ವೈದ್ಯೇಷುಶ್ರೀಮಂತಾಂವ್ಯಾಧಿವರ್ಧನಾದಿವಹಿನಿಯೋಗಿಷುಭರ್ತುರ್ವ್ಯಸನವರ್ಧನಾದಪರೋ[1]ನಾಸ್ತ್ಯಾತ್ಮನೋ[2]ಜೀವನೋಪಾಯಃ || ೩೬ || ೬೩೯ ||

ಅರ್ಥ : ಶ್ರೀಮಾತಾಂ = ಶ್ರೀಯನುಳ್ಳವರ್ಗಳ, ವ್ಯಾಧಿವರ್ಧನಾದಿವ = ಕುತ್ತಮಂ, ಪ್ರರ್ಚ್ಚಿಸುವರತ್ತಣಿಂದಮೆಂದಿತುಂ, ವೈದ್ಯೇಷು = ವೈದ್ಯರೊಳ್, ಜೀವನೋಪಾಯಃ = ಜೀವಿಸುವುದುಮಕ್ಕುಂ, ಅಪರಃ = ಪೆಱತುನ = ಇಲ್ಲೆಂತಂತೆ, ಭರ್ತುಃ = ಸ್ವಾಮಿಯ, ವ್ಯಸನವರ್ಧನಾತ್ = ಕ್ಲೇಶಮಂಪೆರ್ಚಿಸುವುದಱತ್ತಣಿಂದಮೆಂತು, ನಿಯೋಗಿಷು = ಮಂತ್ರಿಗಳೊಳ್, ಜೀವನೋಪಾಯಃ = ಬಾಳ್ವುಪಾಯಂ, ನಾಸ್ತಿ = ಇಲ್ಲ || ದುರ್ಮಂತ್ರಿಗಳಂತಮ್ಮಬಾರ್ತೆಕಾರಣಮಾಗಿಸ್ವಾಮಿಗೆಕ್ಲೇಶಮಂಪುಟ್ಟಿಸುವರೆಂಬುದುತಾತ್ಪರ್ಯಂ || ಪರಿಗ್ರಹದಕಾರ್ಯಮಂತಾನೆತೀರ್ಚುವನೆಂಬುದುತ್ತರವಾಕ್ಯಂ :

ಕಾರ್ಯಾರ್ಥಿನಃಪುರುಷಾನ್ಲಂಚಲುಂಚನಿಶಾಚರಾಣಾಂ[3]ಭೂತಬಲಿಂಕುರ್ಯಾತ್[4] || ೩೭ || ೬೪೦ ||

ಅರ್ಥ : ಕಾರ್ಯಾರ್ಥಿನಃ = ಕಾರ್ಯಾರ್ಥಿಗಳಪ್ಪ, ಪುರುಷಾನ್ = ಪುರುಷರಂ, ಲಂಚಲುಂಚ = ಲಂಚಂಗೊಳ್ವ, || ನಿಶಾಚರಾಣಾಂ = ರಾಕ್ಞಸರ್ಗೆ, ಭೂತಬಲಿಂ = ಭೂತಪೂಜೆಯಂ, ನಕುರ್ಯಾತ್ = ಮಾಡದಿರ್ಕೆ || ಪೆಱರ್ಗೆಲಂಚಕ್ಕೆಡೆಯಿಲ್ಲದಂತುಸ್ವಾಮಿಕಾರ್ಯಮಂತೀರ್ಚುವುದೆಂಬುದುತಾತ್ಪರ್ಯಂ || ಲಂಚಂಪೊಲ್ಲೆಂದುಪೇಳ್ವುದುತ್ತರವಾಕ್ಯಂ :

ಲಂಚೋಹಿಸರ್ವಪಾತಕಾನಾಂಆಗಮನದ್ವಾರಂ || ೩೮ || ೬೪೧ ||

ಅರ್ಥ : ಲಂಚಃ = ಲಂಚಂ, ಹಿ = ನೆಟ್ಟನೆ, ಸರ್ವಪಾತಕಾನಾಂ = ಸಕಲಪಾತಕಗಳ, ಆಗಮನದ್ವಾರಂ = ಬರ್ಪಬಾಗಿಲು || ಅದಕ್ಕೆಕಾರಣಂಪೇಳ್ವುದುತ್ತರವಾಕ್ಯಂ :

—-

೩೬. ಶ್ರೀಮಂತರವ್ಯಾಧಿಗಳನ್ನುಹೆಚ್ಚಿಸದೆವೈದ್ಯರಿಗೆಬೇರೆಜೀವನೋಪಾಯವಿಲ್ಲದಂತೆಅಧಿಕಾರಿಗಳಿಗೆಒಡೆಯನಕಷ್ಟಗಳನ್ನುಹೆಚ್ಚಿಸುವದಲ್ಲದೆಬೇರೆಜೀವನೋಪಾಯವಿಲ್ಲ.

೩೭. ಕಾಯಾರ್ಥಿಗಳಾಗಿಬರುವವರನ್ನುಲಂಚಲುಂಚಗಳೆಂಬರಾಕ್ಷಸರಿಗೆಬಲಿಕೊಡಬಾರದು.

೩೮. ಲಂಚವುಎಲ್ಲಪಾತಕಗಳಿಗೆಮೂಲ.

—-

ಮಾತುಃಸ್ತನಮಪಿಲುನಂತಿಲಂಚೋಪಜೀವಿನಃ || ೩೯ || ೬೪೨ ||

ಅರ್ಥ : ಮಾತುಃ = ತಾಯ, ಸ್ತನಮಪಿ = ಮೊಲೆಯುಮಂ, ಲುನಂತಿ = ಕೊಯ್ದರ್, ಲಂಚೋಪಜೀವಿನಃ = ಲಂಚದಿಂಬರ್ದುಂಕುವವರ್ || ಲಂಚಂಗೊಳ್ವನಸಾಹಸಮಂಪೇಳ್ವುದುತ್ತರವಾಕ್ಯಂ :

ಲಂಚೇನಕಾರ್ಯಕಾರಿಭಿರುರಭ್ರವತ್[5]ಸ್ವಾಮೀವಿಕ್ರೀಯತೇ || ೪೦ || ೬೪೩ ||

ಅರ್ಥ : ಕಾರ್ಯಕಾರಿಭಿಃ = ಕಾರ್ಯಮಂಮಾಳ್ಪವರ್ಗಳಿಂದಮುಂ, ಉರಭ್ರವತ್ = ತಗರಿಗದಂತೆ, ಸ್ವಾಮೀ = ಸ್ವಾಮಿ, ವಿಕ್ರೀಯತೇ = ಮಾರಿಕೊಳಲ್ಪಡುಗುಂ, ಲಂಚೇನ = ಲಂಚದಿಂದಂ || ಲಂಚಂಕೊಳುವವನನುಪೇಕ್ಷಿಸಲ್ತನ್ನಕೇಡಕ್ಕುವ = ಮೆಂಬುದುತಾತ್ಪರ್ಯಂ || ಅರಸುಲಂಚದಿಂದುಪಾರ್ಜಿಸುವುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಲಂಚೇನರಾಜ್ಞೋರ್ಥಲಾಭಃಪ್ರಾಸಾದವಿಧ್ವಂಸನೇನಲೋಹಕೀಲಕಲಾಭಇವ || ೪೧ || ೬೪೪ ||

ಅರ್ಥ : ಲಂಚೇನ = ಲಂಚದಿಂದಪ್ಪ, ರಾಜ್ಞಃ = ಅರಸಂಗೆ, ಅರ್ಥಲಾಭ = ಅರ್ಥದಲಾಭವು, ಪಾಸಾದವಿದ್ವಂಸನೇನ = ಪ್ರಾಸಾದಮಂಕಿಡಿಸುವುದಱಿಂ, ಲೋಹಕೀಲಕಲಾಭಇವಕರ್ಬುನದಕೀಲಂಪಡೆವಂತೆ || ಲಂಚದಿಂದಪ್ಪಲಾಭಂಮಹಾಪಾತಕಮೆಂಬುದುತಾತ್ಪರ್ಯಂ || ಈಯರ್ಥಮನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ರಾಜ್ಞೋಲಂಚೇನಕಾರ್ಯಕರಣೇಕಸ್ಯನಾಮಕಲ್ಯಾಣಂ || ೪೨ || ೬೪೫ ||

ಅರ್ಥ : ರಾಜ್ಞಃ = ಅರಸಂಗೆ, ಲಂಚೇನ = ಲಂಚದಿಂದಂ, ಕಾರ್ಯಕರಣೇ = ಕಾರ್ಯಮಂಮಾಳ್ಪುದಾಗೆ, ಕಸ್ಯ = ಆವಂಗೆ, ನಾಮ = ನಿಶ್ಚಯದಿಂ, ಕಲ್ಯಾಣಂ = ಸುಖಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

—-

೩೯. ಲಂಚದಿಂದಬದುಕುವವರುತಾಯಸ್ತನವನ್ನಾದರೂಕೊಯ್ಯುವರು.

೪೦. ಲಂಚವನ್ನುತೆಗೆದುಕೊಳ್ಳುವಅಧಿಕಾರಿಗಳುಟಗರನ್ನುಕಟುಕರಿಗೆಮಾರುವಂತೆಅರಸನನ್ನುಮಾರಿಬಿಡುತ್ತಾರೆ.

೪೧. ಲಂಚದಿಂದರಾಜನಿಗಾಗುವಅರ್ಥಲಾಭವುಅರಮನೆಯನ್ನುಕೆಡವಿಕಬ್ಬಿಣದಮೊಳೆಯನ್ನುಪಡೆದಂತೆ.

೪೨.ರಾಜನುಲಂಚತೆಗೆದುಕೊಂಡುಕೆಲಸಮಾಡಿಕೊಡುವುದರಿಂಧಯಾರಿಗೆಒಳ್ಳೆಯದಾದೀತು?

೪೩. ದೇವತೆಯೂಕಳ್ಳರೊಂದಿಗೆಸೇರಿಕೊಂಡರೆಪ್ರಜೆಗಳಿಗೆಕ್ಷೇಮವೆಲ್ಲಿಯದು?

—-

ದೇವತಾಪಿಯದಿಚೋರೇಷುಮಿಲತಿಕುತಃಪ್ರಜಾನಾಂಕುಶಲಂ || ೪೩ || ೬೪೬ ||

ಅರ್ಥ : ದೇವತಾಪಿ = ದೇವತೆಯುಂ, ಚೋರೇಷು = ಕಳ್ಳರೊಳ್, ಯದಿಮಿಲತಿ = ಕೂಡುಗುಮಪ್ಪೊಡೆ, ಕುತಃ = ಎತ್ತಣ್ತು, ಪ್ರಜಾನಾಂ = ಪ್ರಜೆಗಳ್ಗೆ, ಕುಶಲಂ = ಸುಖಂ || ಲಂಚದಿಂದರ್ಥೋಪಾರ್ಜನಂತೋರ್ಪನಿಂತುಮಾಳ್ಪನೆಮಬುದುತ್ತರವಾಕ್ಯಂ :

ಲಂಚೇನಾರ್ಥಸ್ಯೋಪಾರ್ಜನಂ[6]ದರ್ಶಯನ್ದೇಶಂಕೋಶಂಮಿತ್ರಂತಂತ್ರಂಭಕ್ಷಯತಿ || ೪೪ || ೬೪೭ ||

ಅರ್ಥ : ಲಂಚೇನ = ಲಂಚದಿಂ, ಅರ್ಥಸ್ಯೋಪಾರ್ಜನಂ = ಅರ್ಥೋಪಾರ್ಜನಮಂ, ದರ್ಶಯನ್ = ತೋಱುತ್ತಿರ್ದ್ದಂ, ದೇಶಂ = ನಾಡುಮಂ, ಕೋಶಂ = ಭಂಡಾರಮುಮಂ, ಮಿತ್ರಂ = ಬಂಟನುಮಂ, ತಂತ್ರಂಚ = ಪರಿಗ್ರಹಮುಮಂ, ಭಕ್ಷಯತಿ = ತಿಂಗುಂ = ಲಂಚಂಗೊಳ್ಪನರಸಂಗೆಲ್ಲಮಂತೋಱುತಾನೆಲ್ಲಮಂಕಿಡಿಸುವನೆಂಬುದುತಾತ್ಪರ್ಯಂ || ಅರಸಂಮರಿಯಾದಿಯಂಮೀಱುವುದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ರಾಜ್ಞೋsನ್ಯಾಯಕರಣಂಸಮುದ್ರಸ್ಯಮರ್ಯಾದಾಲಂಘನಮಾದಿತ್ಯಸ್ಯ
ತಿಮಿರಪೋಷಣಂ
ಮಾತುಃಸ್ವಾಪತ್ಯಭಕ್ಷಣಮಿತಿಕಲಿಕಾಲವಿಜೃಂಭಿತಾನಿ || ೪೫ || ೬೪೮ ||

ಅರ್ಥ : ರಾಜ್ಞಃ = ಅರಸನ, ಅನ್ಯಾಯಕರಣಂ = ಅನ್ನೆಯದಮಾಟಮುಂ, ಸಮುದ್ರಸ್ಯ = ಸಮುದ್ರದ, ಮರ್ಯಾದಾಲಂಘನಂ = ಮರ್ಯಾದೆಯಂದಾಂಟುಹವುಂ, ಆದಿತ್ಯಸ್ಯ = ಆದಿತ್ಯನ, ತಮಃ (ತಿಮಿರಪೋಷಣಂ) ಕತ್ತಲೆಯಂಪೊಱೆವುದುಂ, ಮಾತುಶ್ಚ = ತಾಯ, ಸ್ವಾಪತ್ಯಭಕ್ಷಣಮಿತಿ = ಮಕ್ಕಳತಿನಿಸುಮೆಂಬಿವು, ಕಲಿಕಾಲವಿಜೃಂಭಿತಾನಿ = ಕಲಿಕಾಲದಷ್ಟಮಭಂಗಳೊಳ್ (ಕಲಿಕಾಲವಿಷೇಷ್ಟಿತಂಗಳು) || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ರಾಜಾಕಾಲಸ್ಯ[7]ಕಾರಣಂ || ೪೬ || ೬೪೯ ||

ಅರ್ಥ : ರಾಜಾ = ಅರಸಂ, ಕಾಲಸ್ಯ = ಕಾಲಕ್ಕೆ, ಕಾರಣಂ = ಕಾರಣವು ||

—-

೪೪. ಲಂಚದಮೂಲಕಧನಸಂಪಾದನೆಗೆದಾರಿತೋರಿಸುವವನುದೇಶವನ್ನುಕೋಶವನ್ನುಮಿತ್ರರನ್ನುತನ್ನವರನ್ನುಕೂಡನುಂಗಿಹಾಕುತ್ತಾನೆ.

೪೫. ರಾಜನುಅನ್ಯಾಯಮಾಡುವದು. ಸಮುದ್ರವುಮೇರೆಯನ್ನುಮೀರುವದು, ಸೂರ್ಯನುಕತ್ತಲೆಯನ್ನುಪೋಷಿಸುವುದು, ತಾಯಿತನ್ನಸಂತಾನವನ್ನೇತಿಂದುಹಾಕುವುದುಇಲ್ಲಿಕಲಿಕಾಲದಲ್ಲಿಹೆಚ್ಚುತ್ತವೆ.

೪೬. ರಾಜನುಕಾಲಕ್ಕೆಕಾರಣನು.

—-

[8]ನ್ಯಾಯತಃಪರಿಪಾಲಕೇರಾಜ್ಞಿಪ್ರಜಾನಾಂಕಾಮದುಘಾಸರ್ವಾದಿಶೋಭವಂತಿಕಾಲೇವರ್ಷತಿಮಘವಾನ್ಸರ್ವಾಶ್ಚೇತಯಃಪ್ರಶಾಮ್ಯಂತಿ || ೪೭ || ೬೫೦ ||

ಅರ್ಥ : ನ್ಯಾಯತಃ = ನ್ಯಾಯದಿಂದಂ, ಪರಿಪಾಲಕೇ = ರಕ್ಷಿಸುತ್ತಿರೆ, ರಾಜ್ಞಿ = ಅರಸಂ, ಪ್ರಜಾನಾಂ = ಪ್ರಜೆಗಳ್ಗೆ, ಸರ್ವಾಃ = ಎಲ್ಲಾ, ದಿಶಃ = ದೆಸೆಗಳು, ಕಾಮದುಘಾಃ = ಬಯಸಿದುದಂಕಱೆವುವು, ಭವಂತಿ = ಅಪ್ಪವು, ಕಾಲೇಚ = ಕಾಲದೊಳಂ, ಮಘವಾನ್ = ಇಂದ್ರಂ, ವರ್ಷತಿ = ಮಳೆಯಂಕಱೆಗುಂ, ಸರ್ವಾಶ್ಚ = ಎಲ್ಲಾ, ಈತಯಃ = ಈತಿಗಳು, ಪ್ರಶಾಮ್ಯಂತಿ = ಉಪಸಮಿಸುವುವು || ಅರಸಂನೀತಿಯಂನೆಗಳೆಸುಖಮಕ್ಕುಮೆಮಬುದುತಾತ್ಪರ್ಯಂ || ಈಯರ್ಥಮಂವಿಶೇಷಿಸಿಪೇಳ್ವುದುತ್ತರವಾಕ್ಯಂ :

ರಾಜಾನಮನುವರ್ತಂತೇಹಿಸರ್ವೇsಪಿಲೋಕಪಾಲಾಸ್ತೇನಮಧ್ಯಮಮಪ್ಯುತ್ತಮಂಲೋಕಪಾಲಂರಾಜಾನಮಾಹುಃ || ೪೮ || || ೬೫೧ ||

ಅರ್ಥ : ರಾಜಾನಂ = ಅರಸನಂ, ಅನುವರ್ತಂತೇ = ಇಚ್ಛೇಯಂನುಡಿವರ್, ಸರ್ವೇಪಿ = ಎಲ್ಲಾ, ಲೋಕಪಾಲಾಃ = ಅಷ್ಟಲೋಕಪಾಲಕರ್, ತಾನ = ಅದುಕಾರಣದಿಂ, ಮಧ್ಯಮಂಅಪಿ = ಶಬ್ಧಚ್ಛಲದಿಂಮಧ್ಯಮನೆನಿಸಿನಡುವಿರ್ದನಂ = (ಮಧ್ಯಮ), ರಾಜಾನಂ = ಅರಸನಂ, ಅತ್ಯುತ್ತಮಂ = ಕರಮುತ್ತಮನುಮಪ್ಪ, ಲೋಕಪಾಲಂ = ಲೋಕಪಾಲನುಮೆಂದು, ಅಹುಃ = ಪೇಳ್ವುರು || ನೀತಿಯಂಪ್ರತಿಪಾಲಿಸುವರನುಲೋಕಪಾಲನಿಂದಧಿಕಮೆಂದುಪೇಳ್ವರೆಂಬುದುತಾತ್ಪರ್ಯಂ || ಬಡಪಟ್ಟರಿಂತುರಕ್ಷಿಪುದೆಂಬುದುತ್ತರವಾಕ್ಯಂ :

ಅವ್ಯಸಾನಾತ್[9]ಮೂಲಧನಪ್ರದಾನೇನಕ್ಷೀಣಧನಾನ್ಸಂಭಾವಯೇತ್ || ೪೯ || ೬೫೨ ||

ಅರ್ಥ : ಅವ್ಯಸಾನಾತ್ = ದ್ಯೂತಾದಿವ್ಯಸನಮಿಲ್ಲದೆ, ಕ್ಷೀಣಧನಾನ್ = ಧನಮಿಲ್ಲದರಂ, ಮೂಲಧನಪ್ರದಾನೇನ = ಮೊದಲುಡುವುದಱಿಂ, ಸಂಭವಯೇತ್ = ಸಂತಸಂಬಡಿಸುಗೆ || ಮೊದಲಂಗಿಟ್ಟುಬಡವರಂಪೊಱೆವುದೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

೪೭. ರಾಜನುಪ್ರಜೆಗಳನ್ನುನ್ಯಾಯದಿಂದಪರಿಪಾಲಿಸಿದರೆಪ್ರಜೆಗಳಿಗೆಎಲ್ಲದಿಕ್ಕುಗಳುಬಯಸಿದುದನ್ನುಕೊಡುತ್ತವೆ. ಕಾಲಕ್ಕೆಸರಿಯಾಗಿಇಂದನುಮಳೆಯನ್ನುಸುರಿಸುತ್ತಾನೆ. ಎಲ್ಲಬಾಧೆಗಳುಶಮನಗೊಳ್ಳುತ್ತವೆ.

೪೮. ಎಲ್ಲಲೋಕಪಾಲರುರಾಜನನ್ನುಅನುಸರಿಸುತ್ತಾರೆ. ಆದ್ದರಿಂದರಾಜನುಮಧ್ಯಮನಿದ್ದರೂಅತ್ಯುತ್ತಮಲೋಕಪಾಲನೆನ್ನುವರು.

೪೯. ದ್ಯೂತಾದಿವ್ಯಸನವಿಲ್ಲದನಿರ್ಧನರಿಗೆಮೂಲಧನವನ್ನುಕೊಟ್ಟಸಂತಸಗೊಳಿಸಬೇಕು.

—-

ರಾಜ್ಞೋಹಿಸಮುದ್ರಾವಧಿರ್ಮಹೀಸ್ವಕುಟುಂಬಂ[10] || ೫೦ || ೬೫೩ ||

ಅರ್ಥ : ರಾಜ್ಞಃ = ಅರಸಂಗೆ, ಹಿ = ಅವುದೊಂದುಕಾರಣದಿಂ, ಸಮುದ್ರಾವಧಿಃ = ಸಮುದ್ರಮಂಕಡೆಯೊಳುಳ್ಳ, ಮಹೀ = ಭೂಮಿಃ, ಸ್ವಕುಟುಂಬಂ = ತನ್ನಪೊರೆವವೃಂದಂ || ತನ್ನದೇಶದಪ್ರಜೆಗಳೆಲ್ಲಂಪೊಷ್ಯರೆಂಬುದುತಾತ್ಪರ್ಯಂ || ಕಲತ್ರದಿಂದಪ್ಪಕಾಯ್ಯಮಂಪೇಳ್ವುದುತ್ತರವಾಕ್ಯಂ :

ಕಲತ್ರಾಣಿತುವಂಶವರ್ಧನಕ್ಷೇತ್ರಾಣಿ || ೫೧ || ೬೫೪ ||

ಅರ್ಥ : ಕಲತ್ರಾಣಿ = ಕಲತ್ರಂಗಳು, ತು = ಮತ್ತೆ, ವಂಶವರ್ಧನ = ವಂಶಮಂಪೆರ್ಚಿಸುವ, ಕ್ಷೇತ್ರಾಣಿ = ಕ್ಷೇತ್ರಂಗಳ್ ||

ಅಪ್ರತೀಕಾರಂಕುರ್ವನ್ನರ್ಥೀನಾಮುಪಾಯನಂಗೃಹ್ಣೀಯಾತ್ || ೫೨ || ೬೫೫ ||

ಅರ್ಥ : ಅರ್ತ್ಥೀನಾಂ = ಆಸೆಯುಳ್ಳವರ್ಗಳ, ಉಪಾಯನಂ = ಕಾಣ್ಕೆಯಂ, ಅಪ್ರತೀಕಾಂಕುರ್ವನ್ = ಪ್ರತ್ಯುಪಕಾರಮಂಮಾಡದಂ, ನಗೃಹ್ಣೀಯಾತ್ = ಕೈಕೊಳ್ಳದಿರ್ಕೆ || ಕೊಟ್ಟೊಡಂಸಂತಸಂಬಡೆವೊಡೆಕೈಕೊಳ್ವುದೆಂಬುದುತಾತ್ಪರ್ಯಂ || ಇಂತಪ್ಪರೊಡನೆತ್ರಸ್ತರಿಬೇಡೆಂಬುದುತ್ತರವಾಕ್ಯಂ :

ಆಗಂತುಕೈರಸಹಮಾನೈಶ್ಚಸಹನರ್ಮಕುರ್ಯಾತ್ || ೫೩ || ೬೫೬ ||

ಅರ್ಥ : ಆಗಂತುಕೈಃ = ಪೊಸಂಬರೊಡನೆಯುಂ, ಅಸಹಮಾನೈಶ್ಚಸಹ = ಸೈರಿಸದೊಡನೆಯುಂ, ನರ್ಮ = ಮೇಳಮಂ (ಸರಸವನು), ನಕುರ್ಯಾತ್ = ಮಾಡದಿರ್ಕೆ || ಸಹೃದಯರಪ್ಪಪರಿಣತರೊಡನೆತ್ರಸ್ತರಿಯಾಡುವುದೆಂಬುದುತಾತ್ಪರ್ಯಂ || ಪಿರಿಯರೊಡನಿಂತುನುಡಿಯವೇಡೆಂಬುದುತ್ತರವಾಕ್ಯಂ :

ಪೂಜ್ಯೈಃಸಹನಾಧಿರುಹ್ಯಾ[11]ತಿಕ್ರಮ್ಯವದೇತ್ || ೫೪ || ೬೫೭ ||

ಅರ್ಥ : ಪೂಜ್ಯೈಃಸಹ = ಮಾನ್ಯರೊಡನೆ, ಅಧಿರುಹ್ಯ = ಸಿಂಹಾಸನಾಸೀನನಾಗಿ, ಅತಿಕ್ರಮ್ಯ = ಅತಿಕ್ರಮಿಸಿ, ನವದೇತ್ = ನಡಿಯದಿರ್ಕೆ || ಪಿರಿಯರೊಳ್ವಿನಯಂಗಿಡೆನುಡಿಯಲಾದೆಂಬುದುತಾತ್ಪರ್ಯಂ || ಇಂತಪ್ಪವನಾಶೆವಡಿಸಬೇಕೆಂಬುದುತ್ತರವಾಕ್ಯಂ :

—-

೫೦. ರಾಜನಿಗೆಸಮುದ್ರದವರೆಗಿನಭೂಮಿಯೆಲ್ಲವೂತನ್ನಕುಟುಂಬವೇ.

೫೧. ಹೆಂಡತಿಯರುವಂಶವರ್ಧನೆಯಕ್ಷೇತ್ರಗಳು.

೫೨. ಅರ್ಥಿಗಳಕಾಣಿಕೆಯನ್ನುಪ್ರತ್ಯುಪಕಾರಮಾಡದೇಸ್ವೀಕರಿಸಬಾರದು.

೫೩. ಹೊಸಬರೊಡನೆಯೂಸೈರಿಸದವರೊಡನೆಯೂಆಪ್ತಾಲೋಚನೆಮಾಡಬಾರದು.

೫೪. ಮಾನ್ಯರೊಡನೆಸಿಂಹಾಸನಾಸೀನನಾಗಿಮೇರೆಮೀರಿಮಾತಾಡಕೂಡದು.

—-

ಭರ್ತುಮಶಕ್ಯಮಪ್ರಯೋಜನಂಜನಂನಾಶಾಯಾಕ್ಲೇಶಯೇತ್ || ೫೫ || ೬೫೮ ||

ಅರ್ಥ : ಭರ್ತುಂ = ಪೊಱೆಯಲ್ಕೆ, ಅಶಕ್ಯಂ = ಬಾರದನಂ, ಅಪ್ರಯೋಜನಂಚಜನಂ = ಪ್ರಯೋಜನಮಿಲಲ್ದನಂ, ಆಶಯಾ = ಆಸೆಯಿಂ, ನಕ್ಲೇಶಯೇತ್ = ದುಃಖಂಬಡಿಸದಿರ್ಕ್ಕೆ || ಪ್ರಯೋಜಕನಾಗಿಪೋಱೆಯಲ್ಬರ್ಪನಂರಕ್ಷಿಸುವುದೆಂಬುದುತಾತ್ಪರ್ಯಂ || ಧನದಿಂದಮೆಬೆಸಕೆಯ್ವರೆಂಬುದುತ್ತರವಾಕ್ಯಂ :

ಪುರುಷೋಹಿಪುರುಷಸ್ಯದಾಸಃಕಿಂತುವಿತ್ತಸ್ಯ || ೫೬ || ೬೫೯ ||

ಅರ್ಥ : ಪುರುಷಃ = ಪುರುಷಂ, ಹಿ = ನಿಶ್ಚಯವಾಗಿ, ಪುರುಷಸ್ಯ = ಪುರುಷಂಗೆ, ದಾಸಃ = ಬಂಟಂ, ನ = ಅಲ್ಲ, ಕಿಂತು = ಮತ್ತೆ, ವಿತ್ತಸ್ಯ = ಅರ್ಥಕ್ಕೆಬಂಟಂ || ಧನಮಂಕೊಟ್ಟುಬೆಸಕೆಯ್ಸಿಕೊಂಬುದೆಂಬುದುತಾತ್ಪರ್ಯಂ || ಬಡವಂನೊಚ್ಚಿದನೆಂಬುದುತ್ತರವಾಕ್ಯಂ :

ಕೋನಾಮಧನಹೀನೋಲಘು[12] || ೫೭ || ೬೬೦ ||

ಅರ್ಥ : ಧನಹೀನಃ = ಅರ್ಥಮಿಲ್ಲದಂ, ಕಃ = ಆವಂ, ನಾಮ = ನಿಶ್ಚಯದಿಂ, ಲಘು = ನೊಚ್ಚಿದನಲ್ಲಂ || ಧನದಿಂದಮೆಬಿಣ್ಪುವಡೆವನೆಂಬುದುತಾತ್ಪರ್ಯಂ || ಉತ್ತಮಧನಮಂಪೇಳ್ವುದುತ್ತರವಾಕ್ಯಂ :

ಸರ್ವಧನೇಷುವಿದ್ಯೈವಪ್ರಧಾನಂಧನಂಪರೈರನಾಹಾರ್ಯತ್ವಾತ್ಸಹಾನುಯಾಯಿತ್ವಾಚ್ಚ || ೫೮ || ೬೬೧ ||

ಅರ್ಥ : ಸರ್ವಧನೇಷು = ಎಲ್ಲಾಧನಂಗಳೊಳ್, ವಿದ್ಯೈವ = ವಿದ್ಯೆಯೇ, ಪ್ರಧಾನಂ = ಮುಖ್ಯಮಪ್ಪ, ಧನಂ = ಅರ್ಥಂ, ಪರೈಃ, = ಪೆಱರಿಂ, ಅನಾಹಾರ್ಯತ್ವಾತ್ = ಕಳದುಕೊಳಲ್‌ಬಾರದಪ್ಪುದುಕಾರಣಮಾಗಿ, ಸಹಾನುಯಾಯಿತ್ವಾತ್ಚ = ಒಡವರ್ಪ್ಪುದುಕಾರಣದಿಂದಮುಂ || ವಿದ್ಯೆಯನುಪಾರ್ಜಿಸುವುದೆಂಬುದುತಾತ್ಪರ್ಯಂ || ವಿದ್ಯೆಯಮಹಾತ್ಮೆಯಂಪೇಳ್ವುದುತ್ತರವಾಕ್ಯಂ :

—-

೫೫. ಪೋಷಿಸುವದಕ್ಕೆಶಕ್ಯರಲ್ಲದವರನ್ನು, ಪ್ರಯೋಜನವಿಲ್ಲದಜನರನ್ನುಆಶೆಗಳನ್ನುತೋರಿಸಿಭಾದಿಸಬಾರದು.

೫೬. ಮನುಷ್ಯನುಮನಷ್ಯನಿಗೆದಾಸನಲ್ಲಆದರೆಧನಕ್ಕೆದಾಸನು.

೫೭. ಧನಹೀನನುಯಾವನುತಾನೆಕೀಳಲ್ಲ?

೫೮.ಎಲ್ಲಧನಗಳಿಗಿಂತಲೂವಿದ್ಯೆಯೇಪ್ರಧಾನವಾದಧನ. ಏಕೆಂದರೆಅದನ್ನುಯಾರೂಅಪಹರಿಸಲಾರರು. ಎಲ್ಲಿಹೋದರೂಅದುಸಂಗಡವೇಬರುವುದು.

—-

ಸರಿತ್ಸಮುದ್ರಮಿವನೀಚಮುಪಗತಾಪಿವಿದ್ಯಾದುರ್ದರ್ಶಮಪಿರಾಜಾನಂ
ಸಂಗಮಯತಿ
, ಪರಂತು[13]ಭಾಗ್ಯಾನಾಂಭವತಿವ್ಯಾಪಾರಃ || ೫೯ || ೬೬೨ ||

ಅರ್ಥ : ಸರಿತ್ = ತೊಱೆ, ಸಮುದ್ರಮಿವ = ಸಮುದ್ರಮನೆಂತಂತೆಇದುಗುಮಂತೆ, ನೀಚಂ = ನೀಚನಂ, ಉಪಗತಾಅಪಿ = ಪೊರ್ದಿಯುಂ, ವಿದ್ಯಾ = ವಿದ್ಯೆ, ದುರ್ದರ್ಶಂ = ಕಾಣಲ್ಬಾರದ, ರಾಜಾನಮಪಿ = ಅರಸನುಮಂ, ಸಂಗಮಯತಿ = ಕೊಡುಗುಂ, ಪರಂತು = ಮೇಲೆಮತ್ತೆ, ಭಾಗ್ಯಾನಾಂ = ಭಾಗ್ಯಂಗಳ, ವ್ಯಾಪಾರಃ = ಕೆಲಸಂ, ಭವತಿ = ಅಕ್ಕುಂ || ವಿದ್ಯೆಯಂತೆಮೊಳ್ಳಿತ್ತಂಮಾಳ್ಕುಮೆಂಬುದುತಾತ್ಪರ್ಯ || ಉತ್ತಮವಿದ್ಯೆಯಂಪೇಳ್ವುದುತ್ತರವಾಕ್ಯಂ :

ಸಾಖಲುವಿದ್ಯಾವಿದುಷಾಂಕಾಮಧೇನುರ್ಯತೋಭವತಿಸಮಸ್ತಜಗತಃಸ್ಥಿತಿಪರಿಜ್ಞಾನಂ[14] || ೬೦ || ೬೬೩ ||

ಅರ್ಥ : ಸಾವಿದ್ಯಾ = ಆವಿದ್ಯೆಯು, ಖಲು = ನೆಟ್ಟನೆ, ವಿದುಷಾಂ = ಬುದ್ಧಿವಂತರ್ಗೆ, ಕಾಮಧೇನುಃ = ಕಾಮಧೇನುವು, ಯತಃ = ಆವುದೊಂದಱತ್ತಣಿಂದಂ, ಸಮಸ್ತಜಗತಃ = ಎಲ್ಲಾಲೋಕದ, ಸ್ಥಿತಿಪರಿಜ್ಞಾನಂ = ಸ್ವರೂಪದಱಿತಂ, ಭವತಿ = ಅಕ್ಕುಂ || ಲೋಕವ್ಯವಹಾರನಾಗಲ್ವೇಳ್ಕುಮೆಂಬುದುತಾತ್ಪರ್ಯ || ಈಯರ್ಥಮನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಲೋಕವ್ಯವಹಾರಜ್ಞೋಹಿಸರ್ವಜ್ಞೋsನ್ಯಸ್ತುಪ್ರಾಜ್ಞೋಪ್ಯವಜ್ಞಾನಏವ || ೬೧ || ೬೬೪ ||

ಅರ್ಥ : ಲೋಕವ್ಯವಹಾರಜ್ಞಃ = ಲೋಕವ್ಯವಹಾರಮಂಬಲ್ಲಂ, ಹಿ = ನೆಟ್ಟನೆ, ಸರ್ವಜ್ಞಃ = ಸರ್ವಜ್ಞಂ, ತು = ಮತ್ತೆ, ಅನ್ಯಃ = ಪೆಱಂ, ಪ್ರಜ್ಞೋsಪಿ = ಬುದ್ದಿವಂತನಾದೊಡಂ, ಅವಜ್ಞಾತಏವ = ಅವಮಾನಿಸೆಪಡದಿರಂ || ಅಪ್ರಜ್ಞ[15]ರಿಂತಪ್ಪರೆಂಬುದುತ್ತರವಾಕ್ಯಂ :

—-

೫೯. ನದಿಯುಕೆಳಮಟ್ಟದಲ್ಲಿಸಮುದ್ರವನ್ನುಸೇರುವಂತೆ, ವಿದ್ಯೆಯುಕೆಳಗಿನದರ್ಜೆಯವರನ್ನುಸೇರಿದರೂ, ಅವನನ್ನುದರ್ಶನಕ್ಕೆದುಸ್ಸಾಧ್ಯನಾದರಾಜನಬಳಿಗೂತೆಗೆದುಕೊಂಡುಹೋಗಬಲ್ಲದು. ಆದರೆಫಲವುಮಾತ್ರಅದೃಷ್ಟವನ್ನುಅಲವಂಬಿಸಿರುತ್ತದೆ.

೬೦. ಸಮಸ್ತಜಗತ್ತಿನಪರಿಸ್ಥಿತಿಯಜ್ಞಾನವನ್ನುಂಟುಮಾಡುವವಿದ್ಯೆಯುವಿದ್ವಾಂಸರಿಗೆಕಾಮಧೇನುವಿದ್ದಂತೆ.

೬೧. ಲೋಕವ್ಯವಹಾರವನ್ನುತಿಳಿದವನೇಸರ್ವಜ್ಞಹಾಗಲ್ಲದವನುಎಷ್ಟುಬುದ್ಧಿವಂತನಾದರೂಕಡೆಗಣಿಸಲ್ಪಡುತ್ತಾನೆ.

—-

 

ತೇಖಲುಪ್ರಕ್ಞಾಪಾರಮಿತಾಃಪುರುಷಾಯೇಕುರ್ವಂತಿಪರೇಷಾಂಪ್ರತಿಬೋಧನಂ || ೩೪ || ೬೬೫ ||

ಅರ್ಥ : ತಾಪುರುಷಾಃ = ಆಪುರುಷರ್, ಖಲು = ನೆಟ್ಟನೆ, ಪ್ರಜ್ಞಾಪಾರಂ = ಬುದ್ದಿಯಕಡೆಗೆ, ಇತಾಃ = ಸಂದರ್, ಯೇ = ಆರ್ಕೆಲಂಬರ್, ಪರೇಷಾಂ = ಪೆರರ್ಗೆ, ಪ್ರತಿಬೋಧನಂ = ತಿಳಿವಂ, ಕುರ್ವಂತಿ = ಮಾಳ್ಪರ್ || ಪೆಱರಂತಿಳಿಪಲ್ವೇಳ್ಕುಮೆಂಬುದುತಾತ್ಪರ್ಯಂ || ತಿಳಿಪಲಾಱದುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಅನುಪಯೋಗಿನಾಮಹತಾಪಿಕಿಂಜಲನಿಧಿಜಲೇವ[16] || ೬೩ || ೬೬೬ || |

ಅರ್ಥ : ಅನುಪಯೋಗಿನಾ = ಸೇವಿಸಲ್ಪಡದ, ಮಹತಾ, ಅಪಿ = ಪಿರಿದಪ್ಪ, ಜಲನಿಧಿಜಲೇನಸಮುದ್ರದುದಕದಿಂ, ಕಿಂ = ಏಂಪ್ರಯೋಜನಂ ||

ಇತಿಸ್ವಾಮಿಸಮುದ್ದೇಶಃ || ೧೬ ||[17]

ಸಮುದ್ದೇಶದವಾಕ್ಯಂ || ೬೩ || ಒಟ್ಟು || ೬೫೯ ||

—-

೬೨. ಯಾರುಇತರರಿಗೆತಿಳಿವನ್ನುಂಟುಮಾಡುವರೋ, ಅವರೇಪ್ರಜ್ಞೆಯಲ್ಲಿಪರಿಣತರು.

೬೩. ಉಪಯೋಗಕ್ಕೆಬಾರದಸಮುದ್ರನೀರುಎಷ್ಟಿದ್ದರೆಏನು?

—-

 

[1]ಮೈ. ಚೌ., ವ್ಯಸನಾದಪರೋ.

[2]ಮೈ. ಚೌ. ಆತ್ಮನೋಎಂಬಪದವಿಲ್ಲ.

[3]ಲಂಚತಿನ್ನುವವರನ್ನುರಾಕ್ಷಸರಿಗೆಹೋಲಿಸಿದ್ದುಗಮನಾರ್ಹವಾಗಿದೆ.

[4]ಚೌ. ದಲ್ಲಿಈವಾಕ್ಯವುಎರಡಾಗಿವಿಭಜಿಸಲ್ಪಟ್ಟಿದ್ದು, ಪಾಥಭೇದಗಳಿವೆ.

[5]ಚೌ. ಕಾರ್ಯಾಭಿರುದ್ಧಃ

[6]ಮೈ. ಚೌ. ಅರ್ಥೋಪಾಯಂ.

[7]ಮೈ. ವಿಶಿಷ್ಟಸ್ಯಕಾಲಸ್ಯ.

[8]ಮೈ. ಈಮತ್ತುಮುಂದಿನವಾಕ್ಯವುಒಂದೇವಾಕ್ಯವಾಗಿವೆ.

[9]ಅವ್ಯಸನಾತ್ಎಂದಿರಬೇಕು.

[10]ಮೈ. ಚೌ. ಈಮತ್ತುಮುಂದಿನವಾಕ್ಯವುಒಂದೇವಾಕ್ಯವಾಗಿವೆ.

[11]ಮೈ. ಚೌ. ನಾಧಿರುಹ್ಯವದೇತ್, ಇದೇಸರಿಯಾದಪಾಠ.

[12]ನಲಘುಃ, ಇದೇಸರಿಯಾದಪಾಠ.

[13]ಮೈ. ಫಲಂತು. ಈಪಾಠವೇಸರಿಯಾದುದು.

[14]ಮೈ. ಚೌ. ಸ್ಥಿತಿಜ್ಞಾನಂ.

[15]ಪ್ರಾಜ್ಞರ್ಎಂದಿರಬೇಕು.

[16]ಜಲೇನಎಂದುಓದಬೇಕು.

[17]ಇದು೧೭ಎಂದಿರಬೇಕು.