ಪುಮಾನ್ಸುಖೀಯಸ್ಯಾಸ್ತಿಸಂತೋಷಃ|| ೪೮ || ೧೦೭೬ ||

ಅರ್ಥ : ಯಸ್ಯ = ಆವನೋರ್ವಂಗೆ, ಸಂತೋಷಃ = ಸಂತೋಷಂ, = ಉಂಟು, ಸಃ = ಆ, ಪುಮಾನ್‌, ಪು[ರುಷಂ, ಸುಖೀ = ಸುಖಿಯಕ್ಕುಂ || ಸಂತೋಷಮು]ಳ್ಳನೆಸುಖಿಯೆಂಬುದುತಾತ್ಪರ್ಯ || ರಜಸ್ವಲೆಯಂಪೊಗಲಾಗದೆಂಬುದುತ್ತರವಾಕ್ಯಂ :

ರಜಸ್ವಲಾಭಿಗಾಮೀಚಾಂಡಾಲಾದಷ್ಯಧಮಃಪುರುಷಃ|| ೪೯ || ೧೦೭೭ ||

ಅರ್ಥ : ರಜಸ್ವಲಾಭಿಗಾಮೀ = ಮುಟ್ಟಲ್ಗಂಡಳಂಪೋಪ, ಪುರುಷಃ = ಪುರುಷಂ, ಚಾಂಡಾಳಾದಪಿ = ಪೊಲೆಯನತ್ತಣಿಂದಮುಂ, ಅಧಮಃ = ಕಷ್ಟಂ || ರಜಸ್ವಲೆಯರಸ್ಪೃಶ್ಯರೆಂಬುದುತಾತ್ಪ[ರ್ಯಂ || ನಿರ್ಲಜ್ಜನಾಗಲಾದಗೆಂಬುದುತ್ತ]ರವಾಕ್ಯಂ :

ಸಲಜ್ಜಂನಿರ್ಲಜ್ಜಂನಕುರ್ಯಾತ್|| ೫೦ || ೧೦೭೮ ||

ಅರ್ಥ : ಸುಲಜ್ಜಂ = ಲಜ್ಜೆಯನುಳ್ಳನಂ, ನಿರ್ಲಜ್ಜಂ = ಲಜ್ಜೆಗೆಡೆಸುವನಾಗಿಯುಂನಕುರ್ಯಾತ್‌ = ಮಾಡದಿರ್ಕ್ಕೆ || ಅಂಜಿಕೆಗಿಡೆಲೀಯದೆನಡೆಸುವುದೆಂಬುದುತಾತ್ಪರ್ಯಂ || ಇಂತಪ್ಪಂಬತ್ತಲೆಯಿರ್ದನೆಂಬುದುತ್ತರವಾಕ್ಯಂ :

ಪುಮಾನ್ಪಟಾವೃತೋsಪಿನಗ್ನ, ಏವ, ಯಸ್ಯನಾಸ್ತಿ ಸಚ್ಚರಿತ್ರಮಾವರಣಂ|| ೫೧ || ೧೦೭೯ ||

ಅರ್ಥ : ಯಸ್ಯ = ಆವನೋರ್ವಂಗೆ, ಸಚ್ಚರಿತ್ರಂ = ಒಳ್ಳಿತಪ್ಪನೆಗಳ್ತೆಎಂಬ, ಆವರಣಂ = ಸೀರೆ, ನಾಸ್ತಿ = ಇಲ್ಲ, ಸಃ = ಆ, ಪುಮಾನ್‌ = ಪುರುಷಂ, ಪಟಾವೃತೋsಪಿ = ಸೀರೆಯಸುತ್ತಿರ್ದನಾಗಿಯುಂ, ನಗ್ನಏವ = ಬತ್ತಲೆಇರ್ದನೇ || ಇಂತಪ್ಪನುಟ್ಟಿರ್ದನೆಂಬುದುತ್ತರವಾಕ್ಯಂ :

ನಗ್ನೋsಪಿನನಗ್ಲೋಯೋsನುಭೂಷಿತಃಸಚ್ಚರಿತ್ರೇಣ|| ೫೨ || ೧೦೮೦ ||

ಅರ್ಥ : ಯಃ = ಆವನೋರ್ವಂ, ಸಚ್ಚರಿತ್ರೇಣ = ಒಳ್ಳಿತಪ್ಪನೆಗಳ್ತೆಯಿಂ, ಅನುಭೂಷಿತಃ = ಭೂಷಿತನಪ್ಪಂ, ಸಃ = ಆತಂ, ನಗ್ನೋsಪಿ = ಬತ್ತಲೆಯಿರ್ದುಂ, ನನಗ್ನಃ = ಬತ್ತಲಿದರದವನಲ್ಲಂ || ಸದಾಚಾರಾಲಂಕೃತನಾಗಲ್ವೇಳ್ಕುಮೆಂಬುದುತಾತ್ಪರ್ಯಂ || ಸರ್ವಸಂಶಯವಾಗಲಾಗದೆಂಬುದುತ್ತರವಾಕ್ಯಂ :

—-

೪೯.ರಸಜ್ವಲಾಸಂಗಮಾಡುವವನುಚಂಡಾಲನಿಗಿಂತಕೀಳು.

೫೦. ಲಜ್ಜೆಇರುವವನನ್ನುನಿರ್ಲಜ್ಜನನ್ನಾಗಿಮಾಡಬಾರದು.

೫೧. ಒಳ್ಳೆಯನಡವಳಿಕೆಯಿಲ್ಲದವನುಬಟ್ಟೆಯನ್ನುಉಟ್ಟಿದ್ದರೂನಗ್ನನೇ.

೫೨. ಒಳ್ಳೆಯನಡವಳಿಕೆಯಿಂದಅಲಂಕೃತನಾದವನುಬೆತ್ತಲೆಯಾಗಿದ್ದರೂನಗ್ನನಲ್ಲ.

—-

ಸರ್ವತ್ರಸಂಶಯಾನೇಷುನಾಸ್ತಿಕಾರ್ಯಸಿದ್ಧಿ|| ೫೩ || ೧೦೮೧ ||

ಅರ್ಥ : ಸರ್ವತ್ರ = ಎಲ್ಲೆಡೆಯೊಳಂ, ಸಂಶಯಾನೇಷು = ಸಂಶಯಬಡುತ್ತಿರ್ದರೊಳ್‌, ಕಾರ್ಯಸಿದ್ಧಿಃ = ಕಾರ್ಯದಸಿದ್ಧಿ, ನಾಸ್ತಿ = [ಇಲ್ಲ, ಆಗದು || ಸಂಶಯರಹಿತನಾಗಿಲ್ವೇಳ್ಕು]ಮೆಂಬುದುತಾತ್ಪರ್ಯಂ || ಇಂತಪ್ಪಭ್ಯಾಸಂಲೇಸೆಂಬುದುತ್ತರವಾಕ್ಯಂ :

ಕ್ಷೀರಘೃತಾಭ್ಯಾಸಾತ್ಪರಂರಸಾಯನಮಸ್ತಿ[1]|| ೫೪ || ೧೦೮೨ ||

ಅರ್ಥ : ಕ್ಷೀರಘೃತಾಭ್ಯಾಸಾತ್‌ = ಪಾಲಿನತುಪ್ಪದತ್ತಣಭ್ಯಾಸದಿಂ, ಪರಂ = ಪೆಱತು, ರಸಾಯನಂ = ಅಮೃತಂ, ನಾಸ್ತಿ = ಇಲ್ಲ || ಲವಣಾಮ್ಲರೂಕ್ಷಾದಿಗಳಂಸೇವಿಸಲಾಗದೆಂಬುದುತಾ[ತ್ಪರ್ಯಂ || ಇಂತಪ್ಪಭೋಜನಂಲೇಸೆಂ]ಬುದುತ್ತರವಾಕ್ಯಂ :

ವರಮುಪವಾಸೋಪರಾಧೀನಂಭೋಜನಂ|| ೫೫ || ೧೦೮೩ ||

ಅರ್ಥ : ಉಪವಾಸಃ = ಉಪವಾಸವು, ವರಂ = ಒಳ್ಳಿತ್ತು, ಪರಾಧೀನಂ = ಪರಾಧೀನವಹ, ಭೋಜನಂ = ಭೋಜನವು, ನ = ಒಳ್ಳಿತ್ತಲ್ಲ ||

ಪರೋಪಘಾತೇನವೃತ್ತಿರ್ನಿರ್ಭಾಗ್ಯಾನಾಂ|| ೫೬ || ೧೦೮೪ ||

ಅರ್ಥ : ಪರೋಪಘಾತೇನ = ಪೆಱರಂಪೀಡುಸುವುದಱಿಂ, ವೃತ್ತಿಃ = ವರ್ತಿಸುವುದು, ನಿರ್ಭಾಗ್ಯಾನಾಂ = ನಿ[ರ್ಭಾಗ್ಯವಂತರೆಂಬುದುಂ || ಪೀಡೆಯಾಗದಂ]ತುಜೀವಿಸುವುದೆಂಬುದುತಾತ್ಪರ್ಯಂ || ಇಂತಪ್ಪನಾಡಂಪೊರ್ದುವುದೆಂಬುದತ್ತರವಾಕ್ಯಂ :

ದೇಶೋsನುಸರ್ತವ್ಯೋಯತ್ರನಾಸ್ತಿವರ್ಣಸಂಕರಃ || ೫೭ || ೧೦೮೫ ||

ಅರ್ಥ : ಸಃದೇಶಃ = ಆನಾಡು, ಅನುಸರ್ತವ್ಯಃ = ಆಶ್ರಯಿಸೆಪಡುವುದು, ಯತ್ರ = ಎಲ್ಲ, ವರ್ಣಸಂಕರಃ = ಜಾತಿಸಂಕರಂ, ನಾಸ್ತಿ = ಇಲ್ಲ || ಜಾತಿಸಂಕರವಾಗದಂತುನೆಗಳ್ವುದೆಂಬುದುತಾತ್ಪ[ರ್ಯಂ || ಇಂತುವರ್ತಿಪುದೆಂದುಪೇಳ್ವು]ದುತ್ತರವಾಕ್ಯಂ :

—-

೫೩. ಎಲ್ಲೆಡೆಯಲ್ಲೂಸಂಶಯಪಡುವವನಯಾವಕಾರ್ಯವೂಸಫಲವಾಗುವುದಿಲ್ಲ.

೫೪. ಹಾಲುತುಪ್ಪಗಳಅಭ್ಯಾಸಕ್ಕಿಂತಬೇರೆರುಚಿಯಾದಪದಾರ್ಥವಿಲ್ಲ.

೫೫. ಪರಾಧೀನವಾದಭೋಜನಕ್ಕಿಂತಉಪವಾಸವೇಲೇಸು.

೫೬. ನಿರ್ಭಾಗ್ಯರಿಗೆಪರರನ್ನುಹಿಂಸಿಸುವದೇಜೀವನಮಾರ್ಗ.

೫೭. ವರ್ಣಸಂಕರವಿಲ್ಲದದೇಶದಲ್ಲಿಆಶ್ರಯವನ್ನುಹೊಂದಬೇಕು.

—-

ಜಾತ್ಯಂಧೋಯಃಪರಲೋಕಂಪಶ್ಯತಿ|| ೫೮ || ೧೦೮೬ ||

ಅರ್ಥ : ಯಃ = ಆವನೋರ್ವಂ, ಪರಲೋಕಂ = ಸದ್ಗತಿಯಂ, ನಪಶ್ಯತಿ = ಕಾಣಂ, ಸಃ = ಆತಂ, ಜಾತ್ಯಂಧಃ = ಪುಟ್ಟುಗುರುಡಂ || ಪಾಪಕ್ಕಂಜುವುದೆಂಬುದುತಾತ್ಪರ್ಯಂ || ಇಂತಪ್ಪುದುಪಾರ್ವತನಮೆಂಬುದುತ್ತರವಾಕ್ಯಂ ||

ವ್ರತಂವಿದ್ಯಾಸತ್ಯಮಾನೃಶಂಸ್ಯಮಲೌಲ್ಯತಾ[2]ಬ್ರಾಹ್ಮಣ್ಯಂ [ಪುನರ್ಜಾತಿಮಾತ್ರಂ|| ೫೯ || ೧೦೮೭ ||

ಅರ್ಥ : ವ್ರತಂ = ವ್ರತಮು]೦, ವಿದ್ಯಾ = ವಿದ್ಯೆಯುಂ, ಸತ್ಯಂ = ಸತ್ಯಮುಂ, ಆನ್ವಶಂಸ್ಯಂ = ಕೊಲ್ಲದುದುಂ (ಅಕ್ರೂರತೆ), ಅಲೌಲ್ಯತಾಚ = ಅಳಿಪಿಲ್ಲದುದುಂ, ಬ್ರಾಹ್ಮಣ್ಯಂ = ಬ್ರಾಹ್ಮಣತನಂ, ಪುನಃ = ಮತ್ತೆ, ಜಾತಿಮಾತ್ರಂ = ಜಾತಿಯನಿತೇ, ನ = ಅಲ್ಲದು || ಈಗುಣಂಗಳಿಲ್ಲದಬ್ರಾಹ್ಮಣಂಶೂದ್ರನೆಂಬುದುತಾತ್ಪರ್ಯಂ || ಇಂತಪ್ಪಂಗೆಪೆಱರಪಂಗೇಕೆಂಬುದುತ್ತರವಾಕ್ಯಂ :

ನಿಸ್ಪೃಹಾ[ಣಾಂಕೋನಾಮಪರಾಪೇಕ್ಷಾ ] || ೬೦ || ೧೦೮೮ ||

ಅರ್ಥ : ನಿಸ್ಪೃ]ಹಾಣಾಂ = ಆಳಿಪಿಲ್ಲದರ್ಗ್ಗೆ, ಕೋನಾಮ = ಆವುದು, ಪರಾಪೇಕ್ಷಾ = ಪೆಱರನಾಸೆಗೆಯ್ವುದು || ನಿಸ್ಪೃಹಂಪೆಱರಂಬಾರ್ತೆಗೆಯ್ಯನೆಂಬುದುತಾತ್ಪರ್ಯಂ || ಆಶೆಯಾವನುಮಂನೋಯಿಸುವುದೆಂಬುದುತ್ತರವಾಕ್ಯಂ :

ಕಂನಾಮಪುರುಷಮಾಶಾಕ್ಲೇಶಯತಿ|| ೬೧ || ೧೦೮೯ ||

ಅರ್ಥ : ಕಂನಾಮ = ಆವ, ಪುರುಷಂ = ಪುರುಷನಂ, ಆಶಾ = ಆಶೆ, ನಕ್ಲೇಶಯತಿ = ನೋಯಿಸದು || ಆಸೆಯಿಂ[ಕ್ಲೇಶಮುಪ್ಪುದೆಂಬುದುತಾತ್ಪರ್ಯ]೦ || ಇಂತಪ್ಪಂಪದವಿಯೋಗ್ಯನೆಂಬುದುತ್ತರವಾಕ್ಯಂ :

ಸಂಯಮೀಗೃಹಾಶ್ರಮೀವಾತತ್ಪದಮರ್ಹತಿಯಸ್ಯಾವಿದ್ಯಾತೃಷ್ಣಾಭ್ಯಾ ಮನುಪಹತಂಚೇತಃ|| ೬೨ || ೧೦೯೦ ||

—-

೫೮. ಪರಲೋಕವನ್ನುನಂಬಿದವನುಹುಟ್ಟುಗುರುಡನು

೫೯. ಒಳ್ಳೆಯನಿಯಮಾನುಸರಣೆ, ವಿದ್ಯೆ, ಸತ್ಯಸಂಧತೆ, ಕ್ರೌರ್ಯವಿಲ್ಲದಿರುವುದು, ಚಪಲತೆಇಲ್ಲಿದಿರುವದೇಬ್ರಾಹ್ಮಣ್ಯವು, ಜಾತಿಮಾತ್ರವಲ್ಲ.

೬೦. ನಿಸ್ಪೃಹರಾದವರಿಗೆಬೇರೆಯವರಿಂದಏನನ್ನುಅಪೇಕ್ಷಿಸುವುದಿದೆ?

೬೧. ಯಾರನ್ನುತಾನೆಆಸೆನೋಯಿಸದು?

೬೨.ಯಾರಮನಸ್ಸುಅವಿದ್ಯೆಯಿಂದಲೂ. ದುರಾಶೆಯಿಂದಲೂಪೀಡಿತವಲ್ಲವೋ, ಅಂಥವನುಸಂಯಮಿ, ಗ್ರಹಸ್ಥಾಶ್ರಮಿಎನಿಸಿಕೊಳ್ಳುವುದಕ್ಕೆಅರ್ಹತೆಯುಳ್ಳವನಾಗಿರುತ್ತಾನೆ.

—-

ಅರ್ಥ : ಸಂಯಮೀ = ತಪಸ್ವಿಯುಂ, ಗೃಹಾಶ್ರಮೀವಾ = ಗೃಹಸ್ಥಂಮೇಣ್‌, ತತ್ಪದಮರ್ಹತಿ = ಆಪದವಿಗೆತಕ್ಕಂಯಸ್ಯ = ಆವನೋರ್ವನ, ಚೇತಃ = ಮನಂ, ಅವಿದ್ಯಾ = ಮೂರ್ಖತ್ವಮುಂ, ತೃಷ್ಣಾಭ್ಯಾಂ = ಕಾಂಕ್ಷೆಯಮೆಂಬುವಱೆಂ, ಅನುಪಹತಂ = ಪೀಡಿಸಲ್ಪಟ್ಟುದಿಲ್ಲ || ವಿದ್ಯೆ- ಸಂತಸಂಗಳನುಳ್ಳನೇತಂತಮ್ಮಪದವಿಗೆಯೋಗ್ಯನೆಂಬುದುತಾತ್ಪರ್ಯಂ || ಪುರುಷರ್ಗಿದುಭೂಷಣಮೆಂಬುದುತ್ತರವಾಕ್ಯಂ :

ಶೀಲಮಲಂಕಾರಃಪುರುಷಾಣಾಂದೇಹಖೇದಾವಹೋಬಹಿರಾಕಲ್ಪಃ|| ೬೩ || ೧೦೯೧ ||

ಅರ್ಥ : ಪುರುಷಾಣಾಂ = ಪುರುಷರ್ಗೆ, ಶೀಲಂ = ಶೀಲಂ, ಅಲಂಕಾರಃ = ತೊಡವು, ದೇಹಖೇದಾವಹಃ = ಶರೀರಕ್ಕೆಪೂಱೆಯಪ್ಪ, ಬಹಿರಾಕಲ್ಪಃ = ಪೊಱಗಣಾಭರಣಂ, ನ = ಭೂಷಣಮಲ್ತು || ಪುರುಷಂಗುಣಂಗಳಿಂಮಾನ್ಯನೆಂಬುದುತಾತ್ಪರ್ಯಂ || ಅರಸನಾವಂಗಂಕೆಳೆಯನಲ್ಲೆಂಬುದುತ್ತರವಾಕ್ಯಂ :

[3]ಕಸ್ಯನಾಮನೃಪತಿರ್ಮಿತ್ರಂ|| ೬೪ || ೧೦೯೨ ||

ಅರ್ಥ : ಕಸ್ಯ = ಆವಂಗೆ, ನಾಮ = ದಿಟದಿಂ, ನೃಪತಿಃ = ಅರಸು, ಮಿತ್ರಂ = ಕೆಳೆಯಂ || ಅರಸುಗಳ್‌ ಸ್ವಕಾರ್ಯಂಮಾಳ್ಪಂಗೆಕೂರ್ಪರೆಂಬುದುತಾತ್ಪರ್ಯಂ || ತನಗೆಪೊಲ್ಲದುಗೆಯ್ವಂಗಿಂತುಮಾಳ್ಪುದೆಂಬುದುತ್ತರವಾಕ್ಯಂ :

ಅಪ್ರಿಯಕರ್ತುರ್ನಪ್ರಿಯಕರಣಾತ್ಪರಂ[4]ಮಾರಣಕರಣಮಸ್ತಿ|| ೬೫ || ೧೦೯೩ ||

ಅರ್ಥ : ಅಪ್ರಿಯಕರ್ತುಃ = ಪೊಲ್ಲದಂಮಾಳ್ವಂಗೆ, ಪ್ರಿಯಕರಣಾತ್‌ = ಒಳ್ಳಿತಂಮಾಳ್ಪುದತ್ತಣಿಂ, ಪರಂ = ಪೆಱತು, ಮಾರಣಕರಣಂ = ಕೊಲ್ವಕಾರಣಂ, ನಾಸ್ತಿ = ಇಲ್ಲ || ಪೊಲ್ಲದಂಗೊಳ್ಳಿತಂಮಾಡೆಮನದೊಳ್‌ ನೋವನೆಂಬುದುತಾತ್ಪರ್ಯಂ || ಬೇಡಿದಂಗಿಂತುನುಡಿವುದೆಂಬುದುತ್ತರವಾಕ್ಯಂ :

ಅಪ್ರಯಚ್ಛನ್ನರ್ತ್ಥಿನೋಪರುಷಂಬ್ರೂಯಾತ್|| ೬೬ || ೧೦೯೪ ||

ಅರ್ಥ : ಅರ್ತ್ಥಿನಃ = ಬೇಳ್ವಂಗೆ, ಅಪ್ರಯಚ್ಛನ್‌ = ಕುಡದಂ, ಪರುಷಂ = ಬೆಟ್ಟಿತಂ, ನಬ್ರೂಯಾತ್‌ = ನುಡಿಯದಿರ್ಕ್ಕೆ || ಬೇಳ್ಪಂಗೆಬೆಟ್ಟತಂನುಡಿಯಲಧಿಕದ್ವೇಷಮಕ್ಕುಮೆಂಬುದುತಾತ್ಪರ್ಯಂ || ಇಂತಪ್ಪಸಿರಿಮಿಯಿಲ್ಲೆ[5]೦ಬುದುತ್ತರವಾಕ್ಯಂ :

—-

೬೩. ಪುರುಷರಿಗೆಶೀಲವೇಅಲಂಕಾರ, ಶರೀರಕ್ಕೆಭಾರವಾದಹೊರಗಿನಆಭರಣಗಳಿಲ್ಲ.

೬೪. ರಾಜನುಯಾರಿಗೆತಾನುಮಿತ್ರನು?

೬೫. ಅಪ್ರಿಯವನ್ನುಂಟುಮಾಡುವವನಿಗೆಒಳ್ಳೆಯದನ್ನುಮಾಡುವುದೇಅವನನ್ನುಕೊಲ್ಲುವಸಾಧನವು.

೬೬. ಬೇಡಿದವನಿಗೆಬೇಡಿದ್ದನ್ನುಕೊಡದವರುಬಿರುಸಾದಮಾತುಗಳನ್ನುಆಡಬಾರದು.

—-

ಸಾಶ್ರೀ[6]ರ್ಮರುಭೂಮಿಸಮಾಃಯತ್ರಾರ್ಥಿನೋಭವಂತಿ[7]ಪ್ರಾಪ್ತಕಾಮಾಃ|| ೬೭ || ೧೦೯೫ ||

ಅರ್ಥ : ಯತ್ರ = ಆವುದೊಂದರೊಳ್‌, ಅರ್ಥಿನಃ = ಬೇಳ್ಪರ್‌, ಪ್ರಾಪ್ತಕಾಮಾಃ = ಬೇಡಿದಂಪಡೆವರ್‌, ನಭವಂತಿ = ಆಗರು, ಸಾಶ್ರೀಃ = ಆಲಕ್ಷ್ಮಿ, ಮರುಭೂಮಿಸಮಾ = ಮರುಭೂಮಿಯಸಮಾನಂ || ಸಿರಿಯುಳ್ಳಂಬೇಡಿದಂಗೆಕುಡದಿರಲಾಗದೆಂಬುದುತಾತ್ಪರ್ಯ || ಅರಸಂಗಿಂತಪ್ಪುದುಯಜ್ಞಮೆಂಬುದುತ್ತರವಾಕ್ಯಂ :

ಪ್ರಜಾಪಾಲನಂಹಿರಾಜ್ಞೋಯಜ್ಞೋನಪುನರ್ಭೂತಾನಾಮಾಲಂಭಃ|| ೬೮ || ೧೦೯೬ ||

ಅರ್ಥ : ರಾಜ್ಞಃಅರಸಂಗೆ, ಪ್ರಜಾಪಾಲನಂಹಿ = ಪ್ರಜೆಯಂರಕ್ಷಿಸುವುದೇ, ಯಜ್ಞ = ಯಾಗಂ, ಭೂತಾನಾಂ = ಪ್ರಾಣಿಗಳ, ಆಲಂಭಃ = ಕೊಲೆ, ಪುನಃ = ಮತ್ತೆ, ನ = ಯಜ್ಞಮಲ್ತು || ಅರಸಂಪ್ರಜೆಗೆಹಿತಮಂಮಾಳ್ಪುದೆಧರ್ಮಮೆಂಬುದುತಾತ್ಪರ್ಯಂ || ಅರಸನಬಲಮಂಬಿಲ್ವಲ್ಮೆಯುಮಿದುಕಾರಣಮೆಂಬುದುತ್ತರವಾಕ್ಯಂ :

ನಾನ[8]ಪರಾಧಸತ್ವವ್ಯಾಪತ್ತಯೇ[9]ನೃಪಾಣಾಂಬಲಂಧನುರ್ವಾಕಿಂತು
ಶರಣಾಗತರಕ್ಷಣಾಯ
|| ೬೯ || ೧೦೯೭ ||

ಅರ್ಥ: ನೃಪಾಣಾಂ = ಅರಸುಗಳ, ಬಲಂ = ಬಲಮುಂ ಧನುರ್ವಾ = ಬಿಲ್ಲುಂ ಮೇಣ್, ಅನಪರಾಧ = ದೋಷಮಿಲ್ಲದ, ಸತ್ಪ = ಪ್ರಾಣಿಗಳ, ವ್ಯಾಪತ್ತಯೇ = ಕೇಡಿಂಗೆ ಕಾರಣಂ, ನ = ಅಲ್ಲದು, ಕಿಂತು = ಮತ್ತೆ, ಶರಣಾಗತರಕ್ಷಣಾಯ = ಶರಣ್ಬೊಕ್ಕರಂ ರಕ್ಷಿಸಲ್ವೇಡಿ || ಅರಸನಾವ ಪ್ರಾಣಿಯನಾದೊಡಂ ನಿರಪರಾಧಿಯಂ ಕೊಲಲಾಗದೆಂಬುದು ತಾತ್ಪರ್ಯಂ ||

ಇತಿ ಸದಾಚಾರ ಸಮುದ್ದೇಶಃ || ೨೫ ||[10]
ಈ ಸಮುದ್ದೇಶದ ವಾಕ್ಯಂಗಳು || ೬೯ || ೧೦೯೭ ||

—-

೬೭. ಯಾಚಕರಕೋರಿಕೆಗಳನ್ನುಪೂರೈಸದಐಶ್ವರ್ಯವುಮರುಭೂಮಿಗೆಸಮಾನ.

೬೮. ರಾಜರಿಗೆಪ್ರಜಾಪಾಲನೆಯೇಯಜ್ಞ, ಪ್ರಾಣಿಗಳನ್ನುಕೊಲ್ಲುವುದಿಲ್ಲ.

೬೯. ರಾಜರುಗಳಸೈನ್ಯವಾಗಲಿಆಯುಧವಾಗಲಿಅಪರಾಧವೆಸಗದಪ್ರಾಣಿಗಳನ್ನುಹಿಂಸಿಸುವುದಕ್ಕಲ್ಲ, ಅದಿರುವದುಶರಣಾಗತರರಕ್ಷಣೆಗೆ.

—-

 

[1]ಮೈ. ಭೋಜನಮಸ್ತಿ.

[2]ಮೈ. ಅಲೋಲತಾಶಕ್ತಿವಿಶೇಷಣಶ್ಚ.

[3]ಚೌ. ಈವಾಕ್ಯವಿಲ್ಲ.

[4]ಚೌ. ಪರಮಂ. ಅಚರಣಂ.

[5]ಸಿರಿಯಲ್ಲೆಂಬುದುಎಂದುಓದಬೇಕು.

[6]ಚೌ. ಸ. ಸ್ವಾಮೀ.

[7]ಚೌ. ಇಷ್ಟಕಾಮಾಶ್ಚ.

[8]ಚೌ. ಪ್ರಭೂತಮಪಿನಾನಪರಾಧ.

[9]ಮೈ., ಚೌ. ವ್ಯಾವೃತ್ತಯೇ.

[10]ಇದು೨೬ಎಂದಿರಬೇಕು.