ಸಪ್ತಾಂಗದೊಳ್ಮೂಱನೆಯಜನಪದದಲಕ್ಷಣಂಗಳಂಪೇಳ್ವುದುಮದಱನಾಮಂಗಳನ್ವರ್ಥತೆಯಂಪೇಳ್ವುದುತ್ತರವಾಕ್ಯಂ :

ಪಶುಧಾನ್ಯಹಿರಣ್ಯಸಂಪದಾರಾಜತೇಶೋಭತೇಇತಿರಾಷ್ಟ್ರಂ || || ೭೪೦ ||

ಅರ್ಥ : ಪಶು = ಪಶುವುಂ, ಧಾನ್ಯ = ಧಾನ್ಯಮುಂ, ಹಿರಣ್ಯ = ಹೊನ್ನುಮೆಂಬಿವಱ, ಸಂಪದಾ = ಸಂಪತ್ತಿನಿಂ, ರಾಜತೇ = ಎಂಬುದೇನೆಂದೊಡೆ, ಶೋಭತೇಇತಿ = ಒಪ್ಪಿಪ್ಪುದೆಂದಿಂತು, ರಾಷ್ಟ್ರಂ = ರಾಷ್ಟ್ರಮೆಂಬುದು || ಹಿರಣ್ಯಾದಿಗಳಿಲ್ಲದುದುಜನಪದಮಲ್ಲೆಂಬುದುತಾತ್ಪರ್ಯಂ ||

ಭರ್ತುರ್ದಂಡಕೋಶವೃದ್ಧಿಂದಿಶತಿ[1]ದಾತೀತಿದೇಶಃ || || ೭೪೧ ||

ಅರ್ಥ : ಭರ್ತುಃ = ಸ್ವಾಮಿಗೆ, ದಂಡ = ದಂಡಮುಂ, ಕೋಶ = ಭಂಡಾರಮುಮೆಂಬಿವಱ, ವೃದ್ಧಿ = ಪೆರ್ಚ್ಚಂ, ದಿಶತಿಯೆಂಬುದೇನೆಂದೊಡೆ, ದದಾತಿಇತಿ = ಕುಡುವುದೆಂದಿಂತು, ದೇಶಃ = ದೇಶಮೆಂಬುದು ||

ವಿವಿಧವಸ್ತುಪ್ರದಾನೇನಸ್ವಾಮಿನಃಸದ್ಮನಿಗಜಾನ್ವಾಜಿನಶ್ಚವಿಶೇಷೇಣ[2]ಸಿನೋತಿ, ಬಧ್ನಾತೀತಿವಿಷಯಃ || || ೭೪೨ ||

ಅರ್ಥ : ವಿವಿಧ = ಪಲತೆಱದ, ವಸ್ತುಪ್ರದಾನೇನ = ವಸ್ತುವಂಕುಡುವುದಱಿಂ, ಸ್ವಾಮಿನಃ = ಸ್ವಾಮಿಯ, ಸದ್ಮನಿ = ಮನೆಯೊಳ್, ಗಜಾನ್ = ಆನೆಗಳುಮಂ, ವಾಜಿನಶ್ಚ = ಕುದುರೆಗಳುಮಂ, ವಿಶೇಷಣ = ವಿಶೇಷದಿಂದ, ಸಿನೋತಿ = ಎಂಬುದೇನೆಂದೊಡೆ, ಬಧ್ನಾತೀತಿ = ಕಟ್ಟಿಹದೆಂದಿಂತು, ವಿಷಯಃ = ವಿಷಯಮೆಂಬುದು ||

ಸರ್ವಕಾಮದುಘತ್ವೇನಪತಿ[3]ಹೃದಯಂಮಂಡಯತಿಭೂಷಯತೀತಿಮಂಡಲಂ || || ೭೪೩ ||

ಅರ್ಥ : ಸರ್ವಕಾಮದುಘತ್ವೇನ = ಎಲ್ಲಾಬಯಕೆಯಂಕುಡುವಸ್ವರೂಪದಿಂ, ಪತಿಹೃದಯಂ = ಆಳ್ದನಹೃದಯಮಂ, ಮಂಡಯತಿ = ಮಂಡಯತಿಏನೆಂಬುದೆಂದೊಡೆ, ಭೂಷಯತೀತಿ = ಅಲಂಕರಿಸುವುದೆಂದಿತು, ಮಂಡಲಂ = ಮಂಡಲವು ||

—-

. ಪಶು, ಧಾನ್ಯ, ಸುವರ್ಣ, ಸಂಪತ್ತುಗಳಿಂದರಾಜಿಸುವದುಎಂದರೆಶೋಭಿಸುವದುರಾಷ್ಟ್ರ.

. ಒಡೆಯನಿಗೆಅಧಿಕಾರವನ್ನು, ಕೋಶವನ್ನುಎಂದರೆಧನವೃದ್ಧಿಯನ್ನು, ಒದಗಿಸುವದುದೇಶ.

. ವಿವಿಧವಸ್ತುಗಳನ್ನಿತ್ತುಒಡೆಯನಅರಮನೆಯಲ್ಲಿಆನೆಗಳನ್ನುಮತ್ತುಕುದುರೆಗಳನ್ನುಕಟ್ಟುವಂತೆಮಾಡುವದುವಿಷಯ.

. ರಾಜನಎಲ್ಲಕೋರಿಕೆಗಳನ್ನುಈಡೇರಿಸಿಅವನಿಗೆಸಂತೋಷವನ್ನುಂಟುಮಾಡುವುದುಮಂಡಲ.

—-

ಜನಸ್ಯವರ್ಣಾಶ್ರಮಲಕ್ಷಣಸ್ಯದ್ರವ್ಯೋತ್ಪತ್ತೇರ್ವಾಪದಂ, ಸ್ಥಾನಮಿತಿಜನಪದಃ || || ೭೪೪ ||

ಅರ್ಥ : ವರ್ಣಾಶ್ರಮಲಕ್ಷಣಸ್ಯ = ಕ್ಷತ್ರಿಯಾದಿವರ್ಣಂಗಳುಮಂಲಕ್ಷಣಮಾಗುಳ್ಳ, ಜನಸ್ಯ = ಜನಕ್ಕೆ, ದ್ರವ್ಯೋತ್ಪತ್ತೇರ್ವಾ = ದ್ರವ್ಯದುತ್ಪತ್ತಿಗೆಮೇಣ್, ಪದಂ = ಪದಮೆಂಬುದೇನೆಂದೊಡೆ, ಸ್ಥಾನಮಿತಿ = ಎಡೆಯೆಂದಿಂತು, ಜನಪದಃ = ಜನಪದಮೆಂಬುದು ||

ನಿಜಪತೇರುತ್ಕರ್ಷಜನಕ್ವೇನಋತ್ರುಹೃದಯಂದಾರಯತಿಭಿನತ್ತೀತಿದಾರಕಃ[4] || || ೭೪೫ ||

ಅರ್ಥ : ನಿಜಪತೇಃ = ತನ್ನಸ್ವಾಮಿಯ, ಉತ್ಕರ್ಷಜನಕತ್ವೇನ = ಪೆರ್ಚ್ಚಂಮಾಳ್ವುದಱಿಂ, ಶತ್ರುಹೃದಯಂ = ಪಗೆಯೆರ್ದೆಯಂ, ದಾರಯತಿ = ದಾರಯತಿಎಂಬುದೇನೆಂದೊಡೆ, ಭಿನತ್ತೀತಿ = ಭೇದಿಸುವನೆಂದಿತು, ದಾರಕಃ = ದಾರಕಮೆಂಬುದು ||

ಆತ್ಮಸಮೃದ್ಧ್ಯಾಸ್ಟಾಮಿನಂಸರ್ವವ್ಯಸನೇಭ್ಯೋನಿರ್ಗಮಯತೀತಿನಿರ್ಗಮಃ[5] || || ೭೪೬ ||

ಅರ್ಥ : ಆತ್ಮಸಮೃದ್ಧ್ಯಾ = ತನ್ನಪೆರ್ಚ್ಚಿನಿಂ, ಸ್ವಾಮಿನಂ = ಅಳ್ದನಂ, ಸರ್ವವ್ಯಸನೇಭ್ಯಃ = ಎಲ್ಲಾಕ್ಲೇಶಂಗಳತ್ತಣಿಂ, ನಿರ್ಗಮಯತೀತ = ಹೊಱವಡೆಸುವುದೆಂದಿಂತು, ನಿರ್ಗಮಃ = ನಿರ್ಗಮಮೆಂಬುದಕ್ಕುಂ[6] || ಸ್ವಾಮಿಗಭೀಷ್ಟಾರ್ಥಸಂಪತ್ತಿಯಂಮಾಳ್ಪುದೆದೇಶಮೆಂಬುದೀಏಳಱತಾತ್ಪರ್ಯಂ | ದೇಶದಗುಣಮಂಪೇಳ್ವುದುತ್ತರವಾಕ್ಯಂ :

—-

. ವರ್ಣಾಶ್ರಮಲಕ್ಷಣಗಳುಳ್ಳಜನಗಳಅಥವಾದ್ರವ್ಯೋತ್ಪತ್ತಿಗೆಸ್ಥಾನವಾದುದುಜನಪದ.

. ತನ್ನಪ್ರಭುವಿಗೆಮೇಲ್ಮೆಯನ್ನುಂಟುಮಾಡುವವರಮೂಲಕಶತ್ರುಹೃದಯವನ್ನುಭೇಧಿಸುವದುದಾರಕ.

. ತನ್ನಸಮೃದ್ಧಿಯಿಂದಅರಸನಸಕಲಕ್ಲೇಶಗಳನ್ನುಹೋಗಲಾಡಿಸುವದುನಿಗಮ.

—-

ಅನ್ಯೋನ್ಯರಕ್ಷಃಖನ್ಯಾಕರದ್ರವ್ಯನಾಗವನ[7]ವಾನನತಿ[8]ವೃದ್ಧಹೀನಗ್ರಾಮೋಬಹುಸಾರವಿಚಿತ್ರಧಾನ್ಯಪಣ್ಯೋತ್ಪತ್ತಿರದೇವಮಾತೃಕಃಪಶುಮನುಷ್ಯಹಿತಃಶ್ರೇಣಿಶೂದ್ರಕರ್ಷಕಪ್ರಾಯಇತಿಜನಪದಸ್ಯಗುಣಾಃ || || ೭೪೭ ||

ಅರ್ಥ : ಅನ್ಯೋನ್ಯರಕ್ಷಃ = ಒಂದೊಂದಱಕಾಪನುಳ್ಳುದು, ಖನಿ = ಸುವರ್ಣವಜ್ರಾದಿಗಳಕಣಿಯುಂ, ಆಕರ = (ಆಗರ) ಮುತ್ತುಮೊದಲಾಗೊಡೆಯವಱಾಹರಮುಂ, ದ್ರವ್ಯ = ದ್ರವ್ಯಮುಂ (ದ್ರವ್ಯಸಂಪತ್ತಿನಿಂ) ನಾಗವನವಾನ್ = ಎಲೆಯವುಂಟಮನುಳ್ಳುದು, ಆನೆಯಬನಮುಮೆಂದಿವನುಳ್ಳುದು, ಅನತಿಹೀನಾತಿವೃದ್ಧಗ್ರಾಮಃ = ಕರಂಕಿರಿದುಂಪಿರಿದುಮಲ್ಲದೂರ್ಗಳನುಳ್ಳುದು, ಬಹು = ಪಿರಿದಾಗಿ, ಸಾರ = ಒಳ್ಳಿತ್ತಪ್ಪ, ವಿಚಿತ್ರ = ಪಲತೆಱದ, ಧ್ಯಾನ = ಧಾನ್ಯಗಳೇ, ಪಣ್ಯ = ಪಣ್ಯಮುಮೆಂದಿವಱ (ಮಾಱಿಗೆ) ಉತ್ಪತ್ತಿಃ = ಪುಟ್ಟುಗೆಯನುಳ್ಳದು, ಅದೇವಮಾತೃಕಃ = ಮಳೆಯಿಲ್ಲದೆಯುಂ, ಕೆಱಿ, ತೊಱಿ, ಕಾಲುವೆಗಳಪರಿನೀರಿಂಬೆಳೆವುದುಂ, ಪಿರಿನೀರಿಂಬೆಳೆವುದುಂ, ಪಶುಮನುಷ್ಯಹಿತಃ = ಪಶುಗಳ್ಗಂ, ಮನುಷ್ಯರ್ಗ್ಗಂಹಿತಮಪ್ಪುದು, ಶ್ರೇಣಿ = ಕಾರುಕರುಂ, ಶೂದ್ರಾ = ಶೂದ್ರರುಂ, ಕಷ್ಷಕ = ಆರಂಭಒಕ್ಕುಲಿಗರುಂ, ಪ್ರಾಯಃಇತಿ = ಅಗ್ಗಳಮಾಗುಳ್ಳದೆಂದಿಂತು, ಜನಪದಸ್ಯ = ಜನಪದದ, ಗುರ್ಣಾಃ = ಗುಣಂಗಳ್ || ಇನಿತುಗುಣಂಗಳಿಲ್ಲದುದುದೇಶಮಲ್ಲೆಂಬುದುತಾತ್ಪರ್ಯಂ || ದೇಶದೋಷಮಂಪೇಳ್ವುದುತ್ತರವಾಕ್ಯಂ :

ವಿಷತೃಣೋದಕೋಷಕರಪಾಷಾಣಕಂಟಕಗಿರಿಗರ್ತಗೌಹರಪ್ರಯಭೂಮಿ
ರ್ಭೂರಿವರ್ಷಾಜೀವನೋವ್ಯಾಲಲುಬ್ಧಕಲ್ಮೇಂಚ್ಛಬಹುಳಸ್ವಲ್ಪಸಸ್ಯೋತ್ಪ

ತ್ತಿಸ್ತರುಫಲಿನದ್ರುಮಫಲಿನದ್ರುಮಫಲಾಭಾವಇತಿದೇಶದೋಷಾಃ || || ೭೪೮ ||

ಅರ್ಥ : ವಿಷತೃಣೋದಕ = ನಂಜುಬುಲ್ಲುಂ, ನಂಜುನೀರ, ಊಷರ = ಸೌರೊಳುನೆಲನುಂ, ಪಾಷಾಣ = ಅಱೆ, ಕಂಟಕ, ಮುಖ್ಖುಂ, ಗಿರಿ = ಬೆಟ್ಟಮುಂ, ಗರ್ತ = ಕುಳಿಯುಂ, ಗೌಹರ = ಗುಹೆಯುಮೆಂಬಿವಂ, ಪ್ರಾಯ = ಅಧಿಕಮಾಗುಳ್ಳ, ಭೂಮಿಃ = ಭೂಮಿಯನುಳ್ಳುದುಂ, ಭೂರಿವರ್ಷಾಜೀವನಃ = ಪಿರಿದಪ್ಪಮಳೆಯಿಂದೆಬೆಳೆವುದುಂ, ವ್ಯಾಲ = ಕೋಳ್‌ಮೃಗಮುಂ, ಲುಬ್ಧಕ = ವ್ಯಾಧರುಂ (ಬೇಂಟೆಗಾಱರು) ಮ್ಲೇಂಚ್ಛ = ಮ್ಲೇಂಚ್ಛರುಮೆಂದಿವರುಂ, ಬಹುಳ = ಪಿರಿದಾಗುಳ್ಳುದುಂ, ಸ್ವಲ್ಪಸಸ್ಯೋತ್ಪತ್ತಿ = ಕಿಱಿದಪ್ಪಸಸಿಯಬೆಳಸನುಳ್ಳುದುಂ, ತರುಫಲಾಭಾವ = ಮರಂಗಳಫಲಇಲ್ಲದುದು, ಫಲಿನದ್‌ಉಮಾಭಾವಇತಿ = ಫಲವಹವೃಕ್ಷಂಗಳಿಲ್ಲದಿಹುದೆಂದಿಂತು, ದೇಶದೋಷಾಃ = ದೇಶದದೋಷಂಗಳ್ || ಈದಷಮಿಲ್ಲದುದೆದೇಶಮೆಂಬುದುತಾತ್ಪರ್ಯಂ || ದೇಶದೋಷಮಂವಿಶೇಷಿಸಿಪೇಳ್ವುದುತ್ತರವಾಕ್ಯಂ :

—-

. ಪರಸ್ಪರರಕ್ಷಣೆಇರುವದು, ಬೆಲೆಬಾಳುವಲೋಹಗಳಗಣಿಗಳಿರುವದು, ಬೆಟ್ಟಗಳುಕಾಡುಗಳೂಇರುವದು, ಬಹುದೊಡ್ಡವೂಅಲ್ಲದ, ಬಹುಸಣ್ಣವೂಅಲ್ಲದಗ್ರಾಮಗಳಿರುವುದು, ಸಾರವತ್ತಾದವಿವಿಧಧಾನ್ಯಗಳಮತ್ತುಮಾರಾಟದಪದಾರ್ಥಗಳಉತ್ಪತ್ತಿಯಾಗುವದು, ಕೇವಲಮಳೆಯನೀರನ್ನೇಅವಲಂಬಿಸದಿರುವುದು, ಜನಗಳಿಗೂಪ್ರಾಣಿಗಳಿಗೂಅನುಕೂಲವಾದಪರಿಸ್ಥಿತಿಯಿರುವುದು, ಕಾರ್ಮಿಕರಮತ್ತುಕೃಷಿಕರಸಮೂಗಳಿಂದಕೂಡಿರುವುದು, ಇವುಜನಪದದಗುಣಗಳು.

. ನಂಜುಂಟುಮಾಡುವಹುಲ್ಲುನೀರುಗಳಿರುವುದು, ಸವುಳು, ಬಂಡೆಗಳು, ಮುಳ್ಳುಪೊದೆಗಳು, ಗುಡ್ಡಗಾಡು, ಹಳ್ಳಕೊಳ್ಳಗಳು, ಗುಹೆಗಳುಅಧಿಕವಾಗಿರುವಭೂಪ್ರದೇಶ, ಅತಿವೃಷ್ಠಿಗೆಗುರಿಯಾದಜನಜೀವನ, ಕ್ರೂರಮೃಗಗಳು, ವ್ಯಾಧರು, ಮ್ಲೇಚ್ಛರುಹೆಚ್ಚಾಗಿರುವದು, ಸಸ್ಯಗಳಉತ್ಪತ್ತಿಅತಿಸ್ಪಲ್ಪವಾಗಿರುವುದು, ಫಲವೃಕ್ಷಗಳಅಭಾವಇವುದೇಶದಕೊರತೆಗಳು.

—-

ತತ್ರಸದಾದುರ್ಭಿಕ್ಷಃಯತ್ರಜಲದಜಲೇನಸಸ್ಯನಿಷ್ಪತ್ತಿರಕೃಷ್ಟಭೂಮಿಕಶ್ಚಾರಂಭಃ|| ೧೦ || ೭೪೯ ||

ಅರ್ಥ : ಯತ್ರ = ಆವುದೊಂದೆಡೆಯೊಳ್, ಜಲದಜಲೇನ = ಮಳೆನೀರಿಂದಮೆ, ಸಸ್ಯನಿಷ್ಪತ್ತಿಃ = ಸಸಿಯಬೆಳಸು, ಅಕೃಷ್ಟಭೂಮಿಕಃ = ಉಳದ (ಅಱಗದ) ಭೂಮಿಯನುಳ್ಳುದು, ಆರಂಭಶ್ಚ = ಆರಂಭಮುಂ, ತತ್ರ = ಅಲ್ಲಿ, ಸದಾ = ಎಲ್ಲಾಕಾಲಂ, ದುರ್ಭಿಕ್ಷಮೇವ = ಪಸವೇ || ಉತ್ತಿಬಿತ್ತುವುದುಂ = ಮಳೆಯಿಲ್ಲದೆಬೆಳೆವುದುಂದೇಶಮೆಂಬುದುತಾತ್ಪರ್ಯಂ ||

ಕ್ಷತ್ರಿಯಪ್ರಾಯಾಹಿಗ್ರಾಮಾಃಅಲ್ಪಾಸ್ವಪಿಬಾಧಾಸುಪ್ರತಿಯುದ್ಧ್ಯಂತೇ || ೧೧ || ೭೫೦ ||

ಅರ್ಥ : ಕ್ಷತ್ರಿಯಪ್ರಾಯಾಃ = ಪಲಂಬರುಕ್ಷತ್ರಿಯರನ್ನುಳ್ಳ, ಗ್ರಾಮಾಃ = ಗ್ರಾಮಂಗಳು, ಹಿ = ನೆಟ್ಟನೆ, ಬಾಧಾಸು = ಬಾಧೆಗಳು, ಅಲ್ಪಾಸ್ವಪಿ = ಕಿಱಿಯವಾದೊಡಂ, ಪ್ರತಿಯುದ್ಧ್ಯಂತೇ = ಮಗುಳ್ದುಕಾದುವುವು || ಕ್ಷತ್ರಿಯರಿಲ್ಲದಗ್ರಾಮಂಗಳಂಜಿಸಿದ್ಧಾಯಮನಿಕ್ಕುವುದೆಂಬುದುತಾತ್ಪರ್ಯಂ ||

ಸ್ವಯಂಮ್ರಿಯಮಾಣೋsಪಿದ್ವಿಜಲೋಕೋಖಲುಸಾಂತ್ರೇನಪ್ರಯಚ್ಛತಿಸಿದ್ಧಮಪ್ಯರ್ಥಂ || ೧೨ || ೭೫೧ ||

ಅರ್ಥ : ಸ್ವಯಂ = ತಾಂ, ಮ್ರಿಯಮಾಣಃಅಪಿ = ಸಾವುತಿರ್ದುದಾಗಿಯುಂ, ದ್ವಿಜಲೋಕಃ = ಬ್ರಾಹ್ಮಣಜನಂ, ಸಾಂತ್ವೇನ = ಸಾಮದಿಂ, ಅರ್ಥಂ = ಅರ್ಥಮಂ, ಸಿದ್ಧಮಪಿ = ಉಳ್ಳುದುಮಂ, ನಖಲುಪ್ರಯಚ್ಛತಿ = ಕಡುವುದಲ್ಲದು || ಗ್ರಾಮದೊಳ್ಪಲಂಬರುಬ್ರಾಹ್ಮಣರನಿರಿಸಲಾಗದೆಂಬುದುತಾತ್ಪರ್ಯಂ || ದೇಶದೊಳ್ಪ್ರಜಾಚರಣಮಂಮಾಳ್ಪುಪಾಯಮಂಪೇಳ್ವುದುತ್ತರವಾಕ್ಯಂ :

—-

೧೦. ಆಹಾರಧಾನ್ಯಬೆಳೆಸುವಲ್ಲಿಮಳೆಯನ್ನೇಅವಲಂಭಿಸಿಕೊಂಡಿರುವದು, ಭೂಮಿಯನ್ನುಸರಿಯಾಗಿಹರಗದೆಆರಂಭದಲ್ಲಿತೊಡಗುವುದು, ಇಂಥಲ್ಲಿಸದಾಕಾಲವೂದುರ್ಭಿಕ್ಷವೇ.

೧೧. ಕ್ಷತ್ರಿಯರುಹೆಚ್ಚಾಗಿರುವಗ್ರಾಮಗಳಲ್ಲಿಅತ್ಯಲ್ಪಮಾತ್ರಭಾಧೆಯುಂಟಾದರೂಹೋರಾಟದಲ್ಲಿತೊಡಗುತ್ತಾರೆ.

೧೨. ಬ್ರಾಹ್ಮಣಜನರು, ಕೈಯಲ್ಲಿದ್ದರೂತಾವುಕೊಡಬೇಕಾದಹಣವನ್ನುಒಳ್ಳೆಯಮಾತಿನಿಂದಕೊಡುವದಿಲ್ಲ.

—-

[9]ಸ್ವಭೂಮಿಕಂಭೂತಪೂರ್ವಭೂತಪೂರ್ವಂವಾಜನಪದಂಸ್ವದೇಶಾಭೀಷ್ಯಂದವಾಸನಾಭ್ಯಾಂಪರದೇಶೋಪವಾಹನೇನವಾವಾಸಯೇತ್ || ೧೩ || ೭೫೨ ||

ಅರ್ಥ : ಸ್ವಭೂಮಿಕಂ = ತನ್ನಭೂಮಿಯಪ್ಪ, ಜನಪದಂ = ನಾಡಂ, ಭೂತಪೂರ್ವಂ = ಮುನ್ನುಳ್ಳುದುಮಂ, ಅಭೂತಪೂರ್ವಂವಾ = ಮುನ್ನಿಲ್ಲದುದಂಮೇಣ್, ಸ್ವದೇಶ = ತನ್ನದೇಶದ, ಅಭೀಷ್ಯಂದ = ಪರಿಹರಮುಂ, ವಾಸನಾಭ್ಯಾಂ = ಸಾರಮಪ್ಪಪುರುಷನಿಕ್ಕುವುದಱಿಂಮೇಣ್, ಪರದೇಶ = ಪೆಱನಾಡ, ಉಪವಾಹನೇನವಾ = ಪೀಡಿಸಿತನ್ನನಾಡಂಪುಗಿಸುವುದಱಿಂಮೇಣ್, ವಾಸಯೇತ್ = ಏರಿಸುಗೆ || ಇನಿತಿಲ್ಲದೆದೇಶಸಮೃದ್ಧಿಯಾಗದೆಂಬುದುತಾತ್ಪರ್ಯಂ || ಇಂತಪ್ಪವಸರದೊಳ್ಪ್ರಜೆಯಂಬಾಧಿಸವೇಡೆಂಬುದುತ್ತರವಾಕ್ಯಂ :

ಸ್ವಲ್ಪೋsಷಿವಾಪೇಷು[10]ಪ್ರಜೋಪದ್ರವೋಮಹಾಂತಮರ್ಥಂವಿನಾಶಯತಿ[11] || ೧೪ || ೭೫೩ ||

ಅರ್ಥ : ವಾಷೇಷು = ಬಿತ್ತುವವಸರದೊಳು, ಪ್ರಜೋಪದ್ರವಃ = ಪ್ರಜೆಯಪೀಡೆ, ಮಹಾಂತಂ = ಪಿರಿದಪ್ಪ, ಅರ್ಥಂ = ಅರ್ಥಮಂ, ಸ್ವಲ್ಪೋsಪಿ = ಸ್ವಲ್ಪವಾದರೂ, ವಿನಾಶಯತಿ = ಕಿಡಿಸುಗುಂ || ಇಂತಪ್ಪಕಾಲದೊಳ್ಸದ್ಧಾಯಮನೆತ್ತಲಾಗದೆಂಬುದುತ್ತರವಾಕ್ಯಂ :

ಕ್ಷೀರಿಷುಕಣಿಶೇಷುಸಿದ್ಧಾಯೋ[12]ಜನಪದಂಉದ್ವಾಸಯತಿ || ೧೫ || ೭೫೪ ||

ಅರ್ಥ : ಕಣಿಶೇಷು = ತೆಗೆಗಳು, ಕ್ಷೀರಿಷುಪಾಲ್ಕೊಳ್ವವಸರದೊಳ್, ಸಿದ್ದಾಯಃ = ತೆಱಿಗೆಯುಂ, ಬೇಳ್ವುದು, ಜನಪದಂ = ನಾಡಂ, ಉದ್ವಾಸಯತಿ = ಪಾಳ್ಮಾಡುಗುಂ || ಇಂತಪ್ಪವಸರದೊಳ್ದಂಡುನಡೆಯಲಾಗದೆಂಬುದುತ್ತರವಾಕ್ಯಂ :

—-

೧೩. ಪೂರ್ವದಿಂದಲೂತನ್ನದಾದಅಥವಾಇತ್ತೀಚೆಗೆತನ್ನದಾದಪ್ರದೇಶದಲ್ಲಿರುವತನ್ನದೇಶದಒಂದುಭಾಗದಲ್ಲಿಅಧಿಕವಾಗಿರುವಜನರನ್ನುಕಳುಹಿಸುವದರಿಂದಾಗಲಿಹೊರನಾಡಿನಿಂದಬರಮಾಡಿಕೊಂಡಜನರನ್ನಾಗಲಿನೆಲೆಗೊಳಿಸಬೇಕು.

೧೪. ಬಿತ್ತನೆಯಕಾಲದಲ್ಲಿಜನರಿಗೆಸಂಭವಿಸಬಹುದಾದಅತ್ಯಲ್ಪಉಪದ್ರವವುಅತ್ಯಧಿಕನಾದಅರ್ಥನಾಶಕ್ಕೆಕಾರಣವಾಗುತ್ತದೆ.

೧೫. ತೆನೆಯುಇನ್ನೂಹಾಲುತುಂಬುತ್ತಿರುವಾಗತೆರಿಗೆಯವಸೂಲಿಗೆತೊಡಗಿದರೆಜನಪದವುಹಾಳುಬೀಳುತ್ತದೆ.

—-

ಲವನಕಾಲೇಸೇನಾಪ್ರಚಾರೋದುರ್ಭಿಕ್ಷಮಾವಹತಿ[13] || ೧೬ || ೭೫೫ ||

ಅರ್ಥ : ಲವನಕಾಲೇ = ಕೊಯ್ವವಸರದೊಳ್, ಸೇನಾಪ್ರಚಾರಃ = ಪಡೆನಡೆವುದು, ದುರ್ಭಿಕ್ಷಂ = ಪಸವಂ, ಆವಹತಿ = ತಕ್ಕುಂ (ಕಱೆವುದು) || ಪ್ರಜೆಗಳುಪದ್ರವಮಾಗಲೀಯದೆನಡೆಯಿಸುವುದೆಂಬುದುತಾತ್ಪರ್ಯಂ || ಪ್ರಜೆಯಂಪೀಡಿಸಿದೊಡೆದೋಷಮಂಪೇಳ್ವುದುತ್ತರವಾಕ್ಯಂ :

ಸರ್ವಬಾಧಾಪ್ರಜನಾಂಕೋಶಂಕರ್ಷಯತಿ || ೧೭ || ೭೫೬ ||

ಅರ್ಥ : ಪ್ರಜಾನಾಂ = ಪ್ರಜೆಗಳ, ಸರ್ವಬಾಧಾ = ಎಲ್ಲಾಬಾಧೆ, ಕೋಶಂ = ಭಂಡಾರಮುಂ, ಕರ್ಷಯತಿ = ಬಡವುಮಾಳ್ಕುಂ || ಮನ್ನಣೆಯವರನಿಂತುಕಾಣ್ಗೆಂಬುದುತ್ತರವಾಕ್ಯಂ :

ದತ್ತಪರಿಹಾರಾನ್ಪಿತೇವಅನುಗೃಹ್ಣೀಯಾತ್ || ೧೮ || ೭೫೭ ||

ಅರ್ಥ : ಪರಿಹಾರಾನ್ = ಪಡೆದಪರಿಹಾರಮನುಳ್ಳುವರ್ಗಳಂ (ಒಡಂಬಟ್ಟುದನುಕೊಟ್ಟವರ್ಗಳು) ಪಿತೇವ = ತಂದೆಯಂತೆ, ಅನುಗೃಹ್ಣೀಯಾತ್ = ಕೈಕೊಳ್ಗೆ (ಮನ್ನಿಸುವುದು) || ಪರಿಹಾರದಿಂದೆಣ್ಬವಂಮಕ್ಕಳಂಕಾಣ್ಬಂತೆಕಾಣ್ಗೆಂಬುದುತಾತ್ಪರ್ಯಂ || ಮರ್ಯಾದೆಯಂದಾಂಟಿದೊಡೆದೋಷಮಂಪೇಳ್ವುದುತ್ತರವಾಕ್ಯಂ :

ಮರ್ಯಾದಾತಿಕ್ರಮೇಫಲವತ್ಯಪಿಭೂಮಿರ್ಭವತ್ಯರಣ್ಯಾನಿ[14] || ೧೯ || ೭೫೮ ||

ಅರ್ಥ : ಮರ್ಯಾದಾತಿಕ್ರಮೇ = ಮರ್ಯಾದೆಯಂಮೀರುತ್ತಿರಲು, ಭೂಮಿಃ = ನೆಲನುಂ, ಫಲವತಿಅಪಿ = ಫಲಮನುಳ್ಳುದಾಗಿಯುಂ, ಅರಣ್ಯಾನಿ = ಪೇರಡಿವಿಗಳುಂ, ಭವತಿ = ಆಕ್ಕುಂ || ವ್ಯವಸ್ಥೆಕಿಡೆಪ್ರಜೆಗಳ್ನಿಲ್ಲರೆಂಬುದುತಾತ್ಪರ್ಯಂ || ಪ್ರಜೆಯಪೆರ್ಚ್ಚಿಸುವುಪಾಯಮಂಪೇಳ್ವುದುತ್ತರವಾಕ್ಯಂ :

—-

೧೬. ಬೆಳೆಗಳಕೂಯ್ಲಿನಕಾಲದಲ್ಲಿಸೇನಾಸಂಚಾರವುಬೆಳೆನಾಶವಾಗುವದರಿಂದದುರ್ಭಿಕ್ಷಕ್ಕೆಕಾರಣವಾಗುತ್ತದೆ.

೧೭. ಪ್ರಜೆಗಳಿಗೆರಾಜನಬಾಧೆಹೆಚ್ಚಾದರೆಕೋಶವುಕ್ಷೀಣಿಸುತ್ತದೆ.

೧೮. ಕೊಡಬೇಕಾದುದನ್ನುಕೊಟ್ಟವರಬಗ್ಗೆರಾಜನುತಂದೆಯಂತೆದಯೆಉಳ್ಳವನಾಗಿರಬೇಕು.

೧೯. ಕಟ್ಟು, ಪಾಡುಗಳನ್ನುಮೀರುವದರಿಂದಫಲವತ್ತಾದಭೂಮಿಯೂಅರಣ್ಯಸದೃಶವಾಗುವುದು.

—-

ಕ್ಷೀಣಜನಸಂಭಾವನಂತೃಣಶಲಾಕಾಯಾಮಪಿಸ್ವಯಮಾಗ್ರಹಃ[15]ಕಾದಾಚಿತ್ಕಂಚೋಪಜೀವನಮಿತಿಪರಮಾಃಪ್ರಜಾನಾಸಂವರ್ಧನೋಪಾಯಾಃ || ೨೦ || ೭೫೯ ||

ಅರ್ಥ : ಕ್ಷೀಣಜನಸಂಭಾವನಂ = ಬಡವರಪ್ಪಜನಂಗಳಸಂತಸಂಬಡೆಸುವುದುಂ, ತೃಣಶಲಾಕಾಯಾಂಅಪಿ = ಪುಲ್ಲಕಡ್ಡಿಯೊಳಂ, ಸ್ವಯಂ = ತನಗೆ, ಆಗ್ರಹಃ = ಅನ್ಯಾಯದಿಂಕೈಕೊಳ್ಳದಿರ್ಪುದುಂ, ಕಾದಾಚಿತ್ಕಂಚ = ಎತ್ತಾನುಮಪ್ಪ, ಉಪಜೀವನಮಿತಿ = ಅರಸಂಭವಣಿಗೆಯಂ (ಬಿಟ್ಟಿಯನಡಸುಹವು) ಮಾಣ್ಬದೆಂದಿಂತು, ಪ್ರಜಾನಾಂ = ಪ್ರಜೆಗಳ, ಪರಮಾಃ = ಮಿಕ್ಕ, ಸಂವರ್ಧನೋಪಾಯಾಃ = ಪೆರ್ಚ್ಚಿಸುವುಪಾಯಂಗಳು || ಒಂದೆಕಿಱಿದಾದೊಡಂಪ್ರಜೆಗಳಳ್ಕುವರೆಂಬುದುತಾತ್ಪಯಂ || ಇಂತಪ್ಪುದರ್ಥೋತೃತ್ತಿಸ್ಥಾನಮೆಂಬುದುತ್ತರವಾಕ್ಯಂ :

ನ್ಯಾಯೇನರಕ್ಷಿತಾಪಣ್ಯಘಟ[16]ಭೇದಿನಿಪೇಂಠಾ[17]ರಾಜ್ಞಾಂಕಾಮಧೇನುಃ || ೨೧ || ೭೬೦ ||

ಅರ್ಥ : ನ್ಯಾಯೇನ = ನ್ಯಾಯದಿಂ, ರಕ್ಷಿತಾ = ರಕ್ಷಿಸಲ್ಪಟ್ಟ, ಪಣ್ಯಘಟಭೇದಿನೀ = ಪಿರಿದಪ್ಪಕ್ರಯವಿಕ್ರಯಮನುಳ್ಳ, ಪೇಠಾ[18]ರಾಜ್ಞಾಂ = ಅರಸುಗಳ್ಗೆ, ಕಾಮಧೇನುಃ = ಕಾಮಧೇನುವಕ್ಷುಂ || ದ್ರವ್ಯಾಕರಮಾಗಮೇಳ್ಕುಮೆಂಬುದುತಾತ್ಪರ್ಯಂ ||

ರಾಜ್ಞಶ್ಚತುರಂಗಬಲಾಭಿವೃದ್ಧಿಹೇತವೋಭೂಯಾಂಸೋಭಕ್ತಗ್ರಾಮಾಃ[19] || ೨೨ || ೭೬೧ ||

ಅರ್ಥ : ರಾಜ್ಞಃ = ಅರಸನ, ಚತುರಂಗಬಲಾಭಿವೃದ್ಧಿಹೇತವಃ = ಚತುರಂಗಬಲದಪೆರ್ಚ್ಚಿಂಗೆಕಾರಣಂಗಳ್, ಭೂಯಾಂಸಃ = ಪಲವು, ಭಕ್ತಗ್ರಾಮಾಃ = ಭತ್ತ (ಧಾನ್ಯ) ಗ್ರಾಮಂಗಳ್ || ಧಾನ್ಯಾಕರಂಗಳಾಗಲ್ವೇಳ್ಕುಮೆಂಬುದುತಾತ್ಪರ್ಯಂ || ಜೀವಧನಂಗಳಿಂಸುಂಕದಿಂಕಾರ್ಯಸಿದ್ಧಿಯಂಪೇಳ್ವುದುತ್ತರವಾಕ್ಯಂ :

—-

೨೦. ಬಡವರನ್ನುಸಂತೃಪ್ತಿಗೊಳಿಸುವುದು, ತನಗಾಗಿಒಂದುಹುಲ್ಲುಕಡ್ಡಿಯನ್ನೂಅನ್ಯಾಯವಾಗಿತೆಗೆದುಕೊಳ್ಳದಿರುವುದು, ಯಾವಾಗಲೇಆಗಲಿಪ್ರಜೆಗಳಉಪಜೀವನಕ್ಕೆಧಕ್ಕೆಮಾಡದಿರುವುದುಇವುಪ್ರಜೆಗಳನ್ನುಅಭಿವೃದ್ಧಿಸ್ಥಿತಿಗೆತರುವಉಪಾಯಗಳು.

೨೧. ನ್ಯಾಯರೀತಿಯಲ್ಲಿನಿರ್ವಹಿಸಲಾಗುವ, ಕ್ರಯ, ವಿಕ್ರಯಗಳುಹೆಚ್ಚಾಗಿನಡೆಯುವಮಾರಾಟದಕೇಂದ್ರಗಳುತೆರಿಗೆಯರೂಪದಲ್ಲಿಭಂಡಾರವನ್ನುತುಂಬುವದರಿಂದರಾಜರಿಗೆಕಾಮಧೇನುವಿದ್ದಂತೆ.

೨೨. ರಾಜ್ಯದಹಲವುಧಾನ್ಯಭರಿತವಾದಗ್ರಾಮಗಳುರಾಜನಚತುರಂಗಬಲಾಭಿವೃದ್ಧಿಗೆಸಹಾಯಕವಾಗುತ್ತವೆ.

—-

ಸುಮಹಚ್ಚಗೋಮಂಡಲಂಹಿರಣ್ಯಾಯಃಶುಲ್ಕಂಕೋಶವೃದ್ಧಿಹೇತುಃ || ೨೩ || ೭೬೨ ||

ಅರ್ಥ : ಸುಮಹತ್ = ಕರಂಪಿರಿದಪ್ಪ, ಗೋಮಂಡಲಂಚ = ದನವಿನಪಿಂಡು, ಹಿರಣ್ಯಾಯಃ = ಸುವರ್ಣಕಾರಣಮಾಗಿ (ಹಿರಣ್ಯಾಯಃ = ಚಿನ್ನಕಬ್ಬುನತಾಮ್ರಮೆಂದಿವರಉತ್ಪತ್ತಿಸ್ಥಾನ) ಶುಲ್ಕಂಚ = ಸುಂಕಮುಂ, ಕೋಶವೃದ್ಧಿಹೇತುಃ = ಭಂಡಾರದಪೆರ್ಚ್ಚಿಂಗೆಕಾರಣಂ || ಕೀಲಾರಮುಂನ್ಯಾಯದಿಂಸುಂಕಂಗೊಂಡುನಡೆಯಿಸುವುದುಂಭಂಡಾರಂಪಿರಿದಾಗವೇಳ್ಕುಮೆಂಬುದುತಾತ್ಪರ್ಯಂ || ದೇವರ್ಗಂಬ್ರಾಹ್ಮಣರ್ಗಮಿಂತುಭೂಮಿಯಂಕುಡುವುದೆಂಬುದುತ್ತರವಾಕ್ಯಂ :

ದೇವದ್ವಿಜಯೇದಾಗೋರುತ[20]ಪ್ರಮಾಣಾಭೂಮಿರ್ದಾತುರದಾತುಶ್ಚಸುಖನಿರ್ವಾಹಃ || ೨೪ || ೭೬೩ ||

ಅರ್ಥ : ದೇವ = ದೇವರ್ಗಂ, ದ್ವಿಜ = ಬ್ರಾಹ್ಮಣರ್ಗಂ, ಗೋರುತುಪ್ರಮಾಣಾ = ಜೀವದನಗಳದನಿಕೇಳಲ್ಬರ್ಪನಿತುಪವಣನುಳ್ಳ, ಭೂಮಿಃ = ಭೂಮಿ, ದೇಯಾ = ಕುಡಲ್ಪಡುವುದು, ದಾತುಃ = ಕುಡುವನಂ, ಅದಾತುಶ್ಚ = ಕಳೆದುಕೊಳ್ಪಂಗಂ, ಸುಖನಿರ್ವಾಹಾ = ಸುಖದಿಂಸಲಿಸುವಂತಕ್ಕುಂ || ಭೂಮಿಕಿಱಿದಾದೊಡೆಲಾಭಮಿಲ್ಲದೆಪ್ರತಿಪಾಲಿಪರೆಂಬುದುತಾತ್ಪರ್ಯಂ || ಇಂತಪ್ಪುದಂಕಿಡಿಸಿಇದಂಮಾಳ್ಪುದಿದಂಮಾಡವೇಡೆಂಬುದುತ್ತರವಾಕ್ಯಂ :

ಕ್ಷೇತ್ರವಪ್ರಷಂಡಗೃಹಧರ್ಮಾಯತನಾನಾಮುತ್ತರಂಪೂರ್ವಂಬಾಧೇತಪುನರುತ್ತರಂಪೂರ್ವಃಬಾಧೇತ || ೨೫ || ೭೬೪ ||

ಅರ್ಥ : ಕ್ಷೇತ್ರ = ಕೆಯ್ಯುಂ, ವಪ್ರ = ಗದ್ದೆಯುಂ, ಷಂಡ = ಬನಮುಂ, ಗೃಹ = ಮನೆಯುಂ, ಧರ್ಮಾಯತನಾನಾಂ = ಧರ್ಮಾಶ್ರಯ (ದೇವಾಲಯ) ಮೆಂಬಿಚಱೊಳ್, ಉತ್ತರಃ = ಮೇಗಣದ, ಪೂರ್ವಂ = ಮುನ್ನಿನದಂ, ಬಾಧೇತ = ಬಾಧಿಸುಗುಂ, ಉತ್ತರಂ = ಮೇಗಣದಂ, ಪೂರ್ವಃ = ಮುನ್ನಿನಮುನ್ನಿನದು, ಪುನಃ = ಮತ್ತೆ, ನಬಾಧಿಪುದಲ್ಲದು || ಕ್ಷೇತ್ರಾದಿಗಳಂಮಾಣಿಸಿಮೇಗಣವಪ್ರಾದಿಗಳಂಮಾಡಲಕ್ಕುಂ, ಧರ್ಮಾಶ್ರಯಾದಿಗಳಂಮಾಣಿಸಿಪೆಱಗಣಗೃಹಾದಿಗಳಂಮಾಡಲಾಗದೆಂಬುದುತಾತ್ಪರ್ಯಂ || ದೇಶದೊಳ್ಮನುಷ್ಯರನಿಂತುಪುಗಿಯಸುವುದುಪೊಱಮಡಿಸುವುದೆಂಬುದುತ್ತರವಾಕ್ಯಂ :

—-

೨೩. ಹಿರಿದಾದಗೋವಿನಹಿಂಡುಗಳುಹಿರಣ್ಯಾದಿಲೋಹಗಳಆದಾಯವು, ಸುಂಕಗಳು, ರಾಜನಭಂಡಾರವನ್ನುಹೆಚ್ಚಿಸುವಸಾಧನೆಗಳು.

೨೪. ಗೋರುತಪ್ರಮಾಣದಭೂಮಿಯನ್ನುದೇವರಿಗೆ, ದ್ವಿಜರಿಗೆದಾನವಾಗಿಕೊಟ್ಟಿದ್ದಾದರೆ, ಕೊಟ್ಟವರೂ, ತೆಗೆದುಕೊಂಡವರೂಸುಖವಾಗಿರುತ್ತಾರೆ.

೨೫. ಹೊಲ, ಗದ್ದೆಅಥವಾಸುತ್ತಗೋಡೆ, ಉದ್ಯಾನವನ, ಮನೆದೇವಾಲಯಅಥವಾಛತ್ರಇವುಗಳಲ್ಲಿಆಮೇಲಿನದುಮೊದಲಿನದನ್ನುಬಾಧಿಸಬಹುದು. ಮೊದಲಿನದುಮೇಲಿನದನ್ನುಬಾಧಿಸಲಾಗದು (ಹೊಲಮೊದಲಾದವನ್ನು) ಇಲ್ಲವಾಗಿಸಿಧರ್ಮಾಯತನವನ್ನುಕಟ್ಟಬಹುದು. ಧರ್ಮಾಯತನವನ್ನುನಾಶಗೊಳಿಸಿಗೃಹಾದಿಗಳನ್ನುಮಾಡಲಾಗದು)

—-

ನಾಮುದ್ರಹಸ್ತೋsಶೋಧಿತೋವಾಕಶ್ಚಿತ್ಸ್ವಮಂಡಲ[21]ದುರ್ಗವಿಷಯೇಪ್ರವಿಶೇತ್ನಿರ್ಗಚ್ಛೇದ್ವ || ೨೬ || ೭೬೫ ||

ಅರ್ಥ : ಅಮುದ್ಹಸ್ತಃ = ಕೈಯಲುಂಡಿಗೆಯಿಲ್ಲದೆಯುಂ, ಅಶೋಧಿತೋವಾ = ಶೋಧಿಸಿಕೊಳದೆಯುಂ, ಕಶ್ಚಿತ್ = ಅವನುಂ, ಸ್ವಮಂಡಲದುರ್ಗವಿಷಯೇ = ತನ್ನನಾಡದುರ್ಗದೊಳಗೆ, ನಪ್ರವಿಶೇತ್ = ಪೊಗದಿರ್ಕ್ಕೆ, ನನಿರ್ಗಚ್ಛೇದ್ವಾ = ಪೊಱಮಡದಿರ್ಕ್ಕೆಮೇಣ್ || ಪರೀಕ್ಷಿಸಿದಲ್ಲದೆಆವನುಮಂತನ್ನನಾಡೊಳ್ಪುಗಿಸಲುಂಪೊಱಮಡಿಸಲುಂಆಗದೆಂಬುದುತಾತ್ಪಾರ್ಯಂ || ವಿಚಾರಿಸದೆಪುಗಿಸುವುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಶ್ರೂಯತೇಹಿಕಿಲಹೂಣಾಧಿಪತಿಃಪಣ್ಯಪುಟವಾಹಿಭಿಃಸುಭಟೈಃಚಿತ್ರಕೂಟಂಜಗ್ರಾಹಖೇಟಖಡ್ಗಸಹಾಯಶ್ಚಭದ್ರಂಕಾಂಚೀಪತಿಮಿತಿ[22] || ೨೭ || ೭೬೬ ||

ಅರ್ಥ : ಹೂಣಾಧಿಪತಿಃ = ಹೂಣಮೆಂಬದೇಶದರಸಂ, ಪಣ್ಯಪುಟವಾಹಿಭಿಃ = ಕ್ರಯವಿಕ್ರಯಂಗಳಂಮಾಳ್ಪ (ಮಾಱುಭಂಡದಪೆಟ್ಟಿಗೆಗಳನುಹೊತ್ತುಕೊಂಡ) ಸುಭಟೈಃ = ಸುಭಟರಿಂ, ಚಿತ್ರಕೂಟಂ = ಚಿತ್ರಕೂಟಮೆಂಬದುರ್ಗಮಂ, ಜಗ್ರಾಹ = ಕಳೆದುಕೊಂಡನೆಂದಿಂತು[23]ಖೇಟಖಡ್ಗಸಹಾಯಶ್ಚ = ಹರಿಗೆಯಡ್ಡಾಯುಧಮಂಸಹಾಯಮಾಗುಳ್ಳ, ಭದ್ರಃ = ಭದ್ರನೆಂಬಂ, ಕಾಂಚೀಪತಿಂ = ಕಾಂಚಿಪತಿಯಂ, ಜಗ್ರಾಹಇತಿ, ಪಿಡಿದನೆಂದಿಂತು, ಶ್ರೂಯತೇಹಿಕಿಲ = ಕೇಳಲ್ಬರ್ಪುದಲ್ತೆ || ಸ್ವಾಮಿಪೇಳ್ದಬೆಸನೆಲ್ಲರಂಮೆಚ್ಚುಸುವುದೆಂಬುದುತ್ತರವಾಕ್ಯಂ :

ನಹಿಭರ್ತುರಭಿಯೋಗಾತ್ಪರಃಸರ್ವಜನವಿಶುದ್ಧಿಹೇತುರಸ್ತಿ || ೨೮ || ೭೬೭ ||

ಅರ್ಥ : ಭರ್ತುಃ = ಆಳ್ದನ, ಅಭಿಯೋಗಾತ್ = ಸಂಕಟದತ್ತಣಿಂ, ಪರಃ = ಪೆಱತು, ಸರ್ವಜನವಿಶುದ್ಧಿಹೇತುಃ = ಎಲ್ಲಾಜನಂಗಳಮನಃಗೊಳ್ವುದೇ, ಹಿ = ನೆಟ್ಟನೆ, ನಾಸ್ತಿ = ಇಲ್ಲ || ಸ್ವಾಮಿಪೇಳ್ಪಕೆಲಸಮನಾವುದಾದೊಡಂಮಾಡಲುಜನಂಮೆಚ್ಚುವುದೆಂಬುದುತಾತ್ಪರ್ಯಂ ||

ಇತಿಜನಪದಸಮುದ್ದೇಶಃ || ೧೮ ||[24]

ಸಮುದ್ದೇಶದವಾಕ್ಯಂಗಳು || ೨೮ || ಒಟ್ಟುವ್ಯಾಕ್ಯಂಗಳು || ೭೬೭ ||

—-

೨೬. ಕೈಯಲ್ಲಿಉಂಡಿಗೆಇಲ್ಲದೆಯೂಶೋಧಿಸದೆಯೂಯಾರನ್ನೂತನ್ನನಾಡದುರ್ಗದೊಳಗೆಅಥವಾಹೊರಗೆಬಿಡಕೂಡದು.

೨೭. ರೀತಿಯಪರೀಕ್ಷೆಗೊಳಾದೆಬಂದವ್ಯಾಪಾರದಸರಕಗಳಪೆಟ್ಟಿಗೆಗಳನ್ನುಹೊತ್ತುತಂದಸುಭಟರಿಂದಹೂಣಾಧಿಪತಿಯುಚಿತ್ರಕೂಟವನ್ನುಆಕ್ರಮಿಸಿಕೊಂಡನು. ಹೆರಿಗೆಅಡ್ಡಾಯುಧಗಳನ್ನುಹಿಡಿದಭದ್ರನೆಂಬವನುಕಾಂಚೀಪತಿಯನ್ನುಹಿಡಿದನುಎಂದುಕೇಳುಬರುತ್ತದೆ.

೨೮. ಪ್ರಜೆಗಳರಾಜಭಕ್ತಿಯನ್ನುನಿರ್ಣಯಿಸಬೇಕಾದಲ್ಲಿರಾಜನಕಷ್ಟಕಾಲದಲ್ಲಿಪ್ರಜೆಗಳುತೋರುವಮನೋಭಾವನೆಯನ್ನುಗೊತ್ತುಮಾಡಿಕೊಳ್ಳುವುದಕ್ಕಿಂತಬೇರೆಮಾರ್ಗವಿಲ್ಲ.

—-

 

[1]ಚೌ. ವೃದ್ಧಿಂದದಾತಿಇತಿ.

[2]ಮೈ. ವಾಜಿನಶ್ಚವಿಷಿಣೋತಿ;  ಚೌ. ವಿಸಿನೋತಿ.

[3]ಮೈ. ನರಪತಿ

[4]ಮೈ. ದರತ್ (ದಾರಕಃ);  ಚೌ. ದರತ್

[5]ನಿಗಮಃಎಂದಿರಬೇಕು.

[6]ರಾಷ್ಟ್ರ, ದೇಶ, ವಿಷಯ, ಮಂಡಲ, ಜನಪದ, ದಾರಕ, ನಿಗಮಇವೆಲ್ಲವೂಸಮಾನಾರ್ಥಪದಗಳುಎಂಬುದನ್ನುಗಮನಿಸಬೇಕು.

[7]ಚೌ. ನಾಗಧನ.

[8]ಮೈ. ಅನತಿವೃದ್ಧಾನತಿಹೀನ, ಚೌ. ನಾತಿವೃದ್ಧನಾತಿಹೀನ.

[9]ಚೌ. ದಲ್ಲಿಬಹಳಷ್ಟುಪಾಠಭೇದಗಳಿವೆ.

[10]ಚೌ. ಸ್ವಲ್ಪೋಪ್ಯಾದಾಯೇಷು.

[11]ಬಿತ್ತನೆಯಕೆಲಸನಡೆದಾಗಜನರಿಗೆಆತಂಕವನ್ನುಂಟುಮಾಡಿದರೆಆಕೆಲಸಕ್ಕೆಬಾಧೆಯುಂಟಾಗಿದೇಶಕ್ಕೆಹಾನಿಯುಂಟಾಗುತ್ತದೆಎಂದುಇದರಅರ್ಥ.

[12]ಮೈ. ಚೌ. ಸಿದ್ಧಾದಾಯ, ನಮ್ಮಪ್ರತಿಯಸಿದ್ಧಾಯಎಂಬಪಾಠವೇಸಮಂಜಸವೆನಿಸುತ್ತದೆ. ಸಿದ್ಧಾಯಎಂಬುದುಒಂದುಕರದರೂಪದಲ್ಲಿಬಹಳಷ್ಟುಶಾಸನಗಳಲ್ಲಿಉಕ್ತವಾಗಿದ್ದು, ಅದುಒಕ್ಕಲುತನದಮೇಲೆಕರವೆಂಬುದುಈವಾಕ್ಯದಿಂದಸ್ಪಷ್ಟವಾಗುತ್ತದೆ. ಬೆಳೆಬರುವಮೊದಲೇಸಿದ್ಧಾಯವನ್ನುಸಂಗ್ರಹಿಸಿದರೆಜನರುಹಾಳಾಗುತ್ತಾರೆಎಂಬುದುಈವಾಕ್ಯದಅರ್ಥ.

[13]ಒಕ್ಕಲತನದಲ್ಲಿನಿರತರಾದಜನರನ್ನುಸೇನೆಗೆಕೊಂಡೊಯ್ಯಬಾರದುಎಂದುಒಂದುಅರ್ಥವಾದರೆಬೆಳೆಕೊಯ್ಯುವಕಾಲದಲ್ಲಿಸೇನೆನಡೆದರೆಬೆಳೆನಾಶವಾಗಿಬರುವುಂಟಾಗುತ್ತದೆಎಂಬುದುಇನ್ನೊಂದುಅರ್ಥ.

[14]ಅರಣ್ಯಾನೀಎಂದುಓದಬೇಕು. ಸಂದರ್ಭನುಸಾರವಾಗಿ, ಮಿತಿಮೀರಿಫಸಲುಪಡೆಯಲುಪ್ರಯತ್ನಿಸಿದರೆ, ಫಲವತ್ತಾದಭೂಮಿಯುಸಹಬರಡಾಗುತ್ತದೆಎಂಬುದುವಾಕ್ಯದಅರ್ಥ. ಟೀಕಾಕಾರನು, ಅರಸನುಮಿತಿಮೀರಿವರ್ತಿಸಿದರೆಪ್ರಜೆಗಳುದೇಶವನ್ನುಬಿಟ್ಟುಓಡಿಹೋಗುತ್ತಾರೆಎಂಬಅರ್ಥವನ್ನುತಾತ್ಪರ್ಯದಲ್ಲಿಸೂಚಿಸಿದ್ದಾನೆ.

[15]ಮಗ್ರಹಃಎಂದುಓದಬೇಕು.

[16]ಮೈ. ಚೌ. ಪುಟ.

[17]ಮೈ. ಚೌ. ಪುಣ್ಠಾ.

[18]ಪೇಂಠಾ= ಪೇಟೆಎಂದುಓದಬೇಕು.

[19]ಚೌ. ನಕ್ತಗ್ರಾಮಾಃ

[20]ಗೋರುತ: ಒಕ್ಕಲುತನದಭೂಮಿಯಒಂದುಅಳತೆಯಪ್ರಮಾಣ, ಆಕಳುಒಂದುಸ್ಥಳದಲ್ಲಿನಿಂತುಅದರಧ್ವನಿಎಲ್ಲಿಯವರೆಗೆಕೇಳುತ್ತದೆಯೋಅಲ್ಲಿಯವರೆಗಿನಭೂಮಿ;  ಇದೇಮುಂದೆಒಂದುಅಳತೆಯಪ್ರಮಾಣವಾಯಿತು. ಗೋಪ್ರಚಾರ, ನಿವರ್ತನಎಂಬಸಮಾನಾರ್ಥಪದಗಳನ್ನುಗಮನಿಸುವುದು.

[21]ಮೈ. ಸ್ವಮಂಡಲೇನಿರ್ವಿಶೇತ್, ಚೌ. ಈಮತ್ತುಮುಂದಿನವಾಕ್ಯವುಮುಂದಿನದುರ್ಗಸಮುದ್ದೇಶದಲ್ಲಿವೆ.

[22]ಇಲ್ಲಿಎರಡುಘಟನೆಗಳಉಲ್ಲೇಖವಿದೆ. ೧. ಹೂಣಅರಸನುವ್ಯಾಪಾರದವಸ್ತುಗಳಪೆಟ್ಟಿಗೆಗಳನ್ನುಕಳಿಸುವನೆವದಲ್ಲಿಸೈನಿಕರನ್ನುದುರ್ಗದೊಳಗೆಕಳಿಸಿಚಿತ್ರಕೂಟವನ್ನುಗೆದ್ದನೆಂಬುದು. ೨. ಆಯುಧಗಳಸಹಾಯದಿಂದಭದ್ರನೆಂಬಅರಸುಕಾಂಚೀಪುರದಅರಸನನ್ನುಗೆದ್ದನೆಂಬುದು, ಚಿತ್ರಕೂಟವನ್ನುಈಗಿನಬುಂದೇಲಖಂಡಪ್ರದೇಶದಲ್ಲಿಗುರುತಿಸಲಾಗುತ್ತದೆ. ಕಾಂಚೀಪುರವುಪ್ರಸಿದ್ಧವಿದೆ. ಆದರೆ, ಹೂಣಅರಸನಾಗಲಿ, ಭದ್ರನಾಗಲಿಯಾರೆಂಬುದನ್ನುಗುರುತಿಸುವುದುಸಾಧ್ಯವಾಗಿಲ್ಲ. ಹೀಗಾಗಿಈಘಟನೆಗಳುಎಷ್ಟರಮಟ್ಟಿಗೆಐತಿಹಾಸಿಕಎಂಬುದನ್ನುನಿರ್ಧರಿಸುವುದುಕಠಿಣ.

ಚೌ. ದಲ್ಲಿಅರ್ಥಹೆಚ್ಚುಸ್ಪಷ್ಟವಿದೆ. ಅಲ್ಲಿಸೇವಾರ್ಥಂಎಂಬಹೆಚ್ಚಿನಪದವಿದ್ದು, ಭದ್ರನುಸೇವಕರರೂಪದಲ್ಲಿತನ್ನಸೈನಿಕರನ್ನುಕಳಿಸಿಕಾಂಚೀಪುರದಅರಸನನ್ನುಗೆದ್ದನೆಂದುಅರ್ಥವಾಗುತ್ತದೆ.

[23]ಹಿದಿಡುಕೊಂಡನುಎಂದಿರಬೇಕು.

[24]ಇದು೧೯ಎಂದಿರಬೇಕು.