ದೇವಾನ್‌ ಗುರೂನ್ಧರ್ಮಚೋಪಚರನ್ನವ್ಯಾಕುಲಮತಿಃಸ್ಯಾತ್ || ೫೭ || ೯೭೪ ||

ಅರ್ಥ : ದೇವಾನ್ = ದೇವರುಮಂ, ಗುರೂನ್ = ಗುರುಗಳುಮಂ, ಧರ್ಮಂಚ = ಧರ್ಮಮುಮಂ, ಉಪಚರನ್ = ಪೊರ್ದಿನೆಗಳುತ್ತಿರ್ದಂ, ಅವ್ಯಾಕುಲಮತಿಃ = ವ್ಯಾಕುಲವಾದಮತಿಯ[1]ನುಳ್ಳವನು, ಮನದೊಳ್ಕಾದಡಂ, ಸ್ಯಾತ್ = ಅಕ್ಕೆ || ವ್ಯಗ್ರನಾಗದೆದೇವಾರ್ಚನೆಯಂ(ಮುಂತಾಗಿ) ಮಾಳ್ಪುದೆಂಬುದುತಾತ್ಪರ್ಯಂ || ಕರಂವ್ಯಗ್ರತೆಯಿಂದಿಂತುಮಾಳ್ಪುದೆಂಬುದುತ್ತರವಾಕ್ಯಂ :

ವ್ಯಾಕ್ಷೇಪಭೂರ್ಮನೋನಿರೋಧೋಮಂದಯತಿಸರ್ವಾಣ್ಯಪೀಂದ್ರಿಯಾಣಿ || ೫೮ || ೯೭೫ ||

ಅರ್ಥ : ವ್ಯಾಕ್ಷೇಪಭೂಃ = ವ್ಯಗ್ರತೆಯಾದ (ವ್ಯಾಕುಲ) ಮನೋನಿರೋಧಃ = ಮನದನಿರೋಧಂ, ಸರ್ವಾಣ್ಯಪಿ = ಎಲ್ಲಾ, ಇಂದ್ರಿಯಾಣಿ = ಇಂದ್ರಿಯಂಗಳುಮಂ, ಮಂದಯತಿ = ಜಡಂಮಾಡುಗುಂ || ವ್ಯಗ್ರತೆಯಿಲ್ಲದುದುಱಫಲಮಂಪೇಳ್ವುದುತ್ತರವಾಕ್ಯಂ :

ಸ್ವಚ್ಛಂದವೃತ್ತಿಃಪುರುಷಣಾಂಪರಮಂರಸಾಯನಂ || ೫೯ || ೯೭೬ ||

ಅರ್ಥ : ಸ್ವಚ್ಛಂದವೃತ್ತಿಃ = ತನ್ನಿಚ್ಛೆಯಿಂರ್ತಿಪುದು, ಪುರುಷಾಣಾಂ = ಪುರುಷರ್ಗೆ, ಪರಮಂ = ಮಿಕ್ಕ, ರಸಾಯನಂ = ರಸಾಯನಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಯಥಾಕಾಮಂಸಮೀಹಾನಾಃಕಿಲಕಾನನೇಷುಕರಿಣೋನಭವಂತ್ಯಾಸ್ಪದಂವ್ಯಾಧೀನಾಂ || ೬೦ || ೯೭೭ ||

ಅರ್ಥ : ಕಾನನೇಷು = ಅಡವಿಗಳೊಳು, ಯಥಾಕಾಮಂಸಮೀಹಾನಾಃ = ಎಂತುಮೆಚ್ಚಿದಂತೆಡೆಯಾಡುವ, ಕರಿಣಃ = ಹಸ್ತಿಗಳು, ವ್ಯಾಧೀನಾಂ = ವ್ಯಾಧಿಗಳ್ಗೆ, ಆಸ್ಪದಂ = ಯೆಡೆ, ನಭವಂತಿಕಿಲ = ಅಗವಲ್ತೆ ||

—-

೫೭. ದೇವರನ್ನೂಗುರುಗಳನ್ನೂಸೇವಿಸುತ್ತಧರ್ಮಾಚರಣೆಯಲ್ಲಿತೊಡಗಿಕದಡದೆಇದ್ದಮನಸ್ಸುಳ್ಳವನಾಗಿರಬೇಕು.

೫೮. ವ್ಯಾಕುಲತೆಯಿಂದಕೂಡಿದಮನಸ್ಸನ್ನುಹಿಡಿತದಲ್ಲಿಟ್ಟುಕೊಂಡರೂ, ಇಂದ್ರಿಯಗಳುದುರ್ಬಲಗೊಳ್ಳುತ್ತವೆ.

೫೯. ತನ್ನಿಚ್ಛೆಯಂತೆವರ್ತಿಸುವುದುಪುರುಷರಿಗೆಶ್ರೇಷ್ಠವಾದರಸಾಯನ.

೬೦. ಕಾಡುಗಳಲ್ಲಿಸ್ವೇಚ್ಛೆಯಾಗಿಓಡಾಡುವಆನೆಗಳುವ್ಯಾಧಿಗಳಿಗೆಗುರಿಯಾಗುವುದಿಲ್ಲ.

—-

ಸತತಂಸೇವ್ಯಮಾನೇದ್ವೇಏವವಸ್ತುನೀಸರಸೇಸ್ವೈರಾಲಾಪಃತಾಂಬೂಲಂಚ || ೬೧ || ೯೭೮

ಅರ್ಥ : ಸತತಂ = ನಿಚ್ಚಲುಂ, ಸೇವ್ಯಮಾನೇ = ಸೇವಿಸಲ್ಪಡುತ್ತಿರ್ದ, ವಸ್ತುನಿ = ವಸ್ತುಗಳು, ದ್ವೇಏವ = ಎರಡೇ, ಸರಸೇ = ಸರಸವಹವು, ಅವಾವುವೆಂದೊಡೆ, ಸ್ವೈರಾಲಾಪಃ = ತನ್ನಿಚ್ಛೆಯಿಂನಡೆವುದುಂ, ತಾಂಬೂಲಂಚತಾಂಬೂಲಮುಂ || ಪೆಱವಕ್ಕವಚರಾಗದಿರೆಂಬುದುತಾತ್ಪರ್ಯಂ || ಪಿರಿದುಪೊತ್ತುನಿಂದಿರ್ದೊಡೆಂತಕ್ಕುಮೆಂಬುದುತ್ತರವಾಕ್ಯಂ :

ಚಿರಾಯೋರ್ಧ್ವಜಾನುರ್ಜಡಯತಿರಸವಾಹಿನೀರ್ನಸಾಃ[2] || ೬೨ || ೯೭೯ ||

ಅರ್ಥ : ಚಿರಾಯ = ಪಿರಿದುಪೊತ್ತು, ಉರ್ಧ್ವಜಾನುಃ = ನಿಂದಿರ್ಪಂ, ರಸವಾಹಿನೀಃ = ರಸಂಗಳಂತಾಳ್ದಿದ, ನಸಾಃ = ಸೆರೆಗಳನು, ಜಡಯತಿ = ಜಡಂಮಾಳ್ಕುಂ || ಪಿರಿದುಪೊತ್ತುಕುಳ್ಳಿರ್ದೊಡಿಂತಕ್ಕುಮೆಂಬುದುತ್ತರವಾಕ್ಯಂ :

ಸತತಮುಪವಿಷ್ಟೋಜಠರಮಾಧ್ಮಾಪಯತಿಪ್ರತಿಪದ್ಯತೇಚತುಂಡಿಲತಾಂ[3] || ೬೩ || ೯೮೦ ||

ಅರ್ಥ : ಸತತಂ = ಆವಾಗಳುಂ, ಉಪವಿಷ್ಟಃ = ಕುಳ್ಳಿರ್ದಂ, ಜಠರಂ = ಬಸಿಱಂ, ಆದ್ಮಾಪಯತಿ = ಉಬ್ಬರಿಸುಗುಂ, ತುಂಡಿಲತಾಂಚ = ಡೊಳ್ಳಿತನಮುಮಂ, ಪ್ರತಿಪದ್ಯತೇ = ಐಯ್ದುಗುಂ | ಪಿರಿದುಪೊತ್ತುನಿಂದಿರಲುಂಕುಳ್ಳಿರಲುಮಾಗದೆಂಬುದುತಾತ್ಪಯ್ಯಂ || ಖೇದಮನಿಂತುಮಾಳ್ಕೆಂಬುದುತ್ತರವಾಕ್ಯಂ :

—-

೬೧. ನಿತ್ಯವೂಸೇವಿಸಬೇಕಾದವುಗಳಲ್ಲಿಸರಸ, ಸಲ್ಲಾಪ, ತಾಂಬೂಲಸೇವನೆಇವೆರಡೇಸುಖಕರವಾದವು.

೬೨. ಬಹಳಹೊತ್ತುನಿಂತಿರುವವನನರಗಳುನಡಗೊಳ್ಳುತ್ತವೆ.

೬೩. ಯಾವಾಗಲೂಕುಳಿತಿರುವವನಹೊಟ್ಟೆಯುಉಬ್ಬರಿಸಿಕೊಳ್ಳುತ್ತದೆ, ಬೊಜ್ಜುಬೆಳೆಯುತ್ತದೆ.

—-

ವಾಚಿ[4]ಮನಸಿಶರೀರೇಚಾತಿಮಾತ್ರಂಖೇದಃಪುರುಷಮಕಾಲೇsಪಿಜರಯಾಯೋಜಯತಿ || ೬೪ || ೯೮೧ ||

ಅರ್ಥ : ವಾಚಿ = ವಚನದೊಳಂ, ಮನಸಿ = ಮನದೊಳಂ, ಶರೀರೇಚ = ಶರೀರದೊಳಂ, ಅತಿಮಾತ್ರಂ = ಪಿರಿದಪ್ಪ, ಖೇದಃ = ಆಯಾಸಂ, ಅಕಾಲೇಅಪಿ= ಕಾಲಮಲ್ಲದಕಾಲದೊಳಂ, ಪುರುಷಂ = ಪುರುಷನಂ, ಜರಯಾ = ಮುಪ್ಪಿನೊಡನೆ, ಯೋಜಯತಿ = ಕೂಡುಗುಂ || ಪಿರಿದಾಯಾಸವಾಗಲಾಗದೆಂಬುದುತಾತ್ಪರ್ಯಂ ||

ನಾದೇವಂ[5]ದೇಹಪ್ರಸಾದಂಕುರ್ಯಾತ್ || ೬೫ || ೯೮೨ ||

ಅರ್ಥ : ದೇಹಪ್ರಸಾದಂ = ಒಡಲೆಂಬಪ್ರಾಸಾದಮಂ, ಆದೇವಂ = ನಿರ್ದೈವಯಾಗಿ, ನಕುರ್ಯಾತ್ = ಮಾಡದಿರ್ಕ್ಕೆ || ಸದೈವನಲ್ಲದನೊಡಲುಪಾಳೆಂಬುದುತಾತ್ಪರ್ಯಂ || ಇಂತಪ್ಪನಂನಂಬಲಾಗದೆಂಬುದುತ್ತರವಾಕ್ಯಂ :

ದೇವಗುರುಧರ್ಮರಹಿತೇಪುಂಸಿನಾಸ್ತಿಸಂಪ್ರತ್ಯಯಃ || ೬೬ || ೯೮೩ ||

ಅರ್ಥ : ದೇವಗುರುಧರ್ಮರಹಿತೇ = ದೇವರುಂ, ಗುರುಗಳುಂ, ಧರ್ಮಮುಮಿಲ್ಲದ, ಪುಂಸಿ = ಪುರುಷನೊಳ್, ಸಂಪ್ರತ್ಯಯಃ = ನಂಬುಗೆ, ನಾಸ್ತಿ = ಇಲ್ಲ || ನಿರ್ದೈವನಂನಂಬಲಾಗದೆಂಬುದುತಾತ್ಪರ್ಯಂ || ಇಂತಪ್ಪನುದೇವನೆಂಬುದುತ್ತರವಾಕ್ಯಂ :

ಕ್ಲೇಶಕರ್ಮವಿಪಾಕಾಶಯೈರಪರಾಮೃಷ್ಟಃಪುರುಷವಿಶೇಷೋದೇವಃ || ೬೭ || ೯೮೪ ||

ಅರ್ಥ : ಕ್ಲೇಶಃ = ದುಃಖಮುಂ, ಕರ್ಮವಿಪಾಕಃ = ಕರ್ಮದಬೆಳಸಿನಿಂದಾದ, ಆಶಯೈಃ = ಮನಂಗಳುಮೆಂಬಿವಱಿಂ, ಅಪರಾಮೃಷ್ಟಃ = ಮುಟ್ಟಲ್ಪಡದ, ಪುರುಷವಿಶೇಷಃ = ಉತ್ತಮಪುರುಷಂ, ದೇವಃ  = ದೇವನೆಂಬುದುಂ || ದೋಷಂಗಳಿಲ್ಲದನೆದೇವನೆಂಬುದುತಾತ್ಪರ್ಯಂ || ಆತನಪರ್ಯಾಯನಾಮಂಗಳಂಪೇಳ್ವುದುತ್ತರವಾಕ್ಯಂ :

—-

೬೪. ಮಾತು, ಮನಸ್ಸುಮತ್ತುಶರೀರಗಳಿಗೆಹೆಚ್ಚಿನಆಯಾಸಉಂಟಾಗುವುದರಿಂದಅಕಾಲಮುಪ್ಪುಬರುತ್ತದೆ.

೬೫. ದೇಹವೆಂಬಗುಡಿಯನ್ನುದೇವರಿಲ್ಲದಹಾಗೆಮಾಡಬಾರದು.

೬೬. ದೇವ, ಗುರು, ಧರ್ಮಇಲ್ಲದವನನ್ನುನಂಬಲಾಗದು.

೬೭. ಕ್ಲೇಶಗಳುಮತ್ತುಕರ್ಮಗಳುಇವುಗಳಪರಿಣಾಮದಿಂದಬಾಧಿತನಾಗದಪುರುಷಶ್ರೇಷ್ಠನೇದೇವರು.

—-

ತಸ್ಯೈವೇತಾನಿಖಲುವಿಶೇಷನಾಮಾನ್ಯರ್ಹನ್ನಜಾನಂತಃಶಂಭುರ್ಬುದ್ಧಸ್ತಮೋsತಕಇತಿ || ೬೮ || ೯೮೫ ||

ಅರ್ಥ : ಅರ್ಹನ್ = ಅರ್ಹನೆಂದುಂ, ಅಜಃ = ಅಜನೆಂದುಂ, ಅನಂತಃ = ಅನಂತನೆಂದುಂ, ಶಂಭುಃ = ಶಂಭುವೆಂದುಂ, ಬುದ್ಧಃ = ಬುದ್ಧನೆಂದುಂ, ತಮೋಂsತಕಃಇತಿ = ತಮೋಂತಕಮೆಂದಿಂತು, ಬಲು = ನೆಟ್ಟನೆ, ತಸ್ಯೈವ = ಆತನ, ಏತಾನಿ = ಇವು, ವಿಶೇಷನಾಮಾನಿ = ಅಧಿಕಂಗಳಪ್ಪಪೆಸರ್ಗಳ್ || ಪೆಸರ್ಭೇದಮಿಲ್ಲೆಂಬುದುತಾತ್ಪರ್ಯಂ || ಪೊತ್ತನಿಂತುಪಸುವುದೆಂಬುದುತ್ತರವಾಕ್ಯಂ :

ಆತ್ಮಸುಖಾನುರೋಧೇನಕಾರ್ಯಾಯನಕ್ತಮಹಶ್ಚವಿಭಜೇತ್[6] || ೬೯ || ೯೮೬ ||

ಅರ್ಥ : ಆತ್ಮಸುಖಾನುರೋಧೇನ = ತನ್ನಸುಖಕ್ಕನುಕೂಲಮಪ್ಪಂತು, ಕಾರ್ಯಾಯ = ಕಾರ್ಯಕ್ಕೆ, ನಕ್ತಂ = ಇರುಳುಂ, ಅಹಶ್ಚ = ಪಗಲುಂ, ವಿಭಜೇತ್ = ಬೇರ್ಕ್ಕೆಯ್ಗೆ || ತನ್ನಸುಖಂಗಿಡಲೀಯದೆಕಾಯ್ಯಮಂಮಾಳ್ಪುದೆಂಬುದುತಾತ್ಪರ್ಯಂ || ಕಾಲನಿಯಮನಿಂತುಮಿಲ್ಲದಿಂತಕ್ಕುಮೆಂಬುದುತ್ತರವಾಕ್ಯಂ :

ಕಾಲಾನಿಯಮೇನಧರ್ಮಕಾರ್ಯಾನುಷ್ಠಾನಂಮರಣಸಮಂ || ೭೦ || ೯೮೭ ||

ಅರ್ಥ : ಕಾಲಾನಿಯಮೇನ = ಹೊತ್ತತಪ್ಪಿಸಿ, ಧರ್ಮಕಾರ್ಯಾನುಷ್ಠಾನಂ = ಧರ್ಮಕಾರ್ಯವನನುಷ್ಠಿಸುಹವು, ಧರ್ಮಕಾರ್ಯಮಂನೆಗಳ್ವುದು, ಮರಣಸಮಂ = ಸಾವಿನಸಮಾನಂ || ಪೊತ್ತನಿಂತಪ್ಪಲ್ಲಿನೋಡವೇಡೆಂಬುದುತ್ತರವಾಕ್ಯಂ :

ಆತ್ಯಂತಿಕೇಕಾರ್ಯೇನಾಸ್ತ್ಯವಸರಃ || ೭೧ || ೯೮೮ ||

ಅರ್ಥ : ಆತ್ಯಂತಿಕೇ = ಕೇಡಿನೊಳಪ್ಪ (ನಿಯಮದಿಂಮಾಡಬೇಕಾದಕಾರ್ಯದಲ್ಲಿ) ಕಾರ್ಯೇ = ಕಾರ್ಯದೊಳ್, ಅವಸರಃ = ಅವರಸವು, ನಾಸ್ತಿ = ಇಲ್ಲ || ಕೇಡಡಸಿದಲ್ಲಿಪೊತ್ತುವಾರದೆತಪ್ಪಿಸುವುದೆಂಬುದುತಾತ್ಪರ್ಯಂ || ಇಂತಪ್ಪುವಂತಡಯಿಸಲ್ವೇಡೆಂಬುದುತ್ತರವಾಕ್ಯಂ :

—-

೬೮. ಅರ್ಹನ್, ಬ್ರಹ್ಮ, ಅನಂತ, ಶಂಭು, ಬುದ್ಧ, ಸೂರ್ಯಇವುದೇವನವಿಶೇಷವಾದಹೆಸರುಗಳು.

೬೯. ತನ್ನಸುಖಕ್ಕೆಅನುಕೂಲವಾಗುವಂತೆಕೆಲಸಗಳಿಗೆರಾತ್ರಿಹಗಲುಗಳನ್ನುಸೂಕ್ತವಾಗಿವಿಭಜಿಸಿಕೊಳ್ಳಬೇಕು.

೭೦. ಸರಿಯಾದಕಾಲವನ್ನುತಪ್ಪಿಸಿಧರ್ಮಕರ್ಮಾದಿಗಳನ್ನುಮಾಡುವುದುಸಾವಿಗೆಸಮಾನವು.

೭೧. ತುರ್ತುಪರಿಸ್ಥಿತಿಏರ್ಪಟ್ಟಲ್ಲಿಸಮಯಾಸಮಯಗಳೆಂಬುದಿಲ್ಲ.

—-

ಅವಶ್ಯಂಕರ್ತವ್ಯೇಕಾಲಂನಯಾಪಯೇತ್ || ೭೨ || ೯೮೯ ||

ಅರ್ಥ : ಅವಶ್ಯಂಕರ್ತವ್ಯೇ = ಮಾಡಲ್ವೇಡಿರ್ದಕಾರ್ಯಾದೊಳ್, ಕಾಲಂ = ಕಾಲಮಂ, ನಯಾಪಯೇತ್ = ಕಳಿಪದಿರ್ಕೆ || ಮಾಡಲ್ವೇಡಿರ್ದುದಂಬೇಗಮಾಳ್ಪುದೆಂಬುದುತಾತ್ಪರ್ಯಂ || ಇಂತಪ್ಪುದಂಪಱೆಯಲಾಗದೆಂಬುದುತ್ತರವಾಕ್ಯಂ :

ಆತ್ಮರಕ್ಷಾಯಾಂಕದಾಚಿದಪಿನಪ್ರಮಾದ್ಯೇತ || ೭೩ || ೯೯೦ ||

ಅರ್ಥ : ಆತ್ಮರಕ್ಷಾಯಾಂ = ತನ್ನರಕ್ಷಿಸುವಲ್ಲಿ, ಕದಾಚಿದಪಿ = ಎಂತಪ್ಪೊಡಂ, ನಪ್ರಮಾದ್ಯೇತ = ಮಱವಿಯಂಮಾಡಿದಿರ್ಕೆ || ತನ್ನಂಮರದಿರ್ವೇಡೆಂಬುದುತಾತ್ಪರ್ಯಂ || ದೇವತಾರ್ಚನೆಯನಿಂತುಮಾಳ್ಕೆಂಬುದುತ್ತರವಾಕ್ಯಂ :

ಸವತ್ಸಾಂಧೇನುಂಪ್ರದಕ್ಷಿಣೀಕೃತ್ಯಧರ್ಮಾಸನಂಯಾಯಾತ್ || ೭೪ || ೯೯೧ ||

ಅರ್ಥ : ಸವತ್ಸಾಂಧೇನುಂ = ಕಱುವೆರಸಿದಾವಂ, ಪ್ರದಕ್ಷಿಣೀಕೃತ್ಯ = ಬಲಗೊಂಡು, ಧರ್ಮಾಸನಂ[7] = ಧರ್ಮಗಳಪೇಳುಹತಾವಿನಲ್ಲಿಗೆ, ಯಾಯಾತ್ = ಪೊಕ್ಕೆ || ಇಂತಪ್ಪನರಮನೆಯಂಪುಗದಿರ್ಕೆಂಬುದುತ್ತರವಾಕ್ಯಂ :

ಅನಧಿಕೃತೋsನನುಮತಶ್ಚರಾಜಸಭಾಂನಪ್ರವಿಶೇತ್ || ೭೫ || ೯೯೨ ||

ಅರ್ಥ : ಅನಧಿಕೃತಃ = ಅಧಿಕಾರಿಯಲ್ಲದನುಂ, ಅನನುಮತಶ್ಚ = ಒಡಂಬಡಲ್ಪಡದನುಂ (ಕರಸಿಕೊಳದವನು) ರಾಜಸಭಾ = ರಾಸಭೆಯಂ, ನಪ್ರವಿಶೇತ್ = ಪೊಗದಿರ್ಕ್ಕೆ || ಅಳಿಪಿಂದೆರಾಜಸಭೆಯಂಪುಗವೇಡೆಂಬುದುತಾತ್ಪರ್ಯಂ || ಪಿರಿಯರ್ಗಿಂತುಮಾಳ್ಕೆಂಬುದುತ್ತರವಾಕ್ಯಂ :

ಆರಾಧ್ಯಮುತ್ಥಾಯಾಭಿವಾದಯೇತ್ || ೭೬ || ೯೯೩ ||

ಅರ್ಥ : ಆರಾಧ್ಯಂ = ಆರಾಧ್ಯಂಗೆ, ಉತ್ಥಾಯ = ಇದಿರೆರ್ದು, ಅಭಿವಾದಯೇತ್ = ಪೊಡಮಡುಗೆ || ಪಿರಿಯರ್ಗ್ಗೆಕುಳ್ಳಿರ್ದಲ್ಲಿಯೇಪೊಡಮಡಲುಂನುಡಿಯಲುಮಾಗದೆಂಬುದುತಾತ್ಪರ್ಯಂ || ಇಂತಪ್ಪುದುಂತಾನೆನೋಳ್ಪುದೆಂಬುದುತ್ತರವಾಕ್ಯಂ :

—-

೭೨. ಮಾಡಲೇಬೇಕಾದಕಾರ್ಯದಬಗೆಗೆಆಲಸ್ಯಆಡಬಾರದು.

೭೩. ತನ್ನರಕ್ಷಣೆಯವಿಷಯದಲ್ಲಿಎಂದೂಅಜಾಗರೂಕತೆಯಿಂದಿರಕೂಡದು.

೭೪. ಧರ್ಮಾಸನಕ್ಕೆಹೋಗುವುದಕ್ಕೆಮೊದಲುಕರುವಿನೊಂದಿಗಿರುವಧೇನುವನ್ನುಪ್ರದಕ್ಷಿಣೆಮಾಡಬೇಕು.

೭೫. ಅಧಿಕಾರವಿಲ್ಲದವನು, ಅನುಮತಿಯಿಲ್ಲದವನುರಾಜಸಭೆಯನ್ನುಪ್ರವೇಶಿಸಲಾಗದು.

೭೬. ಪೂಜ್ಯರನ್ನುಎದ್ದುನಿಂತುಅಭಿವಂದನೆಮಾಡಬೇಕು.

—-

ದೇವಗುರುಧರ್ಮಕಾರ್ಯಾಣಿಸ್ವಯಂಪಶ್ಯೇತ್ || ೭೭ || ೯೯೪ ||

ಅರ್ಥ : ದೇವಗುರುಧರ್ಮಾಕಾರ್ಯಾಣಿ = ದೇವಗುರುಧರ್ಮಕಾರ್ಯಂಗಳಂ, ಸ್ವಯಂ = ತಾನೇ, ಪಶ್ಯೇತ್ = ನೋಳ್ಕೆ || ಪರಲೋಕಹಿತಮಪ್ಪದೇವಗುರುಧರ್ಮಕಾರ್ಯಂಗಳಂತಾನೇಮಾಳ್ಕೆಂಬುದುತಾತ್ಪರ್ಯಂ || ಇಂತಪ್ಪರೊಡನೆಪೋಗಲಾಗದೆಂಬುದುತ್ತರವಾಕ್ಯಂ :

ಕುಹಕಾಭಿಚಾರಕಾರ್ಮಣಕಾರಿಭಿಃ[8]ಸಹನಸಂಗಚ್ಛೇತ್ || ೭೮ || ೯೯೫ ||

ಅರ್ಥ : ಕುಹಕ = ಕೆಯ್ಯಡಕಂಮೊದಲಾಗೊಡೆಯಕುಟಿಲವಿದ್ಯೆಗಳುಮಂ, ಅಭಿಚಾರ = ಮಾರಣಾದಿಕ್ರಿಯೆಗಳುಮಂ, ಕಾರ್ಮಣ = ವಶ್ಯಮುಮೆಂಬಿವಂ, ಕಾರಿಭಿಃಸಹ= ಮಾಳ್ಪರೊಡನೆ, ನಸಂಗಚ್ಛೇತ್ = ಪೋಗದಿರ್ಕೆ || ಮಾಯಾವಿಗಳಸಂಘವೇಡೆಂಬುದುತಾತ್ಪರ್ಯಂ || ಇಂತಪ್ಪವಿನೋದಂಬೇಡೆಂಬುದುತ್ತರವಾಕ್ಯಂ :

ಪ್ರಾಣ್ಯುಪಘಾತೇನಕಾಮಪಿ[9]ಕ್ರೀಡಾಂಪ್ರವತ್ತಯೇತ್ || ೭೯ || ೯೯೬ ||

ಅರ್ಥ : ಪ್ರಾಣ್ಯಪಘಾತೇನ = ಪ್ರಾಣಿಯಂಪೀಡಿಸುವುದಱಿಂ, ಕಾಮಪಿಕ್ರೀಡಾಂ = ಅವವಿನೋದಮುಂ, ನಪ್ರವರ್ತಯೇತ್ = ಮಾಡದಿರ್ಕ್ಕೆ || ಪಾಪಮಿಲ್ಲದವಿನೋದಮಂಮಾಳ್ವುದೆಂಬುದುತಾತ್ಪರ್ಯಂ || ಪರಸ್ತ್ರೀಸಂಗಂಬೇಡೆಂಬುದುತ್ತರವಾಕ್ಯಂ :

ಜನನ್ಯಾಪಿಪರಸ್ತ್ರಿಯಾ[10]ಸಹರಹಸಿತಿಷ್ಠೇತ್ || ೮೦ || ೯೯೭ ||

ಅರ್ಥ : ಜನನ್ಯಾಪಿ = ತಾಯೊಡನಾದೊಡಂ, ಪರಸ್ತ್ರಿಯಾಸಹ = ಪರಸ್ತ್ರೀಯರೊಡನೆ, ರಹಸಿ = ಏಕಾಂತದೊಳ್, ನತಿಷ್ಠೇತ್ = ಇಱದಿರ್ಕ್ಕೆ | ಪರಸ್ತ್ರೀಯರೊಡನೇಕಾಂತದೊಳಿರೆಕೇಡುಮಪಾಯಮುಮಕ್ಕೆಂಬುದುತಾತ್ಪರ್ಯಂ || ಮಾನ್ಯರೊಳಿಂತುನೆಗಳಲಾಗದೆಂಬುದುದುತ್ತರವಾಕ್ಯಂ :

—-

೭೭. ದೇವ, ಗುರು, ಧರ್ಮಕಾರ್ಯಗಳನ್ನುರಾಜನುತಾನೇನೋಡಿಕೊಳ್ಳಬೇಕು.

೭೮. ಲಂಚಕರೊಂದಿಗೂ, ವಾಮಾಚಾರಿಗಳೊಂದಿಗೂಸೇರಕೂಡದು.

೭೯. ಪ್ರಾಣಿಗಳಿಗೆಹಿಂಸೆಯುಂಟಾಗುವಯಾವಆಟಗಳನ್ನೂಆಡಿಸಬಾರದು.

೮೦. ತಾಯಿಯೊಡನಾದರೂ, ಪರಸ್ತ್ರೀಯರೊಂದಿಗೆಏಕಾಂತದಲ್ಲಿರಬಾರದು.

—-

ನಾತಿಕ್ರುದ್ಧೋsಪಿಮಾನ್ಯಮತಿಕ್ರಮೇದವಮಾನ್ಯೇತವಾ || ೮೧ || ೯೯೮ ||

ಅರ್ಥ : ಅತಿಕ್ರದ್ಧೋsಪಿ = ಕರಂಮುಳಿದನಾಗಿಯುಂ, ಮಾನ್ಯಂ = ಮಾನ್ಯನಪ್ಪನಂ, ನಾತಿಕ್ರಮೇತ್ = ಅತಿಕ್ರಮಿಸದಿರ್ಕ್ಕೆ, ನಾವಮಾನ್ಕೇತವಾ = ಅವಮನ್ನಿಸದಿರ್ಕ್ಕೆ || ಮಾನ್ಯರನಪಮಾನಿಸೆವಿನಯದಕೇಡುಂಕೇಡುಮಕ್ಕೆಂಬುದುತಾತ್ಪರ್ಯಂ || ಇಂತಪ್ಪೆಡೆಯೊಳ್ಪುಗವೇಡೆಂಬುದುತ್ತರವಾಕ್ಯಂ :

ನಾಪ್ತಜನೈರಶೋಧಿತಂ[11]ಪರಸ್ಥಾನಮುಪೇಯಾತ್ || ೮೨ || ೯೯೯ ||

ಅರ್ಥ : ಪರಸ್ಥಾನಂ = ಪೆಱವೆಡೆಯಂ, ಆಪ್ತಜನೈರಶೋಧಿತಂ = ಆಪ್ತರಿಂದಾರಯ್ಯದುದಂ, ನೋಪೇಯಾತ್ = ಪೊರ್ದದಿರ್ಕ್ಕೆ || ಇಂತಪ್ಪುದನೇಱವೇಡೆಂಬುದುತ್ತರವಾಕ್ಯಂ :

ನಾಪ್ತಜನೈರನಾರೂಢಂವಾಹನಮಧ್ಯಾಸೀತ || ೮೩ || ೧೦೦೦ ||

ಅರ್ಥ : ಆಪ್ತಜನೈಃ = ಹಿತವರಪ್ಪವರಿಂ, ಅನಾರೂಢಂ = ಏರದ, ವಾಹನಂ = ವಾಹನಮಂ, ನಾಧ್ಯಾಸೀತ = ಏರದಿರ್ಕ್ಕೆ || ಇಂತಪ್ಪಲ್ಲಿಗೆಪೋಗವೇಡೆಂಬುದುತ್ತರವಾಕ್ಯಂ :

ನಸ್ಪೈರಪರೀಕ್ಷಿತಂತೀರ್ಥಂಸಾರ್ಥಂತಪಸ್ವಿನಂವಾಭಿಗಚ್ಛೇತ್ || ೮೪ || ೧೦೦೧ ||

ಅರ್ಥ : ಸ್ಟೈಃ = ತನ್ನವರಿಂ, ಅಪರೀಕ್ಷಿತಂ = ವಿಚಾರಿಸದ, ತೀರ್ಥ = ಪೊಳೆಯುಮಂ, ಸಾರ್ಥಂ = ಬೀಡುಮಂ, ತಪಸ್ವಿನಂವಾ = ತಪೋಧನಂಮೇಣ್, ನಾಭಿಗಚ್ಛೇತ್ = ಒಳಪೋಗದಿರ್ಕ್ಕೆ || ಇಂತಪ್ಪಬಟ್ಟೆಯಿಂನಡೆಯಿಸಲ್ವೇಡೆಂಬುದುತ್ತರವಾಕ್ಯಂ :

—-

೮೧. ಅತಿಯಾದಕೋಪದಿಂದಾದರೂರಾಜನುಮಾನ್ಯನನ್ನುಅತಿಕ್ರಮಿಸಕೂಡದು. ಅವಮಾನಿಸಕೂಡದು.

೮೨. ಆಪ್ತರಿಂದಪರಿಶೀಲಿಸಲ್ಪಡದಪರಸ್ಥಾನಗಳಿಗೆಹೋಗಬಾರದು.

೮೩. ಹಿತವಂತರುಏರದಿರುವವಾಹನವನ್ನುಏರಕೂಡದು.

೮೪. ತನ್ನವರಿಂದಪರೀಕ್ಷಿಸಲ್ಪಡದತೀರ್ಥಕ್ಷೇತ್ರಕ್ಕಾಗಲಿ, ವರ್ತಕರಬೀದಿಗಾಗಲೀ, ತಪಸ್ವಿಗಳಬಳಿಗಾಗಲಿಹೋಗಬಾರದು.

—-

ನಯಾಷ್ಟಿಕೈರವಿವಿಕ್ತಂಮಾರ್ಗಂಭಜೇತ್ || ೮೫ || ೧೦೦೨ ||

ಅರ್ಥ : ಯಾಷ್ಟಿಕ್ಕೆಃ = ಕಟ್ಟಿಗೆಕಾಱರಿಂ, ಅವಿವಿಕ್ತಂವಿಚಾರಿಸದ, ಮಾರ್ಗಂ = ಬಗ್ಗೆಯಂ, ನಭಜೇತ್ = ಪೋಪದಿರ್ಕ್ಕೆ || ಇಂತಿರಲ್ವೇಡೆಂಬುದುತ್ತರವಾಕ್ಯಂ :

ನಾವಿಷಾಪಹಾರೌಷಧಮಣಿಃ[12]ಕ್ಷಣಮಪ್ಯಾಸೀತ[13] || ೮೬ || ೧೦೦೩ ||

ಅರ್ಥ : ಅವಿಷಾಪಹಾರೌಷಧಮಣಿಃ = ವಿಷಮಪಹಿಸುವೌಷಧಮುಂ, ಮಣಿಯುಮಿಲ್ಲದನಾಗಿ, ಕ್ಷಣಮಪಿ = ಇನಿತುಪೊಳ್ತಪ್ಪೊಡಂ, ನಾಸೀತ = ಇರದಿರ್ಕ್ಕೆ ||

[14]ಮಂತ್ರಿಭಿಷಗ್ನೈಮಿತ್ತಿಕರರಹಿತಃಕದಾಚಿದಪಿಪ್ರತಿಷ್ಠೇತ್ || ೮೭ || ೧೦೦೪ ||

ಅರ್ಥ : ಮಂತ್ರಿ = ಮಂತ್ರಿಗಳುಂ, ಭಿಷಗ್ = ವೈದ್ಯನುಂ, ನೈಮಿತ್ತಿಕಂ = ನೈಮಿತ್ತಮಂಬಲ್ಲವರ್ಮೆಂದಿವರಿಂ, ರಹಿತಃ = ಅಗಲ್ದನಾಗಿ, ಕದಾಚಿದಪಿ = ಎಂದಪ್ಪೊಡಂ, ನಪ್ರತಿಷ್ಠೇತ್ = ಹೊರವಡಲಾಗದು || ಈವಸ್ತುವನಿಂತುಪರೀಕ್ಷಿಸುವುದೆಂಬುದುತ್ತರವಾಕ್ಯಂ :

ವಹ್ನಾವನ್ಯಚಕ್ಷುಷಿಭೋಗ್ಯಮುಪಭೋಗ್ಯಂಪರೀಕ್ಷೇತ || ೮೮ || ೧೦೦೫ ||

ಅರ್ಥ : ವಹ್ನಿ = ಕಿಚ್ಚನೊಳಂ, ಅನ್ಯಚಕ್ಷುಷಿಚ= ಪೆಱದೃಷ್ಟಿಯೊಳಂ, ಭೋಗ್ಯಮುಪಭೋಗ್ಯಂಚ = ಭೋಗಿಸಲುಮುಪಭೋಗಿಸಲುಮಿರ್ದಾಹಾರವಸ್ತ್ರಾದಿಗಳುಂ, ಪರೀಕ್ಷೇತ = ಪರೀಕ್ಷಿಸುಗೆ || ಇಂತಪ್ಪವಸರದೊಳ್ಕಾರ್ಯಾಂಗಳಂನೆಗಳ್ವುದೆಂಬುದುತ್ತರವಾಕ್ಯಂ :

—-

೮೫. ರಕ್ಷಕರುಪರಿಶೋಧಿಸದಮಾರ್ಗದಲ್ಲಿಹೋಗಕೂಡದು.

೮೬. ವಿಷಾಪಹಾರಿಯಾದಔಷಧವೂಮಣಿಯೂಹತ್ತಿರವಿರದೆಕ್ಷಣಮಾತ್ರವೂಇರಕೂಡದು.

೮೭. ಮಂತ್ರಿಗಳು, ವೈದ್ಯರು, ನೈಮಿತ್ತಿಕರುಜತೆಯಲ್ಲಿಲ್ಲದೆಎಂದೂಹೊರಹೊರಡಲಾಗದು.

೮೮. ಭುಜಿಸಲೂ, ಉಪಯೋಗಿಸಲೂಇರುವಆಹಾರ, ವಸ್ತ್ರಾದಿಗಳನ್ನುಬೆಂಕಿಯಲ್ಲೂ, ಇತರರುನೋಡುವುದರಿಂದಲೂಪರೀಕ್ಷಿಸಬೇಕು.

—-

 

[1]ಮತಿಯನುಳ್ಳದವನುಎಂದಿರಬೇಕು.

[2]ಮೈ. ಚೌ. ಸ್ನಸಾಃ.

[3]ತುಂದಿಲತಾಂಎಂದುಓದಬೇಕು.

[4]ಚೌ. ವಾಚಿಮನಸಿಶರೀರೇಇವುಹಿಂದಿನವಾಕ್ಯದಭಾಗಗಳಾಗಿವೆ.

[5]ಮೈ. ನಾದೇವೌದೇವದೇಹಪ್ರಸಾದೌಕುರ್ಯಾತ್.

[6]ಹೋಲಿಸಿರಿ: ಕೌಟಿಲ್ಯ (1. 16) ಆತ್ಮಮಬಲಾನಕೂಲೇನನಿಶಾಹರ್ಭಾಗಾನ್ಪ್ರವಿಭಜ್ಯಕಾರ್ಯಣಿಸೇವೇತ.

[7]ಧರ್ಮಾಸನ, ಧರ್ಮಗಳಪೇಳುಹತಾವುಅಂದರೆನ್ಯಾಯಾಸ್ಥಾನ.

[8]ಮೈ. ಚೌ. ಕರ್ಮಕಾರಿಭಿಃ.

[9]ಮೈ. ಚೌ. ಕಾಮಕ್ರೀಡಾಂ. ಈಪಾಠದಲ್ಲಿದೋಷವಿದೆ.

[10]ಚೌ. ಜನನ್ಯಾದಿಪರಸ್ತ್ರಿಯಾ.

[11]ಮೈ. ಚೌ. ನಾಪ್ತಶೋಧಿತಂ.

[12]ಮೈ. ಚೌ. ಮಣೀನ್.

[13]ಮೈ. ಪ್ಯುಪಾಸೀತ, ಈಪಾಠದಿಂದವಿಷಾಪಹಾರಿಔಷಧಿಅಥವಾಮಣಿಗಳನ್ನುಯಾವಕ್ಷಣಕ್ಕೂಸೇವಿಸಬಾರದುಎಂದಾಗುತ್ತದೆ. ಆದರೆಹಸ್ತಪ್ರತಿಯಪಾಠದಪ್ರಕಾರ, ಟೀಕಾಕಾರನುವಿವರಿಸಿದಂತೆವಿಷಾಪಹಾರಿಔಷಧಿಅಥವಾಮಣಿಇಲ್ಲದೆಎಲ್ಲಿಯೂಕ್ಷಣಮಾತ್ರವೂಇರಬಾರದುಎಂಬುದುಸಂದರ್ಭಕ್ಕೆಸೂಕ್ತವಾಗುತ್ತದೆ.

[14]ಮೈ. ದಲ್ಲಿಇದಕ್ಕೆಮೊದಲುಇನ್ನೊಂದುವಾಕ್ಯವಿದೆ.