ರಾಜ್ಯಾಂಗಮಂಪೇಳ್ವುದುತ್ತರವಾಕ್ಯಂ :

[1]ಯಸ್ಯಾಭಿಯೋಗಾತ್ಪರೆದುಃಖಂಗಚ್ಛಂತಿದುರ್ಜನೋದ್ಯೋಗವಿಷಯೋ
ವಾಸ್ವಸ್ಯ
ವಿಜಿಗಿಷೋ[2]ರಾಪದೋಗಮಯತೀತಿದುರ್ಗಂ || || ೭೬೮ ||

ಅರ್ಥ : ಯಸ್ಯ = ಅವುದೊಂದಱ, ಅಭಿಯೋಗಾತ್ = ಕೂಟದತ್ತಣಿಂ, ಪರೇ = ಪಗೆವರ್‌, ದುಃ = ಖಂ = ದುಃಖಮಂ, ಗಚ್ಛಂತಿ = ಎಯ್ದುವರುಂ, ದುರ್ಜನೋದ್ಯೋಗವಿಷಯೋವಾ = ದುರ್ಜನರನೆಗಳ್ತೆಯಿಂಪುಟ್ಟುವ, ಸ್ವಸ್ಯ = ತನ್ನ, ವಿಜಿಗೀಷೋಃ = ಗೆಲುವಮಿಚ್ಛಿಸುವ, ಆಪದಃ = ಆಪತ್ತುಗಳಂ, ಗಮಯತೀತಿ = ಪಿಂಗಿಸುವುದೆಂದಿಂತು, ದುರ್ಗಂ = ದುರ್ಗಮೆಂಬುದು || ಪಗೆವರ್ಗಸಾಧ್ಯಮಪ್ಪುದುದುರ್ಗಮೆಂಬುದುತಾತ್ಪರ್ಯಂ || ಅದಱಭೇದಮಂಪೇಳ್ವುದುತ್ತರವಾಕ್ಯಂ :

ತದ್ದ್ವಿವಿಧಂಸ್ವಾಭಾವಿಕಮಾಹಾರ್ಯಂ || || ೭೬೯ ||

ಅರ್ಥ : ತತ್ = ಆದುರ್ಗಂ, ದ್ವಿವಿಧಂ = ಇತ್ತೆಱಂ, ಸ್ವಾಭಾವಿಕಂ = ತನಗೆತಾನಾದುದುಂ, ಅಹಾರ್ಯಂಚ = ಮಾಡಿದುದುಮೆಂದಿಂತು || ಅದಱಸಾಮಗ್ರಿಯಂಪೆಳ್ವುದುತ್ತರವಾಕ್ಯಂ :

ವೈಷಮ್ಯಂಪರ್ಯಾಪ್ತಾವಕಾಶೋಯವಸೇಂಧನೋದಕಭೂಯಸ್ತ್ವಂಸ್ವಸ್ಯಪರೇಷಾಂತದಭಾವೋಬಹುಧಾನ್ಯರಸಸಂಗ್ರಹಃಪ್ರವೇಶಾಪಸಾರೌವೀರಾಶ್ಚಪುರುಷಾಇತಿದುರ್ಗಸಂಪತ್ || || ೭೭೦ ||

ಅರ್ಥ : ವೈಷಮ್ಯಂ = ವಿಷಮತೆಯುಂ, ಪರ್ಯಾಪ್ತಾವಕಾಶಃ = ಎಡೆನೆಱೆಹಮುಂ (ತನ್ನಿಚ್ಛೆಗೆತನ್ನಒಳಗುತೆಱವುಳ್ಳುದು) ಸ್ವಸ್ಯ = ತನಗೆ, ಯವಸ = ಪುಲ್ಲುಂ, ಇಂಧನ = ಪುಳ್ಳಿಯುಂ, ಉದಕ = ನೀಱುಮೆಂದಿವಱ, ಭೂಯಸ್ತ್ವಂ = ಅಧಿಕತೆಯುಂ, ಸ್ವಸ್ಯ = ತನ್ನ, ಪರೇಷಾಂಚ = ಶತ್ರುಗಳ್ಗೆ, ತದಭಾವಃ = ಅವಱಕ್ಕನೆಯುಂ, ಬಹು = ಪಿರಿದಪ್ಪ, ಧಾನ್ಯರಸಸಂಗ್ರಹಃ = ಧಾನ್ಯರಸಂಗಳುಮೆಂಬಿವಱಸಂಗ್ರಹಮುಂ, ಪ್ರವೇಶಾಪಸಾರೌ = ಕಳ್ದುಪೋಗುವಪೊಱಮಡುವಬಟ್ಟೆಗಳುಂ, ವೀರಾಃ = ಕಲಿಗಳಪ್ಪ, ಪುರಷಾಶ್ಚಇತಿ = ಪುರುಷರುಮೆಂದಿಂತು, ದುರ್ಗಸಂಪತ್ = ದುರ್ಗದಸಿರಿ || ಅದಕ್ಕೆತಾತ್ಪರ್ಯಂಪೇಳ್ವುದುತ್ತರವಾಕ್ಯಂ :

—-

. ಆಕ್ರಮಿಸಿಕೊಳ್ಳಲುಬಂದಶತ್ರುಗಳಿಗೆದುಃಖವನ್ನುಂಟುಮಾಡುವಂಥದೂ, ದುರ್ಜನರಕಾರ್ಯಾಚರಣೆಯನ್ನು, ಗೆಲ್ಲಲುಬಂದವರನ್ನು, ವಿಪತ್ತಿಗೆಗುರಿಪಡಿಸುವಂಥದೂದುರ್ಗವು

. ದುರ್ಗವುಎರಡುವಿಧ, ಸ್ವಾಭಾವಿಕಮತ್ತುಮಾನವನಿರ್ಮಿತ.

. ವಿಷಮತೆ, (ಏರುತಗ್ಗುಗಳಿಂದಕೂಡಿರುವುದು), ಅವಶ್ಯಕವಾದಷ್ಟುವಿಶಾಲವಾಗಿರುವದು, ಪಶುಗ್ರಾಸ, ಇಂಧನ (ಉರುವಲು) ನೀರುಇವುಗಳುತನಗೆಬೇಕಾದಷ್ಟಿದ್ದುಶತ್ರುಗಳಿಗೆಅವುಸಿಗದಂತಿರುವುದು, ಧಾನ್ಯಗಳಮತ್ತುತೈಲಾದಿರಸಗಳಸಂಗ್ರಹವರುವದು. ಒಳಗೆಬರುವದಕ್ಕೂಹೊರಗೆಹೋಗುವದಕ್ಕೂಬೇಕಾದಕಳ್ಳದಾರಿಗಳು, ವೀರಪುರುಷರುಇವುಗಳುದುರ್ಗಸಂಪತ್ತುಗಳು.

—-

[3]ಅನ್ಯದ್ಧಿದುರ್ಗಂಬಂಧಿಕಾರೈವ[4] || || ೭೭೧ ||

ಅರ್ಥ : = ಅನ್ಯತ್ = ಆಸಾಮಗ್ರಿಇಲ್ಲದ, ದುರ್ಗಂ = ದುರ್ಗವು, ಬಂಧಿಕಾರಏವ = ಸೆಱಿವನೆಯೇ || ದುರ್ಗುಮಿಲ್ಲದದೇಶಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

[5]ಅದುರ್ಗಸ್ಯರಾಜ್ಞಃಪಯೋಧಿಮಧ್ಯೇಪೋತಚ್ಯುತಪಕ್ಷಿವದಾಪದಿನಾಸ್ತ್ಯಾಶ್ರಯಃ || || ೭೭೨ ||

ಅರ್ಥ : ಅದುರ್ಗಸ್ಯ = ದುರ್ಗಮಿಲ್ಲದ, ರಾಜ್ಞಃ = ಅರಸಂಗೆ, ಪಯೋಧಿಮಧ್ಯೇ = ಕಡಲನಡುವೆ, ಪೋತ = ಬಹಿತ್ರದಿಂ, ಚ್ಯುತ = ತಪ್ಪಿದ, ಪಕ್ಷಿವತ್ = ಪಕ್ಷಿಗೆಂತಂತೆ, ಆಪದಿ = ಆಪತ್ತಿನೊಳು, ಆಶ್ರಯಃ = ಪೊರ್ದುವುದಕ್ಕೆಡೆ, ನಾಸ್ತಿ = ಇಲ್ಲ || ದುರ್ಗಮಿಲ್ಲದೆಂತಪ್ಪನುಂಕಿಡುವನೆಂಬುದುತಾತ್ಪರ್ಯಂ || ದುರ್ಗಮಂಕೊಳ್ವುದಕ್ಕುಪಾಯಮಂಪೇಳ್ವುದುತ್ತರವಾಕ್ಯಂ :

ಉಪಾಯತೋಗಮನಮುಪಜಾಪಶ್ಚಿರಮನುಬಂಧೋವಸ್ಕಂಧಸ್ತೀಕ್ಷ್ಣಪುರುಷ
ಪ್ರಯೋಗಶ್ಚೇತಿ
ದುರ್ಗಲಾಭೋಪಾಯಾಃ[6] || || ೭೭೩ ||

ಅರ್ಥ : ಉಪಾಯತಃ = ಉಪಾಯದಿಂದಂ, ಗಮನಂ = ಪೋಪುದುಂ, ಉಪಜಾಪಃ = ಮಾತಿನಿಂಕಾರ್ಯಪುರುಷ(ಭೇದ)ರನೊಳಗುಮಾಳ್ವುದುಂ, ಚಿರಂಅನುಬಂಧಃ = ಪಲಕಾಲಸುತ್ತಿರ್ಪುದುಂ, ಪಲಕಾಲಂನಂಟಿಂಮೇಳ್ವುದಿಸುವುದುಂಮೇಣ್, ಅವಸ್ಕಂಧಃ = ದಾಳಿಯುಂ, ತೀಕ್ಷ್ಣಪುರುಷಪ್ರಯೋಗಶ್ಚೇತಿ = ತೀಕ್ಷ್ಣಪುರುಷರನಟ್ಟುವುದೆಂದಿಂತು, (ಒಳಪೊಗಿಸುವುದು) ದುರ್ಗಲಾಭೋಪಾಯಾಃ = ದುರ್ಗಮಂಕೊಳ್ವುಪಾಯಂಗಳ್ ||

ಇತಿದುರ್ಗಸಮುದ್ದೇಶಃ || ೧೯ ||[7]

ಸಮುದ್ದೇಶದವಾಕ್ಯಗಳು || || ಒಟ್ಟುವಾಕ್ಯಗಳು || ೭೭೩

—-

.ಇವಿಲ್ಲದದುರ್ಗವುಸೆರೆಮನೆಯೇಸರಿ.

. ದುರ್ಗವಿಲ್ಲದರಾಜನಿಗೆಕಡಲನಡುವೆಹಡಗಿನಿಂದಹೊರಗೆಬಿದ್ದಪಕ್ಷಿಗೆಹೇಗೋಹಾಗೆಆಪತ್ತಿನಲ್ಲಿಆಶ್ಯವಿರುವದಿಲ್ಲ.

. ಉಪಾಯವಾಗಿಒಳಗೆಹೋಗುವದು, ಭೇದೋಪಾಯಪ್ರಯೋಗದಿಂದಶತ್ರುಪಕ್ಷದಅಧಿಕಾರಿಗಳಲ್ಲಿ, ಜನಗಳಲ್ಲಿಒಡಕುಹುಟ್ಟುವಂತೆಮಾಡುವದು. ದುರ್ಗವನ್ನುಬಹುಕಾಲಸುತ್ತುಗಟ್ಟುವದು, ದಾಳಿಮಾಡುವುದು, ಶತ್ರುಪಕ್ಷದವರನ್ನುಹಿಂಸೆಗೆಗುರಿಮಾಡುವಘಾತುಕರನ್ನುಒಳಹೋಗಿಸುವುದು. ಇವುದುರ್ಗವನ್ನುವಶಪಡಿಸಿಕೊಳ್ಳುವಉಪಾಯಗಳು.

—-

 

[1]ಮೈ. ಈವಾಕ್ಯವುಎರಡುವಾಕ್ಯಗಳಲ್ಲಿವಿಭಜಿತವಾಗಿದೆ.

[2]ಚೌ. ಸ್ವಸ್ಯಾಪದೋಗಮಯತೀತಿ.

[3]ಮೈ. ಚೌ. ಈವಾಕ್ಯವುಹಿಂದಿನವಾಕ್ಯದಲ್ಲಿಯೇಅಡಕವಾಗಿದೆ.

[4]ಮೈ. ಬಂದಿಶಾಲೇವ;  ಚೌ. ಬಂದಿಶಾಲಾವತ್.

[5]ಮೈ. ಚೌ. ಇದಕ್ಕೆಮೊದಲುಇನ್ನೊಂದುಹೆಚ್ಚಿನವಾಕ್ಯವಿದೆ.

[6]ಮೈ. ಲಂಭನೋಪಾಯಾಃ.

[7]ಇದು೨೦ಎಂದಿರಬೇಕು.