ಕದನ ಕುತೂಹಲ ಮತಿಗಳಲ್ಲ ಈ
ಜಾಗೃತ ಭಾರತ ಜನತೆ
ಶ್ರದ್ಧೆಯಿಂದ ಈ ನಾಡಿನ ಪ್ರಗತಿಗೆ
ದುಡಿವುದೊಂದೆ ಚಿಂತೆ.
ಸದಾ ಸನ್ನದ್ಧ ಯೋಧರು ನಾವು
ಶಾಂತಿ ಬೇಕು ನಮಗೆ
ಪರಾಕ್ರಮಣದಾತುರಗಳ ಹಲ್ಲನು
ಮುರಿವೆವು ಬಂದರೆ ಒಳಗೆ.
ಗೌರವದಲಿ ಗಡಿಯಾಚೆಗೆ ನಿಲ್ಲಿರಿ
ಹುಡುಗಾಟವಲ್ಲ ಯುದ್ಧ
ಸೊಕ್ಕಿನಿಂದ ಮೇಲುಕ್ಕಿ ನುಗ್ಗಿದರೆ
ಇದೋ ನಾವು ಸಿದ್ಧ.
Leave A Comment