ಮೊದಲೊಂದು ಭಾರೀ ಮಂದೆ; ಜೊತೆ-
ಗೆರಡು ಜೋಲುನಾಲಗೆ ನಾಯಿ; ಕುರು-
ಬನ ಕಣ್ಣು. ಬರಬರುತ್ತಾ ಎಲ್ಲೋ
ತಪ್ಪಿಸಿಕೊಂಡು ಕೊರಕಲಿನಲ್ಲಿ ಅ-
ನಾಥವಾಗಿ ಅರಚುವ ಒಂದೋ ಎರಡೋ ಮರಿ.

ಮುಂಗಾರು, ಬಾನ ತುಂಬಾ ಮೋಡಗಳ
ದಿಬ್ಬಣ. ಗರಿಗೆದರಿ ಕೇಕೆಯ ಹಾಕಿ
ಕಾಡಿನ ತುಂಬ ಕುಣಿವ ಮಯೂರಗಳ
ಹಿಂಡು. ಬರಬರುತ್ತ ಕಾಡು ಕಿಚ್ಚಿಗೆ
ಸೀದು ಮುರುಟಿರುವ ಮರಗಳ ಕೆಳಗೆ
ಅಲ್ಲೊಂದು, ಇಲ್ಲೊಂದು, ನವಿಲುಗರಿ