“ ದೇಶ ನೋಡು ಕೋಶ ಓದು ” ಎಂಬ ಮಾತಿದೆ. ವಿದ್ಯಾರ್ಥಿಗಳ ಭೌದ್ಧಿಕ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಇವೆರಡೂ ಸಹ ಅವಶ್ಯಕ. ಈ ಹಿನ್ನೆಲೆಯಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ನೆರವಾಗುವಂತೆ ರೂಪಿಸಿರುವ ಒಂದು ಚಟುವಟಿಕೆಯೇ ಜಿಲ್ಲಾ ದರ್ಶನ. ಈ ಪ ಪ್ರವಾಸದಿಂದ ವಿದ್ಯಾರ್ಥಿಗಳಲ್ಲಿ ಗುಂಪಿನ ಕಲಿಕೆ, ಸಹಕಾರ, ಸಹಬಾಳ್ವೆ ಗುಣಗಳು ಬೆಳೆಯುತ್ತವೆ. ಅವರ ಅನುಭವ ವಿಸ್ತಾರವಾಗುತ್ತದೆ. ಜಿಲ್ಲೆಯ ಬಗ್ಗೆ ಅಭಿಮಾಣ ಗೌರವ ಮೂಡುತ್ತದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾ ದರ್ಶನದಿಂದ ಮಕ್ಕಳು ಈ ಜಿಲ್ಲೆಗಳ ಐತಿಹಾಸಿಕ   ಳಗಳು, ಧಾರ್ಮಿಕ ಕೇಂದ್ರಗಳು, ಕೋಟೆ ಕೊತ್ತಲಗಳು, ಗಿರಿಗಳು, ಕೆರೆಗಳು, ಅಣೆಕಟ್ಟುಗಳು, ವಿಶ್ವ ವಿಖ್ಯಾತ ಮಹನೀಯರ ಜನ್ಮಸ್ಥಳಗಳ ಬಗ್ಗೆ ತಿಳಿಯುವ ಅವಕಾಶ  ಭ್ಯವಾಗುತ್ತದೆ. ಜೊತೆಗೆ ಜನಜೀವನದಲ್ಲಿನ ವೈವಿಧ್ಯತೆಯೂ ಕಾಣುತ್ತದೆ.

ಪ್ರಾಥಮಿಕ ಶಾಲಾ ಮಕ್ಕಳಿಗೆ ಜಿಲ್ಲಾ ದರ್ಶನ ಮಾಡಿಸುವ ಉದ್ದೇಶದಿಂದ ರಚನೆಯಾಗಿರುವ ಈ ಕೈಪಿಡಿಯು ಜಿಲ್ಲೆಯ ಪ್ರಮುಖ ಸ್ಥಳಗಳ ಇತಿಹಾಸ ಹಾಗೂ ಪ್ರಾಮುಖ್ಯತೆಯ ಬಗ್ಗೆ ಅಗತ್ಯ ಮಾಹಿತಿಯನ್ನು ಹೊಂದಿದೆ. ಜಿಲ್ಲಾ ದರ್ಶನ ಪ್ರವಾಸಕ್ಕೆ ಹೋಗುವ ಮಕ್ಕಳು ಈ ಕೈಪಿಡಿಯನ್ನು ಬಳಸುವಂತೆ ಪ್ರೇರಣೆಗೊಳಿಸುವುದು ಉಪಾಧ್ಯಾಯರ ಹೊಣೆ. ಇದರಿಂದಾಗಿ ಮಕ್ಕಳಲ್ಲಿ ಓದಿ ತಿಳಿಯುವ ನಂತರ ನೋಡಿ ಗ್ರಹಿಸುವ ಸಾಮರ್ಥ್ಯ ಬೆಳೆಯುತ್ತದೆ.

ಇದು ಸಮಗ್ರವಲ್ಲ ಎಂಬ ವಿನೀತ ಭಾವ ನಮ್ಮದು. ಓರೆಕೊರೆಗಳು ಈ ಪ್ರಯತ್ನಕ್ಕೆ ಸಹಜ ಪರಿಷ್ಕೃತ ಆವೃತ್ತಿ ಸಾಧ್ಯವಾದಲ್ಲಿ  ಇದನ್ನು ಸರಿಪಡಿಸುವುದಲ್ಲದೆ ತಮ್ಮ ಲಭ್ಯತೆಯಲ್ಲಿರುವ ಮಾಹಿತಿ ನೀಡಿದಲ್ಲಿ ಕೃತಜ್ಞತೆಯಿಂದ ಸ್ವೀಕರಿಸುತ್ತೇವೆ.

ಈ ಪ್ರವಾಸ ಮಾರ್ಗಸೂಚಿಯನ್ನು ರಚಿಸಲು ನೆರವಾಗಿರುವ ಜಿಲ್ಲೆಯ ಸಂಪನ್ಮೂಲ ಶಿಕ್ಷಕರಿಗೆ ಅಭಿನಂದನೆಗಳು. ಈ ಕಿರು ಹೊತ್ತಿಗೆಯು ಜಿಲ್ಲಾ ದರ್ಶನದಲ್ಲಿ ಪಾಲ್ಗೊಳ್ಳುವ ಎಲ್ಲಾ ಮಕ್ಕಳ ಕೈ ಸೇರಿ ಅವರು ಓದುವ ಹಾಗೂ ನೋಡುವ ಮೂಲಕ ನಮ್ಮ ಜಿಲ್ಲೆಯ ಬಗ್ಗೆ ತಿಳಿಯುವಂತಾಗಲಿ ಎಂಬ ಹಾರೈಕೆಗಳೊಂದಿಗೆ.

ಪ್ರಹ್ಲಾದ ಗೌಡ)
ಉಪನಿರ್ದೇಶಕರು(ಆಡಳಿತ)

(ಸಿ. ಆಂಜನೇಯ ರೆಡ್ಡಿ)
ಉಪನಿರ್ದೇಶಕರು(ಅಭಿವೃದ್ಧಿ)

(ಎನ್. ಪ್ರಭಾಕರ್)
ಜಿಲ್ಲಾಧಿಕಾರಿಗಳು ಹಾಗೂ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,
ಕೋಲಾರ ಜಿಲ್ಲೆ