ಮಂತ್ರಕ್ಕಿಂತಪ್ಪ ಕಾರ್ಯದಲ್ಲಿ ದೂತನಾಗವೇಳ್ವುಮೆಂಬುದುತ್ತರವಾಕ್ಯಂ :

ಅನಾಸನ್ನೇಷ್ವರ್ಥೇಷು ದೂತೋ ಮಂತ್ರೀ || || ೫೦೪ ||

ಅರ್ಥ : ಆನಾಸನ್ನೇಷು = ದೂರಮಪ್ಪ, ಅರ್ಥೇಷು = ಕಾರ್ಯಂಗಳೊಳು, ದೂತಃ = ಅಟ್ಟಿದ ಮನುಷ್ಯಂ, ಮಂತ್ರೀ = ಮಂತ್ರಿಯು || ದೂದದ ಕಾರ್ಯಂಗಳೊಳ್ ದೂತಂ ಮುಖ್ಯನೆಂಬುದು ತಾತ್ಪರ್ಯಂ || ದೂತನ ಲಕ್ಷಣಮಂ ಪೇಳ್ವುದುತ್ತರವಾಕ್ಯಂ :

ಸ್ವಾಮಿಭಕ್ತಿರವ್ಯಸನಿತಾ ದಾಕ್ಷ್ಯಂ ಸತ್ಯಶುಚಿತ್ವಮಮೂರ್ಖತಾ ಪ್ರಾಗಲ್ಭ್ಯಂ[1]
ಪರಚಿತ್ತಪ್ರಹ್ಲಾದನಂ ಕುಶಲಬುದ್ಧಿ ರನೂನಾಗಮನತ್ವಂ ಪ್ರತಿಭಾನವತ್ವಂ
,
ಕ್ಷಾಂತಿಪರಮರ್ಮವಿತ್ತ್ವಂ
, ಜಾತಿಶ್ಚ ಪ್ರಥಮೇತಿ ದೂತಗುಣಾಃ || || ೫೦೫ ||

ಅರ್ಥ : ಸ್ವಾಮಿಭಕ್ತಿಃ = ಆಳ್ದನೊಳಪ್ಪ ಭಕ್ತಿಯುಂ, ಅವ್ಯಸನಿತಾ = ಬಸನಮಿಲ್ಲದಿರ್ಪದುಂ | ದಾಕ್ಷ್ಯಂ = ದಕ್ಷತೆಯುಂ, ಸತ್ಯಂ = ಸತ್ಯವಚನವು, ಶುಚಿತ್ವಂ = ಶುಚಿತನವುಂ, ಅಮೂರ್ಖತಾ = ಋಜುತನಮುಂ, ಪ್ರಾಗಲ್ಭ್ಯಂ = ಪ್ರೌಢಿಯುಂ (ದಿಟ್ಟತನವು), ಪರಚಿತ್ತಪ್ರಹ್ಲಾದನಂ = ಪೆಱರ = ಚಿತ್ತವ ಪ್ರೇರಿಸುಹವು, ಕುಶಲಬುದ್ಧಿಃ = ಎಲ್ಲವನಱಿವಲ್ಲಿ ಕುಶಲವಾದ ಬುದ್ಧಿ, ಅನೂನಾಗಮನತ್ವಂ = ಬೇಗ ನಡೆಹವು, ಪ್ರತಿಭಾನವತ್ವಂ = ಬೇಱೆಮುತ್ತರಂಗಾಣ್ಬ ಸ್ವರೂಪಮುಂ, ಕ್ಷಾಂತಿ = ಸೈರಣೆಯುಂ, ಪರಮರ್ಮವಿತ್ತ್ವಂ = ಪೆಱರ ಹೃದಯಮನಱಿವುದಂ, ಪ್ರಥಮಾ = ಮೊದಲ (ಬ್ರಾಹ್ಮಣ), ಜಾತಿಶ್ಚೇತಿ = ಜಾತಿಯುಮೆಂದಿತು, ಇತಿ = ಎಂಬ ಇವು, ದೂತಗುಣಾಃ = ದೂತಗುಣಂಗಳ್ || ಈ ಗುಣಮಿಲ್ಲದವನಂ ದೂತಂ ಮಾಡಲ್ವೇಡೆಂಬುದು ತಾತ್ಪರ್ಯಂ || ದೂತರ ಭೇದಮಂ ಪೇಳ್ವುದುತ್ತರವಾಕ್ಯಂ :

ಸ ಚ ತ್ರಿವಿಧೋ ನಿಷೃಷ್ಟಾರ್ಥಃ ಪರಿಮಿತಾರ್ಥಃ ಶಾಸನಹರಶ್ಚೇತಿ[2]|| || ೫೦೬ ||

ಅರ್ಥ : ಸಃ ಚ = ಆತಂ, ತ್ರಿವಿಧಃ = ಮೂಱು ತೆಱದವನುಂ, ನಿಷೃಷ್ಟಾರ್ಥಃ = ನಿಸೃಷ್ಟಾರ್ಥನೆಂದುಂ, ಪರಿಮಿತಾರ್ಥಃ = ಪೇಳ್ದ ಕಾರ್ಯಮನೆ ಮಾಳ್ಪನೆಂದುಂ, ಶಾಸನಹರಶ್ಚೇತಿ = ಓಲೆಯನೊಯ್ವ ಶಾಸನಹರನುಮೆಂದಿಂತು ಅಲ್ಲಿ ನಿಷೃಷ್ಟಾರ್ಥಲಕ್ಷಣಮಂ ಪೇಳ್ವುದುತ್ತರವಾಕ್ಯಂ :

—-

೧. ದೂರದ ಕಾರ್ಯಗಳಿಗಾಗಿ ಕಳುಹಿಸಲಾದ ಮಂತ್ರಿಯು ದೂತನು.

೨. ಸ್ವಾಮಿಭಕ್ತಿ, ದುರ್ವ್ಯಸನಗಳಿಲ್ಲದಿರುವದು, ಸಾಮರ್ಥ್ಯ, ಸತ್ಯಶೀಲತೆ, (ವ್ಯವಹಾರದಲ್ಲಿ) ಪರಿಶುದ್ಧತೆ, ಮೂರ್ಖತೆ ಇಲ್ಲದಿರುವದು, ಪ್ರೌಢಿಮೆ, ಪ್ರತಿಭೆ ಪರಚಿತ್ತವನ್ನು ಪ್ರಸನ್ನಗೊಳಿಸುವ ಶಕ್ತಿ, ಕುಶಲ ಬುದ್ಧಿ, ಕ್ಷಿಪ್ರಗತಿ, ಸೈರಣೆ, ಇತರರ ಹೃದಯವನ್ನರಿಯುವ ಶಕ್ತಿ, ಬ್ರಾಹ್ಮಣಿಕೆ ಇವು ದೂತನ ಗುಣಗಳು.

೩. ದೂತರಲ್ಲಿ ಮೂರು ಬಗ್ಗೆ, ನಿಸೃಷ್ಟಾರ್ಥನು (ನಿಶ್ಚಿತಕಾರ್ಯವಷ್ಟೆ, ಇಲ್ಲದವನು) ನಿಗದಿತ ಕೆಲಸವಿದ್ದವನು, ಪತ್ರಗಳನ್ನು ಒಯ್ಯುವವನು ಎಂದು.

—-

ಯತ್ ಕೃತೌ ಸ್ವಾಮಿನಃ ಸಂಧಿವಿಗ್ರಹೌ ಪ್ರಮಾಣಂ ನಿಸೃಷ್ಟಾರ್ಥೋ ದೂತಃ
ಯಥಾ ಕೃಷ್ಣಃ ಪಾಂಡವಾನಾಂ
|| || ೫೦೭ ||

ಅರ್ಥ : ಯತ್ ಕೃತೌ = ಆವನಿಂ ಮಾಡಲ್ಪಟ್ಟುವು ಮೇಣ್, ಆ ವಚನ ಮಾಟದೊಳ್, ಸ್ವಾಮಿನಃ = ಆಳ್ದನ, ಸಂಧಿವಿಗ್ರಹೌ = ಸಂಧಿಯುಂ ವಿಗ್ರಹಮುಮೆಂಬಿವು, ಪ್ರಮಾಣಂ = ಪ್ರಮಾಣಂ, ಸಃ = ಆತಂ, ನಿಸೃಷ್ಟಾರ್ಥಃ = ನಿಸೃಷ್ಟಾರ್ಥನೆಂಬ ದೂತಂ, ಯಥಾ = ಎಂತು, ಕೃಷ್ಣಃ = ನಾರಾಯಣಂ, ಪಾಂಡವಾನಾಂ = ಪಾಂಡವರ್ಗೆ || ಸ್ವಾಮಿಯ ಕಾರ್ಯಮಂ ಬೆಸಗೊಳ್ಳದೆಯುಂ ತೀರ್ಚುವಂ ನಿಸೃಷ್ಟಾರ್ಥದೂತನೆಂಬುದು ತಾತ್ಪರ್ಯಂ || ದೂತನಿಂತು ನೆಗಳ್ವುದೆಂಬುದುತ್ತರವಾಕ್ಯಂ ||

ಅಥವಾ ಮತ್ಸ್ವಾಮಿನಮತಿಸಂಧಾತುಕಾಮಃ ಪರೋ ಮಾಂ ವಿಲಂಬಯಿತು ಮಿಚ್ಛತೀತ್ಯವಿಜ್ಞಾತೋsಪಿ ದೂತೋsಪಸರೇತ್ ಗೂಢಪುರುಷಾ ನ್ವಾsಪಸರ್ಪಯೇತ್ || || ೫೦೯ ||

ಅರ್ಥ : ಅಥವಾ ಮತ್‌ಸ್ವಾಮಿನಂ = ಎನ್ನ ಸ್ವಾಮಿಯಂ, ಅತಿಸಂಧಾತುಕಾಮಃ = ವಂಚಿಸಲ್ಪರ್ಪ್ಪಂ, ಪರಃ = ಪಗೆವಂ, ಮಾಂ = ಎನ್ನಂ, ವಿಲಂಬಯಿತುಂ ಇಚ್ಛತೀತಿ = ತಡಯಿಸಲ್ಪೇಳ್ವನೆಂದಿಂತಱಿದು, ಅವಿಜ್ಞಾತೋsಪಿ = ಅಱಿಯದೆಯುಂ (ಬಿನ್ನಹಮಾಡದಾತನಾದಡಂ) ದೂತಃ = ದೂತಂ, ಅಪಸರೇತ್ = ಪೋಕೆ, ಗೂಢಪುರುಷಾನ್ವಾ = ಗೂಢಪುರುಷರಂ ಮೇಣ್, ಅಪಸರ್ಪಯೇತ್ = ಕಳಿಪುಗೆ || ಕಾರ್ಯಮನಱಿದು ದೂತಂ ಪೊಗದೆಯುಂ, ಗೂಢಪುರುಷರನಟ್ಟದೆಯುಮಿ ರಲಾಗದೆಂಬುದು ತಾತ್ಪರ್ಯಂ || ಇಂತಪ್ಪಲ್ಲಿ ಕಾರಣಮಂ ಚಿಂತಸಲ್ವೇಳ್ಕುಮೆಂಬುದುತ್ತರವಾಕ್ಯಂ :

—-

೪. ಯಾರು ಮಾಡಿದ, ಸ್ವಾಮಿಗೆ ಸಂಬಂಧಿಸಿದ ಸಂಧಿ ವಿಗ್ರಹಗಳು ಪ್ರಮಾಣಭೂತವಾದವೋ ಆತನು ನಿಸೃಷ್ಟಾರ್ಥದೂತನು, ಪಾಂಡವರಿಗೆ ಕೃಷ್ಣನಿದ್ದಂತೆ.

೫. ತಿಳಿಯಪಡಿಸದೆ ದೂತನು ಬೇರೊಬ್ಬರ ರಾಜ್ಯವನ್ನು ಪ್ರವೇಶಿಸಕೂಡದು, (ಅಲ್ಲಿಂದ) ಹಿಂದುರುಗಿ ಬರಕೂಡದು.

೬. ಶತ್ರುವು ನಮ್ಮ ಪ್ರಭುವನ್ನು ಮೋಸಗೊಳಿಸುವುದಕ್ಕಾಗಿ ನನ್ನನ್ನು ತಡೆಯುತ್ತಿದ್ದಾನೆ ಎಂದು ತಿಳಿದು ಬಂದಾಗ ದೂತನು ಯಾರಿಗೂ ತಿಳಿಸದೆ ಹೋಗಬಹುದು ಇಲ್ಲವೆ ಗೂಢಚಾರರನ್ನು ಕಳಿಸಬಹುದು.

—-

ಪರೇಣಾಶುಸಂಪ್ರೇಷಣೇ ದೂತಃ ಕಾರಣಂ ವಿಮೃಶೇತ || || ೫೧೦ ||

ಅರ್ಥ : ಪರೇಣ = ಪೆಱರಿಂ, ಆಶು = ಬೇಗಂ, ಸಂಪ್ರೇರಣೇ = ಕಳಪುವುದಾಗಲ್, ದೂತಃ = ದೂತಂ, ಕಾರಣಂ = ಕಾರಣಮಂ, ವಿಮೃಶೇತ್ = ಆರಯ್ಗೆ || ಕಾರಣಮಿಲ್ಲದೆ ಬೇಗಂ ಕಳುಪರೆಂಬುದು ತಾತ್ಪರ್ಯಂ || ದೂತಂ ಮಾಳ್ವ ಕಾರ್ಯಮಂ ಪೇಳ್ವುದುತ್ತರವಾಕ್ಯಂ :

ಕೃತ್ಯೋಪಗ್ರಹೋsಕೃತ್ಯೋತ್ಥಾಪನಂ ಕೃತ್ಯಭೇದಕಂ[3] ಸುತದಾಯಾದಾ
ವರುದ್ಧೋಪಜಾಪಸ್ವಮಂಡಲಪ್ರವಿಷ್ಟಗೂಢಪುರುಷ ಪರಿಜ್ಞಾನಮನ್ನಯಾ
[4]
ಟವಿಕಸಂಬಂಧ ಕೋಶದೇಶತಂತ್ರಮಿತ್ರಾವಭೋಧಃ
, ಕನ್ಯಾರತ್ನವಾಹನ
ವಿನಿಶ್ರಾವಣಂ ಸ್ವಾಭೀಷ್ಟತೀಕ್ಷ್ಣ ಪುರುಷಪ್ರಯೋಗಾತ್ ಪರಪ್ರಕೃತಿಕ್ಷೋಭ
ಕರಣಂ ಚ ದೂತಕರ್ಮ
|| || ೫೧೧ ||

ಅರ್ಥ : ಕೃತ್ಯೋಗ್ರಹಂ = ಕೃತ್ಯರ(ಕಾರ್ಯವ)ನೊಳಕೊಳ್ವುದುಂ, ಅಕೃತ್ಯಭೇದನಂ = ಕೃತ್ಯರಲ್ಲದರಂ ಭೇದಿಸುವುದು, ಅಕೃತ್ಯೋತ್ಥಾಪನಂ = ಕಾರ್ಯವ ತೊಲಗಿಸುಹವು, ಸುತ = ಮಕ್ಕಳು, ದಾಯಾದ = ದಾಯಿಗರುಂ, ಅವರುದ್ಧಃ = ಅಂತಃಪುರಮುಮೆಂಬಿವಱಂ, ಉಪಚಾಪ = ಪೊರ್ದಿ ನುಡಿವುದುಂ, ಸ್ವಮಂಡಲ = ತನ್ನ ನಾಡ ಪ್ರವಿಷ್ಟ = ಪೊಕ್ಕ, ಗೂಢಪುರುಷಪರಿಜ್ಞಾನಂ = ಗೂಢಪುರುಷರನಱಿವುದು, ಮನ್ನಯ = ಮನ್ನೆಯರುಂ, (ಅಂತಪಾಲ, ಗಡಿಯ ಕಾವವಱ) ಅಟವಿಕ = ಅಡವಿಯಂ ಪೊರ್ದಿರ್ಪುಮೆಂದಿವರ, ಸಂಬಂಧ = ನಂಟುಗೊಳ್ವುದು, ಕೋಶ = ಭಂಡಾರಮುಂ, ದೇಶ = ನಾಡುಂ, ತಂತ್ರ = ಪರಿಗ್ರಹ(ಪರಿವಾರ)ಮುಂ, ಮಿತ್ರ = ಕೆಳೆಯರುಮೆಂದಿವರ, ಅವಬೋಧಃ = ಅಱಿತಂ, ಕನ್ಯಾ = ಕನ್ನೆಯುಂ, ರತ್ನ = ರತ್ನಮುಂ, ವಾಹನ = ವಾಹನಮುಮೆಂದಿವಂ, ವಿನಿಶ್ರಾವಣಂ = ಪೊಱಮಡಿಸುವುದುಂ, ಸ್ವ = ತನ್ನ, ಅಭೀಷ್ಟತೀಕ್ಷ್ಣಪುರುಷ = ಇಷ್ಟ (ಬಲು ಬಂಟಱ) ಪುರುಷಃ ಪ್ರಯೋಗಾತ್ = ಪ್ರಯೋಗಿಸುವುದಱತ್ತಣಿಂ | ಪರಪ್ರಕೃತಿ = ಶತ್ರುವಿನ ಪರಿಗ್ರಹ(ಪರಿವಾರ)ಕ್ಕೆ, ಕ್ಷೋಭಕರಣಂ ಚ = ಕ್ಷೋಭಮಂ ಮಾಳ್ಪುದುಂ, ದೂತಕರ್ಮ = ದೂತನ ನೆಗಳ್ತೆ || ಇನಿತು ಗುಣಮಿಲ್ಲದಂ ದೂತನಲ್ಲೆಂಬುದು ತಾತ್ಪರ್ಯಂ || ದೂತನಿಂತಪ್ಪನನಱಿಯ ವೇಳ್ಕುಮೆಂಬುದುತ್ತರವಾಕ್ಯಂ :

—-

೭. ಶತ್ರುವು ತನ್ನನ್ನು ಬೇಗ ಕಳುಹಿಸಿಕೊಟ್ಟರೆ ದೂತನು ಅದಕ್ಕೆ ಕಾರಣವೇನಿರಬಹುದೆಂಬುದನ್ನು ತಿಳಿದುಕೊಳ್ಳಬೇಕು.

೮. ಒಳಸಂಚುಗಾರರನ್ನು ಹಿಡಿತದಲ್ಲಿಟ್ಟುಕೊಳ್ಳುವದು, ಅದಲ್ಲದವರನ್ನು ಮೇಲೆತ್ತುವುದು. (ಶತ್ರುಪಕ್ಷದವ) ಪುತ್ರರನ್ನು ದಾಯಾದಿಗಳನ್ನು, ನಿಗ್ರಹಿಸಲ್ಪಟ್ಟವರನ್ನು ತಿರುಗಿಬೀಳುವಂತೆ ಹುರಿದುಂಬಿಸುವದು, ತನ್ನ ಮಂಡಲದಲ್ಲಿ ಪ್ರವೇಶಿಸಿದ ಗೂಢಪುರುಷರನ್ನು ಪತ್ತೆ ಹಚ್ಚುವದು. ನೆರೆಯ ರಾಜರುಗಳೊಂದಿಗೂ ಅಟವಿಕರೊಂದಿಗೂ ಸಂಬಂಧವನ್ನು ಬೆಳಸಿಕೊಳ್ಳುವದು. ಕೋಶ, ದೇಶ, ರಕ್ಷಣಾಪಡೆ, ಮತ್ತು ಮಿತ್ರರ ಪೂರ್ತಿಯಾದ ವಿವರಗಳನ್ನು ತಿಳಿದುಕೊಂಡಿರುವದು. (ಶತ್ರು ರಾಜ್ಯದಿಂದ) ಕನ್ಯೆಯರನ್ನು, ರತ್ನಗಳನ್ನು, ವಾಹನಗಳನ್ನು, ಹೊರಹೊರಡಿಸುವದು. ತನ್ನ ಇಷ್ಟರನ್ನು ಕಳುಹಿಸಿಕೊಟ್ಟು ಶತ್ರುಗಳ ಪ್ರಜೆಗಳಲ್ಲಿ ಕೋಲಾಹಲವನ್ನುಂಟುಮಾಡುವದು ಇವು ದೂತರ ಕಾರ್ಯಗಳು.

—-

ಮಂತ್ರಿಪುರೋಹಿತಸೇನಾಪತಿಪ್ರತಿಬದ್ಧಾಪ್ತಪೂಜನೋಪಚಾರವಿಶ್ರಂಭಾಭ್ಯಾಂ
ಶತ್ರೋರಿತಿ ಕರ್ತವ್ಯತಾಮಂತಃಸಾರತಾಂಚ ವಿಂದ್ಯಾತ್
|| || ೫೧೨ ||

ಅರ್ಥ : ಮಂತ್ರಿ = ಮಂತ್ರಿಗಳು, ಪುರೋಹಿತ = ಪುರೋಹಿತರು, ಸೇನಾಪತಿ = ಪಡೆವಳರುಮೆಂದಿವರು, ಪ್ರತಿಬದ್ಧಃ = ಪ್ರತಿಬದ್ಧಾನ್ = ಸಂಬಂಧಮಪ್ಪ, ಆಪ್ತಜನ = ಆಪ್ತಪುರುಷರು, ಉಪಚಾರ = ವಿನಯೋಪಚಾರಮುಂ (ಮಾಡಲ್ಪಟ್ಟ ಪುರುಷರನು) ಪೂಜನೋಪಚಾರ = ಪೂಜಿಸುವ, ವಿಶ್ರಂಭಾಭ್ಯಾಂ = ಬಿಚ್ಚತಿಕೆಯು (ವಿಶ್ವಾಸ) ಮೆಂಬಿವಱಿಂ, ಶತ್ರೋಃ = ಪಗೆವನ, ಇತಿಕರ್ತವ್ಯತಾಂ = ಇಂತು ಮಾಳ್ಪೆನೆಂಬುದುಮಂ, ಅಂತಃಸಾರತಾಂ ಚ = ಒಳಗಣ ಸಾರತೆಯುಮಂ, ವಿಂದ್ಯಾತ್ = ಅಱಿಗೆ || ಇನಿತಱಿಯದಂ ದೂತಾಭಾಸನೆಂಬುದು ತಾತ್ಪರ್ಯಂ || ಇಂತಪ್ಪುದಂ ಸೈರಿಸವೇಳ್ಕುಮೆಂಬುದುತ್ತರವಾಕ್ಯಂ :

ಸ್ವಯಮಶಕ್ತಃ ಪೆರೇಣೋಕ್ತಮನಿಷ್ಟಂ ಸಹೇತ || ೧೦ || ೫೧೩ ||

ಅರ್ಥ : ಸ್ವಯಂ = ತಾಂ, ಅಶಕ್ತಃ = ಆಱದೊಂ, ಪರೇಣ = ಪೆಱರಿಂ | ಉಕ್ತಂ = ನುಡಿಯಲ್ಪಟ್ಟ,
ಅನಿಷ್ಟಂ = ಇಷ್ಟಮಲ್ಲದುದಂ, ಸಹೇತ = ಸೈರಿಸುಗೆ || ಅಶಕ್ತಂ ಸೈರಿಸದಿರೆ ಬಾಧೆಯುಕ್ಕುಮೆಂಬುದು
ತಾತ್ಪರ್ಯಂ || ಇಂತಪ್ಪಲ್ಲಿ ಸೈರಿಸಲಾಗದೆಂಬುದುತ್ತರವಾಕ್ಯಂ :

ಗುರುಷು ಸ್ವಾಮಿಷು ವಾ ಪರಪರಿವಾದೇ[5] ನಾಸ್ತಿ ಕ್ಷಾಂತಿಃ || ೧೧ || ೫೧೪ ||

ಅರ್ಥ : ಗುರುಷು = ಆರಾಧ್ಯರೊಳಂ, ಸ್ವಾಮಿಷು ವಾ = ಒಡೆಯರೊಳಂ ಮೇಣ್, ಪರಪರಿವಾದೇ = ನಿಂದೆಯಾದೊಡೆ (ಪಱರು ಮಾಡಿದ ನಿಂದೆಯಲ್ಲಿ) ಕ್ಷಾಂತಿಃ = ಕ್ಷಮೆ, ನಾಸ್ತಿ = ಇಲ್ಲ || ಪಿರಿಯರ ಪಳಿಯ ಕೇಳಲಾಗದೆಂಬುದು ತಾತ್ಪರ್ಯಂ || ಇಂತಪ್ಪನಂ ನಿಲಿಸಲಾಗದೆಂಬುದುತ್ತರವಾಕ್ಯಂ :

—-

೯. (ಶತ್ರುಗಳ) ಮಂತ್ರಿಗಳು, ಪುರೋಹಿತರು, ಸೇನಾಪತಿಗಳು ಇವರ ಅಪ್ಪಜನರಿಂದ ಅವರಿಗೆ ಉಪಕಾರವನ್ನು ಮಾಡಿ ವಿಶ್ವಾಸವುಂಟಾಗುವಂತೆ ಮಾಡಿ, ಶತ್ರುಗಳು ಏನು ಮಾಡಲು ಉದ್ಯುಕ್ತರಾಗಿರುತ್ತಾರೆಂಬ ಅಂತಸ್ಸಾರವನ್ನು ತಿಳಿದುಕೊಳ್ಳಬೇಕು.

೧೦. ತಾನು ಅಶಕ್ತನಾಗಿದ್ದರೆ, ಇತರರು ಅನಿಷ್ಟವಾಗಿ ವರ್ತಿಸಿದರೆ ಸಹಿಸಬೇಕು.

೧೧. (ತನ್ನ) ಗುರುಗಳ ವಿಷಯದಲ್ಲಾಗಲಿ, ಸ್ವಾಮಿಗಳ ವಿಷಯದಲ್ಲಾಗಲಿ ಯಾರಾದರೂ ನಿಂದಾವಾಕ್ಯಗಳನ್ನಾಡಿದರೆ, ಕ್ಷಮೆ ಇಲ್ಲ.

—-

ಸ್ಥಿತ್ವಾಪಿ ಯಾಸ್ಯತೋsವಸ್ಥಾಪನಂ ಕೇವಲಮುಪಕ್ಷಯ[6]ಹೇತುಃ || ೧೨ || ೫೧೫ ||

ಅರ್ಥ : ಸ್ಥಿತ್ವಾಪಿ = ಇರ್ದುಂ, ಯಾಸ್ಯತಃ = ಪೊಗಲ್ವೇಡಿರ್ದನ, ಅವಸ್ಥಾಪನಂ = ಇರಿಸುವುದುಂ, ಕೇವಲಂ = ಬಱಿದೆ, ಉಪಕ್ಷಯಹೇತುಃ = ಉಪಕ್ಷ[7]ಕ್ಕೆ ಕಾರಣಂ || ಎಂತುಂ ಪೋಪನಂ ಬೇಗ ಕಳಿಪುವುದೆಂಬುದು ತಾತ್ಪರ್ಯಂ ||

ವೀರಪುರುಷಪರಿವಾರಿತಃ[8] ಶೂರಪುರುಷಾಂತರಿತಾನ್ ಪರದೂತಾನ್ ಪಶ್ಯೇತ್ || ೧೩ || ೫೧೬ ||

ಅರ್ಥ : ವೀರಪುರುಷ = ಸುಭಟರಿಂ, ಪರಿವಾರಿತಃ = ಸುತ್ತಲ್ಪಟ್ಟನಾಗಿ, ಶೂರಪುರುಷ = ಕಲಿಗಳಿಂ, ಅಂತರಿತಾನ್ = ವ್ಯಾವಹಾರಿಕರಾಗಿರ್ದರಂ(ತರಿಸಿದ) ಪರದೂತಾನ್ = ಪೆಱರ ದೂತರುಮಂ ಪಶ್ಯೇತ್ = ಕಾಣಿಸಿಕೊಳ್ಗೆ || ಪರದೂತರಿಂ ಕೇಡಕ್ಕುಮೆಂಬುದು ತಾತ್ಪರ್ಯಂ ||

ಶ್ರೂಯತೇ ಹಿ ಕಿಲ ಚಾಣಾಕ್ಯ[9]ಸ್ತೀಕ್ಷ್ಣದೂತಪ್ರಯೋಗೇನೈಕಂ ನಂದಂ ಜಘಾನೇತಿ || ೧೪ || ೫೧೭ ||

ಅರ್ಥ : ಶ್ರೂಯತೇ ಹಿ ಕಿಲ = ಕೇಳಲ್ಪಟ್ಟುದಲ್ತೆ, ಚಾಣಾಕ್ಯಃ = ಚಾಣಾಕ್ಯಂ, ತೀಕ್ಷದೂತಪ್ರಯೋಗೇನ = ತೀಕ್ಷ್ಣ ದೂತಪುರುಷರನಟ್ಟವುದಱಿಂ, ಏಕಂ = ಓರ್ವಂ, ನಂದಂ = ನಂದನಂ (ನಂದನೆಂಬಾತನಂ) ಜಘಾನ = ಕೊಂದನೆಂದಿಂತು || ಪರೀಕ್ಷಿಸದೊಡಲ್ಲದಿಂತಪ್ಪುದಂ ಕೈಕೊಳ್ಳಲಾಗದೆಂಬುದು ತಾತ್ಪರ್ಯಂ ||

—-

೧೨. (ಕೊಂಚಕಾಲ) ನಿಂತು ಅನಂತರ ಹೊರಡಬೇಕಾದವನನ್ನು ತಡೆಯುವದು ವಿನಾಶಕ್ಕೆ ಕಾರಣ.

೧೩. ವೀರಪುರುಷರಿಂದ ಸುತ್ತುವರಿಯಲ್ಪಟ್ಟವನಾಗಿ ಶೂರಪುರುಷದಿಂದ ಕೂಡಿದ ವೈರಿಗಳ ದೂತರನ್ನು ಕಾಣಬೇಕು.

೧೪. ಚಾಣಕ್ಯನು ತೀಕ್ಷಣದೂತನನ್ನು ಕಳುಹಿಸಿ ಒಬ್ಬ ನಂದನವನ್ನು ಕೊಂದನೆಂದು ಕೇಳಲ್ಪಡುತ್ತದೆ.

—-

ಶತ್ರುಪ್ರಹಿತಂ ಶಾಸನಮುಪಾಯನಂ ಚ ಸ್ಪೈರಪರೀಕ್ಷಿತಂ ನೋಪಾದದೀತ || ೧೫ || ೯೧೮ ||

ಅರ್ಥ : ಶತ್ರುಪ್ರಹಿತಂ = ಪಗೆವನಟ್ಟಿದ, ಶಾಸನಂ = ಓಲೆಯುಮುಂ, ಉಪಾಐನಂ ಚ = ಪಾವುಡಮಂ (ಕಾಣಿಕೆಯನು) ಸ್ಪೈಃ = ತನ್ನವಱಿಂ, ಅಪರೀಕ್ಷಿತಂ = ಪರೀಕ್ಷಿಸಲ್ಪಡದುದಂ, ನೋಪಾದದೀತ = ಕೈಕೊಳ್ಳದಿರ್ಕೆ || ಕೈಕೊಳ್ವುದಕ್ಕೆ ಪರೀಕ್ಷಿಸದಂದಪಾಯಮಕ್ಕಮೆಂಬುದು ತಾತ್ಪರ್ಯಂ || ಅದಕ್ಕೆ ಉದಾಹರಣೆಯುತ್ತರವಾಕ್ಯಂ :

ಶ್ರೂತಯೇ ಹಿಸ್ಪರ್ಶವಿಷವಾಸಿತಾದ್ಭುತವಸ್ತ್ರೋಪಾಯನೇನ[10] ಕರಹಾಟಪತಿಃ
ಕೈಟಭೋ ವಸುನಾಮಾನಂ ರಾಜಾನಂ
[11] ಕೃತ್ರಿಮಾಶೀವಿಷಧರೋಪೇತ
ರತ್ನಕರಂಡಕಪ್ರಾಭೃತೇನ ಚ ಕರಾವಾಳಃ ಕರಾಳಂ ಜಘಾನೇತಿ
|| ೧೬ || ೫೧೯ ||

ಅರ್ಥ : ಶ್ರೂಯತೇ ಹಿ = ಕೇಳಲ್ಪಟ್ಟುದಲ್ತೆ, ಸ್ಪರ್ಶವಿಷ = ಮುಟ್ಟಿದೊಡೆ ಕೊಲ್ವ ವಿಷದಿಂ | ವಾಸಿತ = ವಾಸಿತಲ್ಪಟ್ಟ, ಅದ್ಭುತವಸ್ಥೋಪಾಯನೇನ = ಆಶ್ಚರ್ಯಮಷ್ಟ ವಸ್ತ್ರದ ಕಾಣಿಕೆಯಿಂದ, ಕರಹಾಟಪತಿಃ = ಕರಹಾಟನಾಡರಸಂ, ಕೈಟಭಃ = ಕೈಟಭನೆಂಬಂ, ವಸುನಾಮಾನಂ = ವಸುವೆಂಬ ಪೆಸರನುಳ್ಳ, ರಾಜಾನಂ = ಅರಸನಂ, ಜಘಾನೇತಿ = ಕೊಂದೆನೆಂದಿತು, ಕೃತ್ರಿಮಾಶೀ = ಮಾಟದ ವೇಗದಿಂದ ಪರಿಹರಿಸುವ ಆಶೀವಿಷವಿಷಧರೋಪೇತ = ದೃಷ್ಟಿವಿಷಮಪ್ಪ ಸರ್ಪನಂ ಕೂಡಿದ, ರತ್ನಕರಂಡಕಪ್ರಾಭೃತೇನ = ರತ್ನದ ಕರಂಡಗೆಯ ಪಾವುಡದಿಂ, (ಕಾಣಿಕೆ) ಕರವಾಳಃ = ಕರವಾಳನೆಂಬೊಂ, ಕರಾಳಂ = ಕರಾಳನೆಂಬರಸನನು, ಜಘಾನೇತಿ = ಕೊಂದನೆಂದಿಂತು || ದೂತನಂ ಕೊಲಲಾಗದೆಂಬುದುತ್ತರವಾಕ್ಯಂ :

—-

೧೫. ಶತ್ರುಗಳು ಕಳುಹಿಸಿದ ಲೇಖನವನ್ನಾಗಲಿ, ಕಾಣಿಕೆಯನ್ನಾಗಲಿ ತನ್ನವರಿಂದ ಪರೀಕ್ಷಿಸದೆ ತೆಗೆದುಕೊಳ್ಳಕೂಡದು.

೧೬. ಕರಹಾಟ ರಾಜನಾದ ಕೈಟಭನು ಸ್ಪರ್ಶವಿಷವನ್ನು (ಮುಟ್ಟಿದರೆ ಕೊಲ್ಲುವ ವಿಷವನ್ನು) ಲೇಪಿಸಿದ ಆಶ್ಚರ್ಯಕರವಾದ ವಸ್ತ್ರವನ್ನು ಕಾಣಿಕೆಯಾಗಿ ಕೊಟ್ಟು, ವಸುವೆಂಬ ಹೆಸರಿನ ರಾಜನನ್ನು ಕೊಂದನೆಂಬುದನ್ನು, ನೋಡಿದೊಡನೆ ಸಾಯುವ ಹಲ್ಲಿನಲ್ಲಿ ವಿಷವುಳ್ಳ ಹಾವಿನಿಂದ ಕೂಡಿದ ರತ್ನದ ಭರಣಿಯನ್ನು ಕಾಣಿಕೆಯಾಗಿ ಕೊಟ್ಟು ಕರಾವಾಲನು ಕರಾಳನನ್ನು ಕೊಂದನೆಂದು ಕೇಳಿಬರುತ್ತದೆ.

—-

ಮಹತ್ಯಪಕಾರೇsಪಿ ನ ದೂತಮೌಪಹನ್ಯಾತ್ || ೧೭ || ೫೨೦ ||

ಅರ್ಥ : ಮಹತಿ = ಪಿರಿದಪ್ಪ, ಅಪಕಾರೇ ಅಪಿ = ಅಪಕಾರದೊಳಂ, ದೂತಂ = ದೂತನಂ, ನೋಪಹನ್ಯಾತ್ = ಕೊಲದಿರ್ಕ್ಕೆ || ಇದನೇ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

[12]ಉದ್ಧೃತೇಷ್ವಸಿ ಶಸ್ತ್ರೇಪಿ ದೂತಮುಖಾ ಹಿ ರಾಜಾನಃ || ೧೮ || ೫೨೧ ||

ಅರ್ಥ : ಶಸ್ತ್ರೇಷು = ಆಯುಧಂಗಳೊಳ್, ಉದ್ಧೃತೇಷು ಅಪಿ = ಎತ್ತಲ್ಪಟ್ಟುವಂತಾದೊಡಂ, ದೂತಮುಖಾಃ = ದೂತನಂ ಮುಖವಾಗುಳ್ಳವರು, ಹಿ = ನೆಟ್ಟನೆ, ರಾಜಾನಃ = ಅರಸುಗಳ್ = ದೂತನ ಕೊಲೆ ಕಾರ್ಯಹಾನಿಯಕ್ಕುಮಪವಾದಮಕ್ಕುಮೆಂಬುದು ತಾತ್ಪರ್ಯಂ || ಈಯರ್ಥಮನೆ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

ತೇಷಾಮಂತಾವಸಾಯಿನೋsಪ್ಯವಧ್ಯಾಃ ಕಿಮಂಗ ಪುನರ್ಬ್ರಾಹ್ಮಣಾಃ || ೧೯ || ೫೨೨ ||

ಅರ್ಥ : ತೇಷಾಂ = ಆ ಅರಸುಗಳು, ಅಂತಾವಸಾಯಿನೋsಪಿ = ಸಮೀಪದೊಳಿರ್ಪ್ಪವರ್ಗಳುಂ (ಸ್ವಪಚರಾದೊಡೆಯು) ಅವಧ್ಯಾಃ = ಕೊಲಲ್ಪಡುವರಲ್ಲ, ಅಂಗ = ಎಲೆ! ಬ್ರಾಹ್ಮಣಾಃ = ಬ್ರಾಹ್ಮಣರುಂ, ಕಿಂ ಪುನಃ = ಏಂ ಮತ್ತೆ ಕೊಲಲ್ಪಡುವರೇ || ದೂತನ ನುಡಿಯಂ ಪೇಳ್ವುದುತ್ತರವಾಕ್ಯಂ :

ಅವಧ್ಯಭಾವಾದ್ದೂತಃ ಸರ್ವಮಪಿ ಜಲ್ಪತಿ || ೨೦ || ೫೨೩ ||

ಅರ್ಥ : ಅವಧ್ಯಭಾವಾತ್ = ಕೊಲಲ್ಪಡೆಯನೆಂಬ ಬುದ್ಧಿಯಂ, ದೂತಃ = ದೂತಂ, ಸರ್ವಮಪಿ = ಎಲ್ಲಮಂ, ಜಲ್ಪತಿ = ನುಡಿವಂ || ದೂತನ ನುಡಿಗೆ ಕನಲ್ವೇಡೆಂಬುದು ತಾತ್ಪರ್ಯಂ || ದೂತನ ವಚನದಿಂದೆಂತಪ್ಪು ನಂಬುಗೆಯವೇಡೆಂಬುದುತ್ತರವಾಕ್ಯಂ :

—-

೧೭. ಬಹಳ ಅಪಕಾರ ಮಾಡಿದ್ದರೂ ದೂತನನ್ನು ಕೊಲ್ಲಬಾರದು.

೧೮. ಶಸ್ತ್ರವನ್ನು ಎತ್ತಿದ್ದರೂ (ಯುದ್ಧವು ನಡೆಯುತ್ತಿದ್ದರೂ) ರಾಜರಿಗೆ ದೂತರೇ ಮುಖ್ಯರು.

೧೯. ತಮ್ಮ ಸಮೀಪದಲ್ಲಿರುವವನನ್ನೂ ಕೊಲ್ಲದಿರುವಾಗ, ದೂತರಾದ ಬ್ರಾಹ್ಮಣರನ್ನು ಕೊಲ್ಲಬಹುದೇ?

೨೦. ಕೊಲ್ಲಲ್ಪಡುವುದಿಲ್ಲವೆಂಬ ನಂಬಿಕೆಯಿಂದ ದೂತನು ಇಷ್ಟಬಂದಂತೆ ಹರಟುವುದುಂಟು.

—-

ಕಃ ಸುಧೀರ್ದೂತವಚನಾತ್ಪುರೋತ್ಯರ್ಷಂ ಸ್ವಾಪಕರ್ಷಂ ಚ ಮನ್ಯೇತ || ೨೧ || ೫೨೪ ||

ಅರ್ಥ : ಸುರ್ಧೀಃ = ಬುದ್ಧಿವಂತನಪ್ಪಂ, ಕಃ = ಆವಂ, ದೂತವಚನಾತ್ = ದೂತನ ನುಡಿಯಿಂ, ಪರೋತ್ಕರ್ಷಂ = ಪಗೆವನುನ್ನತಿಕೆಯುಮಂ, ಸ್ವಾಪಕರ್ಷಂ ಚ = ತನ್ನ ಹೀನತಿಕೆಯಮಂ ಮನ್ಯೇತ = ಬಗೆವಂ || ತನ್ನವಱಿಂದಾರಯ್ವುದೆಂಬುದು ತಾತ್ಪರ್ಯಂ || ದೂತನ ವಚನದಿಂದಾರಯ್ವುದೆಂಬು ದುತ್ತರವಾಕ್ಯಂ :

ತದಾಶಯರಹಸ್ಯಪರಿಜ್ಞಾನಾರ್ಥಂ ಪರದೂತಸ್ತ್ರೀಭಿರುಭಯವೇತನೈ
ಸ್ತದ್ಗುಣಾಚಾರಶೀಲಾನುವರ್ತಿಭಿರ್ವಾ ಪ್ರಣಿಧಾತವ್ಯಃ
|| ೨೨ || ೫೨೫ ||

ಅರ್ಥ : ತತ್ = ಆತನ, ಆಶಯರಹಸ್ಯ = ಮನದೋಳಿರ್ದ ಕಟ್ಟೆಕಾಂತದ ಪರಿಜ್ಞಾನಾರ್ಥಂ = ಅಱೀವುದು ಕಾರಣಮಾಗಿ, ಪರದೂತ = ಪಗೆವನ ದೂತಂ, ಸ್ತ್ರೀಭಿಃ = ಸ್ತ್ರೀಯರ್ಕಳಿಂದಮುಂ ಉಭಯವೇತನೈಃ = ಎರಡು ಕಡೆಯಲು ತಕ್ಕೊಂಬ ಭಟರುಗಳಿಂದಮುಂ, ತತ್ = ಆ ದೂತನ, ಗುಣ = ಗುಣಂಗಳು, ಆಚಾರ = ನೆಗಳ್ತೆಯುಂ, ಶೀಲ = ಶೀಲಸ್ವಭಾವಮುಮೆಂದಿವಂ, ಅನುವರ್ತಿಭಿರ್ವಾ = ಸಮಾನವಾಗಿ ನೆಗಳ್ವರ್ಗಳಿಂದಂ ಮೇಣ್, ಪ್ರಣಿಧಾತವ್ಯಂ = ಆರಯೈಪಡುವಂ || ದೂತಹೃದಯಮನೆಲ್ಲಾ ತೆಱಪಿಂದಾರಯ್ವುದೆಂಬುದು ತಾತ್ಪರ್ಯಂ || ಪಗೆವರ್ಗಟ್ಟುವೋಲೆಯ ಸುತ್ತುಮಂ ಮುದ್ರೆಯಂ ಪೇಳ್ವುದುತ್ತರವಾಕ್ಯಂ :

ಚತ್ಫಾರಿ ವೇಷ್ಟನಾನಿ ಖಡ್ಗಮುದ್ರಾ ಚ ಪ್ರತಿಪಕ್ಷಲೇಖಾನಾಂ || ೨೩ || ೫೨೬ ||

ಅರ್ಥ : ಚತ್ಘಾರಿ = ನಾಲ್ಕು, ವೇಷ್ಟನಾನಿ = ಸುತ್ತುಗಳುಂ, ಖಡ್ಗಮುದ್ರಾ ಚ = ಅಡ್ಡಾಯುಧದ ಮುದ್ರೆಯುಂ, ಪ್ರತಿಪಕ್ಷಲೇಖಾನಾಂ = ಪಗೆವರ್ಗಟ್ಟುವೋಲೆಗಳ್ಗೆ ||

ಇತಿ ದೂತ ಸಮುದ್ದೇಶಃ || ೧೨ || ದ್ವಾದಶಃ ||[13]
ಒಟ್ಟು ವಾಕ್ಯಂಗಳು ವಾಕ್ಯಗಳು
|| ೨೩ || ೫೨೬ ||

—-

೨೧. ಯಾವ ಬುದ್ಧಿವಂತನು ತಾನೆ ದೂತನ ಮಾತುಗಳಿಂದ ಶತ್ರುವಿನ ಉನ್ನತಿಯನ್ನು ತನ್ನ ಹೀನತೆಯನ್ನು ನಂಬುವನು.

೨೨. ಶತ್ರುದೂತನ ಅಭಿಪ್ರಾಯಗಳನ್ನು, ರಹಸ್ಯಗಳನ್ನು ತಿಳಿದುಕೊಳ್ಳುವ ಸ್ತ್ರೀಯರನ್ನಾಗಲಿ, ಎರಡು ಕಡೆಯಿಂದಲೂ ಕೂಲಿಯನ್ನು ತೆಗೆದುಕೊಳ್ಳುವ ಆಳುಗಳನ್ನಾಗಲಿ ಆ ದೂತರ ಸೇವೆಗೆ ಕಳುಹಿಸಿಕೊಡಬೇಕು.

೨೩. ಶತ್ರುಗಳಿಗೆ ಕಳುಹಿಸಿಕೊಡುವ ಪತ್ರಗಳಿಗೆ ನಾಲ್ಕು ಮಡಿಕೆಗಳೂ, ಖಡ್ಗ ಮುದ್ರೆಯೂ ಇರಬೇಕು.

—-


೧೪. ಚಾರ ಸಮುದ್ದೇಶ

 

ಹಿರಿಗರ್ಮಾಳ್ಪ ಕಾರ್ಯಮಂ ಪೇಳ್ವುದುತ್ತರವಾಕ್ಯಂ :

ಸ್ವಪರಮಂಡಲಕಾರ್ಯಾಕಾರ್ಯಾವಲೋಕನೇ ಚಾರಾಶ್ಚಕ್ಷೂಂಪಿ ಕ್ಷಿತಿಪತೀನಾಂ || || ೫೨೭ ||

ಅರ್ಥ : ಸ್ವ-ಪರ = ತನ್ನ- ಪೆಱರ, ಮಂಡಲ = ನಾಡ, ಕಾರ್ಯ = ಮಾಡಲ್ಪಡುವುದುಂ, ಆಕಾರ್ಯ = ಮಾಡಲ್ಪಡದುದುಮೆಂದಿವರ, ಅವಲೋಕನೇ = ನೋಳ್ಪಲ್ಲಿ, ಚಾರಾಃ = ಹಿರಿಗರ್ (ಗೂಢಪುರುಷರು), ಚಕ್ಷೂಂಷಿ = ಕಣ್ಗಳ್, ಕ್ಷಿತಿಪತೀನಾಂ = ಅರಸುಗಳ್ಗೆ || ಹಿರಿಗರಿಲ್ಲದಾದ ಕಾರ್ಯಮುಮಾಗದೆಂಬುದು ತಾತ್ಪರ್ಯಂ || ಅವರ ಗುಣಮಂ ಪೇಳ್ವುದುತ್ತರವಾಕ್ಯಂ :

ಅಲೌಲ್ಯಮಾಂದ್ಯಮಮೃಷಾಭಾಷಿತ್ವಮಭ್ಯೂಹಕತ್ವಂ ಚೇತಿ ಚಾರಗುಣಾಃ || || ೫೨೮ ||

ಅರ್ಥ : ಅಲೌಲ್ಯಂ = ಲೋಭಮಿಲ್ಲದುದು, ಅಮಾಂದ್ಯ = ಜಡತೆಯಿಲ್ಲದುದುಂ, ಅಮೃಷಾಭಾಷಿತ್ವಂ = ಪುಸಿ ನುಡಿಯದುದುಂ, ಅಭ್ಯೂಹಕತ್ವಂ ಚೇತಿ = ಎಲ್ಲಾ ಕಾರ್ಯದ ಊಹೆಯುಂ, ಚಾರಗುಣಾಃ = ಹಿರಿಗರ (ಚರನ) ಗುಣಂಗಳ್ || ಈ ಗುಣಂಗಳಿಲ್ಲದನಂ ಹಿರಿಗನಂ ಮಾಡವೇಡೆಂಬುದು ತಾತ್ಪರ್ಯಂ || ಅವರ್ಗೆ ಕುಡುವುದಂ ಪೇಳ್ವುದುತ್ತರವಾಕ್ಯಂ :

ತುಷ್ಟಿದಾನಮೇವ ಚಾರಾಣಾಂ ವೇತನಂ || || ೫೨೯ ||

ಅರ್ಥ : ತುಷ್ಟಿದಾನಮೇವ = ಮೆಚ್ಚುಗೊಡುವುದೇ, ಚಾರಣಾಂ = ಹಿರಿಗರ್ಗೆ, ವೇತನಂ = ಜೀವಿತಂ || ಇದಕ್ಕೆ ತಾತ್ಪರ್ಯಮಂ ಪೇಳ್ವುದುತ್ತರವಾಕ್ಯಂ :

ತೇ ಹಿ ತಲ್ಲೋಭಾತ್ ಸ್ವಾಮಿಕಾರ್ಯೆಷ್ವತೀವ ತ್ವರಂತೇ || || ೫೩೦ ||

ಅರ್ಥ : ತೇ = ಆ ಹಿರಿಗರ್, ತಲ್ಲೋಭಾತ್ = ಮೆಚ್ಚುವಡೆವ ಲೋಭದಿಂ, ಸ್ವಾಮಿಕಾಯೇಷು = ಆಳ್ದನ ಕಾರ್ಯಂಗಳೊಳ್, ಅತೀವ = ಕರಂ, ತ್ವರಂತೇ = ಬೇಗ ಮಾಡುವರಪ್ಪರ್ || ಸಂದೇಹಮಂ ಪಿಂಗಿಸುವುಪಾಯಮಂ ಪೇಳ್ವುದುತ್ತರವಾಕ್ಯಂ :

—-

೧. ತನ್ನ ಮಂಡಲದಲ್ಲೂ, ಶತ್ರುಮಂಡಲದಲ್ಲೂ, ಮಾಡಬೇಕಾದ, ಮಾಡಬಾರದ ಕಾರ್ಯಗಳನ್ನು ನೋಡಲು ರಾಜನಿಗೆ ಗೂಢಚಾರರೇ ಕಣ್ಣುಗಳು.

೨. ಲೋಭವಿಲ್ಲದುದು, ಜಡತೆಯಿಲ್ಲದುದು, ಪುಸಿನುಡಿಯದುದು, ಊಹಿಸಿ ಗ್ರಹಿಸುವ ಶಕ್ತಿ ಇರುವದು ಇವು ಗೂಢಚಾರರ ಗುಣಗಳು.

೩. ಮೆಚ್ಚುಗೊಡುವುದೇ ಗೂಢಚಾರರಿಗೆ ಸಿಗುವ ವೇತನವು.

೪. ಆ ಆಸೆಯಿಂದಲೇ ಸ್ವಾಮಿಕಾರ್ಯವನ್ನು ಗೂಢಚಾರರು ತ್ವರಿತವಾಗಿ ನಿರ್ವಹಿಸುತ್ತಾರೆ.

—-

ಅಸತಿಸಂಕೇತೇಸಂದಿಗ್ಧವಿಷಯೇತ್ರಯಾಣಾಮೇಕವಾಕ್ಯೇ ಸಂಪ್ರತ್ಯಯಃ || || ೫೩೧ ||

ಅರ್ಥ : ಸಂಕೇತೇಅಸತಿ = ಸಂಕೇತಮಿಲ್ಲದಿರ್ದೊಡೆಯು, ಸಂದಿಗ್ಧವಿಷಯೇ = ಸಂದೇಹಮಪ್ಪೆಡೆಯೊಳ್, ತ್ರಯಾಣಾಂ = ಮೂವರ್ಗೆ, ಏಕವಾಕ್ಯೇ = ಒಂದೇನುಡಿಯಾಗಲ್, ಸಂಪ್ರತ್ಯಯಃ = ನಂಬುಗೆಯಹುದು || ಪಲಂಬರೊಂದಾಗಿಹುಸಿಯರೆಂಬುದುತಾತ್ಪರ್ಯಂ || ಚರರಿಲ್ಲದಿರ್ದೊಡೆದೋಷಮಂಪೇಳ್ವುದುತ್ತರವಾಕ್ಯಂ

ಅನವಸರ್ಪೋಹಿರಾಜಾಸ್ಪೈಃಪರೈಶ್ಚಾಸಂಧೀಯತೇ || || ೫೩೨ ||

ಅರ್ಥ : ಅನವಸರ್ಪಃ = ಚರರಿಲ್ಲದ, ರಾಜಾ = ಅರಸು, ಹಿ = ನೆಟ್ಟನೆ, ಸ್ಪೈಃ = ತನ್ನವರಿಂದಮುಂ, ಪರೈಶ್ಚ = ಪಗೆವರಿಂದಮುಂ, ಅತಿಸಂಧೀಯತೇ = ವಂಚಿಸಲ್ಪಡುವಂ || ಚರರಿಂದಾರೈದೊಲ್ಲದಆತ್ಮರಕ್ಷೆಯಿಲ್ಲೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ

ಕಿಮಸ್ತ್ಯಯಾಮಿಕಸ್ಯನಿಶಿಕುಶಲಂ || || ೫೩೩ ||

ಅರ್ಥ : ಅಯಾಮಿಕಸ್ಯ = ಚಾರದವರಿಲ್ಲದೊಂಗೆ, ನಿಶಿ = ಇರುಳೊಳ್, ಕುಶಲಂ = ಒಳ್ಪು, ಕಿಮಸ್ತಿ = ಏನುಂಟೇ || ಚರರಭೇದಮಂಪೇಳ್ವುದುತ್ತರವಾಕ್ಯಂ :

ಕಾಪಟಿಕೋದಾಸ್ಥಿತಗೃಹಪತಿವೈದೇಹಿತತಾಪಸಕಿತವಕಿರಾತಯಮ 1 ಪಟಿಕಾಹಿತುಂಡಿಕದೌವಾರಿಕಶೌಂಡಿಕಶೌಭಿಕಪಾಟಚ್ಚರವಿಟವಿದೂಷಕಪೀಠಮರ್ದಕನಟನರ್ತಕಗಾಯಕವಾದಕವಾಗ್ಜೀವಕಗಣಕಶಾಕುನಿಕಭಿಷಗೈಂದ್ರಜಾಲಿಕನೈಮಿತ್ತಿಕಸೂದಾರಾಲಿಕಸಂವಾಹಕತೀಕ್ಷ್ಣಕ್ರೂರರಸದಜಡಮೂಕಬಧಿರಾಂಧಚ್ಛದ್ಮಾನಃಸ್ಥಾಯಿಯಾಯಿಭೇದೇನಾವಸರ್ಪವರ್ಗಃ || || ೫೩೪ ||

ಅರ್ಥ : ಕಾಪಟಿಕಃ = ಕಾಪಟಿಕನುಂ, ಉದಾಸ್ಥಿತಃ = ಉದಾಸ್ಥಿತನುಂ, ಗೃಹಪತಿ = ಗೃಹಪತಿಯುಂ, ವೈದೇಹಿಕ = ವೈದೇಹಿಕನುಂ, ತಾಪಸ = ತಾಪಸನುಂ, ಕಿತವ = ಕಿತವನುಂ, ಕಿರಾತ = ಕಿರಾತನುಂ, ಯಮಪಟಿಕ = ಯಮಪಟಿಕನುಂ, ಅಹಿತುಂಡಿಕ = ಹಾವಡಿಗನುಂ, ದೌವಾರಿಕ = ದೌವಾರಿಕನುಂ, ಶೌಂಟಿಕ = ಶೌಂಡಿಕನುಂ, ಶೌಭಿಕ = ಶೌಭಿಕನುಂ, ಪಾಟಚ್ಚರ = ಪಾಟಚ್ಛರನುಂ, ವಿಟ = ವಿಟನುಂ, ವಿದೂಷಕ = ವಿದೂಷಕನುಂ, ಪೀಠಮರ್ದ್ದನ = ಪೀಠಮರ್ದ್ದನನುಂ, ನಟ = ನಟ್ಟವಿಗನುಂ, ನರ್ತಕ = ಆಡುವವನುಂ, ಗಾಯಕ = ಪಾಡುವವನುಂ, ವಾದಕ = ಬಾಜಿಪವನುಂ, ವಾಗ್ಜೀವಕ = ಭಟ್ಟನುಂ, ಗಣಕ = ಸೇನಬೋವನುಂ, ಶಾಕುನಿಕ = ಶಕುನಮಂಬಲ್ಲವನುಂ, ಭಿಷಕ್ = ವೈದ್ಯನುಂ, ಇಂದ್ರಜಾಲಿಕ = ಇಂದ್ರಜಾಲಿಕನುಂ, ನೈಮಿತ್ತಕ = ನೈಮಿತ್ತಿಕವಬಲ್ಲವನುಂ, ಸೂದ = ಸೂದನುಂ, ಅರಾಲಿಕ = ಅರಾಲಿಕನುಂ, ಸಂವಾಹಕ = ಮೆಯ್ಕೆಟ್ಟವನುಂ, ತೀಕ್ಷ್ಣ = ತೀಕ್ಷ್ಣನುಂ, ಕ್ರೂರ = ಕ್ರೂರನುಂ, ರಸದ = ರಸದನುಂ, ಜಡ = ಜಡನುಂ, ಮೂರ = ಮೂಗನುಂ, ಬಧಿರ = ಕಿವುಡನುಂ, ಅಂಧ = ಕುರುಡನುಮಕ್ಕಮೆಂದೀಛದ್ಮಾನಃ = ನೇವಮನುಳ್ಳವರ್ಗಳು, ಸ್ಥಾಯಿ = ಇಪ್ಪನುಂ, ಯಾಯಿ = ಪೋಪನುಮೆಂಬೀ, ಭೇದೇನ = ಭೇದದಿಂದಂ, ಅಪಸರ್ಪವರ್ಗಃ = ಹಿರಿಗರನೆರವು || ಗೂಢಪುರುಷನಟ್ಟಿಕಾರ್ಯಮನಱಿವುದೆಂಬುದುತಾತ್ಪರ್ಯಂ || ಅವಱೋಳಱಿಯಲ್ಬಾರದವರಲಕ್ಷಣಮಂಪೇಳ್ವುದುತ್ತರವಾಕ್ಯಂ

—-

. ಸಂದೇಹವಿರುವಲ್ಲಿಮೂವರಮಾತುಗಳುಒಂದೇಆದರೆಅವರಲ್ಲಿನಂಬಿಕೆಯುಂಟಾಗುತ್ತದೆ.

. ಗೂಢಚಾರರಿಲ್ಲದರಾಜನುತನ್ನವರಿಂದಲೂಹಗೆಗಳಿಂದಲೂವಂಚಿಸಲ್ಪಡುವನು.

. ಕಾವಲುಗಾರರಿಲ್ಲದರಾಜನುರಾತ್ರಿಯವೇಳೆಯಲ್ಲಿಕ್ಷೇಮದಿಂದಿರುವನೆ?

. ಕಾಪಟಿಕನು, ಉದಾಸ್ಥಿತನು, ಗೃಹಪತಿಯು, ವೈದೇಹಿಕನು, ತಾಪಸನು, ಕಿತವನು, ಕಿರಾತನು, ಯಮಪಟಕನು, ಅಹಿತುಂಡಕನು, ದೌವಾರಿಕನು, ಶೌಂಡಿಕನು, ಶೌಭಿಕನು, ಪಾಟಚ್ಚರನು, ವಿಟನು, ವಿದೂಷಕನು, ಪೀಠಮರ್ದಕನು, ನಟನು, ನರ್ತಕನು, ಗಾಯಕನು, ವಾದಕನು, ವಾಗ್ಜೀವಕನು, ಗಣಕನು, ಶಾಕುನಿಕನು, ಭಿಷಜನಯ, ಇಂದ್ರಜಾಲಿಕನು, ನೈಮಿತ್ತಿಕನು, ಸೂದನು, ಆರಾಲಿಕನು, ಸಂವಾಹಕನು, ತೀಕ್ಷ್ಣನು, ಕ್ರೂರನು, ರಸದನು, ಜಡನು, ಮೂಕನು, ಬಧಿರನು, ಅಂಧನು, ಎಂಬೀವೇಷಗಳಲ್ಲಿಇವರುಸ್ಥಾಯಿ, ಯಾಯಿಎಂಬಭೇದದಿಂದಇವುಗೂಢಚಾರರಗುಂಪು.

—-

ಪರಮರ್ಮಜ್ಞಃಪ್ರಗಲ್ಭಚ್ಛಾತ್ರಃಕಾಪಟಿಕಃ || || ೫೩೫ ||

ಅರ್ಥ : ಪರಮರ್ಜಜ್ಞಃ = ಪೆಱರಹೃದಯಮನಱಿವ, ಪ್ರಗಲ್ಭಃ = ಪ್ರೌಢನಪ್ಪ, ಛಾತ್ರಃ = ಛಾತ್ರರು, ಕಾಪಟಿಕಃ = ಕಾಪಟಿನೆಂಬೊ ||

ಯಂಕಂಚನಾಪಿಸಮುಯಮಾಸ್ಥಾಯಪ್ರತಿಪನ್ನಾಚಾರ್ಯಾಭಿಷೇಕಪ್ರಭೂತಾಂತೇವಾಸಿಪ್ರಜ್ಞಾತಿಶಯಯುಕ್ತೋರಾಜಪರಿಕಲ್ಪಿತವೃತ್ತಿರುದಾಸ್ಥಿತಃ || ೧೦ || ೫೩೬ ||

ಅರ್ಥ : ಯಂಕಂಚನಾಪಿ = ಅವುದಾನೊಂದು, ಸಮಯಂ = ಸಮಯದೊಳ್, ಆಸ್ಥಾಯ = ಇರ್ದು, ಪ್ರತಿಪನ್ನ = ಕೊಂಡು, ಆಚಾರ್ಯಾಭಿಷೇಕಃ = ಆಚಾರ್ಯಪದವಿಯನುಳ್ಳ, ಪ್ರಭೂತಾಂತೇವಾಸಿ = ಪಲರ್ಶಿಷ್ಯರನುಳ್ಳ, ಪ್ರಜ್ಞಾತಿಶಯಯುಕ್ತಃ = ಪಿರಿದಪ್ಪಮತಿಯನುಳ್ಳಂ, ರಾಜಪರಿಕಲ್ಪಿತವೃತ್ತಿಃ = ಅರಸನಿಂಕುಡಲ್ಪಟ್ಟ (ಮಾಡಲ್ಪಟ್ಟಜೀವನೋಪಾಯನುಳ್ಳಾತನು) ವೃತ್ತಿಯನುಳ್ಳಂ, ಉದಾಸ್ಥಿತ = ಉದಾಸ್ಥಿತನೆಂಬಂ ||

—-

. ಪರರಮಮ್ಮವನ್ನುಅರಿಯುವುದರಲ್ಲಿಪ್ರೌಢನಾದಛಾತ್ರನುಕಾಪಟಿಕನು.

೧೦. ಯಾವುದಾದರೂಒಂದುಮತಸಂಪ್ರದಾಯವನ್ನನುಸರಿಸಿಆಚಾರ್ಯನೆಂಬಪದವಿಹೊಂದಿ, ಅಧಿಕಸಂಖ್ಯೆಯಶಿಷ್ಯರೊಡಗೂಡಿ, ಉತ್ತಮಪ್ರಜ್ಞೆಯುಳ್ಳವನಾಗಿ, ರಾಜನುಕಲ್ಪಿಸಿದವೃತ್ತಿಯುಳ್ಳವನುಉದಾಸ್ಥಿತನು.

—-

ಗೃಹಪತಿಕವೈದೇಹಿಕೌಗ್ರಾಮಕೂಟಶ್ರೇಷ್ಠಿನೌ || ೧೧ || ೫೩೭ ||

ಅರ್ಥ : ಗೃಹಪತಿಕ-ವೈದೇಹಿಕೌ = ಗೃಹಪತಿಕ-ವೈದೇಹಿಕರೆಂದೀರ್ವರುಂ | ಗ್ರಾಮಕೂಟಶ್ರೇಷ್ಠಿನೌ = ಕ್ರಮದಿಂಗ್ರಾಮಿಣಿ(ಗೌಡ)ಯುಂಸೆಟ್ಟಯುಂಎಂದೀರ್ವರುಂ ||

ಬಾಹ್ಯವ್ರತವಿದ್ಯಾಭ್ಯಾಂಲೋಕವಿಡಂಬನಹೇತುಸ್ತಾಪಸಃ[14] || ೧೨ || ೫೩೮ ||

ಅರ್ಥ : ಬಾಹ್ಯ = ಮಾಯಾರೂಪಮಪ್ಪ, ವ್ರತವಿದ್ಯಾಭ್ಯಾಂ = ವ್ರತಮುಂವಿದ್ಯೆಯುಮೆಂಬೀಯೆಱಡಱಿಂ, ಲೋಕವಿಡಂಬನಹೇತುಃ = ಲೋಕಮಂನಂಬಿಸುವುದು (ಠಕ್ಕುಮಾಡುವ) ಕಾರಣಮಪ್ಪ, ತಾಪಸಃ = ತಾಪಸನೆಮಬಲಿಂಗಿ ||

ಕಿತವೋದ್ಯೂತಕಾರಃ || ೧೩ || ೫೩೯ ||

ಅರ್ಥ : ದ್ಯೂತಕಾರಃ = ಜೂಜಿನಗೋಷ್ಠಿಯಮಾಡುವವನು, ಕಿತಃ = ಕಿತವನೆಂಬಂ ||

ಅಲ್ಪಾಖಿಲಶರೀರಾವಯವಃಕಿರಾತಃ || ೧೪ || ೫೪೦ ||

ಅರ್ಥ : ಅಲ್ಪ = ಕಿಱಿದಪ್ಪ, ಅಖಿಲಶರೀರಾವಯವಃ = ಎಲ್ಲಾಶರೀರದವಯವನುಳ್ಳಂ | ಕಿರಾತಃ = ಕಿರಾತನೆಂಬೊಂ||

ಯಮಪಟಿಕೋಗಲತ್ರೋಟಿಕಃ || ೧೫ || ೫೪೧ ||

ಅರ್ಥ : ಗಲತ್ರೋಟಿಕಃ = ಕೊಱಳೊಳುಅರುವೆಯಕಂಥೆಯನುಕಟ್ಟಿಕೊಂಡಿಹನು, ಯಮಪಟಿಕಃ = ಯಮಪಟಿಕನೆಂಬಾತನು || ಅಹಿತುಂಡಿಕನೆಂಬನಂಹಾವಾಡಿಗನು[15] || (ದೌವಾರಿಕನೆಂಬವಂದ್ವಾರಪಾಲಕನುಂ[16] || )

—-

೧೧. ಗ್ರಾಮಕೂಟನುಗೃಹಪತಿಯೆಂಬಮತ್ತುಶ್ರೇಷ್ಠಿಯುವೈದ್ಯೆಹಿಕವೆಂಬಗೂಢಚಾರರು.

೧೨. ಎಲ್ಲರಿಗೂಕಾಣುವಂತೆತೋರಿಕೆಯವ್ರತಗಳುವಿದ್ಯೆಗಳಿಂದಲೋಕವನ್ನುಮೋಸಗೊಳಿಸುವವನುತಾಪಸನು.

೧೩. ಕಿತವಎಂದರೆಜೂಜುಗಾರನು

೧೪. ಶರೀರದಎಲ್ಲಆವಯವಗಳೂಸಣ್ಣದಾಗಿರುವವನುಕಿರಾತನು.

೧೫. ಕೊರಳಿನಲ್ಲಿಅರಿವೆಯಬೊಂತೆಯನ್ನುಕಟ್ಟಿಕೊಂಡಿರುವವನುಯಮಪಟಕನು.

. ಅಹಿತುಂಡಿಕನೆಂಬವನುಹಾವಾಡಿಗನು.

. ದೌವಾರಿಕನೆಂಬುವವನುದ್ವಾರಪಾಲಕನು

—-

ಶೌಂಡಿಕಃಕಲ್ಯಪಾಲಃ[17] || ೧೬ || ೫೪೨ ||

ಅರ್ಥ : ಶೌಂಡಿಕಃ = ಶೌಂಡಿಕನೆಂಬಂ, ಕಲ್ಯಪಾಲಃ = ಕಳ್ಳಮಾಡುವವಂ ||

ಶೌಭಿಕಃಕ್ಷಪಾಯಾಂಕಾಂಡಪಟಾವರಣೇನನಾನಾರೂಪಪ್ರದರ್ಶೀ || ೧೭ || ೫೪೩ ||

ಅರ್ಥ : ಕ್ಷಪಾಯಾಂ = ಇರುಳೊಳ್, ಕಾಂಡಪಟಾವರಣೇನ = ಕನ್ನಡವಡೆದ (ಜವನಿಕೆಯಿಂದ) ಮಱೆಯಿಂ | ನಾನಾರೂಪದರ್ಶೀ = ಅನೇಕರೂಪಂತೋರ್ಪಂ, ಶೌಭಿಕಃ = ಶೌಭಿಕನೆಂಬೊಂ || ನೆಳಲಂಚೆಕಾಱ ||

ಪಾಟಚ್ಚರಶ್ಚೋರೋಬಂದಿಕಾರೋವಾ || ೧೮ || ೫೪೪ ||

ಅರ್ಥ : ವ್ಯಸನಿನಾಂ = ವ್ಯಸನಿಗಳ, ಪ್ರೇಷಣಾಜ್ಜೀವೀ = ಪೇಳ್ದುದಂಗೆಯ್ದುಬರ್ದುಂಕುವಂ, ವಿಟಃ = ವಿಟನೆಂಬುವಂ ||

ಸರ್ವೇಷಾಂಪ್ರಹಸನಪಾತ್ರಂವಿದೂಷಕಃ || ೨೦ || ೫೪೬ ||

ಅರ್ಥ : ಸರ್ವೇಷಾಂ = ಎಲ್ಲರ, ಪ್ರಹಸನಪಾತ್ರಂ = ನಗೆಗೆಡೆಯಪ್ಪಂ = (ನಗೆಯಹುಟ್ಟಿಸುವುದಕ್ಕೆಭಾಜನನು) ವಿದೂಷಕಃ = ವಿದೂಷಕನೆಂಬೊಂ ||

ಕಾಮಶಾಸ್ತ್ರಾಚಾರ್ಯಃಪೀಠಮರ್ದಕಃ[18] || ೨೧ || ೫೪೭ ||

—-

೧೬. ಹೆಂಡಮಾಡುವವನುಅಥವಾಮಾರುವವನುಶೌಂಡಿಕನು.

೧೭. ರಾತ್ರಿಯವೇಳೆಯಲ್ಲಿಕಾಂಡಪಟದಪರದೆಯಹಿಂದೆನಾನಾರೂಪಗಳನ್ನುತೋರಿಸುವವನುಶೌಭಿಕನು, ನೆಳಲಂಚಕಾರ.

೧೮. ಕಳ್ಳಅಥವಾಬಂದಿಕಾರನುಪಾಟಚ್ಯರನು.

೧೯. ವ್ಯಸನಿಗಳುಹೇಳಿದ್ದನ್ನುಮಾಡಿಜೀವಿಸುವವನುವಿಟನು.

೨೦. ಎಲ್ಲರನ್ನೂನಗಿಸುವವನುವಿದೂಷಕನು.

೨೧. ಕಾಮಶಾಸ್ತ್ರವನ್ನುಬಲ್ಲವನುಪೀಠಮರ್ದಕನು.

—-

ಅರ್ಥ : ಕಾಮಶಾಸ್ತ್ರಾಚಾರ್ಯಃ = ಕಾಮಶಾಸ್ತ್ರಂಬಲ್ಲಂ, ಪೀಠಮರ್ದಕ = ಪೀಠಮರ್ದಕನೆಂಬೊಂ || ನಟ, ನರ್ತಕಾದಿಗಳುಪ್ರಸಿದ್ಧರು ||

ಮಹಾನುಸಿಕಃಸೂದಃ || ೨೨೫೪೮ ||

ಅರ್ಥ : ಮಹಾನುಸಿಕಃ = ಬಾಳ(ಣ)ಸಿಗನಂ, ಸೂದಃ = ಸೂದನೆಂಬರು ||

ವಿಚಿತ್ರಭಕ್ಷ್ಯಪ್ರಣೇತಾಆರಾಲಿಕಃ || ೨೩ || ೫೪೯ ||

ಅರ್ಥ : ವಿಚಿತ್ರ = ಪಲತೆಱದ, ಭಕ್ಷ್ಯಪ್ರೇಣೇತಾ = ಭಕ್ಷ್ಯಕ್ರಮಂಮಾಳ್ಪಂ, ಅರಾಲಿಕಃ = ಆರಾಲಿಕನೆಂಬಂ || ರಂದವಣಿಗಂ = ಸಂವಾಹಕನೆಂಬವನು[19]ಹೊಱೆಕಾರನು ||

ದ್ರವ್ಯಹೇತೋಃಕೃಚ್ಛ್ರೇಣಕರ್ಮಣಾಯೋಜೀವಿತವಿಕ್ರಯೀತೀಕ್ಷ್ಣಃಸಹನೋವಾ || ೨೪ || ೫೫೦ ||

ಅರ್ಥ : ದ್ರವ್ಯಹೇತೋಃ = ದ್ರವ್ಯಂಕಾರಣಮಾಗಿ, ಕೃಚ್ಛ್ರೇಣ = ಅಱಿದಪ್ಪ, ಕರ್ಮಣಾ = ವ್ಯಾಪಾರದಿಂ, ಯಃ = ಆವನೋರ್ವಂಜೀವಿತವಿಕ್ರಯೀ = ಪ್ರಾಣಮಂಮಾರುವಂ, ಸಃ = ಆತಂ, ತೀಕ್ಷ್ಣಃ = ತೀಕ್ಷನೆಂಬಂ || ಅಸಹನೋವಾ = ಸೈರಿಸದವಂಮೇಣ್ ||

ಬಂಧುಷುವಿಸ್ನೇಹಾಃಕ್ರೂರಾಃ || ೨೫ || ೫೫೧ ||

ಅರ್ಥ : ಬಂಧುಷು = ನಂಟರೊಳ್, ವಿಸ್ನೇಹಾಃ = ಸ್ನೇಹಮಿಲ್ಲದರಯ, ಕ್ರೂರಾಃ = ಕ್ರೂರರ್ ||

ಅಲಸಾಶ್ಚರಸದಾಃ[20] || ೨೬ || ೫೫೨ ||

ಅಲಸಾಶ್ಚ = ಅಲಸುಗಾರರುಂ, ರಸಶಃ = ರಸದನೆಂರು ||

ಜಡ, ಕೂಡ, ಬಧಿರ, ಅಂಧ, ವಿಚಕ್ಷಣವುಪ್ರಸಿದ್ಧವು ||

ಇತಿಚಾರಸಮುದ್ದೇಶ || ೧೩ ||[21]

ಸಮುದ್ದೇಶದವಾಕ್ಯಂ || ೨೬ || ಒಟ್ಟು || ೫೫೨ ||

—-

೨೨. ಅಡಿಗೆಮಾಡುವವನುಸೂದನು.

೨೩. ಹಲವುತೆರದಭಕ್ಷ್ಯಗಳನ್ನುಮಾಡುವವನುಆರಾಲಿಕ.

೨೪. ಹಣಕ್ಕಾಗಿಅತಿಕಷ್ಟವಾದಕೆಲಸಗಳನ್ನುಮಾಡಿತನ್ನಜೀವಿತವನ್ನುಮಾರಿಕೊಂಡವನುತೀಕ್ಷ್ಣನು.

೨೫. ನೆಂಟರಲ್ಲಿಸ್ನೇಹವಿಲ್ಲದವರುಕ್ರೂರರು.

೨೬. ಅಲಸುಗಾರರುರಸದರು.

—-

ಸೂಚನೆ:
ಸಂಖ್ಯಾಗೊಂದಲ /ಚುಕ್ಕಿ ಚಿಹ್ನೆಯ
 ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ

 

[1]ಮೈ., ಚೌ. ಪ್ರಾಗಲ್ಭ್ಯಂ ಪ್ರತಿಭಾನವತ್ವಂ (ಚೌ. ಪ್ರತಿಭಾವತ್ಯಂ).

[2]ಶಾಸನ ಎಂಬ ಪದಕ್ಕೆ ಓಲೆ ಎಂದು ಅರ್ಥ ಹೇಳಿದ್ದನ್ನು ಗಮನಿಸಬೇಕು. ಮುಂದೆ ೧೫ನೇ ವಾಕ್ಯವನ್ನು ನೋಡಿರಿ.

[3]ಮೈ. ಮತ್ತು ಚೌ. ಗಳಲ್ಲಿ ಕೃತ್ಯಭೇದಕಂ ಎಂಬ ಶಬ್ದವಿಲ್ಲ. ಟೀಕೆಯಲ್ಲಿಯ ಅಕೃತ್ಯಭೇದನಂ ಎಂಬುದು ಸರಿಯಾದ ಪಾಠ.

[4]ಮೈ., ಚೌ. ಅಂತಭೂಮಿಪಾಲಾಟವಿಕ.

[5]ಮೈ., ಚೌ. ಪರಿವಾದೇ.

[6]ಮೈ., ಚೌ. ಅಪಕ್ಷಯ

[7]ಉಪಕ್ಷಯಕ್ಕೆ ಎಂದಿರಬೇಕು.

[8]ಮೈ. ಪರಿವೃತ್ತಃ

[9]ಚಾಣಕ್ಯ ಎಂದು ಓದಬೇಕು.

[10]ಇಲ್ಲಿ ಯಾವುದೋ ಒಂದು ಐತಿಹಾಸಿಕ ಘಟನೆಯ ಉಲ್ಲೇಖವಿದ್ದಂತಿದೆ. ಆದರೆ, ಇಲ್ಲಿ ಹೆಸರಿಸಲಾದ ಅರಸರನ್ನು ಗುರುತಿಸಲಾಗುವುದಿಲ್ಲ. ಕರಹಾಟ ಅಂದರೆ ಕರಾಡ, ಮಹಾರಾಷ್ಟ್ರ ರಾಜ್ಯದಲ್ಲಿಯ ಒಂದು ಜಿಲ್ಲಾ ಸ್ಥಳ, ಸೋಮದೇವಸೂರಿಯ ಅಂದರೆ ರಾಷ್ಟ್ರಕೂಟರ ಅರಸರ ಕಾಲದಲ್ಲಿ ಈ ಪ್ರದೇಶದಲ್ಲಿ ಶಿಲಾಹಾರ ಎಂಬ ಮನೆತನದ ಸಾಮಂತರು ಆಳುತ್ತಿದ್ದರು. ಆದರೆ ಅವರ ಈ ವರೆಗೆ ತಿಳಿದ ವಂಶಾವಳಿಯಲ್ಲಿ ಕೈಟಭ ಎಂಬ ಹೆಸರಿಲ್ಲ. ವಸು ಎಂಬ ಹೆಸರಿನ ಅರಸನಾರು ಎಂಬುದೂ ತಿಳಿಯುವುದಿಲ್ಲ. ಅಥವಾ ಇದು ಸೋಮದೇವಸೂರಿಯ ಸಮಕಾಲೀನ ಘಟನೆಯೂ ಆಗಿರಲಿಕ್ಕಿಲ್ಲ. ಶ್ರೂಯತೇ ಅಥವಾ ಹಾಗೆ ಕೇಳಿಬರುತ್ತದೆ ಎಂದು ಹೇಳಿದುದನ್ನು ನೋಡಿದರೆ ಹಿಂದಿನ ಯಾವುದೋ ಕತೆಯನ್ನು ಉಲ್ಲೇಖಿಸಿದ್ದಾನೆ ಎನ್ನಬಹುದು. ಕರಹಾಟ ಎಂಬುದು ಮಾತ್ರ ಐತಿಹಾಸಿಕ ಸ್ಥಳವಾಗಿದೆ. ಕರವಾಳ-ಕರಾಳರ ಕಥೆಯಂತೂ ಐತಿಹ್ಯದಂತೆ ಇದೆ.

[11]ಮೈ., ಚೌ. ರಾಜಾನಂ ಅಶೀವಿಷ.

[12]ಮೈ. ದಲ್ಲಿ ಇದು ಮತ್ತು ಮುಂದಿನ ವಾಕ್ಯವು ಒಂದೇ ವಾಕ್ಯದಲ್ಲಿ ಅಡಕವಾಗಿದೆ.

[13]|| ೧೨ || ತ್ರಯೋದಶಃ ಎಂದಿರಬೇಕು.

[14]ಚೌ. ಲೋಕದಂಭಹೇತುಃ

[15]ಇಲ್ಲಿಸೋಮದೇವನಸಂಸ್ಕೃತವಾಕ್ಯವಿಲ್ಲ, ಕೇವಲಕನ್ನಡಅರ್ಥವಿದೆ.

[16]ಇಲ್ಲಿಸೋಮದೇವನಸಂಸ್ಕೃತವಾಕ್ಯವಿಲ್ಲ, ಕೇವಲಕನ್ನಡಅರ್ಥವಿದೆ.

[17]ಮೈ., ಚೌ. ಕಲ್ಪಪಾಲ.

[18]ಮೈ. ಮತ್ತುಚೌ. ಗಳಲ್ಲಿಈವಾಕ್ಯದನಂತರಹತ್ತುಬಗೆಯಚಾರರನ್ನುವಿವರಿಸುವಇನ್ನೂ೧೦ವಾಕ್ಯಗಳಿವೆ. ಟೀಕಾಕಾರನುನಟನರ್ತಕಾದಿಗಳುಪ್ರಸಿದ್ಧರುಎಂದುಹೇಳಿಅವುಗಳನ್ನುಕೊಟ್ಟಿಲ್ಲಅವನಿಗೆದೊರೆತಹಸ್ತಪ್ರತಿಯಲ್ಲಿಈವಾಕ್ಯಗಳಿಲ್ಲವೋಅಥವಾಅವುಮಹತ್ವದಲ್ಲವೆಂದುಬಿಟ್ಟಿದ್ದಾನೋತಿಳಿಯದು.

[19]ಸಂವಾಹಕನಿಗೆಸಂಬಂಧಪಟ್ಟವಾಕ್ಯವುಮೈ, ಚೌಗಳಲ್ಲಿದ್ದುನಮ್ಮಪ್ರತಿಯಲ್ಲಿಲ್ಲ.

[20]ಮೈದಲ್ಲಿಈವಾಕ್ಯವುಬೇರೆಯೇಇದೆ. ರಸದಃವಿಷಪ್ರಯೋಕ್ತಾ. ಮೈ. ದಲ್ಲಿಇದಾದನಂತರಇನ್ನೂಎರಡುವಾಕ್ಯಗಳಿವೆ. ಚೌ. ದಲ್ಲಿಮತ್ತುನಮ್ಮಪ್ರತಿಯಲ್ಲಿಇಲ್ಲ. ಚಾರರಇತರವಿಧಗಳಬಗೆಗೆಅವುಪ್ರಸಿದ್ಧವುಎಂದುಮುಗಿಸಿಬಿಟ್ಟಿದ್ದಾನೆ.

[21]೧೪ಎಂದುಓದಬೇಕು.