ಸಪ್ತಾಂಗದೊಳೆಱಡನೆಯಪೆರ್ಗಡೆ[1]ಯಾಗವೇಳ್ಕುಮೆಂಬುದುತ್ತರವಾಕ್ಯಂ :

ಚತುರಂಗದ್ಯೂತೇ[2]sಪಿನಾನಾಮಾತ್ಯೋರಾಜಾಸ್ತಿಕಿಂಪುನರನ್ಯಃ || || ೬೬೭ ||

ಅರ್ಥ : ಚತುರಂಗದ್ಯೋತೇಅಪಿ = ಚರುತಂಗಮೆಂಬೀಜೂದಿನೊಳಂ, ನಮಾತ್ಯಃ = ಪೆರ್ಗಡೆಯಿಲ್ಲದ, ರಾಜಾ = ಅರಸಂ, ನಾಸ್ತಿ = ಇಲ್ಲಂ, ಪುನಃ = ಮತ್ತೆ, ಅನ್ಯಃ = ಉಳಿದರಸುಪೆರ್ಗಡೆಯಿಲ್ಲದಂ, ಕಿಂ = ಏನ್ || ಪ್ರಧಾನನಾಗವೇಳ್ಕುಂಎಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ನೈಕಸ್ಯಕಾರ್ಯಸಿದ್ಧಿರಸ್ತಿ[3] || || ೬೬೮ ||

ಅರ್ಥ : ಏಕಸ್ಯ = ಓರ್ವಂಗೆ, ಕಾರ್ಯಸಿದ್ಧಿಃ = ಕಾರ್ಯದಸಿದ್ಧಿಯುಂ, ನಾಸ್ತಿ = ಇಲ್ಲ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಹ್ಯೇಕಚಕ್ರಂಪರಿಭ್ರಮತಿ || || ೫೫೯ ||

ಅರ್ಥ : ಏಕಚಕ್ರಂ = ಒಂದುಗಾಲಿ, ನಹಿಪರಿಭ್ರಮತಿ = ಪರಿವುದಲ್ಲದು ||

—-

. ಚದುರಂಗದಆಟದಲ್ಲಿಯೂಅಮಾತ್ಯನಿಲ್ಲದರಾಜನಿಲ್ಲದಿರುವಾಗಚತುರಂಗಬಲವಿದ್ದೂಅಮಾತ್ಯನಿಲ್ಲದರಾಜನಿರಲಾರನು.

. ಒಬ್ಬನಿಂದಲೇಕಾರ್ಯಸಿದ್ಧಿಯಾಗುವದಿಲ್ಲ.

. ಒಂದೇಚಕ್ರವುಉರುಳಲಾರದು.

—-

ಕಿಮವಾತಃಸೇಂಧನೋsಪಿವಹ್ನಿರ್ಜ್ವಲತಿ || || ೬೭೦ ||

ಅರ್ಥ : ವಹ್ನಿಃ = ಕಿಚ್ಚು, ಸೇಂಧನೋsಪಿ = ಪುಳ್ಳಿಯುಳ್ಳದಾಗಿಯುಂ, ಅವಾತಃ = ಗಾಳಿಯಿಲ್ಲದಿರ್ದೊಡೆ, ಕಿಂಜ್ವಲತಿ = ಏನುರಿಗುಮೇ || ಅಮಾತ್ಯರಲಕ್ಷಣಮಂಪೇಳ್ವುದುತ್ತರವಾಕ್ಯಂ :

ಸ್ವಕರ್ಮೋತ್ಕರ್ಷಾಪಕರ್ಷಯೋರ್ದಾನಮಾನಾಭ್ಯಾಂಸಹೋತ್ಪತ್ತಿವಿಪತ್ತೀಯೇಷಾಂತೇsಮಾತ್ಯಾಃ || || ೬೭೧ ||

ಅರ್ಥ : ಸ್ವಕರ್ಮ = ತಮ್ಮವ್ಯಾಪಾರಂಗಳ, ಉತ್ಕರ್ಷ = ಪೆರ್ಚುಂ, ಅಪಕರ್ಷಯೋಃ = ಕುಂದುಮೆಂದಿವಱೊಳು, ದಾನ = ಕುಡುವ, ಮಾನಾಭ್ಯಾಂ = ಅಭಿಮಾನಮುಮೆಂಬಿವಱ, ಸಹ = ಒಡನೆ, ಉತ್ಪತ್ತಿ = ಐಶ್ವರ್ಯಮುಂ, ವಿಪತ್ತೀ = ವಿಪತ್ತಿಯೆಂದಿವು, ಯೇಷಾಂ = ಆರುಕೆಲಂಬರ್ಗೆ, ಯಥಾಕ್ರಮದಿಂದಪ್ಪುವು, ತೇ = ಅವರ್ಗಳು, ಅಮಾತ್ಯಾಃ = ಪೆರ್ಗಡೆಗಳೆಂಬರ್ || ಕೆಲಸಮಂಮಾಡಿಪಡೆದಪಸಾಯದಾನದೊಡನೆಸಿರಿಯಾದುದೆಂಬಕೆಲಸಮಂತೀರ್ಚಲಾಱದಭಿಮಾನದಿಂದಾಪತ್ತಾದುದೆಂಬಮನದತರಿಫಲಮನುಳ್ಳರಮಾತ್ಯರೆಂಬುದುತಾತ್ಪರ್ಯಂ || ಅಮಾತ್ಯರಲಕ್ಷಣಮಂಪೇಳ್ವುದುತ್ತರವಾಕ್ಯಂ :

ಆಯೋವ್ಯಯಸ್ವಾಮಿರಕ್ಷಾತಂತ್ರಪೋಷಣಂಚಾಮಾತ್ಯಾನಾಮಧಿಕಾರಃ || || ೬೭೨ ||

ಅರ್ಥ : ಆಯ = ಅಯಮುಂ, ವ್ಯಯ = ಬೀಯಮುಂ, ಸ್ವಾಮಿರಕ್ಷಾ = ಆಳ್ದನರಕ್ಷಿಸುಹಣಮುಂ, ತಂತ್ರಪೋಷಣಂಚ = ಪರಿಗ್ರಹಮಂಪೋಷಿಸುವುದುಂ, ಅಮಾತ್ಯಾನಾಂ = ಪೆರ್ಗಡೆಗಳ, ಅಧಿಕಾರಃ = ಅಧಿಕಾರಂ || ಇನಿತುಗುಣಂಗಳಿಲ್ಲದನಧಿಕಾರಿಯಲ್ಲೆಂಬುದುತಾತ್ಪರ್ಯಂ || ಆಯವ್ಯಯಂಗಳನಿಂತುಮಾಳ್ಪುದೆಂಬುದುತ್ತರವಾಕ್ಯಂ :

ಆಯವ್ಯಯಮುಖಯೋರ್ಮುನಿಕಮಂಡಲುರ್ನಿದರ್ಶನಂ || || ೬೭೩ ||

ಅರ್ಥ : ಆಯವ್ಯಯಮುಖಯೋಃ = ಆಯಮಂಬೀಯ, ಮುಖಂಗಳ್ಗೆಮುನಿಕಮಂಡಲುಃ = ಋಷಿಯರಗುಂಡಿಗೆ, ನಿದರ್ಶನಂ = ದೃಷ್ಠಂತಂ || ಆಯದಿಂಬೀಯಂಕಿಱಿದಾಗವೇಳ್ಕುಮೆಂಬುದುತಾತ್ಪರ್ಯಂ || ಆಯಮಂಪೆರ್ಚಿಸುವುದುತ್ತರವಾಕ್ಯಂ :

—-

. ಬೆಂಕಿಗೆಕಟ್ಟಿಗೆಇದ್ದರೂಗಾಳಿಯಿಲ್ಲದೆಉರಿಯುವುದೇ?

. ತಮ್ಮಕಾರ್ಯಗಳಹೆಚ್ಚುಕಡಿಮೆಗಳು, ಸಂಪತ್ತುವಿಪತ್ತುಗಳು, ರಾಜನದಾನಮಾನಗಳೊಂದಿಗೆಯಾರಲ್ಲಿಸೇರಿರುತ್ತವೆಯೋಅವರೇಅಮಾತ್ಯರು.

. ಆಯ, ವ್ಯಯ, ಸ್ವಾಮಿಯರಕ್ಷಣೆ, ಪರಿವಾರದಪೋಷಣೆಇವುಅಮಾತ್ಯನಅಧಿಕಾರಗಳು.

. ಆಯ, ವ್ಯಯಗಳಮುಖಗಳುಹೇಗಿರಬೇಕೆಂಬುದಕ್ಕೆಮುನಿಗಳಕಮಂಡಲವೇಉದಾಹರಣೆ. (ಕಮಂಡಲುವಿನನೀರುತುಂಬಿಕೊಳ್ಳುವಬಾಯಿದೊಡ್ಡದು, ನೀರುಹೊರಗೆಬರುವರಂಧ್ರವುಸಣ್ಣದು. ಅಂದರೆಆಯಹೆಚ್ಚಾಗಿವೆಚ್ಚಕಡಿಮೆಯಾಗಬೇಕುಎಂದರ್ಥ.)

—-

ಆಯೋದ್ರವ್ಯೋತ್ಪತ್ತಿಮುಖಂ || || ೬೭೪ ||

ಅರ್ಥ : ಆಯಃ = ಆಯಂ, ದ್ರವ್ಯೋತ್ಪತ್ತಿಮುಖಂ = ದ್ರವ್ಯೋತ್ಪತ್ತಿದ್ವಾರಂ || ವ್ಯಯಮಂಪೇಳ್ವುದುತ್ತರವಾಕ್ಯಂ :

ಯಥಾಸ್ವಾಮಿಶಾಸನಂಅರ್ಥಸ್ಯವಿನಿಯೋಗೋವ್ಯಯಃ || || ೬೭೫ ||

ಅರ್ಥ : ಯಥಾಸ್ವಾಮಿಶಾಸನಂ = ಸ್ವಾಮಿಯಬೆಸನಂಎಂತಂತೆ, ಅರ್ಥಸ್ಯ = ಅರ್ಥದ, ವಿನಿಯೋಗಃ = ವಿನಿಯೋಗಂ, ವ್ಯಯಃ = ಬೀಯಮೆಂಬುದು || ಆಯದಿಂಬೀಯಮಧಿಕಮಾದೊಡೆದೋಷಮಂಪೇಳ್ವುದುತ್ತರವಾಕ್ಯಂ :

ಆಯಮನಾಲೋಚ್ಯವ್ಯಯಮಾನೋವೈಶ್ರವಣೋsಪ್ಯವಶ್ಯಂಶ್ರಮಣಾಯತಏವ || ೧೦ || ೬೭೬ ||

ಅರ್ಥ : ಆಯಂ = ಆಯಮಂ = , ಅನಾಲೋಚ್ಯ = ಅರಯ್ಯದೆ, ವ್ಯಯಮಾನಃ = ಬೀಯಂಗೈಯ್ವುತ್ತಿರ್ದಂ, ವೈಶ್ರವಣೋಅಪಿ = ಕುಬೇರನುಂ, ಅವಶ್ಯಂ = ತಪ್ಪದೆ, ಶ್ರಮಣಾಯತೇಏವ = ಋಷಿ[4]ಯಂತಕ್ಕುಂ || ಆಯಮಱಿದುಬೀಯಂಗೆಯ್ವುದೆಂಬುದುತಾತ್ಪರ್ಯಂ || ಸ್ವಾಮಿಯಂಫೇಳ್ವುದುತ್ತರವಾಕ್ಯಂ :

ರಾಜ್ಞಃಶರೀರಂಧರ್ಮಃಕಲತ್ರಮಪತ್ಯಾನಿಸ್ವಾಮಿಶಬ್ದಾರ್ಥಾಃ || ೧೧ || ೬೭೭ ||

ಅರ್ಥ : ರಾಜ್ಞಃ = ಅರಸನ, ಶರೀರಂ = ಶರೀರಮುಂ, ಧರ್ಮಃ = ಧರ್ಮಃ = ಧರ್ಮಮುಂ, ಕಲತ್ರ = ಸ್ತ್ರೀಯುಂ, ಅಪತ್ಯಾನಿಚ = ಮಕ್ಕಳುಂ (ಕುಮಾರರು), ಸ್ವಾಮಿಶಬ್ದಾರ್ಥಾಃ = ಸ್ವಾಮಿಯಶಬ್ದದರ್ಥಂಗಳು || ಕಲತ್ರಾದಿಗಳಂಸ್ವಾಮಿಯಂತರಕಾಣ್ವುದುಸ್ವಾಮಿಯಧರ್ಮಮೆಂಬುದುತಾತ್ಪರ್ಯಂ ||

—-

. ಆಯವುದ್ರವ್ಯೋತ್ಪತ್ತಿಗೆದಾರಿ.

. ಸ್ವಾಮಿಯಅಪ್ಪಣೆಯಂತೆಅರ್ಥವನ್ನುವಿನಿಯೋಗಿಸುವುದು, ವ್ಯಯವು.

೧೦. ಆಯವನ್ನುಆಲೋಚಿಸದೆವ್ಯಯಿಸುವವನುಕುಬೇರನಾದರೂನಿಶ್ಚಯವಾಗಿಯೂಸನ್ಯಾಸಿಯಾಗುತ್ತಾನೆ.

೧೧. ರಾಜನಶರೀರ, ಧರ್ಮ, ಹೆಂಡತಿ, ಮಕ್ಕಳುಇವುಸ್ವಾಮಿಶಬ್ದದಅರ್ಥಗಳು.

—-

ತಂತ್ರಂಚತುರಂಗಬಲಂ || ೧೨ || ೬೭೮ ||

ಅರ್ಥ : ತಂತ್ರಂ = ತಂತ್ರಮೆಂಬುದು, ಚತುರಂಗಬಲಂ = ಹಸ್ತಿ, ಅಶ್ವ, ರಥ, ಪದಾತಿಗಳೆಂಬನಾಲ್ಕಂಗಗಳೆಂಬಸೇನೆ || ಈಸಾಮಗ್ರಿಯಿಲ್ಲದುದುಬಲಾಭಾಸಮೆಂಬುದುತಾತ್ಪರ್ಯಂ || ಇಂತಪ್ಪನಮಾತ್ಯನಾಗಲಾಗದೆಂಬುದುತ್ತರವಾಕ್ಯಂ :

ತೀಕ್ಷ್ಣಂಬಲವತ್ಪಕ್ಷಮಶುಚಿಂವ್ಯಸನಿನಮಶುದ್ಧಾಭಿಜನಮಶಕ್ಯಪ್ರತ್ಯಾವರ್ತನಮತಿವ್ಯಯಶೀಲಮನ್ಯದೇಶಾಯಾತಮವಿಚಕ್ಷಣಮತಿಚಿಕ್ಕಣಂವಾಮಾತ್ಯಂಕುರ್ವೀತ || ೧೩ || ೬೭೯ ||

ಅರ್ಥ : ತೀಕ್ಷ್ಣಂ = ಕ್ರೂರನುಂ, ಬಲವತ್ಪಕ್ಷಂ = ಬಲ್ಲಿದರಂಪಿಡಿದಿರ್ಪನಂ, ಅಶುಚಿಂ = ಶುಚಿಯಿಲ್ಲದವನಂ, ವ್ಯಸನಿನಂ = ವ್ಯಸನಿಯಪ್ಪನಂ, ಅಶುದ್ಧಾಭಿಜನಂ = ದುಃಪರಿಗ್ರಹಮನುಳ್ಳನಂ (ನೀಚವಂಶದಲ್ಲಿಹುಟ್ಟಿದವನನು), ಅಶಕ್ಯಪ್ರತ್ಯಾವರ್ತನಂ = ಮನಮುರಿದಡೆವಗಲ್ಚಲ್ಪಾರದನನಂ (ಮರಳಿಪ್ರಧಾನಿಕೆಯತೆಗೆಯಬಾರದವನನು), ಅತಿವ್ಯಯಶೀಲಂ = ಹಿರಿದುಬೀಯಂಗೆಯ್ವನಂ, ಅನ್ಯದೇಶಾಯಾತಂ = ಪಱನಾಡಿಂಬಂದನಂ, ಅವಿಚಕ್ಷಣಂ = ಪ್ರೌಢನಲ್ಲದವನನುಂ, ಅತಿಚಿಕ್ಕಣಂ, ಚ = ಕರಂಚಿಕ್ಕಣಮಪ್ಪನುಮಂ (ಹಿರಿದುಮೃದುವಾದವನನು), ಅಮಾತ್ಯಂ = ಪೆರ್ಗಡೆಯಿಂ (ಪ್ರಧಾನನುಂ), ನಕುರ್ವೀತ = ಮಾಡದಿರ್ಕೆ || ಈದೋಷಮಿಲ್ಲದನಮಾತ್ಯನೆಂಬುದುತಾತ್ಪರ್ಯಂ || ಅಲ್ಲಿತೀಕ್ಷ್ಣಂಗೆದೋಷಮಂಪೇಳ್ವುದುತ್ತರವಾಕ್ಯಂ :

ತೀಕ್ಷ್ಣೋಭಿಯುಕ್ತಃಸ್ವಯಂಮ್ರಿಯತೇಮಾರಯತಿವಾಸ್ವಾಮಿನಂ || ೧೪ || ೬೮೦ ||

ಅರ್ಥ : ತೀಕ್ಷ್ಣಃ = ತೀವ್ರಂ, ಅಭಿಯುಕ್ತಃ = ಪೀಡಿಸಲ್ಪಟ್ಟನಾಗಿ, ಸ್ವಯಂ = ತಾನೆ, ಮ್ರಿಯತೇ = ಸಾಯುವಂ, ಸ್ವಾಮಿನಂ = ಒಡೆಯನು, ಮಾರಯತಿವಾ = ಕೊಲ್ಗುಮೇಣ್ || ಬಲ್ಲಿದರಪಕ್ಷಪಾತಂಗೆದೋಷಮಂಪೇಳ್ವುದುತ್ತರವಾಕ್ಯಂ :

—-

೧೨. ತಂತ್ರಗಳೆಂದರೆಚತುರಂಗಬಲವು.

೧೩. ಕ್ರೂರಿಯನ್ನುಬಲಿಷ್ಠರಬೆಂಬಲವುಳ್ಳವನನ್ನುಶುಚಿಯಾಗಿರದವನನ್ನು, ಶುದ್ಧರಲ್ಲದಜನರಸಂಗ್ರಹವುಳ್ಳವನನ್ನು, ದುಂದುಗಾರನನ್ನುಅನ್ಯದೇಶೀಯನನ್ನು, ವಿಚಾರಹೀನನನ್ನು, ಅತಿಮೃದುಸ್ವಭಾವದವನನ್ನುಅಮಾತ್ಯನನ್ನಾಗಿನೇಮಿಸಿಕೊಳ್ಳಬಾರದು.

೧೪. ಕ್ರೂರಿಯುಪೀಡಿಸಲ್ಪಟ್ಟರೆತಾನೇಸಾಯುತ್ತಾನೆಇಲ್ಲವೆಸ್ವಾಮಿಯನ್ನುಕೊಲ್ಲುತ್ತಾನೆ.

—-

ಬಲವತ್ಪಕ್ಷೋನಿಯೋಗ್ಯಭಿಯುಕ್ತೋವ್ಯಾಲಗಜಇವ[5]ಸಮೂಲಂನೃಪಾಂಘ್ರಿಪಂಉನ್ಮೂಲಯತಿ || ೧೫ || ೬೮೧ ||

ಅರ್ಥ : ಬಲವತ್ಪಕ್ಷಃ = ಬಲ್ಲಿದರಪಕ್ಷಮನುಳ್ಳ, ನಿಯೋಗಿ = ಪೆರ್ಗಡೆ, ಅಭಿಯುಕ್ತಃ = ನೋಯಿಸಲ್ಪಟ್ಟನಾಗಿ, ವ್ಯಾಲಗಜಇವ = ದುಷ್ಟಗಜದಂತೆ, ಸಮೂಲಂ = ಬೇರ್ವೆರಸಿ, ನೃಪಾಂಘ್ರಿಪಂ = ಅರಸೆಂಬಮರನಂ, ಉನ್ಮೂಲಯತಿ = ಕೀಳ್ಗುಂ || ಅಶುಚ್ಯಾದಿಗಳನಾಲ್ವರದೋಷಮನಱಿಯಲ್ಬಪ್ಪುದೆಂದುಪೇಳ್ದರಿಲ್ಲ || ವ್ಯಯಶೀಲಂಗೆದೋಷಮಂಪೇಳ್ವುದುತ್ತರವಾಕ್ಯಂ :

ಅಲ್ಪಾಯತಿರ್ಮಹಾವ್ಯಯೋಭಕ್ಷಯತಿರಾಜಾರ್ಥಂ || ೧೬ || ೬೮೨ ||

ಅರ್ಥ : ಅಲ್ಪಾಯತಿಃ = ಕಿಱಿದಪಾಯಮನುಳ್ಳಂ, [6]ಮಹಾವ್ಯಯಃ = ಪಿರಿದಪ್ಪಬೀಯಮನುಳ್ಳಮ, ರಾಜಾರ್ಥಂ = ಅರಸರರ್ಥಮಂ, ಭಕ್ಷಯತಿ = ತಿಂಗುಂ ||

ಅಲ್ಪಾಯಮುಖೋಮಹಾಜನರಾಜಪರಿಗ್ರಹಂಪೀಡಯತಿ || ೧೭ || ೬೮೩ ||

ಅರ್ಥ : ಅಲ್ಪಾಯಮುಖಃ = ಕಿಱಿದಪ್ಪಾಯಮುಖಮನುಳ್ಳಂ, ಮಹಾಜನಂ = ಮಹಾಜನವನು, ರಾಜಪರಿಗ್ರಹಂಚ = ಅರಸರಪರಿಗ್ರಹಮಂ (ಪರಿವಾರ), ಪೀಡಯತಿ = ಪೀಡಿಸುಗುಂ || ಪರದೇಶದಿಂಬಂದಂಗೆದೋಷಮಂಪೇಳ್ವುದುತ್ತರವಾಕ್ಯಂ :

[7]ನಾಗಂತುಕೇಷ್ವರ್ಥಾಧಿಕಾರಃಪ್ರಾಣಾಧಿಕಾರೋವಾಸ್ತಿ || ೧೮ || ೬೮೪ ||

ಅರ್ಥ : ಅಗಂತುಕೇಷು = ಪರದೇಶದರೊಳು, ಅರ್ಥಾಧಿಕಾರಃ = ಅರ್ಥಾಧಿಕಾರಂ, ಪ್ರಾಣಾಧಿಕಾರಃವಾ = ಪ್ರಾಣಾಧಿಕಾರಂಮೇಣ್, ನಾಸ್ತಿ = ಇಲ್ಲ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

—-

೧೫. ಬಲಿಷ್ಠರಬೆಂಬಲವುಳ್ಳಅಧಿಕಾರಿನೋಯಿಸಲ್ಪಟ್ಟರೆಮದಿಸಿದಗಜದಂತೆ, ಅರಸನೆಂಬಮರವನ್ನುನಿರ್ಮೂಲಗೊಳಿಸುತ್ತಾನೆ.

೧೬. ಕಡಿಮೆಆಯವೂ, ಅತಿವ್ಯಯವೂರಾಜನಐಶ್ವರ್ಯವನ್ನುನುಂಗಿಹಾಕುತ್ತದೆ.

೧೭. ಹೆಚ್ಚುಆದಾಯಕ್ಕೆಅವಕಾಶವಿಲ್ಲದವನುಜನಸಾಮಾನ್ಯರನ್ನೂರಾಜಪರಿವಾರವನ್ನೂಪೀಡಿಸುವನು.

೧೮. ಹೊರಗಿನಿಂದಬಂದವರಿಗೆಅರ್ಥಾಧಿಕಾರವನ್ನೂ, ರಕ್ಷಣೆಯಅಧಿಕಾರವನ್ನೂಕೊಡಕೂಡದು.

—-

ಯತಃಸ್ಥಿತ್ವಾsಪಿಗಂತಾರೋs ಪಕರ್ತಾರೋವಾ || ೧೯ || ೬೮೫ ||

ಅರ್ಥ : ಯತಃ = ಆವುದೊಂದುಕಾರಣದಿಂ, ತೇ = ಅವರ್ಗಳ್, ಸ್ಥಿತ್ವಾಪಿ = ಇರ್ದುಂ, ಗಂತಾರಃ = ಪೋಪವರ್ಗಳ್, ಅಪಕರ್ತಾರೋವಾ = ಅಪಕಾರಮಂಮಾಡುವವರ್ಗಳ್ || ಸ್ವದೇಶಜನೊಳ್‌ ಗುಣಮಂಪೇಳ್ವುದುತ್ತರವಾಕ್ಯಂ :

ಸ್ವದೇಶಜೇಷ್ವರ್ಥಃಕೂಪೇಪತಿತಇವಕಾಲಾಂತರಾದಪಿಲಬ್ಧುಂಶಕ್ಯತೇ || ೨೦ || ೬೮೬ ||

ಅರ್ಥ : ಸ್ವದೇಶಜೇಷು = ತನ್ನನಾಡಪ್ರಧಾನರೊಳ್, ಅರ್ಥಃ= ಅರ್ಥಂ, ಕೂಪೇ = ಬಾವಿಯೊಳ್, ಪತಿತಇವ = ಇದ್ದರ್ಥದಂತೆ, ಕಾಲಾಂತರಾದಪಿ = ಕಾಲಾಂತರದಿಂದಮುಂ, ಲಬ್ಧುಂ = ಪಡೆಯಲ್ಕೆ, ಶಕ್ಯತೇ = ಬರ್ಪುದು || ಚಿಕ್ಕಣಂದೋಷಮಂಪೇಲ್ವುದುತ್ತರವಾಕ್ಯಂ :

ಅತಿಚಿಕ್ಕಾಣಾ[8]ದರ್ಥಲಾಭಃಪಾಷಾಣಾದ್ವಲ್ಕಲೋತ್ಪಾಟನಮಿವ || ೨೧ || ೬೮೭ ||

ಅರ್ಥ : ಅತಿಚಿಕ್ಕಣಾತ್‌ = ಕಡುಲೋಭನತ್ತಣಿಂದಮುಂ, ಅರ್ಥಲಾಭಃ = ಅರ್ಥದಪಡೆಪು, ಪಾಷಾಣಾತ್ = ಕಲ್ಲತ್ತಣಿಂದಮುಂ, ವಲ್ಕಲೋತ್ಪಾಟನಂಮಿವ = ನಾರೆತ್ತುವಂತೆ || ಲೋಭಪರಿಗ್ರಹಮಂಸಂತಸಂಬಡೆಸಲಾಱನೆಂಬುದುತಾತ್ಪರ್ಯಂ || ಇಂತಪ್ಪನನಮಾತ್ಯನಂಮಾಡವೇಡೆಂಬುದುತ್ತರವಾಕ್ಯಂ :

ಸೋsಧಿಕಾರೀಯಃಸ್ವಾಮಿನಾಸತಿದೋಷೇಸುಖೇನನಿಗ್ರಹಿತುಂಗ್ರಹೀತುಂ[9]ಶಕ್ಯತೇ || ೨೨ || ೬೮೮ ||

ಅರ್ಥ : ಸಃ = ಅತಂ, ಅಧಿಕಾರೀ = ಅಧಿಕಾರಿಯೆಂಬಂ, ಯಃ = ಆವನೋರ್ವಂ, ದೋಷೇಸತಿ = ದೋಷಮುಂಟಾಗುತ್ತಿರಲು, ಸ್ವಾಮಿನಾ = ಆಳ್ದನಿಂ, ಸುಖೇನ = ಸುಖದಿಂದಂ, ನಿಗ್ರಹೀತುಂ = ನಿಗ್ರಹಿಸಲುಂ, ಗ್ರಹೀತುಂಚ = ಅರ್ಥಮಂಕೊಳಲುಂ, ಶಕ್ಯತೇ = ಬರ್ಪಂ || ಬಲ್ಲಿದನನಧಿಕಾರೀಮಾಡವೇಡೆಂಬುದುತಾತ್ಪರ್ಯಂ || ಇಂತಪ್ಪನಂಪೆರ್ಗಡೆಯಂಮಾಡವೇಡೆಂಬುದುತ್ತರವಾಕ್ಯಂ :

—-

೧೯.ಏಕೆಂದರೆಅವರುಸ್ವಲ್ಪಕಾಲಇದ್ದುಹೋಗುವವರುಇಲ್ಲವೆಅಪಕಾರಮಾಡುವವರು.

೨೦. ಸ್ವದೇಶದವರಾದತನ್ನಪ್ರಧಾನರಲ್ಲಿಅರ್ಥವುಭಾವಿಯಲ್ಲಿಬಿದ್ದಅರ್ಥದಂತೆಕಾಲಾಂತರದಲ್ಲಿಯಾದರೂಪಡೆದುಕೊಳಳುವದಕ್ಕೆಸಾಧ್ಯವಾಗುತ್ತದೆ.

೨೧. ಕಡುಲೋಭಿಯಿಂದಅರ್ಥವನ್ನುಪಡೆಯುವದುಕಲ್ಲಿನಿಂದನಾರುತೆಗೆಯಲುಯತ್ನಿಸಿದಂತೆ.

೨೨. ದೋಷವಿದ್ದಲ್ಲಿಸ್ವಾಮಿಯುಯಾರನ್ನುಶಿಕ್ಷಿಸಬಹುದೋ, ಅಥವಾಅರ್ಥವನ್ನುಪಡೆಯಬಹುದೋಅಂಥವನೇಅಧಿಕಾರಿಯಾಗಿರಬೇಕು.

—-

 

[1]ಟೀಕಾಕಾರನುಪೆರ್ಗಡೆಎಂಬಪದವನ್ನುಅಮಾತ್ಯಎಂಬುದಕ್ಕೆಸಂವಾದಿಯಾಗಿಉಪಯೋಗಿಸಿದ್ದುದನ್ನುಗಮನಿಸಬೇಕು. ಸಾಮಾನ್ಯವಾಗಿಅಮಾತ್ಯಎಂದರೆಮಂತ್ರಿಮತ್ತುಪೆರ್ಗಡೆಎಂದರೆಗ್ರಾಮದಅಥವಾಒಂದುಪ್ರದೇಶದಮುಖ್ಯಸ್ಥಎಂದುಭಾವಿಸಲಾಗುತ್ತದೆ. ಆದರೆ, ಟೀಕಾಕಾರನುಅಮಾತ್ಯಪದಕ್ಕೆಪೆರ್ಗಡೆಎಂಬಅರ್ಥಕೊಡುತ್ತಾನೆ. ಅಲ್ಲದೆಟೀಕೆಯಕೊನೆಯಲ್ಲಿತಾತ್ಪರ್ಯವನ್ನುಹೇಳುವಾಗಪ್ರಧಾನಎಂಬಪದವನ್ನುಬಳಸುತ್ತಾನೆ. ಅಂದರೆಇವುಅಧಿಕಾರಸೂಚಕಪದಗಳಾಗಿದ್ದು, ಸ್ಥಾನಮಾನದಲ್ಲಿವ್ಯತ್ಯಾಸವಿರಲಿಲ್ಲಅಥವಾಒಂದೇಅಧಿಕಾರವನ್ನುಸೂಚಿಸುವಪದಗಳುಎಂದುಸೂಚಿತವಾಗುತ್ತದೆ. ಸ್ಥೂಪವಾಗಿನೋಡಿದರೆಪ್ರಾಚೀನಕಾಲದಲ್ಲಿಮಂತ್ರಿ, ಸಚಿವ, ಪ್ರಧಾನ, ಪೆರ್ಗಡೆ, ನಾಡಹೆರ್ಗಡೆಇತ್ಯಾದಿಅಧಿಕಾರವಾಚಕಪದಗಳಿದ್ದರೂಅವುಗಳನಡುವಿನಸ್ಥಾನಮಾನಗಳಅಂತರವನ್ನುಊಹಿಸಬಹುದಾದರೂಖಚಿತವಾಗಿಹೇಳುವುದುಕಠಿಣವಾಗುತ್ತದೆ.

[2]ಮೈ., ಚೌ. ಚತುರಂಗಯುತೋಪಿ, ಈಪಾಠಭೇದದಿಂದಅರ್ಥದವ್ಯತ್ಯಾಸವುಬಹಳವಾಗುತ್ತದೆ. ಮೈ. ಚೌ. ಗಳಪ್ರಕಾರಅರಸನಿಗೆಚತುರಂಗಬಲವಿದ್ದರೂಅಮಾತ್ಯನಿಲ್ಲದೆನಡೆಯಲಾರದುಎಂಬರ್ಥವಿದ್ದು, ನಮ್ಮಪ್ರತಿಯಪ್ರಕಾರಚದುರಂಗದಆಟದಲ್ಲಿಸಹಅರಸನೊಂದಿಗೆಮಂತ್ರಿಯಿರುವಾಗನಿಜಜೀವನದಲ್ಲಿಅಮಾತ್ಯನಿಲ್ಲದರಾಜಹೇಗಿರುತ್ತಾನೆಎಂದಾಗುತ್ತದೆ. ಈಅರ್ಥವೇಹೆಚ್ಚುಪ್ರಭಾವಿಯಾಗಿದೆ.

[3]ಮೈ. ದಲ್ಲಿಈಮತ್ತುಮುಂದಿನವಾಕ್ಯವುಒಂದರಲ್ಲಿಯೇಅಡಕವಾಗಿದೆ.

[4]ಅಂದರೆಭಿಕ್ಷುವಿನಂತಾಗುತ್ತಾನೆಎಂದರ್ಥ.

[5]ಮೈ. ನಿಯೋಗ್ಯಭಿಯುಕ್ತಃಜಲಕಲ್ಲೋಲಇವಮತ್ತಜಗಇವಚ.

[6]ಕಿರಿದಾಯಮನುಳ್ಳಂಎಂದಿರಬೇಕು.

[7]ಮೈ., ಚೌ: ಈಮತ್ತುಮುಂದಿನವಾಕ್ಯವುಒಂದೇವಾಕ್ಯದಲ್ಲಿಅಡಕವಾಗಿವೆ.

[8]೧೨ನೇವಾಕ್ಯದಟೀಕೆಯಲ್ಲಿಚಿಕ್ಕಣಶಬ್ದಕ್ಕೆಮೃದುಎಂದುಅರ್ಥಕೊಡಲಾಗಿದೆ. ಇಲ್ಲಿಲೋಭಿಎಂಬಅರ್ಥವಿದೆ.

[9]ಮೈ. ಚೌ. ಅನುಗ್ರಹೀತುಂ.