[1]ಸ್ತ್ರೀಣಾಂಸಹಜೋಗುಣೋದೋಷೋವಾಸ್ತಿಕಿಂತುನದ್ಯಃಸಮುದ್ರಮಿವಯಾದೃಶಂಪತಿಂಪ್ರಾಪ್ನುವಂತಿತಾದೃಶ್ಯೋಭವಂತಿಸ್ತ್ರೀಯಃ || ೨೭ || ೮೫೩ ||

ಅರ್ಥ : ಸ್ತ್ರೀಣಾಂ = ಸ್ತ್ರೀಯರ್ಕಳ್ಗೆ, ಸಹಜಃ = ನಿಜಮಪ್ಪ, ಗುಣಃ = ಗುಣಮುಂ, ದೋಷೋವಾ = ದೋಷಂಮೇಣ್, ನಾಸ್ತಿ = ಇಲ್ಲ, ಕಿಂತು = ಮತ್ತೆ, ನದ್ಯಃ = ತೊಱೆಗಳು, ಸಮುದ್ರಮಿವ = ಸಮುದ್ರಮೆಂತಂತೆ, ಯಾದೃಶ್ = ಎಂತಪ್ಪುದು, ಪತಿಂ = ಗಂಡನಂ, ಪ್ರಾಪ್ನುವಂತಿ = ಎಯ್ದುವರ್, ಸ್ತ್ರೀಯುಃ = ಸ್ತ್ರೀಯರ್ಕಳ್, ತಾದೃಶ್ಯೋಭವಂತಿ = ಅಂತೆಯಪ್ಪರು || ಸ್ತ್ರೀಯರ್ಗೆದೂತನಂಪೇಳ್ವುದುತ್ತರವಾಕ್ಯಂ :

ಸ್ತ್ರೀಣಾಂದೌತ್ಯಂಸ್ತ್ರೀಯಏವಕುರ್ಯುಃ || ೨೮ || ೭೪೪ ||

ಅರ್ಥ : ಸ್ತ್ರೀಣಾಂ = ಸ್ತ್ರೀಯಗ್ಗೆ, ದೌತ್ಯಂ = ದೂತತನಮಂ, ಸ್ತ್ರಿಯಏವ = ಸ್ತ್ರೀಯಕರಕಳೇ, ಕುರ್ಯುಃ = ಮಾಳ್ಪರು || ಪೆಱನಾದೊಡೆದೋಷಮಂಪೇಳ್ವುದುತ್ತರವಾಕ್ಯಂ :

ತೈರಶ್ಚೋಪಿಪುಂಯೋಗಃಸ್ತ್ರೀಯಂದೂಷಯತಿಕಿಂಪುನರ್ನಮನುಷ್ಯಃ || ೨೯ || ೮೫೫ ||

ಅರ್ಥ : ತೈರಶ್ಚೋಪಿ = ತಿರ್ಯಂಚರೊಳಗಾದ, ಪುಂಯೋಗಃ = ಪುರುಷರಕೂಟಂ, ಸ್ತ್ರೀಯಂ = ಸ್ತ್ರೀಯಂ, ದೂಷಯತಿ = ಪಳಿಯಿಸುಗು, ಮನುಷ್ಯಃ = ಮನುಷ್ಯಸಂಬಂಧಿಯಪ್ಪಮನುಷ್ಯರಕೂಟಂ, ಪುನಃ = ಮತ್ತೆ, ಕಿಂನ = ಆವದೋಷಮಂಮಾಡದು || ಸ್ತ್ರೀಯರಂಕಾವುದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

೨೭. ಸ್ತ್ರೀಯರಲ್ಲಿಸಹಜವಾದಗುಣವಾಗಲಿ, ದೋಷವಾಗಲಿಇಲ್ಲ; ಆದರೆ, ಸಮುದ್ರವನ್ನುಸೇರುವನದಿಗಳಂತೆಸ್ತ್ರೀಯರುಎಂತಹಪತಿಯನ್ನುಹೊಂದುವರೋಅಂತಹವರೇಆಗುತ್ತಾರೆ.

೨೮. ಸ್ತ್ರೀಯರಿಗೆಸ್ತ್ರೀಯರೇದೂತಿಯರಾಗಬೇಕು.

೨೯. ಜಂತುಗಳಲ್ಲಿಸಹಗಂಡುಸಂಯೋಗದಿಂದಹೆಣ್ಣುದೂಷಿತವಾಗುವದಾದರೆಮನುಷ್ಯರಸಂಬಂಧದಲ್ಲಿಹೇಳುವುದೇನಿದೆ?

—-

ವಂಶವಿರುದ್ಧ್ಯರ್ಥಮನಥ್ಥಪರಿಹಾರಾರ್ಥಂಯತ್ನೇನಸ್ತ್ರಿಯೋರಕ್ಷ್ಯಂತೇನೋಪಭೋಗಾರ್ಥಂ || ೩೦ || ೮೫೬ ||

ಅರ್ಥ : ವಂಶವಿಶುದ್ಧ್ಯರ್ಥಂ = ಅನ್ವಯಶುದ್ದಿಕಾರಣಮಾಗಿ, ಅನರ್ಥಪರಿಹಾರಾರ್ಥಂಚ = ಕೇಡಂಮಾಣಿಸಲ್ವೇಡಿಯುಂ, ಯತ್ನೇನ = ಯತ್ನದಿಂದಂ, ಸ್ತ್ರಿಯಃ = ಸ್ತ್ರೀಯರ್ಕಳು, ರಕ್ಷ್ಯಂತೇ = ರಕ್ಷಿಸಲ್ಪಡುವರು, ಉಪಭೋಗಾರ್ಥಂ = ಉಪಭೋಗಂಕಾರಣಮಾಗಿ, ನ = ರಕ್ಷಿಸಲ್ಪಡುವರಲ್ಲ ||

[2]ಯಥಾಕಾಮಂಕಾಮಿನೀನಾಂ[3]ಸಂಗ್ರಹಃಪರಮನೀರ್ಷ್ಯಾವಾನ್[4]ಕಲ್ಯಣಾವಹಃಪ್ರಕ್ರಮಃ || ೩೧ || ೮೫೭ ||

ಅರ್ಥ : ಯಥಾಕಾಮಂ = ತನ್ನಕಾಮಕ್ಕೆತಕ್ಕಹಾಂಗೆ, ಕಾಮಿನೀನಾಂ = ಸ್ತ್ರೀಯರ, ಸಂಗ್ರಹಃ = ಸಂಗ್ರಹವು, ಪರಂ = ಪಿರಿದು, ಅನೀರ್ಷ್ಯಾವಾನ್ = ಈರ್ಷ್ಯೆಇಲ್ಲದೆಇರುವ, ಕಲ್ಯಾಣಾವಹಃ = ಲೇಸನುಮಾಡುಹವು, ಪ್ರಕ್ರಮಃ = ಪ್ರಕ್ರಮವು ||

ಅದೌವಾರಿಕೇದ್ವಾರೇಕೋನಾಮಪ್ರವಿಶತಿ || ೩೨ || ೮೫೮ ||

ಅರ್ಥ : ಅದೌವಾರಿಕೇ = ದೌವಾರಿಕನಿಲ್ಲದ, ದ್ವಾರೇ = ಬಾಗಿಲಲ್ಲಿ, ಕೋನಾಮ = ಆವನೆಯೂ, ನಪ್ರವಿಶತಿ = ಹೋಗನು ||

[5]ಭೋಜನಭಾಜನವತ್ಸರ್ವೆಸಮಾನಾಃಪಣ್ಯಾಂಗನಾಃಕೋನಾಮತಾಸುಹರ್ಷಾಮರ್ಷಯೋರವಸರಃ || ೩೩ || ೮೫೯ ||

ಅರ್ಥ : ಭೋಜನಭಾಜನವತ್ = ಉಂಬತಳಿಗೆಯಹಾಂಗೆ, ಪಣ್ಯಾಂಗನಾಃ = ಸೂಳೆಯರು, ಸರ್ವಸಮಾನಾಃ = ಸರ್ವರಿಗೆಸಮಾನರು, ತಾಸು = ಅವರಲ್ಲಿ, ಹರ್ಷಾಮರ್ಷಯೋಃ = ಸಂತೋಷಕೋಪಂಗಳಿಗೆ, ನಾಮ = ನಿಶ್ಚಯದಿಂದ, ಅವಸರಃ = ಪ್ರಸ್ತುತವು, ಕಃ = ಆವುದು || ಇಂತಪ್ಪಸ್ತ್ರೀಯಂಸ್ತ್ರೀಯರ್ಗೆಕಾಪುಮಾಳ್ಪುದೆಂಬುದುತ್ತರವಾಕ್ಯಂ :

—-

೩೦. ವಂಶವಿಶುದ್ಧಿಗಾಗಿಯೂಅನರ್ಥಪರಿಹಾರಕ್ಕಾಗಿಯೂಸ್ತ್ರೀಯರನ್ನುರಕ್ಷಿಸಬೇಕು, ಭೋಗಾರ್ಥವಾಗಿಯಲ್ಲ.

೩೧. ಕಾಮಕ್ಕೆತಕ್ಕಂತೆಬೇಕೆನಿಸಿದಷ್ಟುಮಂದಿಕಾಮಿನಿಯರನ್ನುಸ್ವೀಕರಿಸಬಹುದು. ಆದರೆಈರ್ಷ್ಯೆಯಲ್ಲದಪ್ರವೃತ್ತಿಯುಕಲ್ಯಾಣಕರವಾಗಿರುತ್ತದೆ.

೩೨. ಕಾಯುವವನಿಲ್ಲದಬಾಗಿಲಲ್ಲಿಯಾರುತಾನೆಪ್ರವೇಶಿಸುವುದಿಲ್ಲ?

೩೩. ಊಟದತಟ್ಟೆಯಂತೆಸೂಳೆಯರುಸರ್ವರಿಗೂಸಮಾನರು. ಅವರಲ್ಲಿಸಂತೋಷಕ್ಕಾಗಲಿಅಸೂಯೆಗಾಗಲಿಅವಕಾಶವೆಲ್ಲಿದೆ?

—-

[6]ಮಾತೃವ್ಯಜನವಿಶುದ್ಧಾಃರಾಜೋದವಸಿತೋಪಸ್ಥಾಯಿನ್ಯಃಸ್ತ್ರಿಯಃಸಂಭಕ್ತವ್ಯಾಃ || ೩೪ || ೮೬೦ ||

ಅರ್ಥ : ಮಾತೃವ್ಯಜನವಿಶುದ್ಧಾಃ = ತಾಯದೆಸೆಯಜನಂಗಳೊಳ್ಶುದ್ಧೆಯರಪ್ಪ, ಸ್ತ್ರಿಯಃ = ಸ್ತ್ರೀಯರ್ಕಳ್, ರಾಜಾ = ಅರಸರ, ಉದವಸಿತ = ಮನೆಯೊಳ್, ಉಪಸ್ಥಾಯಿನ್ಯಃ = ಇರ್ಪರ್ಕಳ್, ಸಂಭಕ್ತವ್ಯಾ = ಬೇರ್ಕೆಯಿಂದಿರಿಸೆಪಡೆವರು || ತಾಯದೆಸೆಯವರುಸ್ತ್ರೀಯರೊಳೊಂದಾಗದೆಕಾವರೆಂಬುದುತಾತ್ಪರ್ಯಂ || ಅರಸನರಸಿಯರಮನೆಗಂಪೋಗಲಾಗದೆಂಬುದಕ್ಕೆದೃಷ್ಟಾಂತಮ್ಪೇಳ್ವುದುತ್ತರವಾಕ್ಯಂ :

ದರ್ದುರಸ್ಯಸರ್ಪಬಿಲಪ್ರವೇಶಸ್ಯಇವಸ್ತ್ರೀಗೃಹಪ್ರವೇಶೋಮಹೀಪತೀನಾಂ || ೩೫ || ೮೬೧ ||

ಅರ್ಥ : ದರ್ದುರಸ್ಯ = ಕಪ್ಪೆಗೆ, ಸರ್ಪಬಿಲಪ್ರವೇಶಇವ = ಹಾವಿನಬಿಲನಂಪುಗುಹಮೆಂತಂತೆ, ಸ್ತ್ರೀಗೃಹಪ್ರವೇಶಃ = ಸ್ತ್ರೀಯಮನೆಯಪುಗುವುದು, ಮಹೀಪತೀನಾಂ = ಅರಸುಗಳ್ಗೆಮಂತೇಪೊಲ್ಲ || ಸ್ತ್ರೀಯರಂತನ್ನಲ್ಲಿಗೆತರಿಸುವುದೆಂಬುದುತಾತ್ಪರ್ಯಂ || [7]ಸ್ತ್ರೀಯರ್ಕಳನಧಿಕಾರಿಗಳಂಮಾಡಲಾಗದೆಂದುಪೇಳ್ವುದುತ್ತರವಾಕ್ಯಂ :

ಸ್ತ್ರೀಗೃಹದಾಯಾತಂ[8]ಕಿಂಚಿತ್ಸ್ವಯಂಅನುಭವನೀಯಂ || ೩೬ || ೮೬೨ ||

ಅರ್ಥ : ಸ್ತ್ರೀಗೃಹಾದಾಯಾತಂ = ಸ್ತ್ರೀಯರಮನೆಯಿಂಬಂದುದಂಕಿಂಚಿತ್ಏನನಾದೊಡಂ, ಸ್ವಯಂ = ತನ್ನಿಂದಂ, ನಅನುಭವನೀಯಂ = ಅನುಭವಿಸಲ್ಪಡದು ||

—-

೩೪.ತಾಯಿಯಕಡೆಯವರಾಗಿ, ಪರಿಶುದ್ಧರಾದತನ್ನಅರಮನೆಯಲ್ಲಿಯೇನೆಲಸಿರುವಸ್ತ್ರೀಯರೊಂದಿಗೆಸುಖಿಸಬಹುದು.

೩೫. ರಾಜನುಸ್ತ್ರೀಗೃಹವನ್ನುಪ್ರವೇಶಿಸುವುದುಕಪ್ಪೆಯುಹಾವಿನಬಿಲವನ್ನುಹೊಕ್ಕಂತೆ.

೩೬. ಸ್ತ್ರೀಗೃಹದಿಂದಬಂದಯಾವವಸ್ತುವನ್ನೂರಾಜನುತಾನೇಅನುಭವಿಸಬಾರದು.

—-

ನಾಪಿಸ್ವಯಮನುಭವನೀಯೇಷುಸ್ತ್ರಿಯೋನಿಯೋಕ್ತವ್ಯಾಃ || ೩೭ || ೮೬೩ ||

ಅರ್ಥ : ಸ್ವಯಂ = ತನ್ನಿಂದಂ, ಅನುಭವನೀಯೇಷು = ಅನುಭವಿಸಲ್ಪಡುವವಸ್ತುಗಳೊಳ್, ಸ್ತ್ರಿಯಃ = ಸ್ತ್ರೀಯರ್ಕಳ್, ನಾಪಿನಿಯೋಕ್ತವ್ಯಾಃ = ಅಧಿಕಾರಿಗಳಂಮಾಡೆಪಡರು || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ಸಂವನನಂಸ್ವಾತಂತ್ರ್ಯಂವಾಭಿಲಷ್ಯಂತ್ಯಃ[9]ಸ್ತ್ರಿಯಃಕಿಂನಾಮಕುರ್ವಂತಿ || ೩೮ || ೮೬೪ ||

ಅರ್ಥ : ಸಂವನನಂ = ತನಗೆವಶಮಾಳ್ಪುದುಮಂ (ತನ್ನವಶ್ಯವನು), ಸ್ವಾತಂತ್ರ್ಯಂವಾ = ತಮ್ಮಸ್ವತಂತ್ರತೆಯುಮಂ, ಅಭಿಲಷ್ಯಂತ್ಯಃ = ಬಯಸುತ್ತಿದ್ದ, ಸ್ತ್ರಿಯಃ = ಸ್ತ್ರೀಯರ್ಕಳ್, ಕಿಂನಾಮ = ಏನಂ, ನಕುವ್ವಂತಿ = ಮಾಡರು || ಸ್ತ್ರೀಯರೊಲ್ದುಮುಳಿದಕೆಡಿಸುವರೆಂಬುದುತಾತ್ಪರ್ಯಂ || ಅದಕೈದುಕಥೆಯಂಪೇಳ್ವುದುತ್ತರವಾಕ್ಯಂ :

[10]ಶ್ರೂಯತೇಹ್ಯಾತ್ಮನಃಕಿಲಸ್ವಚ್ಛಂದವೃತ್ತಿಮಾತ್ಮನಇಚ್ಛಂತೀವಿಷದೂಷಿತಮದ್ಯಗಂಡೂಷೇಣಮಣಿಕುಂಡಲಾಮಹಾದೇವೀಯವನೇಷುನಿಜತನೂಜರಾಜ್ಯಾರ್ಥಮಜರಾಜಂ[11]ರಾಜಾನಂಜಘಾನೇತಿ|| ೩೯ || ೮೬೪ ||

ಅರ್ಥ : ಆತ್ಮನಃ = ತನ್ನ, ಸ್ವಚ್ಛಂದವೃತ್ತಿಂ = ತನ್ನಿಚ್ಛೆಯಾಟಮುಂ, ಇಚ್ಛಂತಿ = ಬಯಸುತ್ತಿರ್ದಳಾಗಿ, ವಿಷದೂಷಿತಮದ್ಯಗಂಡೂಷೇಣ = ವಿಷದೊಳ್ಕೂಡಿದಕಳ್ಳಂ

ಮುಕ್ಕುಳುಸಿಯೇರುವುದಱೆಂ, ಮಣಿಕುಂಡಲಾ = ಮಣಿಕುಂಲೆಯೆಂಬ, ಮಹಾದೇವೀ = ಪಿರಿಯರಸಿ, ಯವನೇಷು = ಯವನಮೆಂಬನಾಡೊಳ್, ನಿಜತನೂಜರಾಜ್ಯಾರ್ಥಂ = ತನ್ನಮಗನರಾಜ್ಯಂಕಾರಣಮಾಗಿ, ಅಜರಾಜಂಅಜರಾಜನೆಂಬ, ರಾಜಾನಂ = ತನ್ನರಸನಂ, ಜಘಾನೇತಿ = ಕೊಂದಳೆಂದಿತು, ಶ್ರೂಯತೇಹಿಕಿಲ = ಕೇಳಲ್ಡಟ್ಟುದಲ್ತೆ ||

—-

೩೭. ರಾಜನುತಾನುಅನುಭವಿಸಬೇಕಾದವಸ್ತುಗಳನ್ನುಸಿದ್ಧಪಡಿಸುವುದಕ್ಕೆಸ್ತ್ರೀಯರನ್ನುನಿಯಮಿಸಕೂಡದು.

೩೮. ವಶೀಕರಣವನ್ನೂತಮ್ಮಸ್ವಾತಂತ್ರ್ಯವನ್ನೂಇಚ್ಛಿಸುವಸ್ತ್ರಿಯರುಏನನ್ನುತಾನೆಮಾಡರು?

೩೯೪೩. ತನ್ನಸ್ವಚ್ಛಂದವೃತ್ತಿಯನ್ನುಬಯಸುತ್ತಿದ್ದಮಣಿಕುಂಡಲಾಎಂಬರಾಣಿಯು, ಯವನರರಾಜ್ಯದಲ್ಲಿತನ್ನಮಗನಿಗೆರಾಜ್ಯವನ್ನುಸಂಪಾದಿಸಿಕೊಳ್ಳುವುದಕ್ಕಾಗಿ, ವಿಷಪೂರಿತಮದ್ಯವನ್ನುಕೊಟ್ಟುಅಜನೆಂಬರಾಜನನ್ನುಕೊಂದಳು; ವಸಂತಮತಿಯುವಿಷಬೆರೆತಅಲಕ್ತಕವನ್ನುಲೇಪಿಸಿಕೊಂಡಿದ್ದತುಟಿಯಿಂದಶೂರಸೇನದೇಶದಸುರತವಿಲಾಸನನ್ನುಕೊಂದಳು. ವಿಷವನ್ನುಪೂಸಿದಒಡ್ಡಾಣದಮಣಿಯಿಂದವೃಕೋದರಿಯುದಶಾರ್ಣವದೇಶದಮವನಾರ್ಣವವನ್ನುಕೊಂದಳು. ಚೂಪಾದಕಟ್ಟುಳ್ಳಕನ್ನಡಿಯಿಂದಮದಿರಾಕ್ಷಿಯುಮಗಧರಾಜ್ಯದಮನ್ಮಥವಿನೋದನನ್ನುಕೊಂದಳು. ಜಡೆಯಲ್ಲಿಮುಚ್ಚಿಟ್ಟಿದ್ದತೆಳ್ಳನೆಯಕೈಚೂರಿಯಿಂದಚಂದ್ರರಸಾಎಂಬಾಕೆಪಾಂಡ್ಯದೇಶದಮುಂಡಿತನೆಂಬಅರಸನನ್ನುಕೊಂದಳುಎಂದುಕೇಳಿಬಂದಿದೆ.

—-

ವಿಷಾಲಕ್ತಕದಿಗ್ಧೇನಾಧರೇಣವಸಂತಮತಿಸ್ಸೂರಸೇನೇಷುಸುರತವಿಲಾಸಂ || ೪೦ || ೮೬೬ ||

ಅರ್ಥ : ವಿಷಾಲಕ್ತಕದಿಗ್ದೇನ = ವಿಷದೋಳ್ಕೂಡಿದಲತೆಗೆಯಂಮಾಡಿದ, ಅಧರೇಣ = ಓಷ್ಠದಿಂ, ವಸಂತಮತಿಃ = ವಸಂತಮತಿಯೆಂಬರಸಿ, ಸೂರಸೇನೇಷು = ಸೂರಸೇನಮೆಂಬನಾಡೊಳ್, ಸುರತವಿಲಾಸಂ = ಸುರತವಿಲಾಸನೆಂಬವನಂಕೊಂದಳೆಂದು ||

ವಿಷೋಪಲಿಪ್ತೇನಮೇಖಲಾಮಣಿನಾವೃಕೋದರೀದಶಾರ್ಣವೇಷುಮದಣಾರ್ಣವಂ || ೪೧ || ೮೬೭ ||

ಅರ್ಥ : ವಿಷೋಪಲಿಪ್ತೇನ = ನಂಜಿನಿಂಪೂಸಿದ, ಮೇಖಲಾಮಣಿನಾ = ಮೇಖಲೆಯೆಂಬಕಟಿಸ್ಥಾನದಾಭರಣದಮಾಣಿಕ್ಯದಿಂ, ವೃಕೋದರೀ = ವೃಕೋದರಿಎಂಬರಸಿ, ದಶಾರ್ಣವೇಷು = ದಶಾರ್ಣವಮೆಂಬನಾಡೊಳ್, ಮದನಾರ್ಣವಂ = ಮದನಾರ್ಣವನೆಂಬರಸನಂಕೊಂದಳೆಂದು ||

ನಿಶಿತನೇಮಿನಾಮುಕುರೇಣಮದಿರಾಕ್ಷೀಮಗಧೇಷುಮನ್ಮಥವಿನೋದಂ || ೪೨ || ೮೬೮ ||

ಅರ್ಥ : ನಿಶಿತನೇಮಿನಾ = ಕುರಿತವಾದವಟ್ಟಿಯನುಳ್ಳ, ಮುಕುರೇಣ = ಕನ್ನಡಿಯಿಂದ, ಮದಿರಾಕ್ಷೀ = ಮದಿರಾಕ್ಷಿಎಂಬರಸಿ, ಮಗಧೇಷು = ಮಗಧೆಯೆಂಬದೇಶದೊಳ್, ಮನ್ಮಥವಿನೋದಂ = ಮನ್ಮಥವಿನೋದನೆಂಬರಸನಂಕೊಂದಳೆಂದು ||

ಕಬರೀನಿಗೂಢೇನಾಸಿತಪತ್ರೇಣಚಂದ್ರರಸಾಪಾಡ್ಯೇಷುಮುಂಡಿತಮಿತಿ[12] || ೪೩ || ೮೬೯ ||

ಅರ್ಥ : ಕಬರೀನಿಗೂಢೇನ = ಮುಡಿಯೊಳಡಂಗಿದ, ಚಂದ್ರಸಾ = ಚಂದ್ರರಸಿಎಂಬಳು, ಅಸಿತಪತ್ರೇಣ = ತೆಳ್ಳಿತ್ತಪ್ಪಡ್ಡಾಯುಧದಿಂ, ಪಾಂಡ್ಯೇಷು = ಪಾಂಡ್ಯದೇಶದೊಳ್, ಮುಂಡಿತಮಿತಿ = ಮುಂಡಿತನೆಂಬರಸನಂಕೊಂದಳೆಂದು, ಶ್ರೂಯತೇಹಿ = ಕೇಳಲ್ಪಟ್ಟದು | ಸ್ತ್ರೀಯರನಿಂತಪ್ಪರಲ್ಲಿಮುಖ್ಯರಂಮಾಳ್ಪುದೆಂಬುದುತ್ತರವಾಕ್ಯಂ :

ಅಮೃತರಸವಾಪ್ಯ[13]ಇವಕ್ರೀಡಾಸುಖೋಪಕರಣಂಸ್ತ್ರಿಯಸ್ತಾಸಾಂಕಾರ್ಯಾಕಾರ್ಯವಿಲೋಕನೇಚಾಧಿಕಾರಃ[14] || ೪೪ || ೮೭೦ ||

ಅರ್ಥ : ಅಮೃತರಸವಾಪ್ಯಇವ = ಅಮೃತರಸದಬಾವಿಯಂತೆ, ಕ್ರೀಡಾಸುಖೋಪಕರಣಂ = ರಮಿಸುವಸುಖಕ್ಕುಪಕರಣ, ಸ್ತ್ರಿಯಃ = ಸ್ತ್ರೀಯರ್ಕಳ್, ಕಾಯಾಕಾರ್ಯಾವಿಲೋಕನೇ = ಕಾಯಾಕಾರ್ಯಂಗಳನೊಳ್ಪಲ್ಲಿ, ತಾಸಾಂ = ಅವರ್ಗೆ, ಕೋ = ಆಗುವು, ಅಧಿಕಾರಃ = ಅಧಿಕಾರಂ ||

ಅಪತ್ಯಪೋಷಣೇಗೃಹಕರ್ಮಣಿಶರೀರಸಂಸ್ಕಾರೇಭರ್ತುಃಶಯನಾವಸರೇಸ್ತ್ರೀಣಾಂನಾಧಿಕಾರಸ್ವಾತಂತ್ರ್ಯಮನ್ಯತ್ರ || ೪೫ || ೮೭೧ ||

ಅರ್ಥ : ಅಪತ್ಯಪೋಷಣೇ = ಮಕ್ಕಳಸಾಕುವಲ್ಲಿಯುಂ, ಗೃಹಕರ್ಮಣಿ = ಮನೆಗೆಲಸದೊಳಂ, ಶರೀರಸಂಸ್ಕಾರೇ = ಶರೀರಮಂಯತ್ನಾಳ್ಪಲ್ಲಿಯುಂ, ಭರ್ತುಃ = ಪುರುಷನ, ಶಯನಾವಸರೇಚ = ನಿದ್ರೆಯೆಡೆಯೊಳಂ, ಸ್ತ್ರೀಣಾಂ = ಸ್ತ್ರೀಯರ್ಗೆ, ಅಧಿಕಾರಃ = ಒಡೆತನಂ, ಅನ್ಯತ್ರ = ಪೆಱವೆಡೆಯೊಳ್, ನಸ್ವಾತಂತ್ರ್ಯಂ = ಸ್ವತಂತ್ರತೆಇಲ್ಲ || ಸ್ತ್ರೀಯರ್ಗಾದೊಡೆದೋಷಮಂಪೇಳ್ವುದುತ್ತರವಾಕ್ಯಂ :

—-

೪೪. ಅಮೃತರಸದಭಾವಿಯಂತೆಸ್ತ್ರೀಯರುಕ್ರೀಡೆಯಸುಖಕ್ಕೆಸಾಧನಮಾತ್ರರು, ಕಾರ್ಯಾಕಾರ್ಯಗಳನ್ನುಪರೀಕ್ಷಿಸುವಲ್ಲಿಅವರಿಗೆಅಧಿಕಾರವೇನಿದೆ?

೪೫.ಮಕ್ಕಳನ್ನುಸಾಕುವಲ್ಲಿಯೂ, ಮನೆಗೆಲಸಗಳಲ್ಲಿಯೂ, ಶರೀರವನ್ನುಅಲಂಕರಿಸಿಕೊಳ್ಳುವುದರಲ್ಲಿಯೂ, ಗಂಡನಶಯನಕ್ಕೆಸಂಬಂಧಿಸಿದಹೊರತಾಗಿಉಳಿದೆಡೆಗಳಲ್ಲಿಸ್ತ್ರೀಯರಿಗೆಅಧಿಕಾರ, ಸ್ವಾತಂತ್ರ್ಯವಿಲ್ಲ.

—-

ಅತಿಪ್ರಸಕ್ತಂಹಿಸ್ತ್ರೀಷುಸ್ವಾತಂತ್ರ್ಯಂಕರಪತ್ರಮಿವಪತ್ಯುರ್ನಾವಿದಾರ್ಯಹೃದಯಂವಿಶ್ವಾಮ್ಯುತಿ || ೪೬ || ೮೭೨ ||

ಅರ್ಥ : ಸ್ತ್ರೀಷು = ಸ್ತ್ರೀಯರೊಳ್, ಸ್ವಾತಂತ್ರ್ಯಂ = ತಾವೇಮುಖ್ಯಮಾರ್ಗಿರ್ಪನೆಗಳ್ತೆ, ಅತಿಪ್ರಸಕ್ತಂ = ಕರಂಮೇಳಿಸಿದುದು, ಹಿ= ನಿಶ್ಚಯದಿಂ, ಕರಪತ್ರಮಿವ = ಕರಗಸದಂತೆ, ಪತ್ಯುಃ = ಪುರುಷನ, ಹೃದಯಂ = ಎರ್ದೆಯಂ, ಅವಿದಾರ್ಯ = ಇಬ್ಬಾಗಂಗೆಯ್ಯದೆ, ನವಿಶ್ರಾಮ್ಯತಿ = ಮಾಣದು (ನಿಲ್ಲದು) || ಅದಕ್ಕೆಮತ್ತಂದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಸ್ತ್ರೀವಶಃಪುರುಷಃಸರಿತ್ಪ್ರವಾಹಪತಿತಪಾದಪಇವಚಿರಂನಂದತಿ || ೪೭ || ೮೭೩ ||

ಅರ್ಥ : ಸ್ತ್ರೀವಶಃ = ಸ್ತ್ರೀಇಚ್ಛೆಯಿಂನಡೆವ, ಪುರುಷಃ = ಪುರುಷಂ, ಸರಿತ್ಪ್ರವಾಹಪತಿತಪಾದಪಇವ = ತೊಱೆಯಪೊನಲೊಳ್ಬಿರ್ದಮರನಂತೆ, ಚಿರಂ = ಪಲಕಾಲಂ, ನನಂದತಿ = ಪೆರ್ಚಂ || ಸ್ತ್ರೀಪುರುಷನವಶಮಾಗಲೊಳ್ಪುಂಪೇಳ್ವುದುತ್ತರವಾಕ್ಯಂ :

ಪುರುಷಮುಷ್ಟಿಸ್ಥಾಸ್ತ್ರೀಖಡ್ಗಯಷ್ಟಿರಿವಕಮುತ್ಸವಂನಜನಯತಿ || ೪೮ || ೮೭೪ ||

ಅರ್ಥ : ಪುರುಷಮುಷ್ಟಿಸ್ಥಾ = ಪುರುಷನಪಿಡಿಯೊಳಗಿರ್ದ, ಸ್ತ್ರೀ = ಪೆಂಡತಿ, ಖಡ್ಗಯಷ್ಟಿರಿವ = ಒಳ್ಳಿತಪ್ಪಖಡ್ಗದಂತೆ, ಕಮುತ್ಸವಂ = ಆವಉತ್ಸಾಹಮಂ, ನಜನಯತಿ = ಪುಟ್ಟಿಸಳು || ಸ್ತ್ರೀಯರನತಿಪ್ರೌಢೆಯರಂಮಾಡಲಾಗದೆಂಬುದುತ್ತರವಾಕ್ಯಂ :

ನಾತೀವಸ್ತ್ರಿಯೋವ್ಯುತ್ಪಾದನೀಯಾಃಸ್ವಭಾವಸುಭಗೋಪಿಶಾಸ್ತ್ರೋಪದೇಶಃಸ್ತ್ರೀಷುಶಸ್ತ್ರೇಷುಪಯೋಲವಇವಕಾಂವಿಷಮತಾಂಪ್ರತಿಪದ್ಯತೇ || ೪೯ || ೮೭೫ ||

ಅರ್ಥ : ಅತೀವ = ಕರಂ, ನವ್ಯುತ್ಪಾದನೀಯಾಃ = ಪ್ರೌಢೆಯರುಮಾಡೆಪಡರು, ಸ್ತ್ರಿಯಃ = ಸ್ತ್ರೀಯರ್ಕಳ್, ಸ್ವಭಾವಸುಭಗೋಪಿ = ನಿಜದಿಂದೊಳ್ಳಿತ್ತಾದೊಡಂ, ಶಾಸ್ತ್ರೋಪದೇಶಃ = ಶಾಸ್ತ್ರದಕಲ್ಪೆ, ಸ್ತ್ರೀಷು = ಸ್ತ್ರೀಯರೊಳ್, ಶಸ್ತ್ರೇಷು = ಸುರಗಿಗಳೊಳ್, ಪಯೋಲವಇವ = ನೀರೋಟ[15]ದನೀರಂತೆ, ಕಾಂ = ಆವ, ವಿಷಮತಾಂ = ಪೊಲ್ಲದಪ್ಪಸ್ವರೂಪಮಂ, ನಪ್ರತಿಪದ್ಯತೇ = ಪೊರ್ದಳ್ || ತಕ್ಕಂದದಿಂದಶಿಕ್ಷಿಸುವುದೆಂಬುದುತಾತ್ಪರ್ಯಂ || ಸೂಳೆಯರ್ಗಿಂತಪ್ಪದೋಷಮಂಪೇಳ್ವುದುತ್ತರವಾಕ್ಯಂ :

—-

೪೬. ಸ್ತ್ರೀಯರಿಗಿತ್ತಅತಿಯಾದಸ್ವಾತಂತ್ರ್ಯವುಗರಗಸದಂತೆಪತಿಯಹೃದಯವನ್ನುಸೀಳಿಹಾಕದೆಬಿಡದು.

೪೭. ಸ್ತ್ರೀಯಶವರ್ತಿಯಾದಪುರುಷನುನದೀಪ್ರವಾಹದಲ್ಲಿಸಿಕ್ಕಿಬಿದ್ದಮರದಂತೆಬಹುಕಾಲನೆಮ್ಮದಿಯಿಂದಇರಲಾರನು.

೪೮. ಗಂಡನಹಿಡಿತದಲ್ಲಿರುವಸ್ತ್ರೀಯುಕೈಯಲ್ಲಿಹಿಡಿದಕತ್ತಿಯಂತೆ, ಯಾವಉತ್ಸಾಹವನ್ನು, (ಗೊಂದಲವನ್ನು) ಉಂಟುಮಾಡಳು?

೪೯. ಸ್ತ್ರೀಯರನ್ನುಹೆಚ್ಚುವಿದ್ಯಾವತಿಯರನ್ನಾಗಿಮಾಡಬಾರದುಏಕೆಂದರೆಸ್ತ್ರೀಯುಸಹಜವಾಗಿಮೃದುಸ್ವಭಾವವುಳ್ಳವಳಾದರೂಶಸ್ತ್ರವನ್ನುಮಸೆಯಲುಹಾಕುವನೀರಿನಿಂದಹರಿತಗೊಳ್ಳುವಂತೆಶಾಸ್ತ್ರೋಪದೇಶವುಸ್ತ್ರೀಯರಲ್ಲಿವಿಷಮತೆಯನ್ನುಂಟುಮಾಡುತ್ತದೆ.

—-

 

[1]ಚೌ. ದಲ್ಲಿ ಮತ್ತು ಮುಂದಿನ ವಾಕ್ಯವು ಒಂದರಲ್ಲೇ ಅಡಕವಾಗಿವೆ.

[2]ಚೌ. ದಲ್ಲಿ ಮತ್ತು ಮುಂದಿನ ವಾಕ್ಯವು ಒಂದರಲ್ಲೇ ಅಡಕವಾಗಿವೆ.

[3]ಮೈ. ಕಾಮಿನೀನಾಂ ವೇಶ್ಯಾನಾಂ.

[4]ಚೌ. ಪರಮನರ್ಥವಾನಕಲ್ಯಾಣ್ಯಾವಹಃ, ಈ ಪಾಠವು ಅರ್ಥವನ್ನೇ ಸೂಚಿಸುತ್ತದೆ.

[5]ಚೌ. ಭೋಜನವತ್.

[6]ಮೈ. ಚೌ. ಮಾತ್ರಭಿಜನ.

[7]ಈ ವಾಕ್ಯಕ್ಕೂ ಮುಂದಿನ ವಾಕ್ಯದ ವಿಷಯಕ್ಕೂ ಸಂಬಂಧವಿಲ್ಲ.

[8]ಮೈ. ಆಯಾತಮಾಪದ್ಯಪಿ.

[9]ಮೈ. ಚಾನುಭವಂತ್ಯಃ.

[10]ಮೈ. ಈ ಮತ್ತು ಮುಂದಿನ ನಾಲ್ಕು ವಾಕ್ಯಗಳು ಒಂದರಲ್ಲೇ ಅಡಕವಾಗಿವೆ.

[11]ಮೈ. ಅಜ(ಙ್ಗ)ರಾಜಂ, ಚೌ. ರಾಜನಮಙ್ಗಂ.

[12]ಮೈ. ಪುಂಡರೀಕಂ ಚೇತಿ.

ಈ ವಾಕ್ಯಗಳಲ್ಲಿ ಐದು ಘಟನೆಗಳನ್ನು ಉಲ್ಲೇಖಿಸಲಾಗಿದೆ. ಇಲ್ಲಿ ಹೆಸರಿಸಲಾದ ದೇಶಗಳು ಐತಿಹಾಸಿಕವಿದ್ದರೂ. ಈ ಘಟನೆಗಳ ಐತಿಹಾಸಿಕತೆಯನ್ನು ನಿರ್ಧರಿಸುವುದು ಕಠಿಣವಿದೆ. ಮೊದಲನೆಯದರಲ್ಲಿ ಮಣಿಕುಂಡಲೆಯೆಂಬ ರಾಣಿಯು, ತನ್ನ ಮಗನಿಗಾಗಿ ರಾಜ್ಯವನ್ನು ಪಡೆಯುವುದರ ಸಲುವಾಗಿ ಯವನ ದೇಶದಲ್ಲಿ ಅಜರಾಜನೆಂಬವನನ್ನು ವಿಷದಿಂದ ಕೂಡಿದ ಮದ್ಯದ ಮುಖಾಂತರ ಕೊಂದಳೆಂದು ಹೇಳಿದೆ. ಪಾಠಾಂತರದಲ್ಲಿ ಸೂಚಿಸಿದಂತೆ ಅಜರಾಜನ ಬದಲಾಗಿ ಅಂಗರಾಜ ಎಂಬ ಪಾಠವಿದೆಯಾದರೂ ಈ ಅಂಗರಾಜನೆಂಬುವನು ಯಾರು ಎಂದು ನಿರ್ಧರಿಸಲಾಗುವುದಿಲ್ಲ. ಮತ್ತು ಇದು ನಡೆದುದು ಯವನದೇಶದಲ್ಲಿ ಎಂದು ಇದೆ. ಎರಡನೆಯರದಲ್ಲಿ ವಸಂತಮತಿ ಎಂಬಾಕೆ ತುಟಿಗೆ ವಿಷಯುಕ್ತ ಬಣ್ಣವನ್ನು ಲೇಪಿಸಿಕೊಂಡು ಶೂರಸೇನ ಅರಸ ಸುರತವಿಲಾಸನನ್ನು ಕೊಂದ ಕತೆಯಿದೆ. ಮೂರನೆಯದರಲ್ಲಿ ವೃಕೋದರಿ ಎಂಬಾಕೆ ಟೊಂಕದ ಪಟ್ಟಿಯಲ್ಲಿಯ ವಿಷಯುಕ್ತ ಮಣಿಯಿಂದ ದಶಾರ್ಣವದೇಶದ ಮದನಾರ್ಣವನನ್ನು ಕೊಂದಳೆಂದು ಹೇಳಿದೆ. ದಶಾರ್ಣವವು ಈಗಿನ ಮಧ್ಯಪ್ರದೇಶದ ಒಂದು ಭಾಗವಾಗಿತ್ತೆಂದು ಹೇಳಲಾಗುತ್ತದೆ. ನಾಲ್ಕನೆಯದರಲ್ಲಿ ಮದಿರಾಕ್ಷಿಯೆಂಬುವಳು ಮಗಧದೇಶದಲ್ಲಿ ಮನ್ಮಥವಿನೋದನೆಂಬುವನನ್ನು ಕನ್ನಡಿಯ ಹರಿತವಾದ ಅಂಚಿನಿಂದ ಕೊಂದಳೆಂದು ಹೇಳಿದೆ. ಮಗಧವು ಇಂದಿನ ಬಿಹಾರ ರಾಜ್ಯದ ಭಾಗವಾಗಿತ್ತೆಂಬುದು ವಿದಿತವಿದೆ. ಐದನೆಯದರಲ್ಲಿ ಚಂದ್ರಸಾ ಎಂಬುವಳು ತನ್ನ ಮುಡಿಯಲ್ಲಿ ಬಚ್ಚಿಟ್ಟುಕೊಂಡು ತೆಳ್ಳಗಿನ ಖಡ್ಗಗದಿಂದ ಪಾಂಡ್ಯದೇಶದ ಮುಂಡಿತನೆಂಬ ಅರಸನನ್ನು ಕೊಂದಳೆಂದು ಹೇಳಿದೆ. ಇಲ್ಲಿ ಪಾಂಡ್ಯದೇಶವೆಂಬುದು ಪ್ರಸಿದ್ಧವಿದೆ. ಆದರೆ ಅಲ್ಲಿಯ ಮುಂಡಿತ ಎಂಬ ಅರಸನಾರೆಂಬದಾಗಲಿ ಅಥವಾ ಪಾಠಾಂತರದಲ್ಲಿ ಸೂಚಿತನಾದ ಪುಂಡಲೀಕನೆಂಬ ಹೆಸರಿನ ಅರಸನಾರೆಂಬುದಾಗಲಿ ತಿಳಿಯುವುದಿಲ್ಲ.

[13]ಮೈ. ಅಮೃತಸುರಾವಾಪ್ಯ.

[14]ಕೋsಧಿಕಾರಃ ಎಂದು ಓದಬೇಕು.

[15]ನೀರೂಟದ ನೀರಂತೆ = ಶಸ್ತ್ರವನ್ನು ಮಸೆಯಲು ಹಾಕಿದ ನೀರಿದ ಹನಿ, ಹಾಕಿದ ನೀರೂ ಸಹ ಶಸ್ತ್ರವನ್ನು ಹರಿತಗೊಳಿಸುತ್ತದೆ. ಅದೇ ರೀತಿಯಾಗಿ ಹೆಚ್ಚು ಕಲಿಸುವದರಿಂದ ಸ್ತ್ರೀಯರು ವಿಪತ್ಕಾರಿಯಾಗುತ್ತಾರೆ ಎಂಬುದು ವಾಕ್ಯದ ತಿರುಳು. ಗ್ರಂಥಕರ್ತನ ಈ ತರ್ಕ ಸಮಂಜಸವಲ್ಲ.