ಸಪ್ತಾಂಗಕ್ಕಾದ್ಯಮಪ್ಪರಾಜಲಕ್ಷಣಮಂಪೇಳ್ವುದುತ್ತರವಾಕ್ಯಂ :

ರಾಜ್ಞಿರಕ್ಷಿತೇಸರ್ವಂರಕ್ಷಿತಂಭವತ್ಯತಃಸ್ವೇಭ್ಯಃಪರೇಭ್ಯಶ್ಚನಿತ್ಯಂರಾಜಾರಕ್ಷಿತವ್ಯಃ || || ೮೨೭ ||

ಅರ್ಥ : ರಾಜ್ಞಿ = ಅರಸು, ರಕ್ಷಿತೇ = ರಕ್ಷಿಲ್ಪಟ್ಟನಾದೊಡೆ, ಸರ್ವಂ = ಎಲ್ಲಂ, ರಕ್ಷಿತಂಭವತಿ = ರಕ್ಷಿತಂಭವತಿ = ರಕ್ಷಿಸಲ್ಪಟ್ಟದಕ್ಕುಂ, ಅತಃ = ಅದುಕಾರಣದಿಂ, ಸ್ವೇಭ್ಯಃ = ತನ್ನವರ್ಗಳತ್ತಣಿಂದೆಯುಂ, ಪರೇಭ್ಯಶ್ಚ = ಪೆರರಿಂದಮುಂ, ನಿತ್ಯಂ = ನಿಚ್ಚಂ, ರಾಜಾ = ಅರಸು, ರಕ್ಷಿತವ್ಯಃ = ರಕ್ಷಿಸಲ್ಪಡುವಂ || ಅರಸಿಲ್ಲದೇನುಮಿಲ್ಲೆಂಬುದುತಾತ್ಪರ್ಯಂ || ಈಯರ್ಥಮಂಪೆಱರುಂಪೇಳ್ವರೆಂಬುದುತ್ತರವಾಕ್ಯಂ :

[1]ಅತೇವೋಕ್ತಂನಯವಿದ್ಭಿಃಪಿತೃಪೈತಾಮಹಮಹಾಸಂಬಂಧಾನುಬಂಧಂಶಿಕ್ಷಿತಮನುರಕ್ತಂಕೃತಕರ್ಮಾಣಂಜನಮಾಸನ್ನಂಕುರ್ವೀತ || || ೮೨೮ ||

ಅರ್ಥ : ಅತಏವ = ಇದುಕಾರಣಮಾಗಿ, ನಯವಿದ್ಭಿಃ = ನೀತಿಯಂಬಲ್ಲವರಿಂ, ಉಕ್ತಂ = ಕೇಳಲ್ಪಟ್ಟುದು, ಪಿತೃಪೈತಾಮಹ = ತಂದೆಯುಂ, ಮುತ್ತಯ್ಯನಿಂಬಂದ = ಸಂಬಂಧಾನುಬಂಧಂ, ಪಿರಿದಪ್ಪಪರ್ದುಗೆಯತೊಡರ್ಪನುಳ್ಳನಂ, ಶಿಕ್ಷಿತಂ = ಶಿಕ್ಷಿಸಲ್ಪಟ್ಟನಂ, ಅನುರುಕ್ತಂ = ಮೋಹಮನುಳ್ಳ, ಕೃರ್ತರ್ಮಾಣಂಚ = ಪಲವರೊಳಭ್ಯಾಸನನುಳ್ಳನಂ, ಜನಂಮನುಷ್ಯನಂ, ಆಸನ್ನಂಕುರ್ವೀತ = ಸಮೀಪದೊಳಿಱಿಸುಗೆ || ಇಂತಪ್ಪನನಿರಿಸಲಾಗದೆಂಬುದುತ್ತರವಾಕ್ಯಂ :

ನಾನ್ಯದೇಶೀಯಮಕೃತಾರ್ಥಮಾನಂಸ್ವದೇಶೀಯಂವಾಪಕೃತ್ಯೋಪಗೃಹೀತಂಆಸನ್ನಂಕುರ್ವೀತ || || ೮೨೯ ||

ಅರ್ಥ : ಅನ್ಯದೇಶೀಯಂ = ಪಱದೇಶದಾತನುಮಂ, ಅಕೃತಾರ್ಥಮಾನಂ = ಅರ್ಥಮುಮನ್ನಣೆಯುಮೆಂಬಿವಂಪಡೆಯದನಂ, ಸ್ವದೇಶೀಯಂವಾ = ತನ್ನನಾಡಾತನಂಮೇಣ್, ಅಪಕೃತ್ಯ = ಅಪಕಾರಂ (ನೋಯಿಸಿ) ಮಾಡಿ, ಉಪಗೃಹೀತಮಿತಿ = ಮತ್ತೆಕೈಕೊಳ್ಳಲ್ಟಟ್ಟನಂ, ನಾಸನ್ನಂಕುರ್ವೀತ = ಅರಸನಸಮೀಪದೊಳಿರಿಸದಿರ್ಕೆ || ಅವರುಹಿತವರಲ್ಲೆಂಬುದುತಾತ್ಪರ್ಯಂ || ಇವರನಿರಿಸದುದಕ್ಕೆಕಾರಣಮಂಪೇಳ್ವುದುದುತ್ತರವಾಕ್ಯಂ :

—-

. ರಾಜನನ್ನುರಕ್ಷಿಸಿದ್ದಾದರೆಎಲ್ಲವನ್ನೂರಕ್ಷಿಸಿಕೊಂಡಂತೆ; ಆದ್ದರಿಂದತನ್ನವರಿಂದಲೂಪರರಿಂದಲೂರಾಜನನ್ನುಸರ್ವದಾರಕ್ಷಿಸಬೇಕು.

. ಆದ್ದರಿಂದಲೇನೀತಿವಿದರುಹೀಗೆಹೇಳುತ್ತಾರೆ : ತಂದೆತಾತಂದಿರಕಾಲದಿಂದಲೂನಿಕಟಸಂಬಂಧವುಳ್ಳ, ಸುಶಿಕ್ಷಿತನಾದ, ಅನುರಕ್ತನಾದ, ಕರ್ತವ್ಯನಿರ್ವಹಣೆಯಲ್ಲಿಅನುಭವವುಳ್ಳ, ವ್ಯಕ್ತಿಯೊಬ್ಬನನ್ನುರಾಜನುಸಮೀಪವರ್ತಿಯಾಗಿಇಟ್ಟುಕೊಳ್ಳಬೇಕು.

. ಪಱದೇಶಿಯನನ್ನಾಗಲಿ, ಅರ್ಥವನ್ನಾಗಲಿ, ಮನ್ನಣೆಯನ್ನಾಗಲಿಪಡೆಯದಿರುವಸ್ವದೇಶಿಯನನ್ನಾಗಲಿಯಾವುದೋಅಕೃತ್ಯಕ್ಕಾಗಿಒಮ್ಮೆನಿಗ್ರಹಿಸಲ್ಪಟ್ಟುಮತ್ತೆಸ್ವೀಕರಿಸಲ್ಪಟ್ಟವನನ್ನಾಗಲಿರಾಜನುಹತ್ತಿರಸೇರಿಸಿಕೊಳ್ಳಬಾರದು.

—-

[2]ಚಿತ್ತವಿಕೃತೇರ್ನಾಸ್ತ್ಯವಿಷಯಃ || ೪ || ೮೩೦ ||

ಅರ್ಥ: ಚಿತ್ತವಿಕೃತೇ = ಮನಂಬೆದರಿಪುದಕ್ಕೆ (ಚಿತ್ತವಿಕಾರಕ್ಕೆ), ಅವಿಷಯಃ = ಪೊಲನಲ್ಲದುದು, ನಾಸ್ತಿ = ಇಲ್ಲ || ಮನದೊಳ್ಮುನಿವನೇನಾನುಮನಾದೊಡಂಮಾಳ್ಪನೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ದುದುತ್ತರವಾಕ್ಯಂ :

[3]ಕಿಂನಭವತಿಮಾತಾಪಿರಾಕ್ಷಸೀ || ೫ || ೮೩೧ ||

ಅರ್ಥ : ಮಾತಾಪಿ = ತಾಯುಂ, ರಾಕ್ಷಸೀ = ರಾಕ್ಷಸಿಯುಂ, ಕಿಂನಭವತಿ = ಏನಾಗಳೇಂ || ಅರಸಿಲ್ಲದೆರ್ದೊಡೆದೋಷಮಂಪೇಳ್ದುದುತ್ತರವಾಕ್ಯಂ :

[4]ಗತಾಯುಷಿಸಕಲಾಂಗೇಪಿದೇಹಿನಿಕಿಂಕರೋತಿಧನ್ವಂತರಿರಪಿವೈದ್ಯಃ || || ೮೩೨ ||

ಅರ್ಥ : ಸಕಲಾಂಗೇಪಿ = ಎಲ್ಲಾಅವಯವಂಗಳೊಳಂ, ಗತಾಯುಪಿ = ಆಯುಷ್ಯಮಿಲ್ಲದ, ದೇಹಿನಿ = ಪ್ರಾಣಿಯೊಳ್, ವೈದ್ಯಃ = ವೈದ್ಯಂ, ಧನ್ವಂತರಿರಪಿ = ಧನ್ವಂತರಿಯಾದೊಡಂ, ಕಿಂಕರೋತಿ = ಏನಂಮಾಳ್ಪಂ || ಅರಸಾಗವೇಳ್ಕುಮೆಂಬುದುತಾತ್ಪರ್ಯಂ || ಕರಂವೊರ್ದಿದವರತ್ತಣಿಂದಂ (ಇದುಅರ್ಧಕ್ಕೆನಿಂತಿದೆ).

ರಾಜ್ಞಸ್ತಾವದಾಸನ್ನಾಸ್ತ್ರೀಯಃಆಸನ್ನತರಾದಾಯಾದಾಆಸನ್ನತಮಾಶ್ಚಪುತ್ರಾಃತತೋರಾಜ್ಞಃಪ್ರಥಮಂಸ್ತ್ರೀಭ್ಯೋರಕ್ಷಣಂತತಃದಾಯಾದೇಭ್ಯಃಪುತ್ರೇಭ್ಯಃ || || ೮೩೩ ||

ಅರ್ಥ : ರಾಜ್ಞಃ = ಅರಸಂಗೆ, ತಾವತ್ = ಕ್ರಮದಿಂ, ಆಸನ್ನಾಃ = ಪೊರ್ದಿದರುಂ (ಮೊದಲಾಸನ್ನವರ್ತಿಗಳು), ಸ್ತ್ರೀಯಃ = ಸ್ತ್ರೀಯರು, ಆಸನ್ನತರಾಃ = ಅವರಿಂದಾಸನ್ನರು, ದಾಯಾದಾಃ = ದಾಯಾದರು, ಆಸನ್ನತಮಾಶ್ಚ = ಕರಂ = ಪೊರ್ದಿದರಂ (ಅವರನೋಡಲುಹಿರಿದುಆಸನ್ನರು), ಪುತ್ರಾಃ = ಮಕ್ಕಳುಂ, ತತ್ = ಅದುಕಾರಣದಿಂ, ರಾಜ್ಞಃ = ಅರಸಂಗೆ, ಪ್ರಥಮಂ = ಮೊದಲೊಳ್, ಸ್ತ್ರೀಭ್ಯಃ = ಸ್ತ್ರೀಯರತ್ತಣಿಂ, ತತಃ = ಅಲ್ಲಿಂಬಳಿಕ್ಕಂ, ದಾಯಾದೇಭ್ಯಃ = ದಾಯಾದ್ಯರತ್ತಣಿಂದ, ತತಃ = ಅನಂತರಂ, ಪುತ್ರೇಭ್ಯಃ = ಮಕ್ಕಳಿಂದಂ (ಮಕ್ಕಳತ್ತಣಿಂದವುಬಹಅಪಾಯಮಂರಕ್ಷಿಸುವುದು) ರಕ್ಷಣಂ = ಕಾಪುಮಾಡಲ್ಪಡುವುದು || ಮಗನುಂದಾಯಾದಿಗನುಂಪೆಂಡತಿಯಮೆಂದಿವರೊಳ್ಮೇಲೆಮೇಲೆಭಯಮುಮನವತ್ತರತ್ತಣಿಂತನಗೆಕಾಪುಮಂಪರಿವಿಡಿದುಮಾಳ್ಪುದೆಂಬುದುತಾತ್ಪರ್ಯಂ || ಸ್ತ್ರೀಯರಿಂದಮಸುಖಮೆಂಬುದುತ್ತರವಾಕ್ಯಂ :

[5]ಆಚಂಡಾಲಾದಾಚಕ್ರವರ್ತಿನಃಸರ್ವೋಪಿಸ್ತ್ರೀಸುಖಾಯಕ್ಲೇಶ್ಯಂತೇ || || ೮೩೪ ||

ಅರ್ಥ : ಆಚಂಡಾಲಾತ್ = ಕಡೆಪಟ್ಟಬಡವನಾದಿಯಾಗಿ, [6]ಆಚಕ್ರವರ್ತಿನಃ = ಚಕ್ರವರ್ತಿವರಮಪ್ಪ, ಸರ್ವೇಪಿ = ಎಲ್ಲರುಂ, ಸ್ತ್ರೀಸುಖಾಯ = ಸ್ತ್ರೀಯರೊಳ್ಸುಖಂಕಾರಣಮಾಗಿ, ಕ್ಲೇಶ್ಯಂತೇ = ಕ್ಲೇಶಂಬಡುವರ್ || ಸ್ತ್ರೀಯಿಲ್ಲದಂಗೆದೋಷಮಂಪೇಳ್ವುದುತ್ತರವಾಕ್ಯಂ :

ನಿವೃತ್ತಸ್ತ್ರೀಸಂಗತ್ಯಧನಸಂಗ್ರಹೋ[7]ಮೃತಮಂಡನಮಿವ || || ೮೩೫ ||

ಅರ್ಥ : ನಿವೃತ್ತಸ್ತ್ರೀಸಂಗಸ್ಯ = ಪರಿಗ್ರಹಮಿಲ್ಲದವನ, ಧನಸಂಗ್ರಹಃ = ಅರ್ಥೋಪಾರ್ಜನಂ, ಮೃತಮಂಡನಮಿವ = ಪೆಣದಸಿಂಗರದಂತೆ || ಗೃಹಸ್ಥಂಗೆಸ್ತ್ರೀಯಾಗವೇಳ್ಕುಮೆಂಬುದುತಾತ್ಪರ್ಯಂ || ಸ್ತ್ರೀಯರ್ಕಳಗುಣಮಂಪೇಳ್ವುದುತ್ತರವಾಕ್ಯ :

—-

. ಬುದ್ಧಿಭ್ರಮಣೆಯಾದವರುಮಾಡದಕೆಲಸವಿಲ್ಲ.

. ತಾಯಿಕರಾಕ್ಷಸಿಯಾಗುವದಿಲ್ಲವೆ?

. ಎಲ್ಲಾಅವಯವಗಳುಸುಸ್ಥಿತಿಯಲ್ಲಿದ್ದರೂ, ಆಯುಷ್ಯವುಮುಗಿದಿದ್ದರೆರೋಗಿಗೆವೈದ್ಯನುಸಾಕ್ಷಾತ್ಧನ್ವಂತರಿಯಾಗಿದ್ದರೂ, ಏನುಮಾಡಬಲ್ಲನು.

. ರಾಜನಿಗೆಸ್ತ್ರೀಯರುಹತ್ತಿರದವರಾಗುತ್ತಾರೆ. ದಾಯಾದಿಗಳುಅವರಿಗಿಂತಲೂಹತ್ತಿರದವರು. ಎಲ್ಲರಿಗಿಂತಲೂಮಕ್ಕಳುಹತ್ತಿರದವರು. ಆದ್ದರಿಂದರಾಜನನ್ನುಸ್ತ್ರೀಯರಿಂದಲೂಅನಂತರದಾಯಾದಿಗಳಿಂದಲೂ, ತದನಂತರಪುತ್ರರಿಂದಲೂರಕ್ಷಿಸಬೇಕು.

. ಚಾಂಡಾಲನಿಂದಚಕ್ರವರ್ತಿಯವರೆಗೆಎಲ್ಲರೂಸ್ತ್ರೀಸುಖಕ್ಕಾಗಿಹಾತೊರೆಯುವವರೇ.

. ಸ್ತ್ರೀಸಂಗಾಪೇಕ್ಷೆಇಲ್ಲದವನಧನವುಹೆಣವನ್ನುಸಿಂಗರಿಸಿದಂತೆ.

—-

ಸರ್ವಾಃಸ್ತ್ರೀಯಃಕ್ಷಿರೋದಧಿವೇಲಾಇವಪ್ರಾಯೇಣವಿಷಾಮೃತಸ್ಥಾನಂ || ೧೦ || ೮೩೬ ||

ಅರ್ಥ : ಸರ್ವಾಃಸ್ತ್ರಿಯ = ಎಲ್ಲಾಸ್ತ್ರೀಯರ್ಕಳುಂ, ಕ್ಷೀರೋದಧಿವೇಲಾಇವ = ಪಾಲ್ಗಡಲತಡೆಯಂತೆ, ಪ್ರಾಯೇಣ = ಪ್ರಚುರದಿಂ, ವಿಷಾಮೃತಸ್ಥಾನಂ = ವಿಷಯಕ್ಕಮಮೃತಕ್ಕಂನೆಲೆ || ಸ್ತ್ರೀಯರಿಂಸುಳಮುಂಕೇಡುಮಕ್ಕೆಂಬುದುತಾತ್ಪರ್ಯಂ || ಸ್ತ್ರೀಯರ್ಕಳುಋಜುವಲ್ಲರೆಂಬುದುತ್ತರವಾಕ್ಯಂ :

ಮರಕದಂಷ್ಟ್ರಾಇವಸ್ತ್ರಿಯಃಸ್ವಭಾವಾದೇವವಕ್ರಶೀಲಾಃ || ೧೧ || ೮೩೭ ||

ಅರ್ಥ : ಮಕರದಂಷ್ಟ್ರಾಇವ = ನೆಗಳದಾಡೆಯಂತೆ, ಸ್ವಭಾವಾದೇವ = ಸ್ವಭಾವದಿಂದಮೆ, ಸ್ತ್ರಿಯಃ = ಸ್ತ್ರೀಯರ್ಕಳ್, ವಕ್ರಶೀಲಾಃ = ಕುಟಿಲೆಯರ್ ||

ಸ್ತ್ರೀಣಾಂವಶೋಪಾಯೋದೇವಾನಾಮಪಿದುರ್ಲಭಃ || ೧೨ || ೮೩೮ ||

ಅರ್ಥ : ಸ್ತ್ರೀಣಾಂ = ಸ್ತ್ರೀಯರ, ವಶೋಪಾಯಾಃ = ವಶಂಮಾಳ್ಪುಪಾಯಮಂ, ದೇವಾನಾಮಪಿ = ದೇವರ್ಗ್ಗಂ, ದುರ್ಲಭಃ = ಪಡೆಯಲ್ಬಾರದು || ಸ್ತ್ರೀಯರ್ಕಳನಂಬದೆಯುಂನಂಬಿದಂತಿಪ್ಪುದೆಂಬುದುತಾತ್ಪಯ್ಯಂ || ಇಂತಪ್ಪಸ್ತ್ರೀಯರಂಪಡೆವುದೆಂಬುದುತ್ತರವಾಕ್ಯಂ :

ಕಲತ್ರಂರೂಪವತ್ಸುಭಗಮನವದ್ಯಾಚಾರಮಪತ್ಯವದಿತಿಮಹತಃಪುಣ್ಯಸ್ಯಫಲಂ || ೧೩ || ೮೩೯ ||

ಅರ್ಥ : ಕಲತ್ರಂ = ಪೆಂಡತಿ, ರೂಪವತ್ = ರೂಪನುಳ್ಳುದುಂ, ಸುಭಗ = ಸೌಭಾಗ್ಯ (ಸೊಬಗುಳ್ಳ) ಮನುಳ್ಳುದುಂ, ಅನವದ್ಯಾಚಾರಂ = ಒಳ್ಳಿತಪ್ಪನೆಗಳ್ತೆಯನುಳ್ಳುದುಂ, ಅಪತ್ಯವತ್ಇತಿ = ಮಕ್ಕಳನುಳ್ಳುದುಮೆಂದಿಂತು, ಮಹತಃ = ಪಿರಿದಪ್ಪ, ಪುಣ್ಯಸ್ಯಫಲಂ = ಪುಣ್ಯದಫಲಮಪ್ಪುದು || ಪುಣ್ಯಮಳ್ಳಂಗಿಂತಪ್ಪಸ್ತ್ರೀದೊರೆಕೊಳ್ವಳೆಂಬುದುತಾತ್ಪರ್ಯಂ || ಸ್ತ್ರೀಯರದುರಾಚಾರಮಂಪೇಳ್ವುದುತ್ತರವಾಕ್ಯಂ :

ಕಾಮದೇವೋತ್ಸಂಗಸ್ಥಾಪಿಸ್ತ್ರೀಪುರುಷಾಂತರಮಭಿಲಷತ್ಯೇವ || ೧೪ || ೮೪೦ ||

ಅರ್ಥ : ಕಾಮದೇವೋತ್ಸಂಗಸ್ಥಾಫಿ = ಕಾಮದೇವನತೊಡೆಯೊಳಿರ್ದುಂ, ಸ್ತ್ರೀ = ಪೆಂಡತಿ, ಪುರುಷಾಂತರಂ = ಮತ್ತೋರ್ವನಂ, ಅಭಿಲಷತ್ಯೇವ = ಬಯಸುವಳು || ಸದಾಚಾರಿಯಲ್ಲೆಂಬುದುತಾತ್ಪರ್ಯಂ || ಸ್ತ್ರೀಯರಕಾವುಪಾಯಮಂಪೇಳ್ವುದುತ್ತರವಾಕ್ಯಂ :

—-

 

—-

ಮೋಹೋಭಯಂಲಜ್ಜಾಸ್ತ್ರೀಣಾಂರಕ್ಷಣಂಕಿಂತುಪರಪುರುಷಾದರ್ಶನಂಸಂಭೋಗಃಸವ್ವಸಾಧಾರಣತಾಪತ್ಯುಃ || ೧೫ || ೮೪೧ ||

ಅರ್ಥ : ಮೋಹಃ = ಕೂರ್ಮೆಯು (ಸ್ನೇಹ), ಭಯಂ = ಅಂಜಿಕೆಯುಂ, ಲಜ್ಜಾ = ನಾಚಿಕೆಯುಂ, ಸ್ತ್ರೀಣಾಂ = ಸ್ತ್ರೀಯರ್ಕಳ, ರಕ್ಷಣಂ = ಕಾಪು, ನ = ಅಲ್ಲದು, ಕಿಂತು = ಮತ್ತೆ, ಪರಪುರುಷಾದರ್ಶನಂ = ಮತ್ತೋವ್ವಪುರುಷನಕಾಣದಿರ್ಪ್ಪುದುಂ, ಪತ್ಯುಃ = ಪುರುಷನ, ಸಂಭೋಗಃ = ಕೂಟಮುಂ, ಸರ್ವಸಾಧಾರಣಾತಾಚ = ತನ್ನಸ್ತ್ರೀಯರನ್ನೆಲ್ಲರನೊಂದೆತೆಱದಿಂಕಾಣ್ಬುದುಂ, ಸಂರಕ್ಷಣಂ = ಕಾಪು ||

[8]ದಾನದರ್ಶನಾಭ್ಯಾಂಸಮವೃತ್ತೌಪುಂಸಿಸ್ತ್ರಿಯೋನಾಪರಾಧ್ಯಂತಿಕಾಮಧೇನುಇವಮನೀಷಿತವಸತಯಶ್ಚಭವಂತಿ || ೧೬ || ೮೪೨ ||

ಅರ್ಥ : ದಾನ = ಕುಡುವುದುಂ, ದರ್ಶನಾಭ್ಯಾಂ = ಕಾಣ್ಬುದುಮೆಂದಿವಱಿಂ, ಸಮವೃತ್ತೌ = ಒಂದೆಯಂದದನೆಗಳ್ತೆಯಾಗಲು, ಹಿ = ಆವುದೊಂದುಕಾರಣದಿಂ, ಪುಂಸಿ = ಪುರುಷನೊಳ್, ಸ್ತ್ರೀಯಃ = ಸ್ತ್ರೀಯರ್ಕಳ್, ನಾಪರಾಧ್ಯಂತಿ = ಪೊಲ್ಲದಾಗಿನೆಗಳ್ವರಲ್ಲ, ಕಾಮಧೇನುಇವ = ಕಾಮಧೇನುಗಳಂತೆ, ಮನೀಷಿವಸತಯಶ್ಚ = ಬಯಸಿದುದಕ್ಕೆಡೆಗಳುಂ, ಭವಂತಿ = ಅಕ್ಕುಂ || ಇವಲ್ಲದೆಪೆಱತುಪಾಯಮಿಕ್ಕೆಂಬುದುತಾತ್ಪರ್ಯಂ || ಕುಲಸ್ತ್ರೀಯನುದಾಸೀನಂಗೆಯ್ಯಲಾಗದೆಂಬುದುತ್ತರವಾಕ್ಯಂ :

ಪರಿಗೃಹೀತಾಸುಸ್ತ್ರೀಷುಪ್ರಿಯಾಪ್ರಿಯತ್ವಂನಮನ್ಯೇತ || ೧೭ || ೮೪೩ ||

ಅರ್ಥ : ಪರಿಗೃಹೀತಾಸು = ಕೈಕೊಳ್ಳಲ್ಪಟ್ಟ, ಸ್ತ್ರೀಷು = ಸ್ತ್ರೀಯರೊಳ್, ಪ್ರಿಯಾಪ್ರಿಯತ್ವಂ = ತನ್ನೊಲ್ಮೆಯನೊಲ್ಲದುದುಮಂ, ನಮನ್ಯೇತ = ಬಗೆಯದಿರ್ಕ್ಕೆ ||

 —-

೧೦. ಎಲ್ಲಸ್ತ್ರೀಯರುಹಾಲ್ಗಡಲಅಲೆಯಂತೆಸಾಮಾನ್ಯವಾಗಿವಿಷಕ್ಕೂಅಮೃತಕ್ಕೂನೆಲೆಯಾಗಿರುವರು.

೧೧. ಮೊಸಳೆಯದವಡೆಯಂತೆಸ್ತ್ರೀಯರುಸಹಜವಾಗಿಯೇವಕ್ರಸ್ವಭಾವವುಳ್ಳವರು.

೧೨. ಸ್ತ್ರೀಯರನ್ನುವಶಪಡಿಸಿಕೊಳ್ಳುವಉಪಾಯವುದೇವರಿಗೂದುರ್ಲಭ.

೧೩. ರೂಪ, ಸೌಂದರ್ಯಮತ್ತುಒಳ್ಳೆಯಆಚಾರವುಳ್ಳ, ಸಂತಾನವಂತಳಾದಹೆಂಡತಿಇರುವುದುಹಿರಿದಾದಪುಣ್ಯದಫಲವು.

೧೪. ಕಾಮದೇವನತೊಡೆಯಮೇಳೆಕುಳಿತಿದ್ದರೂಹೆಂಗಸುಮತ್ತೊಬ್ಬನನ್ನುಬಯಸುವವಳೇ.

೧೫. ಕುಟುಂಬವ್ಯಾಮೋಹ, ಲಜ್ಜೆ, ಭಯಇವುಯಾವವೂಸ್ತ್ರೀಗೆರಕ್ಷಣೆಗಳಲ್ಲ, ಪರಪುರುಷನನ್ನುನೋಡದಿರುವುದು, ಪತಿಯೊಡನೆಸಂಭೋಗಸವತಿಯರೊಂದಿಗೆಸಮಾನತೆಇವುಗಳೇರಕ್ಷಣೆಗಳು. (ಇವುಬಹುಶಃಪೂರ್ವಕಾಲದಮಹಾರಾಜರಅಂತಃಪುರದಸ್ತ್ರೀಯರಿಗೆಅನ್ವಯಿಸುವವಿಷಯಗಳಿರಬಹುದು)

೧೬. ಅವಶ್ಯವಾದ್ದನ್ನುಕೊಡುವುದರಲ್ಲಿಯೂ, ನೋಡಿಕೊಳ್ಳುವುದರಲ್ಲಿಯೂಎಲ್ಲರೊಂದಿಗೆಒಂದೇಸಮನಾಗಿರುವಂಥಗಂಡನವಿಷಯದಲ್ಲಿಹೆಂಡತಿಯರುದ್ರೋಹವೆಸಗುವುದಿಲ್ಲ. ಕಾಮಧೇನುವಿನಂತೆಇಷ್ಟಪಟ್ಟರೀತಿಯಲ್ಲಿರುತ್ತಾರೆ.

೧೭. ಸ್ವೀಕರಿಸಿದಸ್ತ್ರೀಯರವಿಷಯದಲ್ಲಿಇವರುಪ್ರಿಯರೇ, ಪ್ರಿಯರಲ್ಲದವರೇಎಂಬಆಲೋಚನೆಗೆಅವಕಾಶವಿರಕೂಡದು.

—-

ಕಾರಣವಶಾನ್ನಿಂಬೋಪ್ಯನುಭೂಯತಏವ || ೧೮ || ೮೪೪ ||

ಅರ್ಥ : ಕಾರಣವಶಾತ್ = ಶರೀರಹಿತಂಕಾರಣಮಾಗಿ, ನಿಂಬೋಪಿ = ಬೇವುಂ, ಅನುಭುಯತಏವ = ಸೇವಿಸಲ್ಪಡುವುದೇ ||

[9]ಚತುರ್ಥದಿವಸಸ್ನಾತಾಸ್ತ್ರೀತೀರ್ಥಂ || ೧೯ || ೮೪೮ ||

ಅರ್ಥ : ಚತುರ್ಥದಿವಸಸ್ನಾತಾ = ನಾಲ್ಕೂನೀರ್ಮಿಂದ, ಸ್ತ್ರೀ = ಪೆಂಡತಿ, ತೀರ್ಥತೀರ್ಥಮೆಂಬುದು ||

ತಿರ್ಥೋಪರೋಧೋಹಿಮಹಾನಧರ್ಮಾನುಬಂಧಃ || ೨೦ || ೮೪೬ ||

ಅರ್ಥ : ಹಿ = ಆವುದೊಂದುಕಾರಣದಿಂ, ತೀರ್ಥೋಪರೋಧಃ = ನಾಲ್ಕುನೀರ್ಮಿಂದಸ್ತ್ರೀಯರನುದಾಸೀನಂಗೆಯ್ವುದು, ಮಹಾನ್ = ಪಿರಿದಪ್ಪ, ಅಧರ್ಮಾನುಬಂಧಃ = ಪಾಪದತೊಡರ್ಪ್ರು ||

ಋತಾದಪಿಸ್ತ್ರೀಯಮುಪೇಕ್ಷಮಾಣಃಪಿತೃಣಾಮೃಣಭಾಜನಂ[10]ಸ್ತ್ರೀದೂಷಕಶ್ಚಭವತಿ || ೨೧ || ೮೪೭ ||

ಅರ್ಥ : ಋತಾದಪಿ = ಋತುಕಾಲದೊಳ್, ಸ್ತ್ರಿಯಂ = ಸ್ತ್ರೀಯನು, ಉಪೇಕ್ಷಮಾಣಃ = ಉಪೇಕ್ಷಿಸುತ್ತಿರ್ದುಂ, ಪಿತೃಣಾಂ = ತಂದೆಯರ, ಋಣಭಾಜನಂ = ಸಾಲಕ್ಕೆ, ಸ್ತ್ರೀದೂಷಕಶ್ಚ = ಸ್ತ್ರೀದೂಷಕನುಂ, ಭವತಿ = ಅಕ್ಕುಂ || ಸ್ತ್ರೀಯರನೆರೆಯಲೀಯದೆಂಬುದೀಯಯ್ದಱತಾತ್ಪರ್ಯಂ || ಸ್ತ್ರೀಯರನೋಯಿಸಿದಡೆಂತಕ್ಕುಮೆಂಬುದುತ್ತರವಾಕ್ಯಂ :

—-

೧೮. ಶರೀರಹಿತಕ್ಕೆಅವಶ್ಯವಾದರೆಬೇವನ್ನೂಕೂಡತಿನ್ನಲೇಬೇಕಾಗುತ್ತದೆ.

೧೯. ನಾಲ್ಕನೆಯದಿನದಸ್ನಾನಾನಂತರದಹೆಂಡತಿತೀರ್ಥಳೆನಿಸಿಕೊಳ್ಳುವಳು.

೨೦. ತೀರ್ಥಳನ್ನುಉದಾಸೀನಮಾಡುವುದುಮಹತ್ತಾದಅಧರ್ಮಕ್ಕೆಕಾರಣ.

೨೧. ಋತುಕಾಲಪ್ರಾಪ್ತಳಾದಸ್ತ್ರೀಯನ್ನುಉಪೇಕ್ಷಿಸುವವನುಪಿತೃದೇವತೆಗಳಋಣಕ್ಕೆಗುರಿಯಾಗುವನಲ್ಲದೆಸ್ತ್ರೀದೂಷಕನೂಆಗುವನು.

—-

[11]ಅಪರಾದ್ಧಾಃಸ್ತ್ರೀಯಃಸ್ವಯಂನಶ್ಯಂತಿನಾಶಯಂತಿವಾಪತಿಂ || ೨೨ || ೮೪೮ ||

ಅರ್ಥ : ಅಪರಾದ್ಧಾಃ = ನೋಯಿಸಲ್ಪಟ್ಟ, ಸ್ತ್ರೀಯಃ = ಸ್ತ್ರೀಯರ್ಕಳ್, ಸ್ವಯಂ = ತಾಮೇ, ನಶ್ಯಂತಿ = ಕಿಡುವರು, ಪತಿಂ = ಗಂಡನಂ, ನಾಶಯಂತಿವಾ = ಕಿಡಿಸುವರ್ಮೇಣ್ ||

[12]ನಸ್ತ್ರೀಣಾಮಕತ್ತವ್ಯೇಮರ್ಯಾದಾಸ್ತಿ || ೨೩ || ೮೪೯ ||

ಅರ್ಥ : ಸ್ತ್ರೀಣಾಂ = ಸ್ತ್ರೀಯರ್ಕಳ, ಅಕರ್ತವ್ಯೇ = ಪೊಲಗೆಯ್ವಲ್ಲಿ, ಮರ್ಯಾದಾ = ಮರ್ಯಾದೆಯುಂ, ನಾಸ್ತಿ = ಇಲ್ಲ || ಸ್ತ್ರೀಯನನ್ಯಾಯದಿಂನೋಯಿಸೆಕೇಡಕ್ಕುಮೆಂಬುದೀಎರಡಱತಾತ್ಪಯ್ಯಂ || ಮತ್ತಂಸ್ತ್ರೀಯನುಪೇಕ್ಷೆಗೆಯ್ಯಲಾಗದೆಂಬುದೇಉತ್ತರವಾಕ್ಯಂ :

ವರಮವಿವಾಹೋನೋಢಾನಾಮುಪೇಕ್ಷಣಂ || ೨೪ || ೮೫೦ ||

ಅರ್ಥ : ಅವಿವಾಹ = ಮದುವೆಯಿಲ್ಲದಿಪ್ಪುದು, ವರಂ = ಒಳ್ಳಿತ್ತು, ಊಢನಾಂ = ಮದುವೆಯಾದಸ್ತ್ರೀಯರಂ, ಉಪೇಕ್ಷಣಂ = ಉಪೇಕ್ಷೆಗೆಯ್ಯುವುದು, ನ = ಒಳ್ಳಿತ್ತಲ್ಲ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

[13]ಅಕೃಷತಃಕಿಂಕ್ಷೇತ್ರೇಣ || ೨೫ || ೮೫೧ ||

ಅರ್ಥ : ಅಕೃಷತಃ = ಆರಂಭಗೆಯ್ಯದ (ಉಳದವಂಗೆ) ಕ್ಷೇತ್ರೇಣ = ಕೈಯ್ಯಿಂ, ಕಿಂ = ಏನ್ || ಇಂತಪ್ಪುದಱಿಂಸ್ತ್ರೀಯೊಲ್ಲದಿರ್ಕುಮೆಂಬುದುತ್ತರವಾಕ್ಯಂ :

ಸಪತ್ನಿವಿಧಾನಂಪತ್ಯುರಸಮಂಜಸತ್ವಂವಿಮಾನುಮಪತ್ಯಾಭಾವಶ್ಚಿರವಿರಹಶ್ಚಸ್ತ್ರೀಣಾಂವಿರಕ್ತಿಕಾರಣಾನಿ || ೨೬ || ೮೫೨ ||

ಅರ್ಥ : ಸಪತ್ನಿವಿಧಾನಂ = ಸವತಿಯಂಮಾಳ್ಪುದುಂ, ಪತ್ಯುಃ = ಗಂಡನ, ಅಸಮಂಜಸತ್ವಂ = ಒಳ್ಪಿಲ್ಲದುದುಂ, ವಿಮಾನಂ = ಮನ್ನಿಸದುದುಂ, ಅಪಾತ್ಯಾಭಾವಶ್ಚ = ಮಕ್ಕಳಿಲ್ಲದುದುಂ, ಚಿರವಿರಹಶ್ಚ = ಪಲಕಾಲದಗಲ್ಕೆಯುಂ, ಸ್ತ್ರೀಣಾಂ = ಸ್ತ್ರೀಯರ್ಕಳ, ವಿರಕ್ತಿಕಾರಣಾನಿ = ಮೋಹದಕೇಡಿಂಗೆಕಾರಣಗಳ್ || ಮತ್ತಂಸ್ತ್ರೀಯರ್ಕಳಪ್ರಕೃತಿಯಂಪೇಳ್ವುದುತ್ತರವಾಕ್ಯಂ :

—-

೨೨. ಉಪೇಕ್ಷೆಗೆಗುರಿಯಾದಸ್ತ್ರೀತಾನೇನಾಶಹೊಂದುತ್ತಾಳೆಇಲ್ಲವೆಗಂಡನನ್ನಾದರೂನಾಶಪಡಿಸುತ್ತಾಳೆ.

೨೩. ಸ್ತ್ರೀಯರಕೆಟ್ಟಕೆಲಸಕ್ಕೆಮಿತಿಇಲ್ಲ.

೨೪. ಮದುವೆಯಾದಸ್ತ್ರೀಯರನ್ನುಉಪೇಕ್ಷಿಸುವುದಕ್ಕಿಂತಮದುವೆಯಾಗದಿರುವುದೇಲೇಸು.

೨೫. ಉಳದವನಿಗೆಹೊಲವೇಕೆ?

೨೬. ಸವತಿಯನ್ನುತರುವುದು, ಗಂಡನದುರ್ನಡತೆ, ಮನ್ನಣೆಯಅಭಾವ, ಮಕ್ಕಳಿಲ್ಲದಿರುವದು, ಬಹುಕಾಲ (ಗಂಡನಿಂತ) ಅಗಲಿಕೆಇವುಹೆಂಡತಿಯವಿರಕ್ತಿಗೆಕಾರಣಗಳು.

—-

 

[1]ಮೈ. ಈಮತ್ತುಮುಂದಿನವಾಕ್ಯವುಒಂದೇವಾಕ್ಯದಲ್ಲಿಅಡಕವಾಗಿವೆ.

[2]ಚೌ. ಈ ಮತ್ತು ಮುಂದಿನ ವಾಕ್ಯವು ಒಂದೇ ವಾಕ್ಯದಲ್ಲಿ ಅಡಕವಾಗಿದೆ.

[3]ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ಎಂಬ ಶಂಕರಾಚಾರ್ಯರ ಉಕ್ತಿಗೆ ಇದು ವಿರುದ್ಧವಾಗಿದೆ.

[4]ಇದಕ್ಕಿಂತ ಮೊದಲು ಮೈ. ಚೌ. ಗಳಲ್ಲಿ ಇನ್ನೊಂದು ವಾಕ್ಯವಿದೆ. ಅಸ್ವಾಮಿಕಾ ಪ್ರಕೃತಯಃ, ಸಮೃದ್ಧಾ ಅಪಿ ನಿಸ್ತರಿತುಂ ನ ಶಕ್ನುವಂತಿ.

[5]ಮೈ. ಆವಂಠಾದಾ, ಚೌ. ಅಪ್ಲವಂಗಾದಾ.

[6]ಚಾಂಡಾಲ ಶಬ್ದಕ್ಕೆ ಕಡೆಪಟ್ಟ ಬಡವ ಎಂಬ ಅಥ್ಥವನ್ನು ಟೀಕಾಕಾರನು ಕೊಟ್ಟಿದ್ದಾನೆ.

[7]ಮೈ. ಚೌ. ಧನಪರಿಗ್ರಹೋ.

[8]ಚೌ. ದಲ್ಲಿ ಈ ವಾಕ್ಯವಿಲ್ಲ.

[9]ಚೌ. ದಲ್ಲಿ ಈ ಮತ್ತು ಮುಂದಿನ ವಾಕ್ಯವು ಒಂದೇ ವಾಕ್ಯದಲ್ಲಿ ಅಡಕವಾಗವೆ.

[10]ಈ ಮುಂದಿನ ಪದಗಳು ಚೌ. ದಲ್ಲಿಲ್ಲ.

[11]ಮೈ. ಚೌ. ಅವರುದ್ಧಾಃ.

[12]ಚೌ. ದಲ್ಲಿ ಈ ಮತ್ತು ಮುಂದಿನ ವಾಕ್ಯವು ಒಂದೇ ವಾಕ್ಯದಲ್ಲಿ ಅಡಕವಾಗಿವೆ.

[13]ಮೈ. ಚೌ. ವಾಕ್ಯದ ಆರಂಭದಲ್ಲಿ ಈ ಶಬ್ದಗಳಿವೆ. ಅಕೃತರಕ್ಷಸ್ಯ ಕಿಂ ಕಲತ್ರೇಣ.