ಧರ್ಮಪರನಪ್ಪಂವಿಚಾರಿಸದೇನುಮಂಮಾಡಲಾಗದೆಂಬುದುತ್ತರವಾಕ್ಯಂ

ನಾವಿಚಾರ್ಯಕಿಮಪಿಕಾಯಂಕುರ್ಯಾತ್ || || ೫೫೩ ||

ಅರ್ಥ : ಅವಿಚಾರ್ಯ = ವಿಚಾರಿಸದೆ, ಕಮಪಿಕಾಯಂ = ಆವಕಾರ್ಯಮುಮಂ, ನಕುರ್ಯಾತ್ = ಮಾಡಿದಿರ್ಕೆ || ವಿಚಾರಿಸಿಮಾಳ್ಪುದೆಂಬುದುತಾತ್ಪರ್ಯಂ || ವಸ್ತುವಿಚಾರದಲಕ್ಷಣಮಂಪೇಳ್ವುದುತ್ತರವಾಕ್ಯಂ :

ಪ್ರತ್ಯಕ್ಷಾನುಮಾನಾಗಮೈಶ್ಚ[1]ಯದಾವಸ್ಥಿತವಸ್ತುವ್ಯವಸ್ಥಾಪನಹೇತುರ್ವಿಚಾರಃ || || ೫೫೪ ||

ಅರ್ಥ : ಪ್ರತ್ಯಕ್ಷ = ಪ್ರತ್ಯಕ್ಷಮುಂ, ಅನುಮಾನಃ = ಅನುಮಾನಮುಂ, ಆಗಮೈಃ = ಆಗಮಮೆಂಬಿವಱಿಂ, ಯಥಾವಸ್ಥಿತಃ = ಎಂತಿರ್ದುದಂತಾಗಿ, ವ್ಯವಸ್ಥಾಪನಹೇತುಃ = ವಸ್ತುವಂನಿಯಮಿಸುವುದಕ್ಕೆಕಾರಣಮಿಂತಪ್ಪದು, ವಿಚಾರಃ = ವಿಚಾರಮೆಂಬುದು || ವಸ್ತುವೆಂತಿರ್ದುದಂತೆಕಾಣದುದುವಿಚಾರಮಲ್ಲೆಂಬುದುತಾತ್ಪರ್ಯಂ || ಪ್ರತ್ಯಕ್ಷಲಕ್ಷಣಮಂಪೇಳ್ವುದುತ್ತರವಾಕ್ಯಂ

ಸ್ವಯಂದೃಷ್ಟಪ್ರತ್ಯಕ್ಷಂ || || ೫೫೫ ||

ಅರ್ಥ : ಸ್ವಯಂ = ತಾಂ = , ದೃಷ್ಟಂ = ಕಂಡುದು, ಪ್ರತ್ಯಕ್ಷಂ = ಪ್ರತ್ಯಕ್ಷಮೆಂಬುದು || ಪ್ರತ್ಯಕ್ಷಜ್ಞಾನದಿಂವಿಚಾರಿಸುವುದೆಂಬುದುತಾತ್ಪರ್ಯಂ || ಈಯರ್ಥಮಂವಿಶೇಷಸ್ವರೂಪದಿಂಪೇಳ್ವುದುತ್ತರವಾಕ್ಯಂ

ಜ್ಞಾನಮಾತ್ರಾತ್ಪ್ರೇಕ್ಷಾವತಾಂಪ್ರವೃತ್ತಿರ್ನಿವೃತ್ತಿರ್ವಾ || || ೫೫೬ ||

ಅರ್ತ : ಜ್ಞಾನಮಾತ್ರಾತ್ = ಅಱಿತದನಿತಱಿಂದಮುಂ, ಪ್ರೇಕ್ಷಾವತಾಂ = ವಿಚಾರಮನುಳ್ಳವರ್ಗಳ, ಪ್ರವೃತ್ತಿಃ = ಕೂಟಮುಂ (ಸ್ವೀಕಾರವು), ನಿವೃತ್ತಿರ್ವಾ = ಮಾಳ್ಬುದುಮೇಣ್, ನ = ಇಲ್ಲ || ವಿಚಾರಿಸಿಯೇಮಾಣ್ಬರ್ಮಾಳ್ಪರೆಂಬುದುತಾತ್ಪರ್ಯಂ ||

—-

. ವಿಚಾರಿಸದೆಯಾವಕಾರ್ಯವನ್ನೂಮಾಡಕೂಡದು.

. ಪ್ರತ್ಯಕ್ಷ, ಅನುಮಾನ, ಆಗಮಎಂಬುವುಗಳಿಂದಒಂದುವಸ್ತುವಿನಯಥಾರ್ಥಸ್ವರೂಪವನ್ನುನಿರ್ಣಯಿಸಿಕೊಳ್ಳುವುದಕ್ಕೆಕಾರಣವಾದುದುವಿಚಾರ.

. ತಾನೇನೋಡಿದುದುಪ್ರತ್ಯಕ್ಷವು.

. ಅರಿವುಮಾತ್ರದಿಂದವಿಚಾರಪರರುಪ್ರವೃತ್ತಿಯನ್ನಾಗಲಿ, ನಿವೃತ್ತಿಯನ್ನಾಗಲಿಮಾಡರುಅಥವಾಬಿಡರು.

—-

ಸ್ವಯಂದೃಷ್ಟೇಪಿಮತಿರ್ಮುಹ್ಯತಿಸಂಶೇತೇವಿಪರ್ಯಸ್ಯತಿವಾಕಿಂಪುನರ್ನಪರೋಪದಿಷ್ಟೇ || || ೫೫೭ ||

ಅರ್ಥ : ಸ್ವಯಂ = ತಾಂ, ದೃಷ್ಟೇಪಿ = ಕಂಡಲ್ಲಿಯುಂ, ಮತಿಃ = ಬುದ್ಧಿಯುಂ, ಮುಹ್ಯತಿ = ಮೋಹಿಸುವುದು (ಮಱೆವುದು), ಸಂಶೇತೇ = ಸಂಶಯಂಬಡಿಸುಗುಂ, ವಿಪರ್ಯಸ್ಯತಿವಾ = ಪೆಱತಂಕೈಕೊಳ್ಗುಂಮೇಣ್, ಪುನಃ = ಮತ್ತೆ, ಪರೋಪದಿಷ್ಟೇ = ಪೆರಱರ್ಪೇಳ್ದಲ್ಲಿ, ಕಿಂನ = ಏಂಸಂಶಯವಿಪರ್ಯಯಂಗಳ್ಗೆಸಲ್ಲದೇ || ಕಂಡೊಡಂವಿಚಾರಿಸಲ್ವೇಳ್ಕುಮೆಂಬುದುತಾತ್ಪರ್ಯಂ ||

ಖಲುವಿಚಾರಜ್ಞೋಯಃಪ್ರತ್ಯಕ್ಷೇಣೋಪಲಬ್ಧಮಪಿಸಾಧುಪರೀಕ್ಷ್ಯಾನುತಿಷ್ಠತಿ || || ೫೫೮ ||

ಅರ್ಥ : ಸಖಲು = ಆತನೇ, ವಿಚಾರಜ್ಞಃ = ವಿಚಾರಮಂಬಲ್ಲಂ, ಯಃ = ಆವನೋರ್ವಂ, ಪ್ರತ್ಯಕ್ಷೇಣ = ಪ್ರತ್ಯಕ್ಷದಿಂದಂ, ಉಪಲಬ್ಧಮಪಿ = ಕಂಡುದುವಂ, ಸಾಧುಪರೀಕ್ಷ್ಯ = ಲೇಸಾಗಿವಿಚಾರಿಸಿ, ಅನುತಿಷ್ಠತಿ = ನೇಗಳ್ಗುಂ || ಆವಿಚಾರದಿಂಮಾಡಿದಕಜ್ಜಕ್ಕೆದೋಷಮಂಪೇಳ್ವುದುತ್ತರವಾಕ್ಯಂ

ಅತಿರಭಸಾತ್ಕೃತಾನಿಕಾರ್ಯಾಣಿಕಂನಾಮಾನರ್ಥಂಜನಯಂತಿ || || ೫೫೯ ||

ಅರ್ಥ : ಅತಿರಭಸಾತ್ = ವಿಚಾರಿಸದೊರ್ಮೆಯೆ, ಕೃತಾನಿ = ಮಾಡಲ್ಪಟ್ಟ, ಕಾರ್ಯಾಣಿ = ಕಾರ್ಯಂಗಳ್, ಕಂನಾಮ = ಆವ, ಅನರ್ಥಂ = ಅನರ್ಥಮುಂ, ನಜನಯಂತಿ = ಪುಟ್ಟಿಸವು || ಆವಿಚಾರಿಂಕ್ಲೇಶಮಕ್ಕುಮೆಂಬುದುತಾತ್ಪರ್ಯಂ || ಅವಿಚಾರದಿಂಮಾಡಿದಕಜ್ಜಕ್ಕೆಪ್ರತೀಕಾರಮಿಲ್ಲೆಂಬುದುಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ

ಅವಿಚಾರ್ಯಾಚರಿತೇಕರ್ಮಣಿಪಶ್ಚಾತ್ಪ್ರತಿವಿಧಾನಂಗತೋದಕೇಸೇತುಬಂಧನಮಿವ || || ೫೬೦ ||

ಅರ್ಥ : ಅವಿಚಾರ್ಯ = ವಿಚಾರಿಸದೆ, ಆಚರಿತೇ = ನೆಗಳಲ್ಪಟ್ಟ, ಕರ್ಮಣಿ = ವ್ಯವಹಾರದೊಳ್, ಪಶ್ಚಾತ್ = ಬಳಿಕ್ಕೆ, ಪ್ರತಿವಿಧಾನಂ = ಪ್ರತೀಕಾರಮಂಮಾಳ್ಪುದು, ಗತೋದಕೇ = ಪರಿದನೀರೊಳ್, ಸೇತುಬವಧನಮಿವ = ಕಟ್ಟೆಗಟ್ಟುವಂತೆ || ಕಾರ್ಯಂಕಿಡದಮುನ್ನಬುದ್ಧಿಗಾಣ್ಬುದೆಂಬುದುತಾತ್ಪರ್ಯಂ || ಅನುಮಾನಲಕ್ಷಣಮಂಪೇಳ್ವುದತ್ತರವಾಕ್ಯಂ :

—-

. ತಾನೇನೋಡಿದವಿಷಯಗಳಲ್ಲಿಯೂಬುದ್ಧಿಯು, ಮರೆವಿಗೆ, ಸಂಶಯಕ್ಕೆ, ದಿಗ್ಭ್ರಮೆಗೆಗುರಿಯಾಗುವುದುಂಟು. ಹೀಗಿರುವಲ್ಲಿಬೇರೆಯವರುಹೇಳಿದವಿಷಯದಲ್ಲಿಹಾಗಾಗದೇಇರುವುದುಂಟೇ?

. ಯಾವನುಪ್ರತ್ಯಕ್ಷವಾಗಿತಿಳಿದುಕೊಂಡದ್ದನ್ನುಕೂಡಚೆನ್ನಾಗಿಪರೀಕ್ಷಿಸಿಆಚರಿಸುತ್ತಾನೋಅವನೇವಿಚಾರಜ್ಞನು.

. ಅವಸರದಿಂದಮಾಡಿದಕೆಲಸಗಳುಅನರ್ಥಕ್ಕೆಕಾರಣವಾಗುವೆ?

. ವಿಚಾರಿಸದೆಮಾಡಿದಕೆಲಸವುಮುಗಿದಮೇಲೆಕ್ರಮಕೈಕೊಳ್ಳುವುದುನೀರುಹೋದಮೇಲೆಕಟ್ಟೆಕಟ್ಟಿದಂತೆ.

—-

ಕರ್ಮಸುಕೃತೇನಾಕೃತಾವೇಕ್ಷಣಮನುಮಾನಂ || || ೫೬೧ ||

ಅರ್ಥ : ಕರ್ಮಸು = ವ್ಯಾಪಾರಂಗಳೊಳ್, ಕೃತೇನ = ಮಾಡಲ್ಪಟ್ಟಕಾರ್ಯದಿಂ, ಆಕೃತಾವೇಕ್ಷಣಂ = ಮಾಡದಿನ್ನಪ್ಪಕಾರ್ಯಮನಱಿವುದು, ಅನುಮಾನಂ = ಅನುಮಾನಮೆಂಬುದು || ಕಾರ್ಯಮಂಕಂಡುಕಾರ್ಯದಿಂಮೇಗಪ್ಪಕಾರ್ಯಮಂವಿಚಾರಿಸುವುದೆಂಬುದುತಾತ್ಪರ್ಯಂ || ಕಾರ್ಯಮನಿಂತುಪ್ರಯೋಗಿಸುವುದೆಂಬುದುತ್ತರವಾಕ್ಯಂ :

ಸಂಭಾವಿತೈಕದೇಶೋಭಿಯುಕ್ತಂ[2]ದದ್ಯಾತ್ || ೧೦ || ೫೬೨ ||

ಅರ್ಥ : ಸಂಭಾವಿತಃ = ಮನದೊಳ್ಭಾವಿಸಲ್ಪಟ್ಟ, ಏಕದೇಶ = ಏಕದೇಶಮನುಳ್ಳನಾಗಿ, ಅಭಿಯುಕ್ತಂ = ಪ್ರಸ್ತುತಮಪ್ಪಕಾರ್ಯಮಂ, ದದ್ಯಾತ್ = ಮಾಳ್ಕೆ || ಕಾರ್ಯಮಂತೆಱೆಯೆನುಡಿಯಲಾಗದೆಂಬುದುತಾತ್ಪರ್ಯಂ || ರಾಜ್ಯಕಿಂತಪ್ಪವಂಯೋಗ್ಯನೆಂಬುದಕ್ಕೆಚಿಹ್ನವಂಪೇಳ್ವುದುತ್ತರವಾಕ್ಯಂ :

ಆಕಾರಃಶೌಯಂಪ್ರಜ್ಞಾಸಂಪತ್ತಿರಾಯತಿರ್ನಯೋವಿನಯಶ್ಚ[3]ರಾಜಪುತ್ರಾಣಾಂಭಾವಿನೋರಾಜ್ಯಸ್ಯಲಿಂಗಾನಿ || ೧೧ || ೫೬೩ ||

ಅರ್ಥ : ಆಕಾರಃ = ರೂಪುಂ, ಶೌಯಂ = ಕಲಿತನಮುಂ, ಪ್ರಜ್ಞಾಸಂಪತ್ತಿಃ = ಬುದ್ಧಿಯಸಂಪತ್ತು, ಆಯತಿ = ಮೇಲೆಬಾಯಕಾರ್ಯದಱೆತವು, ನಯಃ = ನೀತಿಯುಂ, ವಿನಯಶ್ಚ = ವಿನಯಮುಂ, ರಾಜಪುತ್ರಾಣಾಂ = ಅರಸುಮಕ್ಕಳ, ಭಾವಿನಃ = ಇನ್ನಪ್ಪ, ರಾಜ್ಯಸ್ಯ = ರಾಜ್ಯದ, ಲಿಂಗಾನಿ = ಚಿಹ್ನಂಗಳ್ || ಈಚಿಹ್ನಂಗಳಿಲ್ಲದಡೆರಾಜ್ಯಕ್ಕೆಯೋಗ್ಯನಲ್ಲೆಂಬುದುತಾತ್ಪರ್ಯಂ || ಮೇಗಪ್ಪಕಾರ್ಯಮನಱಿವುಪಾಯಮಂಪೇಳ್ವುದುತ್ತರವಾಕ್ಯಂ:

—-

. ಮಾಡಿದಕೆಲಸದಿಂದಮಾಡದಕೆಲಸವನ್ನುಕುರಿತುಊಹಿಸುವುದುಅನುಮಾನ.

೧೦. ಕಾರ್ಯದಒಂದಂಶವನ್ನುಮನಸ್ಸಿನಲ್ಲಿಭಾವಿಸಿಕೊಂಡುಉಳಿದಪ್ರಸ್ತುತಭಾಗವನ್ನುಮಾಡಬೇಕು.

೧೧. ರೂಪ, ಶೌರ್ಯ, ಬುದ್ಧಿಶಕ್ತಿ, ಸಾಮರ್ಥ್ಯ, ಬರಲಿರುವಕೆಲಸಗಳಬಗ್ಗೆತಿಳುವಳಿಕೆ, ವಿನಯಇವುಗಳುರಾಜಪುತ್ರನಿಗೆ, ಮುಂದೆಬರಲಿರುವರಾಜ್ಯಾಧಿಕಾರದಚಿಹ್ನೆಗಳು.

—-

ಪ್ರಕೃತೇರ್ವಿಕೃತಿದರ್ಶನಂಹಿಪ್ರಾಣಿನಾಂಭವಿಷ್ಯತಃಶುಭಸ್ಯಾಶುಭಸ್ಯಲಿಂಗಂ || ೧೨ || ೫೬೪ ||

ಅರ್ಥ : ಪ್ರಕೃತೇಃ = ಸ್ವಭಾವಕ್ಕೆ, ವಿಕೃತಿದರ್ಶನಂ = ವಿಕಾರಮಂಕಾಣ್ಬುದುಂ, ಹಿ = ನೆಟ್ಟನೆ, ಪಾಣಿನಾಂ = ಪ್ರಾಣಿಗಳ, ಭವಿಷ್ಯತಃ = ಇನ್ನಪ್ಪ, ಶುಭಸ್ಯ = ಒಳ್ಳಿತ್ತರ, ಅಶುಭಸ್ಯಚ = ಪೊಲ್ಲದುದಱ, ಲಿಂಗಂ = ಚಿಹ್ನಂ || ಸ್ವಭಾವಂಮತ್ತೊಂದಾಗೆಶುಭಾಶುಭಂಗಳಱಿಲ್ಬಕ್ಕುಮೆಂಬುದುತಾತ್ಪರ್ಯಂ || ಒಂದೆಡೆಯೊಳ್ಪುಟ್ಟಿಪೌರುಷಮಂತೋಱಿದನೆಲ್ಲೆಡೆಯೊಳಂಪ್ರಯೋಜಕನೆಂಬುದುತ್ತರವಾಕ್ಯಂ

ಏಕಸ್ಮಿನ್ಕರ್ಮಣಿದೃಷ್ಟಬುದ್ಧಿಪುರುಷಕಾರಃಕಥಂನಾಮಕರ್ಮಾಂತರೇಸಮರ್ಥಃ || ೧೩ || ೫೬೫ ||

ಅರ್ಥ : ಏಕಸ್ಮಿನ್ = ಒಂದು, ಕರ್ಮಣಿ = ಕಾರ್ಯದೊಳ್, ದೃಷ್ಟಬುದ್ಧಿಪುರುಷಕಾರಃ = ಕಾಣಲ್ಪಟ್ಟಬುದ್ಧಿಯುಂ, ಪೌರುಷಮನುಳ್ಳಂ, ಕಥಂನಾಮ = ಎಂತು, ಕರ್ಮಾಂತರೇ = ಕಾರ್ಯಾಂತರದೊಳ್, ನಸಮರ್ಥಃ = ಸಮರ್ಥನಲ್ಲಂ || ಬುದ್ಧಿಪೌರುಷಮನುಳ್ಳನೇನುಮನಾದೊಡಂಮಾಡಲಾರ್ಪನೆಂಬುದುತಾತ್ಪರ್ಯಂ || ಪೆಱಗೆಪೇಳ್ದಾಗಮದಲಕ್ಷಣಮಂಪೇಳ್ವುದುತ್ತರವಾಕ್ಯಂ.

ಆಪ್ತಪುರುಷೋಪದೇಶಃಆಗಮಃ || ೧೪ || ೫೬೬ ||

ಅರ್ಥ : ಆಪ್ತಪುರುಷ = ಅವಂಚಕನಪ್ಪನ, ಉಪದೇಶಃ = ಹೇಳಿಕೆ, ಆಗಮಃ = ಆಗಮೆಂಬುದು || ಆಪ್ತನಲಕ್ಷಣಮಂಪೇಳ್ವುದುತ್ತರವಾಕ್ಯಂ.

ಯಥಾನುಭೂತಾನುಮಿತ್ರಶ್ರುತಾರ್ಥೋsವಿಸಂವಾದಿವಚನಃಪುಮಾನ್ಆಪ್ತಃ || ೧೫ || ೫೬೭ ||

ಅರ್ಥ : ಯಥಾ = ಎಂತು, ಅನುಭೂತ = ಅನುಭವಿಸಲ್ಪಟ್ಟುದು, ಅನುಮಿತ = ಊಹಿಸಲ್ಪಟ್ಟುದು, ಶ್ರುತಾರ್ಥಃಕೇಳಲ್ಪಟ್ಟರ್ಥ (ಪದಾರ್ಥಂಗಳನುಳ್ಳ) ಮುಮೆಂಬಿವಱೊಳ್, ಅವಿಸಂವಾದಿವಚನಃ = ಪುಸಿಯಿಲ್ಲದನುಡಿಯನುಳ್ಳ, ಪುಮಾನ್ = ಪುರುಷಂ, ಆಪ್ತಃ = ಆಪ್ತನೆಂಬೊಂ || ಪುಸಿಯಿಲ್ಲದವಚನಮೆಪ್ರಮಾಣಮೆಂಬುದುತಾತ್ಪಯಃ || ಇಂತಪ್ಪನುಡಿಯಿಲ್ಲೆಂಬುದುತ್ತರವಾಕ್ಯಂ.

ಸಾವಾಗುಕ್ತಾಪ್ಯನುಕ್ತಸಮಾಯತ್ರಾಸ್ತಿನಸದ್ಯುಕ್ತಿಃ || ೧೬ || ೫೬೮ ||

ಅ : ಸಾವಾಕ್ = ಆನುಡಿ, ಉಕ್ತಾಪಿ = ನುಡಿಯಲ್ಪಟ್ಟುದಾಗಿಯುಂ, ಅನುಕ್ತಸಮಾ = ನುಡಿಯದಸಮಾನಂ, ಯತ್ರ = ಎಲ್ಲಿ, ಸದ್ಯುಕ್ತಿ = ಒಳ್ಳಿತಪ್ಪಯುಕ್ತಿಂ, ನ = ಇಲ್ಲವೋ || ಯುಕ್ತಿಯಲ್ಲದುದುನುಡಿಯಲ್ಲೆಂಬುದುತಾತ್ಪಯಂ || ವಚನಕ್ಕೆಪೆರ್ಮೆಇಂತಕ್ಕುಮೆಂಬುದುತ್ತರವಾಕ್ಯಂ |

ವಕ್ತುರ್ಗುಣಗೌರವಾತ್ವಚನಗೌರವಂಸ್ಯಾನ್ನಸ್ವತಃ || ೧೭ || ೫೬೯ ||

ಅರ್ಥ : ವಕ್ತುಃ = ನುಡಿವನ, ಗುಣಗೌರವಾತ್ = ಗುಣದಪೆರ್ಮೆಯಿಂ, ವಚನಗೌರವಂ = ವಚನದಪೆರ್ಮೆ, ಸ್ವತಃ = ತನ್ನಿಂದಲೇ, ನಸ್ಯಾತ್ = ಗುರುತ್ವಮಿಲ್ಲ || ಉತ್ತಮಪುರುಷರನುಡಿಪ್ರಮಾಣಮೆಂದುತಾತ್ಪರ್ಯಂ || ಇಂತಪ್ಪರಧನಮೆಬಾರ್ತೆಎಂಬುದುತ್ತರವಾಕ್ಯಂ :

ಕಿಂಮಿತಂಪಚೇಷುಧನೇನಚಾಂಡಾಲಸರಸಿವಾಜಲೇನಯತ್ರಸತಾಂನೋಪಭೋಗಃ || ೧೮ || ೫೭೦ ||

ಅರ್ಥ : ಮಿತಂಪಚೇಷು = ಲೋಭಿಗಳೊಳ್, ಧನೇನ = ಧನದಿಂ, ಕಿಂ = ಏನ್, ಚಾಂಡಾಲಸರಸಿವಾ = ಹೊಲೆಗೆಱೆಯೊಳ್ಮೇಣ್, ಜಲೇನ = ನೀರಿಂದಂ, ಕಿಂ = ಏನ್, ಯತ್ರ = ಎಲ್ಲಿ, ಸತಾಂ = ಸತ್ಪುರುಷರ್ಗೆ, ನೋಪಭೋಗಃ = ಉಪಭೋಗಮಿಲ್ಲ || ಸತ್ಪುರುಷರ್ಗುಪಭೋಗಮಿಲ್ಲದರ್ಥಂನಿರರ್ಥಕಮೆಂಬುದುತಾತ್ಪಯಂ || ಲೋಕದವರ್ತನೆಯಂಪೇಳ್ವುದುತ್ತರವಾಕ್ಯಂ :

ಲೋಕಸ್ತುಗತಾನುಗತಿಕೋಯತೋsಸೌಸದುಪದೇಶಿನೀಮಪಿಕಟ್ಟನೀಂಧರ್ಮೇಷುನತಥಾಪ್ರಮಾಣಯತಿಯಥಾಗೋಪ್ಯಮಪಿಬ್ರಾಹ್ಮಣಂ || ೧೯ || ೫೭೧ ||

ಅರ್ಥ : ಲೋಕಸ್ತು = ಜನಂಗಳು, ಗತಾನುಗತಿಕಃ = ನೆಗಳ್ವರಬೆಂಬಳಿಯನೆಗಳ್ವುದು, ಯತಃ = ಆವುದೊಂದುಕಾರಣದಿಂ, ಕುಟ್ಟುನೀಂ = ಕುಂಟಣಿಯಂ, ಸದುಪದೇಶಿನೀಮಪಿ = ಸದುಪದೇಶಮನುಳ್ಳಾಕೆಯೊದೊಡಂ, ತಥಾ = ಅಂತೇ, ಧರ್ಮೇಷು = ಧರ್ಮಂಗಳೊಳ್, ನಪ್ರಮಾಣಯತಿ = ಪ್ರಮಾಣಂಮಾಳ್ಪುದಲ್ಲ, ಯಥಾ = ಎಂತು, ಗೋಘ್ನಮಪಿ = ಪಶುವಧೆಯಂಮಾಳ್ವ, ಬ್ರಾಹ್ಮಣಂ = ಬ್ರಾಹ್ಮನಂ, ಪ್ರಮಾಣಯತಿ = ಪ್ರಮಾಣಂಮಾಳ್ಕುಂ || ಜನಂಗಳುಪ್ರಚುರದಿಂಯುಕ್ತಿಯನಱಿಯರೆಂಬುದುತಾತ್ಪರ್ಯಂ ||

ಇತಿವಿಚಾರಸಮುದ್ದೇಶಃ೧೪[4]

ಸಮುದ್ದೇಶದವಾಕ್ಯಂ || ೧೯ || ಒಟ್ಟು || ೫೭೧ ||

—-

೧೨. ಪ್ರಕೃತಿಯಲ್ಲಿಕಂಡುಬರುವವಿಕೃತಿಯು, ಮುಂದೆಸಂಭವಿಸಬಹುದಾದಶುಭಾಶುಭಗಳಚಿಹ್ನೆಗಳು.

೧೩. ಒಂದುಕೆಲಸದಲ್ಲಿಕಂಡುಬಂದಬುದ್ಧಿಪೌರುಷವುಳ್ಳವನುಇನ್ನೊಂದುಕೆಲಸದಲ್ಲಿಹೇಗೆತಾನೇಸಮರ್ಥನಾಗುವುದಿಲ್ಲ>.

೧೪. ಆಪ್ತಪುರುಷನಉಪದೇಶವೇಆಗಮ.

೧೫. ಹೇಗೆಅನುಭವಿಸಲಾಯಿತೋಊಹಿಸಲಾಯಿತೋ, ಕೇಳಲಾಯಿತೋ, ಅವುಗಳನ್ನುಮಾರ್ಪಾಡುಮಾಡದೇಹೇಳುವವನೇಆಪ್ತನು.

೧೬. ಸರಿಯಾದಯುಕ್ತಿಯಿಲ್ಲದ, ಮಾತನ್ನುಹೇಳಿದರೂಹೇಳಿದಂತೆಯೇ.

೧೭. ಆಡುವವನಗುಣಗೌರವಗಳಂತೆಮಾತುಗಳಗುಣಗೌರವಗಳಿರುತ್ತವೆ. ಸ್ವತಃಶಬ್ದಗಳಿಗಲ್ಲ.

೧೮. ಸತ್ಪುರುಷರಉಪಯೋಗಕ್ಕೆಬರದಿರುವಲೋಭಿಯಧನದಿಂದಾಗಲಿ, ಹೊಲಸುನೀರಿನಿಂದಾಗಲಿಏನುಪ್ರಯೋಜನ?

೧೯. ಜನರುಗತಾನುಗತಿಕರು, ಇತರರುಮಾಡುವಂತೆಮಾಡುವವರು. ಹೇಗೆಂದರೆಗೋವಧೆಮಾಡಿರುವಬ್ರಾಹ್ಮಣನಮಾತನ್ನುಪ್ರಮಾಣವಾಗಿಗ್ರಹಿಸುವರೆವಿನಃಕುಂಟಣಿಯಒಳ್ಳೆಯಮಾತನ್ನೂನಂಬುವುದಿಲ್ಲ.

—-

 

[1]ಯಥಾಎಂದಿರಬೇಕು.

[2]ಮೈ. ಅವಶಿಷ್ಟ;  ಚೌ. ನಿಯುಕ್ತ.

[3]ಮೈ. ಚೌ. ಅಯತಿರ್ವಿನಯಶ್ಚ.

[4]೧೫ಎಂದುಓದಬೇಕು.