ನಾಳಿ ನೋಡು ಎನ್ನಬೇಡಣ್ಣ ಸುಳ್ಳಲ್ಲವಣ್ಣ
ನಾಳೆ ಬಾಳುವ ಕಾಲವ ಮರೆತು ಕೋಳಿ
ಮರಿಯು ಆಡುವಾಗ ಹಾಳು ಹದ್ದು
ಹೊತ್ತಿಕೊಂಡು ಹೋದರೀತಿ ತಿಳಿಯಣ್ಣಾ || ನಾಳೆ ||

ನೀವು ನಾವು ಎಲ್ಲಾ ಸುಳ್ಳಣ್ಣ
ನೀವು ಕೇಳಿರಣ್ಣ ಮಂಡೆ ತುಂಬಿದ ಒಳಗ ಸುಳ್ಳಣ್ಣ
ತುಂಡು ಗೋಲಿನ ಯಮನ ಭಂಟ ಪಾಶೆ ಹಾಕಿ
ಎಳೆಯುವಾಗ ಬಂಧು ಬಳಗ ಎಲ್ಲಾ ಬಂದು
ಬಿಡಿಸಿ ಕೊಂಬುವರೇನೋ ಅಣ್ಣಾ || ನಾಳೆ ||

ಸತ್ತ ಹೆಣವನು ನೋಡುತೀರಲ್ಲಾ ಕೂಡಿಟ್ಟ
ಹಣವನ್ನು ಹೊತ್ತಿಕೊಂಡು ಹೋಗಲಿಲ್ಲವಲ್ಲಾ
ಮೃತ್ಯುವಿನ ಬಾಯಗೀಗ ತುತ್ತಾ ಆಗಿ ಹೋಗಬೇಡ
ಹತ್ತಿ ನೋಡು ಗುಡ್ಡವನ್ನೇ ಮತ್ತೆ ಶಿವನು
ಕಾಣಿಸುವನು || ನಾಳೆ ||