ಆಯುಷ್ಯದಲ್ಲಿ
ಅರುವತ್ತರ
ಅಂಚಿನಲ್ಲಿರುವಾಗಲೇ
ಅನಿರೀಕ್ಷಿತವಾಗಿ
ಅಚ್ಚರಿಗೊಳಿಸುತ್ತ
ಅಟಕಾಯಿಸಿಕೊಂಡ
ಅರ್ಬುದಕ್ಕೆ ಮಣಿದು
ಅಸುನೀಗಿ
ಅನಂತದಲ್ಲಡಗಿ
ಅದೃಶ್ಯನಾದ
ಅಲ್ಪಾಯುಷಿ
ಆತ್ಮೀಯ
ಅನಂತುವಿಗೆ
ಅಶ್ರುಗಳೊಂದಿಗೆ
ಅರ್ಪಿತ

ಬಿ.ಎಸ್‌. ಕೇಶವರಾವ್