ಆತಪಸಂತಪ್ತಸ್ಯಜಲಾವಗಾಹೋದೃಗ್ಮಾಂದ್ಯಂಶಿರೋವ್ಯಥಾಂಚಕರೋತಿ || ೨೮ || || ೯೪೫ ||

ಅರ್ಥ : ಆತಪ = ಬಿಸಿಲೊಳ್, ಸಂತಪ್ತಸ್ಯ = ಬೆಂದವಂಗೆ, ಜಲಾವಗಾಹಃ = ನಿರೋಳ್ಮುಳುಗುಹಂ, ದೃಗ್ಮಾಂದ್ಯಂ = ಕಣ್ಣುಗಳನಸುಕಾಣ್ಬುದುಮಂ, ಶಿರೋವ್ಯಥಾಂವ = ತಲೆವೇನೆಯುಮಂ, ಕತೋರಿ = ಮಾಳ್ಕುಂ || ಉಂಬವಸರಮಂಪೇಳ್ವುದುತ್ತರವಾಕ್ಯಂ :

ಬುಭುಕ್ಷಾಕಾಲೋಭೋಜನಕಾಲಃ || ೨೯ || || ೯೪೬ ||

ಅರ್ಥ : ಬುಭುಕ್ಷಾಕಾಲಃ = ಹಸಿದಪೊಳ್ತು, ಭೋಜನಕಾಲಃ = ಉಣ್ಬಪೊಳ್ತು ||

ಅಕ್ಷುದಿತೇನಾಮೃತಮಪ್ಯುಪಭುಕ್ತಂಭವತಿವಿಷಂ || ೩೦ || || ೯೪೭ ||

ಅರ್ಥ : ಅಕ್ಷುಧಿತೇನ = ಪಸಿವಿಲ್ಲದವನಿಂ, ಅಮೃತಮಪಿ = ಅಮೃತಮುಂ, ಉಪಭುಕ್ತಂ = ಉಣಲ್ಪಟ್ಟುದಾದೊಡೆ, ವಿಷಂಭವತಿ = ವಿಷಮಕ್ಕುಂ || ಉದರಾಗ್ನಿಯನಿಂತುಪೆರ್ಚಿಪುದೆಂಬುದುತ್ತರವಾಕ್ಯಂ :

ಜಠರಾಗ್ನಿಂವಜ್ರಾಗ್ನಿಂಕುವ್ವನ್ನಾಹಾರಾದೌಸದೈವವಜ್ರಕಂಕಬಲಯೇತ್[1] || ೩೧ || ೯೪೮ ||

ಅರ್ಥ : ಜಠರಾಗ್ನಿಂ = ಪಸಿವಂ, ವಜ್ರಾಗ್ನಿಂಕುರ್ವನ್ = ಸಿಡಿಲ್ಗಿಚ್ಚಿನಂತೆಮಾಳ್ಪನುಂ, ಆಹಾರಾದೌ = ಊಟದಿಂಮುನ್ನೆ, ಸದೈವ = ಎಲ್ಲಾಕಾಲಮುಂ, ವಜ್ರಕಂ = ವಜ್ರಕಮುಂ, ಕಬಲಯೇತ್ = ನುಂಗುಗೆ || ಆಹಾರಮಿಲ್ಲದುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

—-

೨೮. ಬಿಸಿಲಿನಲ್ಲಿಬೆಂದವನುನೀರಲ್ಲಿಮುಳುಗುವುದರಿಂದದೃಷ್ಟಿಮಾಂದ್ಯವೂ, ತಲೆನೋವೋ, ಉಟಾಗುತ್ತವೆ.

೨೯. ಹಸಿವಾದಹೊತ್ತೇಊಟದಹೊತ್ತು.

೩೦. ಹಸಿವಿಲ್ಲದವನುಅಮೃತವನ್ನುಂಡರೂಅದುವಿಷವಾಗುತ್ತದೆ.

೩೧. ಊಟಕ್ಕೆಮೊದಲುವಜ್ರಕವನ್ನುಸೇವಿಸುವುದರಿಂದಉಂಟಆಹಾರವುಚೆನ್ನಾಗಿಜೀರ್ಣವಾಗುತ್ತದೆ.

—-

ನಿರನ್ನಸ್ಯಸವ್ವಂದ್ರವದ್ರವ್ಯಮಗ್ನಿಂವಿನಾಶಯತಿ || ೩೨ || || ೯೪೯ ||

ಅರ್ಥ : ನಿರನ್ನಸ್ಯ = ಆಹಾರಮಿಲ್ಲದಂಗೆ (ಅಶನಮಿಲ್ಲದಂಗೆ), ಸರ್ವ = ಎಲ್ಲಾ, ದ್ರವದ್ಯವ್ಯಂ = ದ್ರವ (ರಸ) ಮಪ್ಪವಸ್ತು, ಅಗನ್‌ಇ = ಪಸಿವಂ, ವಿನಾಶಯತಿ = ಕಿಡಿಸುಗುಂ || ಇಂತಪ್ಪಲ್ಲಿಗಂಜಿಹಿತಮೆಂಬುದುತ್ತರವಾಕ್ಯಂ :

ಅತಿಶ್ರಮಪಿಪಾಸೋಪಶಾಂತೌನಪೇಯಾಯಾಃಪರಂಕಾರಣಮಸ್ತಿ || ೩೩ || || ೯೫೦ ||

ಅಥ್ಥ : ಅತಿಶ್ರಮ = ಪಿರಿದಪ್ಪಬಳಲ್ಕೆಯುಂ, ಪಿಪಾಸಾ = ನೀರಳ್ಕೆಯುಮೆಂದಿವಱಉಪಶಾಂತೌ = ಮಗ್ಗುಗೆಯೊಳ್, ಪೇಯಾಯಾಃ = ಗಂಜಿಯತ್ತಣಿಂ, ಪರಂ = ಪೆಱರು, ಕಾರಣಂ = ಕಾರಣಂ, ನಾಸ್ತಿ = ಇಲ್ಲ || ಇಂತುಂಬಂಗೆಸುಖಮಕ್ಕಮೆಂಬುದುತ್ತರವಾಕ್ಯಂ :

ಘೃತಾಧರೋತ್ತರಂ[2]ಭುಂಜಾನೋsಗ್ನಿಂದೃಷ್ಟಿಂಚಲಭತೇ || ೩೪ || ೯೪೫೧ ||

ಅರ್ಥ : ಘೃತಾಧರೋತ್ತರಂ = ತುಪ್ಪಮುಂಕೆಳಗೆಮೇಲಿಕ್ಕುಗುಮಪ್ಪಂತು, ಭುಂಜಾನಃ = ಘನವಾಗಿಉಣುತ್ತಿದರದಂ, ಅಗ್ನಿಂ = ಪಸಿವಂ, ದೃಷ್ಟಿಂಚ = ದೃಷ್ಟಿಯುಮಂ, ಲಭತೇ = ಪಡೆಗುಂ || ಪಿರಿದುನೀರನೊರ್ಮ್ಮೆಯೆಕುಡಿದಡೆದೋಷಮಂಪೇಳ್ವುದುತ್ತರವಾಕ್ಯಂ :

ಸಕೃದ್ಭೂರಿನೀರೋಪಯೋಗೋವಹ್ನಿಮವಸಾದಯತಿ || ೩೫ || ೯೫೨ ||

ಅರ್ಥ : ಸಕೃತ್ = ಒರ್ಮ್ಮೆಯೆ, ಭೂರಿನೀರೋಪಯೋಗಃ = ಫಲವುನೀರಂಕುಡಿವುದು, ವಹ್ನಿಂ = ಉದರಾಗ್ನಿಯಂ, ಅವಸಾದಯತಿ = ಕಿಡಿಸುಗುಂ || ಕೆಲಕಲವಂಪಲವುಸೂಳ್ಕುಡಿವುದೆಂಬುದುತಾತ್ಪರ್ಯಂ || ಪಸಿವಂತಪ್ಪಿಸಿಕೊಡಿಂತಕ್ಕುಮೆಂಬುದುತ್ತರವಾಕ್ಯಂ :

ಕ್ಷುತ್ಕಾಲಾತಿಕ್ರಮಾದನ್ನದ್ವೇಷೋದೇಹಸಾದಶ್ಚಭವತಿ || ೩೬ || ೯೫೩ ||

ಅರ್ಥ : ಕ್ಷುತ್ಕಾಲ = ಪಸಿವಿನಕಾಲಮಂ, ಅತಿಕ್ರಮಾತ್ = ತಪ್ಪಿಸುವುದಱತ್ತಣಿಂ, ಅನ್ನದ್ವೇಷಃ = ಊಟಸೊಗಸದುದಂ, ದೇಹಸಾದಶ್ಚ = ಶರೀರದಬಡವುಂ, ಭವತಿ = ಅಕ್ಕುಂ || ಪೊಳ್ತಂತಪ್ಪಿಸಲಾಗದೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

—-

೩೨. ಊಟಕ್ಕೆಮೊದಲುದ್ರವಪದಾರ್ಥವನ್ನುಸೇವಿಸುವುದುಹಸಿವನ್ನುಮುಚ್ಚುತ್ತದೆ.

೩೩. ಅತಿಶ್ರಮಮತ್ತುನೀರಡಿಕೆಯನ್ನುಶಮನಗೊಳಿಸಲುಗಂಜಿಗಿಂತಬೇರೆಯಾದದ್ದೇನೋಇಲ್ಲ.

೩೪. ಊಟಕ್ಕೆಮೊದಲು, ಮತ್ತುಆನಂತರವೂತುಪ್ಪವನ್ನುತಿನ್ನುವವನಜಠರಾಗ್ನಿವೃದ್ಧಿಯಾಗುತ್ತದೆ. ದೃಷ್ಠಾಇಯೂಚೆನ್ನಾಗಿರುತ್ತದೆ.

೩೫. ಒಮ್ಮೆಯೆಹೆಚ್ಚುನೀರನ್ನುಕುಡಿಯುವುದುಉದರಾಗ್ನಿಯನ್ನುಕೆಡಿಸುವುದು.

೩೬. ಹಸಿವಿನಕಾಲವನ್ನುಮೀರುವುದರಿಂದಊಟವೂಸೊಗಸದುಹಾಗೂಶರೀರವುಬಡವಾಗುವುದು.

—-

ವಿದ್ಯಾತೇ[3]ವಹ್ನೌಕಿಂನಾಮೇಂಧನಂಕುರ್ಯಾತ್ || ೩೭ || ೯೫೪ ||

ಅರ್ಥ : ವಹ್ನೌ = ಕಿಚ್ಚು, ವಿದ್ಯಾತೇ = ನಂದಿದೊಡೆ, ಇಂಧನಂ = ಪುಳ್ಳಿ, ಕಿಂನಾಮ = ಏನಂ, ಕುರ್ಯಾತ್ = ಮಾಳ್ಕುಂ || ಇಂತುಂಬುದೆಂಬುದುತ್ತರವಾಕ್ಯಂ :

ಯೋಮಿತಂಭುಂಕ್ತೇಸಬಹುಭುಂಕ್ತೇ || ೩೮ || ೯೫೫ ||

ಅರ್ಥ : ಯಃ = ಆವನೋರ್ವಂ, ಮಿತಂ = ಪವಣುಪ್ಪುವಂ, ಭುಂಕ್ತೇ = ಉಣ್ಗುಂ, ಸಃ = ಆತಂ, ಬಹು = ಪಿರಿದಂ, ಭುಂಕ್ತೇ = ಉಣ್ಗುಂ || ಅಜೀರ್ಣಾದಿಗಳಿಲ್ಲದೆಡೆವಱಿಯದೆಸುಖದಿಂದಣ್ಗುಮೆಂಬುದುತಾತ್ಪಯ್ಯಂ || ಇಂತಪ್ಪಾಹಾರಮನುಣಲ್ವೇಡೆಂಬುದುತ್ತರವಾಕ್ಯಂ :

ಅಪ್ರಮಿತಮಸುಖಂವಿರುದ್ಧಮಪರೀಕ್ಷಿತಮಸಾಧುಪಾಕಮತೀತರಸಕಾಲಂಚಾನ್ನಂನಾನುಭವೇತ್ || ೩೯ || ೯೫೬ ||

ಅರ್ಥ : ಅಪ್ರಮಿತಮಸುಖಂ = ಬಹಳವಾದಂತಹ, ಅಸುಖಂ = ಸೊಗಸದುದುಮಂ, ವಿರುದ್ಧಂ = ಸಾತ್ಮ್ಯಮಲ್ಲದುದುಮಂ, ಅಪರೀಕ್ಷಿತಂ = ಆರಯದುದುಮಂ, ಅಸಾಧುಪಾಕಂ = ಒಳ್ಳಿತ್ತಾಗಿಬೇಯದುದಂಬೆಂದುದುಮಂ[4], ಅತೀತರಸಕಾಲಂಚ = ತಪ್ಪಿದರಸದಪೊತ್ತುಮನುಳ್ಳುದುದುಮಂ, ಅನ್ನಂ = ಅನ್ನಮಂ, ನಾನುಭವೇತ್ = ಉಣದಿರ್ಕೆ || ಸುಪಕ್ಪಮಾಗಿಬಸಿಱಂನೋಯಿಸಿಉದರಂಗಿಡದೆಸೊಗಯಿಸಿಪ್ಪಾಹಾರಮಂ, ಪೊಳ್ತುತಪ್ಪದಳವಿಗೆತಕ್ಕಂತುಂಬುದೆಂಬುದುತಾತ್ಪರ್ಯಂ || ಉಂಬವಸರದೊಳಿಂತಪ್ಪರನಿರಿಸಲಾಗದೆಂಬುದುತ್ತರವಾಕ್ಯಂ :

—-

೩೭. ಕಿಚ್ಚುನಂದಿದಮೇಲೆಇಂಧನವುಏನುಮಾಡೀತು?

೩೮. ಮಿತವಾಗಿಊಟಮಾಡುವವನುಹಿತವಾಗಿಊಟಮಾಡುವನು.

೩೯. ಮಿತಿಇಲ್ಲದ, ಹಿತಕರವಲ್ಲದ, ಶರೀರಕ್ಕೆಒಗ್ಗದ, ಪರೀಕ್ಷಿಸದ, ಸರಿಯಾಗಿಬೇಯದ, ರಸಹೀನವಾದ, ಕಾಲಮೀರಿದಅನ್ನವನ್ನುಉಣಬಾರದು.

—-

ಪೇಲಾಭುಜಂ[5]ಅನನುಕೂಲಂಕ್ಷುಧಿತಮತಿಕ್ರೂರಂಚನಭುಕ್ತಿಸಮಯೇಸನ್ನಿಧಾಪಯೇತ್ || ೪೦ || ೯೫೭ ||

ಅರ್ಥ : ಪೇಲಾಭುಜಂ = ಎಂಜಲನುಂಬವನುಮಂ, ಅನನುಕೂಲಂ = ಪ್ರತಿಕೂಲನುಮಂ, ಕ್ಷುಧಿತಂ = ಹಸಿದುಕಾತರಿಸುವನನುಮಂ, ಅತಿಕ್ರೂರಂ = ಕರಂಕೊರಡೆಗನುಮಂ, ಭುಕ್ತಿಸಮಯೇ = ಉಂಬಾಗಲು, ನಸನ್ನಿಧಾಪಯೇತ್ = ಸಮೀಪದೊಳಿರಿಸದಿರ್ಕ್ಕೆ || ಮನೋವೈಕಲ್ಯಮಾಗದಂತುಂಬುದೆಂಬುದುತಾತ್ಪರ್ಯಂ || ಇಂತುಬಡ್ಡಿಸಿಕೊಳ್ವುದೆಂಬುದುತ್ತರವಾಕ್ಯಂ :

ಗೃಹೀತಗ್ರಾಸೇಷುಸಹಭೋಜಿಷ್ವಾತ್ಮನಃಪರಿವೇಷಯೇತ್ || ೪೧ || ೯೫೮ ||

ಅರ್ಥ : ಸಹಭೋಜಿಷು = ಸಹಪಂಕ್ತಿಯಲುಂಬವರಂ, ಗೃಹೀತಗ್ರಾಸೇಷು = ತುತ್ತೆತ್ತಿದರಾದೊಡೆಆತ್ಮನಃ = ತನಗೆ, ಪರಿವೇಷಯೇತ್ = ಆಗಲ್ಬಡ್ಡಿಸುಗೆ || ಮತ್ತಮಿಂತುಣ್ಚುದೆಂಬುದುತ್ತರವಾಕ್ಯಂ :

ತಥಾಭುಂಜೀತಯಥಾಸಾಯಮನ್ಯೇದ್ಯುಶ್ಚನವಿದ್ಯತೇ[6]ವಹ್ನಿಃ || ೪೨ || ೯೫೯ ||

ಅರ್ಥ : ಸಾಯಂ = ಬೈಗಿನಊಟಕ್ಕೆಯುಂ, ಅನ್ಯೇದ್ಯುಶ್ಚ = ಮಱುದಿವಸಕ್ಕೆಯುಂ, ವಹ್ನಿಃ = ಉದರಾಗ್ನಿ, ಯಥಾ = ಎಂತು, ನವಿದ್ಯೇತ = ಕಿಡದು, ತದಾ = ಅಂತೆ, ಭುಂಜೀತ = ಉಣ್ಗೆ || ಇದನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ನಭುಕ್ತಿಪರಿಮಾಣೇಸಿದ್ಧಾಂತೋsಸ್ತಿ || ೪೩ || ೯೬೦ ||

ಅರ್ಥ : ಭುಕ್ತಿಪರಿಮಾಣೇ = ಊಟದಪವಣಿನಲ್ಲಿ, ಸಿದ್ಧಾಂತಃ = ಸಿದ್ಧಾಂತಂ, ನಾಸ್ತಿ = ಇಲ್ಲ || ಇದನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

—-

೪೦. ಅತಿಕಡಿಮೆತಿನ್ನುವವನನ್ನು, ತನಗೆಅನುಕೂಲವಲ್ಲದವನನ್ನು, ಹಸಿದವನನ್ನು, ಅತಿಕ್ರೂರನನ್ನು, ಭೋಜನಸಮಯದಲ್ಲಿಹತ್ತಿರಇರಗೊಡಬಾರದು.

೪೧. ಜೊತೆಯಲ್ಲಿಭೋಜನಮಾಡುವವರುತಿನ್ನುವುದಕ್ಕೆಆರಂಭಿಸಿದಮೇಲೆತಾನುತಿನ್ನುವುದಕ್ಕೆಮೊದಲಿಡಬೇಕು.

೪೨. ಸಾಯಂಕಾಲಕ್ಕೂ, ಮಾರನೆಯದಿನಕ್ಕೂಹಸಿವುಕೆಡದಂತೆಊಟಮಾಡಬೇಕು.

೪೩. ಊಟದಅಳತೆಯಲ್ಲಿಇಷ್ಟೇತಿನ್ನಬೇಕೆಂಬಸಿದ್ಧಾಂತವಿಲ್ಲ.

—-

ವಹ್ನ್ಯಭಿಲಾಷಾಯತ್ತಂಹಿಭೋಜನಂ || ೪೪ || ೯೬೧ ||

ಅರ್ಥ : ವಹ್ನಿ = ಉದರಾಗ್ನಿ, ಅಭಿಲಾಷಾ = ವಾಂಛೆಯುಮೆಂಬಿವಱ, ಆಯತ್ತಂ = ವಶಂ, ಹಿ = ಆವುದೊಂದುಕಾರಣದಿಂ, ಭೋಜನಂ = ಊಟಂ || ಪವಣ್ಗಳಿದೂಟದಿನಿಂತಕ್ಕುಮೆಂಬುದುತ್ತರವಾಕ್ಯಂ :

ಅತಿಮಾತ್ರಭೋಜೀದೇಹಮಗ್ನಿಂಚವಿದುರಯತಿ[7] || ೪೫ || ೯೬೨ ||

ಅರ್ಥ : ಅತಿಮಾತ್ರಭೋಜೀ = ಪವಣ್ಗಳಿದುಂಬಂ, ದೇಹಂ = ಶರೀರಮಂ, ಅಗ್ನಿಂಚ = ಪಸಿವುಮಂ (ಉದರಾಗ್ನಿ) ವಿದುರಯತಿ = ಕಿಡಿಸುಗುಂ (ಬಡವುಮಾಡುವನು) ಪಸಿವುಳ್ಳಂಕಿಱಿದನುಂಡೊಡಿಂತಕ್ಕುಮೆಂಬುದುತ್ತರವಾಕ್ಯಂ :

ದೀಪ್ತೋವಹ್ನಿರ್ಲಘುಭೋಜನಾದ್ಬಲಂಕ್ಷಪಯತಿ || ೪೬ || ೯೬೩ ||

ಅರ್ಥ : ದೀಪ್ತಃ = ಪಿರಿದಪ್ಪ, ವಹ್ನಿಃ = ಉದರಾಗ್ನಿ, ಲಘುಭೋಜನಾತ್ = ಕಿಱಿದನುಂಬುದುಂ, ಬಲಂ = ಬಲಮಂ, ಕ್ಷಪಯತಿ = ಕಿಡಿಸುಗುಂ || ಪಿರಿದನುಣ್ಬೊಡಿಂತಕ್ಕುಮೆಂಬುದುತ್ತರವಾಕ್ಯಂ :

ಅತ್ಯಶಿತುರ್ದುಃಖೇನಾನ್ನಪರಿಣಾಮಃ || ೪೭ || ೯೬೪ ||

ಅರ್ಥ : ಅತ್ಯಶಿತುಃ = ಪಿರಿದನುಂಬಂಗೆ, ದುಃಖೇನ = ದುಃಖದಿಂದ, ಅನ್ನಪರಿಣಾಮಃ = ಆಹಾರಮಕ್ಕುಗುಂ || ಅತಿಕ್ರಾಂತಮಾಗುಂಡೊಡಿಂತಕ್ಕಮೆಂಬುದುತ್ತರವಾಕ್ಯಂ :

ಶ್ರಮಾರ್ತಸ್ಯ[8]ಪಾನಂಭೋಜನಂಜ್ವರಾಯಚ್ಛರ್ಧಯೇವಾ || ೪೮ || ೯೬೫ ||

ಅರ್ಥ : ಶ್ರಮಾರ್ತಸ್ಯ = ಬಳಲ್ದನ (ಶ್ರಮದಿಂದಪೀಡಿತನಾದವಂಗೆ) ಪಾನಂ = ಜಲಾದಿಪಾನಮುಂ, ಭೋಜನಂ = ಊಟಮುಂ, ಜ್ವರಾಯ = ಜ್ವರಕ್ಕಂ, ವದ್ದಯೇವಾ = ಛರ್ದಿಗಂಮೇಣ್, ಕಾರಣಮಕ್ಕುಂ || ಶ್ರಮಮಡಂಗಲುಂಬುದೆಂಬುದುತಾತ್ಪರ್ಯಂ | ಇಂತಪ್ಪವಸರದೊಳುಣಲಾಗದೆಂಬುದುತ್ತರವಾಕ್ಯಂ :

—-

೪೪. ಹಸಿವಿದ್ದಷ್ಟುಮಾತ್ರಉಣಬೇಕು.

೪೫. ಮಿತಿಮೀರಿತಿನ್ನುವವನುದೇಹವನ್ನೂ, ಜಠರಾಗ್ನಿಯನ್ನೂಕೆಡಿಸಿಕೊಳ್ಳುವನು.

೪೬.ಹಸಿವೆಹೆಚ್ಚಾದಾಗಕಡಿಮೆತಿನ್ನುವುದರಿಂದಬಲವುಕುಂಡುತ್ತದೆ.

೪೭. ಹೆಚ್ಚುತಿನ್ನುವವನಿಗೆಅನ್ನವುಜೀರ್ಣವಾಗುವುದುಕಷ್ಟ.

೪೮. ಬಹಳಬಳಲಿದಾಗನೀರುಕುಡಿಯುವುದೂ, ಊಟಮಾಡುವುದೂಜ್ವರಕ್ಕೂ, ವಾಂತಿಗೂಕಾರಣವಾಗುತ್ತದೆ.

—-

ನಹಿಜತ್ಸುರ್ನಪ್ರಸ್ರೋತುಮಿಚ್ಛುರ್ನಾಸಮಂಜಸಮನಾಃನಚಾನಪನೀಯಪಿಪಾಸೋದ್ರೇಕಮಶ್ನೀಯಾತ್ || ೪೯ || ೯೬೬ ||

ಅರ್ಥ : ಜಿಹತ್ಸುಃ = ಮಲಮಂವಿಸರ್ಜಿಸಲ್ವೇಡಿರ್ದನಾಗಿ, ನ = ಉಣದಿರ್ಕ್ಕೆ, ಪ್ರಸ್ರೋತುಮಿಚ್ಛುಃ = ಮೂತ್ರಿಸಲ್ವೇಡಿರ್ದನಾಗಿ, ನ = ಉಣದಿರ್ಕ್ಕೆ, ಅಸಮಂಜಸಮನಾಃ = ಮನದೊಳ್ಕದಡಿದನಾಗಿ, ನ = ಉಣದಿರ್ಕ್ಕೆ, ಪಿಪೊಆಸೋದ್ರೇಕಂ = ನೀರಳ್ಕೆಯುಂ, ಅವಪನೀಯಃ = ಪಿಂಗಿಸದೆ, ನಾಶ್ನೀಯಾತ್ = ಉಣದಿರ್ಕ್ಕೆ || ಮಲಮೂತ್ರಾದಿಗಳಂತಾಳ್ದಿಭೋಜನಮಂಮಾಡಲಾಗದೆಂಬುದುತಾತ್ಪರ್ಯಂ || ಉಂಡಿಂಬಳಿಯವಿಂತಪ್ಪುನಾಗದೆಂಬುದುತ್ತರವಾಕ್ಯಂ :

ಭುಕ್ತ್ವಾವ್ಯಾಯಾಮವ್ಯವಾಯೌಸದ್ಯೋವ್ಯಾಪತ್ತಿಕಾರಣಂ || ೫೦ || ೯೬೭ ||

ಅರ್ಥ : ಭುಕ್ತ್ವಾ = ಉಂಡು, ವ್ಯಾಯಾಮಃ = ಯೆಡೆಯಾಡುವುದುಂ (ಶರೀರಾಯಾಸ), ವ್ಯವಾಯೌ = ಮೈಥುನಂಮಾಳ್ಪುದೆಂಬೀಎಱಡುಂ, ಸದ್ಯಃ = ಆಗಳೆ, ವ್ಯಾಪತ್ತಿಕಾರಣಂ = ರೋಗಕ್ಕೆಕಾರಣಂ || ಉಂಡಿಂಬಳಿಕ್ಕಾಯಾಸಂಬಡಲಾಗದೆಂಬುದುತಾತ್ಪರ್ಯಂ || ಇಂತಪ್ಪುದುಪಥ್ಯವಲ್ಲೆಣವಯದಯತ್ತರವಾಕ್ಯಂ :

ಆಜನ್ಮಸಾತ್ಮ್ಯಂವಿಷಮಪಿಪಠ್ಯಂ || ೫೧ || ೯೬೮ ||

ಅರ್ಥ : ಆಜನ್ಮಸಾತ್ಮ್ಯಂ = ಪುಟ್ಟಿದಂದದಿಂತೊಟ್ಟುಳವಟ್ಟಾಹಾರಂ, ವಿಷಮಪಿ = ವಿಷಮವಾದೊಡಂ, ಪಥ್ಯಂ = ಪಥ್ಯಮಕ್ಕುಂ || ಇಂತಪ್ಪುದಂಸೇವಿಸುವುದೆಂಬುದುತ್ತರವಾಕ್ಯಂ :

—-

೪೯. ಮಲವಿಸರ್ಜನೆಮಾಡದೆ, ಮೂತ್ರವಿಸರ್ಜನೆಮಾಡದೆಮನಸ್ಸಿಗೆನೆಮ್ಮದಿಇಲ್ಲದೆಇರುವಾಗಅತ್ಯಧಿಕವಾದದಾಹವನ್ನುಕಡಿಮೆಮಾಡಿಕೊಳ್ಳದೆಊಟಮಾಡಬಾರದು.

೫೦. ಊಟವಾದಕೂಡಲೆವ್ಯಾಯಾಮಮಾಡುವದು, ಮೈಥುನಕ್ಕೆತೊಡಗುವದು, ತಕ್ಷಣವೇಅಪಾಯಕ್ಕೆಕಾರಣವಾಗುತ್ತವೆ.

೫೧. ಹುಟ್ಟಿದಂದಿನಿಂದಅಭ್ಯಾಸವಾದಆಹಾರವುವಿಷವಾಗಿದ್ದರೂಪಥ್ಯವೇ.

—-

[9]ಅಸಾತ್ಮ್ಯಮಪಿಪಥ್ಯಂಸೇವೇತ || ೫೨ || ೯೬೯ ||

ಅರ್ಥ : ಅಸಾತ್ಮ್ಯಮಪಿ = ಸೊಗಸದುದಾದೊಡಂ, ಪಥ್ಯಂ = ಪಥ್ಯಮಪ್ಪುದುಂ, ಸೇವೇತ = ಸೇವಿಸುಗೆ ||

ನಪುನಃಸಾತ್ಮ್ಯಮಪಥ್ಯಂ || ೫೩ || ೯೭೦ ||

ಅರ್ಥ : ಪುನಃ = ಮತ್ತೆ, ಸಾತ್ಮ್ಯಂ = ಸೊಗಸುವುದುಂ, ಅಪಥ್ಯಂ = ಪಥ್ಯಮಲ್ಲದುದಂ, ನ = ಸೇವಿಸದಿರ್ಕ್ಕೆ || ಮತ್ತಮಿದನೆದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ಸರ್ವಂಬಲವತಃಪಥ್ಯಮಿತಿಮತ್ವಾನಕಾಲಕೂಟಂಸೇವೇತ || ೫೪ || ೯೭೧ ||

ಅರ್ಥ : ಬಲವತಃ = ಅಗ್ನಿಬಲಮುಳ್ಳವಂಗೆ, ಸರ್ವಂ = ಎಲ್ಲಮುಂ, ಪಥ್ಯಮಿತಿ = ಪಥ್ಯಮುಮೆಂದಿಂತು, ಮತ್ವಾ = ತಿಳಿದು, ಕಾಲಕೂಟಂ = ಕಾಲಕೂಟಮೆಂಬವಿಷಮಂ, ನಸೇವೇತ = ಸೇವಿಸದಿರ್ಕ್ಕೆ || ಮತ್ತಮದನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಸುಶಿಕ್ಷಿತೋsಪಿವಿಷತಂತ್ರ(ತತ್ತ್ವ)ಜ್ಞಃಮ್ರಿಯತೇಏವಕದಾಚಿತ್ವಿಷಾತ್ || ೫೫ || ೯೭೨ ||

ಅರ್ಥ : ವಿಷತಂತ್ರಜ್ಞಃ = ವಿಷಾಗಮಮಂಬಲ್ಲಂ, ಸುಶಿಕ್ಷಿತೋsಪಿ = ಲೇಸಾಗಿಕಲ್ತನಾಗಿಯುಂ, ವಿಷಾತ್ = ವಿಷದತ್ತಣಿಂ, ಕದಾಚಿತ್ = ಎಲ್ಲಿಯಾನುಂ, ಮ್ರಿಯತೇಏವ = ಸಾವನೇ || ಇಂತುಮಾಡಿಯುಂಬನೆಂಬುದುತ್ತರವಾಕ್ಯಂ :

ಸಂವಿಭಾಜ್ಯಾತಿಥಿಷ್ವಾಶ್ರಿತೇಷುಚಸ್ವಯಮಾಹರೇತ್ || ೫೬ || ೯೭೩ ||

ಅರ್ಥ : ಅತಿಥಿಷು = ಅತಿಥಿಗಳೊಳಂ, ಆಶ್ರಿತೇಷುಚ = ಪೊರ್ದಿದರೊಳಂ, ಸಂವಿಭಾಜ್ಯ = ಪಚ್ಚು (ಬೇರ್ಕ್ಕೆಯ್ದು), ಸ್ವಯಂ = ತಾನು, ಆಹರೇತ್ = ಉಣ್ಗೆ || ಅತಿಥಿಗಳುಮಾಶ್ರಿತರುಮುಂಡಿಂಬಳಿಯಮುಂಬುದೆಂಬುದುತಾತ್ಪರ್ಯಂ || ಇಂತಪ್ಪಲ್ಲಿವಕ್ರನಾಗಬೇಡೆಂಬುದುತ್ತರವಾಕ್ಯಂ :

—-

೫೨. ತಿನ್ನಲುಇಷ್ಟವಾಗದಿದ್ದರೂಪಥ್ಯವಾದದ್ದನ್ನುಸೇವಿಸಬೇಕು.

೫೩. ಅಲ್ಲದೆಸೊಗಸುವುದಾದರೂಅಪಥ್ಯವಾದದ್ದನ್ನುತಿನ್ನಬಾರದು.

೫೪. ಬಲಿಷ್ಠನಿಗೆಎಲ್ಲವೂಪಥ್ಯವೇಎಂದುಕೊಂಡುಕಾಲಕೂಟವಿಷವನ್ನುತಿನ್ನಬಾರದು.

೫೫. ಎಷ್ಟುಪರಿಣಿತನಾದವಿಷತಂತ್ರಜ್ಞನಾದರೂಒಮ್ಮೊಮ್ಮೆವಿಷದಿಂದಲೇಸಾಯುತ್ತಾನೆ.

೫೬. ಅಥಿತಿಗಳಿಗೂ, ಆಶ್ರಿತರಿಗೂಮೊದಲುಭೋಜನಮಾಡಿಸಿ, ತಾನುಅನಂತರಊಟಮಾಡಬೇಕು.

—-

 

[1]ಚೌ. ವಜ್ರಕಂಬಲಯೇತ್. ಈಪಾಠದಿಂದಅರ್ಥತೀರಭಿನ್ನವಾಗುತ್ತದೆ.

[2]ಚೌ. ಘೃತಾಧಾರೋತ್ತರಂ.

[3]ಮೈ. ವಿಧಮಿತೇಚೌ. ವಿಧ್ಯಾಪಿತೇ.

[4]ಬೆಂದುದುಮಂಎಂಬುದುಅನವಶ್ಯಕವೆಂದುತೋರುತ್ತದೆ.

[5]ಮೈ. ಚೌ. ಫಲ್ಗುಭುಜಂ

[6]ಮೈ. ಚೌ. ವಿಪದ್ಯತೇ. ಈಪಾಠವೇಸಮಂಜಸವಾದುದು.

ನಮ್ಮಹಸ್ತಪ್ರತಿಯಲ್ಲಿಯವಿದ್ಯತೇಎಂಬಪಾಠದಿಂದಅಪಾರ್ಥವಾಗುತ್ತದೆ. ಯಾಕೆಂದರೆಇದರಪ್ರಕಾರಸಂಜೆಹಾಗೂಮರುದಿನಹಸಿವೆಯಾಗದಷ್ಟುಊಟಮಾಡಬೇಕೆಂದುಅರ್ಥವಾಗುತ್ತದೆ. ಆದರೆ, ಮೈಹಾಗೂಚೌ. ಗಳಪ್ರಕಾರಸಂಜೆಮತ್ತುಮರುದಿನದಹಸಿವುಕೆಡದಂತೆಊಟಮಾಡಬೇಕುಎಂದಾಗುತ್ತದೆ. ನಮ್ಮಟೀಕಾಕಾರನುಪಾಠವನ್ನುನವಿದ್ಯೇತಎಂದುಗ್ರಹಿಸಿಕಿಡದು, ಅಂದರೆಕೆಡುವುದಿಲ್ಲಎಂದುಸರಿಯಾಗಿಯೇಅಥ್ಥಮಾಡಿದ್ದಾನಾದರೂನವಿದ್ಯತೇಎಂಬಪಾಠದಲ್ಲಿಯತಪ್ಪನ್ನುಗಮನಿಸಿಲ್ಲ.

[7]ಮೈ. ಚೌ. ವಿಧುರಯತಿ.

[8]ಚೌ. ಭ್ರಮಾರ್ತಸ್ಯ.

[9]ಮೈ. ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲಿಯೇಅಡಕವಾಗಿವೆ.