ಬ್ರಾಹ್ಮಣಃಕ್ಷತ್ರಿಯೋಬಂಧುಃಸಂಬಂಧೀವಾನಾದಿಕರ್ತವ್ಯಃ[1] || ೨೩ || ೬೮೯ ||

ಅರ್ಥ : ಬ್ರಾಹ್ಮಣಃ = ಬ್ರಾಹ್ಮಣನುಂ, ಕ್ಷತ್ರಿಯಃ = ಕ್ಷತ್ರಿಯನುಂ, ಬಂಧುಃ = ನಂಟನುಂ, ಸಂಬಂಧೀವಾ = ಸಂಬಂಧಿಯುಮೇಣ್, ನಾದಿಕರ್ತವ್ಯಃ = ಮಾಡಲ್ಪಡಂ (ಅಧಿಕಾರಕ್ಕೆಯೋಗ್ಯನಲ್ಲ) || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ಬ್ರಾಹ್ಮಣಃಸ್ವಜಾತಿಬಲಾತ್ಸಿದ್ಧಮಪ್ಯರ್ಥಂಕ್ವಚ್ಛ್ರೇಣಪ್ರಯಚ್ಛತಿಪ್ರಯಚ್ಛತಿವಾ || ೨೪ || ೬೯೦ ||

ಅರ್ಥ : ಬ್ರಾಹ್ಮಣಃ = ಬ್ರಾಹ್ಮಣನುಂ, ಸ್ವಾಜಾತಿಬಲಾತ್ = ತನ್ನಜಾತಿಯಬಲದತ್ತಣಿಂ, ಅರ್ಥಂ = ಅರ್ಥಮುಂ, ಸಿದ್ಧಮಪಿ = ಉಳ್ಳುದಂ, ಕ್ವಚ್ಛ್ರೇಣ = ಕ್ಷೇಶದಿಂ, ಪ್ರಯಚ್ಛತಿ = ಕುಡುಗುಂ, ನಪ್ರಯಚ್ಛತಿವಾ = ಕುಡದಿರ್ಕ್ಕುಂಮೇಣ್ ||

ಕ್ಷತ್ರಿಯೋsಭಿಯಕ್ತಃಖಡ್ಗಂದರ್ಶಯತಿ || ೨೫ || ೬೯೧ ||

ಅರ್ಥ : ಕ್ಷತ್ರಿಯಃ = ಕ್ಷತ್ರಿಯಂ, ಅಭಿಯುಕ್ತಃ = ಪೀಡಿಸೆಪಟ್ಟನಾಗಿ, ಖಡ್ಗಂ = ಆಯುಧಮಂ, ದರ್ಶಯತಿ = ತೋರ್ಕುಂ ||

ಜ್ಞಾತಿಭಾವೇನಾತಿಕ್ರಮ್ಯಸಾಮವಾಯಿಕಾತ್ಸರ್ವಂಅರ್ಥಂಗ್ರಸತೇಬಂಧುಃ[2] || ೨೬ || ೬೯೨ ||

ಅರ್ಥ : ಜ್ಞಾತಿಭಾವೇನ = ನಂಟನೆಂಬುದಱಿಂ, ಸಾಮವಾಯಿಕಾತ್ = ಒಡೆನಡೆವರಂ (ನಿಯೋಗಿಗಳು), ಅತಿಕ್ರಮ್ಯ = ಮೀಱಿ, ಸರ್ವಮರ್ಥಂ = ಎಲ್ಲಾಅರ್ಥಮಂ, ಗ್ರಸತೇ = ನುಂಗುಗುಂ, ಬಂಧುಃ = ನಂಟಂ || ಬಂಧುವಿನಭೇದಮಂಪೇಳ್ವುದುತ್ತರವಾಕ್ಯಂ :

ಬಂಧುಸ್ತ್ರಿವಿಧಃಶ್ರೌತೋಮೌಖೋಯೌವತಶ್ಚೇತಿ[3] || ೨೭ || ೬೯೩ ||

ಅರ್ಥ : ಸಃ = ಆತಂ, ಬಂಧುಃ = ನಂಟಂ, ತ್ರಿವಿಧಃ = ಮೂಱುತೆಱಂ, ಶ್ರೌತಃ = ಶ್ರುತದೊಳಾನುಂ, ಮೌಖೋ = ಮುಖದೊಳಾನುಂ, ಯೌವತಶ್ಚೇತಿ = ಕೂಟದೊಳಾನುಮೆಂದು ||

—-

೨೩. ಬ್ರಾಹ್ಮಣನುಕ್ಷತ್ರಿಯನು, ಬಂಧುವು, ಹತ್ತಿರದವನುಅಧಿಕಾರಕ್ಕೆಯೋಗ್ಯರಲ್ಲ.

೨೪. ಬ್ರಾಹ್ಮಣನುತನ್ನಜಾತಿಬಲದಿಂದಸಿದ್ಧವಾಗಿರುವಧನವನ್ನುಸಹಕ್ಲೇಶದಿಂದಕೊಡಬಹುದುಅಥವಾಕೊಡದಿರಲೂಬಹುದು.

೨೫. ಕ್ಷತ್ರಿಯನನ್ನುಒತ್ತಾಯಪಡಿಸಿದರೆಆರ್ಯುವನ್ನುತೋರಿಸುವನು.

೨೬. ಬಂಧುವುನೆಂಟನೆಂಬುದರಿಂದಸಹೋದ್ಯೋಗಿಗಳುಅತಿಕ್ರಮಿಸಿಎಲ್ಲಅರ್ಥವನ್ನುತಾನೇನುಂಗುವನು.

೨೭. ಶ್ರೌತ, ಮೌಖ, ಯೌತಎಂದುಬಂಧುಗಳಲ್ಲಿಮೂರುವಿಧ.

—-

ಸಹದೀಕ್ಷಿತಸಹಾಧ್ಯಾಯಿನೌ[4]ವಾಶ್ರೌತಃ || ೨೮ || ೬೯೪ ||

ಅರ್ಥ : ಸಹದೀಕ್ಷಿತ = ಒಡನೆಉಪನಯನಂಗಳಮಾಡಿಸಿಕೊಂಡವನು, ಸಹಾಧ್ಯಾಯಿನೌವಾ = ಒಡನೆಓದಿದವನುಮೇಣ್, ಶ್ರೌತಃ = ಶ್ರೌತನೆಂಬನು ||

ಯುವತಿಸಂಬಂಧೋಯೌವತಃ[5] || ೨೯ || ೬೯೫ ||

ಅರ್ಥ : ಯುವತಿಸಂಬಂಧಃ = ಸ್ತ್ರೀಸಂಬಂಧವಾದವನು, ಯೌವತಃ = ಯೌವತನು ||

ಮುಖೇನಪರಿಜ್ಞಾತೋಮೌಖಃ || ೩೦ || ೬೯೬ ||

ಅರ್ಥ : ಮುಖೇನ = ಮುಖದಿಂದ, ಪರಿಜ್ಞಾತಃ = ಅಱಿಯಲ್ಪಟ್ಟವನು, ಮೌಖಃ = ಮೌಖನೆಂಬವನು ||

ವಾಚಿಕೇಸಂಬಂಧೇವಾನಾಸ್ತಿಸಂಬಂಧಾಂತರಾನುವೃತ್ತಿಃ || ೩೧ || ೬೯೭ ||

ಅರ್ಥ : ವಾಚಿಕೇ = ವಚನದಲ್ಲಿಯಾದ, ಸಂಬಂಧೇವಾ = ಸಂಬಂಧದಲ್ಲಿಮೇಣ್, ಸಂಬಂಧಾಂತರಾನುವೃತ್ತಿಃ = ಮತ್ತೊಂದುಸಂಬಂಧದಅನುವರ್ತನೆಯು, ನಾಸ್ತಿ = ಇಲ್ಲ || ಇಂತಪ್ಪರನಮಾತ್ಯರಂಮಾಡವೇಡೆಂಬುದುತ್ತರವಾಕ್ಯಂ :

ನತಂಕಮಪ್ಯಧಿಕುರ್ಯಾತ್[6]ಸತ್ಯಪರಾಧೇಯಮುಪಹತ್ಯಅನುಶಯೀತ || ೩೨ || ೬೯೮ ||

ಅರ್ಥ : ಅಪರಾಧೇಸತಿ = ದೋಷಮುಂಟಾಗುತ್ತಿರಲು, ಯಂ = ಆವನೋರ್ವಂ, ಉಪಹತ್ಯ = ಕೆಡಿಸಿ(ಕೊಂದು) ಅನುಶಯೀತ = ಮನದೊಳುನೋವಂ, ತಂ = ಅಂತಹ, ಕಮಪಿ = ಆವಾತನು, ನಾಧಿಕುರ್ಯಾತ್ = ಅಧಿಕಾರಿಯಮಾಡಲಾಗದು ||

—-

೨೮. ಜತೆಗೆಉಪನಯನವಾಗಿದ್ದವನುಅಥವಾಸಹಾಧ್ಯಾಯಿಯಾಗಿದ್ದವನುಶ್ರೌತ.

೨೯. ಸ್ತ್ರೀಸಂಬಂಧಿಯುಯೌವತ.

೩೦. ಮುಖಪರಿಚಯವುಳ್ಳವನುಮೌಖ.

೩೧. ಬರೀಮಾತಿನಸಂಬಂಧವಿರುವಲ್ಲಿಇತರರಸಂಬಂಧಗಳುಉಂಟಾಗುವುದಿಲ್ಲ.

೩೨. ತಪ್ಪುಮಾಡಿದವನನ್ನುಶಿಕ್ಷಿಸಿಅನಂತರಪಶ್ಚಾತಾಪಪಡಬೇಕಾದೀತೋಅಂತಹವನನ್ನುಅಧಿಕಾರಿಯಾಗಿಮಾಡಲಾಗದು.

—-

ಮಾನ್ಯೋsಧಿಕಾರೀರಾಜಾಜ್ಞಾಮವಜ್ಞಾಯನಿರವಗ್ರಹಶ್ಚರತಿ || ೩೩ || ೬೯೯ ||

ಅರ್ಥ : ಮಾನ್ಯಃ = ಮಾನ್ಯನಪ್ಪ, ಅಧಿಕಾರೀ = ಅಧಿಕಾರಿ (ನಿಯೋಗಿ), ರಾಜಾಜ್ಞಾಂ = ಅರಸಾಜ್ಞೆಯಂ, ಅವಜ್ಞಾಯ = ಅವಜ್ಞೆಗೆಯ್ದು, ನಿರವಗ್ರಹಃ = ಅವಗ್ರಹಮಿಲ್ಲದೆ (ನಿರಂತುಕನಾಗಿ), ಚರತಿ = ನೆಗಳ್ಗುಂ || ಹಳೆಯನಧಿಕಾರಿಯಾದೊಡೆದೋಷಮಂಪೆಳ್ವುದುತ್ತರವಾಕ್ಯಂ :

ಚಿರಸೇವಕೋನಿಯೋಗೀನಾಪರಾಧೇಷ್ವಾಶಂಕತೇ || ೩೪ || ೭೦೦ ||

ಅರ್ಥ : ಚಿರಸೇವಕಃ = ಪಲಕಾಲಮೊದಲಿರ್ದನಿಯೋಗೀ = ಅಧಿಕಾರಿ, ಅಪರಾಧೇಷು = ದೋಷಂಗಳಾದುವಾದೊಡೆ, ನಾಶಂಕತೇ = ಶಂಕಿಸುವನಲ್ಲಂ || ಉಪಕಾರಂಮಾಡಿದವನನಧಿಕಾರಿಮಾಡವೇಡೆಂಬುದುತ್ತರವಾಕ್ಯಂ :

ಉಪಕರ್ತ್ತಾಧಿಕಾರಸ್ಥಉಪಕಾರಮೇವದ್ವಚೀಕೃತ್ಯ[7]ಸರ್ವಮವಲುಂಪತಿ[8] || ೩೫ || ೭೦೧ ||

ಅರ್ಥ : ಉಪಕರ್ತಾ = ಉಪಕಾರಮಂಮಾಡಿದಂ, ಅಧಿಕಾರಸ್ಥಃ = ನಿಯೋಗದೊಳಿರ್ದನಾದೊಡೆ, ಉಪಕಾರಮೇವ = ತಾಂಮಾಡಿದುಪಕಾರಮನೇ, ದ್ವಚೀಕೃತ್ಯ = ಮುಂದುಮಾಡಿ, ಸರ್ವಂ = ಎಲ್ಲಮಂ || ಅವಲುಂಪತಿ = ಕಳೆದುಕೊಳ್ಗುಂ || ಒಡವೆಳೆದವನನಧಿಕಾರಿಮಾಡವೇಡೆಂಬುದುತ್ತರವಾಕ್ಯಂ :

ಸಹಪಾಂಶು[9]ಕ್ರೀಡಿತೋsಮಾತ್ಯೋತಿಪರಿಚಯಾತ್ಸ್ವಯಮೇವರಾಜಾಯತೇ || ೩೬ || ೭೦೨ ||

ಅರ್ಥ : ಸಹಪಾಂಶುಕ್ರೀಡಿತಃ = ಒಡನೆಧೂಳಿದೊರೆದಾಡಿದಂ, ಅಮಾತ್ಯಃ = ಪೆರ್ಗಡೆಯಾದೊಡೆ, ಅತಿಪರಿಚಯಾತ್ = ಮಂದ್ಯಾಳದಿಂ, ಸ್ವಯಮೇವ = ತಾನೇ, ರಾಜಾಯತೇ = ಅರಸಾಗಿನೆಗಳ್ಗುಂ || ಮನದೊಳ್ಮುನಿದನನಧಿಕಾರಿಮಾಡವೇಡೆಂಬುದುತ್ತರವಾಕ್ಯಂ :

—-

೩೩. ದುರಭಿಮಾನಿಯಾದಅಧಿಕಾರಿಯುರಾಜಾಜ್ಞೆಯನ್ನುಉಪೇಕ್ಷಿಸಿನಿರಂಕುಶನಾಗಿವರ್ತಿಸುತ್ತಾನೆ.

೩೪. ಚಿರಕಾಲಸೇವೆಯಲ್ಲಿದ್ದಅಧಿಕಾರಿಯುತಪ್ಪುಮಾಡಿಯೂಆತಂಕಗೊಳ್ಳವನು.

೩೫. ಉಪಕಾರಮಾಡಿದವನುಅಧಿಕಾರಿಯಾದರೆತಾನುಮಾಡಿದಉಪಕಾರವನ್ನೇಮುಂದುಮಾಡಿಎಲ್ಲವನ್ನೂದೋಚಿಕೊಳ್ಳುತ್ತಾನೆ.

೩೬. ಬಾಲ್ಯಸ್ನೇಹಿತನುಅಮಾತ್ಯನಾದರೆಅತಿಪರಿಚಯದಕಾರಣದಿಂದತಾನೇರಾಜನೆಂಬಂತೆವರ್ತಿಸುವನು.

—-

ಅಂತರ್ದುಷ್ಟೋನಿಯುಕ್ತಃಸರ್ವಮನರ್ಥಮುತ್ಪಾದಯತಿ[10]|| ೩೭ || ೭೦೩ ||

ಅರ್ಥ : ಅಂತರ್ದುಷ್ಟಃ = ಮನದೊಳ್ಮುನಿವಂ, ನಿಯುಕ್ತಃ = ಅಧಿಕಾರಿಯಾದೊಡೆ, ಸರ್ವಂ = , ಅನರ್ಥಂ = ಅನರ್ಥಮಂ, ಉತ್ಪಾದತಿ = ಪುಟ್ಟಿಸುಗುಂ || ಅದಕ್ಕುದಾಹರಣಮಂಪೇಳ್ವುದುತ್ತರವಾಕ್ಯಂ :

ಶಕುನಿಶಕಟಾಲಾ[11]ವತ್ರದೃಷ್ಟಾಂತೌ || ೩೮ || ೭೦೪ ||

ಅರ್ಥ : ಶಕುನಿಶಕಟಾತೌ = ಶಕುನಿಯುಂ, ಶಕಟಾಲನುಮೆಂದೀರ್ವರುಂ, ಅತ್ರ = ಇಲ್ಲಿ, ದುಷ್ಟಾಂತೌ = ದೃಷ್ಟಾಂತವಾದರ್ || ಗೋತ್ರಜನಧಿಕಾರಿಯಾಗದೆಂಬುದುತ್ತರವಾಕ್ಯಂ :

[12]ಸುಹೃದಿ[13]ನಿಯೋಗಿನಿಭವತ್ಯವಶ್ಯಂಧನಮಿತ್ರನಾಶಃ || ೩೯ || ೭೦೫ ||

ಅರ್ಥ : ಸುಹೃದಿ = ಗೋತ್ರಜಂ (ನಂಟಂ), ನಿಯೋಗಿನಿ = ಅಧಿಕಾರಿಯಾದಂದು, ಅವಶ್ಯಂ = ನಿಶ್ಚಯದಿಂ, ಧನಮಿತ್ರನಾಶಃ = ಧನದನಂಟುತನದಕೇಡು, ಭವತಿ = ಅಕ್ಕುಂ || ಮೂರ್ಖನಧಿಕಾರಿಯಾದೊಡಂದೋಷಮಂಪೇಳ್ವುದುತ್ತರವಾಕ್ಯಂ :

ಮೂರ್ಖಸ್ಯನಿಯೋಗೇಭರ್ತುರ್ಧರ್ಮಾರ್ಥಯಶಸಾಂಸಂದೇಹೋನಿಶ್ಚಿತಾವನರ್ಥನರಕಪಾತೌ || ೪೦ || ೭೦೬ ||

ಅರ್ಥ : ಮೂರ್ಖಸ್ಯ = ಮೂರ್ಖಂಗೆ, ನಿಯೋಗೇ = ಅಧಿಕಾರಮಾದೊಡೆ, ಭರ್ತುಃ = ಅರಸಂಗೆ, ಧರ್ಮ = ಧರ್ಮಮುಂ, ಅರ್ಥ = ಅರ್ಥಮುಂ, ಯಶಸಾಂ = ಜಸಮೆಂಬಿವಱ, ಸಂದೇಹಃ = ಇರ್ಕುಮೋಇರದೋಎಂಬಸಂದೇಹಮುಂ, ಅನರ್ಥ = ಪೊಲ್ಲಮೆಯುಂ, ನರಕಪಾತೌಚ = ನರಕದೊಳ್ಬೀಳ್ವುದುಮೆಂಬೀಎರಡುಮಪ್ಪುವೆಂದು, ನಿಶ್ಚಿತೌ = ನಿಶ್ಚೈಸಲ್ಪಟ್ಟುವು || ಮೂರ್ಖನನರ್ಥಪರನೆಂಬುದುತಾತ್ಪರ್ಯಂ || ಇಂತಪ್ಪುನಧಿಕಾರಿಪಲಕಾಲಂನಿಲ್ಕುಮೆಂಬದುದುತ್ತರವಾಕ್ಯಂ :

—-

೩೭. ಒಳಗೊಳಗೆದುರಾಲೋಚನೆಯಿಳ್ಳವನುಅಧಿಕಾರಿಯಾದರೆಎಲ್ಲಅನರ್ಥಗಳನ್ನುಉಂಟುಮಾಡುವನು.

೩೮. ಶಕುನಿ, ಶಕಟಾಲರುವಿಷಯದಲ್ಲಿಉದಾಹರಣೆಗಳು.

೩೯. ಸ್ನೇಹಿತನುಅಧಿಕಾರಿಯಾದರೆನಿಶ್ಚಯವಾಗಿಯೂಧನವೂಮಿತ್ರತ್ವವೂನಾಶವಾಗುತ್ತವೆ.

೪೦. ಮೂರ್ಖನುಅಧಿಖಾರಿಯಾದರೆಸ್ವಾಮಿಯಧರ್ಮ, ಅರ್ಥ, ಯಶಸ್ಸುಇವುಗಳುಇರುವವೋಹೋಗುವವೋಎಂಬಸಂದೇಹಉಂಟಾಗಿ, ಅನರ್ಥವೂ, ನರಕಪಾತವೂನಿಶ್ಚಯವಾಗಿಆಗುತ್ತವೆ.

—-

ಸೋಧಿಕಾರೀಚಿರಂನಂದತಿಯಃಸ್ವಾಮಿಪ್ರಸಾದೇನನೋತ್ಸೇಕಯತಿ || ೪೧ || ೭೦೭ ||

ಅರ್ಥ : ಸಃ = ಆ, ಅಧಿಕಾರೀ = ನಿಯೋಗಿ, ಚಿರಂ = ಪಲಕಾಲಂ, ನಂದತಿ = ಪೆರ್ಚುಗುಂ, ಯಃ = ಅವನೋರ್ವಂ, ಸ್ವಾಮಿಪ್ರಸಾದೇನ = ಆಳ್ವನಕಾರುಣ್ಯದಿಂ, ನೋತ್ಸೇಕಯತಿ = ಗರ್ವಿತನಾಗಂ || ಸೊಕ್ಕಿದಂಕಿಡುಗುಮೆಂಬುದುತಾತ್ಪರ್ಯಂ || ಇಂತಪ್ಪದಾಗದೆಂಬುದುತ್ತರವಾಕ್ಯಂ :

ಕಿಂತೇನಪರಿಚ್ಛೇದೇನಯತ್ರಾತ್ಮಕ್ಷೇಶೆನಕಾರ್ಯಂಸುಖಂವಾ[14] || ೪೨ || ೭೦೮ ||

ಅರ್ಥ : ಯತ್ರ = ಎಲ್ಲಿ, ಆತ್ಮಕ್ಷೇಶೇನ = ತನ್ನಾಯಾಸದಿಂ, ಕಾರ್ಯಂ = ಕಾರ್ಯಮುಂ, ಸುಖಂವಾ = ಸುಖಮುಂಮೇಣಕ್ಕುಂ, ತೇನ = ಅಂಥಾ, ಪರಿಚ್ಛೇದೇನ = ನಿಯೋಗದಿಂ, ಕಿಂ = ಏನು (ಪ್ರಯೋಜನಂ) || ತನಗೆಕ್ಲೇಶಮಾಗದಂತುನೆಗಳ್ವುದೆಂಬುದುತಾತ್ಪರ್ಯಂ || ಅದಕ್ಕುದಾಹರಣಮಂಪೇಳ್ವುದುತ್ತರವಾಕ್ಯಂ :

ಕೋನಾಮನಿರ್ವೃತ್ತಿಃಸ್ವಯಮೂಢತೃಣಭೋಜನೋಗಜಸ್ಯ || ೪೩ || ೭೦೯ ||

ಅರ್ಥ : ಸ್ವಯಂ = ತಾಂ, ಊಢತೃಣಭೋಜನಃ = ಹೊತ್ತುತಂದಹುಲ್ಲಂಮೇವ, ಗಜಸ್ಯ = ಆನೆಗಂ, ಕೋನಾಮ = ಆವುದು, ನಿರ್ವೃತ್ತಿಃ = ಆವುದು, ನಿರ್ವೃತ್ತಿಃ = ಸುಖಂ || ಇಂತಪ್ಪನನಡಿಗಡಿಗಾರೆಯ್ವುದೆಂಬುದುತ್ತರವಾಕ್ಯಂ :

—-

೪೧. ಸ್ವಾಮಿಯಅನುಗ್ರಹದಿಂದಗರ್ವಿತನಾಗದಅಧಿಕಾರಿಯುಚಿರಕಾಲಬಾಳುವನು.

೪೨. ತನ್ನಶ್ರಮದಿಂದಲೇಕಾರ್ಯವೂಸುಖವೂಆಗುವದಾದರೆಅಧಿಕಾರಿಯಿಂದಏನುಪ್ರಯೋಜನ?

೪೩. ತಾನೇಹೊತ್ತುತಂದುಹುಲ್ಲನ್ನುತಿನ್ನುವುದಾದರೆಗಜಕ್ಕೆಸುಖವೇನಿದೆ?

—-

ಅಸ್ವತರಸಧರ್ಮಾಣಃ[15]ಪುರುಷಾಃಕರ್ಮಸುವಿನಿಯುಕ್ತಾಃವಿಕುರ್ವತೇತಸ್ಮಾದಹನ್ಯಹನಿತಾನ್ಪರೀಕ್ಷೇತ || ೪೪ || ೭೧೦ ||

ಅರ್ಥ : ಅಸ್ಪತರಸಧರ್ಮಾಣಃ = ತನ್ನಂಗಡಿಗರಲ್ಲದ (ಅಸ್ಪತರಸಧರ್ಮಾಣಃ = ವೇಸರಿಕತ್ತೆಯಸಮಾನವಾದ), ಪುರುಷಾಃ = ಪುರುಷರು, ಕರ್ಮಸು = ವ್ಯಾಪಾರಂಗಳೊಳು, ವಿನಿಯುಕ್ತಾಃ = ಇರಿಸಲ್ಪಟ್ಟರಾಗಿ, ವಿಕುರ್ವತೇ = ವಿಕಾರಕ್ಕೆಸಲ್ವರ್, ತಸ್ಮಾತ್ = ಅದುಕಾರಣದಿಂ, ಅಹನ್ಯಹನಿ = ದಿವಸದಿವಸಕ್ಕಂ, ತಾನ್ = ಅವರ್ಗಳಂ, ಪರೀಕ್ಷೇತ = ಪರೀಕ್ಷಿಸುಗೆ || ತನ್ನಮನದನ್ನರಲ್ಲದರನಡಿಗಡಿಗಾರಯ್ಯದಿರೆವಿಕಾರಕ್ಕೆಸಲ್ವರೆಂಬುದುತಾತ್ಪರ್ಯಂ || ಅಧಿಕಾರಿಗಳಂಕರಂನಂಬಲಾಗದೆಂಬುದುತ್ತರವಾಕ್ಯಂ :

ಮಾರ್ಜಾರೇಷುದುಗ್ಧರಕ್ಷಣಮಿವನಿಯೋಗಿಷುವಿಶ್ವಾಸಕರಣಂ || ೫೪ || ೭೧೧ ||

ಅರ್ಥ : ಮಾರ್ಜಾರೇಷು = ಬೆಕ್ಕುಗಳೊಳ್, ದುಗ್ಧರಕ್ಷಣಮಿವ = ಪಾಲ್ಗಾಪೆಂತಂತೆ, ನಿಯೋಗಿಷು = ಅಧಿಕಾರಿಗಳೊಳ್, ವಿಶ್ವಾಸಕರಣಂ = ನಂಬುಗೆಯಂಮಾಳ್ಪುದು || ನಂಬದೆಯುಂನಂಬಿದಂತಿರ್ಪ್ಪುದೆಂಬುದುತಾತ್ಪರ್ಯಂ || ಅಧಿಕಾರಿಪೆರ್ಚಿದೊಡೆದೋಷಮಂಪೇಳ್ವುದುತ್ತರವಾಕ್ಯಂ :

ಭವೇದ್ಧಿ[16]ಚಿತ್ತವಿಕಾರಿಣಿಶ್ರೀರಪಿಸಿದ್ಧಾನಾಮಾದೇಶಃ || ೪೬ || ೭೧೨ ||

ಅರ್ಥ : ಶ್ರೀರಪಿ = ಶ್ರೀಯುಂ, ಚಿತ್ತವಿಕಾರಿಣಿ = ಮನಮಂಕದಡುವುದುಮೆಂದಿಂತು (ಐಶ್ವರ್ಯವುಳ್ಳುದು), ಸಿದ್ಧಾನಾಂ = ಸಿದ್ಧರ (ಶಿಷ್ಟರ), ಆದೇಶಃ = ಹೇಳಿಕೆ (ಉಪದೇಶವು), ಹಿ = ನೆಟ್ಟನೆ, ಭವೇತ್ = ಆಗುವುದುಂ || ಈಯರ್ಥಮನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಸರ್ವೋಪ್ಯತಿಸಮೃದ್ಧೋಭವತ್ಯಾಯತ್ಯಾಮಸಾಧ್ಯಕೃಚ್ಛ್ರಸಾಧ್ಯಸ್ವಾಮೀಪದಾಭಿಲಾಷೀವಾ || ೪೭ || ೭೧೩ ||

ಅರ್ಥ : ಸರ್ವೋsಪಿ = ಎಲ್ಲಾಪುರುಷರು, ಅತಿಸಮೃದ್ಧಃ = ಕರಂಪೆಚಿಧ, ಆಯತ್ಯಾಂ = ಮೇಲೆ, ಅಸಾಧ್ಯಃ = ಒಡೆಯಂಸಾಧ್ಯನಲ್ಲದಂ, ಕೃಚ್ಛ್ರಸಾಧ್ಯ = ಅರಿದಱುಂಸಾಧಿಸಲ್ಪಡುವಂ, ಸ್ವಾಮೀ = ಆಳ್ವನ, ಪದಾಭಲಾಷೀವಾ = ಪದವಿಯಂಬಯಸುವಂಮೇಣ್, ಭವತಿ = ಅಕ್ಕುಂ || ಕರಂಪೆರ್ಚಿಸಲಾಗದೆಂಬುದುತಾತ್ಪರ್ಯಂ || ಅಮಾತ್ಯರದೋಷಮಂಪೇಳ್ವುದುತ್ತರವಾಕ್ಯಂ :

—-

೪೪. ಹೇಸರಕತ್ತೆಯಸಮಾನರಾದಪುರುಷರುಕೆಲಸಗಳಲ್ಲಿನಿಯೋಗಿಸಲ್ಪಟ್ಟವರಾದರೆಅವರುವಿಕಾರಕ್ಕೆಒಳಗಾಗುವುದರಿಂದಅವರನ್ನುಪ್ರತಿದಿನವೂಪರೀಕ್ಷಿಸುತ್ತಿರಬೇಕಾಗುತ್ತದೆ.

೪೫. ಅಧಿಕಾರಿಗಳಲ್ಲಿವಿಶ್ವಾಸವಿಡುವುದುಹಾಲಿನರಕ್ಷಣೆಯನ್ನುಬೆಕ್ಕಿಗೆವಹಿಸಿಕೊಟ್ಟಂತೆ.

೪೬. ಐಶ್ವರ್ಯವುನಿಯೋಗಿಗಳಚಿತ್ತವನ್ನುವಿಕಾರಗೊಳಿಸುವುದೆಂಬುದುಸಿದ್ಧರಹೇಳಿಕೆ.

೪೭. ಹೆಚ್ಚುಐಶ್ವರ್ಯವನ್ನುಕೂಡಿಟ್ಟುಕೊಂಡಅಧಿಕಾರಿಯುಮುಂದೆಹಿಡಿತದಲ್ಲಿಟ್ಟುಕೊಳ್ಳಲುಆಗದವನಾಗುತ್ತಾನೆ. ಇಲ್ಲವೆಅತೀಕಷ್ಠದಿಂದಶಕ್ಯನಾಗುತ್ತಾನೆ. ಇಲ್ಲವೆಪ್ರಭುಸ್ಥಾನವನ್ನೇಅಪೇಕ್ಷಿಸುವವನಾಗುತ್ತಾನೆ.

—-

ಭಕ್ಷಣಮುಪೇಕ್ಷಣಂಪ್ರಜ್ಞಾಹೀನತ್ವಮುಪರೋಧಶೀಲತಾಪ್ರಪ್ತಾರ್ಥಾ
ಪ್ರವೇಶೋ
ದ್ರವ್ಯವಿನಿಮಯಶ್ಚೇತ್ಯಮಾತ್ಯದೋಷಾಃ || ೪೮ || ೭೧೪ ||

ಅರ್ಥ : ಭಕ್ಷಣಂ = ತಿಂಬುದು, ಉಪೇಕ್ಷಣಂ = ಉಪೇಕ್ಷಿಸುವುದು, ಪ್ರಜ್ಞಾಹೀನತ್ವಂ = ಬುದ್ಧಿಯಿಲ್ಲದುದುಂ, ಉಪರೋಧಶೀಲತಾ = ಕಾರ್ಯಮುಂತಡಮಾಡುಹುವು, ಪ್ರಾಪ್ತಾರ್ಥಾಪ್ರವೇಶಃ = ಬಂದರ್ಥಮಂಪ್ರವೇಶಕ್ಕೆಕುಡದುದುಂ, ದ್ರವ್ಯವಿನಿಮಯಶ್ಚೇತಿ = ದ್ರವ್ಯಮಂಪಲ್ಲಟಿಸುವುದು (ಉತ್ತಮದ್ಯವ್ಯವನುತೆಕ್ಕೊಂಡುಸಾಮಾನ್ಯದ್ರವ್ಯವನುಪಲ್ಲಟಿಸಿಕೊಡುಹಮೆಂದಿತು) ಮೆಂದಿಂತು, ಅಮಾತ್ಯದೋಷಾಃ = ಅಧಿಕಾರಿ (ಪ್ರಧಾನ)ಯದೋಷಂಗಳು || ಅಧಿಕಾರಿಯಮೇಲೆಕರಣಂಗಳನೆಂತುಂಮಾಳ್ಕೆಂಬುದುತ್ತರವಾಕ್ಯಂ :

ಬಹುಮುಖ್ಯಂಅನಿತ್ಯಂಕರಣಂಸ್ಥಾಪಯೇತ್[17] || ೪೯ || ೭೧೫ ||

ಅರ್ಥ : ಬಹುಮುಖ್ಯ = ಪಲಂಬರ್ಮುಖ್ಯಮಪ್ಪಂತು, ಅನಿತ್ಯಂಚ = ಪಲಕಾಲಮಿಲ್ಲದಂ (ಹೊಸದಾಗಿಒಡನೊಡನೆಲೆಕ್ಕವನುಕೊಂಡು) ತು, ಕರಣಂ = ಕರಣಮುಂ, ಸ್ಥಾಪಯೇತ್ = ಇರಿಸುಗೆ || ಪಲಂಬರೊಂದಾಗೆವಂಚಿಸಲಱಿಯರೆಂಬುದುತಾತ್ಪರ್ಯಂ || ಸ್ತ್ರೀಯರೊಳಮರ್ಥದೊಳಮಧಿಕಾರಮನಿಂತುಮಾಳ್ಕೆಂಬುದುತ್ತರವಾಕ್ಯಂ :

ಸ್ತ್ರೀಷ್ವರ್ಥೇಷುಮನಗಪ್ಯಧಿಕಾರೇಜ್ಞಾತಿಸಂಬಂಧಪರದೇಶಜತ್ವಾಪೇಕ್ಷಾನ್ನಿತ್ಯಶ್ಚಾಧಿಕಾರಃ[18] || ೫೦ || ೭೧೬ ||

 

[1]ಮೈ., ಚೌ. ನಾಧಿಕಾರೀ.

[2]ಮೈ. ಬಂಧುಃಸಂಬಂಧೀ.

[3]ಮೈ. ಚೌ. ಯೌನಶ್ಚೇತಿ.

[4]ಮೈ. ಸಹಾಧ್ಯಾಯೀಪಿತೃಪೈತಾಮಹಾದ್ಯಾಗತೋವಾ.

[5]ಮೈ. ಸಯೋನೇರ್ಜಾತೋಯೌನಃ.

[6]ಮೈ. ಅಧಿಕಾರಿಣಂಕುರ್ಯಾತ್.

[7]ಮೈ., ಚೌ. ಧ್ವಜೀಕತ್ಯ. ಈಪಾಠವೇಸೂಕ್ತವಾದುದೆಂದುತೋರುತ್ತದೆ.

[8]ಮೈ. ಸರ್ವಮೇವಾರ್ಥಮವಲುಂಪತಿ.

[9]ಪಾಂಸುಎಂದುಓದಬೇಕು.

[10]ಮೈ. ಈಮತ್ತುಮುಂದಿನವಾಕ್ಯವುಒಂದೇವಾಕ್ಯದಲ್ಲಿಅಡಕವಾಗಿದೆ.

[11]ಶಕುನಿಯಕತೆಗೊತ್ತಿದ್ದದ್ದೇಇದೆ. ಶಕಟಾಲಎಂಬವನುನಂದರಾಜನಮಂತ್ರಿ. ಅವನದುಷ್ಟತನಕ್ಕಾಗಿಅರಸನುಕಾರಾಗೃಹದಲ್ಲಿಟ್ಟಿದ್ದನಂತೆ. ನಂತರಅವನನ್ನೇಮಂತ್ರಿಯಾಗಿಮಾಡಿಕೊಂಡನಂತೆ. ಶಕಟಾಲನುಸೇಡುತೀರಿಸಿಕೊಳ್ಳಲುಚಾಣಕ್ಯನೊಂದಿಗೆಸೇರಿನಂದನನಾಶಕ್ಕೆಕಾರಣನಾದಂತೆ. ಈಕತೆಯನ್ನುಚೌ. ಪ್ರತಿಯಟೀಕೆಯಲ್ಲಿಕೊಡಲಾಗಿದೆ.

[12]ಮೈ., ಚೌ. ಗಳಲ್ಲಿಈಮತ್ತುಮುಂದಿನವಾಕ್ಯವುಹಿಂದುಮುಂದಾಗಿವೆ.

[13]ಸುಹೃತ್ಅಂದರೆಸ್ನೇಹಿತ. ಟೀಕಾಕಾರನುಅದಕ್ಕೆಗೋತ್ರಜ, ನಂಟಎಂದುಅರ್ಥಮಾಡಿದ್ದಾನೆ.

[14]ಮೈ: ಕ್ಲೇಶೇನ್ಯೆವಸುಖಂಸ್ವಾಮಿನಃ.

[15]ಮೈ. ಅಶ್ವಸಧರ್ಮಾಣಃಚೌ. ಸೈಂಧವಾಶ್ವಧರ್ಮಾಣಃ

[16]ಮೈ. ಚೌ. ಬುದ್ಧಿಶ್ಚಿತ್ತವಿಕಾರಿಣೀನಿಯೋಗಿನಾಮಿತಿ.

[17]ಪ್ರಮುಖಅಧಿಕಾರಿಗಳನ್ನುಬಹಳದಿನಗಳವರೆಗೆಒಂದೇಸ್ಥಾನದಲ್ಲಿಡಬಾರದೆಂಬಸಲಹೆಗಮನಾರ್ಹವಾಗಿದೆ.

[18]ಮೈ. ಚೌ. ಈವಾಕ್ಯವುಎರಡರಲ್ಲಿವಿಭಜನಿಸಲ್ಪಟ್ಟಿದೆ.