ಅಮೃತೇಮರುತಿಪ್ರವಿಶತಿಸತಿಸರ್ವದಾಚೇಷ್ಟೇತ || ೮೯ || ೧೦೦೬ ||

ಅರ್ಥ : ಅಮೃತೇ = ಎಡದ[1], ಮರುತಿ = ವಾಯು, ಪ್ರವಿಶತಿಸತಿ = ಪುಗುತ್ತಿರಲ್, ಸರ್ವದಾ = ಎಲ್ಲಾಕಾಲಂ, ಚೇಷ್ಟೇತ = ಕಾರ್ಯಮಂಮಾಳ್ಕೆ ||

ಭುಕ್ತಿಸುರತಸಮರಾರ್ಥೀದಕ್ಷಿಣೇಮರುತಿಸ್ಯಾತ್ || ೯೦ || ೧೦೦೭ ||

ಅರ್ಥ : ದಕ್ಷಿಣೇ = ಬಲದ[2], ಮರುತಿ = ವಾಯುನಡೆಯುತ್ತಿರಲು, ಭುಕ್ತಿ = ಊಟಮುಂ, ಸುರತ = ಸುರತಮುಂ, ಸಮರ = ಸಂಗ್ರಾಮಮುಂ, ಅರ್ಥಿ = ಇಚ್ಛಿಸುವಂ, ಸ್ಯಾತ್ = ಅಕ್ಕೆ || ಇಂತಪ್ಪವಂಗಾವನುಂಮುನಿಯನೆಂಬದುತ್ತರವಾಕ್ಯಂ :

ಪರಮಾತ್ಮನಾಸಮೀಕುರ್ವನ್ನಕಸ್ಯಾಪಿಭವತಿದ್ವೇಷ್ಯಃ || ೯೧ || ೧೦೦೮ ||

ಅರ್ಥ : ಪರಪೆಱನಂ, ಆತ್ಮನಾಸಮೀಕುರ್ವನ್ = ತನ್ನೊಡನೆ[3]ಸಮಾನಂಮಾಡುತ್ತಿರ್ದಂ, ಕಸ್ಯಾಪಿ = ಆವಂಗಂ, ದ್ವೇಷ್ಯಃ = ಮುಳಿಯಲ್ಪಡುವಂ, ನಭವತಿ= ಆಗಂ || ಪೆಱರಂಮನ್ನಿಸಿಮುಳಿಸಲಾಗದೆಂಬುದುತಾತ್ಪಯಂ || ಕಾರ್ಯಮಪ್ಪುದಕ್ಕಿದುಚಿಹ್ನಮೆಂಬುದುತ್ತರವಾಕ್ಯಂ :

ಮನಃಪರಿಜನದಿನಶಕುನಪವನಾನುಲೋಮ್ಯಂಭವಿಷ್ಯತ್ಕಾರ್ಯಸಿದ್ಧಿರ್ಲಿಂಗಾನಿ || ೯೨ || ೧೦೦೯ ||

ಅರ್ಥ : ಮನಃ = ಮನಮುಂ, ಪರಿಜನಃ = ಪರಿವಾರಜನಮುಂ, ದಿನ = ದಿನಮುಂ, ಶಕುನ = ಶಕುನಮುಂ, ಪವನ = ವಾಯುಮೆಂಬಿವರಛ, ಅನುಲೋಮ್ಯಂ = ಅನುಕೂಲತೆ, ಭವಿಷ್ಯತ್ = ಮೇಲೆಅಹ, ಕಾರ್ಯಸಿದ್ಧೇಃ = ಕಾರ್ಯಸಿದ್ಧಿಗೆ, ಲಿಂಗಾನಿ = ಚಿಹ್ನಂಗಳುಂ || ಇವಿಲ್ಲದಂದುಕಾರ್ಯಸಿದ್ಧಿಯಲ್ಲೆಂಬುದುತಾತ್ಪರ್ಯಂ || ಇಂತುನೆಗಳವೇಡೆಂಬುದುತ್ತರವಾಕ್ಯಂ :

—-

೮೯. ಎಡದಗಾಳಿ (ಸುಖಕರವಾದ) ಗಾಳಿಪ್ರವೇಶಿಸುತ್ತಿರುವಲ್ಲಿಎಲ್ಲಕೆಲಸಗಳನ್ನುಮಾಡಬೇಕು.

೯೦. ಬಲದವಾಯುಬೀಸುತ್ತಿರಲುಊಟ, ಸುರತ, ಸಮರಗಳನ್ನುಅಪೇಕ್ಷಿಸಬೇಕು.

೯೧. ಇತರರನ್ನುಸಮಾನರೆಂದುಭಾವಿಸಿದರೆಯಾರೂದ್ವೇಷಿಸುವುದಿಲ್ಲ.

೯೨. ಮನಸ್ಸನ್ನು, ಪರಿಜನ, ದಿವಸ, ಶಕುನ, ವಾಯುಗಳಅನುಕೂಲತೆಯಮುಂಬರುವಕಾರ್ಯಸಿದ್ಧಿಯಸೂಚನೆಗಳು.

—-

ನೈಕೋನಕ್ತಂದಿವಾವಾಹಿಂಡೇತ[4] || ೯೩ || ೧೦೧೦ ||

ಅರ್ಥ : ಏಕಃ = ಓರ್ವನೇ, ನಕ್ತಂ = ಇರುಳುಂ, ದಿವಾವಾ = ಹಗಲುಂ, ನಹಿಂಡೇತ = ತೊಳಲದಿರ್ಕ್ಕೆ || ಅಡಕಂಬೆಱಸಿರ್ಪ್ಪುದೆಂಬುದುತಾತ್ಪರ್ಯಂ || ಅನ್ನೆವರಂಸಂಧ್ಯಾವಂದನೆಯಂಮಾಳ್ಪುದೆಂಬುದುತ್ತರವಾಕ್ಯಂ :

ಅಹನಿಸಂಧ್ಯಾಮುಪಾಸೀತಾನಕ್ಷತ್ರದರ್ಶನಾತ್ || ೯೪ || ೧೦೧೧ ||

ಅರ್ಥ : ಅಹನಿ = ಪಗಲು, ಅನಕ್ಷತ್ರದರ್ಶನಾತ್= ನಕ್ಷತ್ರಮಂಕಾಣ್ಬನ್ನೆವರಂ, ಸಂಧ್ಯಾ = ಸಂಜೆಯಂ, ಉಪಾಸೀತ = ವಂದನಂಗೈಯ್ಗೆ | ಬೈಗಿನಸಂಜೆಯೊಳ್ನಕ್ಷತ್ರಮಂಕಾಣ್ಬನ್ನೆವರಂಸಂಧ್ಯಾವಂದನಂಗೈಯ್ವುದೆಂಬುದುತಾತ್ಪರ್ಯಂ || ಆಕಾಲದೊಳೀಮಂತ್ರಮಂಜಪಿಸುವುದೆಂಬುದುತ್ತರವಾಕ್ಯಂ :

ಚತುಃಪಯೋಧಿಪಯೋಧರಾಂಧರ್ಮವತ್ಸವತೀಮುತ್ಸಾಹವಾಲಧೀಂವರ್ಣಾಶ್ರಮಖರಾಂಕಾಮಾರ್ಥಶ್ರವಣಾಂನಯಪ್ರತಾಪವಿಷಾಣಾಂಸತ್ಯಶೌಚಚಕ್ಷುಷೀಂನ್ಯಾಯಮಾರ್ಗಮುಖೀಮಿಮಾಂಗಾಂಗೋಪಯಾಮ್ಯತಸ್ತಮಹಂಮನಸಾಪಿಸಹೇಅಪರಾಧ್ಯೇತ್ತಸ್ಯೈಇತಿ (ಇಮಂ) ಮಂತ್ರಂಸಮಾಧಿಸ್ಥೋಜಪೇತ್ || ೯೫ || ೧೦೧೨ ||

ಅರ್ಥ : ಚತುಃಪಯೋಧಿ = ನಾಲ್ಕುಸಮುದ್ರಂಗಳೆಂಬ, ಪಯೋಧರಾಂ = ಮೊಲೆಗಳನುಳ್ಳ, ಧರ್ಮವತ್ಸವತೀಂ = ಧರ್ಮಮೆಂಬಕಱುವನುಳ್ಳ, ಉತ್ಸಾಹವಾಲಧೀಂ = ಉತ್ಸಾಹಮೆಂಬಬಾಲಮನುಳ್ಳ, ವರ್ಣಾಶ್ರಮಖುರಾಂ = ಚಾತುರ್ವರ್ಣಾಶ್ರಮಂಗಳೆಂಬಕೊಳಗುಗಳನುಳ್ಳ, ಕಾಮ = ಕಾಮಮುಂ, ಅರ್ಥ = ಅರ್ಥಮುಮೆಂಬಶ್ರವಣಾಂ = ಕಿವಿಗಳನುಳ್ಳ, ನಯ = ನೀತಿಯುಂ, ಪ್ರತಾಪ = ಪರಾಕ್ರಮಮೆಂಬ, ವಿಷಾಣಾಂ = ಕೋಡುಗಳನುಳ್ಳ, ಸತ್ಯ = ಸತ್ಯಮುಂ, ಶೌಚ = ಶೌಚಮುಮೆಂಬ, ಚಕ್ಷುಷೀಂ = ಕಣ್ಣುಗಳನುಳ್ಳ, ನ್ಯಾಯಮಾರ್ಗಮುಖೀಂ = ನ್ಯಾಯಮಾರ್ಗಮೆಂಬಮುಖಮನುಳ್ಳ, ಇಮಾಂಗಾಂ = ಈಪೃಥ್ವಿಯೆಂಬಗೋವನುಮಂ, ಅಹಂ = ಆಂ, ಗೋಪಯಾಮಿ = ರಕ್ಷಿಪೆಂ, ಅತಃ = ಅದುಕಾರಣಮಾಗಿ, ಯಃ = ಆವನೋರ್ವಂ, ತಸ್ಯೈ = ಅಂತಾಪ್ಪಾವಿಂಗೆ, ಅಪರಾಧ್ಯೇತ್ = ಪೊಲ್ಲಮೆಯಂಮಾಳ್ಕುಂ, ತಂ = ಆತನಂ, ಮನಸಾಪಿ = ಮನದಿಂದಮುಂ, ಅಹಂ = ಆಂ, ನಸಹೇ = ಸೈರಿಪೆನಲ್ಲಂ, ಇತಿಮಂತ್ರಂ = ಈಮಂತ್ರಮಂ, ಸಮಾದಿಸ್ಥಃ = ಏಕತ್ರಚಿತ್ತನಾಗಿ, ಜಪೇತ್ = ಜಪಂಗೈಯ್ಗೆ || ಇಂತುಣ್ಬುದೆಂಬುದುತ್ತರವಾಕ್ಯಂ :

—-

೯೩. ರಾತ್ರಿಯಲ್ಲಾಗಲಿ, ಹಗಲಿನಲ್ಲಾಗಲಿಏಕಾಕಿಯಾಗಿಅಲೆದಾಡಬಾರದು.

೯೪. ಹಗಲುನಕ್ಷತ್ರಗಳುಕಾಣುವಷ್ಟರೊಳಗೆಸಂಧ್ಯಾವಂದನೆಮಾಡಬೇಕು.

೯೫. ನಾಲ್ಕುಸಮುದ್ರಗಳೆಂಬಸ್ತನಗಳುಳ್ಳ, ಧರ್ಮವೆಂಬಕರುವುಳ್ಳ, ಉತ್ಸಾಹವೆಂಬಬಾಲವುಳ್ಳ, ವರ್ಣಾಶ್ರಮಗಳೆಂಬಗೊರಸುಳ್ಳ, ಕಾಮ, ಅರ್ಥಎಂಬಕಿವಿಗಳುಳ್ಳ, ನೀತಿ, ಪರಾಕ್ರಮಎಂಬಕೋಡುಗಳುಳ್ಳ, ಸತ್ಯಶೌಚಎಂಬಕಣ್ಣುಗಳುಳ್ಳ, ನ್ಯಾಯಮಾರ್ಗವೆಂಬಮುಖವುಳ್ಳಪೃಥ್ವಿಎಂಬಗೋವನ್ನುನಾನುರಕ್ಷಿಸುವೆನು. ಕಾರಣದಿಂದಯಾರುಅಂತಹಹಸುವಿಗೆಅಪರಾಧವನ್ನೆಸಗುವರೋಅಂತಹವರನ್ನುನನ್ನಮನಸ್ಸಿನಿಂದಲೂನಾನುಸೈರಿಸುವನಲ್ಲಎಂಬಮಂತ್ರವನ್ನುಏಕಾಗ್ರಚಿತ್ತನಾಗಿಜಪಿಸಬೇಕು.

—-

[5]ಕೋಕವದ್ಧಿವಾಕಾಮೋನಿಶಿಸ್ನಿಗ್ಧಂಭುಂಜೀತ || ೯೬ || ೧೦೧೩ ||

ಅರ್ಥ : ಕೋಕವತ್ = ಜಕ್ಕವಕ್ಕಿಯಂತೆ, ದಿವಾಕಾಮಃ = ಪಗಲುಕಾಮಸೇವನೆಯುಳ್ಳವನು, ನಿಶಿ = ಇರುಳೊಳ್, ಸ್ನಿಗ್ಧಂ = ಸ್ನಿಗ್ಧಂ = ಸ್ನಿಗ್ಧಮಪ್ಪುದಂ (ಕ್ಷೀರಾದಿಸ್ನಿಗ್ಧವಸ್ತುವನು) ಭುಂಜೀತ = ಉಣ್ಗೆ ||

ಚಕೋರವನ್ನಕ್ತಂಕಾಮೋದಿವಾ || ೯೭ || ೧೦೧೪ ||

ಅರ್ಥ : ಚಕೋರವತ್ = ಚಕೋರನಂತೆ, ನಕ್ತಂ = ಇರುಳೊಳ್, ಕಾಮಃ = ಕಾಮಸೇವನೆಯನುಳ್ಳವನು, ದಿವಾಚ = ಪಗಲುಸ್ನಿಗ್ಧಮನುಣ್ಗೆ ||

ಪಾರಾವತಕಾಮೋವೃಷ್ಯಾನ್ನಯೋಗಾತ್ಚರೇತ್ || ೯೮ || ೧೦೧೫||

ಅರ್ಥ : ಪಾರಾವತಕಾಮಃ = ಪಾರಿವದಂತೆಇರುಳುಂಪಗಲುಂಕಾಮಮನುಳ್ಳಂ, ವೃಷ್ಯಾನ್ನಯೋಗಾತ್ = ವೃಷ್ಯ = ಇಂದ್ರಿಯವರ್ಧನಂಗಳಪ್ಪ, ಅನ್ನ = ಆಹಾರಮುಂ, ಯೋಗಾತ್ = ಯೋಗಂಗಳುಮಂ, ಚರೇತ್ = ಉಣ್ಗೆ || ವೀರ್ಯವರ್ಧನಮಪ್ಪಂತೆಮಾಣ್ಪುದೆಂಬುದುತಾತ್ಪರ್ಯಂ || ವೀರ್ಯವರ್ಧನಯೋಗಮಂಪೇಳ್ವುದುತ್ತರವಾಕ್ಯಂ :

ಭಷ್ಕಯಣೀನಾಂಸುರಭೀಣಾಂಪಯಸ್ಸಿದ್ಧಂಮಾಷದಳಪರಮಾನ್ನಂಪರೋಯೋಗಃಸ್ಮರಸಂವರ್ಧನೇ || ೯೯ || ೧೦೧೬ ||

ಅರ್ಥ : ಭಷ್ಕಯಣೀನಾಂ = ಎಳಗಂದಿಗಳಪ್ಪ, ಸುರಭೀಣಾಂ = ಆಕಳ, ಪಯಸ್ಸಿದ್ಧಂ = ಪಾಲಿಂದಟ್ಟ, ಮಾಷದಳಪರಮಾನ್ನಂ = ಉದ್ದಿನಬೇಳೆಯತುಯಲ್, ಸ್ಮರಸಂವರ್ಧನೇ = ಕಾಮಮಂಪೆರ್ಚಿಸುವಲ್ಲಿ (ವೀರ್ಯವರ್ಧನ) ಪರಃ = ಮಿಕ್ಕ, ಯೋಗಃ = ಯೋಗಂ || ಇಂತಪ್ಪಸ್ತ್ರೀಯಂಪೋಗಲಾಗದೆಂಬುದುತ್ತರವಾಕ್ಯಂ :

—-

೯೬. ಚಕ್ರವಾಕಪಕ್ಷಿಯಂತೆಹಗಲುಕಾಮಸೇವನೆಯುಳ್ಳವನುರಾತ್ರಿಸ್ನಿಗ್ಧವಸ್ತುಗಳನ್ನುತಿನ್ನಬೇಕು.

೯೭. ಚಕೋರಪಕ್ಷಿಯಂತೆರಾತ್ರಿಕಾಮಸೇವನೆಯುಳ್ಳವನುಹಗಲಿನಲ್ಲಿಸ್ನಿದ್ಧವಸ್ತುಗಳನ್ನುತಿನ್ನಬೇಕು.

೯೮. ಪಾರಿವಾಳದಂತೆರಾತ್ರಿಯೂಹಗಲೂಕಾಮವನುಳ್ಳವನುಇಂದ್ರಿಯವರ್ಧನಗಳಪ್ಪಆಹಾರಗಳನ್ನುಭುಜಿಸಬೇಕು.

೯೯. ಎಳಗಂದಿಯಾದಆಕಳಹಾಲಿನಲ್ಲಿಬೇಯಿಸಿಸಿದ್ಧಪಡಿಸಿದಉದ್ದಿನಬೇಳೆಯಪರಮಾನ್ನವುವೀರ್ಯವರ್ಧನೆಯಲ್ಲಿಉಪಯುಕ್ತವು.

—-

ನಾವೃಷಸ್ಯಂತೀಂಸ್ತ್ರಿಯಮಭಿಯಾಯಾತ್ || ೧೦೦ || ೧೦೧೭ ||

ಅರ್ಥ : ಅವೃಷಸ್ಯಂತೀಂ = ಮೀಹಂಮಾಣ್ದ (ಕಾಮುಕಿಯಲ್ಲದ) ಸ್ತ್ರಿಯಂ = ಸ್ತ್ರೀಯಂ, ನಾಭಿಯಾಯಾತ್ = ಪೊಗದಿರ್ಕ್ಕೆ || ಅಂತಪ್ಪಲ್ಲಿವಳ್ಗೆವೀರ್ಯಮಲ್ಲೆಂಬುದುತಾತ್ಪರ್ಯಂ || ಮತ್ತಂಪ್ರಕೃತಿಯಪ್ಪಳ್ಗಿಂತಪ್ಪಪ್ರದೇಶಂಲೇಸೆಂಬುದುತ್ತರವಾಕ್ಯಂ :

ಉಷ್ಣಪ್ರಕರ್ಷವಾನ್[6]ಪ್ರದೇಶಃಪರಮಂರಹಸ್ಯಮನುರಾಗೇಪ್ರಥಮಪ್ರಕೃತೀನಾಂ[7] || ೧೦೧ || ೧೦೧೮ ||

ಅರ್ಥ : ಉಷ್ಣಪ್ರಕರ್ಷವಾನ್ = ಪಿರಿದಪ್ಪುಷ್ಣಮನುಳ್ಳ, ಪ್ರದೇಶಃ = ಎಡೆ, ಪ್ರಥಮಪ್ರಕೃತೀನಾಂ = ವಾತಾಧಿಕೆಯರ್ಗ್ಗೆ (ವಾತಪ್ರಕೃತಿಯನುಳ್ಳಸ್ತ್ರೀಪುರುಷರ್ಗೆ) ಅನುರಾಗೇ = ಪ್ರೀತಿಯೊಳ್, ಪರಮಂರಹಸ್ಯಂ = ಪರಮರಹಸ್ಯವು || ವಾತಾಧಿಕೆಯರುಷ್ಣದೊಳ್ದ್ರವಿಸಲುಳಿದವರ್ಸಮಶೀತೋಷ್ಣಸ್ಥಾನದೊಳ್ದ್ರವಿಸುವರೆಂಬುದುತಾತ್ಪರ್ಯಂ || ಇಂತುವಶಮಪ್ಪರೆಂಬುದುತ್ತರವಾಕ್ಯಂ :

ಸ್ತ್ರೀಪುಂಸಯೋರ್ನಸಮಸಮಾಯೋಗಾತ್ಪರಂವಶೀಕರಣಮಸ್ತಿ || ೧೦೨ || ೧೦೧೯ ||

ಅರ್ಥ : ಸ್ತ್ರೀಪುಂಸಯೋಃ = ಸ್ತ್ರೀಪುರುಷರಿಗೆ, ಸಮಸಮಾಯೋಗಾತ್ = ಸಮಾನಮಪ್ಪಸುಖದಕೂಟದಿಂ, ಪರಂ = ಪೆಱತು, ವಶೀಕರಣಂ = ಜಸಂಮಾಳ್ಪುದು, ನಾಸ್ತಿ = ಇಲ್ಲ || ಸಮಕಾಲೇಂದ್ರಿಯಪಾತಮೇವವಶೀಕರಣಮೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

 

—-

ಪ್ರಕೃತಿರುಪದೇಶಃಸ್ವಾಭಾವಿಕಂಪ್ರಯೋಗವೈದಗ್ಧ್ಯಮಿತಿಸಮಸಮಾಯೋಗಕಾರಣಾನಿ || ೧೦೩ || ೧೦೨೦ ||

ಅರ್ಥ : ಪ್ರಕೃತಿಃ = ಸಮಪ್ರಕೃತಿಯುಂ, ಉಪದೇಶಃ = ಪೂರ್ವಶಾಕ್ತಾಚಾರ್ಯಚಂದ್ರಕಳಾದ್ಯುಪದೇಶಮುಂ, ಸ್ವಾಭಾವಿಕಂಚ = ಸ್ವಭಾವಗುಣವು, ಪ್ರಯೋಗ = ಪ್ರಯೋಗವು, ವೈದಗ್ಧ್ಯಮಿತಿ = ಬಂಧಕರಣಾದಿಗಳಂಯೋಚಿಸುವಪ್ರೌಢಿಮೆಯೆಂದಿವು, ಸಮಸಮಾಯೋಗಕಾರಣಾನಿ = ಸಮಸುರತಕ್ಕೆಕಾರಣಂಗಳು || ಈಸಾಮಗ್ರಿಇಲ್ಲದೆಸುರತಮಾಗದೆಂಬುದುತಾತ್ಪರ್ಯಂ || ಇಂತಪ್ಪವಸರದೊಳ್ಸುರತಸಂಭೋಗಮಾಗಂಬುದುತ್ತರವಾಕ್ಯಂ :

ಕ್ಷುತ್ತರ್ಷಪುರೀಷಾಭಿಷ್ಯಂದಾರ್ತಸ್ಯಾಭಿಗಮೋನಾಪತ್ಯಮನವದ್ಯಂಕರೋತಿ || ೧೦೪ || ೧೦೨೧ ||

ಅರ್ಥ : ಕ್ಷುತ್ = ಪಸಿವುಂ, ತರ್ಷ = ನೀರಳ್ಕೆಯುಂ, ಪುರೀಷಂ = ಮಲಮುಂ, ಅಭಿಷ್ಯಂದಂ = ಮೂತ್ರಮುಮೆಂಬಿವಱಿಂ, ಆರ್ತಸ್ಯ = ಪೀಡಿಸಲ್ಪಟ್ಟನ, ಅಭಿಗಮಃ = ಸಂಭೋಗಂ, ಅನವದ್ಯಮಪತ್ಯಂ = ಒಳ್ಳಿದನಂಪುತ್ರನಂ, ನಕರೋತಿ = ಮಾಡದು || ಕ್ಷುಧಾದಿವೇಧಂಗಳಂತಾಳ್ದಿಸಂಭೋಗಮಂಮಾಡಲಾಗದೆಂಬುದುತಾತ್ಪರ್ಯಂ || ಇಂತಪ್ಪಲ್ಲಿಸಂಭೋಗಮಾಗಲಾಗದೆಂಬುದುತ್ತರವಾಕ್ಯಂ :

ಸಂಧ್ಯಾಸುದಿವಾಪ್ಸುದೇವಾಯತನೇಮೈಥುನಂಕುರ್ವೀತ || ೧೦೫ || ೧೦೨೨ ||

ಅರ್ಥ : ಸಂಧ್ಯಾಸು = ಸಂಜೆಗಳಲ್ಲಿ, ದಿವಾ = ಪಗಲೊಳಂ, ಅಪ್ಸು = ನೀರ್ಗಳೊಳಂ, ದೇವಾಯತನೇ = ದೇವತಾಶ್ರಯದೊಳಂ (ದೇವಾಲಯ) ಮೈಥುನಂ = ರತಮಂನಕುರ್ವೀತ = ಮಾಡದಿರ್ಕ್ಕೆ || ಮನೋವ್ರಗ್ರಾದಿಗಳಪ್ಪುಮೆಂಬುದುತಾತ್ಪರ್ಯಂ ||

ಪರ್ವಣಿಪರ್ವಸಂಧೌಉಪಹತೇವಾಹನಿಕುಲಸ್ತ್ರಿಯಂಗಚ್ಛೇತ್ || ೧೦೬ || ೧೦೨೩ ||

ಅರ್ಥ : ಪರ್ವಣಿ = ಪರ್ವದೊಳಂ, ಪರ್ವಸಂಧೌ = ಪರ್ವಮುಖದೊಳಂ, ಉಪಹತೇವಾಹನಿ = ಗ್ರಹಣಸಂಕ್ರಮಣಾದಿಗಳಿಂಬಾಧಿಸೆಪಟ್ಟದಿವಸದೊಳ್ಮೇಣ್, ಕುಲಸ್ತ್ರಿಯಂ = ಸಜ್ಜನಸ್ತ್ರಿಯಂ, ನೋಪಗಚ್ಛೇತ್ = ಪೋಗದಿರ್ಕ್ಕೆ || ಪುಣ್ಯದಿನಂಗಳೊಳಂಅಶುಭದಿನಂಗಳೊಳಂಮಾಡಲಾಗದೆಂಬುದುತಾತ್ಪರ್ಯಂ || ಕುಲಸ್ತ್ರೀಯಲ್ಲಿಗೆಪೋಪಲ್ಲಿಗಿಂತುಮಾಳ್ಕೆಂಬುದುತ್ತರವಾಕ್ಯಂ :

—-

೧೦೦.ಋತುಸ್ನಾನನಿಂತಸ್ತ್ರೀಯನ್ನುಕೂಡಬಾರದು.

೧೦೧. ಹೆಚ್ಚುಉಷ್ಣತೆಯುಳ್ಳಪ್ರದೇಶವುಪಿತ್ತಪ್ರಕತಿಯುಳ್ಳವರಿಗೆಪರಮರಹಸ್ಯಸ್ಥಾನ.

೧೦೨. ಸ್ತ್ರೀಪುರುಷರಿಗೆಸಮಾನವಾದಕೂಟವಲ್ಲದಬೇರಾವವಶೀಕರಣಎಂಬುದಿಲ್ಲ.

೧೦೩. ಇಬ್ಬರದೂಒಂದೇಆದಪ್ರಕೃತಿಯೂ, ಪೂರ್ವಉಪದೇಶ, ಸ್ವಭಾವಸಿದ್ಧವಾಗಿಬಂದಪ್ರಯೋಗನೈಪುಣ್ಯಇವುಸಮಸಮಾಯೋಗಕ್ಕೆಕಾರಣಗಳು.

೧೦೪. ಹಸಿವು, ನೀರಡಿಕೆ, ಮಲಮೂತ್ರಗಳಿಂದಪೀಡಿಸಲ್ಪಟ್ಟವರಸಂಭೋಗವುಒಳ್ಳೆಯಪುತ್ರೋತ್ಪತ್ತಿಗೆಕಾರಣವಾಗದು.

೧೦೫. ಸಂಧ್ಯಾಸಮಯಗಳಲ್ಲಿಹಗಲಲ್ಲಿ, ನೀರಿನಲ್ಲಿ, ದೇವಾಲಯದಲ್ಲಿಮೈಋಉನವನ್ನುಮಾಡಕೂಡದು.

೧೦೬. ಪರ್ವದಿನಗಳಲ್ಲೂ, ಸರ್ವಸಂಧಿಯದಿವಸಗಳಲ್ಲಿಯೂಗ್ರಹಣಸಂಕ್ರಮಣಾದಿಗಳಸಂಬಂಧವಿರುವದಿವಸಗಳಲ್ಲಿಯೂಕುಲಸ್ತ್ರೀಯನ್ನುಸೇರಕೂಡದು.

—-

ತದ್ಗೃಹಾಭಿಗಮನೇಕಾಮಪಿಸ್ತ್ರಿಯಮಧಿಶಯೀತ || ೧೦೭ || ೧೦೨೪ ||

ಅರ್ಥ : ತದ್ಗೃಹಾಭಿಗಮನೇ = ಕುಲಸ್ತ್ರೀಯಮನೆಗೆಪೋಪದಿವಸದೊಳ್ಕಾಮಪಿಸ್ತ್ರಿಯಂ = ಆವಸ್ತ್ರೀಯುಮಂ, ನಾಧಿಶಯೀತ = ಪೋಗದಿರ್ಕ್ಕೆ || ವೀರ್ಯಕ್ಷಯಾದಿಗಳಪ್ಪದೋಷಂಗಳಕ್ಕುಮೆಂಬುದುತಾತ್ಪರ್ಯಂ || ಇಂತಪ್ಪನೆಗಳ್ತೆನಗಿಸುವುದೆಂಬುದುತ್ತರವಾಕ್ಯಂ :

ವಂಶವಯೋವೃತ್ತವಿದ್ಯಾವಿಭವಾನನುರೂಪೋವೇಷಃಸಮಾಚಾರೋವಾಕಂವಿಡಂಬಯತಿ || ೧೦೮ || ೧೦೨೫ ||

ಅರ್ಥ : ವಂಶ = ಅನ್ವಯಮುಂ, ವಯಃ = ಪ್ರಾಯಮುಂ, ವೃತ್ತ = ನೆಗಳ್ತೆಯುಂ, ವಿದ್ಯಾ = ವಿದ್ಯೆಯುಂ, ವಿಭವ = ಸಿರಿಯುಂಎಂಬಿವಕ್ಕೆ, ಅನನುರೂಪೋವೇಷಃ = ತಕ್ಕದಲ್ಲದಕೆಯ್ತಂ, ಸಮಾಚಾರೋವಾ = ನೆಗಳ್ತೆವೇಣ್, ಕಂ = ಆವನಂ, ನವಿಡಂಬಯತಿ = ನಗಿಸದು (ಮರುಳುಮಾಡದು) ವಂಶಾದಿಗಳ್ಗುಚಿತ್ತಮಪ್ಪುದಂನೆಗಳ್ವುದೆಂಬುದುತಾತ್ಪರ್ಯಂ || ಅರಮನೆಯಪೊಗುವಪೊಱಮಡುವುದನಾರಯ್ವುದೆಂಬುದುತ್ತರವಾಕ್ಯಂ :

ಅಪರೀಕ್ಷಿತಮಶೋಧಿತಂರಾಜಕುಲೇಕಿಂಚಿತ್ (ಕಂಚನ) ಪ್ರವೇಶಯೇನ್ನಿಃಕಾಷಯೇದ್ವಾ || ೧೦೯ || ೧೦೨೬ ||

ಅರ್ಥ : ಅಪರೀಕ್ಷಿತಂ = ಒಳ್ಳಿತ್ತು = ಪೊಲ್ಲದುದಾರಯ್ಯದುದಂ, ಅಶೋಧಿತಂಚ = ಒಳಗಂನೋಡಿಶೋಧಿಸದುದಂ, ರಾಜಕುಲೇ = ಅರಮನೆಯೊಳ್, ಕಿಂಚಿತ್ = ಏನುಮಂ, ನಪ್ರವೇಶಯೇತ್= ಪುಗದಿಕ್ಕೆ, ನನಿಷ್ಕಾಂಸಯೇದ್ವಾ = ಪೊಱಮಡಿಸದಿರ್ಕ್ಕೆಮೇಣ್ || ಶೋಧಿಸದಿರ್ದೊಡೆದೋಷಮಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

೧೦೭. ಕುಲಸ್ತ್ರೀಸಂಗಕ್ಕಾಗಿಹೋಗುವಮುನ್ನಬೇರೆಯಾವಸ್ತ್ರೀಸಂಗವನ್ನುಮಾಡಕೂಡದು.

೧೦೮. ಮನೆತನ, ವಯಸ್ಸು, ನಡವಳಿಕೆ, ವಿದ್ಯೆ, ಐಶ್ವರ್ಯಗಳಿಗೆಅನುರೂಪವಲ್ಲದಉಡುಗೆತೊಡುಗೆಗಳೂಆಚರಣೆಯೂಯಾವನನ್ನುತಾನೇನಗೆಗೀಡುಮಾಡವು?

೧೦೯. ಸರಿಯಾಗಿಪರೀಕ್ಷಿಸದೆ, ಶೋಧಿಸದೆಏನನ್ನೂರಾಜಗೃಹದೊಳಗೆಅಥವಾಹೊರಗೆಬಿಡಕೂಡದು.

—-

ಶ್ರೂಯತೇಹಿಕಿಲಸ್ತ್ರೀವೇಷಧಾರೀಕುಂತಲವಿಷಯಾಧಿಪತಿಪ್ರಯುಕ್ತೋಗೂಢಪುರುಷಃಕರ್ಣನಿಹಿತೇನಾಸಿಪತ್ರೇಣಪಲ್ಲವನರೇಂದ್ರಂಹಯಪತಿಶ್ಚಮೇಷವಿಷಾಣನಿಹಿತೇನವಿಷೇಣಕುಶಸ್ಥಲೇಶ್ವರಂಜಘಾನೇತಿ[8] || ೧೧೦ || ೧೦೨೭ ||

ಅರ್ಥ : ಸ್ತ್ರೀವೇಷಧಾರೀಪೆಣ್ಣುರೂಪಂತಾಳ್ದಿದ, ಕುಂತಲವಿಷಯಾಧಿಪತಿಪ್ರಯುಕ್ತಃ = ಕುಂತಳದೇಶದರಸನಟ್ಟಿದ, ಗೂಡಪುರುಷ = ಅಸಿಯೆಱುಕಾಱ,[9]ಕರ್ಣನಿಹಿತೇನ = ಕಿವಿಯೊಳಗಿಕ್ಕಿದ್ದ, ಅಸಿಪತ್ರೇಣ[10] = ಖಡ್ಗಮಪ್ಪೋಲೆಯಿಂ, ಪಲ್ಲವನರೇಂದ್ರಂ = ಪಲ್ಲವನರೇಂದ್ರನಂ (ಪಲ್ಲವದೇಶದೊಡೆಯನನು) ಜಘಾನೇತಿ = ಕೊಂದನೆಂದಿಂತು, ಶ್ರೂಯತೇಹಿಕಿಲ = ಕೇಳಲ್ಬರ್ಪ್ಪುದಲ್ತೆ, ಹಯಪತಿಶ್ಚ = ಪಶ್ವಪತಿಯುಂ, ಮೇಷವಿಷಾಣನಿಹಿತೇನ = ತಗರಕೋಡೊಳಿಕ್ಕಿದ, ವಿಷೇಣ = ವಿಷದಿಂದಂ, ಕುಶಸ್ಥಲೇಶ್ವರಂ = ಕುಶಸ್ಥಲಮೆಂಬನಾಡೊಡೆಯನಂ, ಜಘಾನೇತಿ = ಕೊಂದನೆಂದಿಂತು, ಶ್ರೂಯತೇಹಿಕಿಲ = ಕೇಳಲ್ಬರ್ಪುದಲ್ತೆ || ಪರೀಕ್ಷಿಸಲ್ವೇಳ್ಕುಮೆಂಬುದುತಾತ್ಪರ್ಯಂ || ಎಲ್ಲೆಡೆಯೊಳಂನಂಬುಗೆಇಲ್ಲದೊಡೆದೋಷಮಂಪೇಳ್ವುದುತ್ತರವಾಕ್ಯಂ :

—-

೧೧೦. ಕುಂತಲಾಧಿಪತಿಯುಕಳುಹಿಸಿದಸ್ತ್ರೀವೇಷಧಾರಿಯಾದಗೂಡಪುರುಷನುಕಿವಿಯಬಳಿಇಟ್ಟುಕೊಂಡಿದ್ದಕತ್ತಿಯಅಲಗಿನಿಂದಪಲ್ಲವನರೇಂದ್ರನನ್ನುಕೊಂದನೆಂದೂ, ಹಯಪತಿಯುಮೇಕೆಯಕೊಂಬಿನಲ್ಲಿಇಟ್ಟಿದ್ದವಿಷದಿಂದಕುಲಸ್ಥಲೇಶ್ವರನನ್ನುಕೊಂದನೆಂದೂತಿಳಿದುಬರುವುದು.

—-

ಸರ್ವತ್ರಾಶ್ವಾಸೇ[11]ನಾಸ್ತಿಕಾಚಿತ್ಕ್ರಿಯಾ || ೧೧೧ || ೧೦೨೮ ||

ಅರ್ಥ : ಸರ್ವತ್ರ = ಎಲ್ಲೆಡೆಯೊಳಂ, ಆಶ್ವಾಸೇ = ನಂಬುಗೆಯಲ್ಲದಿರಲು, ಕಾಚಿತ್ಕ್ರಿಯಾ = ಅರಸಂಗೆಆವನೆಗಳ್ತೆಯುಂ, ನಾಸ್ತಿ = ಇಲ್ಲ || ಎಲ್ಲರಂನಂಬದಿರಲಾಗದೆಂಬುದುತಾತ್ಪರ್ಯಂ ||

ಇತಿದಿವಸಾನುಷ್ಠಾನಸಮುದ್ದೇಶಃ || ೨೪ ||[12]

ಸಮುದ್ದೇಶದವಾಕ್ಯಂ || ೧೧೧ || ಒಟ್ಟು || ೧೦೨೮ ||

—-

೧೧೧. ಎಲ್ಲೆಡೆಯಲ್ಲಿಯೂನಂಬುಗೆಯಲ್ಲದಿರಲುಅರಸನುಮಾಡುವುದೇನೂಇರದು.

—-

 

[1]ಎಡದವಾಯುಪುಗುತ್ತಿರಲ್, ಉತ್ತರದಿಂದಗಾಳಿಬೀಸುವಸಮಯದಲ್ಲಿಅಂದರೆಅಮೃತಸಿದ್ಧಿಯೋಗದಲ್ಲಿಎಂದುಚೌ. ದಲ್ಲಿವಿವರಿಸಲಾಗಿದೆ.

[2]ಬಲದವಾಯುನಡೆಯುತ್ತಿರಲುಅಂದರೆದಕ್ಷಿಣದಿಂದಗಾಳಿಬೀಸುವಾಗಎಂದರ್ಥ. ಇದನ್ನುವಸಂತಋತುವಿನಕಾಲಎಂದುಚೌ. ದಲ್ಲಿವಿವರಿಸಲಾಗಿದೆ.

[3]ಹೋಲಿಸಿರಿ: ತನ್ನಂತೆಪರರಬಗೆದೊಡೆಕೈಲಾಸಬಿನ್ನಣವಕ್ಕುಸರ್ವಜ್ಞ.

[4]ಹಿಂಡ= ತೊಳಲುಎಂದುನಮ್ಮಟೀಕಾಕಾರನುವಿವರಿಸಿದ್ದುಅದುತಿರುಗಾಡು, ಅಡ್ಡಾಡುಎಂಬಅರ್ಥದಲ್ಲಿದೆ. ಹಿಂಡ= ಶಬ್ಧಈಅರ್ಥದಲ್ಲಿಮರಾಠಿಯಲ್ಲಿಪ್ರಷಲಿತವಿದೆ.

[5]ಮೈ. ಈಮತ್ತುಮುಂದಿನವಾಕ್ಯಗಳುಒಂದೇವಾಕ್ಯದಲ್ಲಿಅಡಕವಾಗಿವೆ.

[6]ಚೌ. ಉತ್ತರಪ್ರವರ್ಷವಾನ್.

[7]ಇಲ್ಲಿಮೂರುಪ್ರತಿಗಳಲ್ಲಿಬಹಳವ್ಯತ್ಯಾಸವಿದೆ. ಮೈ. ದಲ್ಲಿಒಂದೇವಾಕ್ಯದಲ್ಲಿಮೂರುವಿಧದಪ್ರಕೃತಿಯವರಬಗ್ಗೆಹೇಳಿದೆ. ನಮ್ಮಪ್ರತಿಗಳಲ್ಲಿಮೊದಲನೆಯದೊಂದೇಇದ್ದುಇನ್ನೆರಡುಪ್ರಕೃತಿಗಳನ್ನುಕುರಿತುವಾಕ್ಯಗಳಿಲ್ಲವೇಇಲ್ಲ. ಇದರಿಂಧಟೀಕಾಕಾರನಿಗೆಗೊಂದಲವುಂಟಾದಂತೆತೋರುತ್ತದೆ. ಅವನುಪ್ರಥಮಪ್ರಕೃತಿಎಂಬಶಬ್ಧಕ್ಕೆವಾತಾಧಿಕೆಯರುವಾತಪ್ರಕೃತಿಯುಳ್ಳಸ್ತ್ರೀಪುರುಷರುಎಂದುಅರ್ಥಮಾಡಿದ್ದಾನೆ. ಇದುಸಂದರ್ಭಕ್ಕೆಸರಿಹೊಂದುವುದಿಲ್ಲ. ತಾತ್ಪರ್ಯವೂಸಮಂಜಸವಿಲ್ಲ.

[8]ಇಲ್ಲಿಐತಿಹಾಸಿಕವೆನಿಸಬಹುದಾದಎರಡುಘಟನೆಗಳಉಲ್ಲೇಖವಿದೆ. ಆದರೆಅವುಗಳಐತಿಹಾಸಿಕತೆಯನ್ನುನಿರ್ಣಯಿಸುವುದುಸಾಧ್ಯವಿಲ್ಲವಾಗಿದೆ. ಕುಂತಲದೇಶದಅರಸನೊಬ್ಬನಆಜ್ಞೆಯಂತೆಗುಪ್ತಚಾರನೊಬ್ಬನುಸ್ತ್ರೀವೇಷಧರಿಸಿಕಿವಿಯಲ್ಲಿಬಚ್ಚಿಟ್ಟುಕೊಂಡಚೂರಿಯಿಂದಪಲ್ಲವಅರಸನನ್ನುಕೊಂದನೆಂಬುದುಒಂದುಘಟನೆ. ಇಲ್ಲಿಸೋಮದೇವಸೂರಿಯಕಾಲದಲಲ್ಲಿಅಂದರೆ೧೦ನೇಶತಮಾನದಲ್ಲಿಕುಂತಲಅಂದರೆಸ್ಥೂಲವಾಗಿಕರ್ನಾಟಕವೆಂದುಹೇಳಬಹುದಾದರೂಅದರಅರಸನುಯಾರೆಂಬುದುತಿಳಿಯವದಿಲ್ಲ. ಅದರಂತೆಪಲ್ಲವಅರಸನುಯಾರುಎಂಬುದೂಗೊತ್ತಾಗುವುದಿಲ್ಲ. ಆಕಾಲದಲಲ್ಲಿಕುಂತಲದಲ್ಲಿಬಾದಾಮಿಚಾಲುಕ್ಯರು, ನಂತರರಾಷ್ಟ್ರಕೂಟರುಆಳುತ್ತಿದ್ದರುಮತ್ತುದಕ್ಷಿಣದಪಲ್ಲವರುಈಎರಡೂಮನೆತನಗಳಸಮಕಾಲೀನರಾಗಿದ್ದರುಮತ್ತುಪರಸ್ಪರವಿರೋಧಿಗಳೂಇದ್ದರು. ಆದರೆ, ಯಾವುದೇಕುಂತಲರಾಜನುಯಾವುದೇಪಲ್ಲವರಾಜನನ್ನುಕೊಂದನೆಂಬಬಗ್ಗೆಐತಿಹಾಸಿಕದಾಖಲೆಇಲ್ಲ. ಹಯಪತಿಯೆಂಬವನುಟಗರಿನಕೋಡಿನೊಳಗೆಬಚ್ಚಿಟ್ಟವಿಷದಿಂದಕುಶಸ್ಥಲದಅರಸನನ್ನುಕೊಂದನೆಂಬುದುಇನ್ನೊಂದುಘಟನೆ. ಇಲ್ಲಿಕುಶಸ್ಥಲವೆಂದರೆಕುಶಿನಗರವೆಂಬುದುರಹೊರತಾಗಿಯಾವಅರಸನನ್ನಾಗಿ, ಅವನಕಾಲನ್ನಾಗಲಿಗುರುತಿಸುವುದುಸಾಧ್ಯವಿಲ್ಲ.

[9]ಗೂಢಪುರುಷಎಂದರೆಅಸಿಯೆಱುಕಾಱಎಂದುಟೀಕಾಕಾರನುಹೇಳುತ್ತಾನೆ. ಆದರೆ, ಇದರವ್ಯತ್ಪತ್ತಿಯಾವುದುಎಂಬುದುತಿಳಿದಿಲ್ಲ.

[10]ಅಸಿಪತ್ರಎಂಬುದಕ್ಕೆಟೀಕಾಕಾರನುಖಡ್ಗಮಪ್ಪಓಲೆಎಂದುಹೇಳುತ್ತಾನೆ. ಇದರಅರ್ಥಸ್ಪಷ್ಟವಿಲ್ಲ. ಅಸಿಅಂದರೆಖಡ್ಗದಂತೆಮೊನಚಾದಗರಿಯಿಂದಅಥವಾಓಲೆಯಂತಿದ್ದಹರಿತವಾದಖಡ್ಗದಿಂದಕೊಂದನೆಂದುಅರ್ಥವಿರಬಹುದು.

[11]ಮೈ. ಚೌ. ಅವಿಶ್ವಸ್ತೇಈಪಾಠವೇಸರಿಯೆಂದುತೋರುತ್ತದೆ. ಸಂದರ್ಭಕ್ಕನುಗುಣವಾಗಿವಿಶ್ವಾಸವಿಲ್ಲದಿರಲುಎಂದುಓದಬೇಕು. ಅಶ್ವಾಸಶಬ್ದಕ್ಕೆನಂಬುಗೆಯಿಲ್ಲದಿರಲುಎಂದುಟೀಕಾಕಾರನುಕೊಟ್ಟಿರುವಅರ್ಥವೂಸರಿಯಲ್ಲ. ಅಶ್ವಾಸಎಂದರೆಅವಿಶ್ವಾಸಎಂದಾಗುವುದಿಲ್ಲ.

[12]ಇದು೨೫ಎಂದಿರಬೇಕು.