ಪ್ರೇಮದೊಳಾರಾಧಿಸೆ ದೇವರ, ಈ ಜಪತಪವಿನ್ನೇಕೆ ?
ಪ್ರೇಮದೊಳಾರಾಧಿಸದಿದ್ದರೆ, ಜಪತಪವಿನ್ನೇಕೆ?
ಒಳ ಹೊರಗೂ ಆತನೆ ಕಾಣಲು ಈ ಜಪತಪದಿಂದೇನು ?
ಒಳ ಹೊರಗೂ ಆತನ ಕಾಣದ ಈ ಜಪತಪದಿಂದೇನು ?

ಓ ಮಗು, ಪರಬ್ರಹ್ಮಾ, ನಿನ್ನೀ ಜಪತಪವನು ನಿಲಿಸೋ !
ಜ್ಞಾನಸಿದ್ಧ ಶ್ರೀ ದ್ವಿಜವರ ಶಂಕರನೆಡೆ ನಡೆಯೋ.
ಭವ-ನಿಗಳ-ನಿಬಂಧಚ್ಛೇದನ-ಕಾರಣ-ಶಕ್ತಿಯನು
ಪಡೆ ಅವನಿಂದಲೆ ವೈಷ್ಣವೋಕ್ತ ಹರಿಭಕ್ತಿಯನು !