ಅರ್ಥ : ಸ್ತ್ರೀಷು = ಸ್ತ್ರೀಯರೊಳ್, ಅರ್ಥೇಷುಚ = ಅರ್ಥಂಗಳೊಳಂ, ಮನಾಗಪಿ = ಕಿರಿದಪ್ಪೊಡಂ, ಅಧಿಕಾರೇ = ಅಧಿಕಾರದೊಳಂ, ಜ್ಞಾತಿಸಂಬಂಧಃ = ಬಂಧುತ್ವಮುಂ, ಪರದೇಶಜತ್ವ = ಪರದೇಶದೊಳ್ಪುಟ್ಟಿದುದುಮೆಂದಿವಱ, ಅಪೇಕ್ಞಾತ್ = ಅಪೇಕ್ಷೆಯತ್ತಣಿಂ, ನಿತ್ಯ = ಪಲಕಾಲಂನಿಲ್ವ, ಅಧಿಕಾರಶ್ಚ = ಅಧಿಕಾರಮುಂ, ನ = ಬೇಡ || ನಂಟನುಂಬೇಱೆನಾಡಾತನುಮೆನ್ನದೆಗುಣಮುಳ್ಳನಂಕೆಲವುಕಾಲಾಮಧಿಕಾರಂಮಾಳ್ವುದೆಂಬುದುತಾತ್ಪರ್ಯಂ || ಕರಣಂಗಳಂಪೇಳ್ವುದುತ್ತರವಾಕ್ಯಂ :

—-

೪೮. ಸಿಕ್ಕಿದ್ದನ್ನುತಿಂದುಹಾಕುವದು, ಕಾರ್ಯಕ್ಕೆಅಡ್ಡಿಯನ್ನುಮಾಡುವುದು, ವಸೂಲಾದಹಣವನ್ನುಕೋಶಕ್ಕೆಸೇರಿಸದಿರುವುದು. ಹಣವನ್ನುಅದಲುಬದಲುಮಾಡುವುದು, ಇವುಅಮಾತ್ಯದೋಷಗಳು.

೪೯. ಕರಣರನ್ನುಹೆಚ್ಚಿನಪ್ರಾಧಾನ್ಯತೆಯನ್ನುಕೊಟ್ಟುಜವಾಬ್ದಾರಿಯನ್ನುವಹಿಸಿಕೊಟ್ಟುಕೆಲಕಾಲದವರೆಗೆಮಾತ್ರನೇಮಿಸಬೇಕು.

೫೦. ಸ್ತ್ರೀವಿಷಯದಮತ್ತುಅರ್ಥವ್ಯವಹಾರಕ್ಕೆಸಂಬಂಧಿಸಿದಅಧಿಕಾರವುಬಂಧುವರ್ಗದವರಿಗೂ, ಹೊರದೇಶಿಯರಿಗೂಎಷ್ಟುಮಾತ್ರವೂಇರಕೂಡದು.

—-

ಆದಾಯಬಂಧ[1]ಪ್ರತಿಕಂಟಕನಿಧಿಗ್ರಾಹಕ[2]ರಾಜಾಧ್ಯಕ್ಞಾಕರಣಾನಿ || ೫೧ || ೭೧೭||

ಅರ್ಥ : ಆದಾಯಕ : = ಹೊನ್ನನೆತ್ತುವನಂ, ನಿಬಂಧಕಃ = ಕಂಟಕನಂ, ಪ್ರತಿಕಂಟಕಃ = ಮೇಲುಗರಣಮುಂ, ನಿಧಿಗ್ರಾಹಕಃ = ಭಂಡಾರಿಯುಂ, ರಾಜಾಧ್ಯಕ್ಷಾಃ = ಅರೆಸರಧ್ಯಕ್ಷಮೆಂಬಿವು, ಕರಣಾನಿ = ಕರಣಂಗಳ್ || ನೀವಿಯಂಪೇಳ್ವುದುತ್ತರವಾಕ್ಯಂ :

ಆಯವ್ಯಯವಿಶುದ್ಧಂದ್ರವ್ಯಂನೀವೀ || ೫೧ || ೭೧೮ ||

ಅರ್ಥ : ಆಯವ್ಯಯವಿಶುದ್ಧಂ= ಆಯದೊಳ್ಬೀಯಮಾಗುಳಿದ, ದ್ಯವ್ಯಂ = ಅರ್ಥಂ, ನೀವೀ = ನೀವಿಯೆಂಬುದು || ಆಯದೊಳ್ಬೀಯಮನಿಂತುಕಳೆಗೆಂಬುದುತ್ತರವಾಕ್ಯಂ :

ನೀವಿಬಂಧಕಪುಸ್ತಕಗ್ರಹಣಪೂರ್ವಕಮಾಯವ್ಯಯೌವಿಶೋಧಯೇತ್ || ೫೩ || ೭೧೯ ||

ಅರ್ಥ : ನೀವೀಬಂಧಕ = ನೀವಿಯಸಂಬಂಧಿಯಪ್ಪ, ಪುಸ್ತಕಗ್ರಹಣಪೂರ್ವಕಂ = ಸೀವುಡೆಯಂ (ಕವಳಿಗೆ) ಪಿಡಿವುದುಮುಂತಾಗಿ, ಆಯವ್ಯಯೌ = ಆಯವ್ಯಯಂಗಳಂ | ವಿಶೋಧಯೇತ್ = ಶೋಧಿಸುಗೆ || ಆಯಮುಮಂಬೀಯಮುಮಂಬರೆಯವೇಳ್ಕುಮೆಂಬುದುತಾತ್ಪರ್ಯಂ || ಆಯವ್ಯಯಂಗಳೊಳ್ಸಂಪ್ರತಿಯಿಲ್ಲದಿರ್ದೊಡಿಂತುಮಾಳ್ಕೆಂಬುದುತ್ತರವಾಕ್ಯಂ :

ಆಯವ್ಯಯವಿಪ್ರತಿಪತ್ತೌಕುಲಕರಣ[3]ಕಾರ್ಯಪುರುಷೇಭ್ಯಸ್ತದ್ವಿನಿಶ್ವಯಃ || ೫೪ || ೭೨೦ ||

ಅರ್ಥ : ಆಯವ್ಯಯವಿಪ್ರತಿಪತ್ತೌ = ಆಯವ್ಯಯಂಗಳೊಳ್ಬಕ್ಕುಡಿ(ವಿವಾದ)ಯಾದೊಡೆ, ಕುಲ = ಒಕ್ಕಲುಂ, ಕರಣ = ಕರಣಂಗಳುಂ (ಕರಣಿಕರಿಂ) ಕಾರ್ಯಪುರುಷೇಭ್ಯಃ = ಮಾಳ್ಪಪುರುಷರಮೆಂದಿವರ್ಗಳತ್ತಣಿಂ, ತದ್ವಿನಿಶ್ವಯಃ = ಆಯವ್ಯಯಂಗಳಱಿತಮಕ್ಕುಂ || ಸ್ಥಾನಕುಲಪ್ರತ್ಯಯದಿಂನಿಶ್ಟಯಮಕ್ಕುಮೆಂಬುದುತಾತ್ಪರ್ಯಂ || ನಿಯೋಗಿಗಳರ್ಥಮಂತೆಗೆವುಪಾಯಮಂಪೇಳ್ವುದುತ್ತರವಾಕ್ಯಂ :

—-

೫೧. ಆದಾಯಕ, ನಿಬಂಧಕ, ಪ್ರತಿಕಂಟಕ, ನಿಧಿಗ್ರಾಹಕ, ರಾಜಾಧ್ಯಕ್ಷಇವುಕರಣಗಳು.

೫೨. ಆಯದಲ್ಲಿವ್ಯಯವನ್ನುಕಳೆದರೆಉಳಿಯುವದುಮೂಲಧನವು.

೫೩. ನೀವಿಗೆಸಂಬಂಧಿಸಿದಪುಸ್ತಕಗಳಿಗೆಅನುಗುಣವಾಗಿಆಯವ್ಯಯಗಳನ್ನುಶೋಧಿಸಬೇಕು.

೫೪. ಆಯವ್ಯಯಗಳಲ್ಲಿವ್ಯತ್ಯಾಸಕಂಡುಬಂದರೆಕುಲಕರಣಮತ್ತುಸಂಬಂಧಿಸಿದಅಧಿಕಾರಿಗಳುನಿರ್ಧರಿಸಬೇಕು.

—-

ನಿತ್ಯಪರೀಕ್ಷಣಂಕರ್ಮವಿಪರ್ಯಯಃಪ್ರತಿಪತ್ತಿದಾನಂನಿಯೋಗಿಷ್ವರ್ಥಗ್ರಹಣೋಪಾಯಾಃ || ೫೫ || ೭೨೧ ||

ಅರ್ಥ : ನಿತ್ಯಪರೀಕ್ಷಣಂ = ಎಲ್ಲಾಕಾಲಮಾರಯ್ವುದಂ, ಕರ್ಮವಿಪರ್ಯಯಃ = ಬೆಸನಂಪಲ್ಲಡಿಸುವುದುಂ (ಪಲ್ಲಡಿಸಿನಿಯೋಗಮಂಕುಡುಹುವುದು) ಪ್ರತಿಪತ್ತಿದಾನಂಚ = ಪ್ರತಿಪತ್ತಿಯಂ (ಪದವಿಯಂ) ಕುಡುವುದುಂ, ನಿಯೋಗಿಷು = ಅಧಿಕಾರಿಗಳೊಳ್, ಅರ್ಥಗ್ರಹಣೋಪಾಯಾಃ = ಅರ್ಥಮಂಕೊಳ್ವುಪಾಯಂಗಳು || ಆರೆಯ್ಕೆಯುಮನಧಿಕಾರಮುಮಂಪಲ್ಲಟಂಮಾಡವೇಳ್ಕುಮೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಅಪೀಡಿತಾ[4]ನಿಯೋಗಿನೋದುಷ್ಟವ್ರಣಾಇವಅಂತಸ್ಸಾರಮುದ್ವಮಂತಿ[5] || ೫೬ || ೭೨೨ ||

ಅರ್ಥ : ನಿಯೋಗಿನಃ = ಅಧಿಕಾರಿಗಳು, ಅಪೀಡಿತಾಃ = ಪೀಡಿಸಲ್ಪಡದೆ, ದುಷ್ಟವ್ರಣಾಇವ = ದುಷ್ಟವ್ರಣಗಳಂತೆ, ಅಂತಸ್ಯಾರಂ = ಒಳಗಣಸಾರಮಂ, ನೋದ್ವಮಂತಿ = ಪೀಡಿಸದೆಉಗುಳ್ವರುಮಲ್ಲ || ಈಯರ್ಥಮನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಪುನಃಪುನರಭಿಯೋಗೋನಿಯೋಗಿಷುಮಹೀಪತೀನಾಂವಸುಧಾರಾಃ || ೫೭ || ೭೨೩ ||

ಅರ್ಥ : ಪುನಃಪುನಃ = ಮತ್ತೆಮತ್ತೆ, ಅಭಿಯೋಗಃ = ಪೀಡಿಸುಹಂ, ಮಹೀಪತೀನಾಂ = ಅರಸುಗಳ್ಗೆ, ವಸುಧಾರಾಃ = ಸ್ವರ್ಣವೃಷ್ಟಿ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

—-

೫೫. ನಿತ್ಯಪರೀಕಷೆ, ಕೆಲಸಗಳನ್ನುಅದಲುಬದಲುಮಾಡುವುದು, ಪದವಿಯನ್ನುಕೊಡುವುದು, ಇವುಅಧಿಕಾರಿಗಳಿಂದಹಣವನ್ನುಪಡೆಯುವಉಪಾಯಗಳು.

೫೬. ಅಧಿಕಾರಿಗಳನ್ನುಒತ್ತಾಯಿಸದೆ, ಕೆಟ್ಟಹುಣ್ಣುಗಳಂತೆತಮ್ಮಲ್ಲಿಯಹಣವನ್ನುಕೊಡುವದಿಲ್ಲ.

೫೭. ನಿಯೋಗಿಗಳನ್ನುಪುನಃಪುನಃಒತ್ತಾಯಿಸುವುದರಿಂದಅರಸುಗಳಿಗೆಸ್ವರ್ಣವೃಷ್ಟಿಯಾದಂತಾಗುತ್ತದೆ.

—-

ಸಕೃನ್ನಿಪೀಡಿತಂಹಿಸ್ನಾನವಸ್ತ್ರಂಕಿಂಜಹಾತಿಸಾರ್ದ್ರತಾಂ || ೫೮ || ೭೨೪ ||

ಅರ್ಥ : ಸಕೃತ್ = ಒರ್ಮೆ, ನಿಪೀಡಿತಂಹಿ = ಪಿಂಡಿದ, ಸ್ನಾನವಸ್ತ್ರಂ = ವೊಲ್ಲಣಿಗೆ, ಸಾರ್ದ್ರತಾಂ = ಆರ್ದ್ರತ್ಪಮುಂ, ಕಿಂಜಹಾತಿ = ಏಂಬಿಡುಗುಮೇಂ? ಅಂತುನೆಗಳಲರ್ಥಮುಮಭಿಮಾನಮುಮಕ್ಕುಮೆಂಬುದುತ್ತರವಾಕ್ಯಂ :

ದೇಶಮಪೀಡಯನ್ಬುದ್ಧಿಪುರುಷಕಾರಾಭ್ಯಾಂಪೂರ್ವನಿಬಂಧನಮಧಿಕಂಕುರ್ವನ್ನರ್ಥಮಾನೌಲಭತೇ || ೫೯ || ೭೨೫ ||

ಅರ್ಥ : ದೇಶಂ = ನಾಡಂ, ಅಪೀಡಯನ್ = ಪೀಡಿಸದೆ, ಬುದ್ಧಿಪುರುಷಕಾರಾಭ್ಯಾಂ = ಬುದ್ಧಿಯಂಪೌರುಷಮುಮೆಂದಿವಱಿಂ, ಪೂರ್ವನಿಬಂಧನಂ = ಮುನ್ನತೆಱುವಧನದಿಂ, ಅಧಿಕಂ = ಅಧಿಕಮಂ, ಕುರ್ವನ್ = ಮಾಡುತ್ತಿರ್ದುಂ, ಅರ್ಥಮಾನೌ = ಅರ್ಥಮುಂಮಾನ(ಮನ್ನಣೆ) ಮೆಂಬಿವಂಲಭತೇ = ಪಡೆಗುಂ || ಪ್ರಜಾಸಮೃದ್ಧಿಯಂಮಾಡುತ್ತಲರ್ಥಮಮುಪಾರ್ಜಿಸುವುದೆಂಬುದುತಾತ್ಪರ್ಯಂ || ಕೆಲಸಮನಿಂತಪ್ಪಂಗೆಂದುಪೇಳ್ವುದುತ್ತರವಾಕ್ಯಂ :

ಯೋಯತ್ರಕರ್ಮಣಿಕುಶಲಸ್ತಂತತ್ರನಿಯೋಜಯೇತ್ || ೬೦ || ೭೨೬ ||

ಅರ್ಥ : ಯಃ = ಆವನೋರ್ವಂ, ಯತ್ರ = ಆವುದೊಂದು, ಕರ್ಮಣಿ = ಕೆಲಸದೊಳ್, ಕುಶಲಃ = ಬುದ್ಧಿವಂತಂ, ತಂ = ಆತನಂ, ತತ್ರ = ಅಲ್ಲಿ, ನಿಯೋಜಯೇತ್ = ಇರಿಸುಗೆ || ಸ್ವಾಮಿಕಾರುಣ್ಯಂಗೆಯ್ವುದಮಱಿಯದಂಮಾಡಲಾಱನೆಂಬುದುತ್ತರವಾಕ್ಯಂ :

ಖಲುಸ್ವಾಮಿಪ್ರಸಾದಃಸೇವಕೇಷುಕಾರ್ಯಸಿದ್ಧಿನಿಬಂಧನಂಕಿಂತುಸ್ವಬುದ್ಧಿಪುರುಷಕಾರಾಧೀನಃ || ೬೧ || ೭೨೭ ||

ಅರ್ಥ : ಸೇವಕೇಷು = ನಿಯೋಗಿಗಳೊಳ್, ಸ್ವಾಮಿಪ್ರಸಾದಃ = ಆಳ್ದನಕಾರುಣ್ಯಂ, ಕಾರ್ಯಸಿದ್ಧಿನಿಬಂಧನಂ = ಕಾರ್ಯದತೀರ್ಕಣೆಗೆಕಾರಣಂ, ನಖಲು = ಅಪ್ಪುದೆಯಲ್ಲ, ಕಿಂತು = ಮತ್ತೆ, ಬುದ್ಧಿಪುರುಷಕಾರಾಧೀನಃ = ಬುದ್ಧಿಪೌರುಷಂಗಳವಶದಿಂಕಾರ್ಯಮಪ್ಪುದು || ಅಱಿಯದಕೆಲಸಮಂಕುಡಲಾಗದೆಂಬುದುತಾತ್ಪರ್ಯಂ || ಅಱಿಯದಂಗೆಕೊಟ್ಟೊಡೆದೋಷಮಂಪೇಳ್ವುದುತ್ತರವಾಕ್ಯಂ :

—-

೫೮. ಒಮ್ಮೆಯೇಹಿಂಡಿದರೆಸ್ನಾನವಸ್ತ್ರದಲ್ಲಿಯನೀರುಹೋದೀತೇ?

೫೯. ನಾಡನ್ನುಪೀಡಿಸದೆಬುದ್ಧಿಮತ್ತುಅಧಿಕಾರದಸಹಾಯದಿಂದಮೂಲಧನವನ್ನುಅಧಿಕಗೊಳಿಸಿದರೆಅರ್ಥವನ್ನೂಮಾನವನ್ನೂಪಡೆಯುವನು.

೬೦. ಯಾರುಯಾವಕೆಲಸದಲ್ಲಿಕುಶಲನೋಅವನನ್ನುಕೆಲಸದಲ್ಲಿನೇಮಿಸಬೇಕು.

೬೧. ಸೇವಕರಲ್ಲಿಆಳುವವನಕಾರುಣ್ಯವುಕಾರ್ಯಸಿದ್ಧಿಗೆಕಾರಣವಲ್ಲ. ಬುದ್ಧಿಮತ್ತುಪೌರುಷಗಳೇಕಾರಣಗಳು.

—-

ಶಾಸ್ತ್ರವಿದಪ್ಯದೃಷ್ಟಕರ್ಮಸು[6]ವಿಷಾದಂಗಚ್ಛೇತ್ || ೬೨ || ೭೨೮ ||

ಅರ್ಥ : ಶಾಸ್ತ್ರವಿದಪಿ = ಶಾಸ್ತ್ರಮಂಬಲ್ಲವನುಂ, ಅದೃಷ್ಟಕರ್ಮಸು = ಅಱಿಯಬಾರದಕರ್ಮಮನುಳ್ಳವ್ಯಾಪಾರಂಗಳೊಳು, ವಿಷಾದಂ = ದುರ್ಮಳಿಕೆಯುಂ (ಅನಿಷ್ಟವನು) ನಗಚ್ಛೇತ್ = ಏದುವನಲ್ಲಂ (ಗಚ್ಛೇತ್-ಏದುವಂ) || ಅಂತಪ್ಪಕಾರ್ಯಂಗಳೊಳುಸ್ವಾಮಿಯಂಬೆಸಗೊಂಡುನೆಗಳ್ವುದೆಂಬುದುತ್ತರವಾಕ್ಯಂ :

ಅನಿವೇದ್ಯಭರ್ತುನಂಕಂಚಿದಾರಂಭಂಕುರ್ಯಾದನ್ಯತ್ರಾಪತ್ಪ್ರತೀಕಾರೇಭ್ಯಃ || ೬೩ || ೭೨೯ ||

ಅರ್ಥ : ಅನಿವೇದ್ಯ = ಅಱಿಪದೆ, ಭರ್ತುಃ = ಆಳ್ದಂಗೆ, ಕಂಚಿತ್ = ಆವ, ಆರಂಭಂ = ಕಾರ್ಯಾಮಂ, ನಕುರ್ಯಾತ್ = ಮಾಡದಿರ್ಕೆ, ಆಪತ್ಪ್ರತೀಕಾರೇಭ್ಯಃ = ಆಪತ್ತುಗಳಂಮಾಣಿಸುವವ್ಯಾಪಾರದತ್ತಣಿಂ, ಅನ್ಯತ್ರ = ಪೆಱವುಳಿ || ಸ್ವಾಮಿಯಾಪತ್ತಂಬೆಸಗೊಳ್ಳದೆಮಾಣಿಸುವುದೆಂಬುದುತಾತ್ಪರ್ಯಂ || ತೊಟ್ಟನೆಪೆರ್ಚಿದಂಗಿಂತುಮಾಳ್ಪುದೆಂಬುದುತ್ತರವಾಕ್ಯಂ :

ಸಹಸೋಪಚಿತಾರ್ಥಃಮೂಲಧನಮಾತ್ರೇಣಾವಶೇಷಯಿತವ್ಯಃ || ೬೪ || ೭೩೦ ||

ಅರ್ಥ : ಸಹಸಾ = ತೊಟ್ಟನೆ, ಉಪಚಿತಾರ್ಥಃ = ನೆರಪಿದರ್ಥಮನುಳ್ಳಂ, ಮೂಲಧನಮಾತ್ರೇಣ = ಮೊದಲರ್ಥದನಿತರಿಂದಮೆ, ಅವಶೇಷಯಿತವ್ಯಃ = ಉಳಿಪಲ್ಪಡುವಂ || ತೊಟ್ಟನೆಪೆರ್ಚಿದನಲ್ಲಿಮೊದಲ್ಗಿಡಲೀಯದರ್ಥಮಂಕಳೆದುಕೊಳ್ವುದೆಂಬುದುತಾತ್ಪರ್ಯಂ || ಅಧಿಕಾರಿಗಳ್ತಮ್ಮೊಳ್ಮಚ್ಚರಿಸೆಲಾಭಮಂಪೇಳ್ವುದುತ್ತರವಾಕ್ಯಂ :

—-

೬೨. ಶಾಸ್ತ್ರಬಲ್ಲವನಾಗಿದ್ದರೂಅವನಿಗೆತಿಳಿಯದಕಾರ್ಯಗಳಲ್ಲಿವಿಷಾದಪಡಬಾರದು.

೬೩. ಆಪತ್ತನ್ನುಪರಿಹರಿಸುವಕಾರ್ಯದವಿನಹಅರಸನಿಗೆತಿಳಿಸದೆಯಾವಕಾರ್ಯವನ್ನೂಮಾಡಕೂಡದು.

೬೪. ಆತುರಗೊಂಡುಅರ್ಥಕೂಡಿಸಿದವನುಮೂಲಧನಮಾತ್ರವನ್ನುಉಳಿಸಿಕೊಳ್ಳುವನು.

—-

ಪರಸ್ಪರಕಲಹೋನಿಯೋಗಿಷುಭೂಭುಜಾಂನಿಧಿಃ || ೬೫ || ೭೩೧ ||

ಅರ್ಥ : ನಿಯೋಗಿಷು = ಅಧಿಕಾರಿಗಳೊಳು, ಪರಸ್ಪರಕಲಹಃ = ಓರ್ವರೋರ್ವರೊಳ್ಕಲಹಂ, ಭೂಭುಜಾಂ = ಅರಸುಗಳ್ಗೆ, ನಿಧಿಃ = ನಿಕ್ಷೇಪಂ || ತಮ್ಮೊಳ್ಮಚ್ಚರಮಿಲ್ಲದಧಿಕಾರಿಗಳರ್ಥಮಂಕುಡದಿರರೆಂಬುದುತಾತ್ಪರ್ಯಂ || ಅಧಿಕಾರಿಗಳ್ಪೆರ್ಚ್ಚಲೇಸೆಂಬುದುತ್ತರವಾಕ್ಯಂ :

ನಿಯೋಗಿಲಕ್ಷ್ಮೀಃಕ್ಷೀತೀಶ್ವರಾಣಾಂದ್ವಿತೀಯಕೋಶಃ || ೬೬ || ೭೩೨ ||

ಅರ್ಥ : ನಿಯೋಗಲಕ್ಷ್ಮೀಃ = ಅಧಿಕಾರಿಗಳಸಿರಿ, ಕ್ಷಿತೀಶ್ವರಾಣಾಂ = ಅರಸುಗಳ್ಗೆ, ದ್ವಿತೀಯಂ = ಎರಡನೆಯ, ಕೋಶಃ = ಭಂಡಾರಂ || ಪರಿಗ್ರಹದಪೆರ್ಚ್ಚುಅರಸನಪೆರ್ಚ್ಚೆಂಬುದುತಾತ್ಪರ್ಯಂ || ಇಂತಪ್ಪುದಂಸಂಗ್ರಹಿಸುವುದೆಂಬುದುತ್ತರವಾಕ್ಯಂ :

[7]ಸರ್ವಸಂಗ್ರಹೇಷುಮಹಾನ್ಧಾನ್ಯಸಂಗ್ರಹಃ || ೬೭ || ೭೩೩ ||

ಅರ್ಥ : ಸರ್ವಸಂಗ್ರಹೇಷು = ಎಲ್ಲಾಸಂಗ್ರಹಂಗಳೊಳ್, ಧಾನ್ಯಸಂಗ್ರಹಃ = ಧಾನ್ಯಸಂಗ್ರಹಂ, ಮಹಾನ್ = ಪಿರಿದು || ಧಾನ್ಯಮನಧಿಕಮಾಗಿನೆರೆಪುವುದೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ಯನ್ನಿಬಂಧನಂಜೀವಿತಂ[8] || ೬೮ || ೭೩೪ ||

ಅರ್ಥ : ಯನ್ನಿಬಂಧನಂ = ಅವುದೊಂದುಕಾರಣಮುಳ್ಳುದು, (ಆವುದೊಂದುಧಾನ್ಯಸಂಗ್ರಹಾಧೀನವಾಗಿಹುದು) ಜೀವಿತಂ = ಬಾಳ್ವೆ || ಪಲತೆಱದಕ್ಲೇಶದಿಂಜೀವಿತಹೇತುಮಪ್ಪಧಾನ್ಯಮನುಪಾರ್ಜಿಸುವುದೆಂಬುದುತಾತ್ಪರ್ಯಂ || ಈಯರ್ಥಮನೆದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ಖಲುಮುಖೇನಿಕ್ಷಿಪ್ತಂಸತ್ಯರೋತಿದ್ರವಿಣಂಪ್ರಾಣತ್ರಾಣಂಯಥಾಧಾನ್ಯಂ || ೬೯ || ೭೩೫ ||

ಅರ್ಥ : ಮುಖೇ = ಮುಖದೊಳ್, ನಿಕ್ಷಿಪ್ತಂಸತ್ = ಇಕ್ಕಲ್ಪಟ್ಟುದಾಗಿ, ದ್ರವಿಣಂ = ದ್ರವ್ಯಂ, ಪ್ರಾಣತ್ರಾಂ = ಪ್ರಾಣದರಕ್ಷಣಮಂ, ನಖಲುಕರೋತಿ = ಮಾಳ್ಪುದೆಯಲ್ಲ, ಯಥಾ = ಹೇಂಗೆ, ಪ್ರಾಣತ್ರಾಣಂ = ಪ್ರಾಣದರಕ್ಷೆಯಂಮಾಳ್ಕುಂ, ಧಾನ್ಯಂ = ಧಾನ್ಯವು || ಪಲಕಾಲಮಿರ್ಪಧಾನ್ಯಮಂಪೇಳ್ವುದುತ್ತರವಾಕ್ಯಂ :

—-

೬೫. ಅಧಿಕಾರಿಗಳಲ್ಲಿಪರಸ್ತರಜಗಳವುಅರಸನಿಗೆನಿಧಿಇದ್ದಂತೆ.

೬೬. ಅಧಿಕಾರಿಗಳಸಿರಿಯುಅರಸನಿಗೆಎರಡನೆಯಕೋಶವಿದ್ದಂತೆ.

೬೭. ಎಲ್ಲಸಂಗ್ರಹಗಳಿಗಿಂತಲೂಮುಖ್ಯವಾದದ್ದುಧಾನ್ಯಸಂಗ್ರಹ.

೬೮. ಧಾನ್ಯಸಂಗ್ರಹದಿಂದಲೇಜೀವಿತವು.

೬೯. ಧಾನ್ಯದಂತೆಬಾಯಲ್ಲಿಟ್ಟದ್ರವ್ಯವುಪ್ರಾಣರಕ್ಷಣೆಮಾಡಲಾರದು.

—-

ಸರ್ವಧಾನ್ಯೇಷುಚಿರಂಜೀವಿನಃಕೋದ್ರವಾಏವ || ೭೦ || ೭೩೬ ||

ಅರ್ಥ : ಸರ್ವಧಾನ್ಯೇಷು = ಎಲ್ಲಧಾನ್ಯಂಗಳೊಳು, ಚಿರಂಜೀವಿನಃ = ಪಲಕಾಮಿರ್ಪ್ಪುವು, ಕೋದ್ರವಾಏವ = ಕೋದ್ರವಂಗಳೇ (ಹಾರಕಂಗಳು) ||

ಅನವಂನವೇನವರ್ಧಯಿತವ್ಯಂ, ವ್ಯಯಿತವ್ಯಂ || ೭೧ || ೭೩೭ ||

ಅರ್ಥ : ಅನವಂ = ಪಳೆಯಧಾನ್ಯಮನುಂ, ನವೇನ = ಪೊಸತರಿಂಪಲ್ಲಡಿಸಿ, ವರ್ಧಯಿತವ್ಯಂ = ಪೆಚ್ಚಿಸಲ್ಪಡುವುದು, ವ್ಯಯಿತವ್ಯಂಚ = ಬೀಯಂಗೈಯಲ್ಪಡುವುದುಂ || ಪಳೆಯದಂಬಡ್ಡಿಗೊಟ್ಟುಪೆರ್ಚಿಸುವುದೆಂಬುದುತಾತ್ಪರ್ಯಂ || ಲವಣಸಂಗ್ರಹಂಲೇಸೆಂಬುದುತ್ತರವಾಕ್ಯಂ :

ಲವಣಸಂಗ್ರಹಃಸರ್ವರಸಾನಾಮುತ್ತಮಂ || ೭೨ || ೭೩೮ ||

ಅರ್ಥ : ಸರ್ವದಸಾನಾಂ = ಎಲ್ಲಾರಸಂಗಳೊಳಗೆ, ಲವಣಸಂಗ್ರಹಃ = ಉಪ್ಪಿನಸಂಗ್ರಹಂ, ಉತ್ತಮಃ = ಲೇಸು || ಉಪ್ಪಿಲ್ಲದೇನುಂಲೇಸಲ್ಲೆಂಬುದುತಾತ್ಪರ್ಯಂ || ಈಯರ್ಥಮನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಸರ್ವರಸಮಪ್ಯಲವಣಮನ್ನಂಗೋಮಯಾಯತೇ || ೭೩ || ೭೩೯ ||

ಅರ್ಥ : ಸರ್ವರಸಂಅಪಿ = ಎಲ್ಲಾರಸಮನುಳ್ಳುದಾಗಿಯುಂ, ಅಲವಣಂ = ಉಪ್ಪಿಲ್ಲದ, ಅನ್ನಂ, ಆಹಾರಂ, ಗೋಮಹಾಯತೇ = ಸೆಗಣಿಯಂತಕ್ಕುಂ ||

ಇತ್ಯಮಾತ್ಯಸಮುದ್ದೇಶಃ || ೧೭ ||[9]

ಸಮುದ್ದೇಶದವಾಕ್ಯಗಳು || ೭೩ || ಒಟ್ಟು || ೭೩೯ ||

—-

೭೦. ಎಲ್ಲಧಾನ್ಯಗಳಲ್ಲಿಯೂಬಹುಕಾಲಇರತಕ್ಕಂಥಧಾನ್ಯವುಹಾರಕನವಣೆಜಾತಿಯದು.

೭೧. ಹಳೆಯಧಾನ್ಯವನ್ನುಹೊಸದರಿಂದಹೆಚ್ಚಿಸಬೇಕುಮತ್ತುವ್ಯಯಿಸಬೇಕು.

೭೨. ಉಪ್ಪಿನಸಂಗ್ರಹವುಎಲ್ಲರಸಗಳಿಗಿಂತಲೂಉತ್ತಮ.

೭೩. ಎಲ್ಲರಸಗಳಿದ್ದರೂಉಪ್ಪಿಲ್ಲದಅನ್ನವುಸಗಣಿಯಂತಾಗುತ್ತದೆ.

—-

 

[1]ಮೈ., ಚೌ. ಗಳಲ್ಲಿಯಂತೆಆದಾಯಕನಿಬಂಧಕಎಂದಿರಬೇಕು. ಟೀಕೆಯಲ್ಲಿಹಾಗೆಇದೆ.

[2]ಮೈ. ನೀವಿಗ್ರಾಹಕ.

[3]ಮೈ. ಚೌ. ಕುಶಲಕರಣ.

[4]ಮೈ. ಚೌ. ನಾಪೀಡಿತಾ.

[5]ಅಂತಸ್ಸಾರಂನೋದ್ವಮಂತಿಎಂದಿರಬೇಕು. ಟೀಕೆಯಲ್ಲಿಹಾಗೆಇದೆ.

[6]ಮೈ. ಚೌ. ಅದೃಷ್ಟಕರ್ಮಾಕರ್ಮಸು;  ನಮ್ಮಮತ್ತುಈಪಾಠಗಳಿಗೂಅರ್ಥವ್ಯತ್ಯಾಸವಿದೆ. ತಿಳಿಯಲಾರದಕೆಲಸಗಳಲ್ಲಿಬಲ್ಲಿದನಿಗೂದಿಕ್ಕುತಪ್ಪುತ್ತದೆ. ಎಂದುಆಪಾಠಗಳಅರ್ಥವಾದರೆನಮ್ಮಪಾಠದಹಾಗೂಟೀಕಾಕಾರನಪ್ರಕಾರತಿಳಿಯಲಾರದಕೆಲಸಗಳಲ್ಲಿಸಹಬಲ್ಲಿದನುಅಳುಕಬಾರದುಎಂದುಸೂಚಿತವಾಗುತ್ತದೆ.

[7]ಮೈ. ಈ. ಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ.

[8]ಮೈ. ಚೌ. ‘ಜೀವಿತಂ’ ದಮುಂದೆಸಕಲಃಪ್ರಯಾಸಶ್ಷಎಂಬಹೆಚ್ಚಿನಪದಗಳಿವೆ.

[9]ಇದು೧೮ಎಂದಿರಬೇಕು.