ಗುರು ರಾಯ ಸದ್ಗುರು ರಾಯ ತವ ಚರಣವ ಕರಣವ ತೋರಯ್ಯ ಗುರು ಮರೆತು ಬಂದೆನು || ಈ ನರ ಜನುಮಕ್ಕೆ | ಅರಿವಿತ್ತು ಪೊರೆ ಭವ ತರುವುದಕ್ಕೆ ಗುರು ರೇಣುಕ ನಿನ್ನ ಮೊರೆ ಹೊಕ್ಕೆ || ಗುರು ರಾಯ ಸದ್ಗುರು ರಾಯ ||

ಬಲ್ಲಿದೆನೆಂಬರ ನೋಡಿದೆನು, ಅವರಲ್ಲಿ ವಿಚಾರವ ಮಾಡಿದೆನು ಸಲ್ಲದವರ ಬಿಟ್ಟಿರಿಸಿದೆನು ಗುರುನಲ್ಲ ನಿನ್ನಯ ಪಾದ ಸೇರಿದೇನು || ಗುರು ರಾಯ || ತನ್ನನು ತಾ ತಿಳಿಯುವ ವಿಧವಾ ಮನ್ನಿಸಿ ಪೊರೆಯೈ ಗುರು ರೇವಚನ್ನಿಗ ಎಣಿಸಿದೆ ಅವಗುಣವ, ಸಂಪನ್ನ ಪೊರೆವ ಪಿಡಿದೆನು ಪದವಾ ಪಿಡಿದಿಟ್ಟದನು ಭವ ಶರಣಧೀ ಕಡೆಯ ಕಾಲಕ್ಕೆ ಬಂದು ನೀ ದೊರೆದೀ ಕಡೆ ಹಾಯಿನೋ ಕರಣಾಕರದೀ || ಗುರು ರಾಯ ||

ಕ್ಷಿತಿಯೊಳು ರಂಭಾಪುರವಾಸ ಅಲ್ಲಿ ಯತಿಗಳ ಕೂಟವೆ ಕೈಲಾಸ ಪತಿಯೇ ರೇವಣಸಿದ್ಧ ಕೊಡು ಲೇಸ | ನಾ ಮತಿಯೊಳು ಮಾಡುವೆ ತವ ಧ್ಯಾನ || ಗುರು ರಾಯ ||