ಸ್ವವಾಂತಇವಸ್ವದತ್ತೇನಾಭಿಲಾಷಂಕುರ್ಯಾತ್|| ೨೪ || ೧೧೨೧ ||

ಅರ್ಥ : ಸ್ವವಾಂತಇವ = ತನ್ನಿಂವಮನಂಮಾಡಿದವಸ್ತುವಿನಂತೆ, ಸ್ವದತ್ತೇ = ತಾಂಕೊಟ್ಟಿದರೊಳ್, ಅಭಿಲಾಷಂ = ಕಾಂಕ್ಷೆಯಂ, ನಕುರ್ಯಾತ್ = ಮಾಡಸಿರ್ಕ್ಕೆ || ಕೊಟ್ಟುದಂನೆನೆಯದಿರ್ಪ್ಪುದೆಂಬುದುತಾತ್ಪರ್ಯಂ || ಇದುಸತ್ಪುರುಷರನೆಗಳ್ತೆಯೆಂಬದುತ್ತರವಾಕ್ಯಂ :

ಉಪಕೃತ್ಯಮೂಕಭಾವೋsಭಿಜಾತಾನಾಂ|| ೨೫ || ೧೧೨೨ ||

ಅರ್ಥ : ಉಪಕೃತ್ಯ = ಉಪಕರಿಸಿ, ಮೂಕಭಾವಃ = ಮೂಕನಂತಿರ್ಪುದು, ಅಭಿಜಾತಾನಾಂ = ಕುಲಜರನೆಗಳ್ತೆ || ಉಪಕರಿಸಿಕುಲಜಂನುಡಿಯನೆಂಬುದುತಾತ್ಪರ್ಯಂ || ಉತ್ತಮನನೆಗಳ್ತೆಯಂಪೇಳ್ವುದುತ್ತರವಾಕ್ಯಂ :

ಪರದೋಷಶ್ರವಣೇಬಧಿರಭಾವಃಸತ್ಪುರುಷಾಣಾಂ|| ೨೬ || ೧೧೨೩ ||

ಅರ್ಥ : ಪರದೋಷಶ್ರವಣೇ = ಪೆಱರದೋಷಮಂಕೇಳ್ವಲ್ಲಿ, ಬಧಿರಭಾವಃ = ಕಿವುಳ್ತನಂ, ಸತ್ಪುರುಷಾಣಾಂ = ಉತ್ತಮರನೆಗಳ್ತೆ || ಮಾನಸಿಕೆಯುಳ್ಳಂಪೆಱರದೋಷಮಂಕೇಳನೆಂಬುದುತಾತ್ಪರ್ಯಂ || ಇಂತಪ್ಪಂಪೆರ್ಮೆಯುಳ್ಳನೆಂಬುದುತ್ತರವಾಕ್ಯಂ :

ಪರಕಲತ್ರವಿಷಯೇ[1]sಧಭಾವೋಮಹಾನುಭಾವಾನಾಂ|| ೨೭ || ೧೧೨೪ ||

ಅರ್ಥ : ಪರಕಲತ್ರವಿಷಯೇ = ಪೆಱವೆಂಡಿರಲ್ಲಿ, ಅಂಧಭಾವಃ = ಅಂಧನಂತಿರ್ಪುದು, ಮಹಾನುಭಾವಾನಾಂ = ಪೆರ್ಮವುಳ್ಳರನೆಗಳ್ತೆ || ಪೆಱವೆಂಡಿರಂನೋಡಿದಂಪಿರಿಯನೆಂಬುದುತಾತ್ಪರ್ಯಂ || ಇಂತಪ್ಪಲ್ಲಿಸಂಭ್ರಮವಾಗವೇಳ್ಕುಮೆಂಬುದುತ್ತರವಾಕ್ಯಂ :

—-

೨೪. ತಾನುಕೊಟ್ಟಿದ್ದನ್ನುತಾನುವಾಂತಿಮಾಡಿದವಸ್ತುವಿನಂತೆತಿರುಗಿಅಪೇಕ್ಷಿಸಬಾರದು.

೨೫. ಉಪಕಾರಮಾಡಿಅದರಬಗ್ಗೆಮಾತನಾಡದಿರುವುದುಒಳ್ಳೆಯವರನಡವಳಿಕೆ.

೨೬. ಪರರದೋಷವನ್ನುಕೇಳುವದರಲ್ಲಿಸತ್ಪುರುಷರುಕಿವುಡರಂತಿರುತ್ತಾರೆ.

೨೭. ಪರರಹೆಂಡತಿಯರವಿಷಯದಲ್ಲಿಮಹಾನುಭಾವರುಕುರುಡರಂತಿರುತ್ತಾರೆ.

—-

ಶತ್ರಾವಪಿಗೃಹಾಗತೇಸಂಭ್ರಮಃಕರ್ತವ್ಯಃಕಿಂಪುನರ್ನಮಹತಿ || ೨೮ || ೧೧೨೫ ||

ಅರ್ಥ : ಶತ್ರಾವಪಿ = ಪಗೆಯುಂ, ಗೃಹಾಗತೇ = ಮನೆಗೆಬಂದೊಡೆ, ಸಂಭ್ರಮಃ = ಆದರಂ, ಕರ್ತವ್ಯಃ = ಮಾಡಲ್ಪಡುವುದಾದೊಡಂ, ಮಹತಿ = ಪಿರಿಯನಪ್ಪಂಬಂದೊಡೆ, ಕಿಂಪುನಃನ = ಏಂಮಾಡಲ್ಪಡನೇ || ಮನೆಗೆಬಂದರನಾದರಿಸುವುದೆಂಬುದುತಾತ್ಪರ್ಯಂ || ಇಂತಪ್ಪುದಂತಾಂನುಡಿಯಲಾಗದೆಂಬುದುತ್ತರವಾಕ್ಯಂ :

ಅಂತರ್ಧನಸಾರಇವಸ್ವಯಂಸ್ವಸ್ಯಧರ್ಮೋನಪ್ರಕಾಶಯಿತವ್ಯಃ|| ೨೯ || ೧೧೨೬ ||

ಅರ್ಥ : ಅಂತರ್ಧನಸಾರಇವ = ಒಳಗಣರ್ಥದಸಾರಮನೆಂತುಪೇಳನಂತೆ, ಸ್ವಸ್ಯಧರ್ಮಃ = ತನ್ನಧರ್ಮಂ, ಸ್ವಯಂ = ತನ್ನಿಂ, ನಪ್ರಕಾಶಯಿತವ್ಯಃ = ಪ್ರಕಟಂಮಾಡಲ್ಪಡದು || ಧರ್ಮಮಂಮಾಡೆಪೆಱರ್ಪೊಗಳ್ವರೆಂಬುದುತಾತ್ಪರ್ಯಂ || ದೋಷಮಾದೊಡಿಂತುಮಾಳ್ಪುದೆಂಬುದುತ್ತರವಾಕ್ಯಂ :

ಮದಪ್ರಮಾದಜೇದೋಷೆಗುರುಷುನಿವೇದನಮನುಶಯಃ[2]ಪ್ರಾಯಶ್ಚಿತ್ತಂಪ್ರತೀಕಾರಃ|| ೩೦ || ೧೧೨೭ ||

ಅರ್ಥ : ಮದ = ಗರ್ವಮುಂ, ಪ್ರಮಾದಜೇ = ಮಱವಿಯಿಂದಮುಮಾದ, ದೋಷೇ = ದೋಷದೊಳ್, ಗುರುಷು = ಗುರುಗಳೊಳ್, ನಿವೇದನಂ = ಅಱಿಪುವುದು, ಅನುಶಯಃ = ಇಂತುಮಾಳ್ಪೆನೆಂಬಕಟ್ಟುಕಡವುಂ (ಪಶ್ಚಾತ್ತಾಪಂ) ಪ್ರಾಯಶ್ಚಿತ್ತಂಚ = ಪ್ರಾಯಶ್ಚಿತ್ತಮುಂ, ಪ್ರತೀಕಾರಃ = ದೋಷಮಂಮಾಣಿಸುವುಪಾಯಂ || ಇನಿತಱಿಂದೋಷಮಂಪಿಂಗಿಸಲ್ವೇಳ್ಪುದೆಂಬುದುತಾತ್ಪರ್ಯಂ || ಇಂತಪ್ಪನಕಾಯಕ್ಲೇಶಂವಿಫಲಂಮಾಡದೆಂಬುದುತ್ತರವಾಕ್ಯಂ :

ಶ್ರೀಮತಃಕಾಯಕ್ಲೇಶೋದೇವಗುರುದ್ವಿಜಾತಿಥೀನ್ಪ್ರೀಣಾತಿಕಿಂತುವಿಭವಸಂವಿಭಾಗಃ|| ೩೧ || ೧೧೨೮ ||

ಅರ್ಥ : ಶ್ರೀಮತಃ = ಸಿರಿಯನುಳ್ಳನ, ಕಾಯಕ್ಲೇಶಃ = ಉಪವಾಸಾದಿಗಳಿಂಶರೀರಾಯಾಸಂ, ದೇವ = ದೇವರು, ಗುರು = ಗುರುಗಳುಂ, ದ್ವಿಜ = ಪಾರ್ವರುಂ, ಅತಿಥೀನ್ = ಯತಿಗಳುಮೆಂದಿವರುಂ, ನಪ್ರೀಣಾತಿ = ತಣಿಪುವುದಲ್ಲ, ಕಿಂತು = ಮತ್ತೆ, ವಿಭವಸಂವಿಭಾಗಃ = ವಿಭವಂಪಸಿವುದೆ, ತಣಿಪುವುದು (ಅರ್ಥದಾನವೇ) || ವಿಭವಾನುರೂಪದಿಂದೇವಪೂಜಾದಿಗಳಂಮಾಳ್ಪಸಿರಿಯುಳ್ಳನಕಾಯಕ್ಲೇಶಂಸಫಲಮೆಂಬುದುತಾತ್ಪರ್ಯಂ || ದುರ್ಜನನಿಂತುಮಾಳ್ಕೆಂಬುದುತ್ತರವಾಕ್ಯಂ :

—-

೨೮. ಶತ್ರುಗಳುಮನೆಗೆಬಂದರೂಸಂಭ್ರಮಿಸಬೇಕಾಗಿರುವಲ್ಲಿಮಹನೀಯರುಬಂದರೆಸಂಭ್ರಮಿಸಬೇಡವೇ?

೨೯. ತನ್ನಲ್ಲಿರುವಸಂಪತ್ತಿನವಿವರವನ್ನುಹೇಗೆಹೇಳಿಕೊಳ್ಳುವದಿಲ್ಲವೋಹಾಗೆಯೇತನ್ನಧರ್ಮಾಚರಣೆಯವಿವರವನ್ನುಪ್ರಕಟಿಸಬಾರದು.

೩೦. ಗರ್ವಮತ್ತುಪ್ರಮಾದದಿಂದಏನಾದರೂತಪ್ಪಾದರೆಅದನ್ನುಗುರುಗಳಲ್ಲಿನಿವೇದಿಸಿಕೊಳ್ಳುವುದೇಪಶ್ಚಾತ್ತಾಪವುಮತ್ತುಪ್ರಾಯಶ್ಚಿತ್ತವು.

೩೧. ಶ್ರೀಮಂತನುತನ್ನಐಶ್ವರ್ಯವನ್ನುಹಂಚಿಕೊಟ್ಟರೆದೇವರು. ಗುರುಗಳು, ದ್ವಿಜರುಮತ್ತುಅತಿಥಿಗಳಿಗೆತೃಪ್ತಿಯಾಗುವುದೇವಿನಃಅವನಶರೀರಶ್ರಮದಿಂದಲ್ಲ.

—-

ಚಣಕಇವೋದರಮಧ್ಯದ್ಥೋನೀಚೋsಪಿನಾವಿಕುರ್ವಾಣಸ್ತಿಷ್ಠತಿ|| ೩೨ || ೧೧೨೯ ||

ಅರ್ಥ : ಚಣಕಇವ = ಕಡಲೆಯೆಂತಂತೆ, ಉದರಮಧ್ಯಸ್ಥೋsಪಿ = ಬಸುರೊಳಗಿರ್ದುಂ, ನೀಚಃ = ಕಷ್ಟಂ, ಆವಿಕುರ್ವಾಣಃ = ಪೊಲ್ಲದುಗೆಯ್ಯದೆ, ನತಿಷ್ಠತಿ = ನಿಲ್ಲಂ || ಒಳ್ಳತ್ತಂಗೆಯ್ದೊಡಂದುರ್ಜನನಪಕಾರಮಂಮಾಳ್ಪನೆಂಬುದುತಾತ್ಪರ್ಯಂ || ಇಂತಪ್ಪಂಸ್ತುತ್ಯನೆಂಬುದುತ್ತರವಾಕ್ಯಂ :

ಪುಮಾನ್ವಂದ್ಯಚರಿತೋಯಃಪ್ರತ್ಯುಪಕಾರಾನಪೇಕ್ಷ್ಯಪರಾನುಪಕರೋತಿ|| ೩೩ || ೧೧೩೦ ||

ಅರ್ಥ : ಯಃ = ಆವನೋರ್ವಂ, ಪ್ರತ್ಯುಪಕಾರಾನಪೇಕ್ಷ್ಯ = ಮತ್ತೆತನಗುಪಕಾರಮಂಮಾಳ್ಪುದನಪೇಕ್ಷಿಸದೆ, ಪರಾನುಪಕರೋತಿ = ಪೆಱರ್ಗುಪಕಾರಂಗೆಯ್ವಂ, ಸಃ = ಆ, ಪುಮಾನ್ = ಪುರುಷಂ, ವಂದ್ಯಚರಿತಃ = ಸ್ತುತಿಸಲ್ಪಡುವನೆಗಳ್ತೆಯನುಳ್ಳಂ || ಇವರೆನಗುಪಕಾರಮಂಮಾಳ್ಪವರೆನ್ನದುಪಕರಿಸುವುದೆಂಬುದುತಾತ್ಪರ್ಯಂ || ಇವುಲೇಸಲ್ಲೆಂಬುದುತ್ತರವಾಕ್ಯಂ :

ಅಜ್ಞಾನಸ್ಯವೈರಾಗ್ಯಂಭಿಕ್ಷೋರ್ವಿಟತ್ವಮಧನಸ್ಯವಿಲಾಸೋವೇಶ್ಯಾರತಸ್ಯಶೌಚಮವಿದಿತವೇದಿತವ್ಯಸ್ಯತತ್ವಪರಿಗ್ರಹಇತಿಪಂಚಕೇಷಾಂಶಿರಃಶೂಲಾನಿ|| ೩೪ || ೧೧೩೧ ||

ಅರ್ಥ : ಅಜ್ಞಾನಸ್ಯ = ಜ್ಞಾನಮಿಲ್ಲದನ, ವೈರಾಗ್ಯಂ = ವಿರಾಗತೆಯುಂ, ಭಿಕ್ಷೋಃ = ತಿರಿದುಂಬನ, ವಿಟತ್ವಂ = ವಿಟತನಂ, ಅಧನಸ್ಯ = ಬಡವನ, ವಿಲಾಸಃ = ಶೃಂಗಾರಂ, ವೇಶ್ಯಾರತಸ್ಯ = ಸೂಳೆಗೆಯ್ವನ, ಶೌಚಂ = ಶುಚಿತ್ವಮುಂ, ಅವಿದಿತವೇದಿತವ್ಯಸ್ಯಚ = ಅಱಿಯಲ್ಪೇಳ್ಪುದನಱಿದನ, ತತ್ತ್ವಪರಿಗ್ರಹಃಇತಿ = ತತ್ತ್ವದಕೈಕೊಳುಹಮೆಂಬಿವು, ಪಂಚ = ಅಯ್ದು, ಕೇಷಾಂ = ಆರ್ಗ್ಗೆ, ನಶಿರಃ ಶೂಲಾನಿ = ಮಸ್ತಕಶೂಲಂಗಳಲ್ಲವು || ಇವುಲೋಕಂಗಳೆಂಬುದು[3]ತಾತ್ಪರ್ಯಂ || ಇಂತಪ್ಪಕಂಟಕನೆಂಬುದುತ್ತರವಾಕ್ಯಂ :

—-

೩೨. ಹೊಟ್ಟೆಯಲ್ಲಿಯಕಡಲೆಯಂತೆನೀಚನನ್ನುಮನ್ನಿಸಿದರೂಕೆಡಕುಮಾಡದೆಬಿಡನು.

೩೩. ಪ್ರತ್ಯುಪಕಾರದಅಪೇಕ್ಷೆಯಲ್ಲದೆಬೇರೆಯವರಿಗೆಉಪಕಾರಮಾಡುವವನುವಂದನಾರ್ಹನು.

೩೪. ಅಜ್ಞಾನಿಯವೈರಾಗ್ಯ, ತಿರಿದುಣ್ಣುವವನವಿಟತ್ವ, ಬಡವನಬೆಡಗು, ವೇಶ್ಯೆಯರಲ್ಲಿಆಸಕ್ತಿಯುಳ್ಳವನಶೌಚ, ಹೇಳಿದ್ದನುತಿಳಿದುಕೊಳ್ಳಲಾರದವನತತ್ವಶಾಸ್ತ್ರಾಭ್ಯಾಸಐದುಯಾರಿಗೆತಾನೇತಲೆಶೂಲೆಯನ್ನುಂಟುಮಾಡವು?

—-

ಹಿಮಹಾಪಾತಕೀ[4]ಯೋsಶಸ್ತ್ರಮಶಾಸ್ತ್ರಂವಾಪುರುಷಮಭಿಯುಂಜೀತ|| ೩೫ || ೧೧೩೨ ||

ಅರ್ಥ : ಯಃಆವನೋರ್ವಂ, ಅಶಸ್ತ್ರಂ = ಶಸ್ತ್ರಮಿಲ್ಲದ, ಅಶಾಸ್ತ್ರಂವಾ = ಸಾಸ್ತ್ರಮಿಲ್ಲದಂಮೇಣ್, ಪುರುಷಂ = ಪುರುಷನಂ, ಅಭಿಯುಂಜೀತ = ಮೂದಲಿಸುಗುಂ, ಸಃ = ಆತಂ, ಹಿ = ನೆಟ್ಟನೆ, ಪಂಚಮಹಾಪಾತಕೀ = ಪಂಚಮಹಾಪಾತಕಮನುಳ್ಳಂ || ಸಮಗ್ರನೊಳಿದಿರ್ಚ್ಚುವುದೆಂಬುದುತಾತ್ಪರ್ಯಂ || ಕಾರ್ಯಮಂಕುಱಿತ್ತಿಂತಪ್ಪುದಂಮಾಳ್ಪುದೆಂಬುದುತ್ತರವಾಕ್ಯಂ :

ಉಪಶ್ರುತಿಂಶ್ರೋತುಮಿವಕಾರ್ಯವಶಾನ್ನೀಚಮಪಿಲೋಕಂಸ್ವಯಮುಪಸರ್ಪೇತ್|| ೩೬ || ೧೧೩೩ ||

ಅರ್ಥ : ಉಪಶ್ರುತಿಂ = ಉಪಶ್ರುತಿಯಂ (ವೋಸರಿ) ಶ್ರೋತುಮಿವ = ಕೇಳ್ವಂತೆ, ಕಾರ್ಯವಶಾತ್ = ಕಾರ್ಯಮಂಕುಱಿತ್ತು, ಲೋಕಂ= ಜನಮಂ, ನೀಚಮಪಿ = ನೀಚನುಮಂ, ಸ್ವಯಂ = ತಾಂ, ಉಪಸರ್ಪೇತ್ = ಪೊರ್ದ್ದುಗೆ || ಕಾರ್ಯಾರ್ಥಿಗೆಗರ್ವಬೇಡೆಂಬುದುತಾತ್ಪರ್ಯಂ || ಅದಕ್ಕೆಕಾರಣಂಪೇಳ್ವುದುತ್ತರವಾಕ್ಯಂ :

[5]ಅರ್ಥೀದೋಷಂಪಶ್ಯತಿ|| ೩೭ || ೧೧೩೪ ||

ಅರ್ಥ : ಅರ್ಥೀ = ಕಾರ್ಯಾತುರಂ, ದೋಷಂ = ದೋಷಮಂ, ನಪಶ್ಯತಿ = ಕಾಣಂ || ಮನೆಯತೊತ್ತಿರಂಪೋಗೆಕೇಡಕ್ಕುಮೆಂಬುದುತ್ತರವಾಕ್ಯಂ :

—-

೩೫. ಯಾರುಶಸ್ತ್ರವಿಲ್ಲದವನನ್ನಾಗಲಿ. ಶಾಸ್ತ್ರವರಿಯದವನನ್ನಾಗಲಿಮೂದಲಿಸುತ್ತಾನೋಅವನುಪಂಚಮಹಾಪಾತಕಿಯೇಸರಿ.

೩೬. ಶಕುನವನ್ನುಕೇಳುವುದಕ್ಕೆಸ್ವತಃಹೋಗುವಂತೆಕಾರ್ಯವಶಾತ್ನೀಚನಬಳಿಗಾದರೂತಾನೇಹೋಗಬೇಕು.

೩೭. ಕಾರ್ಯರ್ಥಿಯುದೋಷವನ್ನುಹುಡುಕುವುದಿಲ್ಲ.

—-

ಗೃಹದಾ[6]ಸ್ಯಭಿಗಮೋಗೃಹಂಗೃಹಪತಿಂಗೃಹಿಣೀಂಪ್ರತ್ಯವಸಾದಯತಿ|| ೩೮ || ೧೧೩೫ ||

ಅರ್ಥ : ಗೃಹದಾಸ್ಯಭಿಗಮಃ = ಮನೆಯತೊತ್ತಿರಂಪೋಪುದು, ಗೃಹಂ = ಮನೆಯುಮಂ, ಗೃಹಪತಿಮನೆಯೊಡೆಯನುಮಂ, ಗೃಹಿಣೀಂಚ = ಪೆಂಡತಿಯುಮಂ, ಪ್ರತ್ಯವಸಾದಯತಿ = ಕೆಡಿಸುಗುಂ, (ಕ್ಲೇಶಂಬಡಿಸುವುದು), ತೊಳ್ತಾಳ್ದಿತಿಯಂಬಗೆಯದಿರೆಕಲಹಮುಂಕೇಡುಮಕ್ಕೆಂಬುದುತಾತ್ಪರ್ಯಂ || ಸೂಳೆಯೊಳಿರ್ದಡೇನಕ್ಕುಮೆಂಬುದುತ್ತರವಾಕ್ಯಂ :

ವೇಶ್ಯಾ[7]ಪರಿಗ್ರಹೋದೇವದ್ವಿಜಗುರುಬಂಧೂನಾಂಉಚ್ಚಾಟನಮಂತ್ರಃ|| ೩೬ || ೧೧೩೬ ||

ಅರ್ಥ : ವೇಶ್ಯಾಪರಿಗ್ರಹಃ = ಸೂಳೆಯನಿರಿಸುವುದು, ದೇವ = ದೇವರುಂ, ದ್ವಿಜ = ಬ್ರಾಹ್ಮಣರುಂ, ಗುರು = ಗುರುಗಳುಂ, ಬಂಧೂನಾಂ = ನಂಟರುಮೆಂದಿವರಂ, ಉಚ್ಚಾಟನಮಂತ್ರಃ = ಎತ್ತಿಕಳೆವಮಂತ್ರಂ (ಹೊಱಡಿಸುವ) || ವೇಶ್ಯಾಪರಿಗ್ರಮನುಳ್ಳಂಗೆಧರ್ಮಮುಂಬಂಧುಗಳುಮಿಲ್ಲೆಂಬುದುತಾತ್ಪರ್ಯಂ || ಪ್ರಚುರದಿಂಜನಂಗಳುಸ್ತ್ರೀಪ್ರಿಯರೆಂಬುದುತ್ತರವಾಕ್ಯಂ :

ಅಹೋಲೋಕಸ್ಯಪಾಪಂಯತ್ನಿಜಾಸ್ತ್ರೀರತಿರಪಿ[8]ನಿಂಬಸಮಾಪರಪರಿಗೃಹೀತಾಶುನಿಕಾಪಿಭವತಿರಂಭಾಸಮಾ|| ೪೦ || ೧೧೩೭ ||

ಅರ್ಥ : ಅಹೋ = ಆಶ್ಚರ್ಯಂ, ಲೋಕಸ್ಯ = ಲೋಕದ, ಪಾಪಂ = ಪಾಪಂ, ಯತ್ = ಆವುದೊಂದುಕಾರಣದಿಂ, ನಿಜಾಸ್ತ್ರೀ = ತನ್ನಸ್ತ್ರೀಯು, ರತಿರಪಿ = ರತಿಯಸಮಾನಮಾದೊಡಂ, ನಿಂಬಸಮಾ = ಬೇವಿನಸಮಾನಂ, ಪರಪರಿಗೃಹೀತಾ = ಪೆಱರಿಂಕೈಗೊಳಲ್ಪಟ್ಟ, ಶುನಿಕಾಪಿ = ಉಡುಕುಳಿನಾಯಂತಪ್ಪಳಾದೊಡಂ, ರಂಭಾಸಮಾಭವತಿ = ದೇವಸ್ತ್ರೀಯಸಮಾನಮಕ್ಕುಂ || ದುರ್ಲಭತ್ವಮುಂಪ್ರೀತಿಗೆಕಾರಣಮಕ್ಕುಮೆಂಬುದುತಾತ್ಪರ್ಯಂ || ಇಂತಪ್ಪಂಸುಖಿಯೆಂಬುದುತ್ತರವಾಕ್ಯಂ :

—-

೩೮. ಮನೆಗೆಲಸದವಳೊಂದಿಗೆಸಂಬಂಧವನ್ನಿಟ್ಟುಕೊಳ್ಳುವುದುಮನೆಯನ್ನೂ. ಮನೆಯೊಡೆಯನನ್ನೂಗೃಹಿಣಿಯನ್ನೂಕೇಡಿಗೆಗುರಿಮಾಡುವುದು.

೩೯. ಸೂಳೆಯನ್ನುಇಟ್ಟುಕೊಳ್ಳುವುದುದೇವರು, ದ್ವಿಜರು, ಗುರುಗಳು, ನೆಂಟರುಇವರನ್ನುಹೊರಗೋಡಿಸುವಮಂತ್ರವಿದ್ದಂತೆ.

೪೦. ತನ್ನಹೆಂಡತಿಸಾಕ್ಷಾತ್ರತಿದೇವಿಯೇಆದರೂಆಕೆಬೇವಿನಸಮಾನ. ಇನ್ನೊಬ್ಬನಹೆಂಡತಿಯುಹೆಣ್ಣುನಾಯಿಯಾದರೂರಂಭೆಯಸಮಾನ. ಅಯ್ಯೋಲೋಕದದುರ್ಗತಿಯೇ!

—-

ಸುಖೀಯಸ್ಯೈಕಸ್ತ್ರೀಪರಿಗ್ರಹಃ|| ೪೧ || ೧೧೩೮ ||

ಅರ್ಥ : ಸಃ = ಆತಂ, ಸುಖೀ = ಸುಖಿಯಪ್ಪಂ, ಯಸ್ಯ = ಆವನೋರ್ವಂಗೆ, ಏಕಸ್ತ್ರೀಪರಿಗ್ರಹಃ = ಒಂದೇಸ್ತ್ರೀಎಂಬಪರಿಗ್ರಹಂ || ಸ್ತ್ರೀಯರಂಪಲಂಬರಂಮನಂಬಿಡಿಯಬಾರದೆಂಬುದುತಾತ್ಪರ್ಯಂ || ವೃಸನಿಗಿಂತಪ್ಪಲ್ಲಿಸುಖಿಯೆಂಬುದುತ್ತರವಾಕ್ಯಂ :

ವ್ಯಸನಿನೋಯಥಾಭಿಸಾರಿಕಾಸುಸುಖಂತಥಾರ್ಘವತೀಷು[9]|| ೪೨ || ೧೧೩೯ ||

ಅರ್ಥ : ವ್ಯಸನಿನಃ = ಬಸನಿಯಪ್ಪಂಗೆ, ಅಭಿಸಾರಿಕಾಸು = ಮೊಸನಿಗೆಯೊಳ್‌ (ಜಾಱೆಯರೊಳ್‌-ಬೆಲೆವೆಣ್ಗಳಲ್ಲಿ) ಯಥಾ = ಎಂತು, ಸುಖಂ = ಸುಖವು, ತಥಾ = ಅಂತೆ, ಅರ್ಘವತೀಷು = ಅಗ್ಗಾಯಿಲೆಯರೊಳ್‌ (ಅರ್ಘಮನುಳ್ಳಸ್ತ್ರೀಯರಲ್ಲಿ)ನ = ಸುಖಮಿಲ್ಲ || ಅದಕ್ಕೆಕಾರಣಮಂಪೇಳ್ವುದುತ್ತರಕಾವ್ಯಂ :

ಮಹಾನ್ಧನವ್ಯಯಸ್ತದಿಚ್ಛಾನುವರ್ತನಂದೈನ್ಯಂಚಾರ್ಘವತೀಷು|| ೪೩ || ೧೧೪೦ ||

ಅರ್ಥ : ಮಹಾನ್‌ ಧನವ್ಯಯಃ = ಪಿರಿದಪ್ಪಅರ್ಥದಬೀಯಮುಂ, ತತ್‌ = ಅವರ, ಇಚ್ಛಾನುವರ್ತನಂ = ಇಚ್ಛೆಯಂನೆಗಳ್ವುದುಂ, ದೈನ್ಯಂಚ = ದೈನ್ಯವು, ಅರ್ಘವೆತೀಷು = ಆಗ್ಗಾಯಿಲೆಯರೊಳ್‌ || ಮೊಸನಿಗೆಯರೊಳ್‌ ಪಿರದಪ್ಪರ್ಥವ್ಯಯಮಿಲ್ಲದೆತನ್ನಿಚ್ಛೆಸಲ್ವುದಲ್ಲೆಂಬುದುತಾತ್ಪರ್ಯಂ || ಈಪರಿಗ್ರಹಕಟಕದೊಳ್‌ ಸುಖಮನೀವುದೆಂಬುದುತ್ತರವಾಕ್ಯಂ :

ಆಸ್ತರಣಂಕಂಬಲೋಜೀವಧನಂಗರ್ದಭಃಪರಿಗ್ರಹೋವೋಟಾ[10]ಸ್ತ್ರೀಸರ್ವಕರ್ಮಾಣಶ್ಚಭೃತ್ಯಾಇತಿಕಸ್ಯನಾಮಸುಖಾವಹಾನಿಸ್ಕಂಧಾವಾರೋಪಕರಣಾನಿ|| ೪೪ || ೧೧೪೧ ||

ಅರ್ಥ : ಆಸ್ತರಣಂ = ಹಾಸುಗೆ, ಕಂಬಲಃ = ಕಂಬಳಿ, ಜೀವಧನಂ = ಗರ್ದಭಃ = ಕಳ್ತೆ, ಪರಿಗ್ರಹಃ = ದಾಸೀದಾಸಾದಿಪರಿಗ್ರಹಂ, ಸ್ತ್ರೀವೋಟಾ = ಬಂಜೆಹೆಂಡತಿ, ಸರ್ವಕರ್ಮಾಣಶ್ಚ  = ಎಲ್ಲಾಕೆಲಸಮಂಬಲ್ಲ, ಭೃತ್ಯಾಇತಿ = ಬಂಟರುಮೆಂದಿಂತು, ಕಸ್ಯ = ಆವಂಗೆ, ನಾಮ = ನಿಶ್ಚಯದಿಂ, ನಸುಖಾವಹಾನಿ = ಸುಖಮಂಮಾಡದವು, ಸ್ಕಂಧಾವಾರೋಪಕರಣಾನಿ = ಕಟಕದಸಾಮಗ್ರಿಗಳ್‌ || ಪಿರಿದಪ್ಪವ್ಯಯಮುಮಾಯಾಸಮಿಲ್ಲದನಿತಱಿಂಸುಖಮಕ್ಕುಮೆಂಬುದುತಾತ್ಪರ್ಯಂ || ಇಂತಪ್ಪನೆರವಿನಿಸ್ಸಾರಮೆಂಬುದತ್ತರವಾಕ್ಯಂ :

—-

೪೧. ಒಬ್ಬಳೇಹೆಂಡತಿಯಿರುವವನೇಸುಖಿ.

೪೨. ಸ್ತ್ರೀವ್ಯಸನಿಗೆವೇಶ್ಯೆಯರಲ್ಲಿದೊರೆಯುವಸುಖಉತ್ತಮಳಲ್ಲಿದೊರೆಯುವುದಿಲ್ಲ.

೪೩.ಉತ್ತಮಸ್ತ್ರೀಯಿಂದಅತಿಯಾದಅರ್ಥವ್ಯಯ. ಆಕೆಯಇಚ್ಛೆಯಂತೆನಡೆಯುವುದು. ದೈನ್ಯಇವೇಉಂಟಾಗುತ್ತವೆ.

೪೪. ಹಾಸಿಗೆ, ಕಂಬಳಿ, ಹಸುಗಳು, ಕತ್ತೆ, ಪರಿವಾರ, ಮದುವೆಯಾದಹೆಂಡತಿ. ಎಲ್ಲಕೆಲಸಗಳನ್ನುಮಾಡುವಆಳುಗಳು. ಇವೆಲ್ಲಠಾಣೆಯಲ್ಲಿಇರುವಾಗಯಾರಿಗೆತಾನೆನಿಜವಾಗಿಸುಖದೊರೆಯದು?

—-

 

[1]ಮೈ. ಚೌ. ದರ್ಶನೇ.

[2]ಚೌ. ಅನುಪ್ರಾಯಶ್ಚಿತ್ತಂ.

[3]ಈವಾಕ್ಯಸ್ಪಷ್ಟವಿಲ್ಲ. ಬಹುಶಲೋಪಂಗಳುಎಂದಿರಬೇಕೆಂದುತೋರುತ್ತದೆ.

[4]ಮೈ. ಚೌ. ಪಂಚಮಹಾಪಾತಕೀ. ನಮ್ಮಪ್ರತಿಯಟೀಕೆಯಲ್ಲಿಯೂಪಂಚಮಹಾಪಾತಕೀಯೆಂದುಇದೆ.

[5]ಚೌ. ದಲ್ಲಿಈವಾಕ್ಯವಿಲ್ಲ.

[6]ಚೌ. ವೇಶ್ಯಾಗಮೋಗೃಹಿಣೀಂ.

[7]ಮೈದೇವದ್ವಿಜಗುರುಗೃಹಿಣೀಬಂಧೂನಾಂಚೌ. ವೇಶ್ಯಾಸಂಗ್ರಹೋಜಗೃಹಿಣೀಬಂಧೂನಾಂ.

[8]ಮೈ. ರತಿರತಾರತಿರಪಿ.

[9]ಮೈ. ಚೌ. ಅರ್ಥವತೀಷು

[10]ಮೈ. ಘೋಟೀಚೌ. ವೋಢಾ. ವೋಢಾ= ಮದುವೆಯಾದಹೆಂಡತಿ. ಈಪಾಠವೇಹೆಚ್ಚುಸೂಕ್ತವಾದುದು.