಲಯವೇ ಹೊರಳಿ ಮುಖ ತಿರುಹಿತೆಂದು ಹೇಳೀದರು. ಅದನ್ನು ಕೇಳಿ ಆ ಬ್ರಾಹ್ಮಣರಿಗೆ ತುಂಬ ಕಳವಳವಾಯಿತು. ಜೊತೆಗೆ ತಾವು ಮಾಡಿದುದು ತಪ್ಪಾಯಿತು.ತಾವೇ ದೊಡ್ಡವರೆಂದುಕೊಂಡದ್ದು ಅಹಂಕಾರವಾಯಿತು ಎಂದು ಅರ್ಥವಾಯಿತು. ಬ್ರಾಹ್ಮಣರು ದುರಭಿಮಾನವನ್ನು ಬಿಟ್‌ಉಟ ಕೊಟ್ಟು ಕೀರ್ತನ ಕೇಳುವುದಕ್ಕೆ ಕುಳಿತುಕೊಂಡರು.ನಾಮದೇವನನ್ನು ಸುಮ್ಮನೆ ಆಕ್ಷೇಪಿಸಿದವೆಂದು ಪಶ್ಚಾತಾಪಪಟ್ಟರು. ನಾಮದೇವನ ಭಜನೆ ಮುಗಿದ ನಂತರ “ನಾವು ಮಾಡಿದ್ದ ತಪ್ಪಾಯಿತು,. ನಮ್ಮನ್ನು ಕ್ಷಮಿಸಿ” ಎಂದು ಬೇಡಿದರು. ನಾಮದೇವನ ಮನಸ್ಸಿನಲ್ಲಿ ಎಳ್ಳಷ್ಟೂ ಕೋಪ, ದ್ವೇಷ ಇರಲಿಲ್ಲ ನಿರ್ಮಲ ಮನಸ್ಸಿನಿಂದ ಅವರನ್ನು ಮಾತನಾಡಿಸಿ, ಸಮಾದಾನ ಮಾಡಿ ಕಳೂಹಿಸಿಕೊಟ್ಟ.

ಅಂದು ಹೊರಳಿ ನಿಂತ ದೇವಾಲಯವು ಇಂದಿಗೂ ಕಾಣಸಿಗುವುದೆಂದು ಹೇಳುತ್ತಾರೆ.

ಉಭಯಸಂತರು ನಾಗನಾಥದಲ್ಲಿ ಶಂಕರ ದರ್ಶನ ಪಡೆದು, ನೇರವಾಗಿ ಪಂಢರಪುರಕ್ಕೆ ಹೋದರು. ವಿಠ್ಠಲನ ದರ್ಶನ ಮಾಡಿ ನಾಮದೇವನಿಗೆ ತಡೆಯಲಾರದಷ್ಟು ಸಂತೋಷವಾಯಿತು. ಉತ್ಸಾಹದ ಭರದಲ್ಲಿ ನಾಮದೇವನು ಎಚ್ಚರ ತಪ್ಪಿ ಬಿದ್ದನು. ಜ್ಞಾನದೇವನು ಆತನನ್ನು ಆತನನ್ನು ಉಪಚರಿಸಿದನು. ಅದರಿಂದ ನಾಮದೇವನು  ಎಚ್ಚೆತ್ತು ದೇವರ  ಮುಂದೆ ಅಡ್ಡಬಿದ್ದನು. ಅದನ್ನು ಕಂಡು ವಿಠ್ಠಲನು ಇಟ್ಟಿಗೆಯಿಂದ ಕೆಳಗಿಳಿದು, ನಾಮದೇವನನ್ನು ಎದುರುಗೊಂಡು ಅಪ್ಪಿಕೊಂಡನು. ಅಲ್ಲದೇ ತುಳಸೀ ಮಾಲೆಯನುನ ತಾನೇ ನಾಮದೇವನ ಕೊರಳಿಗೆ ಹಾಕಿದನು ಎಂದು ಹೇಳುತ್ತಾರೆ.

ಅಷ್ಟರಲ್ಲಿ ನಾಮದೇವನನ್ನು ಕಾಣುವುದಕ್ಕೆ ಸಂತ ಮಂಡಲಿ ಬಂದು ಬಿಟ್ಟಿತು. ನಿವೃತ್ತಿ, ಸೋಪಾನ,ವಿಸೋಬಾ, ಗೋರಾ ಕುಂಬಾರ, ಮೊದಲಾದವರು ನಾಮದೇವನನ್ನು ಪ್ರೇಮದಿಂದ ಅಲಂಗಿಸಿದರು.  ನಾಮದೇವನ  ಆ ಘಬದ್ಭಕ್ತರ ಬಳಗವನ್ನು ಕುರಿತು ಹಲವು ಅರ್ಥವತ್ತಾದ ಕಥೆಗಳಿವೆ.

ಕಚ್ಚಾ ಗಡಿಗೆ

“ಒಮ್ಮೆ ತಮ್ಮೆಲ್ಲರ ಪಾದಧೂಳಿಯಿಂದ ನನ್ನ ಆಶ್ರಮವು ಪಾವನವಾಗಲಿ” ಎಂದು ಗೋರಾಕುಂಬಾರನು ಭಕ್ತಮಂಡಲಿ ಗೆಲ್ಲ ಕೈಮುಗಿದು  ಕೇಳಿಕೊಂಡನು. ಆತನ ವಿನಂತಿಯನ್ನು ಮನ್ನಿಸಿ ಅವರೆಲ್ಲರೂ ಕುಂಬಾರನ ಊರಿಗೆ ಹೋದರು. ಅವನಿಗೆ ತುಂಬಾ ಸಂತೋಷವಾಯಿತು. ಅದರ ಅತಿಥ್ಯಗಳಿಂದ ಅವರನ್ನೆಲ್ಲ ತಣಿಸಿದನು.

ಸಂತಮಂಡಲಿಯವರೆಲ್ಲ ಒಟ್ಟಿಗೆ ಕುಳಿತಿದ್ದರು. ಆಗ ಜ್ಞಾನದೇವ ಹೇಳಿದನು-“ಗೋರಾ , ನಿನ್ನ  ಮನೆಯೊಳಗಿನ ಈ ಗಡಿಗೆಗಳಲ್ಲಿ ಹಸಿಗಡಿಗೆ- ಸುಟ್ಟಗಡಿಗೆ ಯಾವುವೆಂಬುವುದನ್ನು ವಿಂಗಡಿಸಿ ಹೇಳು”.

ಗೋರಾನಿಗೆ ಜ್ಞಾನದೇವನು ಹೇಳಿದ್ದರ ಅರ್ಥ ವಾಯಿತು. ಕೈಯಲ್ಲಿ ಗಡಿಗೆಯನ್ನು ತಟ್ಟುವ ಹಲಗೆಯನ್ನು ತೆಗೆದುಕೊಂಡವನೇ ಎಲ್ಲರ ತಲೆಗೆ ಬಡಿಯುತ್ತ ಸಾಗಿದನು. ಅದಕ್ಕೆ ಯಾರು ತುಟಿಪಿಟಿಕ್ ಅನ್ನಲಿಲ್ಲ. ಆಧರೆ ಏನು ನಾಮದೇವನ ತಲೆಗೆ ಬೀಳು ಆತನು- “ಏಕೆ ಸುಮ್ಮನೆ ಏಕೆ ಬಡೆಯುವಿ? ” ಎಂದನು. ಆ ಮಾತು ಕೇಳಿ ಗೋರಾ ಜ್ಞಾನದೇವನಿಗೆ  ಹೇಳಿದನು. ” ಈ ಗಡಿಗೆ ಮಾತ್ರ ಕಚ್ಚಾ”

“ಗೋರಾ, ನಿನಗೆ ಅನುಭವವಿದೆ. ಸರಿಯಾಗಿ ಪರೀಕ್ಷಾ ಮಾಡಿದೆ” ಮುಕ್ತಾಬಾಯಿ ನುಡಿದಳೂ.ಸಂತರೆಲ್ಲರೂ ಗಹಿಗಹಿಸಿ ನಗಹತ್ತಿದರು. ಅದರಿಂದ ನಾಮದೇವನ ಮನಸ್ಸು ನೊಂದುಕೊಂಡಿತು.

ಈ ಗಡಿಗೆ ಮಾತ್ರ ಕಚ್ಚಾ

ನಾಮದೇವನು ಅಲ್ಲಿಂದ ನೇರವಾಗಿ ಪಂಢರಪುರಕ್ಕೆ ತೆರಳಿದನು. ತಾನು ಅಪಕ್ವ ಎಂದು ಆತನಿಗೆ ತುಂಬ ದುಃಖವಾಗಿತ್ತು. ಇಂತಹ ಸಂತರ ಸಹವಾಸಕ್ಕೆ ತಾನು ಯೋಗ್ಯ ನಾಗದೇ ಹೋದೆ, ಅಲ್ಲದೆ ಅಪಮಾನವಾಯಿತು ಎಂದು ಸಂಕಟಪಡುತ್ತಲೇ ದೇವಾಲಯದಲ್ಲಿ ಕುಳಿತ.

ಆಗ ಅಲ್ಲಿ ಒಂದು ವಿಶೇಷ ಸಂಗತಿ ನಡೆಯಿತು ಎಂದು ಭಕ್ತು ಹೇಳುತ್ತಾರೆ.

ಅವನ ದುಃಖವನ್ನು ಕಂಡು ವಿಠ್ಠನು ಸಮಾಧಾನ ಮಾಡಿದ. ನಾಮದೇವನು “ಗೋರಾನ ಮನೆಯಲ್ಲಿ ನನಗೆ ದೊಡ್ಡ ಅವಮಾನವಾಯಿತು”ಎಂದ.

“ಗೋರಾ, ಮಾಡಿದ ಪರೀಕ್ಷೆಯು ಸರಿಯಾಗಿಯೇ ಇದೆ. ಸದ್ಗುರುವಿಗೆ ಶರಣಾಗದವನು ಕಚ್ಚಾ ಗಡಿಗೆ” ಎಂದನು ವಿಠ್ಠಲ.

ಆಗಂತೂ ನಾಮದೇವನಿಗೆ ದಿಕ್ಕೆ ತಪ್ಪಿತು. “ನನ್ನ ದುಃಖವನ್ನುಪರಿಹಾರ ಮಾಡುವಿಯೆಂದು ನಿನ್ನ ಬಳಿ ಬಂದು ಹೇಳಿದರೆ ನೀನು ಅವರಂತೆಯೇ ಹೇಳಿದ್ದೀಯಲ್ಲ! ನನ್ನ ಗತಿಯೇನು? ಎಂದು ಕೇಳಿದನು.

“ಗತಿ ಬೇರೆ ಏನಿದೆ? ನೀನು ಸದ್ಗುರುವಿಗೆ ಶರಣಾಗು. ಅದರಿಂದ ನಿನ್ನ ಭೇಧ ಬುದ್ಧಿ ಅಳಿಯುವುದು”.

“ದೇವಾ ನನಗೆ ಸದ್ಗುರು ಏಕೇ ಬೇಕು? ನಿನ್ನ ಸಾನಿಧ್ಯ ಸಾಕಾಗದೇ?”

ಭಗವಂತನು ನುಡಿದನು- ” ನಾಮದೇವಾ, ನಾನು ಸಹ ರಾಮಾವತಾರದಲ್ಲಿ ವಸಿಷ್ಠರಿಗೆ ಶರಣಾಗಿ ಗುರುಗಳನ್ನಾಗಿ ಮಾಡಿಕೊಂಡು ಅಧ್ಯಾತ್ಮಜ್ಞಾನ ಗಳಿಸಿದೆ.  ಮುಂದೆ ಕೃಷ್ಣಾವತಾರದಲ್ಲಿಯೂ ಸಹ ಸಾಂದಿಪರನ್ನು  ಮೊರೆ ಹೊಕ್ಕು ಅವರನ್ನು ಗುರುವಾಗಿ ಮಾಡಿಕೊಂಡೆ. ನನ್ನ ಸೂಚನೆಯನ್ನು ಮನ್ನಿಸಿದರೆ ನೀನು ಸರ್ವ ಸಂತರಿಂದ ಮಾನ್ಯನಾಗುವಿ”.

ನಾಮದೇವನು ಭಗವಂತನ ಕಾಲಿಗೆರಗಿ, “ನಾನು ಯಾರಿಗೆ ಶರಣು ಹೋಗಲಿ?” ಎಂದು ಕೇಳಿದನು.

“ವಿಸೋಬಾ ಎಂಬಾತನು ಮಲ್ಲಿಕಾರ್ಜುನ ದೇವಾಲಯದಲ್ಲಿ ಮಲಗಿಕೊಂಡಿದ್ದಾನೆ. ಆತನು  ಮಹಾಜ್ಞಾನಿ. ನೀನಲ್ಲಿಗೆ ಹೋಗಿ ಅವನನ್ನುಗುರುವನ್ನಾಗಿ ಮಾಡಿಕೋ”.

ವಿಠ್ಠಲನ ಮಾತು ಕೇಳೀ ನಾಮದೇವನು ಅತ್ತು ಬಿಟ್ಟನು. “ದೇವಾ, ನಿನ್ನನ್ನುಬಿಟ್ಟರೆ ನಾನೊಂದು ಕ್ಷಣ ಸಹಕಳೆಯಲಾರೆ” ಎಂದು ಬಿಕ್ಕಳಿಸಿದನು.

“ಇದೇ ಸರಿಯಾದ ಕ್ರಮ, ನೀನುಗುರುವನ್ನು ಆಶ್ರಯಿಸಬೇಕು” ಎಂದು ವಿಠ್ಠಲನು ಎನ್ನಲು, ನಾನು ದೇವನು ಅಲ್ಲಿಂದ ಹೊರ ಬಿದ್ದನು.

ಪಾಂಡುರಂಗನ ಸೂಚನೆಯಂತೆ ನಾಮದೇವನು ಮಲ್ಲಿಕಾರ್ಜುನ ದೇವಾಲಯಕ್ಕೆ ಹೋದನು.

ನಾಮದೇವನು ವಿಸೋಬಾನನ್ನು ಕಂಡ ಘಟನೆಯ ವಿಷಯವೂ ಒಂದು ಕಥೆ ಇದೆ. ವಿಸೋಬಾ ಸಾಂಬನು ಲಿಂಗದ ಮೇಲೆ ಕಾಲು ಹೇರಿ ಮಲಗಿದ್ದನು. ಅದನ್ನು ಕಂಡು ನಾಮದೇವನು ನೊಂದುಕೊಂಡನು. ಅದೊಂದು ಆಪಶಕುನವೆನಿಸಿತು. ಆತನು ವಿಸೋಬಾನನ್ನು ಎಚ್ಚರಿಸಿ ಹೇಳಿದನು, “ನೀನೊಬ್ಬ ದೊಡ್ಡ ಸಾಧುವೆಂದು ಕೇಳಿದ್ದೇನೆ. ಪ್ರತ್ಯೇಕ್ಷ ಶಂಕರನ ಮೇಲೆ ಕಾಲು ಹೇರಿ ಮಲಗಿದ್ದೀ ಇದು ಸರಿಯೇ?”

ವಿಸೋಬಾ ಹೆಳಲಿದ: “ನಾನು ತಪ್ಪು ಮಾಢಿದೆ ನಿಜ.ಆದರೆ ನನಗೆ ಏಳಲು ಶಕ್ತಿಯಿಲ್ಲ. ಆದ್ದರಿಂದ ನೀನು ಶಂಕರನ ನಿಲ್ಲದಲ್ಲಿ ನನ್ನ ಕಾಲುಗಳನ್ನು ಎತ್ತಿಡು. ಪುಣ್ಯ  ಕಟ್ಟಿಕೋ”.

ನಾಮದೇವನು ಆತನ ಪಾದಗಳನ್ನೆತ್ತಿ ಬೇರೆಡೆಗೆ ಇಡಲು ತೊಡಗಿದನು. ವಿಸೋಭಾನ ಪಾದಗಳನ್ನು ಒಂದುಕಡೆ ಇಟ್ಟನು. ಅಲ್ಲಿ ಒಂದು ಲಿಂಗವು ಕಾಣಿಸಿಕೊಂಡಿತು. ನಾಮದೇವನಿಗೆ ಆಶ್ಚರ್ಯವಾಯಿತು.  ಹೆದರಿಕೆಯೂ ಆಯಿತು.  ವಿಸೋಬಾನ ಪಾದಗಳನ್ನು ಬೇರೊಂದು ಕಡೆಯಿಟ್ಟರು. ಅಲ್ಲಿಯೂ ಸಹ ಒಂದು ಲಿಂಗ ಕಾಣಿಸಿಕೊಂಡಿತು. ಮತ್ತೊಂದು ಕಡೆಗ  ಅವನ ಪಾದಗಳನ್ನು ಇಟ್ಟನು. ಅಲ್ಲಿಯೂ ಮತ್ತೊಂದುಲಿಂಗವು ಕಾಣಿಸಿತು. ವಿಸೋಬಾನ ಪಾದಗಳನ್ನು ಎಲ್ಲಿಟ್ಟರೆ ಅಲ್ಲಿ ಲಿಂಗ ಕಾಣಿಸುತ್ತಿತ್ತು.   ಆ ಕಾರಣದಿಂದ ನಾಮದೇವನಿಗೆ ಎಲ್ಲವೂ ಶಂಕರಮಯವಾಗಿ ತೋರಿತು. ಆತನ ಅಭಿಮಾನ ನಾಶವಾಯಿತು. ತಾನು ಸಹ ಶಿವರೂಪವೇಂದೇ ಬಗೆದನು. ಹೀಗೆ ನಾಮದೇವನು ವಿಸೋಬಾನ ಮಹಿಮೆಯನ್ನು ಕಂಡುಕೊಡ ಎಂದು ಭಕ್ತರು ಹೇಳುತ್ತಾರೆ.

ನಾಮದೇವನು ವಿಸೋಬಾನನ್ನು ಗುರು  ಎಂದುಒಪಿಕೊಂಡು ಶರಣು ಹೊಕ್ಕು ನಮಸ್ಕರಿಸಿದನು.ವಿಸೋಬಾ ನಾಮದೇವನಿಗೆ ಶಿವಸ್ವರೂಪವನ್ನುಬಣ್ಣಿಸಿ ತಿಳಿಸಿದನು ಮತ್ತು ಆತನ ತಲೆಯ ಮೇಲೆ ಕೈಯಿಟ್ಟರು. ಆಗ ನಾಮದೇವನಿಗೆ ದೇವರ ಸ್ವರೂಪವೂ ಅರ್ಥವಾಯಿತು.

ನಾಮದೇವನಿಗೂ ಪಾಂಡುರಂಗ ವಿಠ್ಠಲನಿಗೂ ಎಂತಹ ಆತ್ಮೀಯತೆ ಎಂಬುವುದನ್ನು ತೋರಿಸುವ ಇನ್ನೊಂದು ಕಥೆ ಹೀಗಿದೆ. ಒಮ್ಮೆ ಪಾಂಡುರಂಗನು ಎಂದಿನಂತೆ ನಾಮದೇವನನ್ನು ಅಪ್ಪಿಕೊಂಡು, ಬಳಿಕ ನುಡಿದನು- “ನೀನು ಗುರು ಮಾಡಿಕೊಂಡಂದಿನಿಂದ ನನ್ನನ್ನು ಮರೆಯುತ್ತ ನಡೆದಿರುವಿ”.

“ಈಗ ನನ್ನ ದ್ವೈತಭಾವವು ಕರಗಿದೆ. ನಿನ್ನ ಹಾಗೂ ಸದ್ಗುರುವಿನ ಸ್ವರೂಪದಲ್ಲಿ ಯಾವ ಭೇದವೂ ನನಗೆ ಕಾಣಿಸುವುದಿಲ್ಲ: ಎಂದು ನಾಮದೇವನು ವಿನಂತಿ ಮಾಡಿದನು.

ತರುವಾಯ ಪಾಂಡುರಂಗನು ಸಂತರಿಗೆ ಹೇಳಿದನು, “ಈಗ ಮಡಿಕೆ ಸಂಪೂರ್ಣವಾಗಿ ಸುಟ್ಟಂತಾಯಿತು.

ಜ್ಞಾನಸತ್ವಪರೀಕ್ಷೆ

ಒಂದು ದಿನ ಪಾಂಡುರಂಗ ನಾಮದೇವನಿಗೆ ಕೇಳಿದನು, ” ಈ ಜಗತ್ತೆಲ್ಲ ನನ್ನಿಂದ ವ್ಯಾಪಿಸಿದೆಯೆಂಬ ಮಾತು ಯಾವಾಗಲೂ ನಿನ್ನ ಲಕ್ಷದಲ್ಲಿ ಇರುವುದೇ”?

“ನಾನು ಎಲ್ಲ ಪ್ರಾಣಿಗಳಲ್ಲಿ ಒಂದೇ ಬಗೆಯ ದೃಷ್ಟಿಯಿರಿಸಿದ್ದೇನೆ” ಎಂದನು ನಾಮದೇವ.

ಒಂದು ನಾಯಿಯು ನಾಮದೇವನು ಇಟ್ಟುಕೊಂಡಿದ್ದ ರೊಟ್ಟಿಯನ್ನು ಹೊತ್ತುಕೊಂಡು ಓಡಿದಾಗ ಅದಕ್ಕೆ ತುಪ್ಪವನ್ನು ಕೊಡಲು ನಾಯಿಯ ಹಿಂದೆ ನಾಮದೇವನು ಓಡಿದ ಸಂಗತಿಯನ್ನು ಆಗಲೇ ಕಂಡೆವಲ್ಲ? ಇದೆಲ್ಲ ಸದ್ಗುರು ವಿಸೋಬಾನ ಉಪದೇಶ ಎಂದು ನಾಮದೇವ ಹೇಳಿದ.

ಕಾರ್ತಿಕ ಏಕಾದಶಿ . ನಾಮದೇವನ ಉಪವಾಸ, ಅಂದು ಒಬ್ಬ ಮುಪ್ಪಿನ ಬ್ರಾಹ್ಮಣನು ನಾಮದೇವನ ಬಳಿಗೆ ಬಂದು ಉಣ್ಣಲು ಅನ್ನಕೇಳಿದನು.

“ಇಂದು ಏಕಾದಶಿ, ಅನ್ನದಾನ ಮಾಡಬಾರದು. ಫಲಾಹಾರ ತರಿಸುವೆ. ಬೇಕಾದರೆ ಅದನ್ನುತಿನ್ನು” ಎಂದನು ನಾಮದೇವ.

“ಅನ್ನ ಸಿಗದಿದ್ದರೆ ನಾನು ಈಗಲೇ ಸಾಯುವೆನು. ನಿನಗೆ ಬ್ರಹ್ಮಹತ್ಯೆಯ  ಪಾಪ ಬರುವುದು.”

“ಪಾಪ ಪುಣ್ಯ ನನಗೊಂದು ತಿಳಿಯದು” ಎಂದನು ನಾಮದೇವ.

“ನಿನ್ನಲ್ಲಿ ಒಂದಿಷ್ಟೂ ದಯೆಯಿಲ್ಲ. ಬರಿಯ ಬ್ರಹ್ಮ ಜ್ಞಾನದ ಮಾತು ಮೆರೆಯಿಸುವೆ. ಅನ್ನವಿಲ್ಲದೆ ಈ ಮುದುಕನನ್ನು ಸಾಯಗೊಡುವೆಯಾ?” ಎಂದು ಕೇಳಿದನು ಬ್ರಾಹ್ಮಣ.

“ಇಂದು ನಾನು ಅನ್ನ ಕೊಡಲಿಲ್ಲವೆಂದು ನಿನ್ನ ಪ್ರಾಣ ಹೋದರೆ ಅದೇ ಗತಿಯುಂಟಾಗಲಿ?”  ಎಂದ ನಾಮದೇವ. ಅಷ್ಟರಲ್ಲಿ ಬ್ರಾಹ್ಮಣನ ಕಣ್ಣಾಲಿ ತಿರುಗಹತ್ತಿದವು ಅವನ  ಪ್ರಾಣವೇ ಹಾರಿತು.

ನಾಮದೇವನುಜ ಬೇರೆ ವಿಚಾರ ಮಾಡದೆ ಹೆಣವನ್ನು ಭೀಮಾತೀರಕ್ಕೆ ಒಯ್ದನು. ತಾನುಸಹ ಆತನೊಟ್ಟಿಗೆ ಮಲಗಿ ಬೆಂಕಿ ಹಚ್ಚಿಕೊಂಡನು. ಆತನ ಹೆಂಡತಿ ಸಹಗಮನಕ್ಕೆ ಸಿದ್ಧಳಾದಳು. ಆ ಕಾಲಕ್ಕೆ ಪಾಂಡುರಂಗನು ಚತುರ್ಭುಜ ರೂಪದಲ್ಲಿ ಕಾಣಿಸಿಕೊಂಡು ಅವನರನ್ಹು ಅಪ್ಪಿಕೊಂಡನು.

ಸಮಕಾಲದ ಸಂತರೆಲ್ಲ ಅಗಲಿದರೆಂದು ನಾಮದೇವನು ಉತ್ತರ ದೇಶಕ್ಕೆ ತೆರಳಿದನು. ಆತನು ಮರಾಠಿಯಲ್ಲಿ ಅಭಂಗ ಗಳನ್ನು (ಅಭಂಗ ಎಂದರೆ ಮಹಾರಾಷ್ಟ್ರದಲ್ಲಿ ಸಂತರು ದೇವರನ್ನು ಹೊಗಳಿ ಹಾಡಿದ ಪದ್ಯಗಳು- ಕನ್ನಡದಲ್ಲಿ ಹರಿದಾಸರ ಪದ್ಯಗಳ ಹಾ) ಬರೆದಂತೆ ಹಿಂದಿಯಲ್ಲಿಯೂ ಸಹ ಬರೆದನು. ಭಗವಂತನನ್ನೆ ಮನಸಾರೆ ಪ್ರೀತಿಸಿ, ಅವನಲ್ಲಿ ಭಕ್ತಿ ಇಟ್ಟು, ಎಲ್ಲವನ್ನೂ ಅವನಿಗೆ ಸಮರ್ಪಿಸಿ ಬದುಕುವುದು ಭಕ್ತರ  ರೀತಿ.  ಇದನ್ನು  ಭಕ್ತಿಪಂಥ ಎಂದೆನ್ನುತ್ತಾರೆ.  ಇದು ದಕ್ಷಿಣ ಭಾರತದಲ್ಲಿ ಬಹುಕಾಲದಿಂದಲೂ ಬೆಳೆದುಕೊಂಡು ಬಂದಿತ್ತು. ನಾಮದೇವನು ಉತ್ತರ ಭಾರತಕ್ಕೆ ಹೋದನಂತರ ಅಲ್ಲಿಯೂ ಪ್ರಾರಂಭವಾಯಿತು.

ಈ  ಹಿರಿಯ ಭಕ್ತನು ೧೩೫೦ರಲ್ಲಿ ದೇಹವನ್ನು ಬಿಟ್ಟನು. ಆಗ ಅವನಿಗೆ ಎಂಬತ್ತು ವರ್ಷ. ಇಡೀ ಜೀವನವನ್ನು ವಿಠ್ಠಲನಿಗೆ ಅರ್ಪಿಸಿ ಇತರರಿಗೂ ಭಕ್ತಿಯ ದಾರಿಯನ್ನು ತೋರಿಸಿದ ದಿವ್ಯ ಜ್ಯೋತಿ ಅವನು.

ನಾಮದೇವನ ಅಭಂಗಗಳಲ್ಲಿ ಎರಡು ವಿಧ. ದೇವನನ್ನು ಕಾಣುವುದಕ್ಕೆ ಹಂಬಲಿಸಿದಂಥವು: ದೇವನನ್ನು ಪಡೆದ ತೃಪ್ತಿಯನ್ನು ಬಿಂಬಿಸಿದಂಥವು. ಈ ಎಲ್ಲಾ ರಚನೆಗಳ ಸಂಖ್ಯೆ ೨೩೭೫ ಎಂದು ಹೇಳುತ್ತಾರೆ.

ಹೇಳಿದ ವಿಷಯ ಹಾಗೂ ರೀತಿ

ಸಂತನುಜ ಕವಿಯೂ ಆಗಿರುತ್ತಾನೆ. ನಾವು ಹೇಗೆ ಬದುಕಬೇಕು ಎಂಬುವುದನ್ನುವಿವರಿಸಿ ಹೇಳುತ್ತಾನೆ. ತಾನು ಕಂಡ ಚೆಲುವನ್ನು ತನ್ನವರಿಗೆ ತೋರಿಸಿಕೊಟ್ಟಿದ್ದಾನೆ. ತಾನು ಉಂಡ ಸಂತೋಷವನ್ನು ತನ್ನವರಿಗೆ ಹಂಚಿಕೊಟ್ಟಿದ್ದಾನೆ:  ಉದಾ:

“ಬೀಜಾಚಿಯೇ ಪೋಟಿ ವಟಾಚಾ ವಿಸ್ತಾರ |
ಸರ್ವತೋ ಆಕಾರ ತುಝಾ ಆಸೆ ||
(ಬೀಜದ ಹೊಟ್ಟೆಯಲ್ಲಿಯೇ ಮರದ ವಿಸ್ತಾರವೆಲ್ಲ ಹುದುಗಿದೆ. ಕಾಣುವ ಆಕಾರವೆಲ್ಲ ನೀಣೇ ಆಗಿರುವಿ)

“ಸರ್ವ ಹಾ ಆಕಾರ ಹರಿಚೇ ಶರೀರ ||
ಓ(ಸರ್ವ ಕಾರವೆಂದರೆ ಶ್ರೀ ಹರಿಯ ಶರೀರ)
ಜಿಕಡೆ ಜಾವೇ ತಿಕಡೆ ಆವಷಾ ವಿಠೋಬಾ ||
(ಹೋದ ಹೋದಲ್ಲೆಲ್ಲ ವಿಠ್ಠಲನೇ ವಿಠ್ಠಲ)
“ಬಕಧ್ಯಾನ ಲಾವುನಿ ಟಾಳೀ | ಮೌನೇ ಧರುನಿ
ಮಾ ಸಾಗಿಳಿ ||
(ಮಾಡುವುದು ಬಕಧ್ಯಾನ, ಹಿಡಿಯುವುದು ಮತ್ಸ್ಯ ಮೀನ- ಎಂದರೆ ಹೊರಗೆ ಧ್ಯಾನದ ತೋರಿಕೆ, ನಿಜವಾಗಿ ತನ್ನ ಸ್ವಂತದ ಕೆಲಸ ಮೋಸ)

ಪ್ರಪಂಚದಲ್ಲಿ ಇರುವವರೆಗೆ ದೇವರಲ್ಲಿ ಮನಸ್ಸು ಇಡು ಎಲ್ಲ ಹೆಂಗಸರನ್ನೂ ತಾಯಿಯಂತೆ ಗೌರವಿಸು. ಹಣಕ್ಕೆ ಆಸೆ ಪಡಬೇಡ, ಅದನ್ನು ಮಣ್ಣೆಂದು ಕಾಣು.ದೇಹದ ಸುಖಕ್ಕೆ ಆಸೆ ಪಡಬೇಡ, ದೇಹವನ್ನು ಭಗವಂತನ ಧ್ಯಾನಕ್ಕೆ ಭಜನೆಗೆ, ಪೂಜೆಗೆ ಉಪಯೋಗಿಸು.

ಮಾತೆನ್ನುವುದು ಮನುಷ್ಯನ ಮಹತ್ ಭಾಗ್ಯ. ಪ್ರಾಣಿ ಗಳು ಮಾತನಾಡಲಾರವು. ಮನುಷ್ಯನಿಗೆ ಮಾತಿನ ಭಾಗ್ಯ ಇದೆ.ಮಾತು ಭಾಷೆಯಾಗಿ ಹೊರಬಿದ್ದು ಫಲವೇನು? ಮಾತಿನ ಸದುಪಯೋಗವಾಗಬೇಕು. ಹಾಗಾದರೆ ನಾಮ ಸ್ಮರಣೆ ಮಾಡು:ಕೀರ್ತನ ಹಾಡು, ರಾಮನಾಮ ಜಪಿಸು, ಭಕ್ತಿಯಿಲ್ಲದೆ ಮೋಕ್ಷ ಇಲ್ಲ, ಇಲ್ಲ, ಭಕ್ತಿನ್ನು ಪಡೆಯಲು ಏನು ಮಾಡಬೇಕು ? ದೇವನ ಬಗ್ಗೆ ಶ್ರದ್ದೇ ಬೇಕು. ಅದೇ ಏಕ ನಿಷ್ಠೆ. ಹೀಗೆ ನಾಮದೇವನು ಉಪದೆಶಿಸಿದನು.

ನಾಮದೇವನು ಅಧ್ಯಾಥ್ಮವಿದ್ಯೆಯ ಪ್ರಸಾರಕ್ಕಾಗಿ ರಚಿಸಿದ ಕೃತಿಗಳೂ ರಸಭರಿತವಾಗಿವೆ. ಅವುಗಳನ್ನು ಹೇಳುವ ರೀತಿಯೂ ಸಹ ಸೊಗಸಾಗಿದೆ. ದೇವನು ಎಲ್ಲೆಲ್ಲಿಯೂ ಇದ್ದಾನೆಂದೂ ಹೇಳುವಾಗ, ದೇವಾಲಯಕ್ಕೆಕೊಂಡೊಯ್ಯುವ ಹೂಗಂಪನ್ನು ಭ್ರಮರವು ಮೋದಲೇ ತೆಗೆದುಕೊಂಡಿರುತ್ತದೆ ಎನ್ನುತ್ತಾನೆ. ಇನ್ನೊಂದು ಕೆಡೆ ಕಲ್ಲಿನಮೇಲೆ ನಾವು ನಿಂತು ದೇವನನ್ನು ವಂದಸುವಗ ಸೋಪಾನದೇವನ ಮೇಲೆ ನಾವು ಕಾಲಿಡುತ್ತೇವೆ ಎನ್ನುತ್ತಾನೆ. ಹೀಗೆ ಅವನು ಹೇಳುವುದು ಮನಸ್ಸಿನಲ್ಲಿ ನಿಲ್ಲುವಂತೆ ಚಿತ್ರಗಳನ್ನು ಕೊಡಯತ್ತಾನೆ.

ದೇವನೆಂದರೆ  ಹಡೆದ ತಾಯಿ. ಗಾಳಿಯೂ ಅವನೇ. ನೀರು ಅವನೇ. ಮೊಟ್ಟೆಯೊಳಗಿನ ಮರಿಯೂ ಅವನೇ, ಜಿಂಕೆಯ ಮರಿಯೂ ಅವನೇ. ಇಂಥ ಉಪಮೆಗಳು ಸುಂದರ ವಾಗಿವೆ.

ಭಕ್ತರು ನಾಮದೇವನ ವಿಷಯವಾಗಿ ಹೇಳುವ ಹಲವು ಕಥೆಗಳನ್ನು  ಕೇಳಿದ್ದೇವೆ. ಇವೆಲ್ಲ ಅವನ ನಿಶ್ಚಲ ದೈವಭಕ್ತಿ. ಅವನ ನಮ್ರತೆ, ಒಬ್ಬರು ಹೆಚ್ಚು ಮತ್ತೊಬ್ಬರು ಕೀಳು ಎಂದು ಭಾವಿಸದೇ ಎಲ್ಲರನ್ನೂ ಒಂದೇಸಮ ಎಂದು ಕಾಣುವ ದೃಷ್ಟ ಇವನ್ನು ಎತ್ತಿ ತೋರಿಸುತ್ತವೆ. ನಾಮದೇವನ ಗುಣಗಳು, ಅವನ ವ್ಯಕ್ತಿತ್ವ ಮುಖ್ಯ.

ನಾಮದೇವ ವಿಠ್ಠಲನಿಗೆ ತನ್ನನ್ನು ಅರ್ಪಿಸಿಕೊಂಡು ಅವನಿಗಾಗಿಯಿಏ ಬದುಕಿದ ಎಂಬುವುದನ್ನು ಕಂಡಿದ್ದೇವೆ. ಈ ಭಕ್ತಿ ಅವನಲ್ಲಿ ವಿಶಾಲ ಮನೋಭಾವನೆಯನ್ನು ಉಂಟು ಮಾಡಿತು ಎಂಬುವುದು ಒಂದು ಮುಖ್ಯವಾದ ಸಂಗತಿ.  ಬೇರೆ ಬೇರೆ ಜಾತಿಗಳಲ್ಲಿ ಹುಟ್ಟಿದವರೆಲ್ಲ ದೇವರ ಸೇವೆಯಲ್ಲಿ ಸೋದರ ಸೋದರಿಯರಿಗಾಗಿ ನಡೆದುಕೊಂಡರು. ದೇವರ ಮಕ್ಕಳಲ್ಲಿ ಮೇಲು-ಕೀಳು ಭಾವನೆ ಇರಬಾರದು ಎಂದು ಕಂಡರು, ಅದರಂತೆ ಬದುಕಿದರು. ವಿಧರ್ಮಿಯರ ದಬ್ಬಾಳಿಕೆಯಿಂದ ಹಿಂದೂ ಧರ್ಮಕ್ಕೆ ಅಪಾಯ ಒದಗಿತ್ತು. ಇಂತಹ ಸಮಯದಲ್ಲಿ ಕೆಲವು ಹಿಂದೂಗಳು ತಾವು ಮೇಲಿನವರು ಎಂದು ಅಹಂಕಾರ ಪಡುತ್ತಿದ್ದರು. ಇತರರನ್ನು ಕೀಳಾಗಿ ಕಾಣುತ್ತಿದ್ದರು.  ಕೆಳಗೆ ಉಳಿದವರಿಗೆ ಬೇಸರ ಆಗುವುದು ಸಹಜ ತಾನೇ? ನಾಮದೇವರು ಭಕ್ತರೆಲ್ಲ ಒಂದೇ ಸಮ ಎಂದು ಸಾರಿ, ಅದರಂತೆ ನಡೆದ. ಯಾರೂ ಹಿಂದು ಧರ್ಮ ಬಿಡುವ ಅಗತ್ಯ ಬರಲಿಲ್ಲ.

ಮನುಷ್ಯರಲ್ಲಿ ದೇವರ ಅಂಶ ಇದೆ ಎಮದು ಅರ್ಥ ಮಾಡಿಕೊಂಡು ಹಾಗೆ ನಡೆಯುವುದು ಬಹು ದೊಡ್ಡ ವಿಷಯವೇ. ನಾಮದೇವ ಈ ವಿಷಯದಲ್ಲಿ ಇತರರಿಗೆ ಮೇಲ್ಪಂಕ್ತಿಯಾದ. ನಾಯಿಯಂತಹ  ಪ್ರಾಣಿಯಲ್ಲಿಯೂ ದೇವರ ಅಂಶವನ್ನು ಕಂಡ ಮಹಾತ್ಮ ಇವನು.

ಇನ್ನು ಅವರ ಅಭಂಗಗಳಲ್ಲಿ ಕಂಡು ಬರುವ ಸಲಿಗೆಯ ಶೈಲಿಯ ಒಂದು ಮಾದರಿಯನ್ನಾದರೂ ತಿಳಿಯಬೇಕು, ಅಲ್ಲವೇ?

ಸಂತ ನಾಮದೇವ ‘ಪತಿತ ಪಾವನ ನಾಮ ಐತುನಿ’ ಎಂಬ ಅಭಂಗವನ್ನು ಕನ್ನಡದ ಹಿರಿಯ ಕವಿ ದತ್ತಾತ್ರೆಯ ರಾಮಚಂದ್ರ ಬೇಂದ್ರ ಅವರು ಹೀಗೆ ಭಾಷಾಂತರ ಮಾಡಿದ್ದಾರೆ:

ಪತಿತಪಾವನ ಎಂದು ಬಾಗಿಲಿಗೆ ಬಂದೇ ವಿಠ್ಠಲರಾಯ
ಪತಿತಪಾವನನು ಆಗಲೊಲ್ಲಿನೀ ತಿರುಗಿ ನಡೆದೆ ಜೀಯ ||

ಭೀಕ್ಷೆಗೆ ಬಂದರೆ ಎಂಜಲದಗುಳನು ಕೊಡಗುಣ ಮಂಡಿತನು
ಲಕ್ಷ್ಮೀ ರಮಣನು ನಿನಗೆಂದವನು ಅದಾವ ಪಂಡಿತನು ||

ಕೊಟ್ಟವರಿಗೆ ನಾಕೊಡುವೆನೆನ್ನುವಿ ಹೇ ಪರಮೋದರಾ
ಕಟ್ಟಿದ ಹೊಸ್ತಿಲ ಬಿಟ್ಟು ಎದ್ದೇನಾ ನೀ ಹುಟ್ಟಾಚಿನಿವಾರ ||

ಯಾರಿಗೆ ಯಾರೂ ಇರಲಿ ಬರುವೇನಾನೆನ್ನುವನೀ ನಾಮ
ಆರಿದ ಹೃದಯದಿ ವಾರಿಯಂತಿರಲಿ ತವಪಾದ ಪ್ರೇಮ ||