ಹಾಸೋ ಹಾಸಿನ ಮೇನೆ ಹಾಸಿದಲೇ ಗದ್ದಿಗೆಯ
ಲೇಸಾ ಮಾಡಿದಳೆ ತಲೆದಿಂಬಾ
ಲೇಸಾ ಮಾಡಿದಳೆ ತಲೆದಿಂಬಾ ರೋಪತಿ
ತಾನೂ ದೊಡ್ಡವರಾ ಮಗಳಂದಿ
ತಾನೂ ದೊಡ್ಡವರಾ ಮಗಳಂದಿ ರೋಪತಿ
ಹಾಸನ ಮೆನೋಗಿ ಒರೂಗಾಳೆ
ಹಾಸನ ಮೆನೋಗಿ ಒರುಗಾಳೆ ರೋಪತಿ

ಕಂಡಳೆ ಸಂಗ್ರಮದಾ ಕನಸೊಂದು
ಕನಸಾ ಕಂಡಾಳೆ ಮನಸಿಲಿ ನೆನಸಿಟ್ಟಾಳೆ
ಮಯ್ಯಾ ಮುರುದೆದ್ದಿ ಕುಳೂತಾಳೆ
ಮಯ್ಯಾ ಮುರುದೆದ್ದಿ ಕುಳಂತಾಳೆ ರೂಪತಿ
ಮಾಳಗ್ಗಿಂದೆರಗೆ ಬರೋವಾಳೆ
ಮಾಳಗ್ಗಿಂದೆರಗೆ ಬರುವಾಳು ರೋಪತಿ

ಪನ್ನೀರಲಿ ಮೊಕವಾ ತೊಳದಾಳೆ
ಪನ್ನೀರಲಿ ಮೊಕವಾ ತೊಳದಾಳೆ ರೋಪತಿ
ಮಾಳೂಗಿ ಒಳಗೆ ನೆಡದಾಳೆ
ಮಾಳೂಗಿ ಒಳಗೆ ನೆಡದಾಳೆ ರೋಪತಿ
ಪನ್ನೀರಾ ಗಿಂಡೀ ಮಡೋಗಾಳೆ
ಪನ್ನೀರಾ ಗಿಂಡಿ ಮಡಗಾಳೆ ರೋಪತಿ

ಹಿಂದನ ಬಾಗಿಲಾಗೇ ನೆಡದಾಳೆ
ಹಿಂದನ ಬಾಗಿಲಾಗೇ ನೆಡದಾಳೆ ರೋಪತಿ
ಅತ್ತಿಯರ ಮನಗೇ ನೆಡದಾಳೆ
ಅತ್ತಿಯರ ಮನಗೇ ನೆಡದಾಳೆ ರೋಪತಿ

ಹೋಗಿ ಬಾಗಲ್ಲಿ ನಿಲೂವಾಳು
ಹೋಗಿ ಬಾಗಲ್ಲಿ ನಿಲುವದ್ನು ಅತ್ ಕುಂತಿ
ಮಾಳಗ್ಗಿಂದೆರಗೇ ಬರೋವಾಳೆ
ಮಾಳಗ್ಗಿಂದೆರಗೇ ಬರುವದ್ನು ರೋಪತಿ
ತೂಗು ಮಂಚದಲೆ ಕುಳತಾಳೆ
ತೂಗು ಮಂಚದಲೆ ಕುಳತಾಳೆ ರೋಪತಿ
ಲಾಗೊಂದು ಮಾತಾ ನುಡದಾಳೆ

“ನಾಕು ಕಳಸಾ ಕಂಡೆ ನಾಕು ಕನ್ನುಡಿ ಕಂಡೆ
ನೀಲಾನಂಬು ಚೇಜೀ ಇರಳೆ ಕಂಡೆ
ನೀಲಾನಂಬು ಚೇಜಿ ಇರಳೆ ಕಂಡೆ ಅತ್ತಿಯರೆ
ನಾ ಕಂಡಾ ಕನಸಾ ಒರಿಯಾ- ಬಂದೆ”

“ನಾಕು ಕಳಸಂಬದು ನಾಕು ತಂಗೀದೀರೇ
ನೀಲಾನಂಬ ಚೇಜೀ ಪುರಿಸಾನೆ
ನೀಲಾನಂಬ ಚೇಜೀ ಪುರಿಸಾನೆ ರೋಪತಿ
ನೀ ಕಂಡ ಕನಸು ಹುಸಿಯಲ್ಲಾ”
“ತಂದಾ ಹೆಂಡಾರು ತಂದಾಂಗೇ ಇರುತಲಾಗಿ
ಮತ್ತ ನಿಮ್ಮಗ್ಗೆಂತಾ ಮದವೀಯೇ ”

“ಮಾತ ಕಲ್ತರಜೀಣ್ಣಾ ಹೆತ್ತೇಣ್ಣಾ ತರುವಾನೇ
ಮತ್ತೇ ಅರ‍್ಜೀಣ್ಗೆ ಹಳುವಿಲ್ಲಾ ”
ಅಟ್ಟಂಬಾ ಮಾತಾ ಕೇಳಾಳೆ ರೋಪತಿ
ಬಾವಾನಗರ ಮನಗೇ ನೆಡದಾಳೆ ರೋಪತಿ
ಹೋಗಿ ಬಾಗಲ್ಲೇ ನಿಲೋವಾಳು
ಹೋಗಿ ಬಾಗಲ್ಲೆ ನಿಲುವುದ್ನು ಒಳಗಿದ್ದಾ

ಬಾವಾನು ಹೆರುಗೇ ಬರೋವಾನೆ
ಬಾವಾನು ಹೆರುಗೇ ಬರುವದ್ನು ರೋಪತಿ
ಆಗೊಂದು ಮಾತಾ ನುಡೀದಾಳೆ
“ನಾಕು ಕಳಸಾ ಕಂಡೆ ನಾಕು ಕನ್ನುಡಿ ಕಂಡೆ
ನೀಲಾನಂಬ ಚೇಜಿ ಇರುಳೆ ಕಂಡೆ

ನೀಲಾನಂಬು ಚೇಜಿ ಇರುಳೆ ಕಂಡೇ ಬಾವಾನೋರೆ
ನಾ ಕಂಡಾ ಕನಸಾ ಒರಿಯಾ- ಬಂದೇ”
ನಾಕು ಕೆಲಸಂಬುದು ನಾಲ್ವರು ತಂಗೀದೀರೆ
ನೀಲಾನಂಬ ಚೇಜಿ ಪುರಿಸನೆ
ನೀಲಾನಂಬ ಚೇಜಿ ಪುರಿಸನೆ ರೋಪತಿ
ನೀ ಕಂಡ ಕನಸು ಹುಸಿಯಿಲ್ಲ

ಅಟ್ಟಂಬಾ ಮಾತಾ ಕೇಳಿದಳೆ ರೋಪತಿ
ಸಿಟ್ಟಿನಲ್ಲೆದ್ದಿ ಬರೋವಾಳೆ
ದಿಡದಿಡನೆ ಸೀತೇ ನೆಲವೇ ಜಂತರಸೀತೇ
ಎಡಗೀದಾ ಬೆರಳು ಅರಿಯಾವೇ
ಎಡಗೀದಾ ಬೆರಳು ಅರಿಯಾವೇ ರೋಪತಿ
ತನ್ನಲರಮನಗೇ ಬರೋವಾಳು
ತನ್ನಲರಮನಗೇ ಬರೋವಾಳೆ ರೋಪತಿ

ಸಾದೆವನೊಡನೋಗಿ ನಿಲೋವಾಳೆ
ಸಾದೇವ ನೋಡನೋಗಿ ನಿಲುವಾಳು ರೋಪತಿ
ಆಗೊಂದು ಮಾತಾ ನುಡೀದಾಳೆ
“ಕಾಲು ಮೊರಿಯ ತೊಳಿಯೋ ಹಾಲುಗಂಜಿಯನ್ನುಣ್ಣೋ ”
ಬೂಮುದೇವತಗೆ ಸರಣನ್ನೋ
ಬೂಮು ದೇವತೆಗೆ ಸರಣನ್ನೋ ಸಾದೇವಾ
ಓಲೆ ಒತ್ತಗೀಯಾ ಬಿಡಿ .ಸೋ.ದೋ”.

ಕಾಲು ಮೊರಿಯ ತೊಳದಾ ಹಾಲು ಗಂಜಿಯನುಂಡಾ
ಬೂಮುದೇವತೆಗೆ ಸರಣಂದಾ
ಬೂಮು ದೇವತೆಗೆ ಸರಣಂದಾ ಸಾದೆವಾ
ಓಲೆ ಒತ್ತಗಿಯಾ ಬಿಡಸಾನೆ
ಓಲೆ ಓದುತ್ತೇ ಅತ್ತಗಿಮೊರಿನೋಡುತೆ
ಪನ್ನೀ ಮರಿಯಲ್ಲೆ ಮುಗುಳುನೆಗ್ಗಿ
ಪನ್ನೀ ಮರಿಯಲ್ಲೆ ಮುಗುಳುನೆಗ್ಗಿ ಆಡೀತಾ

ಅತ್ತುಗಿಗೆ ಬುದ್ಧೀ ಒರದಾನೆ.
ಅತ್ತುಗಿಗೆ ಬುದ್ಧೀ ಏನಂದೀ ಒರುದಾನೆ
“ಅಣ್ಣಾ ನಾಲ್ವರಾ ತರೋತಾನೆ
ಬೆಟ್ಟದ ನೆಲ್ಲಿಕಾಯಾ ಹೊರೂಸ್-ಹೋಗೇ
ಬೆಟ್ಟದ ನೆಲ್ಲಿಕಾಯಾ ಹೊರ‍್ಸೋಗೇ ಅತ್ತೀಗೆ
ಚಪ್ಪರಕೊಪ್ಪಾಗಿ ಹರಗೀಸೇ”.
ಅಟ್ಟಂಬಾ ಮಾತಾ ಕೇಳಾನೆ ಅರಜೀಣಾ

ಕೂತ ಮಂಚವ ಓಡೂದೆದ್ದೇ.
ಕೂತ ಮಂಚವ ಜಡೂದೆದ್ದೇ. ಅರಜೀಣಾ
ಮಾಳೂಗಿ ಒಳಗ್ಯೆ ನೆಡದಾನೆ.
ಮಾಳೂಗಿ ಒಳಗೆ ನೆಡದಾನೆ ಅರಜೀಣಾ
ಪೆಟ್ಟೂಗೀ ಬಾಯಾ ತೆಗೆದಾನೆ
ಪೆಟ್ಟೂಗೀ ಬಾಯಾ ತೆಗೆದಾನೆ ಅರಜೀಣಾ

ಮುಚ್ಚೀಲ ತಗದಿ ಕಡ ಗಿರುಸೀ
ಮುಚ್ಚೀಲಾ ತಗದಿ ಕಡಗಿರುಸಿ ಅರಜೀಣಾ
ಪಟ್ಟೇ ಜೋತುರವಾ ನೆರದುಟ್ಟೀ
ಪಟ್ಟೆ ಜೋತುರವಾ ನೆರದುಟ್ಟೀ ಅರಜೀಣಾ
ಕೋಲು ನೆವಳವಾ ಇಳಲಿಟ್ಟೆ
ಕೋಲು ನೆವಳವಾ ಇಳಲಿಟ್ಟೆ ಅರಜೀಣಾ

ಮುತ್ತನ ಮುಂಡಸನಾ ತಲಗ್ ಸುತ್ತಿ
ಮುತ್ತನ ಮುಂಡಸನಾ ತಲಗ ಸುತ್ತಿ ಅರಜೀಣಾ
ಬೆರಳೀ ಗುಂಗೀಲವಾ ಇಡೋವಾನೆ
ಬೆರಳೀ ಗುಂಗಲವಾ ಇಡೋವಾನೆ ಅರಜೀಣಾ
ಬಾಸಿಂಗಾ ಒಂದಾ ತಡೀದಾನೆ
ಬಾಸಿಂಗಾ ಒಂದಾ ತಡಿದಾನೆ ಅರಜೀಣಾ

ನಾಕು ತಂಡಲವಾ ತಡೀದಾನೆ
ನಾಕು ತಂಡಲವಾ ತಡಿದಾನೆ ಅರಜೀಣಾ
ನಾಕು ತಳಿಬಂದೀ ತಡೀದಾನೆ
ನಾಕು ತಳಿ ಬಂದೀ ತಡಿದಾನೆ ಅರಜೀಣಾ
ಅದು ಎಲ್ಲಾ ಸೆಳ್ಳು ಗರೀಲಡಗೀಸಿ
ಅದು ಎಲ್ಲಾ ಸೆಳ್ಳು ಗರೀಲಡಗಿಸಿ ಅರಜೀಣಾ

ಪೆಟ್ಟುಗಿ ಬಾಯಾ ಮಡಗಾನೆ
ಪೆಟ್ಟುಗಿ ಬಾಯಾ ಮಡಗಾನೆ ಅರಜೀಣಾ
ಮಾಳಗ್ಗಿಂದೆರಗೇ ಬರೋವಾನೆ
ಮಾಳಗ್ಗಿಂದೆರಗೇ ಬರೋವಾನೆ ಅರಜೀಣಾ
ರಾಜಂಗ್ಳ ಮೆಟ್ಟಾ ಇಳೀದಾನೆ
ರಾಜಂಗಳ ಮೆಟ್ಟಾ ಇಳಿದಾನೆ ಅರಜೀಣಾ

ಬೋರಿನೇ ರತವಾ ನೆಗದತ್ತೀ
ಬೋರೀನೇ ರತವಾ ನೆಗದತ್ತೀ ಅರಜೀಣಾ
ತನ್ನಾ ರಾಜ್ಯಾನೇ ಗಳೀದಾನೆ
ತನ್ನಾ ರಾಜ್ಯಾನೇ ಗಳೀದಾನೆ ಅರಜೀಣಾ
ಮೂಡನ ರಾಜೀಕೇ ನೆಡದಾನೆ
ಮೂಡನ ರಾಜೀಕೇ ನೆಡದಾನೆ ಅರಜೀಣಾ

ಬೋರೀನೆ ರತವಾ ಇಳೀದಾನೆ
ಮೂಡನ ರಾಜೀಕೋಗಿ ಮೂಡನ ತೀರಿತಾ ಮಿಂದೀ
ಮೂಡನರ ಬಾಸೀ ಕಲೀತಾನೆ
ಮೂಡನರ ಬಾಸೀ ಕಲಿತಾನೆ ಅರಜೀಣಾ
ಮೂಡನ ಪಪ್ಪಳಿಯಾ ದರೂಸಾನೆ
ಮೂಡನ ಪಪ್ಪಳಿಯಾ ದರಸ್ವದ್ನು ಅರಜೀಣಗೆ

ಮೂಡಣ ರಜಿಣರು ಮಗಳಾ ಕೊಡುತ್ತೇ
ಮೂಡಣರಜಿಣರು ಮಗಳಾ ಕೊಡುತೆ ಅಂಬುದುನು
ಅಲ್ಲೊಂದು ತಾಳೀ ಬಂದೀ ಕೊಡೋವಾನೇ
ಅಲ್ಲೊಂದ್ ತಳಿಬಂದೀ ಕೊಡುವಾನೇ ಅರಜೀಣಾ
ಅಲ್ಲೊಂದ್ ಪಟ್ಟೀ ಕೊಡೋವಾನೇ
ಅಲ್ಲೊಂದ್ ಪಟ್ಟೀ ಕೊಡೋವಾನೇ ಅರಜೀಣಾ

ಅಲ್ಲೊಂದ್ ತಂಡಲವಾ ಕೊಡೋವಾನೇ.
ಅಲ್ಲೊಂದ್ ತಂಡಲವಾ ಕೊಡೋವಾನೇ ಅರಜೀಣಾ
ಅಲ್ಲೊಂದು ಕನ್ನೀ ಕಯದಾರಿ
ಅಲ್ಲೊಂದು ಕನ್ನೀ ಕಯ್ದಾರಿ ಅರಜೀಣಾ

ತೆಂಕಣ ರಾಜೀಕೇ ನೆಡದಾನೇ.
ತೆಂಕಣ ರಾಜೀಕೋಗಿ ತೆಂಕನ ತೀರುತಾಮಿಂದೀ
ತೆಂಕನರ ಬಾಸೀ ಕಲೂತಾನೇ
ತೆಂಕನರ ಬಾಸೀ ಕಲತಾನೆ ಅರಜಿಣಗೆ
ತೆಂಕಣರಜಿಣರು ಮಗಳಾ ಕೊಡೂತೇ
ತೆಂಕಣರಜಿಣರು ಮಗಳಾ ಕೊಡುತೆ ಅಂಬುದನು

ಅಲ್ಲೊಂದು ಪಟ್ಟೀ ಕೊಡೋವಾನೇ
ಅಲ್ಲೊಂದು ಪಟ್ಟೀ ಕೊಡೋವಾನೇ ಅರಜೀಣಾ
ಅಲ್ಲೊಂದು ತಳಿ ಕೊಡೋವಾನೇ
ಅಲ್ಲೊಂದು ತಳಿ ಕೊಡೋವಾನೇ ಅರಜೀಣಾ
ಮುತ್ತನ ತಂಡಲವಾ ಕೊಡೋವಾನೇ
ಮುತ್ತನ ತಂಡಲವಾ ಕೊಡೋವಾನೇ ಅರಜೀಣಗೇ

ಅಲ್ಲೊಂದು ಕನ್ನೀ ಕಯದಾರಿ
ಅಲ್ಲೊಂದು ಕನ್ನೀ ಕಯ್ದಾರಿ ಅರಜೀಣಾ
ಬಡಗನ ರಾಜೀಕೇ ನೆಡದಾನೆ
ಬಡಗನ ರಾಜೀಕೋಗಿ ಬಡಗನ ತೀರುತಾಮಿಂದೀ
ಬಡಗನರ ಬಾಸೀ ಕಲೋತಾನೆ
ಬಡಗನರ ಬಾಸೀ ಕಲೋತಾನೆ ಅರಜಿಣಗೆ

ಬಡಗನರಜಿಣರು ಮಳಾ ಕೊಡುತೆ
ಬಡಗನರಜಿಣರು ಮಗಳಾ ಕೊಡುತೆ ಅಂಬದನು
ಅಲ್ಲೊಂದು ಪಟ್ಟೀ ಕೊಡೋವಾನೇ
ಅಲ್ಲೊಂದು ಪಟ್ಟೀ ಕೊಡೋವಾನೇ ಅರಜೀಣಾ
ಅಲ್ಲೊಂದು ತಳಿಬಂದೀ ಕೊಡೋವಾನೇ
ಅಲ್ಲೊಂದು ತಳಿಬಂದೀ ಕೊಡೋವಾನೇ ಅರಜೀಣಾ

ಅಲ್ಲೊಂದು ತಂಡಲವಾ ಕೊಡೋವಾನೇ
ಅಲ್ಲೊಂದು ತಂಡಲವಾ ಕೊಡೋವಾನೆ ಅರಜೀಣಗೆ
ಅಲ್ಲೊಂದು ಕನ್ನಿ ಕಯದಾರಿ
ಅಲ್ಲೊಂದುದು ಕನ್ನೀ ಕಯ್ದಾರಿ ಅರಜೀಣಾ

ಪಡುಗನ ರಾಜೀಕೆ ನೆಡದಾನೆ
ಪಡುಗನ ರಾಜೀಕೋಗಿ ಪಡುಗನ ತೀರುತಾಮಿಂದೀ
ಪಡುಗನರ ಬಾಸೀ ಕಲೋತಾನೆ
ಪಡುಗನರ ಬಾಸೀ ಕಲೋತಾನೆ ಅರಜೀಣಾ
ಪಡುಗನರ ಪಪ್ಪಾಳಿಯ ದರೂಸಾನೆ
ಪಡುಗನರ ಪಪ್ಪಾಳಿಯ ದರೂಸಾನೆ ಅರಜಿಣಗೆ
ಪಡುಗನರಜಿಣರು ಮಗಳಾ ಕೊಡುತೆ
ಪಡುಗನರಜಿಣರು ಮಗಳಾ ಕೊಡುತೆ ಅಂಬುದ್ನು

ಅಲ್ಲೊಂದು ಸಾಲೀ ಕೊಡೊವಾನೇ
ಅಲ್ಲೊಂದು ಸಾಲೀ ಕೋಡೋವಾನೇ ಅರಜೀಣಾ
ಅಲ್ಲೊಂದು ತಂಡಲವಾ ಕೊಡೋವಾನೇ
ಅಲ್ಲೊಂದು ತಂಡಲವಾ ಕೊಡೋವಾನೇ ಅರಜೀಣಾ
ಅಲ್ಲೊಂದು ತಳಿಬಂದೀ ಕೊಡೋವಾನೇ
ಅಲ್ಲೊಂದು ತಳಬಂದೀ ಕೊಡೋವಾನೇ ಅರಜಿಣಗೆ
ಅಲ್ಲೊಂದು ಕನ್ನೀ ಕಯೋದಾರಿ

ನಾಕು ರಾಜೀಕೋಗಿ ನಾಕು ತೀರುತಾಮಿಂದೀ
ನಾಕೂರಾಬಾಸೀ ಕಲತಾನೆ
ನಾಕೂರು ಬಾಸೀ ಕಲತಾನೆ ಅರಜೀಣಾ
ನಾಕೂರಾಕನ್ನೀ ಒಡಗುಂಡೀ.

ಆಊರಕ್ಕಿ ಕೊಂಡಾ ಆ ಊರ್ ಬೆಲ್ಲಾ ಕೊಂಡಾ
ರಾಜಮಾರ್ಗದಲ್ಲೆ ಒಲೀ ಹೂಡೇ
ರಾಜ ಮಾರ್ಗಲ್ಲೇ ಒಲಿಹೂಡವರಯ್ವರ‍್ರು
ಅಡಗೀ ಮಾಡುಂಡಾರೊಂದು ಗಳಗ್ಯಲೆ
ಅಡಗೀ ಮಾಡುಂಡಾರೊಂದು ಗಳಗ್ಯಲವರಯ್ವರು

ಬೋರೀನೇ ರತವಾ ನೆಗದತ್ತೇ
ಬೋರೀನೇ ರತವಾ ನೆಗದತ್ತೇ ಅವರಯ್ವರು
ರಾಜಾಬೀದಿಗಾಗೇ ಬರೋವಾರೇ
ರಾಜಾಬೀದಿಗಾಗೇ ಬರೂವಾರೇ ಅವರಯ್ವರು

ತಮ್ಮಾಲರಮನಗೇ ಬರೋವಾರೇ
ತಮ್ಮಾಲರು ಮನಗೇ ಬರುವಾರೇ ಅರಜಿಣಾ
ಈಳ್ಳೀಯಾ ಬನಕೇ ಬರೋವಾನೇ
ಈಳ್ಳೀಯ ಬನದಲ್ಲಿ ಇಳ್ಳಿಯ ನಿಲ್ಲಸಗಿ
ಈಳ್ಳೀ ಹಣ್ಣೇಳಾ ಮೆಲ ಕೊಟ್ಟೀ

ಬಾಳಿಯ ಬನದಲ್ಲಿ ಬಾಮಿಯ ನಿಲ್ಲಸಗೀ
ಬಾಳೀ ಹಣ್ಣೇಳಾ ಮೆಲಕೊಟ್ಟೀ
ಕಂಚೀ ಬನದಲ್ಲಿ ಕೆಂಚಿಯ ನಿಲ್ಲಸಗೀ
ಕಂಚೀ ಹಣ್ಣೇಳಾ ಮಲಕೊಟ್ಟೀ
ನಿಂಬಿ ಬನದಲ್ಲಿ ರಂಬಿಯ ನಿಲ್ಲಸಗಿ
ನಿಂಬೀ ಹಣ್ಣೇಳಾ ಮೆಲಕೊಟ್ಟೀ.
ನಿಂಬೀ ಹಣ್ಣೇಳಾ ಮೆಲಕೊಟ್ಟೇ, ಅರಜೀಣಾ
ಬಂದೀ ಬಾಗಲ್ಲೇ ನಿಲೋವಾನೇ

“ಯಾರೆ ಅಕ್ಕದೀರು ಯಾರೇ ತಂಗಾದೀರು
ಯಾರೇ ಈ ಮನಗೆ ಹಿರಿಯೋಳು.
ಯಾರೇ ಈ ಮನಗೆ ಹಿರಿಯೋಳು ರೋಪತಿ
ತಾರೇ ಒಂದ್ ಚಂಬ ಉದಕವಾ”
“ಒಂದು ಚಂಬುದಕಾ ಇಲ್ಲೆರು ಕೊಡೂವಾರು
ಕೊಡುವಾರು ಬಾಳೀ ಬನದಲ್ಲಿ
ಕೊಡುವಾರು ಬಾಳೀ ಬನದಲ್ಲಿ ಹೋದಾರೇ

ಅಲ್ಲೊಂದ್ ಚಂಬುದಕಾ ಕೊಡುವಾರು
ಒಂದು ಚಂಬುದಕಾ ಇಲ್ಲೇರು ಕೊಡುವಾರು
ಕೊಡುವಾರು ಈಳೀ ಬನದಲ್ಲಿ
ಕೊಡುವಾರು ಈಳೀ ಬನದಲ್ಲಿ ಹೋದಾರೇ
ಅಲ್ಲೊಂದ್ ಚಂಬುದಕಾ ಕೊಡುವಾರು.
ಒಂದು ಚಂಬುದಕಾ ಇಲ್ಲೇರು ಕೊಡುವಾರು

ಕೊಡುವಾರು ಕಂಚಿಬನದಲ್ಲಿ
ಕೊಡುವಾರು ಕಂಚಿ ಬನದಲ್ಲಿ ಹೋದಾರೇ
ಅಲ್ಲೊಂದ್ ಚಂಬುದಕಾ ಕೊಡುವಾರು.

ಒಂದು ಚಂಬುದಕಾ ಇಲ್ಲೇರು ಕೊಡುವಾರು
ಕೊಡುವಾರು ನಿಂಬೀ ಬನದಲ್ಲಿ
ಕೊಡುವಾರು ನಿಂಬೀ ಬನದಲ್ಲಿ ಹೋದಾರೆ
ಅಲ್ಲೊಂದ್ ಚಂಬುದಕಾ ಕೊಡೋವಾರು”
ಅಟ್ಟಂಬಾ ಮಾತಾ ಕೇಳಾನೆ ಅರಜೀಣಾ

ಕವ್ಲೀ ಕೊಟ್ಟಗ್ಗೇ ನೆಡದಾನೆ
ಕವ್ಲೀ ಕೊಟ್ಟಗ್ಗೇ ನೆಡದಾನೆ ಅರಜೀಣಾ
ಕವ್ಲಿಯಾ ಬಿಟ್ಟೇ ಹೊಡದಾನೆ
ಕವ್ಲಿಯಾ ಬಿಟ್ಟೀ ಹೊಡದಾನೆ ಅರಜೀಣಾ
ಹೊಂಗಿನಕ್ಕಲಗೇ ಹೊಡದಾನೆ
ಹೊಂಗಿನಕ್ಕಲಗೇ ಹೊಡದಾನೆ ಅರಜೀಣಾ
ಆಗೊಂದು ಮಾತಾ ನುಡೀದಾನೆ

“ಯಾರೇ ಅಕ್ಕದೀರು ಯಾರೇ ತಂಗಾದೀರು
ಯಾರೇ ಈ ಮನಗೇ ಹೆರಿಯೋಳು
ಯಾರೇ ಈ ಮನಗೇ ಹೆರಿಯೋಳು ರೋಪತಿಯಾ
ಹೂಂವ್ಹಿಂನಕ್ಲೆಲ್ಲಾ ದನ ಮಿಂತು”
ಅಟ್ಟಂಬಾ ಮಾತಾ  ಕೇಳಾಳೆ ರೋಪತಿ
ಮಾಳಗ್ಗಿಂದೆರಗೇ ಬರೋವಾಳೆ
ಮಾಳಗ್ಗಿಂದೆರಗೇ ಬರೋವಳೆ ರೋಪತಿ

ಕವ್ಲೀಯ ಕೊಟ್ಟಗ್ಗೇ ಹೊಡದಾಳೆ
ಕವ್ಲೀಯ ಕೊಟ್ಟಗ್ಗೇ ಹೊಡದಾಳೆ ರೋಪತಿ
ಮಾಳೂಗಿ ಒಳಗೇ ನೆಡದಾಳೆ
ಮಾಳೂಗಿ ಒಳಗೆ ನೆಡುವದ್ನು ಅರಜೀಣಾ
ಬಾಳೀಯಾ ಬನಕೇ ನೆಡದಾನೆ
ಬಾಳೀಯಾ ವನದಲ್ಲಿ ಬಾಮಿಯ ಕರಕಂಡೀ

ಕಂಚೀಯ ವನಕೆ ನೆಡದಾನೆ
ಕಂಚೀಯ ವನದಲ್ಲಿ ಕೆಂಚಿಯ ಕರಕಂಡೀ
ಈಳೀಯ ವನಕೆ ನೆಡದಾನೆ
ಈಳೀಯ ವನದಲ್ಲಿ ಈಳೀಯ ಕರಕಂಡಿ

ನಿಂಬಿಯ ವನಕೆ ನೆಡದಾನೆ
ನಿಂಬಿಯ ವನದಲ್ಲಿ ರಂಬೆಯ ಕರಕಂಡಿ
ಬಂದೀ ಬಾಗಲ್ಲೇ ನಿಲೋವಾನೇ
ಬಂದೀ ಬಾಗಲ್ಲೇ ನಿಲುವುದ್ನು ರೋಪತಿ
ಒಂದು ಚಂಬುದಕಾ ತರೋವಾಳೆ
ಒಂದು ಚಂಬುದಕಾ ತರೋವಾಳೆ ರೋಪತಿ

ಅರಜೀಣಗೆ ಉದಕಾ ಕೊಡೋವಾಳು
ಅರಜೀಣಗೆ ಉದಕಾ ಕೊಡುವುದ್ನು ಅವರಯ್ವರು
ಕಾಲಾ ಸಿರಿಮೊಕವಾ ತೊಳದಾರೆ
ಕಾಲಾ ಸಿರಿಮೊಕವಾ ತೊಳದಾರೆ ಅವರಯ್ವರು
ಮಾಳೂಗೀ ಒಳಗೆ ನೆಡದಾರೆ
ಮಾಳೂಗಿ ಒಳಗೆ ನೆಡವದ್ನು ರೋಪತಿ

ಹಸವೀಗ್ ಹಾಲ್ಗಂಜಿ ಬಡಸಾಳೆ
ಹಸವೀಗ್ ಹಾಲ್ಗಂಜಿ ಬಡಸ್ವದ್ನು ಅರಜೀಣಾ
ಊಟಕೆ ಹೋಗಿ ಕುಳತಾನೆ
ಊಟಕೆ ಹೋಗಿ ಕುಳತಾನೆ ಅರಜೀಣಾ
ಉಂಡೆದ್ದ ನೊಂದು ಗಳಗ್ಯಲ್ಲಿ
ಉಂಡೆದ್ದ ನೊಂದು ಗಳಗ್ಯಲ್ಲಿ ಅರಜೀಣಾ

ಪನ್ನೀರಲಿ ಮೊಕವಾ ತೊಳದಾನೆ
ಪನ್ನೀರಲಿ ಮೊಕವಾ ತೊಳದಾನೆ ಅರಜೀಣಾ
ತೂಗು ಮಂಚದಲಿ ಕುಳತಾನೆ
ತೂಗು ಮಂಚದಲಿ ಕುಳತಾನೆ ಅರಜೀಣಾ
ರನ್ನದೊಂದೀಳ್ಯಾ ಮೆಲೋವಾನೇ
ಎಲಿಯೊಂದ್ ತಿಂದಾನೆ ರಜವಲ್ಲೇ ಉಗಳಾನೆ
ಆಗೊಂದು ಮಾತಾ ನುಡೀದಾನೆ

“ನೀವಯ್ವರು ಒಟ್ಟೀಳ್ಯ ಮೆಲುವಂಗೆ
ನನೊಬ್ಬನಾದೆ ಬಡವಂವ
ತಂದಾ ಹೆಂಡೀರು ತಂದಂಗೆ ಇರದೀರೆ
ಬಾಗಲ ಸದಿನಾರು ತೆಗಿಯಾರಿ”
ಬಾಗ್ಲಲ್ನ ಸದಿತೆಗುವಕೆ ನಾವ್ ಬಡವರ ಮಕ್ಕಳಲ್ಲ
ಬಡಗಣರಜಿಣರಾ ಮಗಳ್ ದೀರು    ಸಲ್ಲದಿರೇ
ಬಿಟ್ಟೀ ಬಿಡಿ ನಮ್ಮಾ ತಗರೀಗೆ ”
“ತಂದಾ ಹೆಂಡೀರು ತಂದಂಗೇ ಇರದೀರೆ
ಕೊಟ್ಟಗಿ ಸಗಣಿಯಾರು ತೆಗಿಯಾರಿ ”

“ಕೊಟ್ಟಗಿ ಸಗಣಿ ತೆಗವಾಕೆ ನಾವ ಬಡವರ ಮಕ್ಕಳಲ್ಲ
ತೆಂಗಣರಜಿಣರಾ ಮಗಳ್ ದೀರು
ತೆಂಕಣರಜಿಣರಾಮಗಳ್ ದಿರು ಸಲ್ಲದೀರೇ
ಬಿಟ್ಟಿ ಬಿಡಿ ನಮ್ಮಾ ತರಗರೀಗೆ”
“ತಂದಾ ಹೆಂಡೀರು ತಂದೆಂಗೆ ಇರದೀರೆ
ಒಸ್ತಲ ಕಸನಾರು ಗುಡಸೀರೆ”

“ಒಸ್ತಲ ಕಸಗುಡಸ್ವಕೆ ಬಡವರ ಮಕ್ಕಳಲ್ಲ
ಮೂಡಣರಜಿಣರಾ ಮಗಳ್ ದೀರು
ಮೂಡಣ ರಣಜಿಣರಾಮಗಳ್ ದಿರು ಸಲ್ಲದೀರೆ
ಬಿಟ್ಟಿ ಬಿಡಿ ನಮ್ಮಾ ತಗರೀಗೆ ”
“ತಂದಾ ಹೆಂಡೀರು ತಂದಂಗಿರದೀರೆ
ಒಳಗನ್ ಪಾತ್ರಾನಾರು ತೊಳಿಯಿರೆ”

“ಒಳಗನ ಪಾತ್ರಾ ಬಳವಕ್ಕೆ ನಾವ್ ಬಡವರ ಮಕ್ಕಳಲ್ಲ
ಪಡವಣರಜಿಣರಾ ಮಗಳ್ ದಿರು
ಪಡವಣರಜಿಣರಾ ಮಗಳ್ ದಿರು ಸಲ್ಲದೀರೆ
ಬಿಟ್ಟಿ ಬಿಡಿ ನಮ್ಮಾ ತಗರೀಗೆ

* * *