ಸ್ವಜಾತಿಯೋಗ್ಯಸಂಸ್ಕಾರಹೀನಾನಾಂರಾಜ್ಯೇಪ್ರವ್ರಜ್ಯಾಯಾಂಚನಾಸ್ತ್ಯಧಿಕಾರಃ || ೭೩ || ೮೯೯ ||

ಅರ್ಥ : ಸ್ವಜಾತಿಯೋಗ್ಯ = ತನ್ನಜಾತಿಗೆತಕ್ಕ, ಸಂಸ್ಕಾರಹೀನಾನಾಂ = ಸಂಸ್ಕಾರಮಿಲ್ಲದರ್ಗೆ, ರಾಜ್ಯೇ = ರಾಜ್ಯದೊಳ್, ಪ್ರವಜ್ಯಾಯಾಂಚ = ತಪದೊಳಂ, ಅಧಿಕಾರಃ = ಯೋಗ್ಯತೆ, ನಾಸ್ತಿ = ಇಲ್ಲ || ಜಾತಿಗೆತಕ್ಕನೆಗಳ್ತೆಯಾಗವೇಳ್ಕುಮೆಂಬುದುತಾತ್ಪಯ್ಯಂ || ಅಂಗಹೀನನಾದೊಡಮನ್ನೆವರಮಧಿಕೃತನೆಂಬುದುತ್ತರವಾಕ್ಯಂ :

ಅಸತಿಯೋಗ್ಯೇನ್ಯಸ್ಮಿನ್ಮಂಗಹೀನೋಪಿಪಿತೃಪದಮರ್ಹತ್ಯಾಪುತ್ರೋತ್ಪತ್ತಿಃ || ೭೪ || ೯೦೦ ||

ಅರ್ಥ : ಯೋಗ್ಯೇ = ಪದವಿಗೆತಕ್ಕ, ಅನ್ಯಸ್ಮಿನ್= ಮತ್ತೋರ್ವಂ, ಅಸತಿ = ಇಲ್ಲದಿರೆ, ಅಂಗಹೀನಃ = ಅವಯವಂಗಳಿಲ್ಲದಂ, ಪಿತೃಪದಂ = ತಂದೆಯಪದವಿಗೆ, ಅರ್ಹತಿ = ತಕ್ಕಂ, ಆಪುತ್ರೋತ್ಪತ್ತೇಃ = ಮಕ್ಕಳ್ಪುಟ್ಟುವನ್ನೆವರಂ || ಸುತನಪ್ಪನ್ನೆವರಮೆಂತಪ್ಪನುಮಂಪದಸ್ಥನಂಮಾಳ್ಪುದೆಂಬುದುತಾತ್ಪಯ್ಯಂ || ರಾಜಪುತ್ರಂಗೆವಿನಯಮಂಮಾಡಲೆವೇಳ್ಕುಮೆಂಬುದುತ್ತರವಾಕ್ಯಂ :

ಸಾಧುಸಂಪಾದಿತೋಹಿರಾಜಪುತ್ರಾಣಾಂವಿನಯೋನಯಮಭ್ಯುದಯಂ[1]ಚನದೂಷಯತಿ || ೭೫ || ೯೦೧ ||

ಅರ್ಥ : ಸಾಧುಸಂಪಾದಿತಃ = ಲೇಸಾಗಿಕಲಿಸಿದ, ರಾಜಪುತ್ರಾಣಾಂ = ಅರಸುಮಕ್ಕಳ, ವಿನಯಃ = ವಿನಯಂ, ನಯಂ = ನೀತಿಯುಂ, ಅಭ್ಯುದಯಂಚ = ಅಭಿವೃದ್ಧಿಯುಮಂ, ಹಿ = ನೆಟ್ಟನೆ, ನದೂಷಯತಿ = ಕೆಡಿಸುವುದಲ್ಲ || ವಿನಯಮಿಲ್ಲದಂಗೆನೀತಿಯುಂಪೆರ್ಚ್ಚುಮಿಲ್ಲೆಂಬುದುತಾತ್ಪರ್ಯಂ || ರಾಜಪುತ್ರಂವಿನೀತನಲ್ಲದಿರೆದೋಷಮಂಪೇಳ್ವುದುತ್ತರವಾಕ್ಯಂ :

—-

೭೩. ಸ್ವಜಾತಿಗೆತಕ್ಕುದಾದಸಂಸ್ಕಾರಹೀನರಿಗೆರಾಜ್ಯಕ್ಕಾಗಲಿ, ಸನ್ಯಾಸಕ್ಕಾಗಲಿಅಧಿಕಾರವಿಲ್ಲ.

೭೪. ರಾಜನಾಗುವುದಕ್ಕೆಅರ್ಹನಾದಮಗನೊಬ್ಬನಿಲ್ಲದಿದ್ದಲ್ಲಿ, ಇನ್ನೊಬ್ಬನುಹುಟ್ಟುವವರೆಗೂಅಂಗವಿಹೀನನಾದರೂತಂದೆಯಸ್ಥಾನಕ್ಕೆಅರ್ಹನಾಗುತ್ತಾನೆ.

೭೫. ಒಳ್ಳೆಯರೀತಿಯಿಂದಪಡೆದರಾಜಪುತ್ರರವಿನಯವುನೀತಿಯನ್ನೂಅಭಿವೃದ್ಧಿಯನ್ನೂಕೆಡಿಸುವುದಿಲ್ಲ.

—-

ಘುಣಜಗ್ಧಂಕಾಷ್ಠಮಿವಾವಿನೀತಪುತ್ರಂರಾಜಕುಲಮಭಿಯುಕ್ತಮಾತ್ರಂಭಜ್ಯೇತ || ೭೬ || ೯೦೨ ||

ಅರ್ಥ : ಘುಣಜಗ್ಧಂ = ಹುಳುತಿಂದ, ಕಾಷ್ಠಮಿವ = ಕಟ್ಟಿಗೆಯಹಾಂಗೆ, ಅವಿನೀತಪುತ್ರಂ = ವಿನಯಮಿಲ್ಲದಪುತ್ರರನುಳ್ಳ, ರಾಜಕುಲಂ = ರಾಜಕುಲವು, ಅಭಿಯುಕ್ತಮಾತ್ರಂ = ಒಡೆತನವಾದಂತೆ, ಭಜ್ಯೇತ = ಮಱೆದವು ||

ಆಪ್ತವಿದ್ಯಾವೃದ್ಧೋಪನಿಬದ್ಧಾಃ[2]ಸುಖೋಪರುದ್ಧಾಶ್ಚರಾಜಪುತ್ರಾಃಪಿತರಂನಾಭಿದ್ರುಹ್ಯಂತಿ || ೭೭ || ೯೦೩ ||

ಅರ್ಥ : ಆಪ್ತ = ಹಿತರುಂ, ವಿದ್ಯಾವೃದ್ಧ = ವಿದ್ಯೆಯಿಂದಧಿಕರುಮೆಂದಿವರುಂ, ಉಪನಿಬದ್ಧಾಃ = ಶಿಕ್ಷಿಸಲ್ಪಟ್ಟರಾಗಿ, ಸುಶೋಪರುದ್ಧಾಶ್ಚ = ಸುಖದಿಂದಿರಿಸಲ್ಪಟ್ಟರಾಗಿಯುಂ, ರಾಜಪುತ್ರಾಃ = ಅರಸುಮಕ್ಕಳ್, ಪಿತರಂ = ತಂದೆಗೆ, ನಾಭಿದ್ರುಹ್ಯಂತಿ = ತಪ್ಪರು (ದ್ರೋಹವೆಮಾಡರು) || ದುಷ್ಟರಿಂಪೊರ್ದಲೀಯದೆಸುಖದಿಂದಿರಿಸುವುದೆಂಬುದುತಾತ್ಪರ್ಯಂ || ರಾಜಪುತ್ರಂತಂದೆತಾಯ್ದುರನೆಂತುಕಾಣ್ಬುದೆಂಬುತ್ತರವಾಕ್ಯಂ :

ರಾಜಪುತ್ರಾಣಾಂ[3]ಹಿಮಾತಾಪಿತರೌಪರಮಂದೈವಂ || ೭೮ || ೯೦೪ ||

ಅರ್ಥ : ರಾಜಪುತ್ರಾಣಾಂ = ಅರಸುಮಕ್ಕಳ್ಗೆ, ಹಿ = ನಿಶ್ಚಯದಿಂ, ಮಾತಾಪಿತರೌ = ತಂದೆತಾಯುಂ, ಪರಮಂದೈವಂ = ಉತ್ಕೃಷ್ಟವಹದೈವವು || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ಯತ್ಪ್ರಸಾದಾದಾತ್ಮಲಾಭೋರಾಜ್ಯಲಾಭಶ್ಚ || ೭೯ || ೯೦೫ ||

ಅರ್ಥ : ಯತ್ಪ್ರಸಾದಾತ್ = ಆಈರ್ವರಪ್ರಸಾದದಿಂ, ಆತ್ಮಲಾಭಃ = ತನ್ನಪಡೆಪುಂ, ರಾಜ್ಯಲಾಭಶ್ಚ = ರಾಜ್ಯದಪಡೆಪುಮಕ್ಕುಂ || ರಾಜಪುತ್ರಂತಾಯ್ತಂದೆಯರ್ಗಂಜಿನಡೆವುದೆಂಬುದುತಾತ್ಪರ್ಯಂ || ಅವರುಮನ್ನಿಸದಿರ್ದೊಡೆದೋಷಮಂಪೇಳ್ವುದುತ್ತರವಾಕ್ಯಂ :

—-

೭೬. ಹುಳುತಿಂದಕಟ್ಟಿಗೆಯಹಾಗೆವಿಜಯವಿಲ್ಲದಪುತ್ರರುಳ್ಳರಾಜಕುಲವುಒಡೆತನವನ್ನುಹೊಂದಿದಕೂಡಲೇಮುರಿದುಹೋಗುತ್ತದೆ.

೭೭. ಆಪ್ತರಾದವಿದ್ಯಾವೃದ್ಧರಿಂದಶಿಕ್ಷಿತರಾದಸುಖದಿಂದಬೆಳೆದರಾಜಪುತ್ರರುತಂದೆಗೆದ್ರೋಹಬಗೆಯುವುದಿಲ್ಲ.

೭೮. ಅರಸುಮಕ್ಕಳಿಗೆಮಾತಾಪಿತೃಗಳೇಶ್ರೇಷ್ಠರಾದದೇವರು.

೭೯. ಇವರಿಂದಲೇಅವರಿಗೆಶರೀರವೂರಾಜ್ಯವೂಲಭಿಸುವವು.

—-

ಮಾತಾಪಿತರೌಮನಸಾಪ್ಯವಮನ್ಯಮಾನೇಪ್ಯಭಿಮುಖಾಅಪಿಶ್ರಿಯಶ್ಚಭವಂತಿವಿಮುಖಾಃ || ೮೦ || ೯೦೬ ||

ಅರ್ಥ : ಮಾತಾಪಿತರೌ = ತಾಯ್ತಂದೆಯಂ, ಮನಸಾಪಿ = ಮನದಿಂದೆಯುಂ, ಅವಮನ್ಯಮಾನೇ = ಅವಮನ್ನಿಸುವರೊಳ್, ಶ್ರಿಯಃ = ಶ್ರೀಗಳ್, ಅಭಿಮುಖಾಅಪಿಇದಿರಾಗಿಬರುತ್ತಿರ್ದುವುಂ, ವಿಮುಖಾಃ = ಪರಾಙ್ಮುಖಂಗಳ್, ಭವಂತಿ = ಆಪ್ಪವು || ಈಯರ್ಥಮನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಕಿಂತೇನರಾಜ್ಯೇನಯತ್ರದುರಪವಾದೋಪಹತಂಜನ್ಮ || ೮೧ || ೯೦೭ ||

ಅರ್ಥ : ಯತ್ರ = ಆವುದೊಂದುರಾಜ್ಯದೊಳು, ದುರಪವಾದ = ಬೈಗಳುಂ, ಉಪಹತಂ = ಪೀಡಿಸಲ್ಪಟ್ಟುದು, ಜನ್ಮ = ಉತ್ಪತ್ತಿ, ತೇನ = ಆ, ರಾಜ್ಯೇನ = ರಾಜ್ಯದಿಂ, ಕಿಂ = ಏಂ ||

ಕ್ವಚಿದಪಿಕರ್ಮಣಿಪಿತುರಾಜ್ಞಾಂನೋಲ್ಲಂಘಯೇತ್|| ೮೨ || ೯೦೮ ||

ಅರ್ಥ : ಕರ್ಮಣಿ = ವ್ಯಾಪಾರದೊಳ್, ಕ್ವಚಿದಪಿ = ಅವುದಱೊಳಾದೊಡಂ, ಪಿತುರಾಜ್ಞಾಂ = ತಂದೆಯಾಜ್ಞೆಯಂ, ನೊಲ್ಲಂಘಯೇತ್ = ದಾಂಟಿದಿರ್ಕೆ || ತಾಯ್ತಂದೆಯರೊಳ್ವಿನಯದಿಂನೆಗಳ್ವುದೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಕಿನ್ನಖಲುರಾಮಃಕ್ರಮೇಣವಿಕ್ರಮೇಣವಾಹೀನೋಯೇನಪಿತುರಾಜ್ಞಯಾವನಂವಿವೇಶ || ೮೩ || ೯೦೯ ||

ಅರ್ಥ : ರಾಮಃ = ರಾಮಸ್ವಾಮಿ[4], ಕ್ರಮೇಣ = ಕ್ರಮದಿಂದೆಯುಂ, ವಿಕ್ರಮೇಣವಾ = ಪರಾಕ್ರಮದಿಂಮೇಣ್, ಕಿನ್ನುಹೀನಃ = ಏಂಹೀನನೆ, ಯೇನ = ಆವುದೊಂದುಕಾರಣದಿಂ, ಪಿತುಃ = ತಂದೆಯ, ಆಜ್ಞಯಾ = ಆಜ್ಞೆಯಿಂ, ವನಂ = ಅಡವಿಯಂ, ವಿವೇಶ = ಪೊಕ್ಕಂ || ಪುತ್ರಂಗಪಕಾರಮಂಮಾಡಲಾಗದೆಂಬುದುತ್ತರವಾಕ್ಯಂ :

—-

೮೦. ತಾಯ್ತಂದೆಯರನ್ನುಮನಸ್ಸಿನಲ್ಲಿಯಾದರೂಕಡೆಗಣಿಸುವುದರಿಂದಒದಗಿಬರುತ್ತಿರುವಐಶ್ವಯ್ಯಗಳುತಪ್ಪಿಹೋಗುತ್ತವೆ.

೮೧. ಎಲ್ಲಿದುರುಪವಾದಗಳಿಂದಜನ್ಮವುಹಾಳಾಗಿಹೋಗುವುದೋರಾಜ್ಯದಿಂದಏನುಪ್ರಯೋಜನ?

೮೨. ಯಾವಕೆಲಸದಲ್ಲಿಯೂತಂದೆಯಆಜ್ಞೆಯನ್ನುಮೀರಕೂಡದು.

೮೩. ತಂದೆಯಆಜ್ಞೆಯಂತೆವನವನ್ನುಸೇರಿದರಾಮನುಕ್ರಮದಿಂದಲೂಪರಾಕ್ರಮದಿಂದಲೂಹೀನನೇ?

—-

ಯಃಖಲುರಾಜಪುತ್ರೋನಮಸಿತ[5]ಪರಂಪರಾಭಿರ್ಲಭ್ಯತೇಸಕಥಮಪಕತರತವ್ಯಃ || ೮೪ || ೯೧೦ ||

ಅರ್ಥ : ಯಃಖಲು = ಆವನೋರ್ವಂ, ರಾಜಪುತ್ರಃ = ಅರಸುಮಗಂ, ನಮಸಿತಪರಂಪರಾಭಿಃ = ಪರಕೆಯ (ಇಷ್ಟದೇವತಾನಮಸ್ಕಾರಪರಂಪರೆಗಳಿಂದ) ಮೇಲೆಪರಕೆಯಿಂ, ಲಭ್ಯತೇ = ಪಡೆಯಲ್ಬರ್ಪಂ, ಸಃ = ಆತಂ, ಕಥಂ = ಎಂತು, ಅಪಕರ್ತವ್ಯಃ = ನೋಯುಸಲ್ಪಡುವಂ ||

ಕರ್ತವ್ಯಮೇವಾಶುಭಂಕರ್ಮಯದಿಹನ್ಯಮಾನಸ್ಯವಿಧಿರಾತ್ಮನೋ[6]ನಭವೇತ್ || ೮೫ || ೯೧೧ ||

ಅರ್ಥ : ಹನ್ಯಮಾನಸ್ಯ = ಕೊಲಲ್ಪಡುತಿರ್ದನ (ಕೊಲಿಸಿಕೊಂಬವನ), ವಿಧಿಃ = ತೇಱಂ (ಭಾಗ್ಯವು), ಆತ್ಮನಃ = ತನಗೆ, ಯದಿನಭವೇತ್ = ಆಗದಿರ್ದೊಡೆ, ಅಶುಭಕರ್ಮ = ಪೊಲ್ಲದಪ್ಪನೆಗಳ್ತೆ, ಕರ್ತವ್ಯಮೇವ = ಮಾಡಲ್ಪಡವುದೇ || ಪುತ್ರಂಗೆಹಿತಮಂಮಾಳ್ಕೆಂಬುದುತಾತ್ಪರ್ಯಂ || ಇಂತಪ್ಪಂಸುಖಿಯೆಂಬುದುತ್ತರವಾಕ್ಯಂ :

ತೇಖಲುರಾಜಪುತ್ರಾಃಸುಖಿನೋಯೇಷಾಂಪಿತರಿರಾಜ್ಯಭಾರಃ || ೮೬ || ೯೧೨ ||

ಅರ್ಥ : ತೇರಾಜಪುತ್ರಾಃ = ಆಅರಸುಮಕ್ಕಳು, ಖಲು = ನೆಟ್ಟನೆ, ಸುಖಿನಃ = ಸುಖಿಗಳು, ಯೇಷಾಂ = ಆವರೋರ್ವರ್ಗೆ, ಪಿತರಿ = ತಂದೆಯೊಳ್, ರಾಜ್ಯಭಾರಃ = ರಾಜ್ಯದಪೆಱೆ[7] || ಈಯರ್ಥಮನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

—-

೮೪. ಇಷ್ಟದೇವತಾನಮಸ್ಕಾರಗಳಿಂದ, ಹರಕೆಗಳಿಂದಪಡೆದರಾಜಪುತ್ರನುಅಪಕಾರಗಳಿಗೆಹೇಗೆಗುರಿಯಾದಾನು?

೮೫. ತಾನುಕೊನೆಗೆಗುರಿಯಾಗುವಸ್ಥಿತಿಯಲ್ಲಿದ್ದಾಗ, ವಿಧಿಯಸಹಾಯವಿಲ್ಲದಿದ್ದರೆಯಾವಕೆಟ್ಟಕೆಲಸವನ್ನಾಗರೂಮಾಡಬಹುದು.

೮೬. ರಾಜ್ಯಭಾರದಹೊಣೆಯೆಲ್ಲವೂತಂದೆಯತಲೆಯಮೇಲೆಯೇಇರುವರಾಜಪುತ್ರರುಸುಖಿಗಳು.

—-

ಅಲಮನಯಾಶ್ರಿಯಾಯಾಕಿಮಪಿಸುಖಂನ[8]ಜನಯತಿ, ವ್ಯಾಸಂಗಪರಂಪರಾಭಿರ್ಮನಸೋದುಃಖಮನುಭಾವಯತಿ || ೮೭ || ೯೧೩ ||

ಅರ್ಥ : ಅಲಂ = ಸಾಲ್ವುದು, ಅನಯಾಶ್ರಿಯಾ = ಈಸಿರಿಯಿಂ, ಯಾ = ಆವುದೊಂದು, ಕಿಮಪಿ = ಏನಪ್ಪೊಡಂ, ಸುಖಂ = ಸುಖಮಂ, ನಜನಯತಿ = ಪುಟ್ಟಿಸದು, ವ್ಯಾಸಂಗಪರಂಪರಾಭಿಃ = ಆಯಾಸಂಗಳಮೇಲಾಯಾಸಂಗಳು, ಮನಸಃ = ಮನದ, ದುಃಖಂ = ದುಃಖಮಂ, ಅನುಭಾವಯತಿ = ಮಾಡುಗುಂ || ತಂದೆಯಾ[ಶ್ರಯದಿಂ][9]ಸುಖಿಯಕ್ಕುಮೆಂಬುದುತಾತ್ಪರ್ಯಂ || ಅದಕ್ಕಂದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಅಫಲೋಹ್ಯಾರಂಭಃಕಸ್ಯನಾಮೋದರ್ಕ್ಕೇಸುಖಾವಹಃ || ೮೮ || ೯೧೪ ||

ಅರ್ಥ : ಹಿ = ಅವುದೊಂದುಕಾರಣದಿಂ, ಅಫಲಃ = ಫಲವಿಲ್ಲದೆ, ಆರಂಭಃ = ಆರಂಭ, ಕಸ್ಯ = ಆವಂಗೆ, ನಾಮ = ನಿಶ್ಚಯದಿಂ, ಉದರ್ಕ್ಕೇ = ಮೇಲೆ, ಸುಖಾವಹಃ = ಸುಖಮಂಮಾಡುವುದು || ಈಯರ್ಥಮನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಸ್ವಯಂ[10]ಕರ್ಷನ್ಕರ್ಷಯನ್ವಾಫಲಂಪುನಸ್ತಸ್ಯೈವಯಸ್ಯಕ್ಷೇತ್ರಂ || ೮೯ || ೯೧೫ ||

ಅರ್ಥ : ಸ್ವಯಂ = ತಾಂ, ಕರ್ಷನ್ = ಉಳುತ್ತಿರ್ದಂ, ಕರ್ಷಯನ್ವಾ = (ಉಳು, ಉಳಿಸಲಿ) ಉಳಿಸುತ್ತರ್ದಂಮೇಣ್, ಯಸ್ಯ = ಅವನೋರ್ವಂಗೆ, ಕ್ಷೇತ್ರಂ = ಭೂಮಿ, ತಸ್ಯೈವ = ಆತಂಗೆ, ಫಲಂ = ಫಲಂ = (ಫಲವಾದಹುದು), ಪುನಃ = ಮತ್ತೆ || ತಂದೆಯತ್ನಂಮಾಡಿದೊಡೆಪುತ್ರಂಗೆಲಾಭಮಕ್ಕುಮೆಂಬುದುತಾತ್ಪರ್ಯಂ || ಇಂತಪ್ಪನೊಡೆಯನೆಂಬುದುತ್ತರವಾಕ್ಯಂ :

—-

೮೭. ಯಾವಐಶ್ವರ್ಯವುಸುಖವನ್ನುಂಟುಮಾಡದೆಕಷ್ಟಪರಂಪರೆಯಿಂದಮನಸ್ಸಿಗೆದುಃಖವನ್ನುತಂದೊಡ್ಡುವುದೋಅಂತಹಐಶ್ವರ್ಯದಿಂದೇನುಪ್ರಯೋಜನ?

೮೮. ಫಲವಿಲ್ಲದಕೃಷಿಯುಯಾರಿಗೆತಾನೆಮುಂದೆಸುಖವನ್ನುಕೊಡುವುದು?

೮೯. ಯಾರುಕೃಷಿಮಾಡಿದರೂಯಾರಿಂದಮಾಡಿಸಿದರೂಕೊಲವುಯಾರದೋಅವನದೇಫಲವು.

—-

ಸುತಸೋದರ್ಯಸಪತ್ನಪಿತೃವ್ಯಕುಲ್ಯದೌಹಿತ್ರಾಗಂತುಕೇಷುಪೂರ್ವಪೂರ್ವಾಭಾವೇಹ್ಯುತ್ತರೋತ್ತರಸ್ಯಪದಾವಾಪ್ತಿಃ[11] || ೯೦ || ೯೧೬ ||

ಅರ್ಥ : ಸುತ = ಮಗನುಂ, ಸೋದರ್ಯ = ಒಡಹುಟ್ಟಿದನುಂ, ಸಾಪತ್ನ = ಸವತಿದಾಯಮಗನುಂ, ಪಿತೃವ್ಯ = ಕಿಱಿಯಯ್ಯನುಂ, ಕುಲ್ಯ = ಕುಲದೌತನುಂ, ದೌಹಿತ್ರ = ಮಗಳಮಗನುಂ, ಆಗಂತುಕೇಷು = ಕುಳಿಯೊಕ್ಕುಕೈಕೊಂಡಮಗನು (ಒಂದಾನೊಂದುಸಂಬಂಧದಿಂದಬಂದವರು) ಮೆಂಬಿವರೊಳ್, ಪೂರ್ವಪೂವ್ವಾಭಾವೇ = ಮುನ್ನಿನಮುನ್ನಿನವರಿಲ್ಲದಿರೆ, ಹಿ = ನೆಟ್ಟನೆ, ಉತ್ತರೋತ್ತರಸ್ಯ = ಬಳಿಕನಬಳಿಕನಾತಂಗೆ (ಮುಂದಣಮುಂದಣವಱಿಗೆ), ಪದಾವಾಪ್ತಿಃ = ಒಡೆತನಮಕ್ಕುಂ (ರಾಜ್ಯದಪ್ರಾಪ್ತಿಯಹುದು) || ಇಂತಪ್ಪಸಂಬಂಧಮಿಲ್ಲದನೊಡೆಯನಲ್ಲೆಂಬುದುತಾತ್ಪರ್ಯಂ || ದುಷ್ಟಚೇಷ್ಟೆಯಂಪೇಳ್ವುದುತ್ತರವಾಕ್ಯಂ :

ಶುಷ್ಕಶ್ಯಾಮವಕ್ತ್ರತಾವಾಗ್ಭಂಗಃ[12]ಸ್ವೇದೋವಿಜೃಂಭಣಮತಿಮಾತ್ರವೇಪಥುಃಪ್ರಗೋತ್ರಸ್ಖಲನಂ[13]ವಾಕ್ಯವತ್[14]ಪ್ರೇಕ್ಷಣಮಾವೇಗಃಕರ್ಮಣಿಸ್ವಭೂಮೌ[15]ಚಾನವಸ್ಥಾನಮಿತಿದುಃಕೃತಂಕೃತವತಃಪರಿಷ್ಯತಃಕುರ್ವತೋವಾಲಿಂಗಾನಿ || ೯೧ || ೯೧೭ ||

ಅರ್ಥ : ಶುಷ್ಕಃ = ಒಣಗಿ, ಶ್ಯಾಮಃ = ಕುಂದಿದ, ವಕ್ತ್ರತಾ = ಮೊಗಮನುಳ್ಳಸ್ವಭಾವಮುಂ, ವಾಗ್ಭಂಗಃ = ನುಡಿಯತಪ್ಪುಹಮಂ, ಸ್ವೇದಃ = ಬೆಮರುಮಂ, ವಿಜೃಂಭಣಂ = ಆಗುಳಿಕೆಯುಂ, ಅತಿಮಾತ್ರ = ಪಿರಿದಪ್ಪ, ವೇಪಥುಃ = ನಡುಕಮುಂ, ಪ್ರಗೋತ್ರಸ್ಖಲನಂ = ಕರಂಪೆಸರಂತಪ್ಪಿನುಡಿವುದುಂ, ವಾಕ್ಯವತ್ಪ್ರೇಕ್ಷಣಂ = ನುಡಿಸಂಗತಿಯ (ಬಲ್ಲವಱ) ನೋಡುತ್ತಿರ್ಪುದುಂ, ನುಡಿಯಂಕೇಳದಿರ್ಪುದುಂ, ಕರ್ಮಣಿ = ವ್ಯಾಪಾರದದೊಳ್, ಆವೇಗಃ = ತರಿಪಮುಂ (ಸಂಭ್ರಮವು), ಸ್ವಭೂಮೌ = ತನ್ನಿರ್ದೆಡೆಯೊಳ್, ಅನವಸ್ಥಾನಮಿತಿ = ಇರದು (ಇರದಿರುಹ) ಮೆಂದಿಂತು, ದುಃಕೃತಃ = ದೋಷಮಂ, ಕೃತವತಃ = ಮಾಡಿದನ, ಕುರ್ವತಃ = ಮಾಡುತ್ತಿರ್ದನ, ಕರಿಷ್ಯತೋವಾ = ಮಾಡಲ್ಪೇಡಿದನಮೇಣ್, ಲಿಂಗಾನಿ = ಚಿಹ್ನಗಳ್ || ಪ್ರಚುರದಿಂದಿಂತಪ್ಪುರಿವಾಗದೆಂಬುದುತಾತ್ಪರ್ಯಂ ||

ಇತಿರಾಜರಷ್ಷಾಸಮುದ್ದೇಶಃ || ೨೩ ||[16]

[17]ಈ೨೩ನೇಸಮುದ್ದೇಶದವಾಕ್ಯಂ || ೯೧ || ಒಟ್ಟು || ೯೧೭ ||

—-

೯೦. ಮಗ, ಸೋದರ, ಸವತಿಸೋದರ, ಚಿಕ್ಕಪ್ಪ, ತನ್ನವಂಶಕ್ಕೆಸೇರಿದವನು, ಮಗಳಮಗ, ಹೊರಗಿನವನು. ಕ್ರಮದಲ್ಲಿಮೊದಮೊದಲಿನವರಿಲ್ಲದಿರುವಲ್ಲಿ, ತರುವಾಯದವರಿಗೆರಾಜ್ಯಪ್ರಾಪ್ತಿಯಾಗುವುದು.

೯೧. ಒಣಗಿಕಂದಿದಮುಖ, ತಡೆದುತಡೆದುಮಾತನಾಡುವುದು, ಬೆವರುವುದು, ಆಕಳಿಸುತ್ತಿರುವುದು, ಅತಿಯಾದನಡುಕ, ಹೆಸರನ್ನುತಪ್ಪಿಹೇಳುವುದು. ಹೇಳಿದಮಾತನ್ನುಕೇಳಿಸಿಕೊಳ್ಳದಿರುವುದು. ತನ್ನಕೆಲಸದಲ್ಲಿಅತಿಯಾದಸಂಭ್ರಮ, ತಾನಿದ್ದಡೆಯಲ್ಲಿಸ್ಥಿರವಾಗಿನಿಲ್ಲದಿರುವುದು. ಇವುದುಷ್ಕೃತ್ಯಗಳನ್ನೆಸಗಿದವನ, ಎಸಗುತ್ತಿರುವವನಮತ್ತುಎಸಗಬಹುದಾದವನಚಿಹ್ನೆಗಳು.

—-

 

[1]ಮೈ. ಅನ್ವಯಂ ನಯಮಭ್ಯುದಯಂ; ಚೌ. ಅನ್ವಯಮಭ್ಯುದಯಂ

[2]ಮೈ., ಚೌ. ಪರುದ್ಧಾಃ

[3]ಮೈ. ಈ ಮತ್ತು ಮುಂದಿನ ವಾಕ್ಯವು ಒಂದರಲ್ಲಿ ಅಡಕವಾಗಿದೆ.

[4]ರಾಮ ಎಂಬುದರ ಅನುವಾದವು ರಾಮಸ್ಥಾಮಿ ಎಂದು ಗೌರವಸೂಚನೆಗಾಗಿ ಇದೆ.

[5]ಮೈ. ಅಭೀಪ್ಸಿತಕರ್ಮಣಿ;  ಚೌ. ಮನೀಷಿತಪರಂಪರಯಾ.

[6]ಮೈ. ಚೌ. ವಿಷದ್ವಿಧಾನಮಾತ್ಮನೋ.

[7]ಬಹುಶಃ ಪೊಱೆ (ಹೊರೆ-ಭಾರ) ಎಂದಿರಬೇಕು.

[8]ಚೌ. ದಲ್ಲಿ ನ ಇಲ್ಲದಿರುವುದರಿಂದ ಅರ್ಥದಲ್ಲಿ ವ್ಯತ್ಯಾಸವಾಗುತ್ತದೆ.

[9]ಈ ಮೂರು ಅಕ್ಷರಗಳು ನಶಿಸಿವೆ. ಇವೆ ಇದ್ದಿರಬಹುದೆಂದು ಊಹಿಸಲಾಗಿದೆ.

[10]ಮೈ. ಪರಕ್ಷೇತ್ರೇ ಕರ್ಷತಃ;  ಚೌ. ಪರಕ್ಷೇತ್ರೇ ಸ್ವಯಂ ಕರ್ಷ್ಪತಃ

[11]ಮೈ. ಚೌ. ರಾಜ್ಯಪದಾವಾಪ್ತಿಃ

[12]ಮೈ. ವಾಕ್‌ಸ್ತಂಭಃ ವಾಗ್ಭೇದಃ;  ಚೌ. ವಾಕ್‌ಸ್ತಂಭಃ.

[13]ಮೈ. ಚೌ. ಪ್ರಸ್ಖಲನಂ.

[14]ಮೈ. ಬಾಹ್ಯವಿಪ್ರೇಕ್ಷಣಂ. ಅಸ್ಯಪ್ರೇಕ್ಷಣಂ;  ಚೌ. ಅಸ್ಯಪ್ರೇಕ್ಷಣ.

[15]ಮೈ. ಸ್ವಕರ್ಮಣಿ ಸ್ವಭೂಮೌ;  ಚೌ. ಕರ್ಮಣಿ ಭೂಮೌ.

[16]ಇದು ೨೪ ಎಂದಿರಬೇಕು.

[17]ಇದು ೨೪ ಎಂದಿರಬೇಕು.