[1]ಯತಿಠಕ್ಕುರವೇಶ್ಯಾವರುಟ[2]ಭಂಡಾನಾಂಪರಿಸ್ಪಂದೋಮಹಾನನರ್ಥಸ್ತುಕಿಂಚನಾಪಿ|| ೪೫ || ೧೧೪೨ ||

ಅರ್ಥ : ಯತಿ = ತಪಸ್ವಿಗಳುಂ, ಠಕ್ಕುರ = ನಾಗಾರ್ಯರುಂ (ಠಕ್ಕುರರು) ವೇಶ್ಯಾ = ಸೂಳೆಯರುಂ, ವರುಟ = ಮೇಟರುಂ, ಭಂಡಾನಾಂ = ಭಂಡರುಮೆಂದಿವರ, ಪರಿಸ್ಪಂದಃ = ನೆರವಿ, ಮಹಾನನರ್ಥಃ = ಹಿರಿದುಅನರ್ಥವಲ್ಲದೆ, ನಕಿಂಚನಾಪಿ = ಮತ್ತೆಏನುಮಲ್ಲದೆ || ಇಂತಪ್ಪನೆರವಿಏನುಂಮಾಡಲಾಱದೆಂಬುದುತಾತ್ಪರ್ಯ || ಲೋಭದಿಂದಿಂತಕ್ಕುಮೆಂಬುದುತ್ತರವಾಕ್ಯಂ :

ಲೋಭವತಿಭವಂತಿನಿಷ್ಪಲಾಃಸರ್ವೇಪಿಗುಣಾ|| ೪೬ || ೧೧೪೩ ||

ಅರ್ಥ : ಲೋಭವತಿ = ಲೋಭಿಯೊಳ್‌, ಸರ್ವೇsಪಿ = ಎಲ್ಲಾ, ಗುಣಾಃ = ಗುಣಂಗಳು, ವಿಫಲಾಃ = ಭವಂತಿ = ನಿಷ್ಫಲಂಗಳಪ್ಪವು || ಎಲ್ಲಾಗುಣಂಗಳುಂಚಾಗದಿಂಮೆಱೆವುದೆಂಬುದುತಾತ್ಪರ್ಯಂ || ಬೇಳ್ಪಡಿಂತುಮಾಳ್ಕೆಂಬುದುತ್ತರವಾಕ್ಯಂ :

ಅರ್ಥಯಾಚನಾಕಂನಾಮಲಘುಯತಿ || ೪೭ || ೧೧೪೪ ||

ಅರ್ಥ : ಅರ್ಥಯಾಚನಾ = ಅರ್ಥಮಂಬೇಳ್ಪುದು, ಕಂನಾಮ = ಆವನಂ, ನಲಘಯತಿ = ನೊಚ್ಚಿದನಂ (ಲಘುವಮಾಡದು) || ಬೇಡುವನೇಲಘುವೆಂಬುದುತಾತ್ಪರ್ಯಂ || ಬಡತನಂಪೊಲ್ಲೆಂಬುದಂಕಾರಣಂಬೆರಸಿಪೇಳ್ವುದುತ್ತರವಾಕ್ಯಂ :

ನದಾರಿದ್ರ್ಯಾತ್ಪರಂ[3]ಲಾಘವಕಾರಣಮಸ್ತಿಯತಸ್ತೇಮಹಾಂತೋsಪಿಭವಂತ್ಯನ್ಯದೋಷೇಣಾಶಂಕನೀಯಾ[4] || ೪೮ || ೧೧೪೫ ||

ಅರ್ಥ : ದಾರಿದ್ರ್ಯಾತ್‌ = ಬಡತನದತ್ತಣಿಂ, ಲಾಘವಕಾರಣಂ = ಬಿಣ್ಪುಗಿಡುದಕ್ಕೆ[5]ಕಾರಣಂ, ಪರಂ = ಪೆಱತು, ನಾಸ್ತಿ = ಇಲ್ಲ, ಯತಃ = ಆವುದೊಂದುಕಾರಣಮಾಗಿ, ತೇ = ಅವರು, ಮಹಾಂತೋsಪಿ = ಮಹಾಪುರುಷರಾದೊಡೆಯು, ಅನ್ಯದೋಷೇಣ = ಲೋಗರದೋಷದಿಂದ, ಆಶಂಕನೀಯಾಃ = ನಂಬಲುಬೇಡದವರು, ಭವಂತಿ = ಅಹರು || ಧನಮುಳ್ಳನೆಬಿಣ್ಪುವಡೆವನೆಂಬುದುತಾತ್ಪರ್ಯಂ || ಜನಂಧನಮುಳ್ಳರೊಳಿಂತಕ್ಕುಮೆಂಬುದುತ್ತರವಾಕ್ಯಂ :

—-

೪೫. ಸನ್ಯಾಸಿಗಳು, ಠಕ್ಕುರ, ವೇಶ್ಯೆಯರು, ವಿದೂಷಕರುಇವರುಒಂದೆಡೆಸೇರಿದರೆಅನರ್ಥವಲ್ಲದೆಬೇರೇನೂಉಂಟಾಗುವುದಿಲ್ಲ.

೪೬. ಲೋಭಿಯಲ್ಲಿಯಎಲ್ಲಸದ್ಗುಣಗಳೂವ್ಯರ್ಥ.

೪೭. ಹಣವನ್ನುಬೇಡುವದುಯಾರನ್ನುತಾನೇಹೀನಾಯಗೊಳಿಸದು?

೪೮. ಮನುಷ್ಯನುಅಲ್ಪನೆಱನಿಸಿಕೊಳ್ಳುವುದಕ್ಕೆಬಡತನಕ್ಕಿಂತಬೇರೆಕಾರಣವಿಲ್ಲ. ಮಹಾಪುರುಷರಾದರೂಬಡವರಾದರೆಇತರರದೋಷದಿಂದನಂಬಿಕೆಗೆಅನರ್ಹರಾಗುತ್ತಾರೆ.

—-

ಅಲಬ್ಧಾರ್ಥೋsಪಿಲೋಕೋಭವತಿಧನವತಿಭಂಡಃ[6]|| ೪೯ || ೧೧೪೬ ||

ಅರ್ಥ : ಅಲಬ್ಧಾರ್ಥೋsಪಿ = ಧನಂಬಡೆಯದೆಯುಂ, ಲೋಕಃ = ಜನಂ, ಧನವತಿ = ಧನಿಕನೊಳ್‌, ಭಂಡಃ = ಭೂತು, ಭವತಿ = ಅಕ್ಕುಂ || ಧನದಾಸೆಯಿಂದಮೆಸ್ತುತಿಯಿಸುವುದೆಂಬುದುತಾತ್ಪರ್ಯಂ || ಇದನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಶ್ರೀಮತಿ[7]ಯತಯೋsಪಿಸಚಾಟುಕಾರಾಃ|| ೫೦ || ೧೧೪೭ ||

ಅರ್ಥ : ಯತಯೋsಪಿ = ಯತಿಗಳುಂ, ಶ್ರೀಮತಿ = ಶ್ರೀಯುನುಳ್ಳರೊಳ್‌, ಸಚಾಟುಕಾರಾಃ = ಅನುನಯಮಂಮಾಳ್ಪರು || ಸಿರಿಯಿಲ್ಲದನಂಯತಿಗಳುಂಬಗೆಯರೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ರತ್ನಹಿರಣ್ಯಪೂತಾಜ್ಜಲಾತ್ಪರಂವಿಶುದ್ಧಿಕಾರಣಮಸ್ತಿ[8]|| ೫೧ || ೧೧೪೮ ||

ಅರ್ಥ : ರತ್ನ = ರತ್ನಮುಂ, ಹಿರಣ್ಯ = ಪೊನ್ನುಮೆಂದಿವಱಿಂ, ಪೂತಾತ್‌ = ಪವಿತ್ರಮಾದ, ಜಲಾತ್‌ = ಜಲದತ್ತಣಿಂ, ಪರಂ = ಪೆಱತು, ವಿಶುದ್ಧಿಕಾರಣಂ = ವಿಶುದ್ಧತನಕ್ಕೆಕಾರಣಂ, ನಾಸ್ತಿ = ಇಲ್ಲ || ಸರ್ವವಸ್ತುವಂಪ್ರಶಸ್ತಂಮಾಳ್ಪಜಲಮುಂಸ್ವರ್ಣದಿಂದಿತಿಪವಿತ್ರಮಕ್ಕುಮೆಂತಂತೆಪೊನ್ನುಳ್ಳನೆಮಾನ್ಯನೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

[9]ಉತ್ಸವೋಯತ್ರಬಂಧಿಮೋಕ್ಷೋದೀನೋದ್ಧರಣಂ|| ೫೨ || ೧೧೪೯ ||

ಅರ್ಥ : ಯತ್ರ = ಎಲ್ಲಿ, ಬಂಧಿಮೋಕ್ಷೋ = ಸೆಱೆಯಂಬಿಡುವುದು, ದೀನೋದ್ಧರಣಂಚ = ಬಡವರಂರಕ್ಷಿಪುದುಂ, ಸಃ = ಅದು, ಉತ್ಸವಃ = ಒಸಗೆ || ಇದಿಲ್ಲದುದುತ್ಸವಮಲ್ಲೆಂಬುದುತಾತ್ಪರ್ಯಂ || ಇಂತಪ್ಪುದುಪರ್ವಮೆಂಬುದುತ್ತರವಾಕ್ಯಂ :

—-

೪೯. ಧನವನ್ನುಪಡೆಯಲಾರದೆಯೂಜನರುಧನವಂತನಮುಂದೆಹೊಗಳುಭಟ್ಟರಾಗಿನಿಲ್ಲುತ್ತಾರೆ.

೫೦. ಯತಿಗಳೂಸಹಧನಿಕರಮನವೊಲಿಸುವದರಲ್ಲಿತೊಡಗುತ್ತಾರೆ.

೫೧. ರತ್ನದಿಂದ, ಸುವರ್ಣದಿಂದಪವಿತ್ರಗೊಳಿಸಿದಜಲವನ್ನುಮೀರಿದಶುದ್ಧಿಗೊಳಿಸುವವಸ್ತುವಿಲ್ಲ.

೫೨. ಸೆರೆಯಲ್ಲಿರುವವರನ್ನುಬಿಡುವುದು. ದೀನರಉದ್ಧಾರಮಾಡುವುದುಇವೇನಿಜವಾದಉತ್ಸವ.

—-

ತಾನಿಪರ್ವಾಣಿಯೇಷ್ವತಿಥಿಪರಿಜನಯೋಃಪ್ರಕಾಮಂಸಂತರ್ಪಣಂ || ೫೩ || ೧೧೫೦ ||

ಅರ್ಥ : ಏಷು = ಆವುದಱೊಳ್‌, ಅತಿಥಿ = ಯತಿಗಳುಂ, [10]ಪರಿಜನಯೋಃ = ಪರಿವಾರಜನಮುಮೆಂಬಿವಱ, ಪ್ರಕಾಮಂ = ಒಳ್ಳಿತ್ತಾಗಿ, ಸಂತರ್ಪಣಂ = ತಣಿಪುವುದು, ತಾನಿ = ಅವು, ಪರ್ವಾಣಿ = ಪರ್ವಂಗಳೆಂಬುದು || ಯತಿಗಳುಮಂಪೊರ್ದಿದರುಮಂತಣಿಪದುದುಪರ್ವಮಲ್ಲೆಂಬುದುತಾತ್ಪಾರ್ಯಂ || ಇವುತಿಥಿಗಳೆಂಬುದುತ್ತರವಾಕ್ಯಂ :

ತಾಸ್ತಿಥಯೋಯಾಸುಧರ್ಮಾಚರಣಂ[11]|| ೫೪ || ೧೧೫೧ ||

ಅರ್ಥ : ಯಾಸು = ಆವವಱೊಳ್‌, ಧರ್ಮಾಚರಣಂ = ಧರ್ಮದನೆಗಳ್ತೆ, ತಾಃ = ಅವು, ತಿಥಯಃ = ತಿಥಿಗಳೆಂಬವು || ಧರ್ಮಂಮಾಳ್ಪದಿನಂಗಳ್‌ ಪುಣ್ಯದಿನಗಳೆಂಬುದುತಾತ್ಪರ್ಯಂ || ತೀರ್ಥಕ್ಕೆಪೋಪುದಿದೆಂಬುದುತ್ತರವಾಕ್ಯಂ :

ಸಾತೀರ್ಥಯಾತ್ರಾಯಸ್ಯಾಂಕುಕೃತ್ಯನಿವೃತ್ತಿಃ|| ೫೫ || ೧೧೫೨ ||

ಅರ್ಥ : ಯಸ್ಯಾಂ = ಆವುದೊಂದಱೊಳ್‌, ಕುಕೃತ್ಯನಿವೃತ್ತಿಃ = ಮಾಡಲ್ಪಡುವುದಲ್ಲದಱ (ಯೋಗ್ಯವಲ್ಲದುದಱ)ತೊರವಿ, ಸಾ = ಅದು, ತೀರ್ಥಯಾತ್ರಾ = ತೀರ್ಥಕ್ಕೆಪೋಪುದೆಂಬುದು || ಪಾಪಿಯತೀರ್ಥಯಾತ್ರೆಯಪ್ರಯಾಣಂತೀರ್ಥಯಾತ್ರೆಯಲ್ಲೆಂಬುದುತಾತ್ಪರ್ಯಂ || ಇದುಪಂಡಿತಿಕೆಯೆಂಬುದುತ್ತರವಾಕ್ಯಂ :

ತತ್ಪಾಂಡಿತ್ಯಂಯತ್ರ[12]ವಯೋವಿದ್ಯೋದಚಿತಮನುಷ್ಠಾನಂ|| ೫೬ || ೧೧೫೩ ||

ಅರ್ಥ : ಯತ್ರ = ಎಲ್ಲಿ, ವಯಃ = ಪ್ರಾಯಮುಂ, ವಿದ್ಯಾ = ವಿದ್ಯೆಯುಮೆಂಬಿವಕ್ಕೆ, ಉಚಿತಂ = ತಕ್ಕ, ಅನುಷ್ಠಾನಂ = ನೆಗಳ್ತೆ, ತತ್‌ = ಅದು, ಪಾಂಡಿತ್ಯಂ = ವಿವೇಕತನಂ || ಪ್ರಾಯಕ್ಕಂವಿದ್ಯೆಗಂತಕ್ಕಂತುನೆಗಳ್ವಂಬುದ್ದಿವಂತನೆಂಬುದುತಾತ್ಪರ್ಯ || ಇದುಚದುರತನಮೆಂಬುದುತ್ತರವಾಕ್ಯಂ :

—-

೫೩. ಯಾವುದರಿಂದಅತಿಥಿಗಳಿಗೂಪರಿಜನರಿಗೂಪೂರ್ತಿಯಾಗಿತೃಪ್ತಿಯಾಗುವುದೋಅವೇಪರ್ವಗಳು.

೫೪. ಧರ್ಮವನ್ನುಆಚರಿಸಿದದಿನಗಳೇತಿಥಿಗಳು.

೫೫. ಕೆಟ್ಟಕೆಲಸವನ್ನುಬಿಡುವುದೇತೀರ್ಥಯಾತ್ರೆ.

೫೬. ವಯಸ್ಸು, ವಿದ್ಯೆಗಳಿಗೆಉಚಿತವಾಗಿನಡೆದುಕೊಳ್ಳುವುದೇಪಾಂಡಿತ್ಯ.

—-

ತಚ್ಚಾತುರ್ಯಂಯತ್ರಪರಪ್ರೀತ್ಯಾಸ್ವಕಾರ್ಯಸಾಧನಂ|| ೫೭ || ೧೧೫೪ ||

ಅರ್ಥ : ಯತ್ರ = ಎಲ್ಲಿ, ಪರಪ್ರೀತ್ಯಾ = ಪೆಱರಪ್ರೀತಿಯಿಂ, ಸ್ವಕಾರ್ಯಸಾಧನಂ = ತನ್ನಕಾರ್ಯಮಂತೀರ್ಚುವುದು, ತತ್‌ = ಅದು, ಚಾತುರ್ಯಂ = ಚದುರತನಮೆಂಬುದು || ಪೆಱರಂನೋಯಿಸಿತನ್ನಕಾರ್ಯಾಮಂಮಾಡಲಾಗದೆಂಬುದುತಾತ್ಪರ್ಯ || ಇಂತಪ್ಪಂಜನಂಗಳಮನಂಗೊಳ್ವನೆಂಬುದುತ್ತರವಾಕ್ಯಂ :

ತಲ್ಲೋಕವಿತ್ತ್ವಂ[13]ಯತ್ಸರ್ವಜನಾದೇಯತ್ವಂ|| ೫೮ || ೧೧೫೫ ||

ಅರ್ಥ : ಯತ್‌ = ಆವುದೊಂದು, ಸರ್ವಜನಾದೇಯತ್ವಂ = ಎಲ್ಲಾಜನಂಗಳಿಂಕೊಂಡಾಡೆಪಡುವನಕ್ಕುಂ, ತತ್‌ = ಅದು, ಲೋಕವಿತ್ತ್ವಂ = ಲೌಕಿಕದಲಱಿತಂ || ಎಲ್ಲಾಜನಂಗಳಾದರಿಸುವಂತುನೆಗಳ್ವಂಲೋಕಜ್ಞನೆಂಬುದುತಾತ್ಪರ್ಯಂ || ಇದುನುಡಿಯಲ್ಲೆಂಬುದುತ್ತರವಾಕ್ಯಂ :

ತದ್ವಾಗ್ಮಿತ್ವಂ[14]ಯತ್ರಪರೋದ್ವೇಗಃ|| ೫೯ || ೧೧೫೬ ||

ಅರ್ಥ : ಯತ್ರ = ಎಲ್ಲಿ, ಪರೋದ್ವೇಗಃ = ಪೆಱರ್ಗುಬ್ಬೆಗಂ, ನ = ಇಲ್ಲ, ತತ್‌ = ಅದು, ವಾಗ್ಮಿತ್ವಂ = ನುಡಿಪ್ರೌಢಿ || ಪೆಱರಮನಕ್ಕೆನೋವಂಪುಟ್ಟಿಸದನುಡಿಹಂಲೇಸೆಂಬುದುತಾತ್ಪರ್ಯಂ || ಇದುಧೀರತೆಯೆಂಬುದುತ್ತರವಾಕ್ಯಂ :

ತದ್ಧೀರತ್ವಂಯತ್ರಯೌವನಮನಪವಾದಂ|| ೬೦ || ೧೧೫೭ ||

ಅರ್ಥ : ಯತ್ರ = ಎಲ್ಲಿ, ಯೌವನಂ = ಜೌವ್ವನಂ, ಅನಪವಾದಂ = ಪಳಿಯಿಲ್ಲದುದು, ತತ್‌ = ಅದು, ಧೀರತ್ವಂ = ಸಂಜಳಿಸದುದೆಂಬುದು || ಜವ್ವನದೊಳ್‌ ಪಳಿಯಿಲ್ಲದುದುಸ್ಥಿರತೆಯೆಂಬುದುತಾತ್ಪರ್ಯಂ || ಇದುಸೌಭಾಗ್ಯಮೆಂಬುದುತ್ತರವಾಕ್ಯಂ :

—-

೫೭. ಎಲ್ಲಿಪರರಪ್ರೀತಿಯಿಂದಸ್ವಕಾರ್ಯಸಾಧನೆಯಾಗುವುದೋಅದುಚಾತುರ್ಯ.

೫೮. ಎಲ್ಲಜನರಿಂದಲೂಕೊಂಡಾಡಲ್ಪಡುವುದೇಲೋಕಜ್ಞಾನ.

೫೯. ಇತರರಮನಸ್ಸಿಗೆನೋವುಂಟಾಗದಂತೆಮಾತನಾಡುವುದೇವಾಗ್ಮಿತೆ.

೬೦. ಯೌವನದಲ್ಲಿಅಪವಾದಕ್ಕೆಗುರಿಯಾಗದಿರುವುದೇಧೀರತನ.

—-

ತತ್ಸೌಭಾಗ್ಯಂಯತ್ರದಾನಂ[15]ಪರವಶೀಕರಣಂ|| ೬೧ || ೧೧೫೮ ||

ಅರ್ಥ : ಯತ್ರ = ಎಲ್ಲಿ, ದಾನಂ = ಕುಡಲದು, ಪರವಶೀಕರಣಂ = ಪೆಱರಂಕೂರಿಸುವುದು, ತತ್‌ = ಅದು, ಸೌಭಾಗ್ಯಂ = ಸೌಭಾಗ್ಯಮೆಂಬುದು || ಕೊಟ್ಟಾಲಿಸುವುದುತಾತ್ಪರ್ಯಂ || ತಾಂಕೂರಲ್ತುತನಗೆಕೂರದನಿಂಬಾರ್ತೆಯಿಲ್ಲೆಂಬುದುತ್ತರವಾಕ್ಯಂ :

ಕಿಂತೇನಾತ್ಮನಃಪ್ರಿಯೇಣಯಸ್ಯಭವತಿಸ್ವಯಂಪ್ರಿಯಃ|| ೬೨ || ೧೧೫೯ ||

ಅರ್ಥ : ಯಸ್ಯ = ಆವನೋರ್ವಂಗೆ, ಸ್ವಯಂ = ತಾಂ, ಪ್ರಿಯಃ = ಸೊಗಯಿಸುವಂ, ನಭವತಿ = ಅಲ್ಲಂ, ತೇನ = ಆತನಿಂ, ಆತ್ಮನಃತನಗೆ, ಪ್ರಿಯೇಣ = ಸೊಗಯಿಸುವನಿಂ, ಕಿಂ = ಏನು || ತನ್ನನೊಲ್ಲದನಂತಾನೊಲಿಸಲುವೇಡೆಂಬುದುತಾತ್ಪರ್ಯಂ || ಇಂತಪ್ಪಂಸ್ವಾಮಿಯಲ್ಲೆಂಬುದುತ್ತರವಾಕ್ಯಂ :

ಕಿಂಪ್ರಭುರ್ಯೋಸಹತೇಪರಿಜನಸಂಬಾಧಂ|| ೬೩ || ೧೧೬೦ ||

ಅರ್ಥ : ಯಃ = ಆವನೋರ್ವಂ, ಪರಿಜನಸಂಬಾಧಂ = ಪರಿಗ್ರಹದೊತ್ತೊತ್ತಿಯಂ, ನಸಹತೇ = ಸೈರಿಸಂ, ಸಃ = ಆತಂ, ಕಿಂಪ್ರಭುಃ = ಏಂಸ್ವಾಮಿಯೇ || ಪರಿಗ್ರಹದಸಂದಣಿಯಂಸ್ಯೆರಿಸವೇಳ್ಕುಮೆಂಬುದುತಾತ್ಪರ್ಯಂ || ಇಂತಪ್ಪುದಱಿಂದಿದುಮಿಗಿಲಲ್ಲೆಂಬುದುತ್ತರವಾಕ್ಯಂ :

ಲೇಖಾದ್ವಚನಂಪ್ರಮಾಣಂ[16]|| ೬೪ || ೧೧೬೧ ||

ಅರ್ಥ : ಲೇಖಾತ್‌ = ಓಲೆಯಿಂದವೆ, ವಚನಂ = ಮಾತು, ಪ್ರಮಾಣಂ = ಪ್ರಮಾಣವು, ನ = ಅಲ್ಲ ||

ಅನಭಿಜ್ಞಾನೇಲೇಖೇನಾಸ್ತಿಸಂಪ್ರತ್ಯಯಃ|| ೬೫ || ೧೧೬೨ ||

ಅರ್ಥ : ಅನಭಿಜ್ಞಾನೆ = ವಿನ್ನಾಣಮಿಲ್ಲದ (ಒಪ್ಪವಿಲ್ಲದ) ಲೇಖೇ = ಬರಹದೊಳ್‌ (ಓಲೆಯಲ್ಲಿ) ಸಂಪ್ರತ್ಯಯಃ = ನಂಬುಗೆ, ನಾಸ್ತಿ = ಇಲ್ಲ || ಅವಿನಾಣಂ[17]ಬೆಱಸಿಬರೆಯಲ್ವೇಳ್ಕುಮೆಂಬುದುತಾತ್ಪರ್ಯಂ || ಇಂತಪ್ಪದೋಷಂಗಳಾಗಳೆಫಲಿಸುವುದೆಂಬುದುತ್ತರವಾಕ್ಯಂ :

—-

೬೧. ಕೊಡುವುದರಿಂದಪರರನ್ನುವಶೀಕರಿಸಿಕೊಳ್ಳುವುದೇಸೌಭಾಗ್ಯ.

೬೨. ತಾನುಯಾರಿಗೆಇಷ್ಟವಿಲ್ಲವೋಅಂಥವನುತನಗೆಇಷ್ಟವಾಗುವುದರಿಂದಏನುಪ್ರಯೋಜನ?

೬೩. ಪರಿಜನರಒತ್ತಡವನ್ನುಸಹಿಸದವನುಎಂಥಅರಸನು?

೬೪. ಲೇಖಕ್ಕಿಂತಲೂಮಾತುಹೆಚ್ಚುಪ್ರಮಾಣವಲ್ಲ.

೬೫. ಒಪ್ಪವಿಲ್ಲದಲೇಖವುನಂಬಲರ್ಹವಲ್ಲ.

—-

ತ್ರೀಣಿಪಾತಕಾನಿಸದ್ಯಃಫಲಂತಿಸ್ವಾಮಿದ್ರೋಹಃಸ್ತ್ರೀವಧೋಬಾಲವಧಶ್ಚೇತಿ|| ೬೬ || ೧೧೬೩ ||

ಅರ್ಥ : ಸ್ವಾಮಿದ್ರೋಹಃ = ಆಳ್ದಂತೆಪೊಲ್ಲಗೆಯ್ವುದುಂ, ಸ್ತ್ರೀವಧಃ = ಪೆಣ್ಗೂಸಂಕೊಲ್ಪುದುಂ, ಬಾಲವಧಶ್ಚೇತಿ = ಕಿಱುಗೂಸುಗಳಕೊಲೆಯುಮೆಂಬೀ, ತ್ರೀಣಿಪಾತಕಾನಿ = ಮೂಱುಪಾತಕಂಗಳು, ಸದ್ಯಃಫಲಂತಿ = ಆಗಳೆಫಲಿಸುವವು || ಮೂಱುಪಾತಕಂಗಳುಭವಭವಮಂಕಿಡಿಸುವುವೆಂಬುದುತಾತ್ಪರ್ಯಂ || ಬಲ್ಲಿದನೊಳ್‌ ವಿಕಾರಂಬೇಡೆಂಬುದಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ಅಪ್ಲವಸ್ಯಸಮುದ್ರಾವಗಾಹನಮಿವಅಲ್ಪಬಲಸ್ಯಬಲವತಾಸಹವಿಗ್ರಹಾಯಟಿರಿಟಿಲ್ಲಿತಂ|| ೬೭ || ೧೧೬೪ ||

ಅರ್ಥ : ಬಲವತಾಸಹ = ಬಲ್ಲಿದನೊಡನೆ, ವಿಗ್ರಹಾಯ = ಕಾಳೆಗಕ್ಕೋಸುಗಂ, ಅಲ್ಪಬಲಸ್ಯ = ಕಿರಿದಪ್ಪಬಲಮನುಳ್ಳನ, ಟಿರಿಟಿಲ್ಲಿತಂ = ಚಪಳಿಕೆ (ಮೆಟ್ಟಬೀಳುಹವು) ಆಪ್ಲವಸ್ಯ = ಬಹಿತ್ರಾದಿಗಳಿಲ್ಲದನ, ಸಮುದ್ರಾವಗಾಹನಮಿವ = ಸಮುದ್ರದೊಳ್‌ ಪುಗುಹಮೆಂತಂತೆ || ಬಲ್ಲಿದರತೋಟಿಬೇಡೆಂಬುದುತಾತ್ಪರ್ಯಂ || ಬಲ್ಲಿದರಂಪೊರ್ದಿಯಪಕಾರಿಯಾದೊಡಿಂತಕ್ಕುಮೆಂಬುದುತ್ತರವಾಕ್ಯಂ :

ಬಲವಂತಮಾಶ್ರಿತ್ಯವಿಕೃತಿಭಜನಂಸದ್ಯೋಮರಣಕಾರಣಂ|| ೬೮ || ೧೧೬೫ ||

ಅರ್ಥ : ಬಲವಂತಂ = ಬಲ್ಲಿದನಂ, ಆಶ್ರಿತ್ಯ = ಪೊರ್ದಿ, ವಿಕೃತಿಭಜನಂ = ಆತಂಗಪಕಾರಂಗೆಯ್ವುದು, ಸದ್ಯಃ = ಆಗಳೆ, ಮರಣಕಾರಣಂ = ಸಾವಿಗೆಕಾರಣಂ || ಬಲ್ಲಿದರೊಳ್‌ ಪೊಲ್ಲಮೆಯಂಮಾಡವೇಡೆಂಬುದುತಾತ್ಪರ್ಯಂ || ಪಯಣದಿಂದಾವನುಮಾಯಾಸಂಬಡುವನೆಂಬುದುತ್ತರವಾಕ್ಯಂ :

ಪ್ರವಾಸಶ್ವಕ್ರವರ್ತಿನಮಪಿಸಂತಾಪಯತಿಕಿಂಪುನರ್ನಾನ್ಯಂ|| ೬೯ || ೧೧೬೬ ||

ಅರ್ಥ : ಪ್ರವಾಸಃ = ಪೆಱವೆಡೆಗೆಪೋಪುದು, ಚಕ್ರವರ್ತಿನಮಪಿ = ಚಕ್ರವರ್ತಿಯುಮಂ, ಸಂತಾಪಯತಿ = ಕ್ಲೇಶಂಬಡಿಸುಗುಂ, ಅನ್ಯಂ = ಪೆಱನಂಕಿಂಪುನಃ = ಏಂಮತ್ತೆ, ನ = ಆಯಾಸಂ ಬಡಿಸದೇ || ಪಯಣದೊಳೆಲ್ಲಾವಸ್ತುದೊರಕೊಳ್ಳವೆಂಬುದುತಾತ್ಪರ್ಯ || ಪಯಣದಸಾಮಗ್ರಿಯಂಪೇಳ್ವುದುತ್ತರವಾಕ್ಯಂ :

—-

೬೬. ಸ್ವಾಮಿದ್ರೋಹ, ಸ್ತ್ರೀವಧೆ, ಬಾಲವಧೆಮೂರುಪಾತಕಗಳುತಕ್ಷಣವೇಪರಿಣಾಮಬೀರುವವು.

೬೭. ಬಲ್ಲಿದನೊಡನೆದುರ್ಬಲನುಸೆಣಸುವುದುತೆಪ್ಪವಿಲ್ಲದೆಸಮುದ್ರವನ್ನುಪ್ರವೇಶಿಸಿದಂತೆ. ಅದುಕೇವಲಚಾಪಲ್ಯವೇಸರಿ.

೬೮. ಬಲವಂತನನ್ನುಆಶ್ರಯಿಸಿಆತನಿಗೆಅಪಕಾರಮಾಡುವದುಕೂಡಲೇಮರಣಕ್ಕೆಕಾರಣವಾಗುತ್ತದೆ.

೬೯. ಪ್ರವಾಸವುಚಕ್ರವರ್ತಿಗೆಸಹಬಾಧೆಯನ್ನುಂಟುಮಾಡುವುದೆಂದಮೇಲೆಬೇರೆಯವರಬಗೆಗೆಹೇಳುವುದೇನು?

—-

ಬಹುಪಾಥೇಯಂಮನೋನುಕೂಲಃಪರಿಜನಃಸುವಿಹಿತಶ್ಚೋಪಸ್ಕಾರಃಪ್ರವಾಸೇಷುದುಃಖೋತ್ತರಣತರಂಡಕೋವರ್ಗಃ|| ೭೦ || ೧೧೬೭ ||

ಅರ್ಥ : ಬಹುಪಾಥೇಯಂ = ಪಿರಿದಪ್ಪಸಂಬಳಮುಂ, ಮನೋನುಕೂಲಃ = ಮನದನ್ನರಪ್ಪ, ಉಪಸ್ಕಾರಃ = ಸಾಮಾಗ್ರಿ (ಗುಡಿ-ಗುಡಾರದಸಂವರಣ)ಯುಮೆಂದಿವು, ಪ್ರವಾಸಷು = ಪ್ರವಾಸಂಗಳಲ್ಲಿ, ದುಃಖ = ಪಯಣದದುಃಖಸಮುದ್ರಮಂ, ಉತ್ತರಣ = ದಾಂಟಿಹ, ತರಂಡಕಃ = ಬಹಿತ್ರಾದಿಯಪ್ಪ, ವರ್ಗಃ = ಸಮೂಹಂ || ಸಂಬಳಮುಂಸಾಮಗ್ರಿಯುಂಪಿರಿದಾಗಲ್ಪಯಣಂಸುಖಮೆಂಬುದುತಾತ್ಪರ್ಯಂ ||

ಇತಿವ್ಯವಹಾರಸಮುದ್ದೇಶಃ || ೨೬ ||[18]

ಸಮುದ್ದೇಶದವಾಕ್ಯಂ || ೭೦ || ಒಟ್ಟು || ೧೧೬೭ ||

—-

೭೦. ಸಾಕಷ್ಟುಬುತ್ತಿ, ಅನುಕೂಲರಾದಪರಿವಾರ. ಚೆನ್ನಾಗಿಏರ್ಪಡಿಸಿಕೊಂಡಉಪಕರಣಗಳು, ಪ್ರವಾಸದಕಷ್ಟವನ್ನುನಿವಾರಿಸುವಸಾಮಗ್ರಿಗಳು.

—-

 

[1]ಚೌ. ಈಮತ್ತುಮುಂದಿನಎರಡುವಾಕ್ಯಗಳುಇಲ್ಲ.

[2]ಮೈ. ವರಂಡ.

[3]ಚೌ. ಈವಾಕ್ಯಇಲ್ಲಿಭಿನ್ನವಾಗಿದೆ.

[4]ಮೈ. ಯತ್ಸಂಗೇನಚಸರ್ವೇಗುಣಾಃನಿಷ್ಫಲಂತಾಯಾಂತಿಎಂಬಹೆಚ್ಚಿನವಾಕ್ಯವಿದೆ.

[5]ಬಿಣ್ಪುಗಿಡುವುದಕ್ಕೆಎಂದುಓದಬೇಕು.

[6]ಚೌ. ಭಾಂಡಃ.

[7]ಮೈ., ಚೌ. ಧನಿನೋ.

[8]ಮೈ., ಚೌ. ಪಾವನಮಸ್ತಿ.

[9]ಮೈ., ಚೌ. ಇದಕ್ಕೆಮುಂಚೆಇನ್ನೊಂದುವಾಕ್ಯವಿದೆ: ಸ್ವಯಂಮೇಧ್ಯಾಅಪೋವಹ್ನಿತಪ್ತಾವಿಶೇಷತಃ.

[10]ಅತಿಥಿಯೆಂದರೆಯತಿಎಂದುಟೀಕಾಕಾರನುಅರ್ಥಮಾಡಿದ್ದಾನೆ.

[11]ಚೌ. ನಾಧರ್ಮಾಚರಣಂ.

[12]ಮೈ. ಜಾತಿವಯೋ.

[13]ಚೌ. ತಲ್ಲೋಕೋಚಿತತ್ವಂ.

[14]ಮೈ. ತತ್‌ಸೌಜನ್ಯಂವಾಗ್ಮಿತಾವಾ. ಚೌ. ತತ್‌ ಸೌಜನ್ನಯಂಯತ್ರ.

[15]ಮೈ., ಚೌ. ದಾನೇನವಶೀಕರಣಂ.

[16]ಮಾತಿಗಿಂತಲಿಖಿತವೇಹೆಚ್ಚುಪ್ರಮಾಣಭೂತವಾದುದುಎಂದರ್ಥ.

[17]ವಿನ್ನಾಣಂಎಂದಿರಬೇಕು.

[18]ಇದು೨೭ಎಂದಿರಬೇಕು.