ನಾಗಾಲೋಟದಲ್ಲಿ ಓಡುತ್ತಿರುವ ಈ ವೈಜ್ಞಾನಿಕ ಯುಗಕ್ಕೆ ಮುನ್ನುಡಿ ಬರೆದ ಇಲೆಕ್ಟ್ರಾನಿಕ್ಸ್ – ಇಲೆಕ್ಟ್ರಾನ್ ಚಲನ ವಿಜ್ಞಾನ – ನಡೆದು ಬಂದ ದಾರಿಯ ಬಗ್ಗೆ ನಿಮಗೆಷ್ಟು ಗೊತ್ತು ? ಈ ಕೆಳಗಿನ ಪದಗಳು ಏನೆಂದು ತಿಳಿಯಿರಿ.
1. ಇಲೆಕ್ಟ್ರಾನ್ ಆವಿಷ್ಕಾರ
2. ಡಯೋಡ್
3. ಟ್ರಯೋಡ್
4. ಟ್ರಾನ್ಸಿಸ್ಟರ್
5. ಸಮಗ್ರ ವಿದ್ಯುನ್ಮಂಡಲ (ಐ.ಸಿ.)
6. ಕಾಂತೀಯ ಸ್ಮರಣ ಬಿಲ್ಲೆ
7. ಸಿಲಿಕಾನ್ ಟ್ರಾನ್ಸಿಸ್ಟರ್
8. ಮೊದಲ ಐ.ಸಿ.
9. ಮೈಕ್ರೊಪ್ರೊಸೆಸರ್
10. ಮೊಟರೊಲಾ ಮೈಕ್ರೊಪ್ರೊಸೆಸರ್
11. ಸೂಪರ್ ಚಿಪ್
12. ದೃಕ್ ಮೈಕ್ರೊಪ್ರೊಸೆಸರ್
13. ಸ್ಮರಣ ಬಿಲ್ಲೆ (ಮೆಮೊರಿ ಚಿಪ್)
14. ಸಿರಾಮಿಕ್ ಟ್ರಾನ್ಸಿಸ್ಟರ್
ಉತ್ತರಗಳು:
1. ಇಲೆಕ್ಟ್ರಾನ್ ಆವಿಷ್ಕಾರ : ಪರಮಾಣು ಅಭೇದ್ಯ ಎಂಬ ಪರಿಕಲ್ಪನೆ 19ನೇ ಶತಮಾನದ ಅಂತ್ಯದ ವರೆಗೂ ಇತ್ತು. 1897ರಲ್ಲಿ ಇಂಗ್ಲೆಂಡಿನ ಭೌತವಿಜ್ಞಾನಿ ಜಾನ್ ಜೋಸೆಫ್ ಥಾಮ್ಸನ್ ಪರಮಾಣು ಕೇಂದ್ರದಲ್ಲಿ ಅತಿ ಹಗುರ ಋಣ ವಿದ್ಯುತ್ ಪೂರಿತ ಕಣದ ಇರುವಿಕೆಯನ್ನು ಕಂಡು ಹಿಡಿದನು. ಅದನ್ನೇ ಇಲೆಕ್ಟ್ರಾನ್ ಎಂದು ಹೆಸರಿಸಿದನು.
2. ಡಯೋಡ್ : ಏಕ ಮುಖ ವಿದ್ಯುತ್ ಪ್ರವಾಹದ ನಿರ್ವಾತ ನಳಿಕೆ. ಇದನ್ನು ಇಂಗ್ಲೆಂಡಿನ ಭೌತವಿಜ್ಞಾನಿ ಆಂಬ್ರೋಸ್ ಫ್ಲೆಮಿಂಗ್ 1904ರಲ್ಲಿ ಸಂಶೋಧಿಸಿದನು.
3. ಟ್ರಯೋಡ್ : ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಬಲ್ಲ, ಮೊತ್ತ ಮೊದಲ ಇಲೆಕ್ಟ್ರಾನ್ ಕವಾಟ (Valve). ಅಮೆರಿಕೆಯ ಭೌತವಿಜ್ಞಾನಿ ಲೀಡ್ ಫಾರೆಸ್ಟ್ 1906ರಲ್ಲಿ ಇದನ್ನು ಉಪಜ್ಞಿಸಿದನು.
4. ಟ್ರಾನ್ಸಿಸ್ಟರ್ : ಟ್ರಾನ್ಸ್ಫರ್ ರೆಜಿಸ್ಟರ್ – ಇದರ ಹ್ರಸ್ವರೂಪವೇ ಟ್ರಾನ್ಸಿಸ್ಟರ್! ನ್ಯೂ ಜರ್ಸಿಯಲ್ಲಿರುವ ಬೆಲ್ ಪ್ರಯೋಗ ಶಾಲೆಯ ಜಾನ್ ಬಾರ್ಡೀನ್ ವಿಲಿಯಂ ಶಾಕ್ಲೇ ಮತ್ತು ವಾಲ್ಟೇರ ಬ್ರಾಟೇನ್ 1947ರಲ್ಲಿ ಮೊದಲ ಜರ್ಮೇನಿಯಂ ಟ್ರಾನ್ಸಿಸ್ಟರ್ ರಚಿಸಿದರು.
5. ಸಮಗ್ರ ವಿದ್ಯುನ್ಮಂಡಲ (IC): ಇದರ ಕಲ್ಪನೆಯನ್ನು ಮೊದಲ ಬಾರಿಗೆ ಕೊಟ್ಟವರು ಬ್ರಿಟಿಷ್ ಭೌತ ವಿಜ್ಞಾನಿ GWA ಡುನ್ನೇರ್, 1952ರಲ್ಲಿ.
6. ಕಾಂತೀಯ ಸ್ಮರಣ ಬಿಲ್ಲೆ : ಅಮೆರಿಕೆಯ ಮಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ ಜಾಯ್ ಫಾರೆಸ್ಟರ್ ಈ ಬಿಲ್ಲೆಯನ್ನು 1953ರಲ್ಲಿ ನಿರ್ಮಿಸಿದನು.
7. ಸಿಲಿಕಾನ್ ಟ್ರಾನ್ಸಿಸ್ಟರ್: ಅಮೆರಿಕೆಯ ಟೆಕ್ಸಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯ ಗಾರ್ಡನ್ ಟೀಲ್ 1954ರಲ್ಲಿ ಇದನ್ನು ಅಭಿವೃದ್ದಿಪಡಿಸಿದನು.
8. ಮೊದಲ ಐ.ಸಿ. (IC): ಅಮೆರಿಕದ ಭೌತ ವಿಜ್ಞಾನಿ ಜಾಕ್ ಕಿಲ್ಬೆ 1958ರಲ್ಲಿ ಐದು ಬಿಡಿಭಾಗಗಳಿಂದ ಕೂಡಿದ ಮೊದಲ ಐ.ಸಿ. ರಚಿಸಿದನು.
9. ಮೈಕ್ರೊಪ್ರೊಸೆಸರ್: ಇಂಟೆಲ್ 4004 ಮೊದಲ ಮೈಕ್ರೊಪ್ರೊಸೆಸರ್. ಇದರ ಶಿಲ್ಪಿ ಅಮೆರಿಕೆಯ ಟೆಡ್ಹಾಫ್. 1971ರಲ್ಲಿ ಇದರ ಕಲ್ಪನೆಯನ್ನು ೊಕೊಟ್ಟನು. ಇದರಲ್ಲಿ 2250 ಬಿಡಿ ಭಾಗಗಳಿದ್ದುವು.
10. ಮೊಟರೋಲಾ ಮೈಕ್ರೊಪ್ರೊಸೆಸರ್: ಮೊಟರೋಲಾ – 6800 ಮೈಕ್ರೊಪ್ರೊಸೆಸರ್ 1979ರಲ್ಲಿ ಬಳಕೆಗೆ ಬಂದಿತು. ಇದರಲ್ಲಿ 70,000 ಬಿಡಿ ಭಾಗಗಳಿದ್ದುವು.
11. ಸೂಪರ್ ಚಿಪ್ : 1981ರಲ್ಲಿ ಇದು ಬಳಕೆಗೆ ಬಂದಿತು. ಇದರಲ್ಲಿ 4,50,000 ಬಿಡಿ ಭಾಗಗಳಿರುತ್ತವೆ.
12. ದ್ಯುತಿ ಮೈಕ್ರೊಪ್ರೊಸೆಸರ್: ಇದು 1988ರಿಂದ ಬಳಕೆಯಲ್ಲಿ ಬಂದಿರುತ್ತದೆ. ವಿದ್ಯುತ್ತಿನ ಬದಲಾಗಿ ಬೆಳಕಿನ ಕಿರಣಗಳಿಂದ ನಡೆಯುತ್ತದೆ.
13. ಸ್ಮರಣ ಬಿಲ್ಲೆ (ಮೆಮೊರಿ ಚಿಪ್): ವಿಪುಲ ಪ್ರಮಾಣದಲ್ಲಿ ಇವುಗಳ ತಯಾರಿಕೆಯನ್ನು 1990ರಲ್ಲಿ ಜಪಾನ್ ದೇಶವು ಪ್ರಾರಂಭಿಸಿತು. ಸಿಲಿಕಾನಿನಿಂದ ತಯಾರಿಸಲ್ಪಡುವ ಈ ಬಿಲ್ಲೆಯಲ್ಲಿ 9 ಮಿಲಿಯನ್ ಬಿಡಿಭಾಗಗಳಿರುತ್ತವೆ.
14. ಸೆರಾಮಿಕ್ ಟ್ರಾನ್ಸಿಸ್ಟರ್: ಅರೆವಾಹಕಗಳ ಬದಲಾಗಿ ಅಧಿಕ ಉಷ್ಣದ ಅತಿವಾಹಕ ಸೆರಾಮಿಕ್ ಟ್ರಾನ್ಸಿಸ್ಟರ್ಗಳನ್ನು ಜಪಾನಿನ ಸಾನಿಯೋ ಇಲೆಕ್ಟ್ರಿಕಲ್ಸ್ನವರು 1992ರಲ್ಲಿ ತಯಾರಿಸಿದರು.
Leave A Comment