ಈ ದೇಶವು ತುಂಬ ಕಷ್ಟದಲ್ಲಿದ್ದಾಗ ಅನೇಕ ಜನ ಪಾಶ್ಚಾತ್ಯರು ತಾವಾಗಿಯೇ ಮುಂದೆ ಬಂದು ಅನೇಕ ರೀತಿಗಳಲ್ಲಿ ಸಹಾಯ ಮಾಡಿದ್ದಾರೆ. ಅಂಥವರಲ್ಲಿ ಐರ್ಲೆಂಡಿನಿಂದ ಬಂದ ಸೋದರಿ  ನಿವೇದಿತಾ ಒಬ್ಬಳು. ಅವಳು ಸ್ವಾಮಿ ವಿವೇಕಾನಂದರ ಅಧ್ಯಾತ್ಮಿಕ ಆಕರ್ಷಣೆಗೆ ಸಿಕ್ಕಿದಳು. ತನ್ನ ದೇಶವನ್ನು ಬಿಟ್ಟು ಭಾರತಕ್ಕೆ ಬಂದು ಕಲ್ಕತ್ತೆಯಲ್ಲಿ ನೆಲಸಿದಳು. ಈ ದೇಶಕ್ಕಾಗಿ ತನ್ನ ಎಲ್ಲವ್ನೂ ಧಾರೆಯೆರೆದು ದುಡಿದಳು. ಪ್ಲೇಗ್ ಬಂದಾಗ ಕಲ್ಕತ್ತೆಯ ಕೊಳಕು ರಸ್ತೆಗಳನ್ನು ಗುಡಿಸಿ ಶುಚಿ ಮಾಡಿದಳು. ರೋಗದಿಂದ ನರಳುತ್ತಿದ್ದ ಮಕ್ಕಳನ್ನು ತೊಡೆಯ ಮೇಲೆ ಮಲಗಿಕೊಂಡು ಸೇವೆ,ಶುಶ್ರೂಷೆ ಸಲ್ಲಿಸಿದಳು. ತಾನೇ ಉಪವಾಸ ವಿದ್ದು ಹೊಟ್ಟೆಗಿಲ್ಲದೆ ನರಳುತ್ತಿದ್ದವರಿಗೆ ಊಟ ನೀಡಿದಳು. ಹೆಣ್ಣು ಮಕ್ಕಳು ಓದಲೇಬಾರದು ಎಂದು  ಇಲ್ಲಿನ ತಂದೆ ತಾಯಿಗಳು ಭಾವಿಸಿದ್ದ ಕಾಲದಲ್ಲಿ ಅವರಿಗಾಗಿ ಶಾಲೆ ತೆರೆದು ಪಾಠ ಹೇಳಿಕೊಟ್ಟಳು. ಇಲ್ಲಿನ ಕವಿಗಳೀಗೆ, ಕಲಾವಿದರಿಗೆ ಸ್ಪೂರ್ತಿ ನೀಡಿ ಭಾರತೀಯತೆಯನ್ನು ಕಲಿಸಿದಳು. ಕೋಟ್ಯಾಂತರ ಜನರು ಹೃದಯದಲ್ಲಿ ಸ್ವಾತಂತ್ಯ್ರದ ಮಂತ್ರವನ್ನು ಬಿತ್ತಿದಳು.

ಭಾರತ ಕರೆದೀತು :

ಭರತ ಖಂಡದಂತೆಯೇ ಸ್ವಾತಂತ್ಯ್ರಕ್ಕಾಗಿ ಬ್ರೀಟಿಷರೊಡನೆ ಹೋರಾಡುತ್ತಿದ್ದ ದೇಶ ಐರ್ಲೆಂಡ್. ಅಲ್ಲಿ ಒಂದು  ಚರ್ಚಿನ ಪಾದ್ರಿ ಜಾನ್ ನೋಬ್ಲ್. ಅವನಿಗೆ ತುಂಬಾ ಪ್ರೀಯವಾದ ಎರಡು: ದೇಶ ಮತ್ತು ತವರು.  ಅವನ ಮಗ ಸ್ಯಾಮುಆಲ್ ನೋಬ್ಲ.ಸುಂದರಿಯಾದ ಮೇರಿ ಹ್ಯಾಮಿಲ್ಟನ್ ಎಂಬುವಳನ್ನು ಆತ ಮದುವೆಯಾದ. ಇವರಿಬ್ಬರ ಮಗಳೆ ಮುಂದೆ “ನಿವೇದಿತಾ” ಎಂದು ಪ್ರಖ್ಯಾತಳಾದ ಮಾರ್ಗರೇಟ ಎಲಿಜಬೇತ ನೋಬ್ಲ. ಅವಳು ಹುಟ್ಟಿದ್ದು ೧೮೬೭ರ ಆಕ್ಟೋಬರ ೨೮ ರಂದು. ತಾತನಿಂದ  ಮೊಮ್ಮಗಳಿಗೆ ಬಂದ ಬಳುವಳಿ ಅಆರವಾದ ಧೈರ್ಯ. ದೇಶಪ್ರೇಮ. ತಂದೆಯಿಂದ ಬಂದದ್ದು ಬಡಬಗ್ಗರ ಬಗ್ಗೆ ಅನುಕಂಪ. ತಾಯಿಯ ಸೌಂಧರ್ಯ, ಕೋಮಲತೆಗಳು ನಿವೇದಿತಾಳಲ್ಲಿ ಮನೆ ಮಾಡಿದ್ದವು. ಚರ್ಚಿನಲ್ಲಿ ಪ್ರವಚನ ಮುಗಿಸಿ ಹಳ್ಳಿಹಳ್ಳಿಗೆ, ಮನೆಮನೆಗೆ ಸ್ವಾತಂತ್ಯ್ರದ ಸಂದೇಶವನ್ನು ಬೀರಲುತಾತ ಹೋಗುವಾಗ ಅನೇಕ ವೇಳೆ  ಈ ಪುಟ ಬಾಲಕಿಯನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ. ಬಡಬಗ್ಗರ ಮನೆ, ಗುಡಿಸಲುಗಳಿಗೆ ಸೇವೆ ಮಾಡಲು ತಂದೆಯ ಜೊತೆಗೆ ಇವಳೂ ಮುಂದಾಗಿ ಹೋಗುತ್ತಿದ್ದಳು. ಹೀಗಾಗಿ ಸೇವೆ ಇವಳಿಗೆ ಚಿಕ್ಕಂದಿನಿಂದಲೂ ಜೀವನ ಸಂಗಾತಿಯಾಯಿತು.

ಒಂದು ದಿನ ಈ ಹುಡುಗಿಯ ತಂದೆಯ ಸ್ನೇಹಿತರೊಬ್ಬರು ಇವರ ಮನೆಗೆ ಬಂದರು. ಭಾರತದಲ್ಲಿದ್ದು ಕೆಲಸ ಮಾಡಿ ಹಿಂದಕ್ಕೆ ಬಂದಿದ್ದ ಪಾದ್ರಿ ಅವರು. ಹುಡುಗಿಯ ಬುದ್ಧಿ ಶಕ್ತಿಯನ್ನೂ ರೂಪವನ್ನೂ ಅವರು ತುಂಬಾ ಮೆಚ್ಚಿದರು. ಹೊರಡುವಾಗ ಅವರು ಹೀಗೆ ಹೇಳೀದಳು. “ಮಗು, ಭಾರತವು ತನ್ನ ದೈವವನ್ನು ಶ್ರಧ್ದೇಯಿಂದ ಅರಸುತ್ತಿದೆ. ಒಮ್ಮೆ ಅದು ನನ್ನನ್ನು ಕರೆಯಿತು. ಹಾಗೆಯೇ ಬಹುಶಃ ನೀನ್ನನ್ನು ಕರೆದೀತು. ಸದಾ ಸಿದ್ಧಳಾಗಿರು”. ಈ ಮಾತುಗಳನ್ನು ಕೇಳೀ ಹುಡುಗಿಯ ಕಣ್ಣಿನಲ್ಲಿ ಕಾಂತಿ ಮಿಂಚಿತು. ಅವಳ ಮುಖದಲ್ಲಿ ಉತ್ಸಾಹ ಉಕ್ಕಿತು.

“ದೇವರು ಕರೆದಾಗ… “

ಮಾರ್ಗರೇಟ್ ಗಳಿಗೆ  ಒಬ್ಬಳು ತಂಗಿ, ಒಬ್ಬನೇ ತಮ್ಮ, ಮೂವರು ತಂದೆತಾಯಿಗಳಿಗೆ ಅಚ್ಚು ಮೆಚ್ಚಾಗಿ ಸಂತೋಷದಿಂದ ಬೆಳೆಯುತ್ತಿದ್ದರು. ತಂದೆ ಸ್ಯಾಮ್ಯೂವೆಲ್ ಬಡಬಗ್ಗರಿಗೆ ತನ್ನ ಕೈಲಾದ ಸೇವೆಯನ್ನು ಪ್ರೀತಿಯಿಂದ ಸಲ್ಲಿಸುತ್ತಿದ್ದ. ಬರುತ್ತಿದ್ದ ಆದಾಯ ಅಲ್ಪ ದುಡಿಮೆ ಹೆಚ್ಚು. ಹೀಗಾಗಿ ಅವನ ಅರೋಗ್ಯ ಕೆಟ್ಟಿತು. ಸಾವು ಮನೆಯಲ್ಲಿ ತನ್ನ ನೆರಳನ್ನು ಚೆಲ್ಲಿತು. ಕೇವಲ ಮೂವತ್ತನಾಲ್ಕು ವರ್ಷದ ಸ್ಯಾಮುಅಲ್ ಸಾಯುವ ಮುನ್ನ ಮಾರ್ಗರೇಟ್ ಳ ತಾಯಿಗೆ ಹೇಳಿದ , “ದೇವರು ಕರೆದಾಗ ಮಾರ್ಗರೇಟ್ಟನ್ನು ಹೋಗಲು ಬಿಡು, ಆಕೆ ಗರಿಗೆದರಳುತ್ತಾಳೆ.. ದೊಡ್ಡ ಕೆಲಸಗಳನ್ನು ಸಾಧಿಸುತ್ತಾಳೆ.

ತಾಯಿ ಮಕ್ಕಳನ್ನು ಕರೆದುಕೊಂಡು ಐರ್ಲೆಂಡಿನಲ್ಲಿ ತವರು ಮನೆಗೆ ಹೋದಳು. ಅಜ್ಜಿ ತಾತ ಮುದ್ದನ್ನು ಹರಿಸಿ ಶಿಸ್ತನ್ನು ಮರೆಯದೇ, ಮೊಮ್ಮಕ್ಕಳನ್ನು ಬೆಳೆಸಿದರು.

ಮಾರ್ಗರೇಟ್ ಮತ್ತು ಅವಳ ತಂಗಿಯನ್ನು ಹ್ಯಾಲಿ ಫಾಕ್ಸ್  ಕಾಲೇಜಿಗೆ ಸೇರಿಸಿದರು. ಅಲ್ಲಿನ ಹಾಸ್ಟೇಲ್ ನಲ್ಲಿಯೇ ಇವರ ವಾಸ. ಅಲ್ಲಿನ ಜೀವನ ತುಂಬ ಕಠಿಣ. ಶಿಸ್ತು, ಶಿಸ್ತು,  ಸದಾ ಶಿಸ್ತಿನದೇ ಮಾತು.  ಓದು ಇವರಿಗೆ ತುಂಬಾ ಹಿಡಿಸಿತು. ಮಾರ್ಗರೇಟಳಿಗೆ ಸಂಗೀತ ಕಲೆ. ಜೀವಶಾಸ್ತ್ರಗಳಲ್ಲಿಯೂ ಆಸಕ್ತಿ ಬೆಳೆಯಿತು. ಎಲ್ಲವನ್ನೂ ಆಸಕ್ತಿಯಿಂದ ಕಲಿತಳು.

ಉಪಾಧ್ಯಾಯಿನಿ:

೧೮೮೪ ಈಗ ಮಾರ್ಗರೇಟ್ ಗಳೀಗೆ ಹದಿನೇಳು ವರ್ಷ ವಯಸ್ಸು. ಗಂಭೀರ ಸ್ವಭಾವದ ಸುಂದರ ತರುಣಿ. ವಿದ್ಯಾಭ್ಯಾಸ ಮುಗಿಯಿತು. ಮುಂದೇನು ಎಂಬ ಪ್ರಶ್ನೆ ಇಲ್ಲ. ಏಕೆಂದರೆ ಒಂದೇ ಒಂದು ವೃತ್ತಿಯ ಕಡೆ ಅವಳ ಮನಸ್ಸು ಹರಿಯುತ್ತಿತ್ತು. ಮಕ್ಕಳಿಗೆ ಪಾಠಹೇಳಬೇಕು. ಅದೇನೂ ಕಷ್ಟವಾಗಲಿಲ್ಲ. ಕೆಸ್ವಿಕ್ ಎಂಬ ಊರಿನಲ್ಲಿ ಶಿಕ್ಷಕಿಯಾಗಿ ಅವಳಿಗೆ ಕೆಲಸ ಸಿಕ್ಕಿತು. ಅವಳ ಹೃದಯ  ಅರಳಿ ನಲಿಯಿತು. ಜೀವನ ಪ್ರಾರಂಭವಾಯಿತು.

ಪುಟ್ಟ ಪುಟ್ಟ ಮಕ್ಕಳಿಗ ಪಾಠ ಹೇಳುವುದು ಸುಲಭದ ಕೆಲಸ ಆಲ್ಲ. ಮಕ್ಕಳ ಮನಸ್ಸು ಆಟದ ಕಡೆಗೆ ಹರಿಯುವುದು ಹೆಚ್ಚು, ಓದುವ ಆಸೆಯನ್ನು , ಕಲಿಯುವ ಆಸೆಯನ್ನು ಆಟದೊಂದಿಗೆ ಬೆರೆಸಬೇಕು. ಮ ಕ್ಕಳು ಆಡುತ್ತಾ ಆಡುತ್ತಾ ಕಲಿಯುವಂತೆ ಮಾಡಬೇಕು. ಮಾರ್ಗರೇಟ್ ಳಿಗೆ ಇದು ತುಂಬಾ ಹಿಡಿಸಿತು.  ಹೊಸ ಪ್ರಯೋಗಗಳನ್ನು ಮಾಡಿದಳು. ೧೮೯೨ರಲ್ಲಿ ತನ್ನದೇ ಸ್ವಂತ ಶಾಲೆಯನ್ನು ಪ್ರಾರಂಭ ಮಾಢಿದಳು. ಬಹುಬೇಗ ಇವಳ ಶಾಲೆ ಜನಪ್ರೀಯವಾಯಿತು. ಇವಳು ತುಂಬಾ ಬುದ್ಧಿಶಲಿ ಎಂಬುವುದು ಜನರಿಗೆ ಗೊತ್ತಾಯಿತು.

ಪ್ರೇಮ :

ವೇಲ್ಸನ್ ತರುಣ ಎಂಜಿನಿಯರ‍್ ಒಬ್ಬ ಇವಳಲ್ಲಿ ಆಸಕ್ತನಾದ. ಸ್ನೇಹ ಪ್ರೇಮಕ್ಕೆ ದಾರಿ ಮಾಡಿಕೊಟ್ಟಿತ್ತು. ಕೊನೆಗೆ ಮದುವೆಯೂ ನಿಶ್ಚಯವೂ ಆಯಿತು. ಆದರೆ ತರುಣ ಎಂಜಿನಿಯಿರ‍್ ಖಾಯಿಲೆಯಿಂದ ಹಾಸಿಗೆ ಹಿಡಿದು ಸ್ವಲ್ಪ ಸಮಯದಲ್ಲಿಯೇ  ತೀರಿಕೊಂಡ. ಹೀಗಾಗಿ ಮಾರ್ಗರೇಟ ದುಃಖಕ್ಕೆ ಸಿಕ್ಕಿಕೊಂಡಳೂ.ಅವಳು ಅದನ್ನು ಶಾಂತವಾಗಿ ಸಹಿಸಿದಳು. ಶಾಲೆಯ ಕೆಲಸಲದ್ಲಿ, ಓದು ಬರಹಗಳಲ್ಲಿ ಮನಸ್ನ್ನು ಹೆಚ್ಚು ಹೆಚ್ಚಾಗಿ ತೊಡಗಿಸಿದಳು. ಲೇಖನಗಳನ್ನು ಬರೆದಳು. ಬ್ರಿಟನ್ನಿನ ಪತ್ರಿಕೆಗಳು ಅವನ್ನೆಲ್ಲ  ಪ್ರಕಟಿಸಿದವು. ಒಳ್ಳೆಯ ಲೇಖಕಿ ಎಂಬ ಹೆಸರು ಬಂತು. ಜೊತೆ ಜೊತೆಯಲ್ಲಿಯೇ ಅಧ್ಯಾತ್ಮಿಕ ದಾಹವು ಬೆಳೆಯಿತು ಸತ್ಯವನ್ನು ಹುಡುಕುವ, ನೇರವಾಗಿ ಕಾಣುವ ಹಂಬಲ ತೀವ್ರವಾಯಿತು.

ಗುರುದರ್ಶನ :

೧೮೯೫. ಮಾರ್ಗರೇರ್ಟಳ ಜೀವನದ ದಿಕ್ಕನ್ನೇ ಬದಲಾಯಿಸಿದ ಮಹತ್ವದ ವರ್ಷ.   ಪಶ್ಚಿಮದ ಸುಶಿಕ್ಷಿತ ಉನ್ನತ ಚೇತನವೊಂದು ಪೂರ್ವದ ಕಡೆ ತಿರುಗಿ ಅದನ್ನು ವರಿಸಿದ ವರ್ಷ. ಪಶ್ಚಿಮದ ಥೇಮ್ಸ್ ಪೂರ್ವದ ಗಂಗೆಯೊಡನೆ ಸಂಗಮಗೊಂಡ ವರ್ಷ.

ಭಾರತದ ಸಾಧುವೊಬ್ಬರು ತನ್ನ ಮನೆಯಲ್ಲಿ ಭಾನುವಾರ ಮಧ್ಯಾಹ್ನ ಮಾತನಾಡುತ್ತಾರೆ. ಅಲ್ಲಿಗೆ ಮಾರ್ಗರೇರ್ಟ ಬರಬೇಕು ಎಂದು ಆಕೆಯ ಗೆಳತಿ ಲೇಡಿ ಇಸಬೆಲ್ ಮಾರ್ಗಸನ್ ಹೇಳಿದಳೂ. ಅಲ್ಲಿನ ದೃಶ್ಯವನ್ನು ಮಾರ್ಗರೇಟಳೇ ವರ್ಣಿಸಿದ್ದಾಳೆ. ಕಾವಿಯ ನಿಲುವಂಗಿ ಯನ್ನು ಧರಿಸಿ, ಕೆಂಪು ವಸ್ತ್ರವನ್ನು ಸೊಂಟಕ್ಕೆ ಸುತ್ತಿದ್ದ ಭವ್ಯ ಸ್ವರೂಪದ ವ್ಯಕ್ತಿಯೊಬ್ಬರ ಪದ್ಮಾಸನ ಹಾಕಿ ಕುಳಿತ್ತಿದ್ದರು. ಮಾತನಾಡುತ್ತಾ ಮಾತನಾಡುತ್ತಾ ಮಧ್ಯೆ ತಮ್ಮ ಕಂಚಿನ ಕಂಠದಲ್ಲಿ ಸಂಸ್ಕೃತ ಶ್ಲೋಕಗಳನ್ನು ಉಚ್ಚರಿಸುತ್ತಿದ್ದರು.  ಶಾಂತವಾದ ಮುಖಮುದ್ರೆ, ಗಂಭೀರ ಭಾವ, ದಿವ್ಯವಾಣಿ ಇವು ಕೇಳುಗರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದವು. ಭರತ ಖಂಡದ ಸನಾತನ ಧರ್ಮ ಅವರ ಭಾಷಣದ ವಿಷಯ. ಆಗಾಗ ಅವರು “ಶಿವ ಶಿವ ” ಎಂದು  ಘೋಷಿಸುತ್ತಿದ್ದರೆ ಕೆಳುತ್ತಿದ್ದವರಿಗೆ ರೋಮಾಂಚನವಾಗುತ್ತಿತ್ತು.  ಆದರೆ ಮಾರ್ಗರೇಟ್ ಳಿಗೆ ಅಂತಹ ಯಾವ ಅನುಭವವೂ ಆಗಲಿಲ್ಲ. “ಇದರಲ್ಲಿ ಹೊಸದೇನೂ ಇಲ್ಲ” ಎಂದು ಹೇಳಿ ಮನೆಗೆ ಹೊರಟು ಹೋದಳು.

ಈ ಅಪೂರ್ವ ಲಕ್ಷಣದ, ಮಧುರವಾಣಿಯ ದಿವ್ಯ ಮೂರ್ತಿಯೇ ಸ್ವಾಮಿ ವಿವೇಕಾನಂದರು ಎಂಬುವುದು ಮಾರ್ಗರೇಟ್ ಳಿಗೆ ಗೊತಾಯಿತು. ಎರಡು ವರ್ಷಗಳ ಹಿಂದೆ ಅಮೇರಿಕಾದ ಷಿಕಾಗೋ ನಗರದಲ್ಲಿ ಒಂದು ಸರ್ವ ಧರ್ಮ ಸಮ್ಮೆಳನ ನೆರೆದಿತ್ತು. ಯಾರೂ ಕರೆಯದೆ ತಾವಾಗಿ ಸ್ವಾಮೀಜಿ ಅಲ್ಲಿಗೆ ಹೋಗಿದ್ದರು.  ಒಂದೇ ಒಂದು ಉಪನ್ಯಾಸದಿಂದ ಲಕ್ಷಾಂತರ ಅಮೇರಿಕನ್ನರ ಹೃದಯವನ್ನು ಸೆರೆಹಿಡಿದಿದ್ದರು. ತ್ಯಾಗ, ವೈರಾಗ್ಯ, ತಪಸ್ಸು, ಪಾಂಡಿತ್ಯಗಳಲ್ಲಿ ಇವರನ್ನು ಮೀರಿಸುವವರು ಮತ್ತೊಬ್ಬರಲಿಲ್ಲ ಎನ್ನುವಂತೆ ಅವರ ಕೀರ್ತಿ ಜಗತ್ತನ್ನೆಲ್ಲ ಸ್ಥಾಪಿಸಿತು.

“ಎಚ್ಚರಳಾಗು!”

ಮಾರ್ಗರೇಟ್ “ಇದರಲ್ಲೇನೂ ಹೊಸದೇನೂ ಇಲ್ಲ” ಎಂದು ಬಾಯಲ್ಲಿ ಹೇಳಿದರೂ ಅವಳ ಹೃದಯ “ಹಾಗಲ್ಲ” ಎಂದಿತು. ಅವರು ಹೇಳಿದ್ದನ್ನೆಲ್ಲ ಮತ್ತೆ ಮತ್ತೇ ನೆನಪಿಗೆ ತಂದುಕೊಂಡಳು. “ಭಗವಂತನೊಬ್ಬನೇ ಸತ್ಯ ಒಂದೊಂದು ಧರ್ಮವೂ ಆ ಸತ್ಯಕ್ಕೆ ತೆರೆದ ಹೆದ್ದಾರಿ” ಇವೆಲ್ಲ ಹೊಸದು. ಅಲ್ಲದೇ ಎಂತಹ ತೇಜಸ್ವಿಯಾಧ ಸಂನ್ಯಾಸಿ ! ಭಗವಂತನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಅವರು ಹೇಳುವುದು ಪುಸ್ತಕದಲ್ಲಿ ಬರೆದಿರುವ ಮಾತುಗಳಲ್ಲ.ತಮ್ಮ ಹೃದಯದ ಆಳದಲ್ಲಿ ತವು ಕಂಡು ಉಂಡ ಸತ್ಯಗಳನ್ನು ಮೊಗೆದು ಮೊಗೆದು ಮಾತುಗಳಲ್ಲಿ ಅರ್ಪಿಸುತ್ತಿದ್ದಾರೆ ಅಷ್ಟೇ!.  ಅವರನ್ನು, ಅವರ ಮಾತುಗಳನ್ನು ಲಘುಯವಾಗಿ ಎಣಿಸಿ ತಾನು ಎಂತಹ ಭಯಂಕರವಾದ ತಪ್ಪುಗಳನ್ನು ಮಾಡಿದ್ದೆ!

ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಮಾರ್ಗರೇಟ್ ಳನ್ನು ಆಕರ್ಷಿಸುತ್ತಲೇ ಹೋಯಿತು. ಮಾರ್ಗರೇಟ್ ಒಂದಾದ ಮೇಲೊಂದರಂತೆ ಅವರ ಪ್ರವಚನಗಳನ್ನು ಕೇಳುತ್ತಲೇ ಹೋದಳು. ಅವರು ಮಾತುಗಳು ಎಂಥವು! ಶತಮಾನಗಳ ಮೌಢ್ಯವನ್ನು ನುಚ್ಚು ನೂರು ಮಾಡುವ ಸಿಡಿಲಿನಂತೆ ಒಮ್ಮೆ: ಅನಾದಿ ಕಾಲದಿಂದಲೂ ಹೆಪ್ಪು ಗಟ್ಟಿದ ಕತ್ತಲನ್ನು ಚಿಪ್ಪುಚಿಪ್ಪಾಗಿ ಕೆತ್ತಿ ಎಎತ್ತಿ ಎಸೆಯುವ ಉಳಿಯುವಂತೆ ಒಮ್ಮೆ, ಶಿಷ್ಯನ ಹೃದಯದ ಅಧ್ಯಾತ್ಮಿಕ ಶಕ್ತಿಯನ್ನು ಎಚ್ಚರಗೊಳಿಲಸುವ ಗುರುವಿನ ಮಂತ್ರವಾಣಿಯಂತೆ ಮತ್ತೊಮ್ಮೆ : ಸಕಲ ಸಂದೇಹಗಳನ್ನು ಹೋಗಲಾಡಿಸುವ ಅನುಭಾವ ವಚನ ದಂತೆ ಮಗದೊಮ್ಮೆ: ಹೃದಯಕ್ಕೆ ಸಂತೈಕೆಯನ್ನು ನೀಡುವ ತಾಯಿಯ ,. ಮಿತ್ರರ ವಾತ್ಸಲ್ಯದ ಸ್ನೇಹದ ನುಡಿಗಳಂತೆ ಇನ್ನೂ ಒಮ್ಮೆ: ಅವರ ಮಾತುಗಳು ಹೊಮ್ಮುತ್ತಿದ್ದವು. “ನನ್ನ ಜೀವನವನ್ನು ರೂಪಿಸಬಲ್ಲ “ಗುರು” ಎಂದರೆ ಇವರೇ?”  ಎಂದು ಕೊಂಡಳೂ ಮಾರ್ಗರೇಟ. ಅವರ ಶೀಲವನ್ನು ಕಂಡು, ಅವರ ಚಾರಿತ್ರವನ್ನು ನೋಡಿ ಅವರಿಗಾಗಿ ಅವರ ದೇಶದ ದಾಸಾನುದಾಸಳಾದೆ ನಾನು” ಎಂದು ಬರೆದಳು.

ನನ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ನೀನು ನೆರವಾಗಬಲ್ಲೆ.

ಒಂದು ದಿನ  ಉಪನ್ಯಾಸದ ನಡುವೆ ಇದ್ದಕ್ಕಿದ್ದಂತೆಯೇ ಸ್ವಾಮಿಜಿ ಗುಡುಗಿದರು. “ಜಗತ್ತಿಗೆ ಇಂದು ಬೇಕಾಗಿರುವುದು ಅಲ್ಲಿ, ರಸ್ತೆಯಲ್ಲಿ ನಿಂತು ಭಗವಂತಹನಲ್ಲದೆ ನನ್ನದು ಎಂಬುವುದು ಬೇರೆ ಏನೂ ಇಲ್ಲ ಎಂದು ಘೊಷಿಸಬಲ್ಲ ಇಪ್ಪತ್ತು ಜನ ಸ್ತ್ರೀಪುರುಷರು. ಯಾರಿದ್ದೀರಿ ಅಂಥವರು?”

ಮಾರ್ಗರೇಟಳ ಹೃದಯ “ನಾನು” ಎಂದು ಜಪಿಸಿತು ಆದರೆ ಬಾಯಲ್ಲಿ ಮಾತು ಹೊರಡಲಿಲ್ಲ.

ಒಂದು ದಿನ ಸ್ವಾಮಿಜಿ ಭಾರತದ ಮಹಿಳೆಯರ ಬಗ್ಗೆ ಮಾತನಾಡುತ್ತಾ ಹೀಗೆ ಹೇಳಿದರು. “ಅಲ್ಲಿ ಹೆಣ್ಣು ಮಕ್ಕಳು ಶಾಲೆಯ ಮುಖವನ್ನೇ ಕಾಣರು. ಅವರಿಗೆ ವಿದ್ಯಾಭ್ಯಾಸ ದೊರೆಯದೇ ಆ ದೇಶ ಉದ್ಧಾರವಾಗುವುದಿಲ್ಲ”. ನಮ್ಮ ದೇಶದ ಸ್ತ್ರೀಯರ ವಿಧ್ಯಾಬ್ಯಾಸ ಮುಂತಾದುವಕ್ಕೆ ಸಂಬಂದಪಟ್ಟಂತೆ

ನನ್ನ ಬಳಿ  ಯೋಜನೆಗಳಿವೆ. ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ನೀನು ನೆರವಾಗಬಲ್ಲೆ.

ಮಾರ್ಗರೇಟ್ ಳ ಹೃದಯ ತುಂಬಿ ಬಂತು. ತನ್ನಿಂದ ಇದು ಆಗಬಲ್ಲದೇ ಎನ್ನಿಸಿತು. ಅದೇ ಸಮಯದಲ್ಲಿ ಸ್ವಾಮೀಜಿ ಇವಳಿಗೆ  ತಿಳಿಸಿದರು. “ಇಡೀ ಜಗತ್ತನ್ನೇ   ಎಚ್ಚರಿಸುವ ಶಕ್ತಿ ನಿನ್ನಲ್ಲಿದೆ. .. ಮಹಾ ಮಹಿಳೆ ನೀನು… ಎಳು ಎಚ್ಚರಗೊಳ್ಳು, ಜಗತ್ತು ದುಃಖದಲ್ಲಿ ಬೇಯುತ್ತಿದೆ. ನೀನು ಮಾತ್ರ ಮಲಗಿರುವುದು ಎಂದರೇನು…? ಮಲಗಿರುವ ದೇವತೆಗಳೂಎಚ್ಚರಗೊಳ್ಳುವವರೆಗೂ ಕರೆಯುತ್ತಲೇ ಹೋಗೋಣ. ಎಚ್ಚರಳಾಗು…”

ಸ್ವಾಮೀಜಿಯ ಮಂತ್ರವಾಣಿ ಅವಳ ಚೇತನದ ಆಳವನ್ನು  ಪ್ರವೇಶ ಮಾಡಿತು.  ತನ್ನ ತಾಯಿ ನೆಲವನ್ನು ಬಿಟ್ಟು ಸ್ವಾಮಿ ವಿವೇಕಾನಂದರ ಪ್ರೀತಿಯ ಭಾರತಕ್ಕೆ ಹೋಗಿ, ಅಲ್ಲಿ ನೆಲೆಸಿ ಕೆಲಸ ಮಾಡುವ ದೃಡ ನಿರ್ಧಾರವನ್ನು ಅವಳೂ ಕೈಗೊಂಡಳು.

ಭಾರತದ ಕರೆ :

ಬೋಧನೆ, ಓದು, ವಾದ-ವಿವಾದ ಯಾವುದೂ ಈಗ ಮಾರ್ಗರೇಟ್ ಳಿಗೆ ಪ್ರೀಯವಾಗಲಿಲ್ಲ. ಅವಳ ಕಿವಿಯಲ್ಲಿ ಸದಾ ಸ್ವಾಮೀಜಿಯ ವಾಣಿ ಮೊಳಗು. ಭಾರತವು ಒಂದೇ ಸಮನೇ ಕರೆಯುತ್ತಿರುವಂತೆ ಅವಳಿಗೆ ಅನ್ನಿಸತೊಡಗಿತು. ಸುತ್ತ ಎತ್ತಲೂ ಕತ್ತಲು ಕವಿದಂತೆ, ಪೂರ್ವ ದಿಕ್ಕಿನಲ್ಲಿ ಮಾತ್ರ ಬೆಳಕು ಹರಿದಂತೆ, ಆ ಬೆಳಕು ತನ್ನನ್ನು ಕೈಬೀಸಿ ಕರೆದಂತೆ ಅವಳಿಗೆ ಭಾಸವಾಗುತ್ತಿದೆ.  ಸ್ವಾಮೀಜಿ ಹೇಳಿದ್ದರು. “ನಿನ್ನ ಸ್ಥಳ ಅಲ್ಲೆ, ಭಾರತದಲ್ಲೇ ಆದರೆ ನೀನು ಸಿದ್ಧಳಾದಾಗ ಮಾತ್ರ”.

ಆದರೆ ಹಾಗೆ ಸಿದ್ಧಳಾಗುವುದು ಸುಲಭದ ಕೆಲಸವೇ? ಭಾರತ ಏನು ಅನ್ನುವುದನ್ನು ಸ್ವಾಮೀಜಿ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸಿದ್ದರು. ಬಡತನ, ಅಜ್ಞಾನ, ಅಸೂಯೆ, ಕೊಳಕು ಅಲ್ಲಿ ತುಂಬಿ ತುಳುಕುತ್ತಿವೆ. ಇಂಗ್ಲೀಷರು ಈಕೆಯನ್ನು ಕೀಳಾಗಿ  ಕಾಣುತ್ತಾರೆರ. ಭಾರತೀಯರು ದ್ವೇಷ, ಸಂದೇಹ ಗಳಿಂದ ನೋಡುತ್ತಾರೆ.  ತಮ್ಮ ಸ್ವಂತ ಜನರನ್ನೇ ಅಸ್ಪ್ರಶ್ಯರೆಂದು ಕಾಣುವ ಜನ ಅವರು. ಇನ್ನು ಇವಳು ಅಲ್ಲಿಗೆ ಹೋಗಬೇಕಾಗಿರುವುದು ಸ್ತ್ರೀಯರ ಸೇವೆ ಮಾಡುವುದಕ್ಕೆ ಅವರಿಗೆ ವಿದ್ಯೆ ಹೇಳಿ ಕೊಡುವುದಕ್ಕೆ. ಆ ಸ್ತ್ರೀಯರಾದರೋ ತಮ್ಮ ಮನೆಯ ಹೊಸ್ತಿಲಿಗೂ ಇವಳನ್ನು ಬಿಡುವುದಿಲ್ಲ. ಇನ್ನು ವಿದ್ಯೆ- ಮ್ಲೇಚ್ಛಳಿಂದ ಅವರು ವಿದ್ಯೆ ಕಲಿತಾರೆ?

ಇದನ್ನೆಲ್ಲ ಕೇಳಿ ಮಾರ್ಗರೇಟ್ ಳ ಹೃದಯ ಸಂದೇಹದ ಗಾಳಿಗಎ ಸಿಕ್ಕಿ ಹರಿದು ಹೋದ ಪಟದ ಹಾಗಾಗಿತ್ತು. ಅಂತಹ ಸ್ಥಿತಿಯಲ್ಲಿ ಅವಳಿಗೆ ಸ್ವಾಮಿ ವಿವೇಕಾನಂದರಿಂದ ಪತ್ರ ಬಂದಿತು. ಅವರು ಬರೆದಿದ್ದರು.

“ಈಗ ನನಗೆ ದೃಢವಾಗಿ ಹೋಗಿದೆ. ಭಾರತಕ್ಕಾಗಿ ನೀನು ಕೆಲಸ ಮಾಡುವುದಾದರೆ ನಿನಗೆ ಭವ್ಯವಾದ ಭವಿಷ್ಯ ಇದೆ. ಈಗ ಬೇಕಾಗಿರುವುದು ಪುರುಷರಲ್ಲ, ಮಹಿಳೆ, ಭಾರತಿಯರಿಗಾಗಿ, ಅದರಲ್ಲಿಯೂ ಸ್ತ್ರೀಯರಿಗಾಗಿ, ಕೆಲಸ ಮಾಡಲು ನಿಜವಾದ ಸಿಂಹಿಣಿ. ನಿನ್ನ ವಿದ್ಯೆ, ಪ್ರಮಾಣಿಕತೆ, ಪರಿಶುದ್ಧತೆ, ಅಪಾರ ಪ್ರ್‌ಏಮ, ದೃಢ ನಿಶ್ಚಯ, ಎಲ್ಲಕ್ಕಿಂತ ಹೆಚ್ಚಾಗಿ ಕೆಲ್ಟಿಕ್ ರಕ್ತ ಇವು ನಿನ್ನನ್ನು  ಈಗ ಅಗತ್ಯವಾದ ಮಹಿಳೆಯನ್ನಾಗಿ ಮಾಡಿವೆ.

:ಧುಮುಕುವ ಮುನ್ನ ಚೆನ್ನಾಗಿ ಯೋಚಿಸು. ಕೆಲಸ ಮಾಡಿ ಮಾಡಿ ನೀನು ಸೋತರೆ, ನಿನಗೆ ಬೇಸರ ಬಂದರೆ, ನನ್ನ ಕಡೆಯಿಂದ ನಾನು ಮಾತು ಕೊಡುತ್ತೇನೆ. ನೀನು ಭಾರತಕ್ಕಾಗಿ ದುಡಿ  ಅಥವಾ ಬಿಡು, ವೇದಾಂತದ ತತ್ವಗಳನ್ನು ನೀನು ಜೀವನಕ್ಕೆ ಇಳಿಸು ಆಥವಾ ಬಿಡು, ನಾನಂತೂ ನಿನಗೆ ನೆರವಾಗಿ  ನಿಂತೇ ತೀರುತ್ತೇನೆ. ಆನೆಯ ದಂತಗಳು ಹೊರಕ್ಕೆ ಚಾಚುತ್ತವೆಯೇ ಹೊರತು ಹಿಂದಕ್ಕೆ ಹೋಗುವುದಿಲ್ಲ. ಹಾಗೆಯೇ ವ್ಯಕ್ತಿಯ ಮಾತುಗಳೂ, ಒಮ್ಮೆ ಕೊಟ್ಟು ತಪ್ಪುವಂತಿಲ್ಲ.

ಭರತ ಭೂಮಿಯಲ್ಲಿ :

೧೮೯೮ರ ಜನೆವರಿ೨೮ ರಂದು ಕಲ್ಕತ್ತೆಗೆ ಹಡಗು ತಲುಪಿತು. ಸ್ವಯಂ ಸ್ವಾಮಿ ವಿವೇಕಾನಂದರರೇಹಡಗಿನ ಕಟ್ಟೆಗ ಬಂದು ಮಾರ್ಗರೇಟ್ ಳನ್ನು ಅಕ್ಕರೆಯಿಂದ ಬರಮಾಡಿಕೊಂಡರು. ಆಕೆ ಊರನ್ನು , ತಾನು ಯಾರ ನಡುವೆ ಬದುಕಿ ಬಾಳಬೇಕಾಗಿತ್ತೋಳ ಆ ಜನರನ್ನು ಪರಿಚಯ ಮಾಡಿಕೊಂಡಳೂ. ಸ್ವಲ್ಪ ದಿನಗಳಲ್ಲಿಯೇ ಕಲ್ಕತ್ತೆಯಲ್ಲಿದ್ದ ಮುಖ್ಯ ಆಂಗ್ಲರ ಸ್ನೇಹ ಬೆಳೆಯಿತು. ಅದಕ್ಕಿಂತ ಮುಖ್ಯವಾಗಿ ಅಂದಿನ ದಿನಗಳಲ್ಲಿಯೇ ಅಂತರಾಷ್ಟ್ರೀಯ ಪ್ರಖ್ಯಾತಿ ಪಡೆದಿದ್ದ. ಕೆಲವು ಭಾರತೀಯರ ಪ್ರತಿಭಾವಂತರ ಆತ್ಮಿಯತೆ ದೊರಕಿತು. ಮಾರ್ಗರೇಟ ಬಂಗಾಳಿ ಭಾಷೆ, ಸಾಹಿತ್ಯಗಳನ್ನು ಪಾಠ ಹೇಳೀಸಿಕೊಳ್ಳಲು ಪ್ರಾರಂಭಿಸದಳು.

ಕೆಲವು ದಿನಗಳಲ್ಲಿಯೇ ಸ್ವಾಮಿ ವಿವೇಕಾನಂದರ ಇಬ್ಬರು ಅಮೇರಿಕನ ಶಿಷ್ಯೆಯರು ಭಾರತಕ್ಕೆ ಬಂದರು. ಅವರು ಶ್ರೀಮತಿ ಸಾರಾಬುಲ್ ಮತ್ತು ಜೊಸೆಫಿನ್ ಮ್ಯಾಕ್ಲಿಯಡ್ ಮೂವರು ಬಹುಬೇಗ ಸ್ನೇಹಿತರಾದರು. ಬೇಲೂರು ಮಠಕ್ಕೆ ಸಮೀಪವಾಗಿದ್ದ ಒಂದು ಕುಟೀರದಲ್ಲಿ ಗಂಗಾ ತೀರದಲ್ಲಿ ಈ ಗೆಳೆತಿಯರ ಭರತದ ಜೀವನ ಪ್ರಾರಂಭವಾಯಿತು.

ಅವರ ಕುಟೀರ ಗುರುಕುಲ ಶಾಲೆ.   ಪ್ರತಿದಿನ ಮುಂಜಾನೆ ಸ್ವಾಮಿ ವಿವೇಕಾನಂದರು ಕೆಲವೊಮ್ಮೆ ಒಬ್ಬರೇ ಉಳಿದಂತೆ ತಮ್ಮ ಸೋದರ ಸನ್ಯಾಸಿಗಳೊಂದಿಗೆ ಅಲ್ಲಿಗೆ ಹೋಗುತ್ತಿದ್ದರು. ಅವರು ಹೋದ ಕೂಡಲೇ ಅಪೂರ್ವವಾದ ಒಂದು ಚೈತನ್ಯ ಕುಟೀರವನ್ನೆಲ್ಲ ತುಂಬುತ್ತಿತ್ತು.  ಸ್ವಾಮಿಜಿ ಅವೇಶ ತುಂಬಿ ಗಂಟೆಗಟ್ಲೆ ಮಾತನಾಡುತ್ತಿದ್ದರು.  ವಿಷಯ :ಭರತ ಭೂಮಿ, ಇಲ್ಲಿನ ಇತಿಹಾಸ,ಸಂತರು, ವೀರರು, ಪುರಾಣಗಳು, ಮಹಾ ಕಾವ್ಯಗಳು ಕವಿಗಳು, ಶಿಲ್ಪಿಗಳು, ಎಲ್ಲಕಿಕಂತ ಹೆಚ್ಚಾಗಿ ಇಲ್ಲಿನ ಋಷಿಗಳು, ಕೇಳುಗರ ಮೈಮರೆತು ಹಿಂದಿನ ಶತಮಾನಗಳನ್ನೆಲ್ಲವನ್ನು ಬಾಳುತ್ತಿದ್ದರು.  ಈ ವಿದೆಶದ ಭಕ್ತರ‍್ ಹೃದಯಗಳು “ಭಾರತ ಭಾರತ” ಎಂದು ಮಿಡಿಯುವ ವರೆಗೂ ಸ್ವಾಮೀಜಿ ಪ್ರವಚನಗಳನ್ನು ನೀಡುತ್ತಲೇ ಹೋದರು.

ಮೀಸ್ ಮ್ಯಾಕ್ಲಿಯೆಡ ಒಂದು ದಿನ ಕೇಳಿದರು:

“ಸ್ವಾಮೀಜಿನಾನು ನಇಮಗೆ ಅತ್ಯತ್ತಮವಾದ ರೀತಿಯಲ್ಲಿ ಸೇವೆ ಸಲ್ಲಿಸುವುದು ಹೇಗೆ ?”

ಥಟ್ಟನೆ ಉತ್ತರ ಬಂತು.

ಭಾರತವನ್ನು ಪ್ರೀತಿಸು, ಭಾರತಕ್ಕೆ ಸೇವೆ ಸಲ್ಲಿಸು, ಈ ದೆಏಶವನ್ನು ಪೂಜಿಸು.ಆದೇ ಸಂದೇಶವೆಂದುಕೊಂಡಳು ಮೌನವಾಗಿ ಕುಳಿತು ಅಲಿಸುತ್ತಿದ್ದ ಮಾರ್ಗರೇಟ್.

ನಿವೇದಿತಾ

ದಕ್ಷೀಣೇಶ್ವರದ ದೇವಮಾನವ ಶ್ರೀ ರಾಮಕೃಷ್ಣ ಪರಮಹಯಂಸರು ಸ್ವಾಮಿ ವಿವೇಕಾನಂದರ ಗುರು.  ಆದೇವ ಗುರು ಹಂಸರು ಸ್ವಾಮಿ ವಿವೇಕಾನಂದರ ಗುರು. ಆ ದೇವಗುರು ೧೮೮೬ರಲ್ಲಿ ಮಹಾ ಸಮಾಧಿಯನ್ನು ಪಡೆದಿದ್ದರು. ಅವರ ಪತ್ನಿ ಶ್ರೀಮಾತೆ ಶಾರದಾದೇವಿಯವರು ಶಿಷ್ಯ ಕೋಟಿಯನ್ನು ಹರಸುತ್ತಿದ್ದರು.

ಅವರನ್ನು ಕಾಣುವ ಆಸೆ ಮಾರ್ಗರೇಟಳಿಗೆ ತಡೆಯಲಾರದಷ್ಟಿತ್ತು. ಕಳೆದ ಶತಮಾನದ ಮಡಿವಂತಿಕೆಗೆ ಸೇರಿದ್ದ ಆ ದೇವಿ ಪಾಶ್ಚಾತ್ಯರಾದ ತನನ್ನು ತನ್ನ ಗೆಳತಿಯರನ್ನು ಹೇಗೆ ಬರಮಾಡಿಕೊಳ್ಳುತ್ತಾರೋ ಎಂಬ ಸಂಕೋಚದಿಂದಲೇ ಮಾರ್ಗರೇಟ್ ಮಾರ್ಚ ೧೭ ರಂದು ಶ್ರೀಮಾತೆಯ ದರ್ಶನಕ್ಕೆ ಹೋದರು. ಪವಿತ್ರ, ಪ್ರೇಮ, ವಾತ್ಸಲ್ಯಗಳ ಮೂರ್ತಿ ಶ್ರೀಮಾತೆ ಶಾರದಾದೇವಿಯವರು, ಮಾರ್ಗರೇಟ, ಸಾರಾಬುಲ್, ಮತ್ತು ಮ್ಯಾಕ್ಲಿಯೆಡ್ ಮೂವರನ್ನು ಸ್ವಂತ ಮಕ್ಕಳಂತೆ ಸ್ವಾಗತಿಸಿದರು. ಪೂರ್ವ ಪಶ್ಚಿಮಗಳ ಸಂಗಮವಾಯಿತು.

ಮಾರ್ಗರೇಟ್ ನೋಬ್ಲ್ ‘ನವೇದಿತಾ’ ಅದಳು

೧೮೯೮ರ ಮಾರ್ಚ೨೫ ಮಾರ್ಗರೇಟ್ ಳ ಜೀವನದಲ್ಲಿ ಅತ್ಯಂತ ಪವಿತ್ರವಾದ ದಿನ. ಎಂದಿಗೂ ಮರೆಯಲಾರದ ದಿನದ. ಗುರು ತನ್ನನ್ನು ಭಗವಂತನಿಗೆ, ಭರತಕ್ಕೆ ವಿಧಿಫೂರ್ವ ಅರ್ಪಿಸಿದ ದಿನ.

ಅಂದು ಶುಕ್ರವಾರ. ಎಂದಿನಂತೆ ಸ್ವಾಮೀಜಿ ಇವರ ಕುಟೀರಕ್ಕೆ ಬಂದರು. ಇವರು ಮೂವರನ್ನು ಅವರು ಮಠಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸ್ವಾಮಿ ವಿವೇಕಾನಂದರು ಮಾರ್ಗರೇಳನ್ನು ದೇವಾಲಯಕ್ಕೆ ಕರೆದೊಯ್ದರು. ಶಿಷ್ಯೆಗೆ ಗುರುಗಳು ಶಿವನನ್ನು ಪೂಜಿಸುವ ವಿಧಾನವನ್ನು ಹೇಳಿಕೊಟ್ಟು ಅವಳೇ ಪೂಜೇ ಮಾಡುವಂತೆ ಹೇಳಿದರು. ಬದುಕಿನಲ್ಲಿ  ಮೊದಲ ಬಾರಿಗೆ ದೊರೆತ ಈ ಅಮೂಲ್ಯ ಅವಕಾಶದಿಂದ ಮಾರ್ಗರೇಟ್ ಭಾವಪೂರ್ಣಳಾದಳೂ. ಗುರುವು ಅವಳಿಗೆ ಬ್ರಹ್ಮಚರ್ಯ ವ್ರತವನ್ನು  ನೀಡಿದರು. “ನಿವೇದಿತಾ” (ಭಗವಂತನಿಗೆ ಸಮರ್ಪಿತಳಾದವು) ಎಂಬ ಹೆಸರನ್ನು ಕೊಟ್ಟರು. ಬಿಧಿಯಲ್ಲ ಮುಗಿಯುತ್ತ ಬಂದಾಗ ಸ್ವಾಮೀಜಿ ಬುದ್ಧನ ಚರಣ ಕಮಲಗಳಿಗೆ ಹೂಗಳನ್ನು ಅರ್ಪಿಸುವಂತೆ ನಿವೇದಿತಾಳಿಗೆ ಅಪ್ಪಣೆ ಮಾಡಿದರು. ಅನಂತರ ಭಾವದಿಂದ ತುಂಬಿ, ಗದ್ಗದದಿಂದ ಕೂಡಿದ ವಾಣಿಯಲ್ಲಿ ಅವರು ನಿವೇದಿತಾಳಿಗೆ ಹೇಳೀದರು. “ಬುದ್ಧನಾಗುವ ಮುನ್ನ ಐದು ನೂರು ಸಲ ತನ್ನ ಜೀವನ್ನನು ಇತರರಿಗಾಗಿ ಅರ್ಪಿಸಿದ ಈ ಮಹಾನುಭಾವನ ಹಾದಿಯಲ್ಲಿ ನಡೆ, ಹೋಗು”.

ಒಂದು ಆಶ್ಚರ್ಯದ ಸಂಗತಿ ಎಂದರೆ ಮಾರ್ಗರೇಟ್ ಹೊಟ್ಟೆಯಲ್ಲಿರುವಾಗ ಅವಳ ತಾಯಿ ದೇವರಿಗೆ ಹರಕೆ ಹೊತ್ತಿದ್ದಳು:” ಸುಖವಾಗಿ ಮಗು ಹುಟ್ಟಿದರೆ ಅದನ್ನು ನಿನಗೇ ಸಮರ್ಪಿಸುತ್ತೇನೆ” ಎಂದು. ಹರಕೆ ಸಂದೀತು!

ಆ ವರ್ಷದ ಬೇಸಿಗೆಯಲ್ಲಿ ಸ್ವಾಮೀಜಿ ನಿವೇದಿತಾಳನ್ನು ಇತರ ಶಿಷ್ಯರನ್ನೂ ಕರೆದುಕೊಂಡು ಹಿಮಾಅಲಯದ ಆಲ್ಮೋರಕ್ಕೆ ಹೊರಟರು.  ಪ್ರಯಾಣದ ಕಾಲದಲ್ಲಿ ಆ ಗುಂಪು ಚಲಿಸುವ ಒಂದು ಗುರುಕುಲವಾಗಿತ್ತು. ಉದ್ದಕ್ಕೂ ಪಾಠ, ಪ್ರವಚನ, ಧ್ಯಾನ, ಹಿಮಾಲಯದ ಭವ್ಯ ಸೌಂಧರ್ಯದಲ್ಲಿ ನಿವೇದಿತಾ ಲೀನಳಾಗಿ ಹೋದಳೂ. ಪುಟ್ಟ ಬಾಲಕಿಯಂತ ಆನಂದದಿಂದ ಕುಣಿದಳು. ಸಾಕ್ಷಾತ್ ಗುರುವಿನ ಜೊತೆಯಲ್ಲಿಯೇ ಅಮರನಾಥನನ್ನು ಅವಳು ನೋಡಿದಳೂ. “ಜಗನ್ಮಾತೆಯನ್ನು ಸದಾ ಕರೆಯುತ್ತಿರು. ಆಕೆ ಬಂದೇ ಬರುತ್ತಾಳೆ. ಬಂದಾಗ ಮಾತ್ರ ಆಕೆಯನುನ ಸ್ವೀಕರಿಸಲು ಸಿದ್ಧಳಾಗಿರು” ಎಂದು ಸ್ವಾಮೀಜಿ ಉಪದೇಶಿಸಿದರು.

ಶಾಲೆಯ ಪ್ರಯೋಗ

೧೮೯೮ರ ನವೆಂಬರ ೧೩ ರಂದು ಪುಟ್ಟದಾಗಿ ಅವಳ ಶಾಲೆ ಪ್ರಾರಂಭವಾಯಿತು. ಬಾಡಿಗೆಯ ಮನೆಯಲ್ಲಿ. ಶ್ರೀ ಮತೆಯ ಶಾರದಾದೇವಿಯವರೇ ಬಂದು ಶಾಲೆಯ ಪ್ರಾರಂಭೋತ್ಸವ ಮಾಡಿದರು. ನಿವೇದಿತಾಳ ಆನಂದಕ್ಕೆ ಪಾರವೇ ಇಲ್ಲ.

ನಿವೇದಿತಾಳನ್ನು ನೋಡಿದರೆ ಎಲ್ಲರಿಗೂ ಗೌರವ ಹುಟ್ಟುತ್ತಿತ್ತು. ಉದ್ದನೆಯ, ಬಿಳುಪು ಬಣ್ಣದ , ಶುಬ್ರವಾದ ಒಂದು ನಿಲುವಂಗಿಯಿನ್ನು ತೊಟ್ಟು, ಸೊಂಟಕ್ಕೆ ಒಂದು ರೇಷ್ಮೇ ದಾರವನ್ನು ಸುತ್ತಿರುತ್ತಿದ್ದಳೂ. ಕೊರಳಿಗೆ ಒಂದು ರುದ್ರಾಕ್ಷಿ ಮಾಲೆ,ಜೀವನದುದ್ದಕ್ಕೂ ಅದೇ ಉಡುಪು. ತುಂಬ ಸುಂದರಿಯಾದ ಈಕೆಯನುನ  ಆ ಉಡುಪಿನಲ್ಲಿ ನೋಡಿದವರೆಲ್ಲ “ಮಹಾಶ್ವೇತೆ” ಎಂದು ಕರೆಯುವಂತ್ತಿತ್ತು. ತುಂಬಿದ ಒಂದು ಸಭೆಗೆ ಈಕೆ ಪ್ರವೇಶಿಸಿದಾಗ ಜನರೆಲ್ಲ ತಾವೇ  ತಾವಾಗಿ ಎದ್ದು ಗೌರ‍ವ ತೋರಿಸಿದರಂತೆ.

ನಿವೇದಿತಾಳ ಶಾಲೆ ಆರಂಭವಾಯಿತು. ನಿಜ, ಆದರೆ ಅದಕ್ಕೆ ವಿದ್ಯಾರ್ಥಿನಿಯರು ಸಿಕ್ಕಬೇಕಲ್ಲ? ಅದೇ ಕಷ್ಟ ವಾಯಿತು. ಸುತ್ತಮುತ್ತ ಇದ್ದ ಮನೆಗಳಿಗೆ ಹೋಗಿ ತಂದೆ ತಾಯಿಗಳೊಡನೆ ವಾದಿಸಿ ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಕೇಳೀಕೊಂಡಳೂ. “ಛೇ , ಹೆಣ್ಣು ಮಕ್ಕಳಿಗೆ ಓದು ಬರಹ ಎಂದರೇನು” ಎಂದು ಅವರೆಲ್ಲ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಕೆಲವರು ಇವಳೀಗೆ  ಬೇರೆ ಕೆಲಸವಿಲ್ಲವೆಂದು ಮೂಗು ಮುರಿದರು. ಇವಳು ಹೆದರಿಲಿಲ್ಲ. ನಾಲ್ಕು ಮಕ್ಕಳಾದರೂ ಸೇರಿದರೆ ಸಾಕು ಎಂದು ಹೆಣಗಿದಳು ಕಷ್ಟೊಪಟ್ಟು ನಾನಾ ವಯಸ್ಸಿನ ಹೆಣ್ಣು ಮಕ್ಕಳನ್ನು ಹಿಡಿದು ತಂದು ಅವರಿಗೆ ಓದು ಬರಹ, ಚಿತ್ರಕಲೆ, ಮಣ್ಣಿನಲ್ಲಿ ಬೊಂಬೆಗಳನ್ನು ಮಾಡುವುದು ಹೇಳಿಕೊಡಲು ಶುರು ಮಾಡಿದಳೂ.

ತನ್ನ ಸುತ್ತಮುತ್ತಲಿನ ಜನರನ್ನು ನಿವೇದಿತಾ ಹೃದಯದ ಆಳಂದಿಂದ ಪ್ರೀತಿಸಿದಳು. ಅವರ ಮನೆಗಳಲ್ಲಿ ಧಾರಾಳವಾಗಿ ಓಡಾಡಿ ಅವರ ಮನೆಯವಳೇ ಆಗಿ ಹೋದಳು. ಕಲ್ಕತ್ತೆಯ ಉತ್ತರ ಭಾಗದಲ್ಲಿ ಈಕೆ ಎಲ್ಲರ ಪಾಲಿಗೆ “ಅಕ್ಕ ನಿವೇದಿತಾ” ಆಗಿ ಹೋದಳು.

ಒಮ್ಮೆ ಒಂದು ಘಟನೆ ನಡೆಯಿತು. ಹೆಂಗಸಳೊಬ್ಬಳು ಅಳುತ್ತಾ ನಿವೇದಿತಾಳ ಮನೆಗೆ ಓಡಿ ಹೋದಳು. ನಿವೇದಿತಾಳನ್ನು ಎಳೆಯುತ್ತಾ ಹೇಳಿದಳು. “ಅಕ್ಕಾ ಓಡಿಬಾ. ನನ್ನ ಕೊನೆಯ ಮಗುಸಾಯುತ್ತಿದೆ”. ನಿವೇದಿತಾ ಓಡಿದಳು.  ಇವರ ಮನೆಯೊಳಗೆ ಹೋಗುತ್ತಿದ್ದಂತೆಯೇ ಆ ಚಿಕ್ಕ ಮಗು ಸತ್ತು ಹೋಯಿತು.  ದುಃಖದಿಂದ ಹುಚ್ಚಾದ ತಾಯಿ ಎರಡು ಗಂಟೆಗಳ ಕಾಲ ತನ್ನ ಮಗುವನ್ನು ಅಪ್ಪಿಕೊಂಡು ರೋಧಿಸಿದಳು. ನಿವೇದಿತಾ ಅವಳಿಗೆ ಸಮಾಧಾನದ ಮಾತುಗಳನ್ನು ಹೇಳೀದಳು. ಮರುದಿನ ಬೆಳಗ್ಗಿಯೇ ನಿವೇದಿತಾ ಬೇಲೂರು ಮಠಕ್ಕೆ ಹೋಗಿ ತನ್ನ ಗುರುದೇವನಿಗೆ ಈ ವಿಷಯ ತಿಳಿಸಿದಳು. ಸ್ವಾಮೀಜಿ ಒಂದು ಅಪೂರ್ವವಾದ ಸಂದೇಶವನ್ನು ನೀಡಿದರು. “ಸಾವನ್ನು ಪೂಜಿಸು ನಿವೇದಿತಾ,, ಸುಂದರವಾದುದನ್ನು ಹೇಗೋ ಹಾಗೇ ಭಯಂಕರವಾದುದದನ್ನೂ ಪೂಜಿಸು”.

ಈಕೆ ಗುರುವಾಣಿಯನ್ನು ಆಲಿಸಿದಳು. ಮೃತ್ಯು ಬದುಕಿನ ಇನ್ನೊಂದು ಮುಖವೆಂಬುವುದನ್ನು ಅರಿತಳು. ಅವಳು ಅಂದು ತಿಳಿದುಕೊಂಡದ್ದನ್ನು ಪರೀಕ್ಷಿಸುವ ಕಾಲ ಬಹುಬೇಗ ಬಂದಿತು.

ಪ್ಲೇಗ್ ಪಿಡುಗು :

ಮಾರ್ಚ ತಿಂಗಳಲ್ಲಿ ಭಯಂಕರವಾದ ಪ್ಲೇಗ ರೋಗ ಕಲ್ಕತ್ತೆಯಲ್ಲೆಲ್ಲ ಹರಡಿತು. ದಿನವೂ ನೂರರು ಜನ ಸಾಯತೊಡಗಿದರು. ನಿವೇದಿತಾ ತಕ್ಷಣ ಕೆಲಸಕ್ಕೆ ಧುಮುಕಿದಳು. ಬಂಗಾಳಿ ತರುಣರು ಕುಳಿತು ನೋಡುತ್ತಿದ್ದಂತೆಯೇ ಅಲ್ಲಿನ ರಸ್ತೆಗಳನ್ನು ಗುಡಿಸುತ್ತಿದ್ದ ಈಕೆಯನುನ ಕಂಡು ಹೆಂಗಸರು ನಾಚಿಕೆಯಿಂದ ತಲೆತಗ್ಗಿಸಿ ಮನೆಯೊಳಗೆ ಓಡಿದರು.ಯುವಕರೂ ನಾಚಿಕೆಯಿಂದ ಹಿಡಿಯಾಗಿ ಹೋದರು. ತಕ್ಷಣ ಸೊಂಟಕಟ್ಟಿ ಅವರೂ ಗುಡಿಸುವುದಕ್ಕೆ ನಿಂತರು. “ನಾವು ಗುಡಿಸದಿದ್ದರೆ ಅಕ್ಕನೇ ಗುಡಿಸುತ್ತಾಳೆ. ಹಾಗಾಗಲು ಬಿಡಬಾರದು” ಎಂಬುವುದು ಮನೆ ಮಾತಾಯಿತು. ಸ್ವಚ್ಛತೆ ತಾನಾಗಿ ನಲಿಯತೊಡಗಿತು.

ನಿವೇದಿತಾ ಸಮಿತಿ ರಚಿಸಿದಳು.ಎಲ್ಲರೂ ಸೇರಿ ರಸ್ತೆಗಳನ್ನು ಗುಡಿಸುವುದು, ರೋಗಿಗಳಿಗೆ ಶುಶ್ರೂಷನೆ ಮಾಡುವುದು ಮುಂತಾದ  ಕೆಲಗಳಲ್ಲಿ ತೊಡಗಿದರು.  ನಿವೇದಿತಾ ಒಂದು ಕ್ಷಣವೂ ವಿರಾಮವಿಲ್ಲದೆ ದುಡಿದು ದುಡಿದು ಬಸವಾದಳು.

ಮನೆಯಿಂದ, ಮನೆಗೆ, ಸಾವಿಗಿಂತ ಮುಂಚೆ ನಿವೇದಿತಾ ಓಡುತ್ತಿದ್ದಳು. ಆದರೆ ಒಮ್ಮೊಮ್ಮೆ ಇವಳಿಗಿಂತ ಮುಂಚೆ ಮೃತ್ಯುವೇ ಮನೆಯನ್ನು ಸೇರಿರುತ್ತಿತ್ತು. ಒಮ್ಮೆಯಂತೂ ಸಾವು ಇವಳು ಒಟ್ಟಿಗೆ ಹೊಕ್ಕರು. ಒಬ್ಬ ಬಾಲ ಇವಳ ತೊಡೆಯ ಮೇಲೇಯೇ ಸತ್ತ. ನಿವೇದಿತಾ ಅಂಥ ಸಮಯದಲ್ಲಿ ಅಲ್ಲೇ ಕುಳಿತು ಮನೆಯವರನ್ನು ಸಂತೈಸುತ್ತಿದ್ದಳು.

ಒಂದೇ ಸಮನೇ ಮೂವತ್ತು ದಿನಗಳ ಕಾಲ ಹೋರಾಡಿದ ಮೇಲೆ ಪ್ಲೇಗ್ ಮಾರಿ ತೊಲಗಿತು. ತನ್ನ ಆರೋಗ್ಯವನ್ನೇ ಪಣವಾಗಿಟ್ಟು ನಿವೇದಿತಾ ನೂರಾರು ಜನರನ್ನು ಸಾವಿನ ದವಡೆಯಿಂದ ಹೊರಕ್ಕೆ ಎಳೆದು ಹಾಕಿದ್ದಳು.

ಈ ಕಾಲದಲ್ಲಿ ನಿವದಿತಾಳ ಆಹಾರ ಎಂದರೆ ಕೇವಲ ಹಣ್ಣು, ಹಾಲು, ಒಬ್ಬ ರೋಗಿಯ ಔಷಧಕ್ಕೆ ಹಣ ಸಾಲದೆ ಬಂದಾಗ ನಿವೇದಿತಾ ಹಾಲು ಕುಡಿಯುವುದನ್ನೇ ಬಿಟ್ಟು ಬಿಟ್ಟಳು.

ಪಶ್ಚಿಮಕ್ಕೆ ಯಾತ್ರೆ :

ನಿವೇದಿತಾಳ ಶಾಲೆ ಕುಂಟುತ್ತಾ ನಡೆದಿತ್ತು. ಮುಖ್ಯವಾಗಿ ಹಣಿಲ್ಲ. ತಿಂಗಳಿಗೆ ಒಂದು ರೂಪಾಯಿ ಶುಲ್ಕವೆಂದು ವಿಧಿಸಿದ್ದಳೂ. ಶುಲ್ಕ ಬರುವುದಿರಲಿ, ಶಾಲೆಗೆ ಮಕ್ಕಳು ಬಂದರೆ ಸಾಕಾಗಿತ್ತು. ಶಾಲೆಯೂ ನಡೆಯಬೇಕು, ತನ್ನ ಜೀವನವೂ  ನಡೆಯಬೇಕು. ಯಾರಲ್ಲಿ ಬೇಡುವುದು ? ಈ ಬಡ ದೇಶದ ಜನರನ್ನೇ ಮತ್ತೇ ಮತ್ತೇ ಕೇಳುವುದೇ? “ಕೆಲಸವನ್ನು ಏನೇ ಆದರೂ ನಿಲ್ಲಿಸಬಾರದು “ಅದು ಅವಳ ಧೀರ ಸಂಕಲ್ಪ. ಪಶ್ಚಿಮ ದೇಶಗಳಿಗೆ ಹೋಗಿ ಹಣ ಬೇಡಿ ತಂದರೆ ಆಗಬಹುದೇ? ಸ್ವಾಮಿ ವಿವೇಕಾನಂದರೂ ಯೂರೋಪ್,ಅಮೇರಿಕಗಳಿಗೆ ಹೊರಟಿದ್ದರು. ಇಬ್ಬರೂ ೧೮೯೯ರ ಜೂನ್ ಮಧ್ಯಭಾಗದಲ್ಲಿ ಹಡಗಿನಲ್ಲಿ ಪ್ರಯಾಣ ಮಾಡಿದರು.

ತನ್ನ ಪುಟ್ಟ ಶಾಲೆಗೆ ಹಣ ಸಂಗ್ರಹಿಸಬೇಕು ಎಂದು  ನಿವೇದಿತಾ ಅಮೇರಿಕಾಕ್ಕೆ ಹೋದಳು. ಆದರೆ ಅದಕ್ಕಿಂತ ದೊಡ್ಡ ಕೆಲಸ ಅಲ್ಲಿ ಅವಳಿಗಾಗಿ ಕಾದುಕುಳಿತ್ತಿತ್ತು.

ಭಾರತದ ಬಗ್ಗೆ ಈಗಾಗಲೇ ಅಮೇರಿಕದ ತುಂಬ ಬೇಕಾದಷ್ಟು ಅಪ ಪ್ರಚಾರ ನಡೆದಿತ್ತು. ಇಲ್ಲಿನ ಬಡತನ, ಮೂಢನಂಬಿಕೆಗಳನ್ನು ಕ್ರೈಸ್ತ ಪಾದ್ರಿಗಳು ಭೂತಾಕಾರ ಮಾಡಿ ಪ್ರಚಾರ ಮಾಡಿದ್ದರು. ಜೊತೆಗೆ ಇಲ್ಲದ ವಿಕಾರಗಳನ್ನು ಕಲ್ಪಿಸಿ ಚಿತ್ರಿಸಿದ್ದರು. ಇವನ್ನೆಲ್ಲ ನೋಡಿ ನಿವೇದಿತಾ ದಿಗ್ಭ್ರಾಂತಳಾದಳು. ತಕ್ಷಣವೇ ಈ ರೀತಿ ಪ್ರತಿಜ್ಞೆ ಮಾಡಿದಳು. ಮೊದಲು ಭಾರತದ ನಿಜವಾದ ಚಿತ್ರವನ್ನು ಜನರ ಮುಂದೆ ಇಡಬೇಕು. ಭಾರತದ ಸಹಸ್ರಾರು ವರ್ಷಗಳ  ಉಚ್ಛ ಸಂಸ್ಕೃತಿ ಪರಂಪರೆಯನ್ನು ಸರಿಯಾದ ಹಿನ್ನಲೆಯಲ್ಲಿ ಇಲ್ಲಿನ ಜನರಿಗೆ, ಜಗತ್ತಿಗೆ ವಿವರಿಸಬೇಕು. ಅದರ ಆದ್ಯಾತ್ಮ ಶಿಖರಗಳನ್ನು ಪರಿಚಯ ಮಾಡಿಕೊಡಬೇಕು. ಭಾರತಕ್ಕೆ ತಾನು ಸಲ್ಲಿಸಬೇಕಾಗಿರುವ ಮೊದ ಮತ್ತು ಅತ್ಯಗತ್ಯವಾದ ಸೇವೆ ಇದೇ.

ಅಂದೇ ಕೆಲಸ ಪ್ರಾರಂಭವಾಯಿತು. ಅನೇಕ ಕಡೆಗಳಲ್ಲಿ ಅವಳು ಉಪನ್ಯಾಸ ಮಾಢಿದಳು. ಅವಳ ಶ್ರದ್ದೇ, ಪ್ರಾಮಾಣಿಕತೆ, ಮಾತಿನ ವೈಖರಿ, ಅಪಾರ ಜ್ಞಾನ ತೀಕ್ಷ್ಣ ಮತಿ ಇವುಗಳನ್ನು ಜನ ಮೆಚ್ಚಿದರು. ಭಾರತದ ಬಗ್ಗೆ ತಮಗಿದ್ದ ಅಜ್ಞಾನಕ್ಕಾಗಿ ನಾಚಿದರು.

ನಿವೇದಿತಾ ಪ್ರಾನ್ಸ್ ಮಾರ್ಗವಾಗಿ ಲಂಡನ್ನಿಗೆ ಬಂದಳೂ. ಸ್ವಾಮಿ ವಿವೇಕಾನಂದರೂ ಈ ವೇಳೆಗಾಗಲೇ ಅಲ್ಲಿದ್ದರು. ಇಂಗ್ಲೀಷ್ ಕವನ ರೂಪದಲ್ಲಿ ಅವರು ಒಂದು ಆಶಿರ್ವಾದವನ್ನು ಬರೆದು ನಿವೇದಿತಾಳ ಕೈಗೆ ಕೊಟ್ಟರು.

“ತಾಯಿಯ ಹೃದಯವು , ವೀರನಿಚ್ಛೆಯೂ
ತೆಂಕಣ ಗಾಳಿಯ ಮಾಧುರ್ಯ
ಆರ್ಯರ ಅಗ್ನಿಯ ವೇದಿಯ  ಮೇಲಣ
ಪವಿತ್ರ ಸುಂದರ ಶಕ್ತಿಗಳು
ಎಲ್ಲವೂ, ಎಲ್ಲವೂ, ನೆಲೆಸಲಿ ನಿನ್ನಲ್ಲಿ.
ಪುರಾತನ ಚೇತನವಾವುದು ಕಾಣದ
ಈ ಎಲ್ಲವೂ ಸೇರಲಿ, ನಿನ್ನಲಿ.
ನೀನಾಗೌ, ಭಾರತ ದೇಶದ ಭವಿಷ್ಯ ಪುತ್ರಿ,
ಸಖಿ, ಸೇವಕಿ ಮತ್ತಲ್ಲಿನ ಒಡಗಿ”.

ಈ ಹರಕೆ ನಿವೇದಿತಾಳಿಗೆ ದಿವ್ಯ ರಕ್ಷೆಯಾಯಿತು.

ಮತ್ತೇ ಭಾರತಕ್ಕೆ

೧೯೦೧ರಲ್ಲಿ ನಿವೇದಿತ ಭಾರತಕ್ಕೆ ಹಿಂದಿರುಗಿದಳು. ಬೋಸ್ ಪರಾ ಗಲ್ಲಿಯ ೧೭ನೇ ನಂಬರ ಮನೆಯನ್ನು ನಿವೇದಿತಾ ಬಾಡಿಗೆಗೆ ಹಿಡಿದಳು. ಅವಳ ಮನೆ, ಶಾಲೆ, ಎಲ್ಲವೂ ಅದೆ. ಅಷ್ಟೇ ಅಲ್ಲ ಆಗಿನ ಕಾಲದ ಅನೇಕ ಮೇಧಾವಿಗಳು, ರಾಜಕೀಯ ಧುರಿಣರು, ಕವಿಗಳೂ, ಚಿತ್ರಕಾರರು ಸ್ಫೂರ್ತಿಗಾಗಿ ಬರುತ್ತಿದ್ದ ತೀರ್ಥಕ್ಷೇತ್ರವಾಗಿತ್ತು.

ಇದೇ ಸಮಯಕ್ಕೆ ಅವಳಂತೆಯೇ ಭಾರತದಲ್ಲಿ ಸೇವೆ ಸಲ್ಲಿಸಲು ಬಂದ ಕ್ರಿಸ್ಟೀನ್ ಗ್ರೀನ ಸ್ಪೈಡೆಲ್ ಎಂಬ ಗೆಳತಿಯ ನೆರವು ಸಿಕ್ಕಿತು. ಇವರ ಮನೆಯ ಬಾಗಿಲಲ್ಲಿ ಒಂದು ಬೋರ್ಡ ತೂಗಾಡತೊಡಗಿತು. ಅದರ ಮೇಲೆ “ಸೋದರಿಯರ ಮನೆ” ಎಂದು ಬರೆದಿತ್ತು.

ಮತ್ತೇ ಶಾಲೆ ಪ್ರಾರಂಭವಾಯಿತು. ಮಕ್ಕಳಿಗೆ ಮಾತ್ರವಲ್ಲದೆ ಅವರ ತಾಯಂದಿರಿಗೂ ಶಿಕ್ಷಣ ದೊರೆಯಿತು.  ನಿವೇದಿತಾ ಪುಸ್ತಕಗಳನ್ನು ಬರೆದು ತನ್ನ ಶಾಲೆಗೆ ಹಣ ಸಂಪಾದಿಸಿದಳು. ಅಮೇರಿಕದ , ಇಂಗ್ಲೇಷಿನ ಕೆಲವು ಮಿತ್ರರು ಹಣ ಕಳುಹಿಸುತ್ತಿದ್ದರು. ಆದರೇನೂ, ಆ ಶಾಲೆಗೆ ಅವೆಲ್ಲ ಏನೇನೂ ಸಾಲದು. ನಿವೇದಿತಾ ಮತ್ತು ಕ್ರಿಸ್ಟಿನ್ ಕಷ್ಟ ಪಡುತ್ತಲೇ ಹೋದರು.

ಗುರುಗಳು ಇನ್ನಿಲ್ಲ:

೧೯೦೨ ನಿವೇದಿತಾ ಬಾಳಿನಲ್ಲಿ ಕರಾಳ ವರ್ಷ. ತನ್ನ ಗುರುದೇವ ಸ್ವಾಮಿ ವಿವೇಕಾನಂದರನ್ನು ನಾಲ್ಕು ದಿನಗಳ ಹಿಂದೆಯೆಷ್ಟೆ ಕಂಡಿದ್ದಳು. ಅವರು  ಮಾತಿನ ನಡುವೆ “ನಾನು ಸಾವಿಗೆ ಸಿದ್ಧನಾಗಿದ್ದೇನೆ” ಎಂದಿದ್ದರು. ಜುಲೈ ೨ , ಏಕಾದಶಿಯಂದು ನಿವೇದಿತಾಳಿಗೆ ತನ್ನ ಗುರುದೇವನನ್ನು ನೋಡಲೇಬೇಕೆಂದಿನಿಸತು. ಬೇಲೂರು ಮಠಕ್ಕೆ ಹೋದಳೂ. ಸ್ವಾಮೀಜಿ ವಿಶ್ರಾಂತಿ ಪಡೆಯುತ್ತಿದ್ದರು. ನಿವೇದಿತಾ ಬಂದದ್ದು ಕೆಳಿ ಉತ್ಸಾಹ ಗೊಂಡರು. ತಾವೇ ಉಪವಾಸವಿದ್ರೂ ಆಕೆಗಾಗಿ ವಿಶೇಷ ಅಡುಗೆ ಮಾಡಿಸಿ ಊಟ ಮಾಡಿಸಿದರು. ಊಟ ಮುಗಿಸಿದ ಅವಳ ಕೈಗೆ ತಾವೇ ನೀರು ಹಾಕಿದರು. ಅನಂತರ ಒಂದು ಟೆವೆಲ್ ತೆಗೆದುಕೊಂಡು ಅವಳು ಬೇಡ, ಬೇಡ ಎನ್ನುತ್ತಿದ್ದರೂ ತಾವೇ ಅವಳ ಕೈ ಒರೆಸಿದರು,. ಅವಳಿಗೆ ತಡೆಯದಾಯಿತು. ಮನಸ್ಸಿಗೆ ನೋವಾಯಿತು. ಹೇಳಿದಳು, “ಸ್ವಾಮೀಜಿ ಇದು ನಾನು ತಮಗೆ ಮಾಡಬೇಕಾದ ಸೇವೆ, ನೀವಲ್ಲ”.

ಅವರು ಉತ್ತರ ಕೊಟ್ಟರು:”ಯೇಸು ತನ್ನ ಶಿಷ್ಯರ ಕಾಲು ತೊಳೆದ”.

“ಹೌದು, ಆದರೆ ಅವರು ಹಾಗೆ ಮಾಡಿದ್ದು ತನ್ನ ಕೊನೆಗಾಲದಲ್ಲಿ” ಎಂದು ಆಕೆ ಹೇಳಲು ಹೊರಟಳು. ಆದರೆ ಬಾಯಿಬರಲಿಲ್ಲ.

ಅಂದು ಸ್ವಾಮೀಜಿ ಹೃದಯತುಂಬಿ ಅವಳನ್ನು ಹರಿಸಿದರು. ಆಕೆ ಸಂತೋಷವಾಗಿ ಮನೆಗೆ ಹೋದಳು.

ಆದರೆ ಆ ಸಂತೋಷಕ್ಕೆ ಇದ್ದ ಆಯುಷ್ಯ ಕೇವಲ ಎರಡೇ ದಿನಗಳದ್ದು. ೧೯೦೨ರಂದು ಜುಲೈ ನಾಲ್ಕರ ಬೆಳಗಾಗುತ್ತಿದ್ದಂತೆಯೇ ಸುದ್ಧಿ ಬಂತು. ಇವಳ ನೆಚ್ಚಿನ ಗುರುದೇವ ಸ್ವಾಮಿ ವಿವೇಕಾನಂದರು ಮಹಾಸಮಾಧಿಯನ್ನು  ಪಡೆದಿದ್ದರು.  ಸುದ್ಧಿಯಿಂದ ತತ್ತರಿಸಿದ ನಿವೇದಿತಾ ಬೇಲೂರು ಮಠಕ್ಕೆ ಓಡಿದಳು,. ಹೌದು, ತನ್ನ ಜೀವನ ಸರ್ವಸ್ವವಾಗಿದ್ದ ಗುರು, ತನ್ನ ಬಾಳಿನ ಏಕೈಕ ಆಧಾರ  ಈ ಜಗತ್ತನ್ನು ಬಿಟ್ಟು ಹೋಗಿದ್ದಾರೆ.

ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುತ್ತಾ ಹೋದರು. ಮಧ್ಯಾಹ್ನ ೨ ಗಂಟೆಯವರೆಗೂ ಸ್ವಾಮೀಜಿಯ ದೇಹದ ಪಕ್ಕದಲ್ಲಿಯೇ ಕುಳಿತು ನಿವೇದಿತಾ ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದಳು.

ಮಂತ್ರ ಘೋಷವಾಯಿತು. ಮೆರವಣೀಗೆಯಲ್ಲಿ ಸ್ವಾಮೀಜಿಯ ದೇಹವನ್ನು ಒಯ್ದು ಗಂಗಾ ತೀರದಲ್ಲಿ ಅಗ್ನಿಗೆ ಸಮರ್ಪಿಸಿದರು. ಜಯಘೋಷ ಹತ್ತು ದಿಕ್ಕುಗಳನ್ನೂ ತುಂಬಿತು. ಬಂದಿದ್ದ ಜನರೆಲ್ಲ  ತೆರಳಿದರು. ನಿವೇದಿತ ಮಾತ್ರ ಒಬ್ಬಳೇ ಶೂನ್ಯ ದೃಷ್ಟಿಯಿಂದ ಎಲ್ಲೋ ನೋಡುತ್ತಾ ಕುಳಿತ್ತಿದ್ದಳೂ. ತನ್ನ ನೆಚ್ಚಿನ ಗುರುದೇವ ಇನ್ನಿಲ್ಲ.  ಇನ್ನು ತನಗೆ ಸಂತೈಕೆ ನೀಡುವವರು ಯಾರು ?

ಸ್ವಾತಂತ್ರ ಹೋರಾಟಕ್ಕೆ:

ನಿರಾಶಳಾಗಿ ಕುಳಿತ್ತಿರುವುದು ಅವಳ ಸ್ವಭಾವವಲ್ಲ. ಶ್ರೀ ಗುರು ತನಗೆ ನೀಡಿದ್ದ ಧಿಕ್ಷೆ ಶಕ್ತಿ, ಧೈರ್ಯಗಳದ್ದೇ ಹೊರತು ದುರ್ಬಲತೆ, ಭೀತಿಗಳದ್ದಲ್ಲ. ಆದ್ದರಿಂದ ಈ ಸಿಂಹಿಣಿ ತಲೆಯನ್ನು ಕೊಡವಿ ಗರ್ಜನೆ ಜಗತ್ತಿನ ಕಿವಿಗಳಲ್ಲಿ ಮೊಳಗುವಂತೆ ಮಾಡುತ್ತಾ ಮುಂದಕ್ಕೆ ಹೊರಟಳು.

ತನ್ನ ಗುರು ತನ್ನ ತಲೆಯ ಮೇಲೆ ಅಪಾರವಾದ ಭಾರವನ್ನು ಹೊರಿಸಿ ಹೋಗಿದ್ದರು. ತನ್ನ ಕರ್ತವ್ಯವನ್ನು ಮಾಡಲೇಬೇಕು. ಅದಕ್ಕಾಗಿ ದುಡಿಯತೊಡಗಿದಳು. ತಾಯಿ ಭಾರತಿ ಇಷ್ಟದೈವವಾಯಿತು.

ಭಾರತ ಇಂಗ್ಲೇಂಡ ಮಿತ್ರರಂತೆ ಇರಬಲ್ಲವು ಎಂಬ ಭ್ರಾಂತಿ ಮೊದ ಮೊದಲು ನಿವೇದಿತಾಳಿಗಿತ್ತು. ಈಗ ಅದು ಹೋಯಿತು. ಇಂಗ್ಲೇಂಡ ಭಾರತದ ರಕ್ತವನ್ನು ಹೀರುತ್ತಿರುವುದು ಅವಳ ಕಣ್ಣೀಗೆ ಕಟ್ಟಿ ಹೋಯಿತು. ಎರಡು ಘಟನೆಗಳು ಅವಳ ಕಣ್ಣು ತೆರೆಸಿದವು. ಇವಳ ಆಪ್ತಮಿತ್ರರಾದ ಜಗದ್ವೀಖ್ಯಾತ ವಿಜ್ಞಾನಿ ಸರ‍್ ಜಗದೀಶ ಚಂಧ್ರಭೋಸರನ್ನು ಫ್ರಾನ್ಸಿನಲ್ಲಿ ಇವಳ ಕಣ್ಣೆದುರಿಗೆ ತುಂಬ ಅದ್ದೂರಿಯಿಂದ ಗೌರವಿಸಿದರು.

ಆದರೆ ಅದೇ ಅವರನ್ನು ಇಂಗ್ಲೇಂಡಿನಲ್ಲಿ ಅಗೌರವದಿಂದ ಕಂಡರು. ಕಾರಣ ಅವರು ಗುಲಾಮ ದೇಶಕ್ಕೆ ಸೇರಿದವರು ಎಂಬುವುದು. ಅದನ್ನು ಕಂಡು ನಿವೇದಿತಾಳ ಹೃದಯ ಕುದಿಯಿತು.

ಇನ್ನೊಂದು, ಪ್ರಖ್ಯಾತ ಸ್ವಾತಂತ್ರ ಹೋರಾಟಗಾರ, ದೇಶಭಕ್ತ ಬಿಪಿನ ಚಂದ್ರಪಾಲರಿಗೆ ಆದ ಅಪಮಾನ. ಅಮೇರಿಕದಲ್ಲಿ ಒಂದು ಸಭೆಯನ್ನುದ್ದೇಶಿಸಿ ಪಾಲರು ಮಾತನಾಡಲು ಎದ್ದು ನಿಂತರು. ತಕ್ಷಣವೇ ಸಭಿಕರಲ್ಲಿ ಒಬ್ಬರು, “ಮೊದಲು ನಿಮ್ಮ ದೇಶ ಸ್ವತಂತ್ರವಾಗಲಿ. ಆಮೇಲೆ ಇಲ್ಲಿ ಬಂದು ನಿಮ್ಮ ಮತ, ತತ್ವಗಳ ವಿಷಯ ಮಾತನಾಡುವಿರಂತೆ” ಎಂದು ಬಿಟ್ಟರು.

ಇವುಗಳನ್ನು ನೆನೆದಷ್ಟೂ ನಿವೇದಿತಾಳ ಮೈ ಉರಿಯುತ್ತಿತ್ತು. ರಕ್ತ ಕುದಿಯುತ್ತಿತ್ತು. ರಾಜಕೀಯ ಸ್ವಾತಂತ್ರ ದೊರೆಯದೇ ಭಾರತೀಯರು ಮನುಷ್ಯರಾಗುವುದು ಸಾಧ್ಯವೇ ಇಲ್ಲವೆಂಬ ತೀರ್ಮಾನಕ್ಕೆ ನಿವೇದಿತಾ ಬಂದಳು. ವಿದೇಶದ ಹೆಂಗಸೊಬ್ಬಳು ತನ್ನ ತಾಯ್ನಾಡು ಎಂದು ಭಾವಿಸಿದ್ದ ಈ ದೇಶದ ಬಿಡುಗಡೆಗಾಗಿ ಕಾಯಾ ವಾಚಾ ಮನಸಾ ಹೋರಾಡಲು ನಿಂತಳು. ತನ್ನ ಲೆಖನಿ, ಮಾತಿನ ಶಕ್ತಿಗಳನ್ನು ಭಾರತದ ಹೋರಾಟಕ್ಕಾಗಿ ಮೀಸಲಿಟ್ಟಳೂ.

ಬಂಗಾಳದಲ್ಲಿ ಅವಳ ಹೆಸರು ಮನೆ ಮಾತಾಯಿತು. ಹಗಲು ರಾತ್ರಿ ದುಡಿದು ಅನೇಕ ಬಂಗಾಳಿತರುಣರ ತಲೆಗಳಲ್ಲಿ, ಮುಂದೆ ಹೆಸರು ಪಡೆದ ರಾಜಕೀಯ ನಾಯಕರಲ್ಲಿ ಸ್ವಾತಂತ್ರದ ಕನಸನ್ನು ತುಂಬಿದಳೂ. ಈಗಾಗಲೇ ಕಿಚ್ಚು ಹತ್ತಿದವರ ಹೃದಯಗಳಲ್ಲಿ  ಹೊಸ ಗಾಳಿ ಬೀಸಿ ಆ ಕಿಚ್ಚು ಮೇಲೆ ನೆಗೆದು ದಳ್ಳುರಿಯಾಗಿ ದೇಶವನ್ನೆಲ್ಲ ಹರಡುವಂತೆ ಮಾಡಿದಳು. ಪಾಟ್ನ, ಲಕ್ನೋ, ಕಾಶಿ, ಮುಂಬಯಿ, ನಾಗಪೂರ , ಚನ್ನೆಗೆ ಹೋಗಿ ಸ್ವಾತಂತ್ರ ಸಮರದ ಕಹಳೆಯನ್ನು ಊದಿದಳೂ. ಬ್ರೀಟಿಷ್ ಸರಕಾರ ಕೆರಳಿ ಕೆಂಡ ಕಾರಿತು. ಆದರೆ ಇವಳನ್ನು ಮುಟ್ಟುವ ಧೈರ್ಯ ಯಾರಿಗೂ ಬರಲಿಲ್ಲ. ಅನೇಕ ಪ್ರತಿಷ್ಠಾವಂತ ಇಂಗ್ಲೀಷರು ರಾಮಸೆ ಮ್ಯಾಕ್ಡನಾಲ್ಡ್, ವೈಸ್ ರಾಯಿಣಿ ಲೇಡಿ ಮಿಂಟೋ ಮುಂತಾದವರು ಅವಳ ಪುಟ್ಟ ಮನೆಗೆ ಭೇಟಿ ಕೊಟ್ಟು ಅವಳೂ ನಡೆಸುತ್ತಿದ್ದ ಶಾಲೆಯ ಕೆಲಸವನ್ನು ಮೆಚ್ಚಿರು.

ತನ್ನ ಶಾಲೆಯಲ್ಲಿ ದೇಶಿಯತೆ ನೆಲಸುವಂತೆ ಮಾಡಿದಳೂ. “ವಂದೇಮಾತರಂ” ಗೀತೆ ಅವಳ ಶಾಲೆಯ ಪ್ರಾರ್ಥನಾ ಮಂತ್ರವಾಯಿತು.  ತಾನೇ ಸ್ವದೇಶಿ ವಸ್ತ್ರಗಳನ್ನು ಧರಿಸತೊಡಗಿದಳು. ಚರಕವನ್ನಿಟ್ಟುಕೊಂಡು ತಾನೂ ನೂತು ತನ್ನ ಶಿಷ್ಯರೂ ನೂಲುವಂತೆ ಮಾಡಿದಳು.

ಬಂಗಾಳದ ಕಲಾ ಪ್ರಪಂಚದಲ್ಲಿ ಕ್ರಾಂತಿಯನ್ನು ತಂದವಳೂ ಅವಳೇ. ಚಿತ್ರಕರರು ಪಾಶ್ಚಾತ್ಯ ಕಲಾವಿದನನ್ನು ಅನುಸರಿಸುತ್ತಿದ್ದರು. ಅವರಿಗೆಲ್ಲ ಇವಳು ಭಾರತೀಯತೆಯ ದೀಕ್ಷೆಯನ್ನು ನೀಡಿದಳು. ಅವನೀಂದ್ರ ನಾಥ ಠಾಕೂರ, ನಂದಲಾಲ್ ಬಸು, ಅಸಿತ್ ಹಲ್ದಾರ ಮುಂತಾದ ತರುಣ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟಳು. ಅವರು ಅಜಂತ, ಎಲ್ಲೋರ, ಮುಂತಾದ ಕಲಾಕ್ಷೇತ್ರಗಳಿಗೆ ಯಾತ್ರೆ ಹೋಗಿ ಬರಲು ಹಣ ಕೊಟ್ಟು ಕಳುಹಿಸಿದಳು.

ಭಾರತೀಯವಾದ ಪ್ರತಿಯೊಂದು ಅವಳಿಗೆ ಪರಮ ಪೂಜ್ಯವಾಯಿತು. ಭಾರತೀಯರು ಯಾವುದರ ವಿಷಯದಲ್ಲಿ ನಾಚಿಕೆಪಟ್ಟುಕೊಳ್ಳತೊಡಗಿದರೋ ಅಂತಹ ವಿಗ್ರಹ ಪೂಜೆ, ಹಬ್ಬ ಹರಿದಿನಗಳು, ಪುರಣ ಪುಣ್ಯ ಕಥೆಗಳು ಇವುಗಳ ವಿಷಯದಲ್ಲಿ ಅವರು ಹೆಮ್ಮೆ ತಾಳುವಂತಹ ಪುಸ್ತಕಗಳನ್ನು ಬರೆದಳು. “ಭಾರತೀಯ ಜೀವನದ ಹಾಸು ಹೊಕ್ಕು” (ದಿ ವೆಬ್ ಆಫ್ ಇಂಡಿಯನ್ ಲೈಫ್) ಎಂಬ ಅವಳ ಪುಸ್ತಕ ಭಾರತದ ಬದುಕಿನ ಸೂಕ್ಷ್ಮ ವಿವರಗಳನ್ನೂ ಅರ್ಥ ವೈಭವವನ್ನೂ ಸೊಗಸಾಗಿ ಚಿತ್ರಿಸುತ್ತದೆ. “ನಾಕಂಡಂತೆ ನನ್ನ ಗುರುದೇವ” (ದಿ ಮಾಸ್ಟರ  ಆಸ್ ಐ ಸಾ ಹಿಮ್), ತಾಯಿ ಕಾಳಿ (ಕಾಳಿ ದಿ ಮದರ‍್) ಇವು ಅವಳ ಇತರೆ ಅನೇಕ ಕೃತಿಗಳಲ್ಲಿ ಮುಖ್ಯವಾದವು. ಅವಳ ಶೈಲಿಯಲ್ಲಿ ಮಿಂಚಿನ ಕಾಂತಿ, ಗಡುಗಿನ ಅರ್ಭಟ, ಗಂಗೆಯ ತುಂಬು ಗಾಂಭಿರ್ಯ, ಜಲಪಾತದ ಬೋರ್ಗರೆತ ಎಲ್ಲವೂ ಉಂಟು.

ಬಿಡುವಿಲ್ಲದ ದುಡಿಮೆ :

ಭಾಷಣಗಳು, ಬರವಣಿಗೆ, ರಾಜಕೀಯ ಚಟುವಟಿಕೆಗಳು ಅವಳ ಬದುಕಿನ ಸರ್ವಸ್ವವನ್ನೂ ಹೀರತೊಡಗಿದವು. ಅವಳ ಗಳಗವೂ ಬೆಳೆಯುತ್ತಾ ಹೋಯಿತು. ಶ್ರೀಮಾತೆ ದೇವಿಯವರಿಗೆ ಅವಳು ಮುದ್ದಿನ ಮಗಳೂ. ರಾಮಕೃಷ್ಣರ ಉಳಿದ ಶಿಷ್ಯರಿಗೂ ಅವಳಲ್ಲಿ ಅಚ್ಚಳಿಯದ ಪ್ರೀತಿ, ಗೌರವ, ಕವಿ ರವೀಂದ್ರರಿಗೆ ಈಕೆ ಬತ್ತದ ಸ್ಫೂರ್ತಿ ಕೇಂದ್ರ.  ರಾಜಕೀಯದ ರಂಗದಲ್ಲಿಯೂ ಇವಳ ನೆರವು ಪಡೆಯಲು, ಇವಳೊಡನೆ ಸಮಾಲೋಚನೆ ನಡೆಸಲು ಅನೇಕರು ಬಂದು ಹೋಗತೊಡಗಿದರು.  ಸುರೇಂದ್ರನಾಥ್ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ, ಆರ‍್.ಸಿ.ದತ್ತ, ಬಿಪಿನ್ ಚಂದ್ರಪಾಲರು, ಅರವಿಂದ ಘೊಷರು ಎಲ್ಲರೂ ಆಕೆಯನ್ನು ಭೇಟಿ ಮಾಡಿ ಸ್ಫೂರ್ತಿ ಪಡೆದರು. ಮಹಾತ್ಮಾ ಗಾಂಧೀಜಿ ಮತ್ತು ಬಾಲಗಂಗಾಧರ ತಿಲಕರು ಈಕೆಯನ್ನು ಸಂದರ್ಶಿಸಿದರು.

ತರುಣರಿಗಂತೂ ಆಕೆ ಆರಾಧ್ಯ ದೈವವಾದಳೂ.

ಮಂಗಳ ಗಾನ :

ನಿವೇದಿತಾ ದುಡಿದುಡಿದು ಬಳಲಿದಳೂ. ವಿಶ್ರಾಂತಿ ಎಂಬುವುದನ್ನೇ ತಿಳಿಯದ ಜೀವ ಅದು. ಜೊತೆಗೆ ಊಟಕ್ಕಿಲ್ಲ. ಇಲ್ಲಿನ ಜನ ಬೇಡುವುದರಲ್ಲಿ ನಿಸ್ಸೀಂರೇ ಹೊರತು ನೀಡುವುದರಲ್ಲಿಲ್ಲ. ಅವಳನ್ನು ತಮಗಾಗಿ ದುಡಿಸಿಕೊಂಡರು. ಅವಳಿಗೇನು ಬೇಕು ಎಂದು ಕೇಳಲಿಲ್ಲ.

೧೯೦೫ರಲ್ಲಿ ಅವಳಿಗೆ ತೀವ್ರವಾದ ಖಾಯಿಲೆ ಬಂತು. ಮಿತ್ರರು, ರಾಮಕೃಷ್ಣಾಶ್ರಮದ ಸ್ವಾಮಿಗಳು ನೆರವಿಗೆ ಬಂದು ಶುಶ್ರೂಷೆ ಮಾಡಿದರು. ಬದುಕಿಕೊಂಡಳೂ. ಆದರೇನು? ವಿಶ್ರಾಂತಿ ಪಡೆಯಲಿಲ್ಲ. ಭಾರತದಲ್ಲಿ ಬಂಗಾಳದ ವಿಭಜನೆಯಿಂದಾದ ಅಂದೋಳನದಲ್ಲಿ ಭಾಗವಹಿಸಿದಳು,. ಮೂರು ವರ್ಷ ಪೂರ್ವ – ಬಂಗಾಳದಲ್ಲಿ ಭಾರೀ ಪ್ರವಾಹ ಬಂದಿತು. ಕ್ಷಾಮ ಜನರನ್ನು ಕಿತ್ತು ತಿನ್ನತೊಡಗಿತು. ಹಳ್ಳಿಯಿಂದ ಹಳ್ಳೀಗೆ ಮಂಡಿಯಾಳದ ನೀರಿನಲ್ಲಿ ಮೈಲಿಗಟ್ಟಲೆ ನಡೆದಳೂ. ತರುಣರನ್ನು ಒಟ್ಟುಗೂಡಿಸಿ ಅವರು ಜನರಿಗೆ ಸೇವೆ ಸಲ್ಲಿಸುವಂತೆ ಮಾಡಿದಳು.

ಅವಳ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು ಏನಾದರೂ ಲೆಕ್ಕಿಸದೇ ಅವಳೂ ಬಡವರಿಗಾಗಿ, ನೊಂದವರಿಗಾಗಿ ದುಡಿಯುತ್ತಲೇ ಹೋದಳೂ.

ಆರೋಗ್ಯ ಕೆಟ್ಟಾಗ ಉಯಿಲು ಬರೆದಿಟ್ಟಳು. ತನ್ನ ಆಸ್ತಿ ಇದ್ದ ಸ್ವಲ್ಪ ಹಣ, ತಾನು ಬರೆದ ಪುಸ್ತಕಗಳ ಹಕ್ಕು ಎಲ್ಲವನ್ನೂಬೇಲೂರು ಮಠಕ್ಕೆ ನೀಡಿದಳು. ಭಾರತದಲ್ಲಿ ಸ್ತ್ರೀಯರಿಗೆ ರಾಷ್ಟ್ರೀಯ  ಶಿಕ್ಷಣ ನೀಡಲು ಅವನ್ನು ಉಪಯೋಗಿಸಬೇಕು ಎಂದು ಬರೆದಳು.

ಪ್ರವಾಹದಲ್ಲಿ ನೊಂದವರಿಗೆ ನೆರವಾದಳು

ಅಕ್ಟೋಬರ ೧೩, ಅದುವರೆಗೂ ಮೋಡದ ಮರೆಯಲ್ಲಿಯೇ ಹುದುಗಿದ್ದ ಸೂರ್ಯ ಇದ್ದಕಿದ್ದಂತೆಯ ಕಾಣಿಸಿಕೊಂಡ. ನಿವೇದಿತಾ ಹೇಳಿದಳೂ, “ನನ್ನ ದುರ್ಬಲ ದೋಣಿ ಮುಳುತ್ತಿದೆ. ಆದರೂ ಸೂರ್ಯೊದಯವನ್ನು ಕಾಣುತ್ತಿದ್ದೇನೆ”. ಇದೇ ಅವಳ  ಕೊನೆಯ ಮಾತು. ದೋಣಿಯಲ್ಲ, ದೊಡ್ಡ ನೌಕೆ ಮುಳುಗಿತು.  ಅವಳಂಥವರು ಮಾತ್ರವೇ ಕಾಣಬಹುದಾದ ಸೂರ್ಯೊದಯವನ್ನು ಅವಳು ಬದುಕು ಕಂಡಿತು.

ಜಗದೀಶಚಂದ್ರ ಬೋಸರು ಒಂದು ಸಂಶೋಧನಾಲಯವನ್ನು ಸ್ಥಾಪಿಸಿದರು. ಆಗ ಅವರು ನಿವೇದಿತಾಳ ನೆನಪಿಗಾಗಿ, ದೀಪ ಹಿಡಿದ ಮುಂದೆ ಹೆಜ್ಜೆ ಇಟ್ಟಿರುವ ಹೆಂಗಸಿನ ವಿಗ್ರಹವೊಂದನ್ನು ಇರಿಸಿದರು.

ಹಿಮಾಲಯದ ಮಡಿಲಲ್ಲಿ ಅವಳ ಸಮಾಧಿಯ ಮೇಲೆ ಒಂದು ಸಣ್ಣ ಮಂಟ. ಅದರ ಮೇಲೆ ಬರೆದಿದೆ:

“ತನ್ನ ಸರ್ವಸ್ವವನ್ನೂ ಭಾರತಕ್ಕಾಗಿ ನಿವೇದಿಸಿದ ಸೋದರಿ ನಿವೇದಿತಾ ಇಲ್ಲಿ ವಿಶ್ರಮಿಸುತ್ತಿದ್ದಾಳೆ”.

ಸೋದರಿ ನಿವೇದಿತಾಳ ಸಾರ್ಥಕ  ಜೀವನದ ಜೀವಂತ ಸ್ಮಾರಕವಾಗಿ ಆಕೆ ಸ್ಥಾಪಿಸಿದ್ದ ಪುಟ್ಟ ಶಾಲೆ ಈಗ ದೊಡ್ಡದಾಗಿ ಬೆಳೆದಿದೆ. ಸಾವಿರಾರು ಹೆಣ್ಣು ಮಕ್ಕಳು ಅಲ್ಲಿ ಕಲಿಯುತ್ತಿದ್ದಾರೆ.