ವೇಶ್ಯಾಸಕ್ತಿಃಪ್ರಾಣಾರ್ಥಮಾನಹಾನಿಂಕಸ್ಯಕರೋತಿ || ೫೦ || ೮೭೬ ||

ಅರ್ಥ : ವೇಶ್ಯಾಸಕ್ತಿಃ = ಸೂಳೆಗೆಕೂರ್ಪುದು, ಪ್ರಾಣ = ಪ್ರಾಣಮುಂ, ಅಥ್ಥ = ಅರ್ಥಮುಂ, ಮಾನ = ಅಭಿಮಾನಮಮೆಂಬಿವಱ, ಹಾನಿಂ = ಕೇಡಂ, ಕಸ್ಯ = ಆವಂಗೆ, ನಕರೋತಿ = ಮಾಡದು || ಸೂಳೆಯಱಿಂದರ್ಥಹಾನಿಎಂಬುದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ಧನಮನುಭವಂತಿವೇಶ್ಯಾಃಪುನಃಪುರುಷಂ || ೫೧ || ೮೭೭ ||

ಅರ್ಥ : ಧನಂ = ಅರ್ಥಮಂಧನವನೆ, ಅನುಭವಂತಿ = ಅನುಭವಿಸುವರು, ವೇಶ್ಯಾಃ = ಸೂಳೆಯರು, ಪುನಃ = ಮತ್ತೆ, ಪುರುಷಂ = ಪುರುಷನಂ, ನ = ಅನುಭವಿಪರಲ್ಲ || ಧನಮಿಲ್ಲದಿರ್ದೊಡಿಂತಪ್ಪರೆಂದುಪೇಳ್ವುದುತ್ತರವಾಕ್ಯಂ :

ಧನಹೀನೇಕಾಮದೇವೆsಪಿಪ್ರೀತಿಂಪ್ರತಿಬಧ್ನಂತಿವೇಶ್ಯಾಃ || ೫೨ || ೮೭೮ ||

ಅರ್ಥ : ಧನಹೀನೇ = ಧನಮಿಲ್ಲದ, ಕಾಮದೇವೇsಪಿ = ಕಾಮದೇವನೊಳಂ, ಪ್ರೀತಿಂ = ಸ್ನೇಹಮಂ, ವೇಶ್ಯಾಃ = ಸೂಳೆಯರ್, ನಪ್ರತಿಬಧ್ನಂತಿ = ಮಾಡರು || ಸೂಳೆಯರಿಂದಿಂತಪ್ಪಂಗೆಸುಖಮಕ್ಕುಮೆಂಬುದುತ್ತರವಾಕ್ಯಂ :

[1]ಪುಮಾನಾಯತಿಸುಖೀಯಸ್ಯಾನನುಶಯಂವೇಶ್ಯಾಸುದಾನಂ || ೫೩ || ೮೭೯ ||

ಅರ್ಥ : ಸಃ = ಆ, ಪುಮಾನ್ = ಪುರುಷಂ, ಆಯತಿಸುಖೀ = ಮೇಲೆಸುಖಿ, ವೇಶ್ಯಾಸು = ಸೂಳೆಯರೊಳ್, ಯಸ್ಯ = ಆವನೋರ್ವಂಗೆ, ಆನನುಶಯಂ = ಬೇಸಱರಿಯದ, ದಾನಂ = ಕುಡಹ || ಪದನಱಿದುಕುಡುಗೆನಣ್ಪುಗಿಡದೆಂಬುದುತಾತ್ಪರ್ಯಂ || ಇಂತಪ್ಪಂಮರುಳೆಂಬುದುತ್ತರವಾಕ್ಯಂ :

—-

೫೦. ವೇಶ್ಯಾಸಕ್ತಿಯುಯಾರಿಗೆತಾನೆಪ್ರಾಣ, ಅರ್ಥ, ಮಾನಗಳಹಾನಿಯನ್ನುಂಟುಮಾಡದು?

೫೧. ವೇಶ್ಯೆಯರುಧನವನ್ನುಅನುಭವಿಸುತ್ತಾರೆಯೇಹೊರತುಪುರುಷನನ್ನಲ್ಲ.

೫೨. ಧನಹೀನನುಕಾಮದೇವನೇಆದರೂಅವನಲ್ಲಿವೇಶ್ಯೆಯರಿಗೆಪ್ರೀತಿಉಂಟಾಗದು.

೫೩. ಯಾವಮನುಷ್ಯನುವೇಶ್ಯೆಯರಿಗೆಸತತವಾಗಿಹಣಕೊಡುತ್ತಿರುವನೋಅವನುಮುಂದೆಸುಖಿಯಾಗಿರಲಾರನು.

—-

ಪಶೋರಪಿಪಶುರ್ಯಃಸ್ವಧನೇನಪರೇಷಾಂಅರ್ಥರ್ಘವತೀಂ[2]ಕರೋತಿವೇಶ್ಯಾಂ || ೫೪ || ೮೮೦ ||

ಅರ್ಥ : ಸಃ = ಆತಂ, ಪಶೋರಪಿಪಶುಃ = ಪಶುವಂನೋಡಲ್ಬಲುಪಶು, ಯಃ = ಆವನೋರ್ವಂ, ಸ್ವಧನೇನ = ತನ್ನಧನದಿಂ, ಪರೇಷಾಂ = ಪೆಱರ್ಗೆ, ವೇಶ್ಯಾಂ = ಸೂಳೆಯಂ, ಅರ್ಥರ್ಘವತೀಂ = ಅಗ್ಗಾಯಿಲೆಯಂ (ಪ್ರಯೋಜನವುಳ್ಳವನು) ಕರೋತಿ = ಮಾಳ್ಕುಂ || ಅರ್ಥಮಂಕೊಟ್ಟುಅಗ್ಗಾಯಿಲೆಯಂಮಾಡವೇಡೆಂಬುದುತಾತ್ಪರ್ಯಂ ||

[3]ಅಧ್ರುವೇಣಾಧಿಕೇನಾಪ್ಯರ್ಥೇನವೇಶ್ಯಾಮನುಭವನ್ಚಿರಮನುಭವತಿ[4] || ೫೫ || ೮೮೧ ||

ಅರ್ಥ : ಅಧ್ರುವೇಣ = ನಿತ್ಯಮಲ್ಲದ, ಅಧಿಕೇನ = ಅಫ್ಪನಪ್ಪ, ಅರ್ಥೇಣ = ಅರ್ಥದಿಂದ, ವೇಶ್ಯಾಂ = ವೇಶ್ಯೆಯರನು, ಅನುಭವನ್ = ಅನುಭವಿಸುವನು, ಚಿರಂ = ಪಿರಿದುಕಾಲವು, ಅನುಭವತಿ = ಅನುಭವಿಸುವನು || ಸೂಳೆಯರಿಂತಪ್ಪರೆಂಬುದುತ್ತರವಾಕ್ಯಂ :

ಚಿತ್ತ[5]ವಿಶ್ರಾಂತೇರ್ವೇಶ್ಯಾಪರಿಗ್ರಹಃಶ್ರೇಯಾನ್ || ೫೬ || ೮೮೨ ||

ಅರ್ಥ : ಆಚಿತ್ರವಿಶ್ರಾಂತೇಃ = ಮನಂದಣಿವನ್ನಂ, ವೇಶ್ಯಾಪರಿಗ್ರಹಃ = ಸೂಳೆಯರಿಪ್ಪುದು, ಶ್ರೇಯಾನ್ = ಒಳ್ಳಿತ್ತು || ಅಲ್ಲದಂದುದೋಷಮಂಪೇಳ್ವುದುತ್ತರವಾಕ್ಯಂ :

—-

೫೪. ತನ್ನಧನದಿಂದಪರರವೇಶ್ಯೆಯನ್ನುಧನವಂತಳನ್ನಾಗಿಯೂಪ್ರಯೋಜನವುಳ್ಳವಳನ್ನಾಗಿಯೂಮಾಡುವವನುಪಶುಗಿಂತಲೂಕೀಳಾದವನು.

೫೫. ನಿತ್ಯವಲ್ಲದ, ಅಧಿಕಧನವನ್ನುಕೊಡುವದರಿಂದವೇಶ್ಯೆಯಸುಖವನ್ನುಅನುಭವಿಸುವವನುಬಹುಕಾಲಬಾಳಲಾರನು.

೫೬. ಮನಸ್ಸುದಣಿಯುವವರೆಗೆವೇಶ್ಯೆಯರಸಹವಾಸವುಒಳ್ಳೆಯದು.

—-

ವಿಸರ್ಜನಾ[6]ಕಾರಣಾಭ್ಯಾಂತದನುಭವೇಮಹಾನನರ್ಥಃ || ೫೭ || ೮೮೩ ||

ಅರ್ಥ : ವಿಸಜ್ಜನಂ = ಉಳಿಯುದಂ (ಕಳುಹ), ಆಕಾರಣಾಭ್ಯಾಂ = ಕರಹಮೆಂಬಿವಱಿಂ, ತದನುಭವೇ = ಅವರನುಭವಿಸಲ್, ಮಹಾನ್ = ಪಿರಿದಪ್ಪ, ಅನರ್ಥಃ = ಕೇಡಕ್ಕುಂ || ಸ್ವಭಾವಮಂಮಾಣಿಸಬಾರದೆಂಬುದುತ್ತರವಾಕ್ಯಂ :

ಯಾಯಸ್ಯಪ್ರಕೃತಿಃಸಾತಸ್ಯದೇವೈರಪಿಅಪನೇತುಂಶಕ್ಯತೇ || ೫೮ || ೮೮೪ ||

ಅರ್ಥ : ಯಾ = ಆವುದೊಂದು, ಯಸ್ಯ = ಆವನೋರ್ವನ, ಪ್ರಕೃತಿಃ = ಸ್ವಭಾವಂ, ಸಾ = ಅದು, ತಸ್ಯ, ಆತಂಗೆ, ದೇವೈರಪಿ = ದೇವರ್ಕಳಿಂದಮುಂ, ಅಪನೇತುಂ = ಪಿಂಗಿಸಲ್ಕೆ, ನಶಕ್ಯತೇ = ಬಾರದು || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಸುಭೋಜಿತೋಪಿಶ್ವಾಕಿಮಶುಚಿಂ[7]ಪರಿಹರತಿ || ೫೯ || ೮೮೫ ||

ಅರ್ಥ : ಸುಭೋಜಿತೋಪಿಒಳ್ಳಿತ್ತಹಅಶನವತಿಂದಡೆಯುಂ, ಶ್ವಾ = ನಾಯ್, ಅಶುಚಿಂ = ಶುಚಿಯಲ್ಲದವಸ್ತುವಂ, ಕಿಂಪರಿಹರತಿ = ಬಿಸುಡುವುದೇ ||

ಖಲುಕಪಿಃಶಿಕ್ಷಾಶತೇನಾಪಿಚಾಪಲ್ಯಂತ್ಯಜತಿ || ೬೦ || ೮೮೬ ||

ಅರ್ಥ : ಕಪಿಃ = ಕೋಡಗಂ, ಶಿಕ್ಷಾಶತೇನಾಪಿ = ನೂಱು (ಅನೇಕ) ಶಿಕ್ಷೆಗಳಿಂದೆಯುಂ, ಚಾಪಲ್ಯಂ = ಚಪಳಿಕೆಯಂ, ಖಲು = ನಿಶ್ಚಯದಿಂ, ನತ್ಯಜತಿ = ಬಿಸುಡದು ||

ಇಕ್ಷುರಸೇನಾಪಿಸಿಕ್ತೋನಿಂಬಃಕಟುಕಏವ || ೬೧ || ೮೮೭ ||

ಅರ್ಥ : ಇಕ್ಷುರಸೇನ = ಕಬ್ಬಿನರಸದಿಂ, ಸಿಕ್ತೋಪಿ = ಊಡಲ್ಪಟ್ಟುದಾದೊಡಂ, ನಿಂಬಃ = ಬೇವು, ಕಟುಕಏವ = ಕಯಿಪೆಯೇ || ಸ್ವಭಾವದುಜ್ಜನರನಱಿದುಪರಿಹರಿಸುವುದೆಂಬುದುತಾತ್ಪರ್ಯಂ || ದುರ್ಜನಂಸಂಸ್ಕಾರವಶದಿಂದೊಳ್ಳಿದನಾಗಿತೋರ್ಪನೆಂಬುದುತ್ತರವಾಕ್ಯಂ :

—-

೫೭. ಒಮ್ಮೆಬಿಟ್ಟುಮತ್ತೊಮ್ಮೆಕೂಡಿಕೊಂಡುವೇಶ್ಯೆಯರಸಂಗವನ್ನುಅನುಭವಿಸುವುದುದೊಡ್ಡಅನರ್ಥಕ್ಕೆಕಾರಣವಾಗುವುದು.

೫೮. ಮನುಷ್ಯನಸ್ವಭಾವವನ್ನುದೇವರೂಕೂಡಮಾರ್ಪಡಿಸಲಾರನು.

೫೯. ಎಂತಹಒಳ್ಳೆಯಆಹಾರವನ್ನುತಿಂದರೂನಾಯಿಶುಚಿಯಲ್ಲದ್ದನ್ನುಬಿಡುವುದೇ?

೬೦. ನೂರುವಿಧದಲ್ಲಿಕಲಿಸಿದರೂಕಪಿಯುತನ್ನಚಪಲತೆಯನ್ನುಬಿಡುವುದಿಲ್ಲ.

೬೧. ಕಬ್ಬಿನಹಾಲುಸೇರಿದರೂಬೇವುಕಹಿಯೇಸರಿ.

—-

[8]ತಾರುಣ್ಯಮವೈಕೃತ್ಯಂಸಂಸ್ಕಾರಃಸಾರಾಹಾರೋಪಯೋಗಃಸ್ವಶರೀರಸ್ಯ[9]ಸ್ತ್ರೀಣಾಂರಮಣೀಯಂಪುನಃಸ್ವಭಾವಃ || ೬೨ || ೮೮೮ ||

ಅರ್ಥ : ತಾರುಣ್ಯಂ = ಎಳವೆಯುಂ (ಯೌವನ), ಅವೈಕೃತ್ಯಂ = ವಿಕಾರಮಿಲ್ಲದುದುಂ, ಸಂಸ್ಕಾರಃ = ಸಾರಾಹಾರೋಪಯೋಗಶ್ಚ = ಸ್ನಾನಾದಿಸಂಸ್ಕಾರಮುಮಾಹಾರಮುಮೆಂಬಿವಂಯೋಸಿವುದುಂ, ಶರೀರಸ್ಯ = ಶರೀರದಒಳ್ಳಿತ್ತಾದ, ರಮಣೀಯಂ = ಒಪ್ಪಂ (ಚೆಲುವಿಕೆ), ಪುನಃ = ಮತ್ತೆ, ಸ್ವಭಾವಃ = ಬೇಱೆಸ್ವಭಾವಂ, ನ = ಅಲ್ಲೆಂತಂತೆ || ದಾಯಾದಾಪತ್ಯರಂಸಂತೋಷಂಬಡಿಸುವುಪಾಯಮಂಪೇಳ್ವುದುತ್ತರವಾಕ್ಯಂ :

[10]ಸನ್ಮಾನದಿವಸದೇಯಾಕುಲ್ಯಾನಾಂಉಪಗ್ರಹಹೇತುಃ || ೬೩ || ೮೮೯ ||

ಅರ್ಥ : ಸನ್ಮಾನ = ಮನ್ನಣೆಯುಂ, ದಿವಸದೇಯಾ = ನಿಚ್ಚವಳಂದಾಯಮುಂ (ಅಂದಂದಿಗೆತಕ್ಕುದಮಂಕುಡುಹವು) ಕುಲ್ಯಾನಾಂ || ಕುಲಜರ, ಉಪಗ್ರಹಹೇತುಃ = ಸಂತಸಂಬಡಿಸುವುದಕ್ಕೆಕಾರಣಂ || ದಾಯಾದ್ಯರುಮಂಮನ್ನಿಸಿಮೈವತ್ತುಗೆಮಾಳ್ಪುದೆಂಬುದುತಾತ್ಪರ್ಯಂ || ಇಂತಪ್ಪನೆಗಳ್ತೆಯಿಂದಾಯಿಗರಡಂಗಿರ್ಪರೆಂಬುದುತ್ತರವಾಕ್ಯಂ :

ತಂತ್ರಕೋಶವರ್ದ್ಧನೀವೃತ್ತಿರ್ದಾಯಾದಾನ್ನ[11]ವಿಕಾರಯತಿ || ೬೪ || ೮೯೦ ||

ಅರ್ಥ : ತಂತ್ರಕೋಶವರ್ಧನೀ = ಪರಿಗ್ರಹಮುಮಂ, ಭಂಡಾರಮಂಪೆರ್ಚ್ಚಿಸುವ, ವೃತ್ತಿಃ = ನೆಗಳ್ತೆ, ದಾಯಾದಾನ್ = ದಾಯಿಗರಂ, ನವಿಕಾರಯತಿ = ವಿಕಾರಕ್ಕೆಸಲಿಸುವುದಲ್ಲದು || ಸಾಮಗ್ರಿಯುಳ್ಳಂಗೆಆರುಂವಿಕಾರಕ್ಕೆಸಲ್ಲರೆಂಬುದುತಾತ್ಪರ್ಯಂ || ಇಂತಪ್ಪನಂಪೊರೆವುದೆಂಬುದುತ್ತರವಾಕ್ಯಂ :

 

[12]ಭಕ್ತಿವಿಶ್ರಂಭಾದೇಶಾವ್ಯಭಿಚಾರಿಣಂಕುಲ್ಯಂಪುತ್ರಂವಾಸಾಧುಸಂವರ್ಧಯೇದ್ವಿನಿಯುಂಜೀತವೋಚಿತೇಷುಕರ್ಮಸು || ೬೫ || ೮೯೧ ||

ಅರ್ಥ : ಭಕ್ತಿಃ = ಭಕ್ತಿಯುಂ, ವಿಶ್ರಂಭ = ಮನದಬಿಚ್ಚತಿಕೆಯುಂ (ವಿಶ್ವಾಸ), ಆದೇಶ = ಬೆಸನುಮೆಂಬಿವಱೊಳ್ (ಕೊಟ್ಟನಿರೂಪ), ಆವ್ಯಭಿಚಾರಿಣಂ = ವ್ಯಭಿಚಾರಿಯಲ್ಲದನಂ, ಕುಲ್ಯಂ = ದಾಯಿಗನಂ, ಪುತ್ರಂವಾ = ಮಗನಂಮೇಣ್, ಸಾಧು = ಒಳ್ಳಿತ್ತಾಗಿ, ಸಂವರ್ಧಯೇತ್ = ಪೊರೆಗೆ, ವಿನಿಯುಂಜೀತವಾ = ನಿಲಿಸುಗುಮೇಣ್, ಉಚಿತೇಷು = ತಕ್ಕ, ಕರ್ಮಸು = ವ್ಯಾಪಾರಂಗಳೊಳ್ || ಸಂತಾನದೊಳೊಳ್ಳಿದನಪ್ಪನಂಪೊರೆವುದೆಂಬುದುತಾತ್ಪರ್ಯಂ || ಇಂತಪ್ಪಲ್ಲಿಸ್ವಾಮಿಯಬೆಸನಂವಿಚಾರಿಸಬೇಡೆಂಬುದುತ್ತರವಾಕ್ಯಂ :

ಭರ್ತುರಾದೇಶಂನವಿಕಲ್ಪಯೇದನ್ಯತ್ರಪ್ರಾಣಭಾಧಾ (ವಧ) ಬಹುಜನವಿರೋಧಪಾತಕೃಭ್ಯಃ = ಪಾತಕಮುಮೆಂಬಿವಱತ್ತಣಿಂ, ಅನ್ಯತ್ರ = ಪೆಱವುಳಿ || ಪಾತಕಾದಿಗಳಲ್ಲಿಮುಂದುವರಿಯದೆವಿಚಾರಿಸುವುದೆಂಬುದುತಾತ್ಪರ್ಯಂ || ದಾಯಾದರ್ತಪ್ಪಿದೊಡಿಂತುನೆಗಳ್ವುದೆಂಬುದುತ್ತರವಾಕ್ಯಂ :

ಬಲವತ್ಪಕ್ಷಪರಿಗ್ರಹೇಷುದಾಯಾದೇಷ್ವಾಪ್ತಪುರುಷಪುರಸ್ಸರೋವಿಶ್ವಾಸೋವಶೀಕರಣಂ[13]ಗೂಢಪುರುಷಪ್ರಣಿಧಿರ್ವಾ || ೬೭ || ೮೯೩ ||

ಅರ್ಥ : ದಾಯಾವೇಷು = ದಾಯಿಗರಲ್ಲಿ, ಬಲವತ್ಪಕ್ಷಪರಿಗ್ರಹೇಷು = ಬಲ್ಲದರಂಕೈಕೊಳಲ್ಪಟ್ಟರಾದೊಡೆ, ಆಪ್ತಪುರುಷಪುರಸ್ಸರಃ = ಆಪ್ತಪುರುಷರನೆಮುಖ್ಯಮಾಗುಳ್ಳ, ವಿಶ್ವಾಸಃ = ನಂಬುಗೆ, ವಶೀಕರಣಂ = ವಶವಾಗಿಮಾಳ್ಪುದುಂ, ಗೂಢಪುರುಷಪ್ರಣಿಧಿರ್ವಾ = ಗೂಢಪುರುಷನಟ್ಟಿಭೇದಿಸುವುದುಮೇಣ್ (ಆದಾಯಾದ್ಯರವೃತ್ತಾಂತಮನಱಿವುದಕ್ಕೆಗೂಫಪುರುಷರಾದಚರರನಟ್ಟಿಅವರಿಂದಱಿದುವಶೀಕರಿಕೊಂಬುದು) || ದಾಯಿಗರ್‌ ಬಲವಂತರಂಕಯ್ಕೊಳಲ್ಬುದ್ಧಿಯಂಭೇದಿಪುದೆಂಬುದುತಾತ್ಪರ್ಯಂ || ಅವರ್ಮನದೊಳೆಡಱಿದೊಡೆಮಾಣಿಸುವುಪಾಯಮಂಪೇಳ್ವುದುತ್ತರವಾಕ್ಯಂ :

—-

೬೨. ಯೌವನ, ವಿಕೃತಿಯಿಲ್ಲದಿರುವಿಕೆ, ಸ್ನಾನಾದಿಸಂಸ್ಕಾರಗಳು, ಸಾರವತ್ತಾದಆಹಾರಇವುಗಳಿಂದಸ್ತ್ರೀಯರಶರೀರವುರಮಣೀಯವಾದೀತೇವಿನಾಸ್ವಭಾವವುರಮಣೀಯವಾಗದು.

೬೩. ನಿತ್ಯವೂಕೊಡುವಸನ್ಮಾನವುಕುಲಜರಸಂತೋಷಕ್ಕೆಕಾರಣವಾಗುವದು.

೬೪. ಸೈನ್ಯವನ್ನೂಭಂಡಾರವನ್ನೂಹೆಚ್ಚಿಸುವಉದ್ಯೋಗವುದಾಯಾದಿಗಳನ್ನುವಿಕಾರಗೊಳಿಸುವುದಿಲ್ಲ.

೬೫. ಭಕ್ತಿ, ವಿಶ್ವಾಸ, ಆಜ್ಞೆವಿಷಯಗಳಲ್ಲಿತಪ್ಪಿನಡೆಯದಿರುವದಾಯಿ (ತನ್ನಕುಲಕ್ಕೆಸೇರಿದವ) ನನ್ನುಅಥವಾಮಗನನ್ನುಯೋಗ್ಯರೀತಿಯಲ್ಲಿಬೆಳೆಸಬೇಕು. ಆತನನ್ನುತಕ್ಕಕೆಲಸಗಳಲ್ಲಿನಿಯೋಜಿಸಬೇಕು.

೬೬. ಪ್ರಾಣಬಾಧೆ, ಬಹುಜನವಿರೋಧ, ಮಹಾಪಾಪವುಂಟಾಗುವುದೆಂಬಸಂದರ್ಭಗಳಲ್ಲಿಹೊರತುಪಡಿಸಿಉಳಿದಂತೆಯಾವಾಗಲೂಪ್ರಭುವಿನಆಜ್ಞೆಯನ್ನುಮೀರಕೂಡದು.

೬೭. ದಾಯಾದಿಗಳುತನ್ನವಿರುದ್ಧವಾಗಿಬಲವಂತರಪಕ್ಷವನ್ನುಸೇರುವಂತಿದ್ದರೆ, ಆಪ್ತರಮೂಲಕವಿಶ್ವಾಸದಿಂದ, ವಶೀಕರಣದಿಂದಅಥವಾಗುಪ್ತಚಾರರನ್ನುಕಳಿಸುವುದರಮೂಲಕಅವರನ್ನುವಶಪಡಿಸಿಕೊಳ್ಳಬೇಕು.

—-

[14]ದುರ್ಬುದ್ಧೌಸುತೇದಾಯಾದಿನಿವಾಸಮ್ಯಗ್ಯುಕ್ತಿಭಿರ್ವಾದುರಭಿನಿವೇಶಮವತಾರಯೇತ್[15] || ೬೮ || ೮೯೪ ||

ಅರ್ಥ : ಸುತೇ = ಮಗನುಂ, ದಾಯಾದಿನಿವಾ = ದಾಯಾದಿಗಂಮೇಣ್, ದುರ್ಬುದ್ದೌ = ಪೊಲ್ಲಬುದ್ದಿಯನುಳ್ಳನಾದೊಡೆ, ಸಮ್ಯಕ್ = ಒಖ್ಖಿತ್ತಾಗಿ, ಯುಕ್ತಿಭಿಃ = ಯುಕ್ತಿಗಳಿಂ, ದುರಭಿನಿವೇಶಂ = ದುರಾಗ್ರಹಮಂ, ಅವತಾರಯೇತ್ = ಕೆಳೆಗೆ || ಅವರ್ಗೆಮಳಿಯಲ್ಬೇಡೆಂಬುದುತಾತ್ಪರ್ಯಂ || ಇಂತಪ್ಪರೊಳ್ದೋಷಮಂಮಾಡಲಾಗದೆಂಬುದುತ್ತರವಾಕ್ಯಂ :

ಸಾಧೂಪಚರ್ಯಮಾಣೇಷುವಿಕೃತಿಭಂಜನಂ[16]ಸ್ವಹಸ್ತಾಂಗಾರಾಕರ್ಪಣಮಿವ || ೬೯ || ೮೯೫ ||

ಅರ್ಥ : ಸಾಧೂಪಚರ್ಯಮಾಣೇಷು = ಒಳ್ಳಿತ್ತಂನೆಗಳ್ವರೊಳ್, ವಿಕೃತಿಭಂಜನಂ = ವಿರೋಧಮಂಮಾಳ್ಪುದು, ಸ್ವಹಸ್ತಾಂಗಾರಾಕರ್ಷಣಮಿವ = ತನ್ನಕೈಯಿಂಕೆಡಮಂತೆಗೆವಂತೆ || ಸಂತವಿರ್ದರಂಬಾಧಿಸಲಾಗದೆಂದುತಾತ್ಪರ್ಯಂ || ಮಕ್ಕಳ್ಪೊಲ್ಲರಾದುದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

೬೮. ಮಗನುಅಥವಾದಾಯಾದಿಯುದುರ್ಬುದ್ಧಿಯುಳ್ಳವರಾದರೆಒಳ್ಳೆಯಯುಕ್ತಿಗಳಿಂದಅವರದುರಾಗ್ರಹವನ್ನುಹೋಗಲಾಡಿಸಬೇಕು.

೬೯. ಉಪಚಾರಾರ್ಹವಾದಸಾಧುಗಳಲ್ಲಿಅಯೋಗ್ಯರೀತಿಯಲ್ಲಿನಡೆದುಕೊಳ್ಳುವುದುತನ್ನಕೈಯಿಂದಲೇಕೆಂಡವನ್ನುತೆಗೆಯವಂತೆ.

—-

ಕ್ಷೇತ್ರಬೀಜಯೋರ್ವೈಕೃತ್ಯಂಅಪತ್ಯಾನಿ[17]ವಿಕಾರಯತಿ || ೭೦ || ೮೯೬ ||

ಅರ್ಥ : ಕ್ಷೇತ್ರಬೀಜಯೋಃ = ತಾಯ್ತಂದೆಯರ, ವೈಕೃತ್ಯಂ = ದೋಷಂ, ಅಪತ್ಯಾನಿ = ಮಕ್ಕಳಂ, ವಿಕಾರಯತಿ = ವಿಕಾರಕ್ಕೆಸಲಿಸುಗುಂ || ತಾಯ್ತಂದೆಯರೊಳಿತ್ತಾದೊಡೆಮಕ್ಕಳೊಳ್ಳಿತರಕ್ಕುಮೆಂಬುದುತಾತ್ಪರ್ಯಂ || ಸತ್ಪುತ್ರೋತ್ಪತ್ತಿಗೆಕಾರಣಮಂಪೇಳ್ವುದುತ್ತರವಾಕ್ಯಂ :

ಕುಲಶುದ್ಧಿರುಭಯಪ್ರೀತಿರ್ಮನಃಪ್ರಸಾದಮನುಪಹತಸಮಯಃಶ್ರೀಸರಸ್ವತ್ಯಾವಾಹನಮಂತ್ರಪೂತಃಪರಮಾನ್ನೋಪಭೋಗಶ್ಚಗರ್ಭಾಧಾನೇಪುರುಷೋತ್ತಮಮವತಾರಯತಿ || ೭೧ || ೮೯೭ ||

ಅರ್ಥ : ಕುಲಶುದ್ಧಿಃ = ಕುಲದಶುದ್ಧತೆಯುಂ, ಉಭಯಪ್ರೀತಿಃ = ಈವ್ವರಕೂರ್ಮೆಯುಂ, ಮನಃಪ್ರಸಾದಂ = ಮನದನಿರ್ಮಳಿಕೆಯುಂ, ಅನುಪಹತಸಮಯಃ = ವ್ಯಗ್ರತೆಯಿಲ್ಲದವಸರಮುಂ, ಶ್ರೀ = ಶ್ರೀಯುಂ, ಸರಸ್ವತಿ = ಸರಸ್ವತಿಯುಮೆಂಬಿವಱ, ಆವಾಹನಮಂತ್ರಪೂತಃ = ಆಹ್ವಾನಮಂತ್ರದಿಂ, ಪೂತಃ = ಪವಿತ್ರಮಪ್ಪ, ಪರಮಾನ್ನೋಪಭೋಗಶ್ಚ = ತುಯ್ಯಲಕೂಟಮುಂ (ಪರಮಾನ್ನೋಪಯೋಗವು), ಗರ್ಭಾಧಾನೇ = ಗರ್ಭಮಂತಾಳ್ದುವಲ್ಲಿಯಾಗಲು, ಪುರುಷೋತ್ತಮಂ = ಉತ್ತಮಪುರುಷನಂ, ಅವತಾರಯತಿ = ಪುಟ್ಟಿಸುವುಗುಂ (ಅವತರಿಸುವುದು) || ಈಸಾಮಗ್ರಿಯಿಲ್ಲದಿರ್ದೊಡೆಸತ್ಪುತ್ರರಾಗರೆಂಬುದುತಾತ್ಪರ್ಯಂ || ಮತ್ತಮದಕ್ಕೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಗರ್ಭಶರ್ಮಜನ್ಮಕರ್ಮಚಾಪತ್ಯೇಷುದಹಲಾಭಾತ್ಮಲಾಭಯೋಃಪರಮಕಾರಣಂ || ೭೨ || ೮೯೮ ||

ಅರ್ಥ : ಗರ್ಭಶರ್ಮ = ಗರ್ಭಪೋಷಣಮುಂ, ಜನ್ಮಕರ್ಮಚಜಾತಕರ್ಮಮುಂ, ಅಪತ್ಯೇಷು = ಪುತ್ರರೊಳ್, ದೇಹಲಾಭಃ = ದೇಹದಪೆಡಪುಂ, ಆತ್ಮಲಾಭಯೋಃ = ತನ್ನಪಡೆಪುಮೆಂದಿವಕ್ಕೆ, ಪರಮಕಾರಣಂ = ಮಿಕ್ಕಕಾರಣವು || ಕ್ರಿಯೆಗಳಿಂಪುತ್ರಂಗೆದೇಹಪುಷ್ಟಿಯುಂದೀರ್ಘಾಯುಷ್ಯಮಕ್ಕುಮೆಂಬುದುತಾತ್ಪರ್ಯಂ || ಇಂತಪ್ಪಪುತ್ರಂರಾಜ್ಯಕ್ಕೆಯೋಗ್ಯನಲ್ಲೆಂಬುದುತ್ತರವಾಕ್ಯಂ :

 

—-

೭೦. ತಾಯ್ತಂದೆಯರದೋಷವುಮಕ್ಕಳನ್ನುಕೆಡಿಸುವುದು.

೭೧. ಸ್ತ್ರೀಪುರುಷವಂಶವಿಶುದ್ಧಿ, ಪರಸ್ಪರಪ್ರೀತಿ, ಮನೋನೈರ್ಮಲ್ಯ, ಕೇಡಿನಸೋಂಕಿಲ್ಲದಸಮಯ, ಲಕ್ಷ್ಮೀಸರಸ್ವತಿಯರಆವಾಹನಮಂತ್ರದಿಂದಪವಿತ್ರವಾದಪರಮಾನ್ನಭೋಜನ, ಇವುಗಳುಗರ್ಭಾಧಾನಸಮಯದಲ್ಲಿರುವುದಾದರೆಅಂತಹದಂಪತಿಗಳಲ್ಲಿಶ್ರೇಷ್ಠಪುರುಷನುಹುಟ್ಟುತ್ತಾನೆ.

೭೨. ಗರ್ಭಪೋಷಣೆಯೂ, ಜಾತಕರ್ಮಾದಿಗಳಆಚರಣೆಯೂ, ಪುತ್ರರುಶ್ರೇಷ್ಠದೇಹಮತ್ತುಆಯುಷ್ಯಹೊದುವುದಕ್ಕೆಮುಖ್ಯಕಾರಣಗಳು.

—-

 

[1]ನ ಎಂದು ಓದಬೇಕು. ಸದ್ಯದ ಪಾಠದಿಂದ ಅರ್ಥ ಸ್ಪಷ್ಟವಾಗುವುದಿಲ್ಲ.

[2]ಮೈ. ಚೌ. ಅರ್ಥವತೀಂ.

[3]ಚೌ. ದಲ್ಲಿ ಈ ವಾಕ್ಯವಿಲ್ಲ.

[4]ಮೈ. ನ. ಚಿರಮನುಭವತಿ ಸುಖಂ, ನಮ್ಮ ಹಸ್ತಪ್ರತಿಯಲ್ಲಿಯೂ ನ ಚಿರಮನುಭವತಿ ಎಂದಿರಬೇಕು. ಅದಿಲ್ಲರುವುದರಿಂದ ಟೀಕಾಕಾರನು ಅದನ್ನು ಬಿಟ್ಟು ಅರ್ಥಕೊಟ್ಟಿರುವುದರಿಂದ ಅವನ ಅರ್ಥವು ಅಪೇಕ್ಷಿತ ಅರ್ಥಕ್ಕೆ ವಿರುದ್ಧವಾಗಿದೆ.

[5]ಚೌ. ವಿಭ್ರಾಂತೇ.

[6]ಚೌ. ಈ ವಾಕ್ಯವಿಲ್ಲ. ಇದರ ನಂತರ ಚೌ. ದಲ್ಲಿ ಸುರಕ್ಷಿತಾ ಪಿ. ವೇಶ್ಯಾ ಸ್ವಾಂ ಪ್ರಕೈತಿಂ ನ ಮುಂಚತಿ ಎಂಬ ವಾಕ್ಯವಿದೆ. ಇದನ್ನೇ ವಿಸ್ತರಿಸಿ ಹೇಳಿದ ಒಂದು ವಾಕ್ಯವು ಮೈ. ದಲ್ಲಿದೆ. ಇವೆರಡೂ ನಮ್ಮ ಹಸ್ತಪ್ರತಿಯಿಲ್ಲಿಲ್ಲ.

[7]ಮೈ. ಅಶುಚೀನ್ಯಸ್ಥೀನಿ.

[8]ಚೌ. ದಲ್ಲಿ ಈ ವಾಕ್ಯವಿಲ್ಲ.

[9]ಮೈ. ಶರೀರಸ್ಯ ರಮಣೀಯತ್ವಂ ನ ಪುನಃ.

[10]ಮೈ. ಚೌ. ಗಳಲ್ಲಿ ಈ ವಾಕ್ಯದ ಪಾಠ ಭಿನ್ನವಾಗಿದ್ದು ಅರ್ಥವು ಬೇರೆಯಾಗಿದೆ. ಸಮ್ಮಾನಾದವಸಾಧಃ ಕುಲ್ಯಾನಾಂ ಅಪರಿಗ್ರಹಹೇತುಃ.

[11]ಮೈ. ಚೌ. ದಾಯಾದಾನ್ ವಿಕಾರಯತಿ, ಇಲ್ಲಿ ಮತ್ತೆ ಅರ್ಥಭೇದವಿದೆ.

[12]ಚೌ. ದಲ್ಲಿ ಇದು ಎರಡು ವಾಕ್ಯಗಳಲ್ಲಿ ವಿಭಿಜಿತವಾಗಿದೆ.

[13]ಮೈ. ಗೂಢಪುರುಷನಿಕ್ಷೇಪಃ ಪ್ರಣಿಧಿರ್ವಾ.

[14]ಚೌ. ದುರ್ಭೋಧೇ.

[15]ಮೈ. ಯುಕ್ತಿಭಿರ್ದುರ್ಬುದ್ಧಿಮವತಾರಯೇತ್.

[16]ಮೈ. ಚೌ. ವಿಕೃತಿಭಾಜನಂ, ಈ ಪಾಠ ಹೆಚ್ಚು ಉಪಯುಕ್ತವಾದುದು.

[17]ಮೂಲದಲ್ಲಿ ಅಪ್ಯಾನಿ ಎಂಬ ತಪ್ಪು ರೂಪವಿದೆ. ಅಪತ್ಯಾನಿ ಎಂದು ಪಕ್ಕದಲ್ಲಿ ನಂತರದ ಕಾಲದಲ್ಲಿ ತಿದ್ದಿದಂತೆ ತೋರುತ್ತದೆ. ಅಥವಾ ಇದನ್ನು ಪ್ರತಿ ಮಾಡಿದವರು ತಿದ್ದಿದ್ದರೂ ತಿದ್ದಿರಬಹುದು.