ಸಪ್ತಾಂಗದೊಳಗೆಸ್ವಾಮಿಯಲಕ್ಷಣಮಂಪೇಳ್ವುದುತ್ತರವಾಕ್ಯಂ :

ಧಾರ್ಮಿಕಃಕುಲಾಚಾರಾಭಿಜನವಿಶುದ್ಧಃಪ್ರತಾಪಮಾನ್ನಯಾನುಗತವೃತ್ತಿಶ್ಚಸ್ವಾಮೀ || || ೬೦೪ ||

ಅರ್ಥ : ಧಾರ್ಮಿಕಃ = ಧರ್ಮದೊಳ್ನೆಗಳ್ವ, ಕುಲ = ಕುಲಮುಂ, ಆಚಾರ = ನೆಗಳ್ತೆಯುಂ, ಆಭಿಜನ = ಪರಿವಾರ (ಅನ್ವಯ) ಮುಮೆಂಬಿವರಿಂ, ಶುದ್ಧಃ = ಶುದ್ಧಮಪ್ಪಂ, ಪ್ರತಾಪವಾನ್ = ಪ್ರತಾಪಮನುಳ್ಳಂ, ನಯಾನುಗತವೃತ್ತಿಶ್ಚ = ನೀತಿಯೊಳ್ಕೂಡಿದನೆಗಳ್ತೆಯನುಳ್ಳನುಂ, ಸ್ವಾಮೀ = ಸ್ವಾಮಿಯೆನಿಸಿಕೊಂಬಂ || ಈಗುಣಂಗಳಿಲ್ಲದಂಸ್ವಾಮಿಯಲ್ಲೆಂಬುದುತಾತ್ಪರ್ಯಂ || ಪ್ರಕಾರಾಂತರದಿಂಸ್ವಾಮಿಯಲಕ್ಷಣಮಂಪೇಳ್ವುದುತ್ತರವಾಕ್ಯಂ :

ಕೋಪಪ್ರಸಾದಯೋಶ್ಚಸ್ವತಂತ್ರ[1]ಆತ್ಮಾತಿಶಯವದ್ಧನಂವಾಯಸ್ಯಾಸ್ತಿಸ್ವಾಮೀ || || ೬೦೫ ||

ಅರ್ಥ : ಚ = ಮತ್ತ, ಕೋಪಪ್ರಸಾದಯೋಃ = ಕೋಪಪ್ರಸಾದಂಗಳಲ್ಲಿ, ಸ್ವತಂತ್ರಃ = ಸ್ವಾಧೀನಮಪ್ಪ, ಆತ್ಮಾ = ಸ್ವಭಾವವು, ಅತಿಶಯವತ್ = ಮಿಗಿಲಪ್ಪ, ಧನಂವಾ = ಧನವುಪೆರ್ಚುವುದುಮೇಣ್, ಯಸ್ಯಾಸ್ತಿ = ಆವನೋರ್ವಂಗುಂಟು (ಸಃ = ಆತಂ) ಸ್ವಾಮೀ = ಸ್ವಾಮಿಯೆಂಬೊ || ಸ್ವಾಮಿಯೇಪ್ರಧಾನನೆಂಬುದುತ್ತರವಾಕ್ಯ :

ಸ್ವಾಮಿಮೂಲಾಃಸರ್ವಾಃಪ್ರಕೃತಯೋಭವಂತ್ಯಭಿಪ್ರೇತಪ್ರಯೋಜನಾಯನಾಸ್ವಾಮಿಕಾಃ || || ೬೦೬ ||

ಅರ್ಥ : ಸ್ವಾಮಿಮೂಲಾಃ = ಸ್ವಾಮಿಯನೇಪ್ರಧಾನಮಾಗುಳ್ಳವು, ಸರ್ವಾಃ = ಎಲ್ಲಾ, ಪ್ರಕೃತಯಃ = ಪ್ರಕೃತಿಗಳು, ಅಭಿಪ್ರೇತಪ್ರಯೋಜನಾಯ = ಅಬಿಷ್ಟವಹಪ್ರಯೋಜನನಿಮಿತ್ತಮಾಗಿ, ಭವಂತಿ = ಅಹರು, ಅಸ್ವಾಮಿಕಾಃ = ಒಡೆಯನಿಲ್ಲದವರು, ನಭವಂತಿ = ಆಗರು || ಪರಿವಾರಂಗಳ್ಸ್ವಾಮಿಯಿಲ್ಲದಾವನುಂಸಮಗ್ರನಲ್ಲೆಂಬುದುತಾತ್ಪರ್ಯಂ ||

—-

. ಧಾರ್ಮಿಕನು, ಪರಿಶುದ್ಧವಾದಕುಲಆಚಾರಬಂದುವರ್ಗವುಳ್ಳವನುಪ್ರತಾಪಶಾಲಿನೀತಿಯುಕ್ತವಾದನಡತೆಯುಳ್ಳವನುಸ್ವಾಮಿಯು.

. ಕೋಪ. ಅನುಗ್ರಹಗಳಲ್ಲಿಸ್ವತಂತ್ರನು, ತನ್ನವೈಭವದಂತೆಧನವನ್ನುಹೆಚ್ಚಿಸಿಕೊಳ್ಳಬಲ್ಲವನುಸ್ವಾಮಿಯು.

. ಸ್ವಾಮಿಯಮೂಲಕವಾಗಿಯೇಪ್ರಜೆಗಳಿಗೆಪ್ರಯೋಜನಗಳೆಲ್ಲವೂಸಿದ್ಧಿಸುವವು. ಸ್ವಾಮಿಇಲ್ಲದಿದ್ದರೆಅವುಸಿದ್ಧಿಸುವುದಿಲ್ಲ.

—-

ಅಸ್ವಾಮಿಕಾಃಪ್ರಕೃತಯಃಸಮೃದ್ಧೋsಪಿನಿಸ್ತರಿತುಂಶಕ್ನುವಂತಿ || || ೬೦೭ ||

ಅರ್ಥ : ಅಸ್ವಾಮಿಕಾಃ = ಸ್ವಾಮಿಯಿಲ್ಲದೆಯಿದ್ದಂತವರ್ಗಳ್, ಪ್ರಕೃತಯಃ = ಪ್ರಕೃತಿಗಳ್, ಸಮೃದ್ಧೋಪಿ = ಪೆರ್ಚಿದೊರಾದೊಡಂ, ನಿಸ್ತರಿತುಂ = ನಿಲಲ್ಕೆ, ನಶಕ್ನುವಂತಿ = ಶಕ್ತರಾಗುತ್ತಿಹರಲ್ಲ ||

ಅಮೂಲೇಷುತರುಷುಕಿಂಕುರ್ಯಾನ್ಮಹಾನಪಿ[2]ಪುರುಷಪ್ರಯತ್ನಃ || || ೬೦೮ ||

ಅರ್ಥ : ಅಮೂಲೇಷು = ಬೇರಿಲ್ಲದ, ತರುಷು = ಮರಂಗಳೊಳ್, ಪುರುಷಪ್ರಯತ್ನಃ = ನಿಱೆರೆವುದುಮೊದಲಾಗೊಡೆಯಪುರುಷವ್ಯಾಪಾರಂ, ಮಹಾನಪಿ = ಮಹತ್ತಾದೊಡಂ, ಕಿಂಕುರ್ಯಾತ್ = ಏನಮಾಡುವುದು || ಅಸತ್ಯದದೋಷಮಂಪೇಳ್ವುದುತ್ತರವಾಕ್ಯಂ :

ಅಸತ್ಯವಾದಿನೋನಶ್ಯಂತಿಸರ್ವೇಗುಣಾಃ || || ೬೦೯ ||

ಅರ್ಥ : ಅಸತ್ಯವಾದಿನಃ = ಪುಸಿನುಡಿವನ, ಸರ್ವೇಗುಣಾಃ = ಎಲ್ಲಾಗುಣಂಗಳುಂ, ನಶ್ಯಂತಿ = ಕಿಡುಗುಂ || ಮಱೆಯಮಾಯೆಯದೋಷಮಂಪೇಳ್ವುದುತ್ತರವಾಕ್ಯ :

ವಂಚಕೇಷುಸ್ವಾಮಿಷು[3]ಪರಿಜನೋsಪಿಚಿರಮಾಯುಃ || || ೬೧೦ ||

ಅರ್ಥ : ವಂಚಕೇಷುಸ್ವಾಮಿಷು = ವಂಚಿಸುವವಸುಗಳೊಳ್, ನ = ಇಲ್ಲ, ಪರಿಜನಃ = ಪರಿವಾರಜನಂ, ಚಿರಂ = ಪಲಕಾಲಮಪ್ಪ, ಆಯುರಪಿ = ಆಯುಷ್ಯಮುಂ, ನ = ಇಲ್ಲ || ದಾನಗುಣಮಂಪೇಳ್ವುದುತ್ತರವಾಕ್ಯಂ :

ಪ್ರಿಯೋಲೋಕಾನಾಂಯೋದದಾತ್ಯಥಂ || || ೬೧೧ ||

ಅರ್ಥ : ಸಃ = ಆತಂ, ಪ್ರಯಃ = ಒಳ್ಳಿದಂ, ಲೋಕಾನಾಂ = ಜನಂಗಳ್ಗೆ, ಯಃ = ಅವನೋರ್ವಂ, ಅರ್ಥಂ = ಅರ್ಥಮಂ, ದದಾತಿ = ಕೊಡುಗುಂ || ತ್ಯಾಗಗುಣಂಎಲ್ಲಾಗುಣಂಗಳಿಂದಧಿಕಮೆಂಬುದುತಾತ್ಪರ್ಯಂ ||

ಪ್ರತ್ಯುಪಕರ್ತುರುಪಕಾರಸ್ಸವೃದ್ಧಿಕೋsರ್ಥನ್ಯಾಸಇವ[4] || || ೬೧೨ ||

ಅರ್ಥ : ಪ್ರತ್ಯುಪಕರ್ತುಃ = ಪ್ರತ್ಯುಪಕಾರವಮಾಡುವಂಗೆ, ಉಪಕಾರಃ = ಮಾಡಿದಉಪಕಾರವು, ಸವೃದ್ಧಿಕಃ = ಬಡ್ಡಿಗೆಗೊಟ್ಟ, ಅರ್ಥನ್ಯಾಸಇವ = ಅರ್ಥದಹಾಂಗೆ ||

ದಾತಾಮಹಾನ್ಯಸ್ಯನಾಸ್ತಿಪ್ರತ್ಯಾಶೋಪಹತಃಚೇತಃ || ೧೦ || ೬೧೩ ||

ಅರ್ಥ : ಸಃ = ಆತಂ, ಮಹಾನ್‌ = ಪಿರಿಯನಪ್ಪಂ, ದಾತಾ = ದಾನಿ, ಯಸ್ಯ = ಅವನೋರ್ವಂಗೆ, ಪ್ರತ್ಯಾಶೋಪಹತಂ = ಪ್ರತ್ಯುಪಕಾರಮಂ (ಪ್ರತ್ಯುಪಕಾರದಆಸೆಯಿಂದಬಾಧಿಸಲ್ಪಟ್ಟುದು), ಬಯಸುವುದರಿಂಕದಡಿದ, ಚೇತಃ = ಮನಸ್ಸು, ನಾಸ್ತಿ = ಇಲ್ಲ || ಮಹಾದಾಣಿಕಾರ್ಯಮಂಕುಱಿತುಮಾಳ್ಪನಲ್ಲೆಂಬುದುತಾತ್ಪರ್ಯಂ || ಪ್ರತ್ಯುಪಕಾರಮಂಮಾಡವೇಳ್ಕುಮೆಂಬುದುತ್ತರವಾಕ್ಯಂ :

ತಜ್ಜನ್ಮಾಂತರೇಷುಕೇಷಾಮೃಣಂಏಷಾಮಪ್ರತ್ಯುಪಕಾರಂಪರಾರ್ಥಾನುಭವನಂ || ೧೧ || ೬೧೪ ||

ಅರ್ಥ : ತತ್ = ಅದು, ಜನ್ಮಾಂತರೇಷು = ಮರುಭವಂಗಳೊಳ್, ಕೇಷಾಂ = ಆರ್ಗೆ, ಋಣಂ = ಸಾಲಂ, ನ = ಆಗದು, ಏಷಾಂ = ಆರ್ಕೆಲಂಬರ್ಗೆ, ಅಪ್ರತ್ಯುಪಕಾರಂ = ಪ್ರತ್ಯುಪಕಾರಮಲ್ಲದುದು = ಪರಾರ್ಥಾನುಭವನಂ = ಪೆಱರರ್ಥದುಣಿಸು || ಪ್ರತ್ಯುಪಕಾರಮಂಮಾಡಲಾರ್ಪಂಪರಾರ್ಥಮನುಣ್ಬುದೆಂಬುದುತಾತ್ಪಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಕಿಂತಯಾಗವಾಯಾಕ್ಷರತಿಗರ್ಭಿಣೀಇವ[5] || ೧೨ || ೬೧೫ ||

ಅರ್ಥ : ಕಿಂ = ಏನ್, ತಯಾಗವಾ = ಆಆವಿಂ, ಯಾ = ಆವುದೊಂದು, ನಕ್ಷರತಿ = ಕಱೆವುದಲ್ಲ, ಕ್ಷೀರಂ = ಪಾಲಂ, ಗರ್ಭಿಣೀವ = ಗರ್ಭಿಣಿಯಂತೆನೆಮೇಣ್, ನ = ಅಲ್ಲ || ಇಂತಪ್ಪಸ್ವಾಮಿಯಪ್ರಸಾದಂಪುರುಳಿಲ್ಲೆಂಬುದುತ್ತರವಾಕ್ಯಂ :

—-

. ಸ್ವಾಮಿಯಿಲ್ಲದಪ್ರಜೆಗಳುಸಮೃದ್ಧಿಯುಳ್ಳವರಾದರೂನಿಲ್ಲಲುಶಕ್ತರಾಗಿರುವುದಿಲ್ಲ.

. ಬೇರಿಲ್ಲದಮರಗಳಿಗೆನೀರೆರೆಯುವುದೇಮೊದಲಾದಹೆಚ್ಚಿನಪುರುಷಪ್ರಯತ್ನವುಏನುಮಾಡಬಲ್ಲದು?

. ಅಸತ್ಯವಾದಿಗಳಎಲ್ಲಗುಣಗಳುನಶಿಸಿಹೋಗುತ್ತವೆ.

. ವಂಚಿಸುವಸ್ವಾಮಿಯಿದ್ದಲ್ಲಿಪರಿಜನರುಯಾರೂಚಿರಕಾಲಬದುಕಲಾರರು.

. ಜನಗಳಿಗೆಧನವನ್ನುಕೊಡುವವನುಪ್ರಿಯನಾಗುತ್ತಾನೆ.

. ಪ್ರತ್ಯುಪಕಾರಮಾಡುವವನಿಗೆಉಪಕಾರಮಾಡುವದುಬಡ್ಡಿಗಾಗಿಇಟ್ಟಹಣದಹಾಗೆ.

೧೦. ಪ್ರತ್ಯುಪಕಾರದಆಸೆಯಿಲ್ಲದೆದಾನಮಾಡುವವನುಶ್ರೇಷ್ಠನು.

೧೧. ಪ್ರತ್ಯುಪಕಾರಮಾಡದೆಇತರರಧನವನ್ನುಅನುಭವನಿಸುವದುಜನ್ಮಾಂತರದಲ್ಲಿಯಾರಿಗೋತೀರಿಸಬೇಕಾದಋಣವಲ್ಲವೆ?

೧೨. ಹಾಲುಕರೆಯದ, ಗರ್ಭಿಣಿಯೂಆಗದಹಸುವಿನಿಂದಏನುಪ್ರಯೋಜನ?

—-

ಕಿಂತೇನಸ್ವಾಮಿಪ್ರಸಾದೇನಯೋಪೂರಯತ್ಯಾಶಾಃ || ೧೩ || ೬೧೬ ||

ಅರ್ಥ : ಕಿಂ = ಏನ್, ತೇನಸ್ವಾಮಿಪ್ರಸಾದೇನ = ಆಸ್ವಾಮಿಯಪ್ರಸಾದಾದಿಂ, ಯಃ = ಆವುದೊಂದು, ನಪೂರಯತಿ = ತೀರ್ಚುವುದಲ್ತು (ತುಂಬದು) ಆಶಾಃ = ಬಯಕೆಗಳಂ || ಅಭಿಜನಶುದ್ಧನಲ್ಲದುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಕ್ಷುದ್ರಪರಿಷತ್ಕೋಮಹಾನಪಿಸರ್ಪವಾನ್ಆಶ್ರಯಇವಕಸ್ಯಾಪಿಭವತಿಸೇವ್ಯಃ || ೧೪ || ೬೧೭ ||

ಅರ್ಥ : ಕ್ಷುದ್ರಪರಿಷತ್ಕಃ = ದುಷ್ಟಪರಿಗ್ರಹ (ಸಭೆ) ಮನುಳ್ಳಂ, ಮಹಾನಪಿ = ಮಹಾರಾಜನಾದೊಡೆಯು, ಸರ್ಪವಾನ್ = ಪಾವನುಳ್ಳ, ಆಶ್ರಯಇವ = ಗೃಹದಂತೆ, ಕಸ್ಯಾಪಿ = ಆವಂಗಂ, ಸೇವ್ಯಃ = ಸೇವ್ಯಂ, ನಭವತಿ = ಆಗಂ || ದುಷ್ಟಪರಿಗ್ರಹನುಳ್ಳನಾರುಂಪೊರ್ದರೆಂಬುದುತಾತ್ಪರ್ಯಂ || ಹಿತಮನಱಿಯದುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಅಕೃತಜ್ಞಸ್ಯವ್ಯಸನೇಷುಸಂತಿಸಹಾಯಾಃ || ೧೫ || ೬೧೮ ||

ಅರ್ಥ : ಅಕೃತಜ್ಞಸ್ಯ = ಮಾಡಿದನಱಿಯದಂಗೆ, ವ್ಯಸನೇಷು = ಎಡರ್ಗಳೊಳ್ (ದುಃಖ), ಸಹಾಯಾಃಸಹಾಯರ್, ನಸಂತಿ = ಇಲ್ಲ || ಮಾಡಿದುದನಱಿಯದಂಗೆಬೇಸಱಿಂಬುದುತಾತ್ಪರ್ಯಂ || ಶಿಷ್ಟರಿಂತಪ್ಪರಂಪೊರ್ದರೆಂಬುದತ್ತರವಾಕ್ಯಂ :

ಅವಿಶೇಷಜ್ಞಃಶಿಷ್ಟೈರ್ನಾಶ್ರಿಯತೇ || ೧೬ || ೬೧೯ ||

ಅರ್ಥ : ಅವಿಶೇಷಜ್ಞಃ = ವಿಶೇಷಮನಱಿಯದಂ, ಶಿಷ್ಟೈಃ = ಶಿಷ್ಟರಿಂ(ಸಜ್ಜನರಿಂ), ನಾಶ್ರಿಯತೇ = ಪೊರ್ದಲ್ಪಡಂ || ಗುಣವಿಶೇಷಮನಱಿಯದಂಸೇವ್ಯನಲ್ಲೆಂಬುದುತಾತ್ಪರ್ಯಂ || ತನ್ನನೇಪೊರೆವುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಆತ್ಮಂಭರೀಕಲತ್ರೇಣಾಪಿತ್ಯಜ್ಯತೇ || ೧೭ || ೬೨೦ ||

ಅರ್ಥ : ಆತ್ಮಂಭರೀ = ತನ್ನಹೊಟ್ಟೆಯಪೊರೆವಂ, ಕಲತ್ರೇಣಾಪಿ = ಸ್ತ್ರೀಯಿಂದಮುಂ, ತ್ಯಜ್ಯತೇ = ಬಿಡಲ್ಪಡುವಂ || ಪಿರಿಯವಂತನ್ನಸುಖಮಂನೋಡಲಾಗದೆಂಬುದುತಾತ್ಪರ್ಯಂ || ಉತ್ಸಾಹಮಿಲ್ಲದುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಅನುತ್ಸಾಹಃಸರ್ವವ್ಯಸನಾನಾಮಾಗಮನದ್ವಾರಃ || ೧೮ || ೬೨೧ ||

ಅರ್ಥ : ಅನುತ್ಸಾಹಃ = ಉತ್ಸಾಹ (ಉದ್ಯೋಗಮಿಲ್ಲದುದು) ಮಿಲ್ಲದುದೇ, ಸರ್ವವ್ಯಸನಾನಾಂ = ಎಲ್ಲದುಃಖಂಗಳ್ಗೆ, ಆಗಮನದ್ವಾರಂ = ಬರ್ಪಬಟ್ಟೆ || ಉತ್ಸಾಹದಗುಣಮಂಪೇಳ್ವುದುತ್ತರವಾಕ್ಯಂ :

ಶೌರ್ಯಮಹರ್ಷಃ[6]ಶೀಘ್ರಕಾರಿತ್ವಂತತ್ಕರ್ಮ[7]ಪ್ರವೀಣತ್ವಮಿತ್ಯುತ್ಸಾಹಗುಣಾಃ || ೧೯ || ೬೨೨ ||

ಅರ್ಥ : ಶೌರ್ಯಂ = ವೀರತನಮುಂ, ಅಹರ್ಷಃ = ಪುರುಡು (ಕೋಪ) ತನಮುಂ, ಶೀಘ್ರಕಾರಿತ್ವಂ = ಬೇಗಂಮಾಳ್ವಸ್ವಭಾವಮುಂ, ತತ್ಕರ್ಮಪ್ರವೀಣತ್ವಮಿತಿ = ಮಾಳ್ಪವ್ಯಾಪಾರಂಗಳೊಳಪ್ಪಪ್ರೌಢತೆಯುಮೆಂದಿಂತುಂ, ಉತ್ಸಾಹಗುಣಾಃ = ಉತ್ಸಾಹಗುಣಂಗಳ್ || ಉತ್ಸಾಹಮಿಲ್ಲದಂಗಾವಕಾರ್ಯಗಳುಮಿಲ್ಲೆಂಬುದುತಾತ್ಪರ್ಯಂ || ಇಂತಪ್ಪಂಬೇಗಕಿಡುವನೆಂಬುದುತ್ತರವಾಕ್ಯ :

ಅನ್ಯಾಯವೃತ್ತೇರ್ನಚಿರಂಸಂಪದಃ || ೨೦ || ೬೨೩ ||

ಅರ್ಥ : ಅನ್ಯವಾಯವೃತ್ತೇಃ = ಅನ್ನೆಯದಿಂನೆಗಳ್ವನ, ಸಂಪದಃ = ಲಕ್ಷ್ಮಿಗಳ್, ಚಿರಂ = ಪಲಕಾಲಂ, ನ = ಇಲ್ಲ || ಇದನೇವಿಶೇಷಿಸಿಪೇಳ್ವುದುತ್ತರವಾಕ್ಯಂ :

ಯತ್ಕಿಂಚನಾಕಾರೀಸ್ಟೈಃಪರೈರ್ವಾಹನ್ಯತೇ || ೨೧ || ೬೨೪ ||

ಅರ್ಥ : ಯತ್ನಿಂಚನಕಾರೀ = ಏನಾನುಮೊಂದಂನ್ಯಾಯಮಂ[8]ಮಾರ್ಪ್ಪಂ, ಸ್ಟೈಃ = ತನ್ನವರಿಂದಮುಂ, ಪರೈರ್ವಾ = ಪೆಱರಿಂಮೇಣ್, ಹನ್ಯತೇ = ಕೊಲ್ಲಲ್ಪಡುಗುಂ || ನಿಯಮಂಮೀಱುವನನಾರುಂಸೈರಿಸರೆಂಬುದುತಾತ್ಪರ್ಯಂ || ಆಧಿಪತ್ಯದಲಕ್ಷಣಮಂಪೇಳ್ವುದುತ್ತರವಾಕ್ಯ :

—-

೧೩. ಯಾವಆಶೆಯನ್ನೂತೀರಿಸದಸ್ವಾಮಿಯಅನುಗ್ರಹದಿಂದಪ್ರಯೋಜನವೇನು?

೧೪. ನೀಚರಗುಂಪಿನೊಂದಿಗಿರುವವನುಎಷ್ಟುದೊಡ್ಡವನಾದರೂಹಾವುಸೇರಿಕೊಂಡಿರುವಮನೆಯಂತೆಯಾರೂಅವನನ್ನುಸೇವಿಸುದಿಲ್ಲ.

೧೫. ಕೃತಜ್ಞನಲ್ಲದವನಿಗೆಕಷ್ಟಕಾಲದಲ್ಲಿಯಾರಸಹಾಯವೂಸಿಗುವುದಿಲ್ಲ.

೧೬. ವಿಶೇಷಜ್ಞನಲ್ಲದವನನ್ನುಶಿಷ್ಟರುಯಾರೂಆಶ್ರಯಿಸುವುದಿಲ್ಲ.

೧೭. ತನ್ನಹೊಟ್ಟೆಯನ್ನುಮಾತ್ರಹೊರೆದುಕೊಳ್ಳುವವನನ್ನುಹೆಂಡತಿಯುಕೂಡತೊರೆದುಹೋಗುತ್ತಳೆ.

೧೮. ಉತ್ಸಾಹವಿಲ್ಲದುದೇಎಲ್ಲದುಃಖಗಳಿಗೆಕಾರಣವು.

೧೯. ಶೌರ್ಯ, ಅಮರ್ಷ, ಬೇಗಕೆಲಸಮಾಡುವದು, ತನ್ನಕೆಲಸದಲ್ಲಿಪ್ರವೀಣತೆ, ಇವುಉತ್ಸಾಹಗುಣಗಳು.

೨೦. ಅನ್ಯಾಯವಾಗಿವರ್ತಿಸುವವನಲ್ಲಿಸಂಪತ್ತುಬಹುಕಾಲಉಳಿಯದು.

೨೧. ಆಲೋಚಿಸಿದೆತೋರಿದ್ದನ್ನೇಮಾಡುವವನುತನ್ನವರಿಂದಾಗಲಿಇತರರಿಂದಾಗಲಿಹತ್ಯೆಗೆಗುರಿಯಾಗುವನು.

—-

ಆಜ್ಞಾಫಲಮೈಶ್ವರ್ಯಂ[9] || ೨೨ || ೬೨೫ ||

ಅರ್ಥ : ರಾಜಾಜ್ಞಾ = ಅರಸನಾಜ್ಞೆ, ಹಿ = ನೆಟ್ಟನೆ, ಸರ್ವೇಷಾಂ = ಎಲ್ಲರ್ಗಂ, ಅಲ್ಲಂಘ್ಯಪ್ರಕಾರಃ = ದಾಂಟಲ್ಬಾರದಕೋಂಟೆ || ಆಜ್ಞೆಯಿಲ್ಲದನೈಶ್ವರ್ಯಂಬಾರ್ತೆಯಲ್ಲೆಂಬುದುತ್ತರವಾಕ್ಯಂ :

ರಾಜಾಜ್ಞಾ ಹಿ ಸರ್ವೇಷಾಮಲಂಘ್ಯಪ್ರಾಕಾರಃ || ೨೩ || ೬೨೬ ||

ಅರ್ಥಃ ರಾಜಾಜ್ಞಾ = ಅರಸನಾಜ್ಞೆ, ಹಿ = ನೆಟ್ಟನೆ, ಸರ್ವೇಷಾಂ = ಎಲ್ಲರ್ಗಂ, ಅಲಂಘ್ಯಪ್ರಾಕಾರಃ = ದಾಂಟಲ್ಬಾರದ ಕೋಂಟೆ || ಆಜ್ಞೆಯಿಲ್ಲದನೈಶ್ವರ್ಯಂ ಬಾರ್ತೆಯಲ್ಲೆಂಬುದುತ್ತರವಾಕ್ಯಂ:

ಆಜ್ಞಾಭಂಗಕಾರಿಣಂಸುತಮಪಿಸಹೇತ್ || ೨೪ || ೬೨೭||

ಅರ್ಥ: ಆಜ್ಞಾಭಂಗಕಾರಿಣಂ = ಆಣೆಯಂ ವೀಱುವ, ಸುತಮಪಿ = ಮಗನುಮಂ ಮೇಣ್, ನ ಸಹೇತ್ = ಸೈರಿಸದಿರ್ಕೇ || ಆಣೆಯಂ ಮೀಱೆ ಸ್ನೇಹಾದಿಗಳಿಂ ಸೈರಿಸಲವ್ಯವಸ್ಥೆಯಕ್ಕುಮೆಂಬುದು ತಾತ್ಪರ್ಯಂ || ಆಜ್ಞೆಯಿಲ್ಲದಂಗೆ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ:

ಕಸ್ತಸ್ಯ ಚಿತ್ರಗತಸ್ಯ ಚ ರಾಜ್ಞೋ ಹಿ ವಿಶೇಷೋ ಯಸ್ಯಾಜ್ಞಾ ನಾಸ್ತಿ || ೨೫ || ೬೨೮ ||

ಅರ್ಥ : ಯಸ್ಯ = ಅವನೋರ್ವಂಗೆ, ಆಜ್ಞಾ = ಆಜ್ಞೆ, ನಾಸ್ತಿ = ಇಲ್ಲ, ತಸ್ಯ = ಆಅರಸಂಗಂ, ಚಿತ್ರಗತಸ್ಯ = ಚಿತ್ರಕ್ಕೆಸಂದ, ರಾಜ್ಞಶ್ಚ = ಅರಸಂಗಂ, ಹಿ = ನೆಟ್ಟನೆ, ಕಃ = ಆವುದು, ವಿಶೇಷಃ = ಭೇದಂ || ಮಾಱಾಣೆಯಿಟ್ಟೊಡೆದೋಷಮಂಪೇಳ್ವುದುತ್ತರವಾಕ್ಯಂ :

ರಾಜಾಜ್ಞಾವರುದ್ಧಸ್ಯತದಾಜ್ಞಾಪ್ರತಿಪಾದನೇನಉತ್ತಮಃ
ಸಾಹಸದಂಡಃ
[10] || ೨೬ || ೬೨೯ ||

ಅರ್ಥ : ರಾಜಾಜ್ಞಾವರುದ್ಧಸ್ಯ = ಅರಸನಾಣೆಯಂತನಗಿಡಲ್ಪಟ್ಟವಂಗೆ, ತದಾಜ್ಞಾಪ್ರತಿಪಾದನೇನ = ನಿರ್ನ್ನಯಮಾಎದೆಮಾಱಾಣೆಯಿಡದೆ, ಉತ್ತಮಃ = ಪಿರಿದಪ್ಪ, ಸಾಹಸದಂಡಃ = ಸಾಹಸಕ್ಕೆಮಾಳ್ಪದಂಡಮಕ್ಕುಂ || ಆಣೆಗೆನಿಲ್ವದಲ್ಲದೆಮಾಱಾಣೆಯನಿಡಲಾಗದೆಂಬುದುತಾತ್ಪರ್ಯಂ || ಬಱಿದಾಣೆಯಿಡುವುದಕ್ಕೆದಂಡಮಂಪೇಳ್ವುದುತ್ತರವಾಕ್ಯಂ :

ಸಂಬಂಧಾಭಾವೇತದ್ದಾತುಶ್ಚ[11] || ೨೭ || ೬೩೦ ||

ಅರ್ಥ : ಸಂಬಂಧಾಭಾವೇ = ಸಂಬಂಧಮಿಲ್ಲದಿರೆ, ತದ್ದಾತುಶ್ಚ = ಆಣೆಯಿಡುವಂಗಂಉತ್ತಮಸಾಹಸದಂಡಮಕ್ಕುಂ || ಇಂತಪ್ಪನುಡಿವೇಡೆಂಬುದುತ್ತರವಾಕ್ಯಂ :

ಪರಮರ್ಮಸ್ಪರ್ಶಕರಮಶ್ರದ್ಧೇಯಮಸತ್ಯಮತಿಮಾತ್ರಂವಚನಂನೋಭಾಷೇತ || ೨೮ || ೬೩೧ ||

ಅರ್ಥ : ಪರಮರ್ಮಸ್ಪರ್ಶಕರಂ = ಪೆಱರನೆಱನೆತ್ತುವುದುಮಂ, ಅಶ್ರದ್ಧೇಯಂ = ನಂಬಲ್ಪಾರದುದುಮಂ, ಅಸತ್ಯಂ = ಪುಸಿಯಪ್ಪುದಂ, ಅತಿಮಾತ್ರಂಚ = ಸಲ್ಲ (ಹಿರಿದಹಂಥಾ) ದುದುಮಂ, ವಚನಂ = ವಚನವನು, ನೋಭಾಷೇತ = ನುಡಿಯದಿರ್ಕೆ || ಇಂತಪ್ಪನುಡಿಗಳಿಂಗುಣಮಳಿಗುಮೆಂಬುದುತಾತ್ಪರ್ಯಂ || ಇಂತಪ್ಪುದುಬೇಡೆಂಬುದುತ್ತರವಾಕ್ಯಂ :

ವಿಷಮಾಚಾರಂ[12]ಷಾನಭಿಜಾತಂಭಜೇತ || ೨೯ || ೬೩೨ ||

ಅರ್ಥ : ವಿಷಮಾಚಾರಂ = ವಿಷಮವನಆಚಾರಮನುಳ್ಳವನನು, ಅನಭಿಜಾತಂಚ = ಅಕುಲೀನನನು, ನಭಜೇತ = ಸೇವಿಸಲಾಗದು || ನಿರ್ವಿಕಾರಮುಂಸದಾಚಾರಮುಮಾಗವೇಳ್ಕುಮೆಂಬುದುತಾತ್ಪರ್ಯಂ || ಸ್ವಾಮಿವಿಕಾರಿಯಾಗೆದೋಷಮಂಪೇಳ್ವುದುತ್ತರವಾಕ್ಯಂ :

ಪ್ರಭೌವಿಕಾರಿಣಿಕೋನಾಮವಿಕುರುತೇ || ೩೦ || ೬೩೩ ||

ಅರ್ಥ : ಪ್ರಭೌ = ಸ್ವಾಮಿಯು, ವಿಕಾರಿಣಿ = ವಿಕಾರಿಯಾಗುತ್ತಿರಲು, ಕೋನಾಮ = ಆವಂ, ನವಿಕುರುತೇ = ವಿಕಾರಮಂಮಾಡಂ||ಪ್ರಜೆಗಳರಸನಂನೋಡಿನಡೆವರೆಂಬುದುತಾತ್ಪರ್ಯಂ ||

—-

೨೨. ಆಜ್ಞೆಯಫಲವಾಗುಳ್ಳದ್ದುಐಶ್ವರ್ಯವು.

೨೩. ರಾಜಾಜ್ಞೆಯುಎಲ್ಲರಿಗೂದಾಟಲಾರದಕೋಟೆಯಗೋಡೆಇದ್ದಂತೆ.

೨೪. ಅಪ್ಪಣೆಯನ್ನುಮೀರುವಮಗನನ್ನೂಸಹಸಹಿಸಬಾರದು.

೨೫. ಆಜ್ಞೆಮಾಡಲುಬರದರಾಜನಿಗೂಚಿತ್ರದಲ್ಲಿರುವರಾಜನಿಗೂವ್ಯತ್ಯಾಸವೇನಿದೆ?

೨೬.೨೭. ಒಮ್ಮೆರಾಜಾಜ್ಞೆಯನ್ನುಮೀರಿದ್ದಕ್ಕೆಶಿಕ್ಷಿತನಾದವನುಪುನಃರಾಜಾಜ್ಞೆಭಂಗಮಾಡಿದರೆ, ಹಿಂದಿನಶಿಕ್ಷೆಯವಿವರವುದಂಡಾಧಿಕಾರಿಗೆತಿಳಿಯದೇಇದ್ದರೂ, ತಪ್ಪಿತಸ್ಥನಿಗೆಇನ್ನೂಹೆಚ್ಚಿನಕಠಿಣಶಿಕ್ಷೆಯನ್ನುವಿಧಿಸಬೇಕು.

೨೮.ಇತರರಮರ್ಮವನ್ನುತಟ್ಟುವ, ನಂಬುವದಕ್ಕೆಅಶಕ್ಯವಾದ, ಅಸತ್ಯವಾದಮತ್ತುಅತಿಯಾದಮಾತುಗಳನ್ನುಆಡಬಾರದು.

೨೯. ಸರಿಯಾದಆಚಾರವಿಲ್ಲದಹೀನಕುಲದವನನ್ನುಸೇವಿಸಲಾಗದು.

೩೦. ಪ್ರಭುವುವಿಕಾರಿಯಾಗಿರಲುಯಾರುತಾನೆವಿಕಾರವಾಗಿವರ್ತಿಸುವದಿಲ್ಲ?

—-

ಅಧರ್ಮಪರೇರಾಜ್ಞಿಕೋನಾಮನಾಧರ್ಮಪರಃ || ೩೧ || ೬೩೪ ||

ಅರ್ಥ : ರಾಜ್ಞಿ = ಅರಸಂ, ಅಧರ್ಮಪರೇ = ಪಾಪಪರನಾದೊಡೆ, ಕೋನಾಮ = ಆವಂ, ಅಧರ್ಮಪರಃ = ಪಾಪಪರಂ, ನ = ಅಲ್ಲ || ಅರಸುಮನ್ನಿಸದಿರಂಲೋಕಂಮನ್ನಿಸಲುಮಿಂತಕ್ಕುಮೆಂಬುದುತ್ತರವಾಕ್ಯಂ :

ರಾಜ್ಞಾವಜ್ಞಾತಃಸರ್ವೈರವಜ್ಞಾಯತೇಪೂಜಿತಂಪೂಜಯಂತಿಲೋಕಾಃ[13] || ೩೨ || ೬೩೫ ||

ಅರ್ಥ : ಯಃ = ಅವನೋರ್ವಂ, ರಾಜ್ಞಾ = ಅರಸನಿಂ, ಅವಜ್ಞಾತಃ = ಅವಮನ್ನಿಸೆಪಟ್ಟಂ, ಸಃ = ಆತಂಸರ್ವ್ವೆಃ = ಎಲ್ಲರಿಂಅವಜ್ಞಾಯತೇ = ಅವಮನ್ನಿಸಲ್ಪಡುವಂ, ಪೂಜಿತಂ = ಅರಸರಿಂಪೂಜಿಸಲ್ಪಟ್ಟನುಮಂ, ಪೂಜಯಂತಿ = ಪೂಜಿಸುವರ್, ಲೋಕಾಃ = ಜನಂಗಳ್ || ಅರಸನಿಂದಂಮಾಡವೇಳ್ಕುಮೆಂಬುದುತ್ತರವಾಕ್ಯಂ:

ಪ್ರಜಾಕಾರ್ಯಂಸ್ವಯಮೇವಪಶ್ಯೇತ್ || ೩೩ || ೬೩೬ ||

ಅರ್ಥ : ಪ್ರಜಾಕಾರ್ಯಂ = ಪ್ರಜೆಗಳಪ್ರಯೋಜನಮಂ, ಸ್ವಯಮೇವ = ತಾನೇ, ಪಶ್ಯೇತ್ = ನೋಡುಗೆ || ಅರಸೊಂದವಸರಮಂಕುಡುವೇಳ್ಕುಮೆಂಬುದುತ್ತರವಾಕ್ಯಂ :

ಯಥಾವಸರಮಪ್ರತಿಹಾರಸಂಗಂದ್ವಾರಂಕಾರಯೇತ್ || ೩೪ || ೬೩೭ ||

ಅರ್ಥ : ಯಥಾವಸರಂ = ತಕ್ಕವಸರದೊಳು, ಅಪ್ರತಿಹಾರಸಂಗಂ = ಪಡಿಹಾರರ್ಮಾಣಿಸದಂತು, ದ್ವಾರಂ = ಬಾಗಿಲು, ಕಾರಯೇತ್ = ಮಾಳ್ಕೆ || ಒರ್ಮೆಸರ್ವಾವಸರಮಂಮಾಡವೇಳ್ಕುಮೆಂಬುದುತಾತ್ಪರ್ಯ || ಅವಸರಮಂಕುಡದಿರ್ದೊಡೆದೋಷಮಂಪೇಳ್ವುದುತ್ತರವಾಕ್ಯಂ :

ದುರ್ದರ್ಶೋಹಿರಾಜಾಕಾರ್ಯಾಕಾರ್ಯವಿಪರ್ಯಾಸಂಆಸನ್ನೈಃಕಾರ್ಯತೇಅತಿಸಂದೀಯತೇದ್ವಿಷದ್ಭಿಃ || ೩೫ || ೬೩೮ ||

ಅರ್ಥ : ದುರ್ದರ್ಶಃ = ಕಾಣಬಾರದ, ರಾಜಾ = ಅರಸಂ, ಹಿ = ನಿಶ್ಚಯದಿಂ, ಕಾರ್ಯಕಾರ್ಯವಿಪಯಾಸಂ = ಕಾರ್ಯ-ಅಕಾರ್ಯಂಗಳವಿಪರೀತತೆಯಪ್ಪಂತು, ಆಸನ್ನೈಃ = ಸಮೀಪದಲಿರ್ದವರ್ಗಳಿಂ, ಕಾರ್ಯತೇ = ಮಾಡಲ್ಪಡುಗುಂ, ಅತಿಸಂದೀಯತೇಚ = ಕೆಡಿಸಲ್ಪಡುಗುಂ, ದ್ವಿಷದ್ಭಿಃ = ಪಗೆವರಿಂದಂ = ಸಕಲರಕಾಣಿಸಿಕೊಂಡೆಲ್ಲಾಕಾರ್ಯಾಕಾರ್ಯಂಗಳನಱಿವುದೆಂಬುದುತಾತ್ಪರ್ಯಂ || ದುರ್ಮಂತ್ರಿಹೃದಯಮಂಪೇಳ್ವುದುತ್ತರವಾಕ್ಯಂ :

—-

೩೧. ರಾಜನೇಅಧರ್ಮಪರನಾಗಿರುವಲ್ಲಿಯಾರುತಾನೇಧರ್ಮಪರರಾಗಿದ್ದಾರು?

೩೨. ರಾಜನಿಂದಅವಮಾನಿತನಾದವನನ್ನುಎಲ್ಲರೂಅವಮಾನಿಸುತ್ತಾರೆ. ರಾಜನಿಂದಪೂಜಿತನಾದವನನ್ನುಎಲ್ಲರೂಪೂಜಿಸುತ್ತಾರೆ.

೩೩. ಪ್ರಜಾಕಾರ್ಯಗಳನ್ನುರಾಜನುತಾನೇನೋಡಿಕೊಳ್ಳಬೇಕು.

೩೪. ಸಮಯಾನುಸಾರವಾಗಿಆಗಾಗ್ಗೆಪ್ರತೀಹಾರಿಗಳಅಡ್ಡಿಯಿಲ್ಲದಂತೆ, ಬಾಗಿಲನ್ನುತೆರದಿಟ್ಟಿರಬೇಕು.

೩೫. ಸಾಮಾನ್ಯಪ್ರಜೆಗಳುಕಾಣುವದಕ್ಕೆಅವಕಾಶವಿಲ್ಲದರಾಜನನ್ನುಸಮೀಪವರ್ತಿಗಳುಕಾರ್ಯದಲ್ಲಿವಿಪರ್ಯಾಸಗೊಳ್ಳುವಂತೆಮಾಡುತ್ತಾರೆ. ಶತ್ರುಗಳುಮೋಸಗೊಳಿಸುತ್ತಾರೆ.

—-

 

[1]ಮೈ. ಸ್ವತಂತ್ರತಾ.

[2]ಮೈ. ಚೌ. ಕುರ್ಯಾತ್ಪುರುಷಪ್ರಯತ್ನಃ

[3]ಮೈ. ಚೌ. ಗಳಲ್ಲಿಸ್ವಾಮಿಷುಎಂಬಪದವಿಲ್ಲ.

[4]ಈಮತ್ತುಮುಂದಿನವಾಕ್ಯವುಮೈ. ಚೌ. ಗಳಲ್ಲಿಹಿಂದುಮುಂದಾಗಿವೆ. ಮೈ. ದಲ್ಲಿಒಂದುಹೆಚ್ಚಿನವಾಕ್ಯವಿದೆ.

[5]ಮೈ., ಚೌ. ವಾ

[6]ಮೈ. ಚೌ., ಅಮರ್ಷ. ಇದೇಸರಿಯಾದಪಾಠ.

[7]ಚೌ., ಸತ್ಕರ್ಮ.

[8]ಏನಾನುಮೊಂದನ್ಯಾಯಮಂಎಂದಿರಬೇಕು.

[9]ಈವಾಕ್ಯದನಂತರಚೌ. ದಲ್ಲಿಇನ್ನೆರಡುಹೆಚ್ಚಿನವಾಕ್ಯಗಳಿವೆ.

[10]ಚೌ. ದಲ್ಲಿಸಾಹಸದಂಡಃಅಂದರೆಸಾವಿರಪಣಗಳದಂಡಎಂದುಅದರಲ್ಲಿಯಟೀಕೆಯಲ್ಲಿವಿವರಿಸಲಾಗಿದೆ. ಸಾಹಸಎಂದರೆಅಪರಾಧ, ಸಾಹಸದಂಡಎಂದರೆಅಪರಾಧಕ್ಕೆತಕ್ಕತಂಡಎಂದೂಅರ್ಥವಾಗುತ್ತದೆ.

[11]ಮೈ. ದಲ್ಲಿಇದುಹಿಂದಿನವಾಕ್ಯದಭಾಗವಾಗಿದೆ.

[12]ಮೈ. ಚೌ. ವೇಷಮಾಚಾರಂ.

[13]ಮೈ. ಚೌ. ಗಳಲ್ಲಿಇದನ್ನುಎರಡುವಾಕ್ಯಗಳಲ್ಲಿವಿಭಜಿಸಲಾಗಿದೆ.