(ಕ್ರಿ.ಶ. ೧೪೭೩-೧೫೪೩)
(ಸೂರ್ಯ-ಗ್ರಹಗಳ ಸಂಬಂಧ)

ಸೂರ್ಯನೇ ಭೂಮಿಯ ಸುತ್ತ ತಿರುಗುತ್ತದೆಂಬ ಅಭಿಪ್ರಾಯವನ್ನು ಹೊಂದಿದ್ದ ಪಂಡಿತರ ಕಾಲವೊಂದಿತ್ತು. ಆದರೆ ಅದು ತಪ್ಪು, ಗ್ರಹಗಳೇ ಸೂರ್ಯನ ಸುತ್ತ ಸುತ್ತುತ್ತವೆಂದು ಅರಿಸ್ಟಾರ್ಕಸ್ ಊಹಿಸಿದರು. ಅರಿಸ್ಟಾರ್ಕಸ್ ರ ತತ್ವ ಸರಿ ಎಂದು ನಿಕೊಲಾಸ್ ಕೋಪರ್ನಿಕಸ್ ಜಗತ್ತಿಗೆ ಮನಗಾಣಿಸಿಕೊಟ್ಟರು. ಖಗೋಳ ವಿಜ್ಞಾನಕ್ಕೆ ಹೊಸ ವೈಜ್ಞಾನಿಕ ತಿರುವು ಕೊಟ್ಟ ನಿಕೊಲಾಸ್ ಕೋಪರ್ನಿಕಸ್ ೧೪೭೩ರಲ್ಲಿ ಪೋಲೆಂಡಿನ ಥಾರ್ನ್ ಎಂಬ ಊರಲ್ಲಿ ಜನಿಸಿದರು. ಈತ ಮೂಲತಃ ಕಲಿತದ್ದು ವೈದ್ಯಶಾಸ್ತ್ರ. ಅದರಲ್ಲಿ ಪದವಿಯನ್ನೂ ಪಡೆದಿದ್ದ. ಆದರೆ ಆತನ ಆಸಕ್ತಿಯೆಲ್ಲಾ ಖಗೋಳ ವಿಜ್ಞಾನದಲ್ಲೇ. ಅಂತಲೇ ಆತ ತನ್ನ ವ್ಯಾಸಂಗವನ್ನು ಬೊಲೊನ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಿ ಖಗೋಳ ಶಾಸ್ತ್ರ ಕಲಿತರು. ರೋಮ್ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕರಾದರು. ಮುಂದೆ ಆ ವೃತ್ತಿಯನ್ನು ಬಿಟ್ಟು ವೈದ್ಯವೃತ್ತಿ ಹಿಡಿದರು.
ತುಂಬ ಕರುಣಾಮಯಿಯಾಗಿದ್ದ ಈತ ಬಡಬಗ್ಗರಿಗೆ ಪುಕ್ಕಟೆ ಔಷಧ ನೀಡುತ್ತಿದ್ದರು.
ಪೋಪನ ವಿನಂತಿಯ ಮೇರೆಗೆ ಈತ ಕ್ಯಾಲಂಡರಿನಲ್ಲಿ ಸುಧಾರಣೆಗಳನ್ನು ಮಾಡಿದರು.
ಸೂರ್ಯನೇ ವಿಶ್ವದ ಕೇಂದ್ರ, ಉಳಿದೆಲ್ಲ ಗ್ರಹಗಳೂ ಆತನ ಸುತ್ತ ತಿರುಗುತ್ತವೆ, ಪೃಥ್ವಿ ತನ್ನ ಅಕ್ಷದ ಸುತ್ತ ತಿರುಗುತ್ತದೆ ಮತ್ತು ಅದರಿಂದಾಗಿ ಹಗಲು-ರಾತ್ರಿ ಆಗುತ್ತವೆ ಎಂಬುದು ನಿಕೊಲಾಸ್ ಕೋಪರ್ನಿಕಸ್ ರ ವಿಚಾರವಾಗಿತ್ತು. ಆದರೆ ಕೋಪರ್ನಿಕಸ್‌ನ ಸಿದ್ಧಾಂತ ಅಂದಿನ ಕ್ರಿಶ್ಚಿಯನ್ ನಂಬಿಕೆಗಳಿಗೆ ವಿರುದ್ಧವಾದ್ದರಿಂದ ಇವನು ಮರಣದಂಡನೆ ಅನುಭವಿಸಬೇಕಾಯಿತು. ನಿಕೊಲಾಸ್ ಕೋಪರ್ನಿಕಸ್ ಮೇ ೨೧, ೧೫೪೩ರಂದು ನಿಧನ ಹೊಂದಿದರು.
ಮುಂದೆ ಕೆಪ್ಲರ‍್, ನ್ಯೂಟನ್ ಹಾಗೂ ಐನ್ಸಸ್ಟೈನರು ಗ್ರಹಚಲನೆಯ ಸೂತ್ರಗಳನ್ನು ಖಚಿತವಾದ ರೂಪದಲ್ಲಿ ವಿವರಿಸಿದರು. ಆದರೆ ಸೂರ್ಯ ಮತ್ತು ಗ್ರಹಗಳ ಸಂಬಂಧವನ್ನು ಸಮರ್ಪಕವಾಗಿ ಗುರುತಿಸಿದ ಮನೊದಲ ವಿಜ್ಞಾನಿಯೆಂಬ ಖ್ಯಾತಿ ಕೋಪರ್ನಿಕಸ್ ಗೆ ಸಲ್ಲುತ್ತದೆ.