ಧಾರ್ಮಿಕಂವ್ಯಸನಂಗಳಂಪರಿಹರಿಸುವುದೆಂದುಪೇಳ್ವುದುತ್ತರವಾಕ್ಯಂ : ವ್ಯಸನಶಬ್ಧಕ್ಕೆವ್ಯುತ್ಪತ್ತಿಯಿಂದರ್ಥಮಂಪೇಳ್ವುದುತ್ತರವಾಕ್ಯಂ :

ವ್ಯಸತಿ[1]ಪ್ರತ್ಯಾವರ್ತಯತ್ಯೇನಂಪುರುಷಂಶ್ರೇಯಸಇತಿವ್ಯಸನಂ || ೧೧ || ೫೭೨ ||

ಅರ್ಥ : ವ್ಯಸ್ಯತಿ = ವ್ಯಸ್ಯತಿಯೆಂಬಶಬ್ಧಕ್ಕರ್ಥಂಪ್ರತ್ಯಾವರ್ತಯತಿ, ಅಗಲ್ಚುವುದೆಂಬುದು, ಏನಂಪುರುಷಂ = ಈಪುರುಷನಂ, ಶ್ರೇಯಸಇತಿ = ಪುಣ್ಯದತ್ತಣಿಂದಮೆಂದಿಂತು, ವ್ಯಸನಂ = ವ್ಯಸನಮೆಂಬುದು || ಪಣ್ಯದಿಂದಗಳ್ಚುವನೆಗಳ್ತೆಯಂವ್ಯಸನಮೆಂಬುದು || ಅದರಭೇದಮಂಪೇಳ್ವುದುತ್ತರವಾಕ್ಯಂ :

ವ್ಯಸನಂದ್ವಿವಿಧಂ, ಸಹಜಮಾಹಾರ್ಯಂ || || ೫೭೩ ||

ಅರ್ಥ : ವ್ಯಸನಂದ್ವಿವಿಧಂ = ವ್ಯಸನಮಿತ್ತೆಱಂ, ಸಹಜಂ = ಸಹಜಮೆಂದುಂ, ಆಹಾರ್ಯಂಚ = ಆಹಾರ್ಯಮುಮೆಂದಿಂತು || ಅಲ್ಲಿಸಹಜವ್ಯಸನಮಂಮುಗ್ಗಿಸುವುಪಾಯಮಂಪೇಳ್ವುದುತ್ತರವಾಕ್ಯಂ :

ಸಹಜಂವ್ಯಸನಂಧರ್ಮಸಂಭೂತಾದ್ಭುತಾಭ್ಯುದಯಹೇತುಭಿರರ್ಧರ್ಮಜನಿತಮಹಾಪ್ರತ್ಯವಾಯಪ್ರತಿಪಾದನೈರುಪಾಖ್ಯಾನೈರ್ಯೋಗ್ಕಪುರುಷೈಶ್ಚಪ್ರಶಮಯೇತ್ || || ೫೭೪ ||

ಅರ್ಥ : ಸಹಜಂ = ಸಹಜಮಪ್ಪ, ವ್ಯಸನಂ = ವ್ಯಸನಮಂ, ಧರ್ಮಸಂಭೂತ = ಧರ್ಮದಿಂಪುಟ್ಟಿದ, ಅದ್ಭುತ-ಅಭ್ಯುದಯಹೇತಭಿಃ = ಆಶ್ಚರ್ಯಮಪ್ಪಭ್ಯುದಯಂಗಳಪ್ಪಕಾರಣಂಗಳಿಂ, ಅರ್ಧರ್ಮಜನಿತ = ಅಧರ್ಮದಿಂಪುಟ್ಟಿದ, ಮಹಾಪ್ರತ್ಯವಾಯ = ಅಱಿದಪ್ಪಕೇಡುಗಳಂ, ಪ್ರತಿಪಾದನೈಃ = ಪೇಳ್ವ, ಉಪಾಖ್ಯನೈಶ್ಚ = ಕತೆಗಳಿಂದಮುಂ, ಯೋಗಪುರುಷೈಶ್ಚ = ಯೋಗಪುರುಷರಿಂದಮುಂ, ಪ್ರಶಯಮೇತ್ = ಮಗ್ಗಿಸುಗೆ || ಇಷ್ಟರಂಧರ್ಮದೊಳ್ನೆಗಳ್ಚರೆಂಬುದುತಾತ್ಪಯಂ || ಯೋಗಪುರುಷರಂಪೇಳ್ವುದುತ್ತರವಾಕ್ಯಂ :

—-

. ಮನುಷ್ಯನನ್ನುಶ್ರೇಯೋಮಾರ್ಗದಿಂದಹಿಮ್ಮೆಟ್ಟಿಸುವದುವ್ಯಸನ.

. ಸಹಜಮತ್ತುಹೊರಗಿನಿಂದಬಂದದ್ದುಎಂದುವ್ಯಸನವುಎರಡುವಿಧ.

. ಧರ್ಮದಿಂದುಂಟಾದವೂಅಭ್ಯುದಯಗಳಿಗೆಕಾರಣವಾದವುಗಳೂಮತ್ತುಅಧರ್ಮದಿಂದುಂಟಾದಅಗಾಧವಾದಕೇಡುಗಳನ್ನುಪ್ರತಿಪಾದಿಸುವವೂಆದಉಪಖ್ಯಾನಗಳಿಂದಲೂ, ಯೋಗಪುರುಷರುಗಳಮೂಲಕವೂ, ಸಹಜವ್ಯಸನವನ್ನುಶಮನಗೊಳಿಸಿಕೊಳ್ಳಬೇಕು.

—-

ಪರಚಿತ್ತಾನುಕೊಲ್ಯೇನತದಭಿಲಷಿತೇಷುವ್ಯಸನೇಷೂಪಾಯೇನವಿರಕ್ತಿಜನ
ನಹೇತವೋಯೋಗಪುರುಷಾಃ || || ೫೭೫ ||

ಅರ್ಥ : ಪರಚಿತ್ತಾನುಕೋಲ್ಯೇನ = ಪೆಱರಚಿತ್ತಕ್ಕನುಕೂಲಮಪ್ಪಂತು, ತದಭಿಲಷಿತೇಷು = ಅವರ್ಗಿಷ್ಟಮಪ್ಪ, ವ್ಯಸನೇಷು = ವ್ಯಸನಂಗಳೊಳ್, ಉಪಾಯೇನ = ಉಪಾಯದಿಂದಂ, ವಿರಕ್ತಿ = ಜನನಹೇತವಃ = ಹೇಸಿಕೆಯಂಪುಟ್ಟಿಸುವುದಕ್ಕೆಕಾರಣಮಪ್ಪವರ್ಗಳ್, ಯೋಗಪುರುಷಾಃ = ಯೋಗಪುರುಷರೆಂಬುದು || ಪೆಱರಪೇಳ್ಕೆಯಿಂದಾದವ್ಯಸನಮಂಮಗ್ಗಿಸುವುಪಾಯಮಂಪೇಳ್ವುದುತ್ತರವಾಕ್ಯಂ.

ಶಿಷ್ಟಸಂಸರ್ಗದುರ್ಜನಾಸಂಸರ್ಗಾಭ್ಯಾಂಪುರಾತನಮಹಾಪುರುಷಚರಿ
ತೋತ್ಥಾಭಿಶ್ಚಕಥಾಭಿರಭಿಹಾರ್ಯಂವ್ಯಸನಂಪ್ರತಿಬಧ್ನೀಯಾತ್ || || ೫೭೬ ||

ಅರ್ಥ : ಶಿಷ್ಟಸಂಸರ್ಗಃ = ಶಿಷ್ಟರಕೂಟಮುಂ, ದುರ್ಜನಾಸಂಸರ್ಗಾಭ್ಯಾಂ = ದುರ್ಜನರಗಲ್ಕೆಯಿಂದಂ, ಪುರಾತನಮಹಾಪುರುಷಚರಿತೋತ್ಥಾಭಿಶ್ಚ = ಹಿಂದಿನಮಹಾಪುರುಷರಚರಿತೆಯಅಗಲ್ಕೆಯಿಂದಂ, ಕಥಾಭಿಶ್ಚ = ಕತೆಗಳಿಂದಂ, ಅಭಿಹಾರ್ಯಂ = ಅಹಾರ್ಯನಪ್ಪ, ವ್ಯಸನಂ = ವ್ಯಸನಮಂ, ಪ್ರತಿಬದ್ನೀಯಾತ್ = ಮುಗ್ಗಿಸುಗೆ || ಹಿತವನೆಂತುಂವ್ಯಸನಂಗಳನಾಗಲೀಯನೆಂಬುದುತಾತ್ಪರ್ಯ || ಸ್ತ್ರೀವ್ಯಸನಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಸ್ತ್ರಿಯಮತಿಭಜಮಾನೋಭವತ್ಯವಶ್ಯಂತೃತೀಯಪ್ರಕೃತಿಃ || || ೫೭೭ ||

ಅರ್ಥ : ಸ್ತ್ರಿಯಂ = ಸ್ತ್ರೀಯಂ, ಅತಿಭಜಮಾನಃ = ಪಿರಿದುಮನುಭವಿಸುತಿರ್ದಂ, ಅವಶ್ಯಂ = ನಿಶ್ಚಯದಿಂ, ತೃತೀಯಪ್ರಕೃತಿಃ = ಮೂಱನೆಯಷಂಡಸ್ವಭಾವಮಂ, ಭವತಿ = ಅಕ್ಕುಂ || ಸ್ತ್ರೀವ್ಯಸನಂಪಿರಿದಾಗಲಾಗದೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ದುದುತ್ತರವಾಕ್ಯಂ :

—-

. ಪರಚಿತ್ತಕ್ಕೆಅನುಕೂಲವಾಗುವಂತೆಅವರಿಗೆಇಷ್ಟವಾದವ್ಯಸನಗಳಲ್ಲಿಉಪಾಯದಿಂದವಿರಕ್ತಿಯನ್ನುಹುಟ್ಟಿಸುವುದಕ್ಕಾಗಿಕಾರಣವಾಗುವವರುಯೋಗಪುರುಷರು.

. ಶಿಷ್ಟರಸಹವಾಸಮಾಡುವುದರಿಂದಲೂದುಷ್ಟರಸಂಗವನ್ನುಬಿಡುವದರಿಂದಲೂಪುರಾತನಮಹಾಪುರುಷರಚರಿತ್ರೆಯನ್ನೊಳಗೊಂಡಕಥೆಗಳನ್ನುಕೇಳುವುದರಿಂದಲೂಅರ್ಜಿತವ್ಯಸನವನ್ನುತಗ್ಗಿಸಬಹುದು.

. ಸ್ತ್ರೀಯನ್ನುಅತಿಯಾಗಿಅನುಭವಿಸುವವನುನಿಶ್ಚಯವಾಗಿಯೂಷಂಡತ್ವವನ್ನುಹೊಂದುತ್ತಾನೆ.

. ಶುಕ್ಲಧಾತುಕ್ಷಯವುಸರ್ವಧಾತುಕ್ಷಯವನ್ನುಂಟುಮಾಡುತ್ತದೆ.

. ಕಳ್ಗುಡುಕನುಮನದಭ್ರಾಂತಿಯಿಂದತಾಯನ್ನಾದರೂಬಯಸಿಯಾನು.

. ಬೇಟೆಯಲ್ಲಿಆಸಕ್ತಿಇರುವವನು. ಕಳ್ಳರು, ಕ್ರೂರಮೃಗಗಳು, ಶತ್ರುಗಳು, ದಾಯಾದಿಗಳುಎಂಬುವರಿಗೆಬಲಿಯಾಗುತ್ತಾನೆ.

೧೦. ಜೂಜಿನಲ್ಲಿತೊಡರಿಕೊಂಡನುಮಾಡದಕೆಟ್ಟಕೆಲಸವಿಲ್ಲ.

೧೧. ತನ್ನತಾಯಿಸತ್ತುಬಿದ್ದಿದ್ದರೂಜೂಜಾಳಿಯೂಜೂಜಿನಗೋಷ್ಠಿಯಲ್ಲಿಸಂತೋಷಿಸುತ್ತಾನೆ.

—-

ಶೌಕ್ಲ್ಯ[2]ಧಾತುಕ್ಷಯಂಸರ್ವಧಾತುಕ್ಷಯಂಕರೋತಿ || || ೮೭೮ ||

ಅರ್ಥ : ಶೌಕ್ಲ್ಯಧಾತುಕ್ಷಯಂ = ಶುಕ್ಲಧಾತುವಿನಕೇಡು, ಸರ್ವಧಾತುಕ್ಷಯಂ = ಎಲ್ಲಾಧಾತುಗಳಕೇಡಂ, ಕರೋತಿ = ಮಾಳ್ಕುಂ || ಪಾನವ್ಯಸನಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಪಾನಶೌಂಡಶ್ಚಿತ್ತಭ್ರಮಾನ್ಮಾತರಮಪ್ಯಭಿಗಚ್ಛತಿ || || ೮೭೯ ||

ಅರ್ಥ : ಪಾನಶೌಂಡಃ = ಕಳ್ಗುಡಿಹಿ, ಚಿತ್ತಭ್ರಮಾತ್ = ಮನದಭ್ರಾಂತಿಯಿಂ, ಮಾತರಮಪಿ = ತಾಯನಾದೊಡಂ, ಅಭಿಗಚ್ಛತಿ = ಪೋಕುಂ || ಮದ್ಯಸೇವೆಹಿತಾಹಿತಮನಱಿಯಲೀಯದೆಂಬುದುತಾತ್ಪರ್ಯಂ || ಬೇಂಟೆಗೆದೋಷಮಂಪೇಳ್ವುದುತ್ತರವಾಕ್ಯಂ :

ಮೃಗಯಾಸಕ್ತಿಸ್ತೇನವ್ಯಾಲದ್ವಿಷದ್ದಾಯಾದಾನಾಮಾಮಿಷಂಪುರುಷಂಕರೋತಿ || || ೫೮೦ ||

ಅರ್ಥ : ಮೃಗಯಾಸಕ್ತಿಃ = ಬೇಂಟೆಯೊಳರ್ತಿಯುಂ, ಸ್ತೇನ = ಕಳ್ಳರು, ವ್ಯಾಲ = ಕ್ರೂರಮೃಗಂಗಳು, ದುಷ್ಟಸರ್ಪ, ದ್ವಿಷತ್ = ಪಗೆವರುಂ, ದಾಯಾದಾನಾಂ = ದಾಯಾದಮೆಂದಿವರ್ಗಳ್ಗೆ, ಪುರುಷಂ = ಪುರುಷನುಂ, ಆಮಿಷಂಕರೋತಿ = ಆಹಾರಮಂ (ತಿಂಬಮಾಂಸವನ್ನು), ಕರೋತಿ = ಮಾಳ್ಕುಂ || ಬೇಂಟೆಯೊಳ್ಮೈಮೆಱೆದವನೆಂತುಂಕೆಡುವನೆಂಬುದುತಾತ್ಪರ್ಯಂ || ಜೂದಿಂಗೆದೋಷಮಂಪೇಳ್ವುದುತ್ತರವಾಕ್ಯಂ :

ನಾಸ್ತ್ಯಕೃತ್ಯಂದ್ಯೂತಾಸಕ್ತಸ್ಯ[3] || ೧೦ || ೫೮೧ ||

ಅರ್ಥ : ದ್ಯೂತಾಸಕ್ತಸ್ಯ = ಜೂದಿನೊಳ್ತೊಡರ್ವಂಗೆ, ನಾಸ್ತಿ = ಇಲ್ಲ, ಅಕೃತ್ಯಂ = ಮಾಡಲ್ಪಡದುದು || ಮತ್ತಮದನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಸ್ವಮಾತರ್ಯಪಿ[4]ಹಿಮೃತಾಯಾಂ[5]ದಿವ್ಯತ್ಯೇವಕಿತವಃ || ೧೧ || ೫೮೨ ||

ಅರ್ಥ : ಸ್ವಮಾತರಿ = ತನ್ನತಾಯಿ, ಮೃತಾಯಾಮಪಿ = ಸತ್ತೊಡಂ, ಹಿ = ನಿಶ್ಚಯದಿಂ, ದಿವ್ಯತೇ = ಆದುಗುಮೆ, ಕಿತವಃ= ಜೂದುಗಾರಂ, ಜೂದಿನಗೋಷ್ಠಿಯಲ್ಲಿಕಿಡುತವೆಇಹನು || ಜೂದುಗಾಱಂತನ್ನುಮಂನೋಡನೆಂಬುದುತಾತ್ಪರ್ಯಂ || ಪಿಸುಣಂಗೆದೋಷಮಂಪೇಳ್ವುದುತ್ತರವಾಕ್ಯಂ :

ಪಿಶುನಃಸರ್ವೇಷಾಮವಿಶ್ವಾಸಂಜನಯತಿ || ೧೨ || ೫೮೩ ||

ಅರ್ಥ : ಪಿಶುನಃ = ಪಿಶುಣಮುಂ (ಕೊಂಡಿಯನು), ಸರ್ವೇಷಾಂ = ಎಲ್ಲರ್ಗಂ, ಅವಿಶ್ವಾಸಂ = ನಂಬುಗೆಯಕೇಡಂ, ಜನಯತಿ = ಪುಟ್ಚಿಸುಗುಂ || ಪಗಲ್ನಿದ್ರೆದೋಷಮಂಪೇಳ್ವುದುತ್ತರವಾಕ್ಯಂ :

ದಿವಾಸ್ವಾಪಃಸುಪ್ತವ್ಯಾಧಿವ್ಯಾಲಾನಾಮುತ್ಥಾನದಂಡಃಸಕಲಕಾರ್ಯಾಂತರಾಯಶ್ಚ || ೧೩ || ೫೮೪ ||

ಅರ್ಥ : ದಿವಾಸ್ವಾಪಃ = ಪಗಲ್ನಿದ್ರೆಯು, ಸುಪ್ತ = ಪೆಟ್ಟಿರ್ದ, ವ್ಯಾಧಿವ್ಯಾಲಾನಾಂ = ವ್ಯಾಧಿಗಳೆಂಬಕೋಳ್ಮೃಗಂಗಳಂ (ಹಾವುಗಳ), ಉತ್ಥಾಪನ = ಎಬ್ಬಿಸುವ, ದಂಡಃ = ಕೋಲ್‌, ಸಕಲಕಾರ್ಯಾಂತರಾಯಶ್ಚ = ಎಲ್ಲಾಕಾರ್ಯಂಗಳಕೇಡು || ಪೆಱರಂಪಳಿವುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಪರಪರಿವಾದಾತ್ಪರಂಸರ್ವವಿದ್ವೇಷಣೇಭೇಷಜಮಸ್ತಿ || ೧೪ || ೫೮೫ ||

ಅರ್ಥ : ಪರಿಪರಿವಾದಾತ್ = ಪೆಱರಂಪಳಿವುದಱತ್ತಣಿಂ, ಪರಂ = ಪೆಱತು, ಸರ್ವವಿದ್ವೇಪಣೇ = ಎಲ್ಲರಂಮಳಿಯಿಸುವಲ್ಲಿಗೆ, ಭೇಷಜಂ = ಮದ್ದು, ನಾಸ್ತಿ = ಇಲ್ಲ || ಪೆಱರಂಪಳಿಯಲಾಗದೆಂಬುದುತಾತ್ಪರ್ಯಂ || ಕಳವುಹಾದರಮಂಮಾರುಗಾಯದಾಡುವುದುಮೆಂದಿವಕ್ಕೆದೋಷಮಂಪೇಳ್ವುದುತ್ತವಾಕ್ಯಂ :

ತೌರ್ಯತ್ರಿಕಾಸಕ್ತಿಃಕಂನಾಮನಪ್ರಾಣಾರ್ಥಮಾನೈರ್ವಿಯೋಜಯತಿ || ೧೫ || ೫೮೬ ||

ಅರ್ಥ : ತೌರ್ಯತ್ರಿಕಾಸಕ್ತಿಃ = ಕೈಕಚ್ಚೆನಾಲಿಗೆ (ಗೀತವಾದ್ಯನೃತ್ಯಂಗಳ)ಯೆಂಬಿವಱೊಳ್ಶುದ್ಧನಲ್ಲದಸ್ವರೂಪಂ, ಕಂ = ಆವನಂ, ನಾಮ = ನಿಶ್ಚಯದಿಂ, ಪ್ರಾಣ = ಪ್ರಾಣಮುಂ, ಅರ್ಥ  = ಅರ್ಥಮುಂ, ಮಾನೈಃ = ಅಭಿಮಾನಮುಮೆಂಬಿವಱಿಂ, ನವಿಯೋಜಯತಿ = ಅಗಲ್ಚದು || ಅದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

—-

೧೨. ಚಾಡಿಕೋರನುಎಲ್ಲರಲ್ಲಿಯೂಅವಿಶ್ವಾಸವನ್ನುಹುಟ್ಟಿಸುತ್ತಾನೆ.

೧೩. ಹಗಲನಿದ್ರೆಯುಮಲಗಿದವ್ಯಾಧಿಗಳೆಂಬಕ್ರೂರಮೃಗಗಳನ್ನುಎಚ್ಚರಗೊಳಿಸುವಬಡಿಗೋಲುಮತ್ತುಎಲ್ಲಕಾರ್ಯಗಳಿಗೂಅಡ್ಡಿ.

೧೪. ಎಲ್ಲರನ್ನೂದ್ವೇಷಿಗಳಾಗಿಸಿಕೊಳ್ಳುವುದಕ್ಕೆಇತರರನ್ನುಹಳಿಯುವುದಕ್ಕಿಂತಬೇರೆಸಾಧನವಿಲ್ಲ.

೧೫. ಕೈಕೆಚ್ಚೆನಾಲಗೆಗಳಲ್ಲಿಅತ್ಯಾಸಕ್ತಿಯುಯಾರನ್ನುತಾನೆಪ್ರಾಣ, ಅರ್ಥಮಾನಗಳಿಂದಅಗಲಿಸದು?

೧೬. ಹುಸಿಯನುಡಿಯುವದುಯಾವದಾದರೊಂದುಅನರ್ಥವನ್ನುಉಂಟುಮಾಡದೆಬಿಡದು.

೧೭. ಅತಿಯಾಗಿಮತ್ಸರಿಸುವವನನ್ನುಸ್ತ್ರೀಯರುತೊರೆಯುತ್ತಾರೆಇಲ್ಲವೆಕೂಲ್ಲುತ್ತಾರೆ.

೧೮. ಪರಸ್ತ್ರೀಯರಲ್ಲಿಗೆಹೋಗುವದು, ಕನ್ಯೆಯನ್ನುಕೆಡಿಸುವದು, ಸಾಹಸವುರಾವಣಮತ್ತುದಂಡಕನಮಗನವಿನಾಶಕ್ಕೆಕಾರಣವಾದದ್ದುಸುಪ್ರಸಿದ್ಧವಿದೆ.

೧೯. ನಾನುಮಾಡುತ್ತೇನೆಎಂಬಅರಿವಿಲ್ಲದೆಮಾಡುವಕೆಲಸವುಸಾಹಸ.

—-

ಮೃಷೋ[6]ದ್ಯಾವಿದಾಯಕಮಷ್ಯನರ್ಥಂವಿರಮತಿ || ೧೬ || ೫೮೭ ||

ಅರ್ಥ : ಮೃಷೋದ್ಯಾ = ಪುಸಿನುಡಿ, ಕಮಪಿ = ಅವುದಾನುಮೊಂದು, ಅನರ್ಥಂ = ಕೇಡಂ, ನವಿದಾಮ = ಮಾಡದೆ, ನವಿರಮತಿ = ಮಾಣದು = ಮಾಣದು || ಕರಂಪುಸಿವಂಗೆದೋಷಮಂಪೇಳ್ವುದುತ್ತರವಾಕ್ಯಂ :

ಅತೀವೇರ್ಷ್ಯಾಲುಂಸ್ತ್ರಿಯಸ್ತ್ಯಜಂತಿನಿಘ್ನಂತಿವಾಪುರಷಂ || ೧೭ || ೫೮೮ ||

ಅರ್ಥ : ಮೃಷೋದ್ಯಾ = ಪುಸಿನುಡಿ, ಕಮಪಿ = ಅವುದಾಮೊಂದು, ಅನರ್ಥಂ = ಕೇಡಂ, ನವಿದಾಯ = ಮಾಡದೆ, ನವಿರಮತಿ = ಮಾಣದು || ಕರಂಪುಸಿವಂಗೆದೋಷಮಂಪೇಳ್ವುದಯತ್ತರವಾಕ್ಯಂ :

ಅತೀವೇರ್ಷ್ಯಾಲುಂಸ್ತ್ರಿಯಸ್ತ್ಯಜಂತಿನಿಘ್ನಂತಿವಾಪುರುಷಂ || ೧೭ || ೫೮೮ ||

ಅರ್ಥ : ಅತೀವ = ಹಿರಿದು, ಈರ್ಷ್ಯಾಲುಂ = ಅಸಹ್ಯನಾದ, ಪುರುಷಂ = ಪುರುಷನನು, ಸ್ತ್ರಿಯಃ = ಸ್ತ್ರೀಯರ್ಕಳ್, ತ್ಯಜಂತಿ = ತೊಱಿವರ್, ನಿಘ್ನಂತಿವಾ = ಕೊಲ್ವರ್ಮೇಣ್ || ಶೌಚವ್ರತಕ್ಕೆದೋಷಮಂಪೇಳ್ವುದುತ್ತರವಾಕ್ಯಂ :[7]

ಪರಪರಿಗ್ರಹಾಭಿಗಮಃಕನ್ಯಾದೂಷಣಂವಾಸಾಹಸಂದಶಮುಖದಾಂಡೀಕ್ಯ[8]

ವಿನಾಶಹೇತುಃಸುಪ್ರಸಿದ್ಧಮೇವ || ೧೮ || ೫೮೯ ||

ಅರ್ಥ : ಪರಪರಿಗ್ರಹಾಭಿಗಮಃ = ಪರಸ್ತ್ರೀಯರಂಪೋಪುದುಂ, ಕನ್ಯಾದೂಷಣಂವಾ = ಕೊಡಗೂಸಂಕಿಡಿಸುವುದುಮೇಣ್, ಸಾಹಸಂ = ಸಾಹಸವು, ದಶಮುಖ = ರಾವಣನುಂ, ದಾಂಡೀಕ್ಯಂ = ದಂಡಕನಮಗನುಮೆಂಬೀರ್ವರ[9], ವಿನಾಶಹೇತುಃ = ಕೇಡಿಂಗೆಕಾರಣಮಪ್ಪುದು, ಸುಪ್ರಸಿದ್ಧಮೇವ = ಕರಂಪ್ರಸಿದ್ಧಮೇವ || ಸಾಹಸದಲಕ್ಷಣಮಂಪೇಳ್ವುದುತ್ತರವಾಕ್ಯಂ :

ಯತ್ರನಾಹಮಿತ್ಯಧ್ಯವಸಾಯಃತತ್ಸಹಾಸಂ || ೧೯ || ೫೯೦ ||

ಅರ್ಥ : ಯತ್ರ = ಆವುದೊಂದೆಡೆಯೊಳ್, ಆಹಮಿತಿ = ಆನೆಂಬ, ಅಧ್ಯವಸಾಯಃ = ಮನಂ (ನಿಶ್ಚಯವು), ನ = ಇಲ್ಲ, ತತ್ = ಅದು, ಸಾಹಸಂ = ಸಾಹಸಮೆಂಬುದು || ತನ್ನುಮಂಬಗೆಯದಿರ್ಪುದೆಸಾಹಸಮೆಂಬುದುತಾತ್ಪರ್ಯಂ || ಅರ್ಥದೂಷಕಂಗೆದೋಷಮಂಪೇಳ್ವುದುತ್ತರವಾಕ್ಯಂ :

ಅರ್ಥದೂಷಕಃಕುಬೇರೋsಪಿಭವತಿಭಿಕ್ಷಾಭಾಜನಂ || ೨೦ || ೫೯೧ ||

ಅರ್ಥ : ಅರ್ಥದೂಷಕಃ = ಅರ್ಥಮಂಕೆಡಿಸುವ, (ಅರ್ಥದೂಷಣಾತ್ = ಅರ್ಥದೂಷಿಸುವುದಱತ್ತಣಿಂದ), ಕುಬೇರೊsಪಿ = ಕುಬೇರನುಂ, ಭಿಕ್ಞಾಭಾಜನಂ = ಭಿಕ್ಷೆಗೆಭಾಜನಂ, ಭವತಿ = ಅಕ್ಕುಂ || ಅರ್ಥದೂಷಣಮಾವುದೆಂದೊಡೆಪೇಳ್ವುದುತ್ತರವಾಕ್ಯಂ :

ಅತಿವ್ಯಯೋsಪಾತ್ರವ್ಯಯಶ್ಚಅರ್ಥಸ್ಯದೂಷಣಂ || ೨೧ || ೫೯೨ ||

ಅರ್ಥ : ಅತಿವ್ಯಯಃ = ಪಿರಿದಪ್ಪಬೀಯ (ವೆಚ್ಚ)ಮುಂ, ಅಪಾತ್ರವ್ಯಯಶ್ಚ = ಪಾತ್ರವಲ್ಲದಲ್ಲಿಯಬೀಯ (ವೆಚ್ಚ)ಮುಂ, ಅರ್ಥಸ್ಯ = ಅರ್ಥಕ್ಕೆ, ದೂಷಣಂ = ಕೇಡು, ನಿರರ್ಥಕಂ || ಸಿಡೆಯಮಾಡಲಾಗದೆಂಬುದುತ್ತರವಾಕ್ಯಂ :

ಹರ್ಷಾಮಷಾಭ್ಯಾಮಕಾರಣಂತೃಣಾಂಕುರಮಪಿನೋಪಹನ್ಯಾತ್ಕಿಂ

ಪುನರ್ನ[10]ಮನುಷ್ಯಂ || ೨೨ || ೫೯೩ ||

ಅರ್ಥ : ಹರ್ಷಾಮರ್ಷಾಭ್ಯಾಂ = ರಾಗಧ್ವೇಷಂಗಳಿಂ, ಅಕಾರಣಂ = ಬಱೆದೆ, ತೃಣಾಂಕುರಮಪಿ = ಪುಲ್‌ಮೊಳೆಯುಂ, ನೋಪಹನ್ಯಾತ್ = ಮುಳಿಯದಿರ್ಕೆ, ಮನುಷ್ಯಂ = ಮನುಷ್ಯನಂನೋಯಿಸಲಾಗದೆಂಬುದು, ಕಿಂ = ಪುನಃ, ಏಂ = ಮತ್ತೆ, ಪೇಳಲೆವೇಳ್ಕುಮೇ || ಕಾರಣಮಿಲ್ಲದಾವನುಮಂನೋಯಿಸಲಾಗದೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯ : .

—-

೨೦. ಅರ್ಥದೂಷಕನುಕಬೇರನಾದರೂಭಿಕ್ಷಾಟನೆಗೆಗುರಿಯಾಗುತ್ತಾನೆ.

೨೧. ಅರ್ಥದೂಷಣವೆಂದರೆಅತಿವ್ಯಯವುಮತ್ತುಅಪಾತ್ರವ್ಯಯವು,

೨೨. ರಾಗದ್ವೇಷಗಳಿಗೊಳಗಾಗಿ, ಅಕಾರಣವಾಗಿಹುಲ್ಲಿನಮೊಳಕೆಯನ್ನೂನಾಶಮಾಡಬಾರದುಎಂದಾಗಮನುಷ್ಯನನ್ನುನೋಯಿಸಬಾರದೆಂದುಬೇರೆಹೇಳಬೇಕೇ?

೨೩. ನಿಷ್ಕಾರಣವಾಗಿಪ್ರಾಣಿಗಳನ್ನುಭಾಧಿಸುತ್ತಿದ್ದವಾತಾಪಿ. ಇಲ್ವಲಎಂಬರಾಕ್ಷಸರು. ಅಗಸ್ತ್ಯಋಷಿಯನ್ನುಎದಿರಿಸುವುದರಿಂದವಿನಾಶಹೊಂದಿದರೆಂದುಕೇಳಲ್ಪಡುತ್ತದೆ.

೨೪. ದೋಷಕ್ಕೆತಕ್ಕಂತೆಎಷ್ಟುದಂಡಿಸಿದರೂದುಃಖಕ್ಕೆಕಾರಣವಾಗುವುದಿಲ್ಲ. ಅನ್ಯಾಯದಿಂದಹುಲ್ಲುಕಡ್ಡಿಯನ್ನುತೆಗೆದುಕೊಂಡರೂಪ್ರಜೆಗಳದುಃಖಕ್ಕೆಕಾರಣವಾಗುತ್ತದೆ.

೨೫. ಮರವನ್ನುಕಡಿಯುವದರಿಂದಫಲಪ್ರಾಫ್ತಿಯುಒಂದುಸಲಮಾತ್ರ.

—-

ಶ್ರೂಯತೇಹಿಕಿಲನಿಷ್ಕಾರಣಂಭೂತಾವಮಾನಿನೌವಾತಾಪೀಲ್ವಲಶ್ಚಾಸುರೌ

ಅಗಸ್ತ್ಯಸ್ಯಾತ್ಯಾಸಾಧನಾದ್ವಿನೇ[11]ಶತುರಿತಿ || ೨೩ || ೫೯೪ ||

ಅರ್ಥ : ಭೂತಾವಮಾನಿನೌ = ಪ್ರಾಣಿಗಳಂನೋಯಿಸುವ, ವಾತಾಪಿ = ವಾತಾಪಿಯುಂ, ಇಲ್ವಲಶ್ಚ = ಇಲ್ವಲನೆಂಬೀಈರ್ವರು, ಅಸುರೌ = ಅಸುರರ್, ಅಗಸ್ತಸ್ಯ = ಅಗಸ್ತ್ಯನೆಂಬಋಷಿಯಂ, ಅತ್ಯಾಸಾಧನಾತ್ = ಇಳಿಕೆಗೆಯ್ವದಿಂ, ವಿನೇಶತುರಿತಿ = ಕೆಟ್ಟರಿಂದಿಂತು, ಶ್ರೂಯತೇಹಿಕಿಲ = ಕೇಳಲ್ಪಟ್ಟುದಲ್ತೆ, ನಿಷ್ಕಾರಣಂ = ಕಾರಣಮಿಲ್ಲದೆ || ದೋಷಕ್ಕಲ್ಲದೆದಂಡವೇಡೆಂಬುದುತ್ತರವಾಕ್ಯಂ :

ಯಥಾದೋಷಂಕೋಟಿರಪಿಗೃಹೀತಾದುಃಖಾಯತೇ, ಅನ್ಯಾಯೇನ

ತ್ವಣಶಲಾಕಾಪಿಗೃಹೀತಾಪ್ರಜಾಃಖೇದಯತಿ[12] || ೨೪ || ೫೯೫ ||

ಅರ್ಥ : ಯಥಾದೋಷಂ = ದೋಷಕ್ಕೆತಕ್ಕಂತು, ಕೋಟಿರಪಿ = ಕೋಟಿಯುಂ, ಗೃಹೀತಾ = ಕೈಕೊಳ್ಳಲ್ಪಟ್ಟದು, ನದುಃಖಾಯತೇ = ದುಃಖವಿಲ್ಲ, ಅನ್ಯಾಯೇನ = ಅನ್ಯಾಯದಿಂ, ತೃಣಶಲಾಕಾಪಿ = ಹುಲ್ಲುಕಡ್ಡಿಯುಂ, ಗೃಹೀತಾ = ಕೈಕೊಳಲ್ಪಟ್ಟುದಾಗಿ, ಪ್ರಜಾಃ = ಪ್ರಜೆಗಳಂ, ಖೇದಯತಿ = ನೋಯಿಸುಗುಂ || ಈಯರ್ಥಮನೆದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ತರುಚ್ಛೇದೇನಫಲೋಪಭೋಗಃಸಕೃದೇವ || ೨೫ || ೫೯೬ ||

ಅರ್ಥ : ತರುಚ್ಛೇದೇನ = ಮರನಕಡೆವುದಱೆಂ, ಫಲೋಪಭೋಗಃ = ಫಲಮಂಸೇವಿಪುದು, ಸಕೃದೇವ = ಒರ್ಮೆಯೆ|| ಇನಿತಕ್ಕೆತಾತ್ಪರ್ಯಮುತ್ತರವಾಕ್ಯಂ

ಪ್ರಜಾವಿಭವೋಹಿಸ್ವಾಮಿನೋದ್ವಿತೀಯಂಭಾಂಡಾಗಾರಮುತ್ತೋಯುಕ್ತಿ

ತಸ್ತಮುಪಯುಂಜೀತ || ೨೬ || ೫೯೭ ||

ಅರ್ಥ : ಪ್ರಜಾವಿಭವಃ = ಪ್ರಜೆಗಳವಿಭವಂ, ಹಿ = ನಿಶ್ಚಯದಿಂ, ಸ್ವಾಮಿನಃ = ಸ್ವಾಮಿಯ, ದ್ವಿತೀಯಂಭಾಂಡಾಗಾರಂ = ಎರಡನೆಯಭಂಡಾರದಮನೆ, ಅತಃ = ಅದುಕಾರಣದಿಂ, ಯುಕ್ತಿತಃ = ಯುಕ್ತಿಯಿಂ, ತಂಅದಂ = ಆಪ್ರಜಾವಿಭವವನು, ಉಪಯುಂಜೀತ = ಉಪಯೋಗಿಸುಗೆ || ರಾಜದ್ರವ್ಯಮಂಕಿಱಿದನಾದೊಡಂಕೊಳಲಾಗದೆಂಬುದುತ್ತರವಾಕ್ಯಂ :

ರಾಜ್ಞಾಪರಿಗೃಹೀತಂತೃಣಮಪಿಪರೇಣಗೃಹೀತಂಕಾಂಚನೀಭವತಿಜಾಯತೇ

ಪೂರ್ವಸಂಚಿತಸ್ಯಾಪ್ಯರ್ಥಸ್ಯಅಪಹಾರಾಯ[13] || ೨೭ || ೫೯೮ ||

ಅರ್ಥ : ರಾಜ್ಞಾಪರಿಗೃಹೀತಂ = ಅರಸನಿಂಕೈಕೊಳಲ್ಪಟ್ಟ, ತೃಣಮಪಿ = ಪುಲ್ಲುಂ, ಪರೇಣಗೃಹೀತಂ = ಪೆಱರಿಂಕೈಕೊಳಲ್ಪಟ್ಟುದಪ್ಪೊಡೆ, ಕಾಂಚನೀಭವತಿ = (ಪ್ರಜೆಗಳುಕೊಂಡಡೆ) ಪೊನ್ನಕ್ಕುಂ, ಪೂರ್ವಸಂಚಿತಸ್ಯ = ಆಪ್ರಜೆಗಳುಮುನ್ನೆಱಪಲ್ಪಟ್ಟ, ಅರ್ಥಸ್ಯಾಪಿ = ಅರ್ಥಕ್ಕಂ, ಅಪಹಾರಾಯ = ಕಳೆದುಕೊಳ್ವುದಕ್ಕೆಕಾರಣಂ, ಜಾಯತೇ = ಅಕ್ಕುಂ || ರಾಜಧನಮಂಕೊಳಲ್ಕೆಕೇಡಕ್ಕುಮೆಂಬುದುತಾತ್ಪರ್ಯಂ || ಪರಷವಚನಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ವಾಕ್ಪಾರುಷ್ಯಮಸ್ತ್ರಪಾತಾದಪಿವಿಶಿಷ್ಯತೇ || ೨೮ || ೫೯೯ ||

ಅರ್ಥ : ವಾಕ್ಪಾರುಷ್ಯಂ = ವಚನದಬೆಟ್ಟಿತಪ್ಪಸ್ವರೂಪಂ, ಅಸ್ತ್ರಪಾತಾದಪಿ = ಏಱಿನತ್ತಣಿಂದಮುಂ, ವಿಶಿಷ್ಯತೇ = ಅಧಿಕಮಕ್ಕುಂ || ಬೆಟ್ಟಿತಂನುಡಿಯಲಾಗದೆಂಬುದುತಾತ್ಪರ್ಯ || ಅದಱಸ್ವರೂಪಮಂಪೇಳ್ವುದುತ್ತರವಾಕ್ಯಂ :

[14]ಜಾತಿವಯೋವೃತ್ತವಿದ್ಯಾವಿಭವಾನುಚಿತಂವಷನಂಹಿವಾಕ್ಪಾರುಷ್ಯಂ || ೨೯ || ೬೦೦ ||

ಅರ್ಥ : ಜಾತಿ = ಜಾತಿಯುಂ, ವಯಃ = ಪ್ರಾಯಮುಂ, ವೃತ್ತ = ಚಾರಿತ್ರಮುಂ, ವಿದ್ಯಾ = ವಿದ್ಯೆಯುಂ, ವಿಭವ = ಲಕ್ಷ್ಮಿಯುಮೆಂಬಿವಕ್ಕೆ, ಅನುಷಿತಂಹಿ = ಉಚಿತಮಲ್ಲದವಚನಂನುಡಿ, ವಾಕ್ಪಾರುಷ್ಯಂ = ವಾಕ್ಪಾರುಷ್ಯಮೆಂಬುದು || ಜಾತ್ಯಾದಿಗಳನಱಿದುಮನ್ನಿಸುವುದೆಂಬುದುತಾತ್ಪರ್ಯಂ || ಪೌಷ್ಯರ್ಗಿಂತುಬುದ್ಧಿವೇಳ್ಕುಮೆಂಬುದುತ್ತರವಾಕ್ಯಂ :

ಸ್ತ್ರಿಯಮಪತ್ಯಂಭೃತ್ಯಂವಾತದೋಕ್ತ್ವಾವಿನಯಂಗ್ರಾಹಯೇತ್, ಯಥಾ

ಹೃದಯಪ್ರವಿಷ್ಠ[15]ಚ್ಛಾಲ್ಯಾದಿವತೇದುರ್ಮನಾಯತೇ || ೩೦ || ೬೦೧ ||

ಅರ್ಥ : ಸ್ತ್ರಿಯಂ = ಸ್ತ್ರೀಯಂ, ಅಪತ್ಯಂ = ಮಗನುಮಂ, ಭೃತ್ಯಂವಾ = ಬಂಟನುಮಂಮೇಣ್, ಯಥೋಕ್ತ್ವಾ = ಅಂತುನುಡಿದು, ವಿನಯಂ = ವಿನಯಮಂ, ಗ್ರಾಹಯೇತ್ = ಕೈಕೊಳಿಸುಗೆ, ಯಥಾ = ಎಂತು, ಹೃದಯಪ್ರವಿಷ್ಟಾತ್ = ಎದೆಯೊಳ್ನಟ್ಟ, ಶಲ್ಯಾದಿವ = ಅಲಗಿನತ್ತಣಿಂದಮೆಂತಂತೆ (ದುಃಖಿತರಹರು), ತೇ = ಅವರ್ಗಳ್, ನದುರ್ಮನಾಯತೇ = ಪೊಲ್ಲಮನದರಾಗರ್ (ದುಃಖಿತದಱಾಗದಹಾಂಗೆ) || ಪ್ರಿಯವಚನದಿಂಬುದ್ದಿವೇಳ್ಕುಮೆಂಬುದುತಾತ್ಪರ್ಯಂ || ದಂಡಪಾರುಷ್ಯಮಂಪೇಳ್ವುದುತ್ತರವಾಕ್ಯಂ :

ವರ್ಧಪರಿಕ್ಲೇಶೋರ್ಥಹರಣಂವಾsಕ್ರಮೇಣದಂಡಪಾರುಷ್ಯಂ || ೩೧ || ೬೦ || ೬೦೨ ||

ಅರ್ಥ : ಅಕ್ರಮೇಣ = ದೋಷಮಿಲ್ಲದೆ, ವಧಃ = ಕೊಲೆಯುಂ, ಪರಿಕ್ಷೇಶಃ = ಪೀಡೆಯುಂ, ಅರ್ಥಹರಣಂವಾ = ಅರ್ಥಮಂಕೊಳ್ವುದುಮೇಣ್, ದಂಡಪಾರುಷ್ಯಂ = ಬೆಟ್ಟಿತ್ತಪ್ಪದಂಡಸ್ವರೂಪಂ || ದೋಷಾನುರೂಪಮಂದಂಡಪಾರುಷ್ಯಮೆಂಬುದುತಾತ್ಪರ್ಯಂ || ವ್ಯಸನಂಗಳಿಂದಂಕೇಡಕ್ಕುಮೆಂಬುದುತ್ತವಾಕ್ಯಂ :

ಏಕೇನಾಪಿವ್ಯಸನೇನೋಪಹತಶ್ಚತುರಂಗೋಪಿರಾಜಾವಿನಶ್ಯತಿ, ಕಿಂ

ಪುನರ್ನಾಷ್ಟಾದಶಭಿಃ || ೩೨ || ೬೦೩ ||

ಅರ್ಥ : ಏಕೇನ = ಒಂದು, ವ್ಯಸನೇನಾಪಿ = ವ್ಯಸನದತ್ತಣಿಂದಮುಂ, ಉಪಹತಃ = ಕೆಡಿಸಲ್ಕೆಪಟ್ಟಂ, ಚತುರಂಗೋಪಿ = ಚರುತಂಗಬಲಮನುಳ್ಳನಾಗಿಯುಂ, ರಾಜಾ = ಅರಸಂ, ವಿನಶ್ಯತಿ = ಕೆಡುಗುಂ, ಅಷ್ಟಾದಶಬಿಃ = ಪದಿನೆಂಟು[16]ದೋಷಂಗಳಿಂದಮುಂ, ಕಿಂಪುನಃ, ಏಂ = ಕೆಡನೇ || ವ್ಯಸನಗೊಳಾವುದುಮಾಗವೇಡೆಂಬುದುತಾತ್ಪರ್ಯಂ ||

ಇತಿವ್ಯಸನಸಮುದ್ದೇಶಃ೧೫[17]

ಸಮುದ್ದೇಶದವಾಕ್ಯ || ೩೧ || ಒಟ್ಟು || ೬೦೩ ||

—-

೨೬. ಪ್ರಜೆಗಳಏಳಿಗೆಯುನಿಶ್ಚಯವಾಗಿಯೂಸ್ವಾಮಿಯಎರಡನೆಯಭಂಡಾರ. ಆದ್ದರಿಂದಅದನ್ನುಯುಕ್ತಿಯಿಂದಉಪಯೋಗಿಸಿಕೊಳ್ಳಬೇಕು.

೨೭. ಅರಸುಇತರರಿಂದತೆಗೆದುಕೊಂಡತೃಣವೂ, ಇತರರಿಂದಹೊನ್ನಾಗುತ್ತದೆ. ಆದರೆಅದುಅದಕ್ಕೂಮೊದಲುಸಂಪಾದಿಸಿದಅರ್ಥವನ್ನುಕಳೆದುಕೊಳ್ಳುವದಕ್ಕೂಕಾರಣವಾಗುತ್ತದೆ.

೨೮. ವಾಕ್ಪುರುಷ್ಯವುಶಸ್ತ್ರಪಾತದಹೊಡೆತಕ್ಕಿಂತತೀಕ್ಷ್ಣವಾದುದು.

೨೯. ಜಾತಿವಯಸ್ಸು, ಚಾರಿತ್ರ್ಯ, ವಿದ್ಯೆ, ಐಶ್ವರ್ಯಗಳಿಗೆಉಚಿತವಲ್ಲದಮಾತುವಾಕ್ಪುರುಷ್ಯ.

೩೦. ಹೆಂಡತಿಗಾಗಲಿಮಕ್ಕಳಿಗಾಗಲಿಭೃತ್ಯರಿಗಾಗಲಿಆಡಿದಮಾತುಹೃದಯದಲ್ಲಿನಟ್ಟಶಲ್ಯದಂತೆನೋವನ್ನುಂಟುಮಾಡುತ್ತದೆ. ಆದ್ದರಿಂದದುಃಖಿತರಾಗದಹಾಗೆನುಡಿದುವಿನಯವನ್ನುಕಲಿಸಬೇಕು.

೩೧. ದೋಷವಿಲ್ಲದೆಮಾಡುವವಧೆಯೂಹಿಂಸೆಯೂಧನದಅಪಹರಣವೂದಂಡಪಾರುಷ್ಯ.

೩೨. ಚತುರಂಗಬಲವುಳ್ಳರಾಜನೂಸಹಒಂದೇಒಂದುವ್ಯಸನದಿಂದನಾಶಹೊಂದುತ್ತಾನೆ. ಹದಿನೆಂಟುದೋಷಗಳಿದ್ದಲ್ಲಿನಶಿಸಿಹೋಗದೆಇರುತ್ತಾನೆಯೆ?

—-

 

[1]ಮೈ. ಪ್ರತ್ಯಾವರ್ತಯತ್ಯೇನಂಶ್ರೇಯಸಃ, ಚೌ, ವ್ಯಸ್ಯತಿಪುರುಷಂ.

[2]ಮೈ., ಚೌ. ಸೌಮ್ಯ.

[3]ಮೈ., ಚೌ. ಈಮತ್ತುಮುಂದಿನವಾಕ್ಯವೂಕೂಡಿಒಂದೇಆಗಿವೆ.

[4]ಮೈ., ಮಾತರ್ಯಪಿ.

[5]ಮೈ. ದೀವ್ಯತ್ಯೇವ

[6]ಚೌ. ವೃಥಾಟ್ಯಾ

[7]ಈವಾಕ್ಯವುಸಂದರ್ಭಕ್ಕೆಹೊಂದುವಂತಿಲ್ಲ.

[8]ಮೈ. ದಾಂಡಕ್ಯ;  ಚೌ. ದಾಂಡಿಕ್ಯ.

[9]ರಾವಣನಕಥೆಜನಜನಿತವಾಗಿದೆ. ಆದರೆದಂಡಕನಮಗನನ್ನುಗುರುತಿಸುವುದುಕಠಿಣ.

[10]ಇಲ್ಲಿನಅನವಶ್ಯಕವಿದೆ. ಇದುಟೀಕೆಯಲ್ಲಿಲ್ಲ.

[11]ಮೈ. ಅತ್ಯಾಸಾದನಾತ್ಚಾ. ಅಶನಾತ್.

ಈಪಾಠಗಳಲ್ಲಿಗಮನಾರ್ಹವಾದಅಂತರವಿದೆ. ಅಗಸ್ತ್ಯನುತಿಂದುದರಿಂದಎಂಬುದುಚೌ. ಪಾಠದಅರ್ಥ. ಟೀಕಾಕಾರನುಅಗಸ್ತ್ಯನನ್ನುಅವಹೇಳನಮಾಡಿದುದರಿಂದಎಂದುಅರ್ಥಮಾಡಿದ್ದಾರೆ.

ಇಲ್ಲಿವಾತಾಪಿಇಲ್ವಲರಕಥೆಯಉಲ್ಲೇಖವಿದೆ. ಈಈರ್ವರುಅಸುರುರುಋಷಿಗಳನ್ನುಊಟಕ್ಕೆಕರೆದು, ವಾತಾಪಿಮಾಯೆಯಿಂದಭೋಜನರೂಪದಲ್ಲಿಋಷಿಗಳಹೊಟ್ಟೆಯಲ್ಲಿಹೊಕ್ಕುಇಲ್ವಲನಕರೆಯಿಂದಅವರಹೊಟ್ಟೆಸೀಳಿಹೊರಬರುತ್ತಿದ್ದನೆಂದೂಹೀಗೆಋಷಿಗಳನ್ನುಕೊಂದುಸಂತೋಷಪಡುತ್ತಿದ್ದರೆಂದೂಕತೆಯಿದೆ. ಆದರೆಒಂದುದಿನಅಗಸ್ತ್ಯನಊಟಮುಗಿದುಇಲ್ವಲನುವಾತಾಪಿಯನ್ನುಹೊರಕರೆದಾಗಅವನುಬರಲಿಲ್ಲವಂತೆ. ವಾತಾಪಿಜೀರ್ಣನಾದನುಎಂದುಅಗಸ್ತ್ಯಹೇಳಿದನಂತೆ. ಅಲ್ಲಿಗೆಈಅಸುರರಅಂತ್ಯವಾಯಿತು.

ವಿಶೇಷವೆಂದರೆಈವಾತಾಪಿಯಿಂದಲೇಇಂದಿನಬಾದಾಮಿಗೆವಾತಾಪಿಎಂಬಹೆಸರುಬಂದಿತೆಂದುಪ್ರತೀತಿ.

[12]ಚೌ. ದಲ್ಲಿಈವಾಕ್ಯವನ್ನುಎರಡಾಗಿವಿಭಜಿಸಲಾಗಿದೆ.

[13]ಮೈ. ಅಪಹಾರಃ. ಚೌ. ಅಪಾಯಃ.

[14]ಚೌ. ಜ್ಞಾನಿ.

[15]ಚ್ಛಎಂದಿರಬೇಕು.

[16] ‘ಹದಿನೆಂಟು’ ಬಹಳಷ್ಟುಎಂಬಅರ್ಥದಲ್ಲಿ

[17]ಇದು೧೬ಎಂದಿರಬೇಕು.