ನಿನ್ನೊಳಗೇ ನೀನಿರು ಮನವೇ
ಅನ್ಯಾಶ್ರಯದೊಳಗರಸದಿರು,
ನೀನಾವುದನೀತೆರ ಹುಡುಕುತಲಿಹೆಯೋ
ಅದೆ ನಿನ್ನೆದೆಯೊಳಗಡಗಿರಲು !
ಹೃದಯದ ಕರೆಗೋಗೊಡುವನು ಅವನು,
ಸರ್ವಸಿದ್ಧಿಗಳ ಸ್ಪರುಶ ಮಣಿ !
ನಿನ್ನ ಎದೆಯೊಳೇ ಹುದುಗಿದೆ ಕಾಣೊ
ಸಕಲೈಶ್ವರ್ಯದ ರನ್ನಗಣಿ !
ಮುತ್ತು ರತುನಗಳೊ ಪಚ್ಚೆ ಹರಳುಗಳೊ
ಹೃದಯ ಮಂದಿರದ ಅಂಗಳದಿ,
ಚದುರಿ ಬಿದ್ದಿರಲು, ಎಲ್ಲಿ ಹುಡುಕುತಿಹೆ
ಮರುಳನಂತೆ ಅನ್ಯಾಶ್ರಯದಿ?
Leave A Comment