ಗುರುವನ್ನೇ ಬೈದವರೇ ಕೂಡಿ ನಮ್ಮ ಗುರು
ಪಾದ ಹಿಡಿಯಲು ನಿಮಗೇನು ದಾಡಿ || ಗುರು ||
ಕೆಂಡ ಸೆರಗಲಿ ಕಟ್ಟಿಕೊಂಡೆ ಭೂಮಂಡಲದೊಳಗುಟೆ
ಸುಖವೇನು ಕಂಡೇ
ಮಾಡಬಾರದ ಮಾಡಿ ಉಂಟೇ ನಿನ್ನ ಬೆನ್ನತ್ತಿ
ಬಿಡದಲ್ಲೇ ವಿಧಿಮಾಯ ಕಂಡೇ || ಗುರು ||

ನರಕಕ್ಕೆ ಹೊರಟಲ್ಲೊ ಮೂಢ ಮೋರೆ
ಮೇಲಕ್ಕೆ ಮಾಡಿ ನೀ ಕೆಟ್ಟಲ್ಲಾ ಜಾಣ
ಯಮರು ಹೊಯ್ವರು ಕೂಳ ಅಲ್ಲಿ
ಕೇಳುವರಾರಿಲ್ಲ ನಿನ್ನಯ ಗೋಳು || ಗುರು ||

ಇನ್ನಾರು ತಿಳಿಯಲೊ ಘಾಢ ನಮ್ಮ
ಸಾಧುಸತ್ಪುರುಷರ ಅತಿಗೆಳೆಯಲು ಬೇಡ
ನಿನಗ್ಯಾರು ಹೇಳಿದರು ಜಾಣ ನಮ್ಮ ಗುರು
ವು ರೇವಣ್ಣ ಸಿದ್ಧನೊಲುಮೆಯ ನೋಡು
ಆತನ ಲೀಲೆಯೊಳು ಹಾಡು || ಗುರುವನ್ನೇ ||

ನಂಬಬೇಕು ಅಂಬರದೊಳು
ಶಂಭುಲಿಂಗನ ಮಂತ್ರವಾ
ರಂಬೆಯರ ನಲಿದಾಟಕೆ ನೀ
ಮನಸು ಕೊಡದಿರೊ ಮಾನವರ || ಎತ್ತಬಾರದು ||

ಬಿಟ್ಟ ಕಡೆಯಲಿ ಬಿಡಲು ಬಹುದೇ
ಇಂತ ಜ್ಞಾನ ವಸ್ತುವ
ಕಷ್ಟ ಪಟ್ಟು ಮಂತ್ರಪಿಡಿದು
ಹೊಂದು ನೀನು ಮೋಕ್ಷವ || ಎತ್ತಬಾರದು ||