ರಾಜವಿದ್ಯೆಯೊಳ್ ಮುನ್ನಂ ಸೂಚಿಸಿದ ಆಹಾರ್ಯಬುದ್ಧಿಯಂ ಪೇಳ್ವುದುತ್ತರವಾಕ್ಯಂ :

ಮಂತ್ರಿಪುರೋಹಿತಸೇನಾಪತೀನಾಂ ಯೋ ಯುಕ್ತ ಮುಕ್ತಂ ಕರೋತಿ ಸ ಆಹಾರ್ಯಬುದ್ಧಿಃ || || ೨೭೬ ||

ಅರ್ಥ : ಮಂತ್ರಿ = ಮಂತ್ರಿಯುಂ, ಪುರೋಹಿತ = ಪುರೋಹಿತನುಂ, ಸೇನಾಪತೀನಾಂ = ಸೇನಾಪತಿಯೆಂದಿವಱ, ಯುಕ್ತಂ = ತಕ್ಕಂ, ಉಕ್ತಂ = ನುಡಿಯಂ, ಯಃ = ಆವನೋರ್ವಂ, ಕರೋತಿ = ಮಾಳ್ಕುಂ, ಸಃ = ಆತಂ, ಆಹಾರ್ಯಬುದ್ಧಿಃ = ಆಹಾರ್ಯಬುದ್ಧಿಯೆಂಬುದು || ಕಲಿಸಿದ ಬುದ್ಧಿಯಂ ನೆಗಳ್ವನಾಹಾರ್ಯಬುದ್ಧಿ[1] ಯೆಂಬುದು ತಾತ್ಪರ್ಯಂ || ಅದಕ್ಕೆ ದೃಷ್ಟಾಂತಮಂ ಪೇಳ್ಪುದುತ್ತರಸೂತ್ರಂ :

ಅಸುಗಂಧಮಪಿ ಸೂತ್ರಂ ಕುಸುಮಸಂಗಾತ್ ಕಿಂ ನಾರೋಹತಿ ದೇವಶಿರಾಂಸಿ || || ೨೭೭ ||

ಅರ್ಥ : ಅಸುಗಂಧಮಪಿ = ಗಂಧಮ(ಮಿ)ಲ್ಲದೆಯುಂ, ಸೂತ್ರಂ = ನೂಲ್, ಕುಸುಮಸಂಗಾತ್ = ಪುಷ್ಪಸಂಗದಿಂ, ಕಿಂ ನಾರೋಹತಿ = ಏನ್ ಏಱದೇ, ದೇವಶಿರಾಂಸಿ = ದೇವರ ಮಸ್ತಕಂಗಳಂ || ಉತ್ತಮರ ಸಂಗತಿಯಿಂದುತ್ತಮಮಕ್ಕುಮೆಂಬುದು ತಾತ್ಪರ್ಯಂ || ಈಯರ್ಥಮನೆ ದೃಷ್ಟಾಂತದಿಂ ಸಮರ್ಥಿಸುವುದುತ್ತರವಾಕ್ಯಂ :

ಮಹದ್ಭಿಃ ಪ್ರತಿಷ್ಠಿತೋsಶ್ಮಾಪಿ ಭವತಿ ದೇವಃ ಕಿಂ ಪುನರ್ನ[2] ಮನುಷ್ಯಃ || || ೨೭೮ ||

ಅರ್ಥ : ಮಹದ್ಭಿಃ = ಪಿರಿಯರಿಂ, ಪ್ರತಿಷ್ಠಿತಃ = ನಿಲಿಸಲ್ಕೆಪಟ್ಟು, ಅಶ್ಮಾಪಿ = ಕಲ್ಲುಂ, ಭವತಿ = ಅಕ್ಕುಂ, ದೇವಃ = ದೇವಂ, ಮನುಷ್ಯಃ = ಮನುಷ್ಯಂ, ಪುನಃ = ಮತ್ತೆ, ಕಿಂ ನ = ಏನ್ ಆಗನೇ || ಪಿರಿಯರ್ ಮನ್ನಿಸಲೆಂತಪ್ಪನುಂ ಅಧಿಕಮಕ್ಕುಮೆಂಬುದು ತಾತ್ಪರ್ಯಂ || ಅದಕ್ಕೆ ದೃಷ್ಟಾಂತಮಂ ಪೇಳ್ವುದುತ್ತರಸೂತ್ರಂ :

—-

೧. ಮಂತ್ರಿ, ಪುರೋಹಿತ, ಸೇನಾಪತಿ ಇವರು ಹೇಳಿದ ಯುಕ್ತವಾದ ಮಾತಿನಂತೆ ನಡೆಯುವವನು ಆಹಾರ್ಯ ಬುದ್ಧಿಯವನು.

೨. ಸುಗಂಧವಿಲ್ಲದೆಯೂ, ದಾರವೂ ಕುಸುಮ ಸಂಗದಿಂದ, ದೇವರ ತಲೆಯನ್ನು ಏರುವುದಿಲ್ಲವೆ?

೩. ಹಿರಿಯರಿಂದ ಪ್ರತಿಷ್ಠಾಪಿತವಾದ ಕಲ್ಲೂ ಕೂಡ ದೇವರಾಗುವುದು, ಮನುಷ್ಯನೇನು ಆಗನೇ?

—-

ತಥಾ ಚಾನ್ಯತ್ರ ಶ್ರೂಯತೇ[3] ವಿಷ್ಣುಗುಪ್ತಾನುಗ್ರಹಾತ್ ಕಿಲಾನಧಿಕೃತೋsಪಿ[4]
ಚಂದ್ರಗುಪ್ತಃ ಸಾಮ್ರಾಜ್ಯಮವಾಪೇತಿ
|| || ೨೭೯ ||

ಅರ್ಥ : ತಥಾ ಚ = ಅಂತೆಯೇ, ಅನ್ಯತ್ರ = ಲೋಕದಲ್ಲಿ, ಶ್ರೂಯತೇ = ಕೇಳಲ್ಪಡುಗುಂ, ವಿಷ್ಣುಗುಪ್ತಾನುಗ್ರಹಾತ್ ಕಿಲ = ಚಾಳು(ಣ)ಕ್ಯನ[5] ಪ್ರಸಾದದಿಂ ಗಡ, ಅನಧಿಕೃತೋsಪಿ = ಕ್ರಮದಾತನಲ್ಲದೆಯುಂ, ಚಂದ್ರಗುಪ್ತಃ = ಚಂದ್ರಗುಪ್ತನೆಂಬೊಂ, ಸಾಮ್ರಾಜ್ಯಂ = ಸಾಮ್ರಾಜ್ಯಮಂ, ಅವಾಪ ಇತಿ = ಯೆಯ್ಧುದನಿಂತು = ಮಂತ್ರಿಯ ಲಕ್ಷಣಯಂ ಪೇಳ್ವುದುತ್ತರಸೂತ್ರಂ :

ಬ್ರಾಹ್ಮಣಕ್ಷತ್ರಿಯವಿಶಾಮನ್ಯತಮಂ[6] ಸ್ವದೇಶಜಮಾಚಾರಾಭಿಜನವಿಶುದ್ಧ ಮವ್ಯಸನಿನಮವ್ಯಭಿಚಾರಿಣಮಧೀತಾಖಿಲವ್ಯವಹಾರತಂತ್ರಂ ಶಸ್ತ್ರಜ್ಞಮ[7] ಶೇಷೋಪದಾ[8]ವಿಶುದ್ಧಂ ಚ ಮಂತ್ರಿಣಂ ಕುರ್ವೀತ || || ೨೮೦ ||

ಅರ್ಥ : ಬ್ರಾಹ್ಮಣ = ಬ್ರಾಹ್ಮಣನುಂ, ಕ್ಷತ್ರಿಯ = ಕ್ಷತ್ರಿಯನುಂ, ವಿಶಾಂ = ವೈಶ್ಯನುಮೆಂಬಿವಱೊಳು, ಅನ್ಯತಮಂ = ಆವನೋರ್ವನುಮಂ, ಸ್ವದೇಶಜಂ = ತನ್ನ ನಾಡೊಳ್ ಪುಟ್ಟಿದನಂ, ಆಚಾರ = ಆಚಾರಮುಂ, ಅಭಿಜನ = ಪರಿವಾರಮೆ ಜನಮುಮೆಂಬಿವರಿಂ, ವಿಶುದ್ಧಂ = ವಿಶುದ್ಧಮಪ್ಪನಂ, ಅವ್ಯಸನಿನಂ = ಎಸನಿಯಲ್ಲದನಂ, ಅವ್ಯಭಿಚಾರಿಣಂ = ರಾಜಕಾರ್ಯದೊಲ್ ತಪ್ಪದನಂ, ಅಧೀತಾಖಿಲವ್ಯವಹಾರತಂತ್ರಂ = ವ್ಯವಹಾರಶಾಸ್ತ್ರಂಗಳೆಲ್ಲಮನೋದಿದನಂ, ಶಸ್ತ್ರಜ್ಞಂ = ಶಸ್ತ್ರದೊಳಭ್ಯಸಿಯಪ್ಪನಂ, ಅಶೇಷೋಪಧಾವಿಶುದ್ಧಂ ಚ = ನಾಲ್ಕುಪಾಯಂಗಳಿಂ ಶುದ್ಧಮಪ್ಪನಂ, ಮಂತ್ರಿಣಂ = ಮಂತ್ರಿಯಂ, ಕುರ್ವೀತ = ಮಾಳ್ಕೆ || ಈ ಗುಣಂಗಳಿಲ್ಲದನಂ ಮಂತ್ರಿಯಂ ಮಾಡೆ ಕಾರ್ಯಹಾನಿಯಕ್ಕುಮೆಂಬುದು ತಾತ್ಪರ್ಯಂ || ಅಲ್ಲಿ ಸ್ವದೇಶಜನಂ ಮಾಳ್ಪುದಕ್ಕೆ ಕಾರಣಮಂ ಪೇಳ್ವುದುತ್ತರವಾಕ್ಯಂ :

—-

೪. ಅಂತೆಯೇ ಅನಧಿಕೃತನಾದರೂ ಚಂದ್ರಗುಪ್ತನು ವಿಷ್ಣುಗುಪ್ತಾನುಗ್ರಹದಿಂದ (ಚಾಣಕ್ಯನ ಪ್ರಸಾದದಿಂದ) ಸಾಮ್ರಾಜ್ಯವನ್ನು ಹೊಂದನೆಂಬುದು ಕೇಳಿಬರುವದು.

೫. ಸ್ವದೇಶದಲ್ಲಿ ಹುಟ್ಟಿದವನು ಆಚಾರ ಮತ್ತು ಪರಿವಾರಗಳಿಂದ ವಿಶುದ್ಧನು. ವ್ಯಸನಿಯಲ್ಲದವನು, ವ್ಯಭಿಚಾರಿಯಲ್ಲದವನು, ವ್ಯವಹಾರ ಶಾಸ್ತ್ರಗಳೆಲ್ಲವನ್ನೂ ಅಧ್ಯಯನಮಾಡಿದವನು. ಶಸ್ತ್ರಜ್ಞನು, ನಾಲ್ಕು ಉಪಧೆಗಳಲ್ಲಿ ಶುದ್ಧನಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಲ್ಲಿ ಒಬ್ಬನನ್ನು ಮಂತ್ರಿಯಾಗಿ ಮಾಡಿಕೊಳ್ಳಬೇಕು.

—-

ಸರ್ವಪಕ್ಷಪಾತೇಷು ಸ್ವದೇಶಪಕ್ಷಪಾತೋ ಬಲೀಯಾನ್ || || ೨೮೧ ||

ಅರ್ಥ : ಸರ್ವಪಕ್ಷಪಾತೇಷು = ಎಲ್ಲಾ ಪಕ್ಷಪಾತಂಗಳೊಳು, ಸ್ವದೇಶಪಕ್ಷಪಾತಃ = ತನ್ನ ನಾಡ ಕೈವಾರಂ, ಬಲೀಯಾನ್ = ಬಲ್ಲಿತ್ತು || ಸಹಜಮೋಹಮೆ ಲೇಸೆಂಬುದು ತಾತ್ಪರ್ಯಂ || ಅಲ್ಲಿ ಸ್ವದೇಶಜನಂ ಮಾಳ್ಪುದಕ್ಕೆ ದೋಷಮಂ ಪೇಳ್ವುದುತ್ತರವಾಕ್ಯಂ : :

[9]ವಿಷನಿಷೇಕ ಇವ ದುರಾಚಾರಃ ಸರ್ವಾನಪಿ ಗುಣಾನ್ ದೂಷಯತಿ || || ೨೮೨ ||

ಅರ್ಥ : ವಿಷನಿಷೇಕ ಇವ = ವಿಷದ ತಳಿಪದಂತೆ, ದುರಾಚಾರಃ = ಪೊಲ್ಲದ ನೆಗಳ್ತೆ, ಸರ್ವಾನಪಿ = ಎಲ್ಲಾ, ಗುಣಾನ್ = ಗುಣಂಗಳಂ, ದೂಷಯತಿ = ಕೆಡಿಸುಗು || ಸದಾಚಾರದಿಂ ದೋಷಮಾಗದೆಂಬುದು ತಾತ್ಪರ್ಯಂ || ಆಚಾರಹೀನನಾಗೆ ದೋಷಯಂ ಪೇಳ್ಪುದುತ್ತರಸೂತ್ರಂ :

ದುರಭಿಜನೋ ಮೋಹೇನ ಕುತೋsಪ್ಯಕೃತ್ಯಾತ್ ನ ಜುಗುಪ್ಸತೇ || || ೨೮೩ ||

ಅರ್ಥ : ದುರಭಿಜನಃ = ಪೊಲ್ಲದಪ್ಪ, ಪರಿಗ್ರಹಮನುಳ್ಳಂ, ಮೋಹೇನ = ಸ್ನೇಹದಿಂ, ಕುತೋsಪ್ಯಕೃತ್ಯಾತ್ = ಅವಕೃತ್ಯದತ್ತಣಿಂದೆಯುಂ, ನ ಜುಗುಪ್ಸತೇ = ಹೇಸುವನಲ್ಲ || ಶಿಷ್ಟಪರಿವಾರನಾಗಲೇವೇಳ್ಕುಮೆಂಬುದು ತಾತ್ಪರ್ಯಂ ||

—-

೬. ಎಲ್ಲ ಪಕ್ಷಪಾತಗಳಲ್ಲಿ ಸ್ವದೇಶ ಪಕ್ಷಪಾತವು ಬಲವಾದದ್ದು.

೭. ವಿಷದ ಸೇರಿಕೆಯಂತೆ ದುರಾಚಾರವು ಎಲ್ಲ ಗುಣಗಳನ್ನು ಕೆಡಿಸುತ್ತದೆ.

೮. ದುರ್ಜನರ ಸಹವಾಸದಲ್ಲಿರುವವನು ಯಾವುದೇ ಅಪಕಾರ್ಯವನ್ನು ಮಾಡಲು ಹೇಸುವುದಿಲ್ಲ.

—-

ಸವ್ಯಸನಸಚಿವೋ ರಾಜಾ ಆರೂಢವ್ಯಾಲಗಜ ಇವ ಸುಲಭಾಪಾಯಃ || || ೨೮೪ ||

ಅರ್ಥ : ಸವ್ಯಸನಶಚಿವಃ[10] ವ್ಯಸನಿಯಪ್ಪ, ಪೆರ್ಗಡೆಯನುಳ್ಳ[11], ರಾಜಾ = ಅರಸು, ಆರೂಢವ್ಯಾಲಗಜ, ಇವ = ದುಷ್ಟನಪ್ಪಾನೆಯನೇಱಿದಂತೆ | ಸುಲಭಾಷಾಯಃ = ಪಡಯಲ್ಪರ್ಪ ಕೇಡನುಳ್ಳವನುಮಕ್ಕುಂ || ಮಂತ್ರಿ ವ್ಯಸನಿಯಾಗಲಾಗದೆಂಬುದು ತಾತ್ಪರ್ಯಂ ||

ಕಿಂ ತೇನ ಕೇನಾಪಿ ಯೋ ವಿಪದಿ ನೋಪತಿಷ್ಠತೇ || ೧೦ || ೨೮೫ ||

ಅರ್ಥ : ಯಃ = ಆವನೋರ್ವಂ, ವಿಪದಿ = ಆಪತ್ತಿನಲ್ಲಿ, ನೋಪತಿಷ್ಠತೇ = ಪೊರ್ದಂ, ತೇನ ಕೇನಾಪಿ = ಆ ಆವನಿಂದವುಂ, ಕಿಂ = ಏನು ಪ್ರಯೋಜನಂ || ಮತ್ತಮದನೆ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

[12]ಅಲರ್ಕವಿಷವತ್ಕಾಲಂ ಪ್ರಾಪ್ಯಾವಶ್ಯಂ ವಿಕುರ್ವತೇ ವಿಜಾತಯಃ || ೧೧ || ೨೮೬ ||

ಅರ್ಥ : ಅಲರ್ಕವಿಷವತ್ = ಪೆಂಕುಳಿಕೆಯ ವಿಷದಂತೆ (ಮರುಳುಗೊಂಡ ನಾಯ ವಿಷದಂತೆ) ಕಾಲಂ = ಅವಸರಮುಂ, ಪ್ರಾಪ್ಯ = ಎಯ್ದಿ, ಅವಶ್ಯಂ = ನಿಶ್ಚಯದಿಂ, ವಿಕುರ್ವತೇ = ವಿಕಾರಕ್ಕೆ ಸಲ್ಪರು, ವಿಜಾತಯಃ = ಕುಲಜರಲ್ಲದವರು || ಕುಲದವನಾಪತ್ತಿನೊಳ್ ವಿಕಾರಕ್ಕೆ ಸಲ್ಲನೆಂಬುದು ತಾತ್ಪರ್ಯಂ || .

ಪಾತ್ರೇ[13]ಸಮಿತೌ ಹಿ ಸುಲಭೋ ಲೋಕಃ || ೧೨ || ೨೮೭ ||

ಅರ್ಥ : ಪಾತ್ರೇ ಸಮಿತೌ = ಅಟ್ಟ ಮಡಕೆಗೆ ನೆಱೆವ[14] (ಭೋಜನಸಮಯದಲ್ಲಿ) ಲೋಕಂ = ಜನಂ, ಸುಲಭಃ = ಪಡೆಯಲ್ಪಪ್ಪುದು || ಭೋಜನಸಹಾಯರ್ಪಲರೆಂಬುದು ತಾತ್ಪರ್ಯಂ :

—-

೯. ವ್ಯಸನಿಯಾದ ಮಂತ್ರಿಯನ್ನುಳ್ಳ ರಾಜನು ದುಷ್ಟಗಜವನ್ನೇರಿದಂತೆ ಸುಲಭವಾಗಿ ಅಪಾಯಕ್ಕೆ ಗುರಿಯಾಗುವನು.

೧೦. ಆಪತ್ಸಮಯದಲ್ಲಿ ನೆರವಾಗದವನಿರುವುದರಿಂದ ಏನು ಪ್ರಯೋಜನ?

೧೧. ಕುಲಜನಲ್ಲದವರು ಹುಚ್ಚು ನಾಯಿಯ ಕಡಿತದ ವಿಷದಂತೆ ಕಾಲಬಂದಾಗ ನಿಶ್ಚಯವಾಗಿಯೂ ವಿಕೃತರಾಗಿ ವರ್ತಿಸುವರು.

೧೨. ಭೋಜನ ಸಮಯಕ್ಕೆ ಸರಿಯಾಗಿ ಬಂದು ಸೇರುವ ಜನರಿಗೇನೂ ಕಡಿಮೆಯಿಲ್ಲ.

—-

ಕಿಂ ತಸ್ಯ ಭಕ್ತ್ಯಾ ಯೋ ನ ವೇತ್ತಿ ಸ್ವಾಮಿನೋ ಹಿತೋಪಾಯಮಹಿತ ಪ್ರತೀಕಾರಂ ವಾ || ೧೩ || ೨೮೮ ||

ಅರ್ಥ : ಕಿಂ = ಏನ್, ತಸ್ಯ = ಅವನ, ಭಕ್ತ್ಯಾ = ಭಕ್ತಿಯಿಂ, ಯಃ = ಆವನೋರ್ವಂ, ನ ವೇತ್ತಿ = ಅಱಿವನಲ್ಲಂ, ಸ್ವಾಮಿನಃ = ಒಡೆಯನ, ಹಿತೋಪಾಯಂ = ಸುಖದ ಕಾರಣಮುಮಂ, ಅಹಿತಪ್ರತೀಕಾರಂ ವಾ = ಕ್ಲೇಶಕ್ಕೆ ಪ್ರತೀಕಾರಂ ಮೇಣ್ || ವ್ಯವಹಾರಶಾಸ್ತ್ರಮನಱಿಯದೆ ಹಿತಾಹಿತಂಗಳನಱಿಯನೆಂಬುದು ತಾತ್ಪರ್ಯಂ || ಶಸ್ತ್ರಜ್ಞನಲ್ಲದುದಕ್ಕೆ ದೋಷಮಂ ಪೇಳ್ವುದುತ್ತರವಾಕ್ಯಂ :

ಕಿಂ ತೇನ ಸಹಾಯೇನ[15] ಯಸ್ಯಾತ್ಮರಕ್ಷಣೇSಪ್ಯಸ್ತ್ರಂ ನ ಪ್ರಭವತಿ || ೧೪ || ೨೮೯ ||

ಅರ್ಥ : ಕಿಂ = ಏನು, ತೇನ ಸಹಾಯೇನ, ಆ ಸಹಾಯನಿಂ | ಯಸ್ಯ ಆವನೋರ್ವನ, ಅಸ್ತ್ರಂ = ಆಯುಧಂ, ಆತ್ಮರಕ್ಷಣೇsಪಿ = ತನ್ನಂ ಕಾವಲ್ಲಿಯುಂ, ನ ಪ್ರಭವತಿ = ಅಱನು || ಮಂತ್ರಿಗೆ ಶಸ್ತ್ರಾಭ್ಯಾಸಮಾಗಲೆ ವೇಳ್ಕುಮೆಂಬುದು ತಾತ್ಪರ್ಯಂ || ಮಂತ್ರಿಲಕ್ಷಣಂಗಳೊಳುಪದೆಯಂ ಪೇಳ್ಫುದುತ್ತರವಾಕ್ಯಂ :

ಧರ್ಮಾರ್ಥಕಾಮಭಯೇಷು ವ್ಯಾಜೇನ ಪರಚಿತ್ತಪರೀಕ್ಷಣ ಮುಪಧಾ || ೧೫ || ೨೯೦ ||

ಅರ್ಥ : ಧರ್ಮಾರ್ಥಕಾಮಭಯೇಷು = ಧರ್ಮುಮುಂ, ಅರ್ಥಮುಂ, ಕಾಮಮುಂ, ಭಯಮುಮೆಂಬಿವರಱೊಳು, ವ್ಯಾಜೇನ = ವಿವಾದದಿಂ, ಪರಚಿತ್ತಪರೀಕ್ಷಣಂ = ಪರರ ಮನಮನಾರಯ್ದುದು, ಉಪಧಾ = ಉಪಧಾ ಯೆಂಬುದು || ಪರಚಿತ್ತಮನಱಿಯದಂತೆ ಆವ ಕಾರ್ಯ ಮಿಲ್ಲೆಂಬುದು ತಾತ್ಪರ್ಯಂ || ಮಂತ್ರಿ ಕುಲಜನಲ್ಲದುದಕ್ಕೆ ದೋಷಮಂ ಪೇಳ್ವುದುತ್ತರವಾಕ್ಯಂ :

—-

೧೩. ಒಡೆಯನ ಸುಖದ ಉಪಾಯವನ್ನೂ (ಕ್ಲೇಶದ) ಪ್ರತೀಕಾರವನ್ನೂ ಅರಿಯದವನ ಭಕ್ತಿಯಿಂದ ಏನು ಪ್ರಯೋಜನ?

೧೪. ಯಾವ ಶಸ್ತ್ರಜ್ಞನ ಆಯುಧವು ಆತ್ಮರಕ್ಷಣೆಗೆ ಕೂಡ ಉಪಯೋಗಕ್ಕೊದಗುವದಿಲ್ಲವೋ ಅಂತಹ ಶಸ್ತ್ರಜ್ಞನು ಸಹಾಯಕನಾಗಿದ್ದರೆ ಪ್ರಯೋಜನವೇನು?

೧೫. ಧರ್ಮ, ಅರ್ಥ, ಕಾಮ, ಭಯ ಈ ವಿಚಾರಗಳಲ್ಲಿ ಪರರ ಮನಸ್ಸನ್ನು ಯುಕ್ತಿಯಿಂದ ತಿಳಿಯುವುದು ಉಪಧಾ.

—-

ಅಕುಲೀನೇಷು ನಾಸ್ತಿ ದುರಪವಾದಾದ್ಭಯಂ || ೧೬ || ೨೯೧ ||

ಅರ್ಥ : ಅಕುಲೀನೇಷು = ಕುಲಜನಲ್ಲದನೊಳು | ನಾಸ್ತಿ = ಇಲ್ಲದು | ದುರಪವಾದಾತ್ = ದೂರಿನತ್ತಣಿಂ, ಭಯಂ = ಭಯವು || ಕುಲಜನಪವಾದಕ್ಕಂಜುವನೆಂಬುದು ತಾತ್ಪರ್ಯಂ || ಕುಲಜರೊಳ್ ದೋಷಂ ಪುಟ್ಟದೆಂಬುದುತ್ತರವ್ಯಾಕಂ :

ತದಮೃತಸ್ಯ ವಿಷತ್ವಂ ಯಃ ಕಳು ಕುಲೀನೇಷು ದೋಷಸಂಭವಃ || ೧೭ || ೨೯೨ ||

ಅರ್ಥ : ತತ್ = ಅದು, ಅಮೃತಸ್ಯ = ಅಮೃತದ, ವಿಷತ್ವಂ = ವಿಷಮಪ್ಪ ಸ್ವರೂಪಮೆಂತಂತೆ, ಯಃ = ಆವುದೊಂದು, ಖಲು = ನೆಟ್ಟನೆ, ಕುಲೀನೇಷು = ಕುಲಜರೊಳು, ದೋಷಸಂಭವಃ = ದೋಷದ ಪುಟ್ಟುಗೆ || ಕುಲಜನಲ್ಲದನೊಳು ದೋಷಮಕ್ಕುಮೆಂಬುದು ತಾತ್ಪರ್ಯಂ || ಶಸ್ತ್ರ- ಶಾಸ್ತ್ರಜ್ಞನೆಂಬಿದಂ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

ಘಟಪ್ರದೀಪವತ್ತಜ್ಞಾನಂ ಯತ್ರ ಪರಪ್ರತಿಬೋಧಃ || ೧೮ || ೨೯೩ ||

ಅರ್ಥ : ಘಟಪ್ರದೀಪಪವತ್ = ಕೊಡನೊಳಗಣ ಸೊಡರಂತೆ, ತತ್ ಜ್ಞಾನಂ = ಆ ಅಱಿತಂ, ಯತ್ರ = ಅವುದೊಂದಱೊಳು, ನ = ಇಲ್ಲ, ಪರಪ್ರತಿಬೋಧಃ = ಪೆಱರಂ ತಿಳಿಪುವುದು || ಪೆಱರಂ ತಿಳಿಪದಱಿತಂ ಪೊಲ್ಲೆಂಬುದು ತಾತ್ಪರ್ಯಂ ||

ತೇಷು ಶಸ್ತ್ರಮಿವ ಶಾಸ್ತ್ರಮಪಿ ನಿಷ್ಫಲಂ ಯೇಷಾಂ ಪ್ರತಿಪಕ್ಷದರ್ಶನಾತ್ ಭಯಂ
ಅನ್ವೇತಿ
[16] ಚೇತಾಂಸಿ || ೧೯ || ೨೯೪ ||

ಅರ್ಥ : ತೇಷು = ಅವರೊಳು, ಶಸ್ತ್ರಮಿವ = ಆಯುಧದಂತೆ, ಶಾಸ್ತ್ರಮಪಿ = ಅಱಿತಮುಂ | ನಿಷ್ಫಲಂ = ಫಲಮಿಲ್ಲ | ಯೇಷಾಂ = ಆರೋರ್ವರ, ಚೇತಾಂಸಿ = ಮನಂಗಳು, ಪ್ರತಿಪಕ್ಷದರ್ಸನಾತ್ = ಪ್ರತಿಪಕ್ಷಮಂ ಕಾಣ್ಬುದಱಿಂ | ಭಯಂ = ಭಯಮಂ | ಅನ್ವೇತಿ = ಪೊರ್ದುಗುಂ || ಪೆಱರಂ ಗೆಲ್ಲದಱಿತಮುಮಾಯುಧಮುಂ ಬಱಿದೆಂಬುದು ತಾತ್ಪರ್ಯಂ ||

—-

೧೬. ಕುಲೀನರಲ್ಲದವರಿಗೆ ಅಪವಾದದ ಭಯವಿಲ್ಲ.

೧೭. ಕುಲೀನರಲ್ಲಿ ದೋಷವುಂಟಾದರೆ ಅಮೃತವು ವಿಷವಾದಂತೆ.

೧೮. ಇತರರಿಗೆ ಬೋಧಿಸುವುದಕ್ಕೆ ಬರದ ಜ್ಞಾನವು ಕೊಡದೊಳಗಿನ ದೀಪದಂತೆ.

೧೯. ಯಾರ ಮನಸ್ಸು ಪ್ರತಿಪಕ್ಷವನ್ನು ಕಾಣುವ ಮಾತ್ರದಿಂದಲೇ ಭಯ ಪಡುವುದೋ ಅವರ ಶಸ್ತ್ರದಂತೆ ಶಾಸ್ತ್ರವೂ ನಿಷ್ಪಲ.

—-

ತದಸ್ತ್ರಂ ಶಾಸ್ತ್ರಂ ಚಾತ್ಮಪರಿಭವಾಯ ಯನ್ನ ಹಂತಿ ಪರೇಷಾಂ ಪ್ರಸರಂ || ೨೦ || ೨೯೫ ||

ಅರ್ಥ : ತತ್ = ಆ, ಅಸ್ತ್ರಂ = ಆಯುಧಮುಂ | ಶಾಸ್ತ್ರಂ ಚ = ಶಾಸ್ತ್ರಮುಂ ಮೇಣ್, ಆತ್ಮಪರಿಭವಾಯ = ತನ್ನ ಲಜ್ಜೆಗೆ ಕಾರಣಂ, ಯತ್ = ಆವುದೊಂದು, ಪರೇಷಾಂ = ಪೆಱರ | ಪ್ರಸರಂ = ಪೊಡರ್ಪಂ | ನ ಹಂತಿ = ಕಿಡಿಸದು || ಪೆಱರಂ ಗೆಲ್ವೇಳ್ಕುಂ ಎಂಬುದು ತಾತ್ಪರ್ಯಂ ||

 ನ ಹಿ ಗಲಿತೋ[17] ಬಲಿಬರ್ದೋ ಭಾರಕರ್ಮಣಿ ಕೇನಾಪ್ಯುಯುಜ್ಯತೇ || ೨೧ || ೨೯೬ ||

ಅರ್ಥ : ಗಲಿತಃ = ಪೂಡಲಾಱದ (ಹಡುಕುಳಿಯಾದ) ಬಲಿಬರ್ದ : = ಎತ್ತು, ಭಾರಕರ್ಮಣಿ = ಪಿರಿದಪ್ಪ ಪೂಱೆಯಂ ತೆಗೆವಲ್ಲಿ, ಕೇನಾಪಿ = ಆವನಿಂದೆಯುಂ, ನ ಹ್ಯುಪಯುಜ್ಯತೇ = ಪೂಡಲ್ಪಡದು || ಅಳಿಪಂಗಮಿಱಿಯಲ್ಪಾರದೊಂದೆ ಬೆಸಂ = ಬೇಳಲ್ವೇಡೆಂಬುದು ತಾತ್ಪರ್ಯಂ || ಆಳೊಚಿಸಲ್ವೇಳ್ಕುಮೆಂಬುದುತ್ತರವಾಕ್ಯಂ :

ಮಂತ್ರಪೂರ್ವಃ ಸರ್ವೋsಪ್ಯಾರಂಭಃ ಕ್ಷಿತಿಪತನೀನಾಂ || ೨೨ || ೨೯೭ ||

ಅರ್ಥ : ಮಂತ್ರಪೂರ್ವಃ = ಆಳೋಚನೆ ಮುಂತಾಗುಳ್ಳುದು, ಸರ್ವೋಪಿ = ಎಲ್ಲಮುಂ, ಆರಂಭಃ = ಕಾರ್ಯೋದ್ಯೋಗಂ, ಕ್ಷಿತಿಪತೀನಾಂ = ಅರಸುಗಳ್ಗೆ = ಆಳೋಚಿಸದೆ ಮಾಡೆ ಕಾರ್ಯಸಿದ್ಧಿಯಲ್ಲೆಂಬುದು ತಾತ್ಪರ್ಯಂ || ಮಂತ್ರದಿಂದಪ್ಪ ಕಾರ್ಯಮಂ ಪೇಳ್ವುದುತ್ತರವಾಕ್ಯಂ :

ಅನುಪಲಬ್ಧಸ್ಯ ಜ್ಞಾನಮುಪಲಬ್ಧಸ್ಯ ನಿಶ್ಚಯನಂ ನಿಶ್ಚಿತಸ್ಯ ಬಲಾದಾನಮರ್ಥದ್ವೈದಸ್ಯ ಸಂಶಯಚ್ಛೇದನಮೇಕದೇಶದೃಷ್ಟಸ್ಯ ವಿಶೇಷೋಪಲಬ್ಧಿರಿತಿ ಮಂತ್ರಸಾಧ್ಯಮೇತತ್ || ೨೩ || ೨೯೮ ||

ಅರ್ಥ : ಅನುಪಲಬ್ಧಸ್ಯ = ಅಱಿಯಲ್ಕೆಪಡೆಯದುದಱ (ಅಱಿಯಬಾಱದುದನಱೆವುದು) ಜ್ಞಾನಂ = ಅಱಿತಮುಂ | ಉಪಲಬ್ಧಸ್ಯ = ಅಱಿದುದಱ ನಿಶ್ಚಯನಂ = ನಿರ್ಣಯಮುಂ | ನಿಶ್ಚಿತಸ್ಯ = ನಿಶ್ಚೈಸಲ್ಪಟ್ಟುದಱ, ಬಲಾದಾನಂ = ಬಲಂಬೊಯ್ವುದುಂ, ಅರ್ತದ್ವೈಧಸ್ಯ = ಇತ್ತೆಱದ ಕಾರ್ಯದ, ಸಂಶಯಚ್ಛೇದನಂ = ಸಂಶಯಮುಂ ಕಿಡಿಸುವುದುಂ, ಏಕದೇಶದೃಷ್ಟಸ್ಯ = ಕಿಱಿದುಗಾಣಲ್ಪಟ್ಟುದಱ, ವಿಶೇಷೋಪಲಬ್ಧಿರಿತಿ = ಲೇಸಪ್ಪಱಿತಮುಮೆಂದಿಂತು, ಏತತ್ = ಇದು, ಮಂತ್ರಸಾಧ್ಯಂ = ಆಳೋಚನೆಯಿಂ ಸಾಧಿಸಲ್ಪಡುವುದು || ಆಳೋಚನೆಯಿಂ ಸಾಧ್ಯನಿರ್ಣಯಮಕ್ಕುಮೆಂಬುದು ತಾತ್ಪರ್ಯಂ || ಮಂತ್ರಿ ಇಂತಪ್ಪ ಪ್ರಯೋಜನಮಂ ಪೇಳ್ವುದುತ್ತರವಾಕ್ಯಂ :

—-

೨೦. ಪರರ ಹೆಚ್ಚಳವನ್ನು ತಡೆಯಲಾರದವನ ಶಸ್ತ್ರವೂ, ಶಾಸ್ತ್ರವೂ ತನ್ನ ಸೋಲಿಗೆ ಕಾರಣ.

೨೧. ಹೆಚ್ಚಿನ ಭಾರವನ್ನು ಹೊರಬೇಕಾದಾಗ ಸೋಮಾರಿಯಾದ ಎತ್ತನ್ನು ಯಾರಾದರೂ ಹೂಡುತ್ತಾರೆಯೇ?

೨೨. ರಾಜರ ಎಲ್ಲ ಕಾರ್ಯೋದ್ಯೋಗಗಳೂ ಮುಂದಾಲೋಚಿಸಿ ಮಾಡಬೇಕಾದವು.

೨೩. ತಿಳಿಯದಿರುವುದನ್ನು ತಿಳಿಯುವುದು. ತಿಳಿದದ್ದನ್ನು ನಿಶ್ಚಯಿಸಿಕೊಳ್ಳುವುದು. ನಿಶ್ಚಯಿಸಿಕೊಂಡದ್ದಕ್ಕೆ ಬೇಕಾದ ಬಲವನ್ನು ಸಂಗ್ರಹಿಸುವುದು. ಸಂಶಯ ನಿವಾರಣೆ, ಸ್ವಲ್ಪ ಮಟ್ಟಿಗೆ ತಿಳಿದದ್ದನ್ನು ಪೂರ್ತಿಯಾಗಿ ತಿಳಿದುಕೊಳ್ಳುವುದು ಇವು ಆಲೋಚನೆಯಿಂದ ಸಾಧಿಸಲ್ಪಡುವವು.

—-

ಆಕೃತಾರಂಭಮಾರಬ್ಧಸ್ಯಾನುಷ್ಠಾನಮನುಷ್ಠಿತಮಶೇಷಂ ನಿಯೋಗಸಂಪದಂ
ಚ ಕರ್ಮಸು ಯೇ ಕುರ್ಯುಸ್ತೇ ಮಂತ್ರಿಣಃ
|| ೨೪ || ೨೯೯ ||

ಅರ್ಥ : ಅಕೃತಾರಂಭಃ = ಮಾಡಲ್ವೇಡಿರ್ದ ಕಜ್ಜದುಜ್ಜಗಮಂ, ಆರಬ್ಧಸ್ಯ = ತೊಡಗಿದ ಕಾರ್ಯದ, ಅನುಷ್ಠಾನಂ = ಕೂಟಮುಂ, [18]ಅನುಷ್ಠಿತವಿಶೇಷಂ = ಮಾಡಲ್ಕೆಪಟ್ಟುದಱ ವಿಶೇಷಮುಂ, ವಿನಿಯೋಗಸಂಪದಂ ಚ = ಕಾರ್ಯದ ನೆಱವಿಯುಮಂ, ಕರ್ಮಸು = ಕಾರ್ಯಂಗಳಲ್ಲಿ, ಯೇ = ಆರ್ಕೆಲಂಬರು, ಕಾರ್ಯಃ = ಮಾಳ್ಪರ್, ತೇ = ಅವರ್ಗಳ್, ಮಂತ್ರಿಣಃ = ಮಂತ್ರಿಗಳ್ ಎಂಬದು || ಈ ಗುಣಂಗಳಿಲ್ಲದವಂ ಮಂತ್ರಿಯಲ್ಲೆಂಬುದು ತಾತ್ಪರ್ಯಂ || ಮಂತ್ರದವಯವಂಗಳಂ ಪೇಳ್ವುದುತ್ತರವಾಕ್ಯಂ :

ಕರ್ಮಣಾಮಾರಂಭೋಪಾಯಃ ಪುರುಷದ್ರವ್ಯಸಂಪದ್ದೇಶಕಾಲವಿಭಾಗೋ
ವಿನಿಪಾತಪ್ರತೀಕಾರಃ ಕಾರ್ಯಸಿದ್ಧಿಶ್ಚೇತಿ ಪಂಚಾಂಗೋ ಮಂತ್ರಃ
|| ೨೫ || ೩೦೦ ||

ಅರ್ಥ : ಕರ್ಮಣಾಂ = ಕಾರ್ಯಂಗಳಂ, ಆರಂಭೋಪಾಯಃ = ಮೊದಲ್ಗೊಳ್ವುಪಾಯಮಂ, ಪುರುಷದ್ರವ್ಯಸಂಪತ್ = ಪುರುಷದ್ರವ್ಯಂಗಳ, ನೆಱವಿಯಂ, ದೇಶಕಾಲವಿಭಾಗಃ = ದೇಶಕಾಲಂಗಳಱಿತಮುಂ. ವಿನಿಪಾತಪ್ರತೀಕಾರಃ = ಕಾರ್ಯದ ವಿಘ್ನಂಗಳಂ ಮಾಣಿಸುವುದೂ | ಕಾರ್ಯಸಿದ್ಧಿಶ್ಚೇತಿ = ಕಾರ್ಯದ ತೀರ್ಕಣೆಯುಮೆಂದಿಂತು, ಪಂಚಾಂಗ = ಅವಯವಂಗಳನುಳ್ಳುದು | ಮಂತ್ರಃ = ಮಂತ್ರಂ || ಇನಿತಿಲ್ಲದ ಮಂತ್ರದಿಂ ಕಾರ್ಯನಿಶ್ಚಯಮಿಲ್ಲೆಂಬುದು ತಾತ್ಪರ್ಯಂ || ಆಳೋಚಿಪ ಸ್ಥಾನಮಂ ಪೇಳ್ವುದುತ್ತರವಾಕ್ಯಂ :

—-

೨೪. ಮಾಡದಿದ್ದ ಕೆಲಸವನ್ನು ಪ್ರಾರಂಭಿಸುವುದು, ಪ್ರಾರಂಭಿಸಿದ ಕೆಲಸವನ್ನು ಮುಗಿಸುವುದು, ಮುಗಿದ ಕೆಲಸದ ಫಲವನ್ನು ಕ್ರಮವಾಗಿ ವಿನಿಯೋಗಿಸುವುದು. ಎಂಬಿವುಗಳನ್ನು ಆಯಾ ಕ್ರಮಗಳ ವಿಷಯದಲ್ಲಿ ಯಾರು ಸರಿಯಾಗಿ ಕೆಲಸ ನಿರ್ವಹಿಸುತ್ತಾರೋ ಅವರೇ ಮಂತ್ರಿಗಳು.

—-

 

[1]ಇತರರಿಂದ ಕಲಿತ ಜಾಣ್ಮೆಯುಳ್ಳವನು ಆಹಾರ್ಯ ಬುದ್ಧಿಯು.

[2]ಮೈ. ಚೌ. ಕಿಂ ಪುನರ್ಮನುಷ್ಯಃ.

[3]ಮೈ. ಅನುಶ್ರೂಯತೇ;  ಚೌ. ಅನುಭೂಯತೇ.

ಇಲ್ಲಿ ವಿಷ್ಣುಗುಪ್ತನ ಅಂದರೆ ಚಾಣಕ್ಯನ ಸಹಾಯದಿಂದ ಅಜ್ಞಾತವಾಗಿದ್ದ ಚಂದ್ರಗುಪ್ತನು ಅರಸನಾದ ಐತಿಹಾಸಿಕ ಘಟನೆಯ ಉಲ್ಲೇಖವಿದೆ.

[4]ಅನಧಿಕೃತ ಎಂದರೆ ಕ್ರಮದಾತನಲ್ಲದ ಎಂದು ಟೀಕಾಕಾರನು ಅರ್ಥ ಮಾಡಿದ್ದಾನೆ. ಚಂದ್ರಗುಪ್ತನು ಕುಲಕ್ರಮದಿಂದ ಅರಸೊತ್ತಿಗೆಗೆ ಅಧಿಕಾರಿಯಾಗಿರದಿದ್ದರೂ ಅವನನ್ನು ಚಾಣಕ್ಯನು ಅರಸನನ್ನಾಗಿ ಮಾಡಿದನು ಎಂದರ್ಥ. ದೊಡ್ಡವರ ಸಹಾಯದಿಂದ ಮನುಷ್ಯನು ಎಂಥ ಸ್ಥಾನಕ್ಕಾದರೂ ಏರಬಹುದು ಎಂಬುದು ಸೂತ್ರಕಾರನ ಅಭಿಪ್ರಾಯ.

[5]ಕನ್ನಡ ಟೀಕೆಯಲ್ಲಿ ಚಾಳುಕ್ಯನ ಎಂಬ ಪಾಠವು ವಿಚಿತ್ರವಾಗಿದೆ. ಅದರಲ್ಲಿಯ ಳ ವನ್ನು ಣ ಎಂದು ಇತ್ತೀಚೆಗೆ ಹಸ್ತಪ್ರತಿಯ ಪ್ರತಿ ಮಾಡಿದವರು ತಿದ್ದಿದ್ದರೋ ಎಂಬುದು ತಿಳಿಯದು. ಬಹುಶಃ ನೇಮಿನಾಥನು ಚಾಳುಕ್ಯರ ಅಂದರೆ ಕಲ್ಯಾಣ ಚಾಲುಕ್ಯರ ಕಾಲದವನಿದ್ದಿರಬಹುದಾದ್ದರಿಂದ ರೂಢಿಗತವಾಗಿ ಚಾಳುಕ್ಯ ಎಂದು ಬರೆದಿರಬೇಕು. ಇದರಿಂದ ನೇಮಿನಾಥನು ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಸೇರಿದವನೆಂದು ಸೂಚಿತವಾಗಬಹುದೆ?

[6]ಚೌ. ಏಕತಮಂ.

[7]ಮೈ. ಚೌ;  ಅಸ್ತ್ರಜ್ಞ

[8]ಚೌ ದಲ್ಲಿ ಉಪಧಿ ಮತ್ತು ನಮ್ಮ ಪ್ರತಿಯಲ್ಲಿ ಉಪದಾ ಎಂದು ಅಲ್ಪ ಪ್ರಾಣವಿರುವದು ಲೇಖನ ದೋಷವಿರಬಹುದಾಗಿದೆ. ಇಲ್ಲಿ ಕೌಟಿಲ್ಯನು ಹೇಳುವ (ಅರ್ಥಶಾಸ್ತ್ರ) ೧, ೬, ೧೦) ಉಪಧಾ (ಅಡೆತಡೆ) ಅಂದರೆ ಮಂತ್ರಿಯಾಗುವವನು, ಧರ್ಮ, ಅರ್ಥ, ಕಾಮ ಮತ್ತು ಭಯಗಳ ಪ್ರಭಾವದಿಂದ ದೂರವಾಗಿರಬೇಕು. ಅದಕ್ಕಾಗಿ ಪರೀಕ್ಷೆಗೆ ಒಳಗಾಗಬೇಕು ಎಂಬುದು ಪ್ರಸ್ತಾಪಿಸಲ್ಪಟ್ಟಿದೆ.

[9]ಇಲ್ಲಿ ವಿಷಯಾಂತರವಾಗಿದೆ. ಮೇಲಿನ ‘ಅಲ್ಲಿ ಸ್ವದೇಶಜನಂ ಮಾಳ್ಪುದಕ್ಕೆ ದೋಷಮಂ ಪೇಳ್ವುದುತ್ತರವಾಕ್ಯಂ’ ಎಂಬ ಮಾತಿಗೂ ಈ ವಾಕ್ಯಕ್ಕೂ ಸಂಬಂಧವಿಲ್ಲ.

[10]ಸಚಿವಃ ಎಂದು ಓದಬೇಕು.

[11]ಸಚಿವ ಪದಕ್ಕೆ ಪೆರ್ಗ್ಗಡೆ ಎಂದು ಬಳಸಿದುದನ್ನು ಗಮನಿಸಬೇಕು.

[12]ಮೈ. ಚೌ: ಗಳಲ್ಲಿ ಇಲ್ಲಿಂದ ಮುಂದೆ ಆರು ವಾಕ್ಯಗಳು ನಮ್ಮ ಪ್ರತಿಯಲ್ಲಿ ಇದ್ದ ಹಾಗೆ ಇದ್ದರೂ ಅವು ಹಿಂದುಮುಂದಾಗಿವೆ.

[13]ಚೌ: ಭೋಜ್ಯೇsಸಮ್ಮತೋಪಿ.

[14]ಮಾಡಿಟ್ಟ ಅಡಿಗೆಗೆ ಎಲ್ಲರೂ ಮುಕುರುತ್ತಾರೆ ಎಂಬಂತೆ.

[15]ಮೈ., ಚೌ. ಸಹಾಯೇನ ಅಸ್ತ್ರಜ್ಞೇನ.

[16]ಮೈ., ಚೌ. ಅನ್ವಯಂತಿ.

[17]ಮೈ: ಗಲಿರ್ಬಲೀವರ್ದ:, ಚೌ. ಗಲೀಬಲೀವರ್ದೋ.

[18]ಅನುಷ್ಠಾನ ಎಂಬ ಪದಕ್ಕೆ ಕೂಟ ಎಂದು ಅರ್ಥ ಹೇಳಿದುದನ್ನು ಗಮನಿಸಬೇಕು.