(ಕನ್ನಡಟೀಕೆಯಲ್ಲಿಬರುವಕೆಲವುವಿಶಿಷ್ಟಪದಗಳಸಾಮಾನ್ಯಅರ್ಥ)

[ದಪ್ಪಅಂಕೆಗಳುಸಮುದ್ದೇಶದ, ಮುಂದಿನವುಆಯಾಸಮುದ್ದೇಶಗಳಲ್ಲಿಯವಾಕ್ಯದಸಂಖ್ಯೆಯನ್ನುಸೂಚಿಸುತ್ತವೆ. ಪದಗಳುಸಂಬಂಧಿದವಾಕ್ಯದಟೀಕೆಯಲ್ಲಿವೆ.]

ಪದ ಅರ್ಥ ಉಲ್ಲೇಖ
     
ಅರ್ಕಮೆ, ಅಲ್ಕಮೆ ಅಜೀರ್ಣ ೧೦, ೧೨೦.
ಅಕ್ಕು ಜೀರ್ಣಿಸು ೧೦, ೭೩, ೧೦೦; ೨೫, ೨೧, ೪೭
ಅಕ್ಕೆ ಶೋಕ, ದುಃಖ ೨೬, ೨೯
ಅಗ್ಗಾಯಿಲೆ ಶ್ರೇಷ್ಠಸ್ತ್ರೀ, ೨೪, ೫೪;೨೭, ೪೨, ೪೩
ಅರ್ಘ(ಅಗ್ಗ) ಶ್ರೇಷ್ಠ, ಬೆಲೆ, ಕ್ರಯ. ೮, ೧೪; ೨೭, ೪೨
ಅಟ್ಟೆ ದೇಹ, ಮುಂಡ ೩೧, ೧೪.
ಅಡಕ ವಿಪತ್ತು ೨೫, ೯೩
ಅಡಸು ಎದುರಾಗು ೨೬, ೧೨
ಅಡ್ಡಾಯುಧ ಚಿಕ್ಕಖಡ್ಗ ೧೦, ೫೯; ೧೩, ೨೩ :
ಅಣ್ಮು ಪರಾಕ್ರಮ ೩೦, ೭೨
ಅನ್ನೆಯ ಅನ್ಯಾಯ ೧೬, ೨೦, ೪೫.
ಅಮರ್ಕೆವಡೆ ಲೇಸಾಗಿಕೂಡುವುದು ೩೨, ೧೨.
ಅಮ್ಮಾವು ಖಡ್ಗ ೩೦, ೩೫.
ಅರಲ್ಕೆ ಪರಿಹಾರ ೧೦, ೬೧.
ಅಱಿತ ಜ್ಞಾನ, ತಿಳುವಳಿಕೆ ೫, ೪೨;೨೭, ೫೮.
ಅರೆ ಕಲ್ಲುಬಂಡೆ ೧೯, ೯.
ಅರಿದು ಕೆಟ್ಟ ೫, ೨೨.
ಆಲತಗೆ ಕೆಂಪುಬಣ್ಣ (ಆಲಕ್ತಕ) ೨೪, ೪೦.
ಅವಚ ವಶವಾಗುವುದು ೨೫, ೬೧.
ಅಲಸುಗಾಱ ಆಲಸಿ, ಸೋಮಾರಿ ೧೦, ೧೩೯.
ಅಸಿಪತ್ರ ಖಡ್ಗದಂತಿರುವಓಲೆ ೨೫, ೧೧೦.
ಅಸಿಯೆಱುಕಾಱ ವೇಷಧಾರಿ, ಗೂಢಪುರುಷ ೨೫, ೧೧೦
ಅಳ್ಕಮೆ ಅಜೀರ್ಣ ೨೫, ೧೪
ಅಂಕೆ ಹಿಂಬದಿಯಸೈನ್ಯ ೩೦, ೧೮
ಅಂಗಡಿಗ ಸಂಗಡಿಗ ೧೮, ೪೪.
ಅಂಜಮೆ ಸಂಶಯ ೨೯, ೮೬.
   
ಆಟಿಸು ಬಯಸು ೧, ೪೬.
ಆಯುಷ್ಯ ಕೂದಲುತೆಗೆಯುವುದು (ಆಯುಷ್ಕರ್ಮ) ೨೪, ೨೩.
ಅಱಡಿಕಾರ ದರೋಡೆಕಾರ ೧, ೨೨.
ಆಱದ ಅಶಕ್ತ ೧೨, ೧೦.
ಆರಾಲಿಕ ಅಡಿಗೆಯವ ೧೪, ೨೩.
ಆರೈಕೆ ಪರೀಕ್ಷೆ, ತಪಾಸಣೆ ೧೪, ೬;೧೮, ೫೫ : ೨೫, ೧೦೯.
ಆರಂಭ ಕಾರ್ಯ, ಕೃಷಿ ೮, ೧;೧೦, ೧೧೯;೧೮, ೬೩;೧೯,೧೦.
ಆರ್ಪು ಶಕ್ತಿ, ಪ್ರೌಢಿಮೆ ೧೧, ೪
   
ಇಚ್ಛೆವಳಿ ಇಚ್ಛೆಯಂತೆನಡೆಯುವುದು ೩೨, ೨೬.
ಇದಿರ್‌ ಇನ್ನೊಬ್ಬರು, ಎದುರಿಸುವುದು ೨೫, ೪.
ಇಲ್ಲಕ್ಕು ಇಲ್ಲದಿರುವಿಕೆ, ಅಭಾವ ೨೯, ೫೩, ೫೪.
ಇಲ್ಲಮೆ ಇಲ್ಲಿದಿರುವಿಕೆ, ಅಭಾವ ೧, ೨೩;೭, ೨೦.
ಇಳಿಕೆಯ್‌ ಅನುಮಾನಿಸು, ಜರೆ ೪, ೬.
   
ಈಶ್ವರ ಸಮರ್ಥ ೧೦, ೧೧೩.
   
ಉಚಿತಂಗಿಡು ಔಚಿತ್ಯವನ್ನುಮೀರುವುದು ೧೦, ೧೩೪.
ಉಡುವುದು ಕೊಡುವುದು ೧೭, ೪೯.
ಉಪದೆ, ಉಪಧಾ ಅಡ್ಡಿ, ಪರೀಕ್ಷೆ ೧೦, ೧೪, ೧೫.
ಉಬ್ಬೆಗ ಉದ್ವೇಗ, ಸಂತಾಪ ೨೭, ೫೯.
ಉಯ್ಗುಟ್ಟು ವ್ಯರ್ಥಕಾರ್ಯಮಾಡುವುದು ೧೧, ೪೩.
ಉಸಿರ್ಪತ್ತು ಆಧಾರ, ಧೈರ್ಯ ೩೦, ೨೧.
   
ಊಟ ಉಪಭೋಗ ೨೮, ೧೧, ೧೨.
   
ಎಡದವಾಯು ಉತ್ತರದಿಕ್ಕಿನಗಾಳಿ ೨೫, ೮೯.
ಎಡೆಯಾಟ ಚಟುವಟಿಕೆ, ವ್ಯಾಯಾಮ ೨೫, ೧೪, ೫೦.
ಎಡಂಪಿಸು ತಡೆ, ಅಡ್ಡಿಯುಂಟುಮಾಡುವುದು ೩೦, ೪೧.
ಎರ್ದೆವತ್ತುಗೆ ಸ್ನೇಹ, ಹೃದಯಕ್ಕೆಸಮೀ ೧೦, ೫೩.
ಎಯ್ದುಗೆ ಪ್ರಾಪ್ತಿ, ಲಾಭಪಡೆಯುವುದು ೧೦, ೬೧;೧೧, ೭
ಎಯ್ಪು ಸೊಕ್ಕು, ಅಮಲು ೨೮, ೫೬.
ಎಱಕ ಆಶೆ, ಅಪೇಕ್ಷೆ ೭, ೨೩;೧೦, ೧೧೦, ೧೧೧.
ಎಱಪು ದೊರಕಿಸುವುದು ೧೫, ೨೭.
ಎಸನಿ, ಎಸನಿತನ ವ್ಯಸನಿ, ವ್ಯಸನ ೧೦, ೫;೧೨, ೨.
ಎಳಿದಿಕೆ ಆಲಕ್ಷ್ಯ, ತಿರಸ್ಕಾರ ೨೯, ೬೭.
   
ಒಡಮೆ ಒಡವೆ, ಹಣ ೪, ೪.
ಒಡವಿ ಮೂಲಧನ ೨೬, ೨೧.
ಒಡರ್ಪು ಸಂಬಂಧ ೨೬, ೩೮.
ಒಡನಡೆವರು ಜತೆಗಾರರು, ನಿಯೋಗಿಗಳು ೧೭, ೨೫.
ಒಡನೋದುವ ಸಹಾಧ್ಯಾಯಿ ೧೧, ೨೦.
ಒಡ್ಡು ವ್ಯೂಹ ೩೦, ೧೦೩, ೧೦೪.
ಒತ್ತೊತ್ತಿ ಒತ್ತಡ, ಉಪದ್ರವ ೨೭, ೬೩.
ಒಳಗಣರ್ಥ ಗುಪ್ತಧನ ೨೭, ೨೯.
ಒಲ್ವರು ಬೇಕಾದವರು, ಆಪ್ತರು ೫, ೧
ಒಸೆ ಕೈಗೂಡು ೧೦, ೭೭
ಒಳಪೊಕ್ಕು ಪರಿಚಯ ೩೧, ೪೮.
   
ಕಟ ಹುಲ್ಲುತಟ್ಟಿ ೩೧, ೩೨.
ಕಟ್ಟಕಡವು ಪಶ್ಚಾತ್ತಾಪ ೨೭, ೩೦.
ಕಟ್ಟಿಗೆಕಾಱ ಕಾವಲುಗಾರ, ಕೋಲುಹಿಡಿದವ ೨೫, ೮೫.
ಕಡೆಗೋಡಿ ಪ್ರವಾಹ ೩೧, ೩೧.
ಕದಡುಹ ಗೊಂದಲ, ಕ್ಷೋಭೆ ೨೯, ೫೩.
ಕರ್ಬ್ಬೊನ್ನು ಕಬ್ಬಿಣ ೨೧, ೨
ಕಯಿಪೆ ಕಹಿ ೨೪, ೬೧.
ಕರವಣ್ಣಿದ ಅಜ್ಞಾತ ೩೦, ೪೭.
ಕರಹ ಕರೆಯುವುದು, ಆಹ್ವಾನ ೨೪, ೫೭.
ಕಲ್ತ ಕಲಿತವ ೨೫, ೫೫.
ಕಲ್ಪ ಕಲಿಯುವವ ೧೧, ೧೬.
ಕಲಿಪೆ, ಕಲ್ಪೆ ಕಲಿಯುವಿಕೆ ೨೪, ೨೯;೩೦, ೧೦೫.
ಕಳ ಪ್ರದೇಶ, ಕಣ ೩೦, ೧೦೬.
ಕಳ್ತಲೆ ಕತ್ತಲೆ ೨೩, ೧೦.
ಕಳ್ಗುಡಿಹಿ ಸೆರೆಗುಡುಕ ೧೬, ೮.
ಕಂಟಕ ಲೆಕ್ಕಿಗ, ಕರಣ ೧೮, ೫೧.
ಕಾಕಿಣಿ ಒಂದುನಾಣ್ಯ, ಕವಡೆ ೨೧, ೪;೨೮, ೪೪.
ಕಾಗಬ್ಬು ಒಂದುಜಾತಿಯಹುಲ್ಲು ೧೧, ೪೯.
ಕಿಱುಗೂಸು ಚಿಕ್ಕಮಗು ೧೦, ೧೫೧.
ಕಿಲಾರ, ಕೀಲಾರ ಕ್ಷೀರಾಗಾರ ೧೯, ೨೩.
ಕಿಸು ಕೆಂಪು, ತಾಮ್ರ ೨೧, ೨
ಕುಪ್ಯ ವಸ್ತ್ರ, ಕಂಬಳಿ ೫, ೪.
ಕುರಿತ ಹರಿತ ೨೪, ೪೨.
ಕುಳಿಯೊಕ್ಕು ಆಗಂತುಕ ೨೪, ೯೦.
ಕೂಟ ಕೈಕೊಳ್ಳುವುದು, ಅನುಷ್ಠಾನ ೧೦, ೨೪.
ಕೂಟಕುಳಿ ತಾತ್ಕಾಲಿಕ ೩೨.೨೫.
ಕೂರ್ಪುಗಿಡು ಉತ್ಸಾಹತೋರಿಸು ೩೦, ೪೭.
ಕೂರಾಳು ಶೂರಸೈನಿಕ ೩೦, ೭೨.
ಕೂಸು ಕನ್ಯೆ ೧೦, ೧೦೪;೩೧, ೨೩.
ಕೂಳು ಅನ್ನ ೧೦, ೧೦೫;೨೪, ೨೨.
ಕೆಟ್ಟ ಕಳೆದುಹೋದ ೨೬, ೨೮.
ಕೆರ್ಪು ಕೆರ, ಪಾದರಕ್ಷೆ ೩೦, ೧೦.
ಕೆಯ್ತ ವೇಷ, ಕೆಲಸ ೨೫, ೧೦೮.
ಕೆಯ್ಯಡಕ ಕುಹಕ ೨೫, ೭೮.
ಕೇಳು ಗೋಡೆ ೩೧, ೩೨.
ಕೈವಾರ ಪಕ್ಷಪಾತ ೧೦, ೬;೨೮, ೬೦.
ಕೊಡಗೂಸು ಕನ್ಯೆ ೧೦, ೧೫೪;೧೬, ೧೮.
ಕೊಂಡಿಯ, ಕೊಂಡೆಯ ಚಾಡಿ, ಚಾಡಿಕೋರ ೧೬, ೧೨;೨೭, ೨೦;೩೨, ೫೯.
ಕೊರಡಿಗ, ಕೊರಡೆಗ ಕ್ರೂರ ೨೫, ೪೦;೨೮, ೫೭.
ಕೋಳ್ಮೃಗ ಹಾವು ೧೦, ೧೧೨;೧೬, ೧೩.
ಕೋದ್ರವ ಧಾನ್ಯ (ನವಣೆಮುಂತಾದ) ೧೮, ೬೯.
ಕೋರಡಿಗ ಮೂರ್ಖ ೨೬, ೨೨.
   
ಗಂಡಮಾತು ಪೌರುಷದಮಾತು ೫, ೨೫.
ಗಾಯಿಲ ಧೂರ್ತ ೨೮, ೮
ಗೆಂಟು ಅತಿದೂರ ೨೯, ೩೪.
ಗೋರುತ ಆಕಳದನಿ, ದೂರದಅಳತೆ, ಗೋವಿನಕೂಗುಕೇಳಿಬರುವಷ್ಟುದೂರ ೧೯, ೨೪.
ಗೋಂಟು ಮೂಲೆ ೨೯, ೨೩.
   
ಚಪಳಿಕೆ ಕಿಡಿಗೇಡಿತನ ೨೫, ೬೦.
ಚಾಳಿ ದಾಳಿ, ಮುತ್ತಿಗೆ ೨೨, ೧೧.
ಚಿಕ್ಕಣ ಮೃದು ೧೮.೧೩.
ಚಿಕಿತ್ಸೆ ಉಪಾಯ ೩, ೧೦.
ಚೂಳಿಕೆ ಮಿಶ್ರ, ಪ್ರಕೀರ್ಣ ೩೨, ೧.
   
ಛರ್ದಿ ವಾಂತಿ ೨೫, ೪೮.
   
ಜಕ್ಕವಕ್ಕಿ ಚಕ್ರವಾಕಪಕ್ಷಿ ೨೫, ೯೬.
ಜಿನ್ನಿವರ ಜನಿವಾರ ೨೮, ೪೨.
   
ಟಿರಿಟಿಲ್ಲಿತ ಚಾಪಲ್ಯ ೨೭, ೬೭.
   
ತಕ್ಕಂದ ತಕ್ಕಷ್ಟು ೨೩, ೪೯.
ತಗರಿಗ ಟಗರು ೧೭, ೪೦.
ತಡಸು ತಡೆ ೨೫, ೯.
ತಣ್ಣಿಗ ನಿರುತ್ಸಾಹಿ, ಆಲಸಿ ೧೧, ೩೪.
ತರಿಪ ಉದ್ವೇಗ, ಸಂಭ್ರಮ ೨೪, ೯೧.
ತರಿಸಲವು ನಿರ್ಣಯ, ತೀರ್ಮಾನ ೨೮, ೨೨.
ತಸ್ತರಿ ಸಂಬಂಧ, ಸರಸ ೧೭, ೫೨.
ತವಗ ಜಗಲಿ, ಎತ್ತರವಾದಪೀಠ ೩೦, ೧೨೧.
ತವಿಲು ವೆಚ್ಚ ೧, ೧೦.
ತವುಗು ತಗ್ಗು, ಕಡಿಮೆಯಾಗು ೮, ೫.
ತಾಲಗೆ ನಾಲಗೆ ೩೦, ೫೩.
ತಿರುವು ದಾರ, ಹೆದೆ ೧೦, ೬೯.
ತೀರ್ಕಣೆ ಪೂರೈಸುವುದು, ತೀರಿಸುವುದು ೧೦, ೨೫;೧೮, ೬೧;೨೮, ೨೩.
ತೀಟ ಸ್ಪರ್ಶ ೬, ೮.
ತಿಂಗುಱಿ ತಿನಿಸು, ಆಹಾರ ೨೯, ೫೮.
ತುಯಲ್‌ ಪರಮಾನ್ನ, ಪಾಯಸ ೨೫, ೯೯.
ತುರಿಪಕಾರ ಆತುರಪಡುವವ ೧೦, ೧೧೬, ೧೨೭.
ತೊಟ್ಟುಳವಡು ಒಗ್ಗುವುದು ೨೫, ೫೧.
ತೊರವಿ ಕೊನೆ, ತೊರೆಯುವುದು ೨೭, ೫೫
ತೊಲೆ ತಕ್ಕಡಿ ೧, ೮;೮, ೧೩;೨೮, ೧.
ತೊಲೆಯನೇಱಿಸುವುದು ಒಂದುಬಗೆಯದಿವ್ಯ ೨೮, ೪೭.
   
ದಾಯಿಗ ದಾಯಾದಿ ೩೦, ೬೧.
ದಾರಕ ದೇಶ ೧೯, ೬.
ದೂಸೆಯಕ್ಕಿ ಕಾಡುಭತ್ತ ೭, ೨೩.
ದೇಹಾರ ದೇವಾಲಯ ೭, ೨೭.
   
ನಡುಪಾಡುಹ ವ್ಯಾಯಾಮ ೨೫, ೧೦.
ನಡೆಗೋಂಟೆ ನಡೆದಾಡುವಕೋಟೆ ೨೨, ೮.
ನಣ್ಪು ಬಾಂಧವ್ಯ, ಸಂಬಂಧ ೨೪, ೫೩.
ನಿಕ್ಕುವ ನಿಶ್ಚಯ ೧, ೩೨;೫, ೨೧.೧೦, ೧೪೧; ೩೦, ೧೩.
ನಿಟ್ಟೆ ನಿಶ್ಚಿತ ೨೬, ೧೦.
ನಿರಿಹ ನಿಯಮ ೧, ೨೮.
ನಿಱುಗೆ ಪರಿಣಾಮಸಿದ್ಧಿ ೧೦, ೪೯.
ನೀರೂಟ ಶಾಸ್ತ್ರವನ್ನುಮಸೆಯುವನೀರು ೨೩, ೪೯.
ನಿರ್ದೈವ ಪಾಖಂಡಿ ೨೫, ೬೫;೨೮, ೨೧.
ನುಂಹ ನುಣುಪು, ಕೋಮಲತೆ ೩೨, ೧೦.
ನೆಗಹ ಮೇಲೇರುವಿಕೆ ೨೯, ೬೮.
ನೆಗಳೆ ಮೊಸಳೆ ೨೩, ೧೧.
ನೆಱಿ ಸಮರ್ಥನಾಗು ೧೦, ೭೮.
ನಿರ್ನ್ನೆರ ಕಾರಣವಿಲ್ಲದೆ ೪, ೪.
ನೆಳಲಂಚೆಕಾರ ನೆಳಲಗೊಂಬೆಯಾಟದವ ೧೪, ೧೭.
ನೊಚ್ಚಿದ ಕೀಳು, ಲಘು ೧೭, ೫೭;೨೭, ೪೭;೩೦, ೯೦.
   
ಪಗೆಮೊಗ ಉತ್ತೋತ್ತರ ೨೯, ೮೧.
ಪಚ್ಚು, ಪಚ್ಚುಕೊಡು ಹಂಚುವುದು ೧೦, ೭೮;೨೫, ೫೬;೩೨, ೪೬.
ಪಡಿವಲ, ಪಡೆವಳ ಸೈನ್ಯಬಲ ೩೦, ೧೮, ೧೯.
ಪಡಿಹಾರ ಬಾಗಿಲಕಾಯುವವ ೧೭, ೩೪.
ಪಡು ಮಲಗು, ಮುಳುಗು ೨೫, ೩;೩೧, ೧೮.
ಪಡೆವು ಪಡೆಯುವುದು, ಲಾಭ ೨೪, ೭೨, ೭೯;೨೯, ೮೧.
ಪತ್ತುಗೆ ಸಂಬಂಧ, ವಿಶ್ವಾಸ, ಸೇವೆ ೧೦, ೫೪;೨೮, ೫೦;೩೨, ೬೪.
ಪದುಳಿದ ದೃಢಚಿತ್ತದ ೧೦, ೧೪೮.
ಪರಿವಿಡಿ ಪರಂಪರೆ, ಅನುಕ್ರಮ ೨೩, ೩.
ಪರದು ವ್ಯಾಪಾರ ೩೨, ೧೫.
ಪರಿಪಣಿತ ಒಡಂಬಟ್ಟ ೨೮, ೫೨.
ಪರೆದ ಚದುರಿದ ೩೦, ೩೬.
ಪ್ರತಿಹಸ್ತ ಪ್ರತಿನಿಧಿ ೨೨, ೨೩.
ಪಲ್ಲಡಿಸು ಬದಲಾಯಿಸು ೧೮, ೫೫, ೭೧.
ಪಲ್ಲಣ ಪರ್ಯಾಣ, ಕುದುರೆಯತಡಿ ೨೮, ೪೩.
ಪಸಮಿಸು ಸಮಾಧಾನಪಡಿಸು ೨೯, ೮೬.
ಪಸವು ಬರಗಾಲ ೮, ೬;೧೧, ೩;೧೯, ೧೦, ೧೬.
ಪಸಾಯ (ಪಸಾಯದಾನ) ಉಡುಗೊರೆ ೨೬, ೪೫;೧೮, ೫.
ಪಸಿವು ಹಂಚುವುದು ೨೭, ೩೧.
ಪಸಿಗೆ, ಪಸುಗೆ ಹಂಚಿಕೆ, ಭಾಗ, ಪಾಲು ೨೧, ೧೪;೩೨, ೪೭.
ಪಳುಕು ಕಾಜು, ಸ್ಫಟಿಕ ೧೦, ೧೧೩.
ಪಳಿವಡೆಯದ ನಿಂದನೆಯಿಲ್ಲದ ೨೭, ೧೭.
ಪಾತನಿಕೆ ಸಾರಾಂಶ ೭, ೨೩.
ಪಾರಿವ ಪಾರಿವಾಳ ೨೫, ೯೮.
ಪಾಲ್ಮರ ಹಾಲುಸುರಿಸುವಮರ ೧೦, ೧೩೦.
ಪಿಸುಣು ಚಾಡಿ ೩೨, ೫೯.
ಪಿಂಡ ಗುಂಪು, ಹಿಂಡು ೨೯, ೩೬.
ಪಿಂಡಿ ಹೆಂಗಸು ೧೦, ೧೦೬.
ಪುಟ್ಟುಗೆ ಉತ್ಪತ್ತಿ, ಉತ್ಪನ್ನ ೧೯, ೮
ಪುಯ್ಯಲು ಆಕ್ರೋಶ ೨೮, ೧೨.
ಪುರುಡಿಗ ಅಸೂಯೆಪಡುವವನು ೩೨, ೪೪.
ಪುರುಡು ಅಸೂಯೆ, ಅಸಹನೆ, ಕೋಪ ೧೧, ೨೦;೧೨, ೨;೧೭, ೧೯;೩೦, ೭೩.
ಪೆರ್ಗಡೆ ಮಂತ್ರಿ, ಅಮಾತ್ಯ ೧೮, ೧೪, ೬
ಪೆರಗೆ ಹಿಂದೆ ೧೫, ೧೩.
ಪೆರವಕ್ಕೆ ಬೇರೆಯದಕ್ಕೆ ೨೫, ೬೧.
ಪೆರವುಳಿ ಹೊರತಾಗಿ ೧೮, ೬೩;೨೪, ೬೬.
ಪೆಂಕುಳಿಕೆ ಹುಚ್ಚುನಾಯಿ ೧೦, ೧೧.
ಪೆಂಠಾ, ಪಿಂಠಾ ಪೇಟೆ ೧೯, ೨೧.
ಪೊರ್ಕುಳಿ ಯುದ್ಧ, ತಂಟೆ ೩೨, ೩೩.
ಪೊಡವಡು, ಪೊಡವಡಿಕೆ ಪ್ರಣಾಮ ೧೦, ೨೦, ೫೯.
ಪೊಡರ್ಪು ಪ್ರಸಿದ್ಧಿ, ಪರಾಕ್ರಮ ೧೦, ೨೦, ೫೯.
ಪೊರ್ದುಗೆ ಸಂಬಂಧ, ಸಹವಾಸ ೧೧, ೭;೨೪, ೨.
ಪೊರ್ದಿಸು ಉಪಚರಿಸು, ಹೊಂದಿಸು ೭, ೨೦;೧೧, ೨೫.
ಪೊನಲ್‌ ಪ್ರವಾಹ ೨೪, ೪೭;೩೦, ೮೯.
ಪೊನ್ನಚೀಲ ನಾವೆ ೨೮, ೪೪.
ಪೊಲ್ಲಗೆಯ್ಯುವುದು ಕೇಡುಮಾಡುವುದು, ಸ್ವಾಮಿದ್ರೋಹ ೨೭, ೬೬.
ಪೊಲ್ಲಮೆ ದ್ರೋ, ಅಪಕಾರ, ಕೇಡು ೨೭, ೬೮.
ಪೊಳಲ್‌ ನಗರ ೧೨, ೨೪.
ಪೊಳ್ತೆ ಪವಿತ್ರತೀರ್ಥ ೨೫, ೮೪.
ಪೊಂಪುಳಿ ಹೆಚ್ಚಳ ೩೨, ೧೦.
ಪೌಷ್ಯ ಪೋಷಿಸಲ್ಪಡುವವರು ೧೬, ೨೯.
   
ಬಕ್ಕುಡಿ, ಬರ್ಕುಡಿ ವಿವಾದ ೧೦, ೪೮;೧೮, ೫೪;೨೨, ೬;೨೮, ೨೫.
ಬಡ್ಡಿಸು ಬಡಿಸು ೨೫, ೪೧.
ಬಲ್ಲಾಳ್ಕೆ, ಬಲ್ಲಾಳಿಕೆ ಒತ್ತಾಯ, ಬಲಾತ್ಕಾರ ೭, ೩೩;೮, ೧೧;೨೮, ೧೩.
ಬಲ್ಮಾನಿಸ, ಬಲುಮಾನಿಸ, ಬಲುವಾಗಿ(ನಿ)ಸ ಸತ್ಪುರುಷ ೩೨, ೬೬.
ಬಲ್ಪು ಜ್ಞಾನ ೧೧, ೨೧.
ಬಸನ, ಬಸನಿ ವ್ಯಸನ, ವ್ಯಸನಿ ೧೩, ೨;೨೭, ೪೨.
ಬಹಳ ನಾಣ್ಯ ೨೮, ೪೪.
ಬಳಿ ವಂಶ, ಪರಂಪರೆ ೨೬, ೧೭.
ಬಳಿನೀರು ಕೋಶಪಾನ, ಆಚಮನ ೨೮, ೪೭;೩೦, ೯೮.
ಬಾರ್ತೆ ಪ್ರಯೋಜನ ೧, ೫;೧೦, ೮೪, ೯೫;೧೫, ೧೭.
ಬಿಚ್ಚತಿಕೆ ವಿಶ್ವಾಸ, ನಂಬುಗೆ ೧೩, ೯;೨೪, ೬೫;೩೧, ೨೦;೩೨, ೯.
ಬಿಣ್ಪುಗಿಡು ಹೀನವಾಗು ೨೭, ೪೮.
ಬಿದ್ದಿನರು ಆಗಂತುಕರು, ಹೊರಗಿನವು ೧೧.೩೧.
ಬಿನದ ವಿನೋದ ೨೨, ೭.
ಬಿನ್ನಣಕವಿ ಚಿತ್ರಕವಿ ೩೨, ೮.
ಬಿಬ್ಬಲ್ಮೆ ಬಿಲ್ಲಿವಿದ್ಯೆಯಲ್ಲಿಪರಿಣತೆ ೨೬, ೬೮.
ಬೀಯ ವೆಚ್ಚ ೧೬, ೨೧;೨೫, ೬.
ಬೆಟ್ಟಿತು ಬಿರುಸು, ಕಠಿಣ ೧೬, ೨೧;೧೮, ೬೬.
ಬೆಸಕೆ ಕೆಲಸ, ವ್ಯವಸಾಯ ೨೯, ೩೧.
ಬೆಸಕೋಲು ಪಿಂಜಾರನಬಿಲ್ಲು ೧೦, ೯೬.
ಬೆಳ್ವೆಸಿಯೇಱು ಕಪಟದಿಂದಗಾಯಗೊಳಿಸು, ಅಭಿಚಾರ ೨೬, ೩೫.
ಬೈಕೆ ನಿಧಿ ೧೧, ೧೧.
   
ಭತ್ತಗ್ರಾಮ ಭತ್ತಬೆಳೆಯುವಗ್ರಾಮ ೧೯, ೨೨.
ಭವಣಿಗೆ ಉಪಜೀವನಮಾರ್ಗ ೧೯, ೨೦.
ಭೂತು ಭಂಡ, ನಾಚಿಕೆಗೆಟ್ಟವನು ೨೭, ೪೯.
   
ಮಗ್ಗು, ಮಗ್ಗಿಸು ತಗ್ಗು, ತಗ್ಗಿಸು, ಹೋಗಲಾಡಿಸು ೧೦, ೪೩;೧೬, ೨, ೩, ೪, ೫;೨೨, ೧.
ಮಗ್ಗುಗೆ ಕಡಿಮೆಯಾಗುವುದು ೨೫, ೩೩.
ಮದನಪತ್ತುಗೆ ಕಾಮಾಲೆರೋಗ ೨೬, ೨೩.
ಮರ್ದು ಮದ್ದು, ಔಷಧ ೨೬.೮.
ಮಧ್ಯಸ್ಥ ನ್ಯಾಯಾದಾನಸಭೆಯಸದಸ್ಯ ೨೮, ೫, ೭.
ಮಱವು ಪ್ರಮಾದ, ಅಜಾಗರೂತಕೆ, ಮರೆವು ೩೦, ೧೨೦.
ಮಳಿಯಿಸು ದ್ವೇಷಿಸು ೧೬.೧೪.
ಮರೆಗಾಳಗ ಕೂಟಯುದ್ಧ, ಕಪಟಯುದ್ಧ ೩೦, ೧೦೮.
ಮಂದ್ಯಾಳ ಸಲುಗೆ ೧೮, ೩೬.
ಮಾರ್ಕೊಂಡಾಡುವ ಪ್ರತಿಪಕ್ಷ, ಪ್ರತಿವಾದಿ ೨೮, ೬.
ಮಾಟ ಕೆಲಸ ೧೭, ೪೫.
ಮಾರಾಣೆ ಪ್ರತಿಭಟನೆ ೧೬.೨೬.
ಮಾಱುಗೆ ಮಾರಾಟದವಸ್ತುಗಳು ೧೯.೮
ಮಾಹವು ನುಡಿ ೨೭, ೨೨.
ಮಿಡಿಹ ಹೊಡೆತ ೧೦, ೫೩.
ಮುಱವು ಧೂಳು ೩೦, ೧೨೦.
ಮೂಗೂರದ ಮೂಗದಾಣವಿಲ್ಲದ ೨೮, ೫೮.
ಮೆಯ್ದೆಗೆಯುವುದು ಮೈಗಳ್ಳತನ ೨೭, ೮.
ಮೇಲುಗರಣ ಮೇಲಿನಅಧಿಕಾರಿ ೧೮, ೫೧.
ಮೈವತ್ತುಗೆ ಸಂತೋಷಪಡಿಸು ೨೪, ೬೩.
ಮೊಸನಿಗೆ ಪ್ರೇಯಸಿ, ಅಭಿಸಾರಿಕೆ ೨೭, ೪೩.
   
ಯ(ಎ)ಡೆಯಾಡು ವ್ಯಾಯಾಮ ೨೫, ೫೦.
ಯೋಸಿಸುವುದು ಉಪಯೋಗ ೪೬, ೬೨.
   
ರಂದವಣಿಗ ಅಡಿಗೆಯವ ೧೪, ೨೩.
ರಾ ಹೊನ್ನು ೨೧, ೭.
   
ಲಾವಗೆ ಒಂದುಪಕ್ಷಿ ೧೦, ೮೯.
ಲಂಚ, ಲುಂಚ ಲಂಚತೆಗೆದುಕೊಳ್ಳುವುದು ೧೬, ೩೭.
ಲಿಂಗಿ ಸನ್ಯಾಸಿ ೭, ೯.
ಲುಂಚಕತ್ವ ಸುಲಿಗೆ ೨೭, ೫.
   
ವಜ್ರಕ ಪಚನವಾಗುವಔಷಧಿ ೨೫, ೩೧.
ವಟ್ಟಿ ಅಂಚು, ತುದಿ ೨೪, ೪೨.
ವಿನ್ನಾಣ ಗುರುತು, ಒಪ್ಪ ೨೭, ೬೫.
ವುಂಟ ತೋಟ ೧೯, ೮.
ವೈರಿಸು ದ್ವೇಷಮಾಡು ೧೧, ೫೬.
ವೊಡರ್ಪು ತೊಡರು, ಬಂಧನ, ಅಡ್ಡಿ ೨೭, ೧.
ವೊಲ್ಲಣಿಗೆ ನೀರುಪಂಜೆ ೧೮, ೫೮.
ವೋ(ಓ)ಸರಿ ಉಪಶ್ರುತಿ ೨೭, ೩೬.
   
ಶಾಸನ ದಾಖಲೆ ೨೮, ೧೧.
   
ಸಜಾವಕತನ ವಿಳಂಬ ೧೦, ೬೧.
ನ(ಶ)ರದ ಶರತ್ಕಾಲ ೧೦, ೧೨೮.
ಸರವಿ ಹಗ್ಗ ೨೯, ೫೬.
ಸಸಿನ ಸರಳ ೨೮, ೨೯, ೩೧.
ಸಿಡಿಯಕ್ಕಿ ಸಿಡಿದುಹೋದಅಕ್ಕಿ ೭, ೨೩.
ಸಿಡೆ ದ್ವೇಷ ೧೬.೨೧.
ಸಿವಳಿಗೆಗುತ್ತ ಮಾರಿಬೇನೆ ೧೧, ೩.
ಸೀರೆ ವಸ್ತ್ರ ೫, ೬೮;೨೬, ೫೧;೨೯, ೫೫.
ಸೀವುಡೆ (ಸಿವುಡು) ಕವಳಿಗೆ, ಲೆಕ್ಕದಪುಸ್ತಕಗಳಗಂಟು ೧೮, ೫೩.
ಸುಯ್ಲು ನಿಟ್ಟುಸಿರು ೯, ೫.
ಸುಲಿ ಸ್ವಚ್ಛಗೊಳಿಸು, ತೊಳೆಯುವುದು ೨೫, ೭.
ಸೂಱುಳ್‌ (ಳು) ಶಪಥ ೨೮, ೪೨, ೪೩-೪೫.
ಸೂಳ್‌ ಸರದಿ ೨೫, ೩೫.
ಸೂಳೆವಳ್ಳ ದೇವಾಲಯದನರ್ತಕಿಯರಅಧಿಕಾರಿ ೨೧, ೧೪.
ಸೊಕ ಸುಖ ೧, ೪೬.
ಸಂತ ಶಾಂತ ೨೯, ೩೩.
ಸಂದಯ ಸಂಶಯ ೧, ೮.
ಸಂಪರಿಸು ಸ್ತುತಿಸು ೨೬, ೪೦.
ಸಂಬಳ ದಾರಿಯಬುತ್ತಿ ೨೭, ೭೦.
   
ಹಡಣಿಗೆ ಅಮಂಗಳೆ ೧, ೩೦;೩೧, ೫೧.
ಹಡುಕುಳಿ ಸೋಮಾರಿ ೧೦, ೨೧.
ಹಾರಕ ಒಂದುಧಾನ್ಯ ೧೮, ೭೦.
ಹಿರಿಗ, ಹೇರಿಗ ಚಾರ, ಗೂಢಚಾರ ೧೪, ೧, ೨;೨೯, ೮೫.
ಹಿಸುಣ ಚಾಡಿ, ಚಾಡಿಕೋರ ೨೭, ೨೦;೩೨, ೪೪.
ಹಿಂಡ ಅಲೆದಾಡು, ತಿರುಗಾಡು ೨೫, ೯೩.
ಹಿಂಬಳಿ ಪರೋಕ್ಷ ೩೨, ೫.
ಹೃದಯ ತಾತ್ಪರ್ಯ ೧, ೪.
ಹೊಡಹುಲ್ಲು ಬಡಿದಭತ್ತದಹುಲ್ಲು ೭, ೨೩.
ಹೊರಸು ಪಾರಿವಾಳ ೨೯, ೮೦.
ಹೊಲ್ಲೆಹ ಕೆಡಕು ೨೯, ೮೩;೩೦, ೬೯.