ಇವರ ಪೂರ್ಣ ಹೆಸರು ನಾರಾಯಣ ಕಸ್ತೂರಿ ಎಂದು. ಜನಿಸಿದ್ದು ೨೫,೧೨, ರಂದು ಕೇರಳದ ಪುಟ್ಟಗ್ರಾಮ ತ್ರಿಪುನಿತ್ತೂರ್ ಎಂಬಲ್ಲಿ. ಮಲಯಾಳಂ ಹಾಗೂ ಚರಿತ್ರೆ ವಿಷಯದಲ್ಲಿ ಎಂ.ಎ. ಪದವಿ ಪಡೆದರು ಮೈಸೂರಿಗೆ ಬಂದು ಬನಮಯ್ಯ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ನಂತರ ೧೯೨೮ ರಲ್ಲಿ ಮೈಸೂರಿನ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದರು. ಕನ್ನಡದ ಹಾಸ್ಯ ಸಾಹಿತ್ಯದ ಅಗ್ರಮಾನ್ಯರಾದ ಕೈಲಾಸಂ, ರಾಶಿ, ಶ್ರೀರಂಗ, ಕುಲಕರ್ಣಿ ಮುಂತಾದವರ ಸಾಲಿನಲ್ಲಿ ಪ್ರಮುಖರಾದವರು. ನಾ.ಕಸ್ತೂರಿಯವರು ಆಧುನಿಕ ಸಾಹಿತ್ಯದಲ್ಲಿ ಹಾಸ್ಯಕ್ಕೆಂದೇ ಹಲವು ಅಂತಸ್ತುಗಳ ಮಹರೊಂದು ಕಟ್ಟಿದರು. ನಾ.ಕಸ್ತೂರಿ ಹಾಸ್ಯವನ್ನೇ ಖಾಯಂ ಹವ್ಯಾಸವನ್ನಾಗಿ ಮಾಡಿಕೊಂಡರು. ನಗೆಯೇ ಅವರ ಲೇಖನದ ಕಸುಬು.

ಎಂಬ ಮಾತುಗಳು ಕಸ್ತೂರಿಯವರ ವಿಷಯದಲ್ಲಿ ಸಾರ್ಥಕ ವಾದ ಪ್ರಸಂಶೆ ಇದನ್ನು ಇವರ ನಾಟಕ ಕಾದಂಬರಿ, ಅಣಕಗಳಲ್ಲಿ ಕಾಣಬಹುದು. ನಗೆಗಾರರೆಂದೇ ಪ್ರಖ್ಯಾತರಾದ ಕಸ್ತೂರಿಯವರು ತಾಪತ್ರಯ ತಪ್ಪಿತು, ಬ್ಯಾಂಕ್ ದಿವಾಳಿ, ರಾಮಕೃಷ್ಣಯ್ಯನ ದರ್ಬಾರು, ಗಾಳಿಗೋಪುರ, ಶಂಕವಾದ್ಯ, ರಂಗನಾಯಕಿ, ಅಲ್ಲೋಲ ಕಲ್ಲೋಲ, ಉಪಾಯ ವೇದಾಂತ, ವರಪರೀಕ್ಷೆ, ಗಗ್ಗಯ್ಯನ ಗಡಿಬಿಡಿ, ಯಂತರ, ನಗೆನಾಟಕ ಹಾಗೂ ಹಾಸ್ಯ ಕೃತಿಗಳನ್ನು ರಚಿಸಿದ್ದಾರೆ. ಹೆಡ್‌ಮಾಸ್ತರ ಮಗಳು, ಕಸ್ತೂರಿಯವರ ಜನಪ್ರಿಯ ರಚನೆಯ ನಾಟಕ. ನಾ.ಕಸ್ತೂರಿಯವರು ‘ಚಕ್ರದೃಷ್ಟಿ, ಎಂಬ ಕಾದಂಬರಿಯನ್ನು ಬರೆದಿದ್ದು ಇದು ತನ್ನ ವಿಶಿಷ್ಟ ಕಥಾತಂತ್ರದಿಂದಲೇ ಗಮನ ಸೆಳೆಯುವಂತಹ ಕೃತಿಯಾಗಿದೆ. ಹಾಗೂ ಪ್ರೆಂಚ್ ಕಾದಂಬರಿಕಾರ ‘ವಿಕ್ಟರ್ ಹ್ಯೂಗೋನ, ಲೀ ಮಿಸರಬಲ್, ಎಂಬ ಕೃತಿಯನ್ನು ‘ನೊಂದಜೀವಿ, ಎಂಬ ಹೆಸರಿನೊಂದಿಗೆ ಸಂಗ್ರಹವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವಯಸ್ಕರ ಶಿಕ್ಷಣ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಕಸ್ತೂರಿಯವರು ಬಿ.ಎಂ.ಶ್ರೀಯವರ ಮಾರ್ಗದರ್ಶನದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಯಸ್ಕರ ಶಿಕ್ಷಣ ತರಗತಿಗಳನ್ನು ನಡೆಸಿದರು. ೧೯೪೮ ರಿಂದ ಪುಟ್ಟಪರ್ತಿಯ ಸಾಯಿಬಾಬಾ ರವರ ಬಗ್ಗೆ ಶ್ರದ್ದೆ ಬೆಳೆದು ಅವರ ನಿಕಟವರ್ತಿಯಾದರು. ಆಶ್ರಮದ ಸನಾತನ ಸಾರಥಿ, ನಿಯತಕಾಲಿಕೆಯ ಸಂಪಾದಕರಾಗಿದ್ದರು. ತಮ್ಮ ವೃದ್ದಾಪ್ಯವನ್ನು ಆಶ್ರಮದಲ್ಲೇ ಕಳೆದರು.