ನಿತ್ಯವ್ಯಾಪಾರಮಂಪೇಳ್ವಲ್ಲಿಪೊತ್ತಿನೊಳೇಳ್ವುದೆಂಬುದುತ್ತರವಾಕ್ಯಂ :

ಬ್ರಾಹ್ಮೀಮುಹೂರ್ತೇಉತ್ಥಾಯಇತಿಕರ್ತವ್ಯತಾಯಾಂಸಮಾಧಿಮುಪೇಯಾತ್ || ೧ || ೯೧೮ ||

ಅರ್ಥ : ಬ್ರಾಹ್ಮೀ = ಬ್ರಹ್ಮಮೆಂಬಬೆಳಗಪ್ಪೆರಡನೆಯ, ಮುಹೂರ್ತೇ = ಮುಹೂರ್ತದೊಳ್, ಉತ್ಥಾಯ = ಎಳ್ದು, ಇತಿಕರ್ತವ್ಯಾತಾಯಾಂ = ಇಂತು (ದಿವಸಾನುಷ್ಠಾನಆದಿನದಲ್ಲಿಮಾಡಬೇಕಹಕಾರ್ಯಂಗಳಲ್ಲಿ) ಮಾಳ್ಪುದೆಂಬಲ್ಲಿ, ಸಮಾಧಿಂ = ಏಕಾಗ್ರತೆ (ಚಿಂತೆ)ಯಂ, ಉಪೇಯಾತ್ = ಪೊರ್ದುಗೆ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ಸುಖನಿದ್ರಾಪ್ರಸನ್ನೇಹಿಮನಸಿಪ್ರತಿಫಲಂತಿಯಥಾರ್ಥಗ್ರಾಹಕಾಬುದ್ಧಯಃ || ೨ || ೯೧೯ ||

ಅರ್ಥ : ಸುಖನಿದ್ರಾಪ್ರಸನ್ನೇ = ಸುಖನಿದ್ರೆಯಂತಿಳಿದ, ಮನಸಿ = ಮನದೊಳ್, ಹಿ = ಅವುದೊಂದುಕಾರಣದಿಂ, ಯಥಾರ್ಥಗ್ರಾಹಕಾಃ = ಕಾರ್ಯಮೆಂತಿರ್ದುದಂತೆಗ್ರಹಿಸುವ, ಬುದ್ಧಯಃ = ಬುದ್ಧಿಗಳು, ಪ್ರತಿಫಲಂತಿ = ಪ್ರತಿಬಿಂಬಿಸುತ್ತಿರ್ಪ್ಪುವು || ಏಕಾಗ್ರತೆಯಿಮಿರೆಎಲ್ಲಾಕಾರ್ಯಂದೋರ್ಪುದೆಂಬುದುತಾತ್ಪರ್ಯಂ || ಈಪೊತ್ತುನಿದ್ರೆಯಾಗದೆಂಬುದುತ್ತರವಾಕ್ಯಂ :

[1]ಉದಯಾಸ್ತಮಯಶಾಯಿಷುಧರ್ಮಕಮರಮಕಾಲಾತಿಕ್ರಮಃ || ೩ || ೯೨೦ ||

ಅರ್ಥ : ಉದಯ = ನೇಸರ್ಮೂಡುವಸಂಜೆಯುಂ, ಅಸ್ತಮಯ = ನೇಸರ್ಪಡುವ[2]ಸಂಜೆಯುಮೆಂಬಿವರೊಳ್, ಶಾಯಿಷು = ನಿದ್ರೆಗೆಯ್ವರೊಳ್, ಧರ್ಮ = ಧರ್ಮಂ, ಕರ್ಮ = ಕಾರ್ಯಮುಮೆಂಬಿವಱ, ಕಾಲಾತಿಕ್ರಮಃ = ಅವಸರಂದಪ್ಪುವಕ್ಕುಂ || ಉದಯಾಸ್ತಮಯದೊಳ್ನಿದ್ರೆಗೆಯ್ಯದಂಗೆಧರ್ಮಮುಂಕಾರ್ಯಮುಮಕ್ಕುಮೆಂಬುದುತಾತ್ಪರ್ಯಂ || ಪ್ರಭಾತದೊಳ್ತನ್ನಮೊಗಮನಿಂತುನೋಳ್ಪುದೆಂಬುದುತ್ತರವಾಕ್ಯಂ :

—-

.ಬ್ರಾಹ್ಮೀಮುಹೂರ್ತದಲ್ಲಿಎದ್ದುದಿವಸಮಾಡಬೇಕಾದಕಾರ್ಯಗಳನ್ನುಕುರಿತುಏಕಾಗ್ರತೆಯಿಂದಚಿಂತಿಸಬೇಕು.

. ಸುಖನಿದ್ರೆಯನಂತರಪ್ರಸನ್ನವಾದಮನಸ್ಸಿನಲ್ಲಿಕಾರ್ಯವೆಂತಿರುವುದೋಅಂತೆಗ್ರಹಿಸುವಶಕ್ತಿಯುಬರುವುದು.

. ಸೂರ್ಯೋದಯಮತ್ತುಅಸ್ತಮಯಕಾಲಗಳಲ್ಲಿಮಲಗುವವರುಧರ್ಮಕಾರ್ಯಗಳಅವಕಾಶಗಳನ್ನುಕಳೆದುಕೊಳ್ಳುತ್ತಾರೆ.

—-

[3]ಆತ್ಮಮುಖವೈಕೃತಂಆಜ್ಯೇದರ್ಪಣೇವಾಸ್ವಯಂ[4]ನಿರೀಕ್ಷೇತ || ೪ || ೯೨೧ ||

ಅರ್ಥ : ಆತ್ಮಮುಖವೈಕೃತಂ = ತನ್ನಮುಖವಿಕಾರಮಂ, ಆಜ್ಯೇ = ತುಪ್ಪದೊಳಂ, ದರ್ಪಣೇವಾ = ಕನ್ನಡಿಯೊಳ್ಮೇಣ್, ಸ್ವಯಂತಾಂ, ನಿರೀಕ್ಷೇತ = ನೋಡುಗೆ || ತನ್ನಪೊಲ್ಲೆಯಮನಿದಿರ್ಕಾಣಲಾಗ[5]ದೆಂಬುದುತಾತ್ಪಯ್ಯಂ || ಉದದೊಳಿಂತಪ್ಪವಂಕಾಣಲಾಗದೆಂಬುದುತ್ತರವಾಕ್ಯಂ :

ನಪ್ರಾತವ್ವರ್ಷಧರಂವಿಕಲಾಂಗಂವಾಪಶ್ಯೇತ್ || ೫ || ೯೨೨ ||

ಅರ್ಥ : ಪ್ರಾತಃ = ಪ್ರಭಾತದೊಳ್, ವರ್ಷಧರಂ = ನಪುಂಸಕನುಮಂ, ವಿಕಲಾಂಗಂವಾ = ಅಂಗಹೀನನುಮಂಮೇಣ್, ನಪಶ್ಯೇತ್ = ನೋಡದಿರ್ಕೆ || ಉದಯಕಾಲದೊಳುಶುಭಮಸ್ತುವಂಕಾಣ್ಬುದೆಂಬುದುತಾತ್ಪರ್ಯಂ || ಸಂಜೆಯೊಳ್ಶುಚಿಯಾಗದಿರೆದೋಷಮಂಪೇಳ್ವುದುತ್ತರವಾಕ್ಯಂ :

ಸಂಧ್ಯಾಸುಸ್ವಧೌತ[6]ಮುಖಪಾದಂಜನಂಜ್ಯೇಷ್ಠಾದೇವತಾನಾನುಗೃಹ್ಣಾತಿ || ೬ || ೯೨೩ ||

ಅರ್ಥ : ಸಂಧ್ಯಾಸು = ಸಂಜೆಗಳೊಳ್, ಸ್ವಧೌತಮುಖಪಾದಂ = ತನ್ನತೊಳೆದ[7]ಮುಖಮಂಪಾದಮನುಳ್ಳನಂ, ಜ್ಯೇಷ್ಠಾದೇವತಾ = ಜೇಷ್ಠೆಎಂಬದೇವತೆ,[8]ನಾನುಗೃಹ್ಣಾತಿ = ಸ್ವೀಕರಿಸಳ್ (ಅನುಗೃಹ್ಣಾತಿ = ಸ್ವೀಕರಿಸುವಳು) || ಶುಚಿಯಾಗಲೆವೇಳ್ಕುಮೆಂಬುದುತಾತ್ಪರ್ಯಂ || ನಿತ್ಯಾಹ್ನಿಕಂಪಲ್ಲಂಸುಲಿಯದಿರೆದೋಷಮಂಪೇಳ್ವುದುತ್ತರವಾಕ್ಯಂ :

—-

. ಎದ್ದೊಡನೆತನ್ನಮುಖವನ್ನುತುಪ್ಪದಲ್ಲಿಅಥವಾಕನ್ನಡಿಯಲ್ಲಿನೋಡಿಕೊಳ್ಳಬೇಕು.

. ಪ್ರಾತಸ್ಸಮಯದಲ್ಲಿಸಪುಂಸಕನನ್ನಾಗಲಿ, ವಿಕಲಾಂಗನನ್ನಾಗಲಿನೋಡಬಾರದು.

. ಸಂಧ್ಯಾಕಾಲಗಳಲ್ಲಿಮುಖವನ್ನುತೊಳೆಯದವನನ್ನುಜ್ಯೇಷ್ಠಾದೇವತೆಅನುಗ್ರಹಿಸಳು.

—-

ನಿತ್ಯಮದಂತಧಾವನಸ್ಯನಾಸ್ತಿಮುಖಶುದ್ಧಿಃ || ೭ || ೯೨೪ ||

ಅರ್ಥ : ನಿತ್ಯಂ = ನಿಚ್ಚಲುಂ, ಅದಂತಧಾವನಸ್ಯ = ಪಲ್ಲಂಸುಲಿಯದಂಗೆ, ಮುಖಶುದ್ಧಿಃ = ಮುಖಶುದ್ಧತೆಯು, ನಾಸ್ತಿ = ಇಲ್ಲ || ಕಾರ್ಯದಿಂದಿಂತಪ್ಪುದಂಮಱೆಯಲಾಗದೆಂಬುದುತ್ತರವಾಕ್ಯಂ :

ನಕಾರ್ಯವ್ಯಾಸಂಗೇನಶಾರೀರಂಕರ್ಮೋಪಹನ್ಯಾತ್ || ೮ || ೯೨೫ ||

ಅರ್ಥ : ಕಾರ್ಯವ್ಯಾಸಂಗೇನ = ಕಾರ್ಯವ್ಯಾಸಂಗದಿಂ (ಸಂಯೋಗ), ಶಾರೀರಂ = ಶರೀರದೊಳಾದ, ಕರ್ಮ = (ಮರ್ದನ, ಸ್ನಾನ) ವ್ಯಾಪಾರಮುಂ, ನೋಪಹನ್ಯಾತ್ = ಕೆಡಿಸದಿರ್ಕೆ || ಶರೀರಮಂಶುಚಿಮಾಡಲ್ವೇಳ್ಕುಮೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ:

ನಖಲುಯುಗೈರಪಿತರಂಗಾತಿಗಮಾತ್ಸಮುದ್ರೇಸ್ನಾನಂ || ೯ || ೯೨೬ ||

ಅರ್ಥ : ಯುಗೈರಪಿ = ಎಷ್ಟುಯುಗಂಗಳುಹೋದೊಡೆಯು, ತರಂಗಾತಿಗಮಾತ್ = ತೆರೆಗಳ್ಮಾಂದಾಗಳ್, ಸಮುದ್ರೇ = ಸಾಗರದೊಳ್, ಸ್ನಾನಂ = ಮೀಹಂ, ಖಲು = ನೆಟ್ಟನೆ, ನ = ದೊರೆಕೊಳ್ಳದು || ವ್ಯಾಸಂಗದಿಂಮುನ್ನಶರೀರವ್ಯಾಪಾರಮಂಮಾಳ್ಪುದೆಂಬುದುತಾತ್ಪರ್ಯಂ || ಇಂತಪ್ಪವಂತಡಸಲಾಗದೆಂಬುದುತ್ತರವಾಕ್ಯಂ :

ವೇಗವ್ಯಾಯಾಮಸ್ವಾಪಸ್ನಾನಭೋಜನಸ್ವಚ್ಛಂದವೃತ್ತಿಕಾಲಾನ್ನೋಪರುಂಧ್ಯಾತ್ || ೧೦ || ೯೨೭ ||

ಅರ್ಥ : ವೇಗ = ಮಲಮೂತ್ರಂವಾಯುವೀರ್ಯವೇಗಂಗಳು, ವ್ಯಾಯಮ = (ನಡಪಾಡುಹ) ವ್ಯಾಯಾಮಮುಂ, ಸ್ವಾಪ = ನಿದ್ರೆಯುಂ, ಸ್ನಾನ = ಮೀಹಮುಂ, ಭೋಜನ = ಭೋಜನಮುಂ, ಸ್ವಚ್ಛಂದವೃತ್ತಿಕಾಲಾನ್ = ತನ್ನಿಚ್ಛೆಯಲ್ಲಿವರ್ತಿಸುವಕಾಲಂಗಳನು, ನೋಪರುಂಧ್ಯಾತ್ = ತಡೆಯದಿರ್ಕೆ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

. ನಿತ್ಯವೂದಂತಧಾವನಮಾಡಿಕೊಳ್ಳದವನಮುಖವುಪರಿಶುದ್ಧವಾಗಿರದು.

. ಕೆಲಸದಒತ್ತಡದಿಂದಶರೀರಕ್ಕೆಸಂಬಂಧಿಸಿದಕಾರ್ಯಗಳನ್ನುಬಿಡಬಾರದು.

. ಹೇಗೆಂದರೆಎಷ್ಟುಯುಗಗಳುಕಳೆದುಹೋದರೂಸಮುದ್ರದಲ್ಲಿಅಲೆಗಳಿಲ್ಲದಾಗಸ್ನಾನಮಾಡುವುದೆಂಬುದುಸಾಧ್ಯವಿಲ್ಲ.

೧೦. ಮಲ, ಮೂತ್ರ, ವಾಯು, ವೀರ್ಯಗಳವೇಗವನ್ನುವ್ಯಾಯಾಮ, ನಿದ್ರೆ, ಸ್ನಾನ, ಭೋಜನಗಳುಕಾಲಾನುಸಾರನಡೆಯಬೇಕಾದ್ದನ್ನುತಡೆಯಕೂಡದು.

—-

ಶುಕ್ಲಮಲಮೂತ್ರಮರುದ್ವೇಗಸಂರೋಧೋsಶ್ಮರಿಭಗಂದರಗುಲ್ಮಾರ್ಶಸಾಂಹೇತುಃ || ೧೧ || ೯೨೮ ||

ಅರ್ಥ : ಶುಕ್ಲ = ವೀರ್ಯಯುಂ, ಮಲಮೂತ್ರ = ಮಲಮೂತ್ರಮುಂ, ಮರುದ್ವೇಗ = ಆಗುಳಿಕೆ, ಕೆಮ್ಮು, ಸೀನು, ಅಧೋವಾಯುವೆಂಬಿವಱ, ಸಂರೋಧಃ = ತಾಳಿರ್ಪುದು, ಅಶ್ಮರಿ = ಪ್ರಮೇಹಮಂ, ಭಗಂದರ = ಭಗಂದರ (ವ್ರಣರೋಗ)ಮುಂ, ಗುಲ್ಮ = ಗುಲ್ಮಮುಂ, ಅರ್ಶಸಾಂ = ಮೂಲರೋಗಮೆಂಬಿವಕ್ಕೆ, ಹೇತುಃ = ಕಾರಣಂ || ಶೌಚಮನಿಂತುಮಾಳ್ಕೆಂಬುದುತ್ತರವಾಕ್ಯಂ :

ಗಂಧಲೇಪಾವಸಾನಂಶೌಚಮಾಚರೇತ್ || ೧೨ || ೯೨೯ ||

ಅರ್ಥ : ಗಂಧ = ವಸನೆಯುಂ, ಲೇಪ = ಪತ್ತಿರ್ದ್ದುದೆಯುಂ, ಅವಸಾನಂ = ಪೋಪನ್ನೆವರಂ, ಶೌಚಂ = ಶೌಚಮಂ, ಆಚರೇತ್ = ನೆಗಳ್ಗೆ || ಪೊಱಗಣಿಂಬಂದನಿಂತುಮಾಳ್ಕೆಂಬುದುತ್ತರವಾಕ್ಯಂ :

ಬಹಿರಾಗತೋನಾನಾಚಮ್ಯಗೃಹಂಪ್ರವಿಶೇತ್ || ೧೩ || ೯೩೦ ||

ಅರ್ಥ : ಬಹಿರಾಗತಃ = ಪೊಱಗಣಿಂಬಂದಂ, ಅನಾಚಮ್ಯ = ಆಚಮನಮಂಮಾಡದೆ, ಗೃಹಂ = ಮನೆಯಂ, ನಪ್ರವಿಶೇತ್ = ಪುಗದಿರ್ಕೆ || ಶುಚಿಯಾಗಿಪುಗುವುದೆಂಬುದುತಾತ್ಪಯ್ಯಂ || ಈಪೊಳ್ತೆಡೆಯಾಡುವುದೆಂಬುದುತ್ತರವಾಕ್ಯಂ :

ಗೋಸರ್ಗೇವ್ಯಾಯಾಮೋರಸಾಯಮನ್ಯತ್ರಕ್ಷೀಣಾಜೀರ್ಣವೃದ್ಧವಾತಕೀರೋಕ್ಷಭೋಜಿಭ್ಯಃ || ೧೪ || ೯೩೧ ||

ಅರ್ಥ : ಗೋಸರ್ಗೆ = ಜೀವಧನಂಗಳಂಬಿಡುವಸಮಯದೊಳ್, ವ್ಯಾಯಾಮ = ಎಡೆಯಾಟಂ, ರಸಾಯನಂ = ಅಮೃತಸೇವೆ, ಕ್ಷೀಣ = ಶಕ್ತಿಗುಂದಿದನುಂ (ಬಡವಾದದೇಹ), ಅಜೀರ್ಣಃ = ಆಳ್ಕಮೆಯಾತನುಂ, ವೃದ್ಧ = ಮುದುಕನು, ವಾತಕೀ = ವಾತಾಧಿಕನುಂ, ರೂಕ್ಷಭೋಜಿಭ್ಯಃ = ಒಣ (ನೀರಸಭೋಜಿಗಳುತಪ್ಪಿಸಿ) ಗನುಂಬರುಮೆಂದಿವರ್, ಅನ್ಯತ್ರ = ಪೆಱವುಳಿ || ವ್ಯಾಯಾಮದಲಕ್ಷಣಮಂಪೇಳ್ವುದುತ್ತರವಾಕ್ಯಂ :

—-

೧೧. ಶುಕ್ಲ, ಮಲ, ಮೂತ್ರ, ಆಕಳಿಕೆ, ಕೆಮ್ಮು, ಸೀನು, ಅಪಾನವಾಯುಎಂಬಿವುಗಳನ್ನುತಡೆಯುವುದರಿಂಧಅಶ್ಮರಿ (ಮೂತ್ರಕೋಶದಲ್ಲಿಕಲ್ಲು) ಭಗಂದರ (ಗೃಹ್ಯಪ್ರದೇಶದವ್ರಣರೋಗ), ಗುಲ್ಮ (ಪಿತ್ತಜನಕಾಂಗದರೋಗ, ಗೆಡೆರೋಗ) ಅರ್ಶ (ಮೂಲವ್ಯಾಧಿ) ರೋಗಗಳುಉಂಟಾಗುತ್ತವೆ.

೧೨. ವಾಸನೆಯೂಲೇಪವೂಹೋಗುವವರೆಗೂಶೌಚವನ್ನಾಚರಿಸಬೇಕು.

೧೩. ಹೊರಗಿನಿಂದಬಂದುಬಾಯಿಮುಕ್ಕಳಿಸದೆಮನೆಯನ್ನುಪ್ರವೇಶಿಸಕೂಡದು.

೧೪.ದುರ್ಬಲರು, ಅಜೀರ್ಣವುಳ್ಳವರು, ಮುದುಕರು, ಸಂಧಿವಾತವುಳ್ಳವರುಇವರನ್ನುಬಿಟ್ಟುಉಳಿದವರುಉಷಃಕಾಲದಲ್ಲಿವ್ಯಾಯಾಮಮಾಡುವದುಅಮೃತಸೇವನೆಮಾಡಿದಂತೆ.

—-

ಶರೀರಾಯಾಸಜನನೀಕ್ರಿಯಾವ್ಯಾಯಾಮಃ || ೧೫ || ೯೩೨ ||

ಅರ್ಥ : ಶರೀರಾಯಾಸಜನನೀ = ಶರೀರಕ್ಕಾಯಾಸಮಂಪುಟ್ಟಿಸುವ, ಕ್ರಿಯಾ = ವ್ಯಾಪಾರಂ, ವ್ಯಾಯಾಮಃ = ವ್ಯಾಯಾಮಮೆಂಬುದು || ಶರೀರಾಯಾಸಮನಿಂತುಮಾಳ್ಕೆಂಬುದುತ್ತರವಾಕ್ಯಂ :

ಶಸ್ತ್ರವಾಹನಾಭ್ಯಾಸೇನವ್ಯಾಯಮಂಸಫಲಯೇತ್ || ೧೬ || ೯೩೩ ||

ಅರ್ಥ : ಶಸ್ತ್ರ = ಆಯುಧಂಗಳ, ವಾಹನ = ಕುದುರೆಯುಮೆಂಬಿವಱ (ವಾಹನಂಗಳ), ಅಭ್ಯಾಸೇನ = ಅಭ್ಯಾಸದಿಂ, ವ್ಯಾಯಾಮಂ = ವ್ಯಾಯಾಮಮಂ, ಸಫಲಯೇತ್ = ಫಲಮಾಗುಳ್ಳಂತು = ಮಾಳ್ಕೆ || ಶ್ರಮದಿಂಶರೀರಕ್ಕೆಸುಖಮುಂವಿದ್ಯಾಭ್ಯಾಸಮುಮಕ್ಕುಮೆಂಬುದಿದಱತಾತ್ಪರ್ಯಂ ||

ಆದೇಹಸ್ವೇದಂವ್ಯಾಯಾಮಕಾಲಮುಶಂತ್ಯಾಚಾರ್ಯಾಃ || ೧೭ || ೯೩೪ ||

ಅರ್ಥ : ಆದೇಹಸ್ವೇದಂ = ಶರೀರಂಬೆವರುವನ್ನಗಂ, ವ್ಯಾಯಾಮಕಾಲಂ = ವ್ಯಾಯಾಮದಪೊಳ್ತಂ, ಉಶಂತಿ = ಪೇಳ್ದರ್, ಆಚಾರ್ಯಾಃ = ಆಚಾರ್ಯರ್ಕಳ್ || ಬಳಲ್ವನ್ನಂಶ್ರಮಂಗೆಯ್ವುದೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ಬಲಾತಿಕ್ರಮೇಣವ್ಯಾಯಾಮಃಕಾಂನಾಮಾಪದಂನಜನಯತಿ || ೧೮ || ೯೩೫ ||

ಅರ್ಥ : ಬಲಾತಿಕ್ರಮೇಣ = ಶಕ್ರಿಯಂಮೀಱುವದಱಿಂದಾದ, ವ್ಯಾಯಾಮಃ = ಅಭ್ಯಾಸಂ, ಕಾಂ= ನಾಮಆವ, ಆಪದಂ = ಆಪತ್ತಂ, ನಜನಯತಿ = ಪುಟ್ಟಿಸದು || ಶಕ್ತಿಗೆತಕ್ಕಂತೆವ್ಯಾಯಾಮಂಮಾಳ್ಪುದೆಂಬುದುತಾತ್ಪರ್ಯಂ || ಶ್ರಮವಿಲ್ಲದಿರಲುಇಂತಕ್ಕುಮೆಂಬುದುತ್ತರವಾಕ್ಯಂ :

ಅವ್ಯಾಯಾಮಶೀಲೇಷುಕುತೋಗ್ನಿಸಂದೀಪನಮುತ್ಯಾಹೋದೇಹದಾರ್ಢ್ಯಂಚ || ೧೯ || ೯೨೬ ||

ಅರ್ಥ : ಅವ್ಯಾಯಾಮಶೀಲೇಷು = ಶ್ರಮವಿಲ್ಲದಿರ್ಪಸ್ವಭಾವಮನುಳ್ಳವರೊಳ್, ಅಗ್ನಿಸಂದೀಪನಂ = ಪಸಿವುಂ, ಉತ್ಸಾಹಂ = ಜಾಡ್ಯಮಿಲ್ಲದುದುಂ, (ಉದ್ವೇಗವು) ದೇಹದಾಢ್ಯಂಚ = ಶರೀರದದೃಢತೆಯುಂ, ಕುತಃ = ಎತ್ತಣ್ತು || ನಿದ್ರೆಯಸ್ವರೂಪಮಂಪೇಳ್ವುದುತ್ತರವಾಕ್ಯಂ :

—-

೧೫. ಶರೀರಕ್ಕೆಆಯಾಸವನ್ನುಹುಟ್ಟಿಸುವಕ್ರಿಯೆಯೇವ್ಯಾಯಮವು.

೧೬. ಶಸ್ತ್ರಾಬ್ಯಾಸದಿಂದ, ವಾಹನಗಳಅಭ್ಯಾಸದಿಂದವ್ಯಾಯಾಮವನ್ನುಸಫಲಗೊಳಿಸಬೇಕು.

೧೭. ಶರೀರಬೆವರುವವರೆಗೂವ್ಯಾಯಮಕಾಲವೆಂದುಆಚಾರ್ಯರುಹೇಳುವರು.

೧೮. ಶಕ್ತಿಮೀರಿದವ್ಯಾಯಮವುಯಾವಆಪತ್ತನ್ನುಹುಟ್ಟಿಸದಿರದು?

೧೯. ವ್ಯಾಯಾಮಮಾಡದವರಲ್ಲಿಹಸಿವು, ಉತ್ಸಾಹಮತ್ತುದೇಹದಾಢ್ಯವೆಲ್ಲಿಯದು?

—-

ಇಂದ್ರಿಯಾತ್ಮಮನೋಮರುತಾಂಸೂಕ್ಷ್ಮಾವಸ್ಥಾಸ್ವಾಪಃ || ೨೦ || || ೯೩೭ ||

ಅರ್ಥ : ಇಂದ್ರಿಯ = ಇಂದ್ರಿಯಂಗಳು, ಆತ್ಮ = ಆತ್ಮನುಂ, ಮನಃ = ಮನಮುಂ, ಮರುತಾಂ = ಪ್ರಾಣಾದಿವಾಯುಮೆಂಬಿವಱ, ಸೂಕ್ಷ್ಮಾವಸ್ಥಾ = ಕಿಱಿದಾಗಿರ್ಪಿರವು, ಸ್ವಾಪಃ = ನಿದ್ರೆಯೆಂಬುದು || ನಿದ್ರೆಯಫಲಮಂಪೇಳ್ವುದುತ್ತರವಾಕ್ಯಂ :

ಯಥಾ[9]ಸ್ವಾತ್ಮ್ಯಂಸ್ವಾಪಾದ್ಭುಕ್ತಾನ್ನಪಾಕೋಭವತಿಪ್ರಸೀದಂತಿಚೇಂದ್ರಿಯಾಣಿ || ೨೧ || || ೯೩೮ ||

ಅರ್ಥ : ಯಥಾಸಾತ್ಮ್ಯಂ = ಮೆಯ್ಗಳವಡವಂತು, ಸ್ವಾಪಾತ್ = ನಿದ್ದೆಗೈಯುದಱತ್ತಣಿಂ, ಭುಕ್ತಾನ್ನಪಾಕಃ = ಕೊಂಡಾಹಾರಮಕ್ಕುವುದು, ಭವತಿ = ಅಕ್ಕುಂ, ಪ್ರಸೀದಂತಿಚ = ಪ್ರಸನ್ನಗಳಪ್ಪವು, ಇಂದ್ರಿಯಾಣಿ = ಇಂದ್ರಿಯಂಗಳ್ || ನಿದ್ರೆಯಿಲ್ಲದೆಪಸಿವುಂಪ್ರಸನ್ನತೆಯುಮಾಗದೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಅಘಟ್ಟಿತಮಪಿಹಿತಂಚಭಾಜನಂನಸಾಧುಸಧಯತ್ಯನ್ನಾನಿ || ೨೨ || || ೯೩೯ ||

ಅರ್ಥ : ಅಘಟ್ಟಿತಂ = ತೊಳಸದೆ, ಅಪಿಹಿತಂಚ = ಮುಚ್ಚದೆ, ಅನ್ನಾನಿ = ಕೂಳಂ, ಸಾಧು = ಲೇಸಾಗಿ, ಭಾಜನಂ = ಮಡಕೆ, ನಸಾಧಯತಿ = ಬೇಯಿಸುವುದಲ್ಲದೆಂತಂತೆ || ಇಂತಪ್ಪವಂಕುಂದಿಸಲಾಗದೆಂಬುದುತ್ತರವಾಕ್ಯಂ :

[10]ನಿತ್ಯಸ್ನಾನಂದ್ವಿತೀಯಕಮತ್ಸಾಧನಂತೃತೀಯಕಮಾಯುಷ್ಯಂಚಚತುರ್ಥಕಂಪ್ರತ್ಯಾಯುಷ್ಯಮಿತ್ಯಹೀನಂಸೇವೇತ || ೨೩ || || ೯೪೦ ||

ಅರ್ಥ : ನಿತ್ಯಸ್ನಾನಂ = ನಿಚ್ಚಲುಮೀವುದುಂ, ದ್ವಿತೀಯಕಂ = ಎರಡನೆಯ, ಉತ್ಸಾಧನಂಮುಖವಾಸಂಮೊದಲಾಗೊಡೆಯದುಂ, ಯಥಾವಸರನಿದ್ರೆಯುಮೇಣ್, ತೃತೀಯಕಂ = ಮೂಱನೆಯದು, ಆಯುಷ್ಯಂ= ಮೂಗಿನ[11]ಕೂದಲಂಕಳೆವುದಂ, ಸಂಧ್ಯಾದಿಕಾಲಪರ್ವದಿನಂಗಳಂವರ್ಜಿಪುದುಮೇಣ್, ಚತುರ್ಥಕಂ = ನಾಲ್ಕನೆಯ, ಪ್ರತ್ಯಾಯುಷ್ಯಂ = ಅಧಃಕೇಶನಖಂಗಳಂಕಳೆಯಿಪುದು, ಬ್ರಹ್ಮಮೂಹೂತ್ತದೊಳೆಚ್ಚರುವುದುಮೇಣ್, ಇತಿ = ಎಂದಿಂತು (ಎಂದಿಂತಿವಂ), ಅಹೀನಂ = ಕುಂದಲೀಯದೇ, ಸೇವೇತ = ಮಾಳ್ಕೆ || ಶರೀರಭೋಗಮಿಲ್ಲದಿರಲಾಗದೆಂಬುದುತಾತ್ಪರ್ಯಂ || ಮೀಹಕ್ಕೆಕಾರಣಂಪೇಳ್ವುದುತ್ತರವಾಕ್ಯಂ :

—-

೨೦. ಇಂದ್ರಿಯಗಳು, ಆತ್ಮ, ಮನಸ್ಸು, ಪ್ರಾಣಾದಿವಾಯುಗಳು, ಇವುಗಳುಸೂಕ್ಷ್ಮಾವಸ್ಥೆಯಲ್ಲಿರುವುದುನಿದ್ರೆ.

೨೧. ದೇಹಕ್ಕೆಸಾಕಾಗುವಷ್ಟುನಿದ್ದೆಮಾಡುವುದರಿಂದತಿಂದಆಹಾರವುಅರಗುತ್ತದೆ. ಇಂದ್ರಿಯಗಳುಚುರುಕಾಗಿರುತ್ತದೆ.

೨೨. ತೊಳೆಯದೆ, ಪಾತ್ರಯನ್ನುಮುಚ್ಚದೆ, ಇದ್ದರೆಅನ್ನವುಸರಿಯಾಗಿಬೇಯುವುದಿಲ್ಲ.

೨೩. ನಿತ್ಯಸ್ನಾನ, ಅವಶ್ಯವಿದ್ದಷ್ಟುನಿದ್ರೆ, ಒಳ್ಳೆಆಹಾರಇತ್ಯಾದಿಗಳನ್ನುತಪ್ಪದೆಆಚರಿಸಬೇಕು.

—-

ಧರ್ಮಕಾಮಾಥ್ಥಶುದ್ಧಿರ್ದುಜನಸ್ಪರ್ಶಾಶ್ಚಸ್ನಾನಸ್ಯಕಾರಣಾನಿ || ೨೪ || || ೯೪೧ ||

ಅರ್ಥ : ಧಮ್ಮಕಾಮಾರ್ಥಶುದ್ಧಿಃ = ಧರ್ಮಕಾಮಅರ್ಥಂಗಳಶುದ್ಧಿಯುಂ, ದುರ್ಜನಸ್ಪರ್ಶಾಶ್ಚ = ಸಜ್ಜನರಲ್ಲದರಂಮುಚ್ಟುವುದುಮೆಂದಿಂತು, ಸ್ನಾನಸ್ಯ = ಸ್ನಾನಕ್ಕೆ, ಕಾರಣಾನಿ = ಕಾರಣಂಗಳ್ || ಸ್ನಾನದಫಲಮಂಪೇಳ್ವುದುತ್ತರವಾಕ್ಯಂ :

ಶರೀರಶುದ್ಧಿಃಶ್ರಮಸ್ವೇದಾಲಸ್ಯವಿಗಮಃಸ್ನಾನಸ್ಯಫಲಂ || ೨೫ || || ೯೪೨ ||

ಅರ್ಥ : ಶರೀರಶುದ್ಧಿಃ = ಶರೀರಶುದ್ಧಿಯುಂ, ಶ್ರಮ = ಬಳಲ್ಕೆಯುಂ, ಸ್ವೇದ = ಬೆಮರುಂ, ಆಲಸ್ಯ = ಅಲಸಿಕೆಯುಮೆಂಬಿವಱಿಂ, ವಿಗಮಃ = ವಿಗಮಃ = ಅಗಲ್ಕೆ, ಸ್ನಾನಸ್ಯ = ಸ್ನಾನದ, ಫಲಂ = ಫಲವು || ಇಂತಪ್ಪಮೀಹಂನಿರರ್ಥಕಮೆಂಬುದುತ್ತರವಾಕ್ಯಂ :

ಜಲಚರಸ್ಯೇವತತ್ಸ್ನಾನಂಯತ್ರನಸಂತಿದೇವಗುರುಧರ್ಮೋಪಾಸನಾನಿ || ೨೬ || || ೯೪೩ ||

ಅರ್ಥ : ಜಲಚರಸ್ಯೇವ = ಜಲಚರಗಳಮೀಹದಂತೆ, ತತ್ಸ್ನಾನಂ = ಆಮೀಹಂ, ಯತ್ರ = ಎಲ್ಲಿ, ನಸಂತಿ = ಇಲ್ಲ, ದೇವ = ದೇವರುಂ, ಗುರು = ಗುರುಗಳುಂ, ಧರ್ಮಃ = ಧರ್ಮಮುಮೆಂದಿವಂ, ಉಪಾಸನಾನಿ = ಆರಾಧಿಸುವನೆಗಳ್ತೆಗಳು || ಇಂತಪ್ಪಮೀಹಬೇಡೆಂಬುದುತ್ತರವಾಕ್ಯಂ :

ಪ್ರಾದುರ್ಭವತುಕ್ಷುತ್ಪಿಪಾಸೋಭ್ಯಂಗಸ್ನಾನೇಕುರ್ಯಾತ್[12] || ೨೭ || || ೯೪೪ ||

ಅರ್ಥ : ಪ್ರಾದುರ್ಭವತು = ಪುಟ್ಟುತ್ತಿರ್ದ, ಕ್ಷುತ್ = ಪಸಿವುಂ, ಪಿಪಾಸಃ = ನೀರಳ್ಕೆಯುಮುಳ್ಳಾತಂ, ಅಭ್ಯಂಗಸ್ನಾನೇಪೂಸಿಮೀಹಂ, ನಕುರ್ಯಾತ್ = ಮಾಡದಿರ್ಕೆ ||

—-

೨೪. ಧರ್ಮ, ಕಾಮ, ಅರ್ಥಗಳಶುದ್ಧಿ, ದುರ್ಜನಸ್ಪರ್ಶಇವುಸ್ನಾನಕ್ಕೆಕಾರಣಗಳು.

೨೫. ಶರೀರಶುದ್ಧಿ, ಶ್ರಮ, ಬೆವರು, ಆಲಸ್ಯಇವುಗಳನಿವಾರಣೆಇವುಸ್ನಾನದಫಲ.

೨೬. ದೇವ, ಗುರುಧರ್ಮಗಳಉಪಾಸನೆಗಳಿಲ್ಲದಸ್ನಾನವುಜಲಚರಗಳಸ್ನಾನದಂತೆಅರ್ಥವಿಲ್ಲದ್ದು.

೨೭. ಹಸಿವುಬಾಯಾರಿಕೆಗಳಿರುವಾಗಅಭ್ಯಂಗಸ್ನಾನಮಾಡಬಾರದು.

—-

 

[1]ಮೈ. ದಲ್ಲಿಈವಾಕ್ಯವುಇದ್ದುಇದಕ್ಕೆಪರ್ಯಾಯವಾದಪಾಠಾಂತರವಿದ್ದವಾಕ್ಯವೊಂದುಕಡಲ್ಪಟ್ಟಿದೆ.

[2]ಪಡುಕ್ರಿಯಾಪದವನ್ನುಗಮನಿಸುವುದು, ಮುಳುಗುಎಂಬಅರ್ಥದಲ್ಲಿಪಡು>ಪಡುವಣ= ಮುಳುಗುವಸ್ಥಾನ, ಪಶ್ಚಿಮ.

[3]ಮೈ. ಚೌ. ಆತ್ಮವಕ್ತ್ರಂ.

[4]ಮೈ. ಚೌ. ನಿರೀಕ್ಷೇತ.

[5]ಇದಿರ್ಇನ್ನೊಬ್ಬರು, ಹೋಲಿಸಿರಿ, ಕಳಬೇಡ, ಕೊಲಬೇಡತನ್ನಬಣ್ಣಿಸಬೇಡಇದಿರಹಳಿಯಲುಬೇಡ (ಬಸವಣ್ಣನವರವಚನ)

[6]ಮೈ. ಚೌ. ಸಂಧ್ಯಾಸ್ವದೌತ, ಈಪಾಠವೇಸರಿಯಾದುದು.

[7]ಅಧೌತ= ತೊಳೆಯದಎಂದುಓದಬೇಕು.

[8]ಜೇಷ್ಠಾದೇವಿ, ಸೋಮದೇವನುಜ್ಯೇಷ್ಠಾದೇವತಾಎಂದುಕರೆದಿದ್ದಾನೆ. ಮೈ. ಆವೃತ್ತಿಯಲ್ಲಿಇದನ್ನುಉತ್ತಮಾವಂದನೀಯಾಕಾಪಿದೇವತಾಅಂದರೆಒಬ್ಬಪೂಜ್ಯಶ್ರೇಷ್ಠದೇವತೆಎಂದುವಿವರಿಸಲಾಗಿದೆ. ಚೌ. ಆವೃತ್ತಿಯಲ್ಲಿಇದನ್ನುಮಹಾನ್ದೇವತಾಎಂದುಅರ್ಥಮಾಡಿದ್ದಾರೆ. ಆದರೆ, ಟೀಕಾಕಾರನುಜ್ಯೇಷ್ಠೆಎಂಬಎಂದುಸರಿಯಾಗಿಗುರುತಿಸಿದ್ದಾನೆ. ಜ್ಯೇಷ್ಠಾದೇವಿಒಬ್ಬಶಕ್ತಿದೇವತೆ೧೨ನೆಯಶತಮಾನದಲ್ಲಿಪ್ರಸಿದ್ಧಶಾಕ್ತಪೀಠವಾಗಿದ್ದಕುಕ್ಕನೂರು (ಕೊಪ್ಪಳಜಿಲ್ಲೆ) ಜ್ಯೇಷ್ಠಾದೇವಿಯಸ್ಥಾನವಾಗಿದ್ದಿತು. ಈಊರಿನಲ್ಲಿಯಕ್ರಿ. ಶ. ೧೧೭೨ರಶಾಸನವೊಂದರಲ್ಲಿಈದೇವತೆಯಮಹಿಮೆವಿಸ್ತಾರವಾಗಿಬಣ್ಣಿಸಲ್ಪಟ್ಟಿದೆ. ಮಹಾಮಾಯೆಎಂಬಹೆಸರೂಈದೇವತೆಗೆಇದ್ದಿತು. (Hyderabad Archaeological Series No. 18) ಇಲ್ಲಿಗಮನಿಸಬೇಕಾದಇನ್ನೊಂದುಅಂಶವೆಂದರೆ, ನಮ್ಮಟೀಕಾಕಾರನಾದನೇಮಿನಾಥನಿಗೆಈದೇವಾಲಯಬಗ್ಗೆತಿಳಿದಿದ್ದುದು. ಇದರಿಂದಅವನಕಾಲದಬಗ್ಗೆಯೂಊಹಿಸಬಹುದಾಗಿದೆ. ಇನ್ನೊಂದಡೆಯಲ್ಲಿಅವನು, ಚಾಳುಕ್ಯರನ್ನುಹೆಸರಿಸಿದುದನ್ನುಗಮನಿಸಬಹುದು.

[9]ಮೈ. ಯಥಾನಿಯಮಂ.

[10]ಚೌ. ಪ್ರಥಮಂನಿತ್ಯಸ್ನಾನಂ.

[11]ಇದರಅರ್ಥಸ್ಪಷ್ಠವಿಲ್ಲ. ಆಯುಷ್ಯವೆಂದರೆ, ಆಯುಷ್ಕರ್ಮ, ಕೂದಲುತೆಗೆಸಿಕೊಳ್ಳುವುದುಎಂದುಅರ್ಥವಿರಬಹುದು.

[12]ಚೌ. ಸ್ನಾನಂಕುರ್ಯಾತ್.