ಆಱನೆಯರಾಜ್ಯಾಂಗಮಂಪೇಳ್ವುದುತ್ತರವಾಕ್ಯಂ :

ದ್ರವಿಣದಾನಪ್ರಿಯಭಾಷಣಾಭ್ಯಾಮರಾತಿನಿವಾರಣೇನ ಚ ಸ್ವಾಮಿನಂ ಸರ್ವಾಸ್ವವಸ್ಥಾಸು ಬಲತೇ ಸಂವೃಣೋತೀತಿ ಬಲಂ || ೧ || ೭೮೮ ||

ಅರ್ಥ : ದ್ರವಿಣದಾನ = ವಸ್ತುವನಿಂತಾದೊಂಡಂ, ಪ್ರಿಯವಾಕ್ಯದಿಂದಮುಂ, ಅರಾತಿನಿವಾರಣೇನಚ = ಪಗೆವಱಮಗ್ಗಿಸುವುದಱಿಂದಮೇಣ್, ಸ್ವಾಮಿನಂ = ಒಡೆಯನಂ, ಸರ್ವ್ವಾಸ್ಪವಸ್ಥಾಸು = ಎಲ್ಲಾಅವಸ್ಥೆಗಳೊಳಂ, ಬಲತೇ = ಲತೇಎಂಬುದೇನೆಂದೊಡೆ, ಸಂವೃಣೋತೀತಿ = ಸಂವರಿಸಿಕೊಂಡಿರ್ಪುದೆಂದಿಂತು, ಬಲಂ = ಬಲಮೆಂಬುದು || ಸ್ವಾಮಿಯೆಡರ್ಗಪ್ಪುದುಬಲಮೆಂಬುದುತಾತ್ಪರ್ಯಂ || ಅಲ್ಲಿಹಸ್ತಿಯಬಲದಸಾಮರ್ಥ್ಯಮಂಪೇಳ್ವುದುತ್ತರವಾಕ್ಯಂ :

ಬಲೇಷುಹಸ್ತಿನಃಪ್ರಧಾನಮಂಗಂಯಥಾಸ್ವೈರವಯವೈರಷ್ಟಾಯುಧಾ
[1]ಹಸ್ತಿನೋನತಥಾನ್ಯದ್ಬಲಂ || || ೭೮೯ ||

ಅರ್ಥ : ಬಲೇಷು = ಬಲಂಗಳೊಳ್, ಹಸ್ತಿನಃ = ಹಸ್ತಿಗಳ, ಪ್ರಧಾನಂಅಂಗಂ = ಮಿಕ್ಕಂಗಂ, ಯಥಾ = ಎಂತು, ಸ್ವೈಃಅವಯವೈಃ = ತನ್ನಹಸ್ತಾದ್ಯವಯಂಗಳಿಂ, ಅಷ್ಟಾಯುಧಾಃ = ಎಂಟಾಯುಧಮನುಳ್ಳುದು[2], ಹಸ್ತಿನಃ = ಹಸ್ತಿಗಳು, ತಥಾ = ಅಂತೆ, ಅನ್ಯದ್ಬಲಂ = ಮತ್ತೊಂದುಬಲಂ, ನ = ಅಲ್ಲದು ||

[3]ಹಸ್ತಿಪ್ರಧಾನೋಹಿವಿಜಯೋರಾಜ್ಞಃ || || ೭೯೦ ||

ಅರ್ಥ : ಹಸ್ತಿಪ್ರಧಾನಃ = ಆನೆಯನೇಮುಖ್ಯಮಾಗುಳ್ಳುದು, ವಿಜಯಃ = ಗೆಲವು, ರಾಜ್ಞಃ = ಅರಸಿಂಗೆ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

—-

. ಧನವನ್ನಿತ್ತು, ಒಳ್ಳೆಯಭಾಷಣಗಳಿಂದಮತ್ತುಶತ್ರುಗಳನ್ನುನವಾರಿಸಿಒಡೆಯನನ್ನುಎಲ್ಲಸ್ಥಿತಿಗಳಲ್ಲೂಸಂರಕ್ಷಿಸುವುದುಬಲಎಂದರೆಸೈನ್ಯ.

. ಸೈನ್ಯದಲ್ಲಿಆನೆಗಳಸೈನ್ಯವುಪ್ರಧಾನವಾದಅಂಗ, ಹೇಗೆಂದರೆಆನೆಗಳಎಂಟುಅವಯವಗಳುಎಂಟುಆಯುಧಗಳು, ಅಂಥಬಲವುಬೇರಾವುದಿಲ್ಲ.

. ರಾಜನವಿಜಯಕ್ಕೆಆನೆಯೇಮುಖ್ಯ.

—-

ಯದೇಕೋsಪಿಹಸ್ತೀಸಹಸ್ರೈರ್ಯೋಧಯತಿ, ಪ್ರಹಾರಸಹಸ್ತೇಣಾಪಿಸೀದತಿ || || ೭೯೧ ||

ಅರ್ಥ : ಯತ್ = ಅವುದೊಂದುಕಾರಣದಿಂದಂ, ಏಕೊsಪಿ = ಒಂದಾದೊಡಂ, ಹಸ್ತೀ = ಆನೆ, ಸಹಸಃ = ಸಾಯಿರಮಂ, ಯೋಧಯತಿ = ಕಾದುಗುಂ, ಪ್ರಹಾರಸಹಸ್ರೇಣಾಪಿ = ಸಾಯಿರೇಱಿನಿಂ (ಹುಯಲಿನಿಂ) ದಮುಂ, ನಸೀದತಿ = ಬಳಲದು || ಹಸ್ತಿಗಳೊಳಿಂತಪ್ಪಗುಣಮೆಮುಖ್ಯಮೆಂಬುದುತ್ತರವಾಕ್ಯಂ :

ಜಾತಿಃಕುಲಂವನಂಪ್ರಚಾರಶ್ಚಹಸ್ತೀನಾಂಪ್ರಧಾನಂ, ಕಿಂತುಶರೀರಬಲಂಶೌರ್ಯಂಶಿಕ್ಷಾ[4] || || ೭೯೨ ||

ಅರ್ಥ : ಜಾತಿಃ = ಭದ್ರ, ಮಂದ, ಮೃಗ, ಸಂಕೀರ್ಣಮುಮೆಂಬಜಾತಿಯುಂ, ಕುಲಂ = ಸಾಮಜೈರಾವತಾದಿಕುಲಮುಂ, ವನಂ = ಕೆಳಿಂಗಾದಿವನಮುಂ, ಪ್ರಚಾರಶ್ಚ = ನದಿ-ಗಿರಿ- ಸಮುದ್ರಮೆಂಬಪ್ರಚಾರಮುಂ, ಹಸ್ತೀನಾಂ = ಹಸ್ತಿಗಳ್ಗೆ, ನಪ್ರಧಾನಂ = ಮುಖ್ಯಮಾಗದು, ಕಿಂತು = ಮತ್ತೆ, ಶರೀರಂ = ಸ್ಥೂಲಮಪ್ಪಶರೀರಮುಂ, ಬಲಂ = ಶಕ್ತಿಯುಂ, ಶೌರ್ಯಂ = ಕಲಿತನಮುಂ, ಶಿಕ್ಷಾಚ = ವಧಾದಿಶಿಕ್ಷೆಯುಮೆಂದಿಂತಿವುಮುಖ್ಯಂ || ಶಿಕ್ಷೆಯಿಲ್ಲದಾನೆಗಳ್ಗೆದೋಷಮಂಪೇಳ್ವುದುತ್ತರವಾಕ್ಯಂ :

ಅಶಿಕ್ಷಿತಾಹಿಹಸ್ತಿನಃಕೇವಲಂನೃಪಾಣಾಮರ್ಥಪ್ರಾಣಹರಾಃ || || ೭೯೩ ||

ಅರ್ಥ : ಅಶಿಕ್ಷಿತಾಃ = ಶಿಕ್ಷಿಸಲ್ಪಡದ, ಹಸ್ತಿನಃ = ಆನೆಗಳು, ಕೇವಲಂ = ಬಱಿದೆ, ನೃಪಾಣಾಂ = ಅರಸಂಗಳ್ಗೆ, ಅರ್ಥಪ್ರಾಣಹರಾಃ = ಅರ್ಥಮುಂ, ಪ್ರಾಣಮುಂ, ಅಪಹರಿಸುವರು || ಹಸ್ತಿನಿಂದಪ್ಪಫಲಮಂಪೇಳ್ವುದುತ್ತರವಾಕ್ಯಂ :

—-

. ಆನೆಯುಒಂದೇಆದರೂಸಾವಿರಯೋಧರೊಂದಿಗೆಕಾದಾಡಬಲ್ಲದು. ಸಾವಿರಾರುಹೊಡೆತಗಳಿಂದಲೂಅದುಬಳಲದು.

. ಆನೆಗೆಕುಲ, ವನ, ಪ್ರಚಾರ, ಇವುಮುಖ್ಯವಲ್ಲಆದರೆಅದರದೈಹಿಕಬಲ, ಶೌರ್ಯ, ತರಬೇತಿಇವುಮುಖ್ಯ.

. ತರಬೇತಿಇಲ್ಲದಆನೆಗಳುರಾಜರಅರ್ಥಮತ್ತುಪ್ರಾಣಹರಣಕ್ಕೆಕಾರಣವಾಗುತ್ತವೆ.

—-

ಸುಖೇನಯಾನಮಾತ್ಮನೋರಕ್ಷಾಪರಪುರಾವರ್ಮರ್ದನಮರಿವ್ಯೂಹನಿಮರ್ದೋಜಲೇಷುಸೇತುಬಂಧೋವಚನಾದನ್ಯತ್ರಸರ್ವವಿನೋದಹೇತವಶ್ಚೇತಿಹಸ್ತಿಗುಣಾಃ || || ೭೯೪ ||

ಅರ್ಥ : ಸುಖೇನಯಾನಂ = ಸುಖದಿಂಪೋಪುದುಂ, ಆತ್ಮನಃ = ತನ್ನ, ರಕ್ಷಾ = ಕಾಪುಂ, ಪರಪುರಾವಮರ್ದನಂ = ಶತ್ರುಗಳಪುರಮಂಕೆಡಿಸುವುದುಂ, ಅರಿವ್ಯೂಹನಿಮರ್ದಃ = ಪಗೆವರಪೆರಯಂಕೊಲ್ವುದುಂ, ಜಲೇಷು = ನಿರ್ಗಳೊಳ್, ಸೇತುಬಂಧಃ = ಕಟ್ಟೆಯಾಗಿಗಟ್ಟುವುದುಂ, ವಚಾದನ್ಯತ್ರ = ನುಡಿಪೊಱಗಾಗಿ, ಸರ್ವವಿನೋದಹೇತವಶ್ಚಇತಿ = ಎಲ್ಲಾಬಿನದಕ್ಕೆಕಾರಣಂಗಳೆಂದಿಂತು, ಹಸ್ತಿಗುಣಾಃ = ಹಸ್ತಿಯಗುಣಂಗಳ್ || ಹಸ್ತಿಇಲ್ಲದಂಬಲಹೀನನೆಂಬುದಿದಱತಾತ್ಪರ್ಯಂ ||

ಅಶ್ಚಬಲಂಸೈನ್ಯಸ್ಯಜಂಗಮಃಪ್ರಕಾರಃ || || ೭೯೫ ||

ಅರ್ಥ : ಅಶ್ವಬಲಂ = ಕುದುರೆಯಬಲಂ, ಸೈನ್ಯಸ್ಯ = ಪಡೆಗೆ, ಜಂಗಮಃ = ನಡೆವ, ಪ್ರಕಾರಃ = ನಡೆಗೋಂಟೆಯುಂ[5] ||

ಅಶ್ಚಬಲಸ್ಯರಾಜ್ಞಾಃಕದನಕಂದುಕಕ್ರೀಡಾಃಪ್ರಸೀದಂತಿ[6]ಪ್ರಭವಂತಿದೂರಸ್ಥಾಅಪಿಕರಸ್ಥಾಃಶತ್ರವಃ[7] || || ೭೯೬ ||

ಅರ್ಥ : ಅಶ್ವಬಲಸ್ಯ = ಕುದುರೆಯಬಲಮನುಳ್ಳ, ರಾಜ್ಞಃ = ಅರಸಂಗೆ, ಹಿ = ನೆಟ್ಟನೆ, ಕದನಕಂದುಕಕ್ರೀಡಾಃ = ಸಂಗ್ರಾಮವಡೆದವಿನೋದಂಗಳುಂ, ಕಂದುಕಕ್ರೀಡಾಃ = ಚೆಂಡಿನವಿನೋದಮುಮೆಂದಿವು, ಪ್ರಸೀದಂತಿ = ಸಿದ್ಧಮಪ್ಪುವು, ಶತ್ರವಶ್ಚ = ಪಗೆವರುಂ, ದೂರಸ್ಥಾಅಪಿ = ದೂರದೊಳಿರ್ದರಾಗಿಯುಂ, ಕರಸ್ಥಾಃ = ಕೈಯೊಳಿರ್ದಂತೆ, ಪ್ರಭವಂತಿ = ಅಪ್ಪರು ||

—-

. ಸುಖಪ್ರಯಾಣ, ಆತ್ಮರಕ್ಷೆ, ಶತ್ರುಪುರಗಳನ್ನುನಾಶಗೊಳಿಸುವದು, ಶತ್ರುವ್ಯೂಹಗಳನ್ನುಭೇಧಿಸುವದು, ನೀರಿನಲ್ಲಿಸೇತುಬಂಧಕ್ಕೆಉಪಯೋಗವಾಗುವದು, ಮಾತೊಂದಿಲ್ಲದೆಎಲ್ಲರೀತಿಯವಿನೋದಗಳಿಗೂಕಾರಣವಾಗಿರುವದು. ಇವುಆನೆಗಳಗುಣಗಳು.

. ಅಶ್ವಬಲವುಸೈನ್ಯದನಡೆದಾಡುವಕೋಟೆಯಿದ್ದಂತೆ.

. ಅಶ್ವಬಲವುಳ್ಳರಾಜನಿಗೆಯುದ್ಧದಲ್ಲಿಚೆಂಡಿನಾಟದಂತೆಗೆಲುವುದೊರೆಯುತ್ತದೆ. ದೂರದಲ್ಲಿರುವಶತ್ರುಗಳುಹಸ್ತಗತರಾಗುವರು.

—-

ಆಪತ್ಸುಸಮಸ್ತಮನೋರಥಸಿದ್ಧಯಸ್ತುರಂಗಾಏವ || ೧೦ || ೭೯೭ ||

ಅರ್ಥ : ಆಪತ್ಸು = ಆಪತ್ತುಗಳೊಳ್‌, ಸಮಸ್ತ = ಎಲ್ಲಾ, ಮನೋರಥಸಿದ್ಧಯಃ = ಬಯಕೆಯಂತೀರ್ಚುವುವು, ತುರಂಗಾಏವ = ಕುದುರೆಗಳೇ || ಕುದುರೆಯಿಂದಪ್ಪಫಲಮಂಪೇಳ್ವುವುದುತ್ತರವಾಕ್ಯಂ :

ಸರಣಮಪಸರಣಮವಸ್ಕಂಧಃಪರಾನೀಕಭೇದನಂಚಾತುರಂಗಸಾಧ್ಯಮೇತತ್ || ೧೧ || ೭೯೮ ||

ಅರ್ಥ : ಸರಣಂ = ಮುಂದಕ್ಕೆನಡೆವುದುಂ, ಅಪಸರಣಂ = ಹಿಮ್ಮೆಟ್ಟುವುದುಂ, ಅವಸ್ಕಂಧಃ = ಚಾಳಿಯಂ, ಪರಾನೀಕಭೇದಂಚಪೆಱರಪಡೆಯಂಭೇದಿಸುವುದುಮೆಂದಿಂತು, ಏತತ್ = ಇದು, ತುರಂಗಸಾಧ್ಯಂ = ಕುದುರೆಗಳಿಂಸಾಧ್ಯಂ || ಕುದುರೆಗಳಿಂಪಿರಿದುಕಾರ್ಯಸಿದ್ಧಿಯಕ್ಕುಮೆಂಬುದುತಾತ್ಪರ್ಯಂ || ರಥಸಾಮರ್ಥ್ಯಮಂಪೇಳ್ವುದುತ್ತರವಾಕ್ಯಂ :

ಸಮಾಭೂಮಿರ್ಧನುರ್ವೇದವಿದೇ[8]ಥಾರೂಢಾಃಪ್ರಹರ್ತಾರೋಯದಿತದಾಕಿಮಸಾಧ್ಯಂನಾಮನೃಪಾಣಾಂ || ೧೨ || ೭೯೯ ||

ಅರ್ಥ : ಸಮಾಭೂಮಿಃ = ಕುಳಿ, ತೆವರಿಲ್ಲದನೆಲನಂ, ಧನುರ್ವೇಧವಿದಃ = ಬಿಲ್ವಿದ್ಯೆಯಂಬಲ್ಲ, ರಥಾರೂಢಾಃ = ರಥಮನೇಱಿದ, ಪ್ರಹರ್ತಾರಃ = ಎಸುವಬಂಟರು, ಯದಿ = ಅಪ್ಪರಪ್ಪೊಡೆ, ತದಾ = ಆಗಳು, ನಾಮ = ನಿಶ್ಚಯದಿಂ, ನ್ವಪಾಣಾಂ = ಅರಸುಗಳ್ಗೆ, ಅಸಾಧ್ಯಂ = ಸಾಧ್ಯಮಲ್ಲದುದು, ಕಿಂ = ಏನು ||

ರಥೈರವಮರ್ದಿತಂಹಿಪರಬಲಂಸುಖೇನಜೀಯತೇ || ೧೩ || ೮೦೦ ||

ಅರ್ಥ : ರಥೈಃ = ರಥಂಗಳಿಂದಂ, ಅವಮರ್ದಿತಂ = ನೋಯಿಸಲ್ಪಟ್ಟ, ಪರಬಲಂ = ಪಗೆವಡೆ, ಸುಖೇನ = ಸುಖದಿಂದಂಹಿ = ನೆಟ್ಟನೆಜೀಯತೇ = ಗೆಲಲ್ಪಡುಗುಂ || ರಥಮಿಲ್ಲದೆಪರಬಲಮಸಾಧ್ಯಮೆಮಬುದುತಾತ್ಪರ್ಯಂ || ಕಾಲಾಳನಿಂತುಸಂವರಿಸುಗೆಂಬುದುತ್ತರವಾಕ್ಯಂ :

—-

೧೦. ಆಪತ್ತುಗಳುಂಟಾದಾಗಎಲ್ಲಮನೋರಥಗಳನ್ನುಪೂರೈಸುವವುಕುದುರೆಗಳೇ.

೧೧. ಮುಂದೆನುಗ್ಗುವದು. ಹಿಂದಕ್ಕೆಸರಿಯುವುದು, ದಾಳಿಮಾಡುವದು, ಶತ್ರುಸೈನ್ಯಭೇದನ, ಇವುಕುದುರೆಗಳಿಂದಲೇಸಾಧ್ಯ.

೧೨. ಹಳ್ಳತಿಟ್ಟುಗಳಿಲ್ಲದಸಮತಟ್ಟಾದಭೂಮಿ, ಬಿಲ್ಲುವಿದ್ಯೆಬಲ್ಲವರಾದರಥವನೇರಿದ, ಹೋರಾಡುವಬಂಟರುಇರುವುದಾದರೆರಾಜನಿಗೆಅಸಾಧ್ಯವಾದುದೇನಿದೆ?

೧೩. ರಥಗಳಿಂದತುಳಿಯಲ್ಪಟ್ಟಶತ್ರುಸೈನ್ಯವನ್ನುಅನಾಯಾಸವಾಗಿಜಯಿಸಬಹುದು.

—-

ಮೌಲ್ಯಭೃತಕಃಶ್ರೇಣೀಮಿತ್ರಾಮಿತ್ರಾಟವಿಕೇಷು[9]ಪೂರ್ವಂಪೂರ್ವಬಲಂಭರ್ತುಸನ್ನಾಹಯಿತುಂಯತತೇ || ೧೪ || ೮೦೧ ||

ಅರ್ಥ : ಮೌಲ = ಪಳೆಯರುಂ, ಭೃತಕಃ = ಪೊರೆದಾಳ್ಗಳುಂ, ಶ್ರೇಣಿ = ಸಾಲಿಗನಾವಿದಾಗರಪಟ್ಟಗಾಱಂಮೊದಲಾಗೊಡೆಯಸಮಯಿಗಳುಂ, ಮಿತ್ರ = ಕೆಳೆಯರುಂ, ಅಮಿತ್ರಾ = ಕೂಡಿದಕಂಟಕರುಂ, ಅಟವಿಕೇಷು = ಬೇಡರ್ಮೊದಲಾಗೊಡೆಯವರೊಳ್, ಪೂರ್ವಂ = ಪೂರ್ವಬಲಂ = ಮುನ್ನಿನಮುನ್ನಿನಬಲಮುಂ, ಭರ್ತುಂ = ಒಡೆಯನಪೊರೆಯಲ್ಕಂ, ಸನ್ನಾಹಯಿತುಂ = ಸಮೀಪಂ (ಹತ್ತಿರೆ) ಮಾಡಲ್ಕಂ, ಯತತೇ = ಯತ್ನಂಗೆಯ್ಗೆ || ಪಳೆಯರ್ಮೊದಲಾಗೊಡೆಯವರ್ಗಳಂಮುನ್ನಿನವಂಪೊರೆದುಸಮೀಪದೊಳಂದೂರದೊಳಮಿರಿಸುದೆಂಬುದುತಾತ್ಪರ್ಯಂ || ಆಬಲಮಂಪೇಳ್ದುಪದಾತಿಯೊಳೇಳನೆಯಬಲಮಂಪೇಳ್ವುದುತ್ತರವಾಕ್ಯಂ :

[10]ಅನ್ಯತ್ಸಪ್ತಮಮೌತ್ಸಾಹಿಕಂಬಲಂ || ೧೫ || ೮೦೨ ||

ಅರ್ಥ : ಅನ್ಯತ್ = ಮತ್ತೊಂದು, ಸಪ್ತುಮಂ = ಏಳನೆಯದು, ಔತ್ಯಾಹಿಕಬಲಂ = ಬಹಳವಾಗಿಕೂಡಿದಉತ್ಪಾಹಬಲವು || ಸೂಱಿಗಿಂತುನೆಱೆವಬಲಂಬಲಮಂಪೇಳ್ವುದುತ್ತರವಾಕ್ಯಂ :

ಯದ್ವಿಜಿರ್ಗಿಷುರ್ವಿಜಯಯಾತ್ರಾಕಾಲೇಪರರಾಷ್ಟ್ರವಿಲೋಪನಾರ್ಥಮೇವಮಿಲತಿ || ೧೬ || ೮೦೩ ||

ಅರ್ಥ : ಯತ್ = ಆವುದೊಂದುಕಾರಣಮಾಗಿ, ವಿಜಿಗೀಷುಃ = ಪರರಾಷ್ಟ್ರಮಂಗೆಲಲ್ವೇಳ್ಪನ, ವಿಜಯಯಾತ್ರಾಕಾಲೇ = ದಿಗ್ವಿಜಯಪ್ರಯಾಣಕಾಲದಲ್ಲಿ, ಪರರಾಷ್ಟ್ರವಿಲೋಪನಾರ್ಥಮೇವ = ಪೆಱರನಾಡಇಱಿಯಲ್ಕೆ, ಮಿಲತಿ = ಕೂಡುದು || ಕಾಲಾಳ್ಗಳಿಲ್ಲದೆಸಹೃದಯತ್ವಂಕಾರ್ಯಂತೀರದೆಂಬುದುತಾತ್ಪರ್ಯಂ || ಬಲದಗುಣಮಂಪೇಳ್ವುದುತ್ತರವಾಕ್ಯಂ :

—-

೧೪. ಮೌಲಭೃತಕ, ಶ್ರೇಣಿ, ಮಿತ್ರ, ಅಮಿತ್ರ, ಶತ್ರು, ಆಟವಿಕಸೈನ್ಯಗಳಲ್ಲಿಕ್ರಮವಾಗಿಮೊದಮೊದಲಿನವುರಾಜನಸಮೀಪವಿರಲುಯತ್ನಿಸಬೇಕು.

೧೫. ಏಳನೆಯದಾದಮತ್ತೊಂದುಬಲವುಉತ್ಸಾಹಬಲವು.

೧೬. ಜಯಗಳಿಸುವಇಚ್ಛೆಯುಳ್ಳರಾಜನುವಿಜಯಯಾತ್ರಾಕಾಲದಲ್ಲಿಪರರಾಷ್ಟ್ರವನ್ನುಕದಡುವದಕ್ಕಾಗಿಮಾತ್ರಉತ್ಸಾಹಬಲವನ್ನುಉಪಯೋಗಿಸುತ್ತಾನೆ.

—-

ಸಹೃದಯತ್ವಂಕ್ಷತ್ರಸಾರತ್ವಮಸ್ತ್ರಜ್ಞತ್ವಂಸ್ವಭಾವಶೂರತ್ವಮನುರಕ್ತತ್ವಂಚೇತಿಬಲಸ್ಯ[11]ಗುಣಾಃ || ೧೭ || ೮೦೪ ||

ಅರ್ಥ : ಸಹೃದಯತ್ವಂ = ಒಳ್ಳಿಹಚಿತ್ತಮನುಳ್ಳತನವು, ಕ್ಷತ್ರಸಾರತ್ವಂ = ಪಲಂಬರ್ಕ್ಷತ್ರಿಯರಂಸಾರಮಾಗಿರ್ಪಸ್ವರೂಪಮುಂ, ಅಸ್ತ್ರಜ್ಞತ್ವಂ = ಆಯುಧಂಗಳೊಳಪ್ಪಭ್ಯಾಸಮುಂ, ಸ್ವಾಭಾವಶೂರತ್ವಂ = ನಿಚ್ಚಟಗಲಿತನಮುಂ, ಅನುರಕ್ರತ್ವಂಚೇತಿ = ಸ್ವಾಮಿಯೊಳಪ್ಪಮೋಹಮುಮೆಂದಿಂತು, ಬಲಸ್ಯ = ಬಲದ, ಗುಣಾಃ = ಗುಣಂಗಳ್ || ಈಗುಣಮಿಲ್ಲದುದುಬಲಮಲ್ಲೆಂಬುದುತಾತ್ಪರ್ಯಂ || ಬಲಮಂಸಂವರಿಸುವತೆಱನಂಪೇಳ್ವುದುತ್ತರವಾಕ್ಯಂ :

ಮೂಲಬಲಾವಿರೋಧೇನಅನ್ಯದ್ಬಲಮರ್ಥಮಾನಾಭ್ಯಾಮನುಗೃಹ್ಣೀಯಾತ್ || ೧೮ || ೮೦೫ ||

ಅರ್ಥ : ಮೂಲಬಲಾವಿರೋಧೇನ = ಪಳೆಯರೊಡಂಬಡಿಕೆಯುಂ, ಅನ್ಯದ್ಬಲಂ = ಉಳಿದಬಲಮುಂ, ಅರ್ಥಮಾನಾಭ್ಯಾಂ = ಅರ್ಥಮುಂ, ಸನ್ಮಾನಮುಮೆಂಬಿವಱಿಂ, ಅನುಗೃಹನ್‌ಈಯಾತ್ = ಸಂತಸಂಬಡಿಸುಗೆ || ಪಳೆಯರನುದಾಸೀನಂಗೆಯ್ಯಲಾಗದೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ಮೌಲಾಹ್ಯಾಪದ್ಯನುಗಚ್ಛಂತ್ಯಪರಾದ್ಧಾ[12]ಅಪಿನಾಭಿದೃಹ್ಯಾಭಿದ್ಯಂತಿಭವಂತಿಪರೇಷಾಮಭೇದ್ಯಾಃ || ೧೯ || ೮೦೬ ||

ಅರ್ಥ : ಮೌಲಾಃ = ಪಳೆಯರ್, ಹಿ = ಅವುದಾದರೊಂದುಕಾರಣದಿಂ, ಆಪದಿ = ಕೇಡಿನೊಳ್, ಅನುಗಚ್ಛಂತಿ = ಒಡನೆಪೋಪರ್, ಅಪರಾದ್ಧಾಅಪಿ = ಮುಳಿದರಾಘಿಯುಂ (ನೊಂದವರಾದರೂ) ನಾಭಿದೃಹ್ಯಾಭಿದ್ಯಂತಿ = ದ್ಯೋಹಮಂಮಾಳ್ಪರಲ್ಲಂ, ಪರೇಷಾಂ = ಪೆಱರ್ಗೆ, ಅಭೇದ್ಯಾತ್ಚ = ಭೇದಿಸಲ್ಪಡದವರು, ಭವಂತಿ = ಅಪ್ಪರು || ಪಳೆಯರಂಪೊರೆವುದೆಂಬುದುತಾತ್ಪರ್ಯಂ || ಪರಿಗ್ರಮಂಮನ್ನಿಪುದುಲೇಸೆಂಬುದುತ್ತರವಾಕ್ಯಂ :

—-

೧೭. ಸಹೃದಯತ್ವ, ಕ್ಷಾತ್ರಗುಣ, ಶಸ್ತ್ರಜ್ಞತೆ, ಸಹಜಶೂರತ್ವಇವುಸೈನ್ಯದಗುಣಗಳು.

೧೮. ಮೂಲಬಲಕ್ಕೆವಿರೋಧವಾಗದಂತೆಉಳಿದಬಲಗಳನ್ನುಹಣಮತ್ತುಸನ್ಮಾನಗಳಿಂದತೃಪ್ತಪಡಿಸಬೇಕು.

೧೯. ಮೂಲಬಲವುಆಪತ್ಸಮಯಗಳಲ್ಲಿಅನುಸರಿಸಿಬರುವದು. ಒಂದುವೇಳೆಶಿಕ್ಷಿಸಲ್ಪಟ್ಟರೂದ್ರೋಹವನ್ನುಬಗೆಯರು. ಶತ್ರುಗಳುಯಾರೂಬಲವನ್ನುಭೇದಿಸಲಾರರು.

—-

ತಥಾನಾರ್ಥಃಪುರುಷಾನ್ಯೋಧಯತಿಯಥಾಪ್ರಭುಸನ್ಮಾನಃ[13] || ೨೦ || ೮೦೭ ||

ಅರ್ಥ : ಯಥಾ = ಎಂತು, ಪ್ರಭುಸನ್ಮಾನಃ = ಸ್ವಾಮಿಯಮನ್ನಣೆ, ಪುರುಷಾನ್ = ಪುರುಷರಂ, ಯೋಧಯತಿ = ಕಾದಿಸುಗುಂ, ತಥಾ = ಅಂತೆ, ಅರ್ಥ = ಅರ್ಥಂ, ನ = ಕಾದಿಸುವುದಲ್ಲ || ಮನ್ನಣೆಯಿಲ್ಲದಾಳಿಱಿಯದೆಂಬುದುತಾತ್ಪರ್ಯಂ || ಪರಿಗ್ರಹದಬೇಸರಿಂಗೆಕಾರಣಂಪೇಳ್ವುದುತ್ತರವಾಕ್ಯಂ :

ಸ್ವಯಮನವೇಕ್ಷಣಂದೇಯಾಂಶಹರಣಂಕಾಲಯಾಪನಂವ್ಯಸನಾಪ್ರತೀಕಾರೋವಿಶೇಷವಿಧಾವಸಂಭಾವನಂತಂತ್ರಸ್ಯವಿರಕ್ತಿಕಾರಣಾನಿ || ೨೧ || ೮೦೮ ||

ಅರ್ಥ : ಸ್ವಯಂ = ತಾಂ, ಅನವೇಕ್ಷಣಂ = ನೋಡದುದುಂ, ದೇಯಾಂಶಹರಣಂ = ಜೀವಿತದೊಳೇನಾನುಮಂಪಿಡಿಯುದಂ, ಕಾಲಯಾಪನಂ = ದಿವಸಂಗಳಂ (ಕುಡದೆಕಾಲಮಂನೂಕುಹವು) ಪೆರ್ಚಿಸುವುದುಂ, ವ್ಯಸನಾಪ್ರತೀಕಾರಃ = ಎಡಱಿಂಗಾಗದುದುಂ (ದುಃಖಕ್ಕೆಪ್ರತೀಕಾರಮಂಮಾಡದಿರುಹವು) ವಿಶೇಷವಿಧೌ = ವಿಶೇಷಕಾರ್ಯಂಗಳೊಳ್, ಅಸಂಭಾವನಂಚ = ಮನ್ನಿಸದುಂದುಂ, ತಂತ್ರಸ್ಯ = ತಂತ್ರದ, ವಿರಕ್ತಿಕಾರಣಾನಿ = ಬೇಸರಿಂಗೆ (ಸ್ನೇಹಮಿಲ್ಲದಕ್ಕೆ) ಕಾರಣಂಗಳ್ || ತಂತ್ರಕ್ಕೆಬೇಸಱುಗಳನಾಗಲೀಯದಿರಲಾಗದೆಂಬುದುತ್ತರವಾಕ್ಯಂ :

ಸ್ವಾವೇಕ್ಷಣೀಯಂಪರೈರವೇಕ್ಷಯತ್[14]ಅರ್ಥತಂತ್ರಾಭ್ಯಾಂಹೀಯತೇ || ೨೨ || ೮೦೯ ||

ಅರ್ಥ : ಸ್ವಾವೇಕ್ಷಣೀಯಂ = ತನ್ನಿಂನೋಡಲ್ಬೇಕಾದುದನು, ಪರೈಃ = ಪೆಱರಿಂದ, ಅವೇಕ್ಷಯನ್ = ನೋಡಿಸುವವನು, ಅರ್ಥತಂತ್ರಾಭ್ಯಾಂ = ಅರ್ಥದಿಂದವೂ, ಪರಿವಾರದಿಂದವೂ, ಹೀಯತೇ = ಕುಂದುಗುಂ (ಕಿಡುವನು) || ತಾನಾಯುವೇಳ್ಕುಮೆಂಬುದುತಾತ್ಪರ್ಯಂ || ಇನ್ನುತ್ತಮನಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

೨೦. ಪ್ರಭುಗಳುಮಾಡುವಸನ್ಮಾನವುಸೈನಿಕರನ್ನುಯುದ್ಧಮಾಡಲುಪ್ರಚೋಧಿಸುವಂತೆಧನವುಪ್ರಚೋಧಿಸಲಾರದು.

೨೧. ರಾಜನುತಾನೇತನ್ನಸೈನ್ಯವನ್ನುನೋಡಿಕೊಳ್ಳರಿದುವದು, ಸೈನಿಕರಿಗೆನ್ಯಾಯವಾಗಿಕೊಡಬೇಕಾದುದನ್ನುಕಡಿಮೆಮಾಡುವದು, ಸೈನಿಕರಕೊರತೆಗಳನ್ನುಪರಿಹರಿಸುವಲ್ಲಿಕಾಲಹರಣ, ಅವರಕಷ್ಟಕಾರ್ಪಣ್ಯಗಳಿಗೆಪ್ರತಿಕ್ರಿಯಿಸದಿರುವದು, ಯಾರಾದರೂಒಂದುಮಹತ್ಕಾರ್ಯವನ್ನುಸಾಧಿಸಿದರೆಅಂಥವರನ್ನುಗೌರವಿಸದಿರುವದು, ಇವುಸೈನಿಕರಲ್ಲಿನಿರಾಸಕ್ತಿಯನ್ನುಂಟುಮಾಡುವಕಾರಣಗಳು.

೨೨. ತಾನೇನೋಡಬೇಕಾದ್ದನ್ನುಬೇರೆಯವರಿಂದನೋಡಿಸುವರಾಜನುಅರ್ಥಹೀನನೂಬಲಹೀನನೂಆಗುತ್ತಾನೆ.

—-

ಆಶ್ರಿತಭರಣೇಸ್ವಾಮಿಸೇವಾಯಾಂಧರ್ಮಾನುಷ್ಠಾನೇಪುತ್ರೋತ್ಪಾದನೇಖಲುಸಂತಿಪ್ರತಿಹಸ್ತಾಃ || ೨೩ || ೮೧೦ ||

ಅರ್ಥ : ಆಶ್ರಿತಭರಣೇ = ಪೊರ್ದಿದರಂರಕ್ಷಿಸುವಲ್ಲಿಯುಂ, ಸ್ವಾಮಿಸೇವಾಯಾಂ = ಆಳ್ದನನೊಲಗಿಸುವಲ್ಲಿಯುಂ, ಧರ್ಮಾನುಷ್ಠಾನೇ = ಧರ್ಮಮಂನೆಗಳ್ವಲ್ಲಿಯುಂ, ಪುತ್ರೋತ್ಪಾದನೇಚ = ಮಕ್ಕಳಂಪುಟ್ಟಿಸುವಲ್ಲಿಯುಂ, ಪ್ರತಿಹಸ್ತಾಃ = ಪ್ರತಿಹಸ್ತರು[15], ಬಲು = ನೆಟ್ಟನೆ, ನಸಂತಿ = ಇಲ್ಲ (ಮಾಡಲಾಗದು) || ಆಶ್ರಿತರ್ಗಿಂತುಕುಡುವುದೆಂಬುದುತ್ತರವಾಕ್ಯಂ :

ತಾವದೇವದೇಯಂಯಾವದಾಶ್ರಿತಾಃಸಂಪೂರ್ಣತಾಮವಾಪ್ನುವಂತಿ೨೪ || ೮೧೧ ||

ಅರ್ಥ : ಯಾವತ್ = ಎನಿತರಿಂ, ಆಶ್ರಿತಾಃ = ಪೊರ್ದಿದವರು, ಸಂಪೂರ್ಣತಾಂ = ನೆಱವಿಯಂ, ಅವಾಪ್ನುವಂತಿ = ಎಯ್ದುವರು, ತಾವದೇವ = ಅನಿತೇ, ದೇಯಂ = ಕುಡಲ್ಪಡುವುದು || ಆಶ್ರಿತರ್ಗೆನೆಱೆವಂತುಕುಡುವುದೆಂಬುದುತಾತ್ಪರ್ಯಂ || ಪಿರಿದುಬೀಯಮಾಡದಿರ್ದೊಡೆದೋಷಮಂಪೇಳ್ವುದುತ್ತರವಾಕ್ಯಂ :

ಹಿಸ್ವದ್ರವ್ಯಮವ್ಯಯಮಾನೋರಾಜಾದಂಡನೀಯಃ || ೨೫ || ೮೧೨ ||

ಅರ್ಥ : ಸ್ವದ್ರವ್ಯಂ = ತನ್ನರ್ಥಮಂ, ಅವ್ಯಯಮಾನಃ = ಬೀಯಂಗೈಯದ, ರಾಜಾ = ಅರಸಂ, ನಹಿದಂಡನೀಯಃ = ನಿಗ್ರಹಿಸೆ (ದಂಡೆತ್ತಲುಶಕ್ತನಲ್ಲ) ಪಡುವನಲ್ಲ || ತಕ್ಕುದನಱಿದುಕುಡುವುದೆಂಬುದುತಾತ್ಪರ್ಯಂ || ಮಱಸಿಬೀಯಂಗೈಯ್ಯುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಕೋನಾಮಸಚೇತನಃಸ್ವಗುಡಂಚೌರ್ಯೇಣಖಾದೇತ್ || ೨೬ || ೮೧೩ ||

ಅರ್ಥ : ಸಚೇತನಃ = ಬುದ್ಧಿವಂತಂ, ಸ್ವಗುಡಂ = ತನ್ನಬೆಲ್ಲಮಂ, ಕೋನಾಮ = ಆವ, ಚೌರ್ಯೇಣ = ಕಳವಿನಿಂ, ಖಾದೇತ್ = ತಿಂಗುಂ || ಅವಸರಮನಱಿದು[16]ಕುಡುವುದಕ್ಕೆದೋಷಮಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

೨೩. ಆಶ್ರಿತರರಕ್ಚಣೆ, ಸ್ವಾಮಿಸೇವೆ, ಧರ್ಮಕಾರ್ಯಾಚರಣೆ, ಮಕ್ಕಳನ್ನುಹಡೆಯುವುದುಇವುಗಳಲ್ಲಿಪರರಪಾತ್ರವಿರುವುದಿಲ್ಲ.

೨೪. ಎಷ್ಟನ್ನುಕೊಟ್ಟರೆಆಶ್ರಿತರುಸಮೃದ್ಧಿಯನ್ನುಹೊಂದುವರೋಅಷ್ಟನ್ನುಮಾತ್ರಕೊಡಬೇಕು.

೨೫. ತನ್ನದ್ರವ್ಯವನ್ನುವ್ಯಯಮಾಡದಅರಸನುದಂಡನೀಯನಲ್ಲ.

೨೬. ತಿಳುವಳಿಕೆಇರುವವನುಯಾರಾದರೂತನ್ನಬೆಲ್ಲವನ್ನುತಾನೇಕದ್ದುತಿನ್ನುವನೇ?

—-

ಕಿಂತಾನಜನದೇನ, ಯಃಕಾಲೇವರ್ಷತಿ || ೨೭ || ೮೧೪ ||

ಅರ್ಥ : ತೇನಜಲದೇನ = ಆಮುಗಿಲಿನಿಂ, ಕಿಂ = ಏಂ, ಯಃ = ಆವುದೊಂದು, ಕಾಲೇ = ಕಾಲದೊಳ್, ನವರ್ಷತಿ = ಮಳೆಕಱೆಯದು || ಹದನಱಿದುಕುಡುವುದೆಂಬುದುತಾತ್ಪರ್ಯಂ || ಇಂತಪ್ಪಂಮಾಡದನಾಳ್ದನಲ್ಲೆಂಬುದುತ್ತರವಾಕ್ಯಂ :

ಕಿಂಸ್ವಾಮೀಯಃಆಶ್ರಿತೇಷುವ್ಯಸನಂಪರಿವಿಧತ್ತೇ || ೨೮ || ೮೧೫ ||

ಅರ್ಥ : ಆಶ್ರಿತೇಷು = ಪೊರ್ದಿದರಲ್ಲಿ, ಯಃವ್ಯಸನಂ = ಆವನುವ್ಯಸನಮಂ (ದುಃಖವನು), ನಪರಿಚಿಧತ್ತೇ = ಮಾಣಿಪನಲ್ಲ, ಸಃ = ಆತಂ, ಕಿಂ = ಏನು, ಸ್ವಾಮೀ = ಆಳ್ದನೇ || ಪೊರ್ದಿದನೆಡಱಂಮಾಳಿಸಲ್ವೇಳ್ಕುಮೆಂಬುದುತಾತ್ಪರ್ಯಂ || ಬಂಟರೊಳಿಂತಪ್ಪವಂಗಪಕಾರಂಗೆಯ್ಯರೆಂಬುದುತ್ತರವಾಕ್ಯಂ :

ಅವಿಶೇಷಜ್ಞೇರಾಜ್ಞಿಕೋನಾಮಾರ್ಥ[17]ಪ್ರಾಣವ್ಯಯೇ[18]ನೋತ್ಸಹತೇ || ೨೯ || ೮೧೬ ||

ಅರ್ಥ : ಅವಿಶೇಷಜ್ಞೇ = ವಿಶೇಷಮನಱಿಯದ, ರಾಜ್ಞಿ = ಅರಸನಲ್ಲಿಯ, ಅರ್ಥಃ = ಅರ್ಥದ, ಪ್ರಾಣವ್ಯಯೇ = ಪ್ರಾಣದಕೇಡಿನಲ್ಲಿ, ಕೋನಾಮ = ಆವಂ, ನೋತ್ಸಹತೇ = ಉತ್ಸಾಹಮಂಮಾಡನು ||….[19]ಗೇನುಮನಾದೊಡಂಮಾಳ್ವರೆಂಬುದುತಾತ್ಪರ್ಯಂ ||

ಇತಿಬಲಸಮುದ್ದೇಶಃ || ೨೧ ||[20]

ಸಮುದ್ದೇಶದವಾಕ್ಯಗಳು || ೨೯ || ಒಟ್ಟು || ೮೧೬ ||

—-

೨೭. ಸಕಾಲದಲ್ಲಿಮಳೆಗರೆಯದಮೋಡದಿಂದಪ್ರಯೋಜನವೇನು?

೨೮. ಆಶ್ರಿತರಕಷ್ಟಗಳನ್ನುನಿವಾರಿಸದವನುಎಂತಹಸ್ವಾಮಿ?

೨೯. ತಪ್ಪುಒಪ್ಪುಗಳನ್ನುತಿಳಿಯಲಾರದರಾಜನಿದ್ದಲ್ಲಿಯಾರುತಾನೇಆತನಧನವನ್ನಾಗಲಿಪ್ರಾಣವನ್ನಾಗಲಿತೆಗೆದುಕೊಳ್ಳಲುಉತ್ಸಾಹಿಗಳಾಗಿರುವದಿಲ್ಲ?

—-

 

[1]ಚೌ. ನತಥಾನ್ಯದ್ಬಲಂಎಂಬಪದಗಳಿಲ್ಲ.

[2]ಆನೆಯುಎಂಟುಆಯುಧಗಳನ್ನುಹೊಂದಿದೆಎಂದುಬಣ್ಣಿಸಲ್ಪಟ್ಟಿದೆ. ಅವುನಾಲ್ಕುಕಾಲುಗಳು, ಎರಡುಕೋರೆಗಳು, ಒಂದುಸೊಂಡಿಲುಮತ್ತುಒಂದುಬಾಲ. ಈಎಲ್ಲವುಗಳನ್ನುಅದುಆಯುಧಗಳಂತೆಬಳಸಬಲ್ಲದುಎಂದುಅರ್ಥ.

[3]ಈಮತ್ತುಮುಂದಿನವಾಕ್ಯವುಮೈ., ಚೌ. ಗಳಲ್ಲಿಒಂದೇವಾಕ್ಯವಾಗಿದೆ.

[4]ಚೌ. ತದುಚಿತಾಚಸಾಮಗ್ರೀಸಂಪತ್ತಿಃಎಂಬಹೆಚ್ಚಿನವಾಕ್ಯವಿದೆ.

[5]ನಡೆಗೋಟೆಮಲ್ಲಎಂಬಬಿರುದನ್ನುಗಮನಿಸುವುದು.

[6]ಮೈ. ಚೌ. ಪ್ರಸೀದಂತಿಶ್ರೀಯಃ.

[7]ಮೈ. ಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ. ಚೌ. ಈಮತ್ತುಮುಂದಿನಎರಡುವಾಕ್ಯಗಳುಒಂದರಲ್ಲೇಅಡಕವಾಗಿವೆ.

[8] ‘ವಿದೋ’ ಎಂದುಓದಬೇಕು.

[9]ಅರ್ಥಶಾಸ್ತ್ರ೧೧. ೨ನೋಡಿರಿ.

[10]ಮೈ. ಚೌ. ಈಮತ್ತುಮುಂದಿನವಾಕ್ಯವುಒಂದೇವಾಕ್ಯದಲ್ಲಿಅಡಕವಾಗಿದೆ.

[11]ಚೌ. ದಲ್ಲಿಪಾಠಾಂತರವಿದ್ದುಈಗುಣಗಳುಹಿಂದಿನವಾಕ್ಯದಲ್ಲಿಹೇಳಿದಔತ್ಸಾಹಿಕಬಲದಗುಣಗಳೆಂದುಹೇಳಲಾಗಿದೆ. ಸಂದರ್ಭಕ್ಕನುಗುಣವಾಗಿಇದುಹೆಚ್ಚುಉಚಿತವೆನಿಸುತ್ತದೆ. ಈಏಳನೆಯಔತ್ಸಾಹಿಕಬಲವುಸೋಮದೇವನಕಲ್ಪನೆಎಂದುತೋರುತ್ತದೆ.

[12]ಮೈ. ದಂಡಿತಮಪಿನದ್ರುಹ್ಯತಿಚೌ. ದಂಡಿತಮಪಿನದೃಷ್ಯತಿ.

[13]ಚೌ. ಸ್ವಾಮಿಸಮ್ಮಾನಃ

[14]ಚೌ. ಸೈನ್ಯಂಪರೈರವೇಕ್ಷಯನ್ನರ್ಥತಂತ್ರಾಭ್ಯಾಂಪರಿಹೀಯತೇ.

[15]ಪ್ರತಿಹಸ್ತ= ಪ್ರತಿನಿಧೀ, ಒಬ್ಬರಪರವಾಗಿಇನ್ನೊಬ್ಬರುಮಾಡುವುದು. ಈವಾಕ್ಯದಲ್ಲಿಹೇಳಿದಕೆಲಸಗಳನ್ನುತಾನೇಸ್ವತಃಮಾಡಬೇಕಲ್ಲದೆತನ್ನಪರವಾಗಿಇನ್ನೊಬ್ಬರುಮಾಡಲಾಗದುಎಂಬುದುತಾತ್ಪರ್ಯ.

[16]ಅವಸರಮನರಿಯದೆಎಂದಿರಬೇಕು.

[17]ಚೌ. ಕೋನಾಮತಸ್ಯಾರ್ಥೆ.

[18]ಇಲ್ಲಿಅರ್ಥವ್ಯತ್ಯಾಸವಿದ್ದಂತೆತೋರುತ್ತದೆ. ಪ್ರಾಣವ್ಯಯೇನಉತ್ಸಹತೇಎಂದಿರಬೇಕು. ಅಂದರೆ, ವಿಶೇಷಜ್ಞನಲ್ಲದಅರಸನಿಗಾಗಿಅರ್ಥಪ್ರಾಣಗಳನ್ನುವ್ಯಯಿಸಲುಯಾರುಉತ್ಸಾಹಿತರಾಗುತ್ತಾರೆಎಂದುಅರ್ಥವಾಗುತ್ತದೆ. ಆದರೆ, ಟೀಕಾಕಾರನುನಉತ್ಸಹತೇ, ಉತ್ಸಾಹಮಾಡನುಎಂದುಗ್ರಹಿಸಿದ್ದಾನೆ.

[19]ಇಲ್ಲಿಕೆಲವುಅಕ್ಷರಗಳುನಶಿಸಿಹೋಗಿವೆ.

[20]ಇದು೨೨ಎಂದಿರಬೇಕು.