ನಾಯಿ ಬಂದಿತ್ತಯ್ಯ ಮನುಜ ಎಚ್ಚರ
ನಾಯಿ ಎಂದರೆ ನಾಯಿಯಲ್ಲಾ ಜ್ಞಾನವಿಲ್ಲದ
ಹೇಸನಾಯಿ || ಪ ||
ಕೊಟ್ಟ ಸಾಲವ ಕೊಡದವ ನಾಯಿ ಕೆಟ್ಟ ಯೋಚನೆ
ಮಾಡುವ ನಾಯಿ ಕಟ್ಟೆಯೇರಿ ಮೇಲೆ ಕುಳಿತು
ನಿತ್ಯ ಬೊಗಳುವ ಹುಚ್ಚುನಾಯಿ || ಪ ||
ಪಟ್ಟ ಹೆಂಡತಿ ಬಿಟ್ಟ ನಾಯಿ | ಪರಮಸತಿಯನು
ಕೂಡಿದ ನಾಯಿ | ಬ್ರಹ್ಮನಿಂದ
ಕೆಟ್ಟು ಹೋಗುವ ಭ್ರಷ್ಟನಾಯಿ || ಪ ||
ನಮ್ಮ ಪುರಂದರ ವಿಠಲನ ಸ್ತುತಿಸುವ ನಾಮ || ಪ ||
Leave A Comment